ಶಾಲಾ ಸಹಶಿಕ್ಷಕನಿಂದ ಮುಖ್ಯ ಶಿಕ್ಷಕಿಗೆ ಜಾತಿ ನಿಂದನೆ, ಸೂಕ್ತ ಕ್ರಮಕ್ಕೆ ಆಗ್ರಹ

Monday, May 27th, 2013
Manish Kharbikar

ಮಂಗಳೂರು : ಬಂಟ್ವಾಳ ತಾಲೂಕಿನ ಪಜೀರು ಗ್ರಾಮದ ಪಾಣೇಲಬರಿಕೆಯ ಶಾಲಾ ಮುಖ್ಯ ಶಿಕ್ಷಕಿ ಕಮಾಲಾಕ್ಷಿ ಎಂಬುವವರು ಶಾಲೆಯ ಸಹಶಿಕ್ಷಕ ರಾಮಕೃಷ್ಣ ಎಂಬುವವರು ಜಾತಿ ನಿಂದನೆಯ ಮೂಲಕ ತಮಗೆ ಮಾನಸಿಕ ಹಿಂಸೆಯನ್ನು ನೀಡುತ್ತಿದ್ದಾರೆ ಎಂದು ಆರ‍ೋಪಿಸಿ ಭಾನುವಾರ ನಡೆದ ಮಾಸಿಕ ದಲಿತ ಕುಂದುಕೊರತೆ ಸಭೆಯಲ್ಲಿ ಆರೋಪಿಸಿದರು. ಬಂಟ್ವಾಳ ತಾಲೂಕಿನ ಪಜೀರು ಗ್ರಾಮದ ಪಾಣೇಲಬರಿಕೆ ಶಾಲೆಯಲ್ಲಿ  ಕಮಲಾಕ್ಷಿ  2007-2008 ರಿಂದ ಮುಖ್ಯ ಶಿಕ್ಷಕಿ ಯಾಗಿ ಕಾರ್ಯನಿರ್ವಹಿಸುತ್ತಿದ್ದು, ಅದೇ ಶಾಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ರಾಮಕೃಷ್ಣ ಜಿ ಎಂಬುವವರು ಜಾತಿನಿಂದನೆಯ ಮೂಲಕ ಮಾನಸಿಕ ಹಿಂಸೆಯನ್ನು […]

ಎಸ್.ಡಿಪಿಐ ಮತ್ತು ಕಾಂಗ್ರೆಸ್ ಕಾರ್ಯಕರ್ತರ ನಡುವೆ ಗುಂಪು-ಘರ್ಷಣೆ, ಪೊಲೀಸರಿಂದ ಲಘು ಲಾಠಿ ಪ್ರಹಾರ

Monday, May 27th, 2013
Kaikamba

ಬಂಟ್ವಾಳ : ಭಾನುವಾರ ಸಂಜೆ ಬಿ.ಸಿ ರೋಡ್ ಸಮೀಪದ ಕೈಕಂಬದಲ್ಲಿ ಎಸ್.ಡಿಪಿಐ ಮತ್ತು ಕಾಂಗ್ರೆಸ್ ಕಾರ್ಯಕರ್ತರ ನಡುವೆ ಗುಂಪು ಘರ್ಷಣೆ ಏರ್ಪಟ್ಟ ಪರಿಣಾಮ ಕೈಕಂಬದಲ್ಲಿ ಕೆಲ ಸಮಯ ಉದ್ವಿಗ್ನ ವಾತವರಣ ಕಂಡುಬಂದಿತು. ಕಲ್ಲಡ್ಕ ಪರಿಸರದಿಂದ ಬಂದ ಎಸ್ ಡಿಪಿಐ ಪಕ್ಷದ ತಂಡವೊಂದು ಭಾನುವಾರ ಸಂಜೆ ಸುಮಾರು 4 ಗಂಟೆಯ ಸುಮಾರಿಗೆ ಕೈಕಂಬದಲ್ಲಿದ್ದ ಕಾಂಗ್ರೆಸ್ ಕಾರ್ಯಕರ್ತರೊಡನೆ ಮಾತಿಗಿಳಿದಿದ್ದು, ಕೆಲ ಅವಧಿಯಲ್ಲಿಯೇ ಎರಡು ತಂಡಗಳ ನಡುವೆ ಮಾತಿನ ಚಕಮಕಿ ಏರ್ಪಟ್ಟು ನಂತರ ಪರಸ್ಪರರ ನಡುವೆ ಹೊಡೆದಾಟ ಪ್ರಾರಂಭವಾಗಿದೆ. ಇನ್ನೊಂದೆಡೆ ಎರಡೂ […]

ಆರೋಗ್ಯ ವಿಷಯದಲ್ಲಿ ನಿರ್ಲಕ್ಷ್ಯ ವಹಿಸಿದ ಅಧಿಕಾರಿಗಳ ಮೇಲೆ ಕಟ್ಟುನಿಟ್ಟಿನ ಕ್ರಮ ಜರುಗಿಸಲಾಗುವುದು : ಆರೋಗ್ಯ ಸಚಿವ ಯು.ಟಿ.ಖಾದರ್

Saturday, May 25th, 2013
UT Khader pressmeet at circute house

ಮಂಗಳೂರು : ಸಾಂಕ್ರಾಮಿಕ ರೋಗಗಳಿಗೆ ತುತ್ತಾಗಿ ಸರ್ಕಾರಿ ಆಸ್ಪತ್ರೆಗೆ ದಾಖಲಾಗುವ ಬಡ ಜನರ ಚಿಕಿತ್ಸೆಯ ಸಂಪೂರ್ಣ ಖರ್ಚನ್ನು ಸರ್ಕಾರ ಭರಿಸಲಿದ್ದು, ಸಾಂಕ್ರಾಮಿಕ ರೋಗವನ್ನು ತಡೆಗಟ್ಟುವ ನಿಟ್ಟಿನಲ್ಲಿ ಎರಡು ದಿನಗಳೊಳಗೆ ಜಿಲ್ಲಾ ಮಟ್ಟದಲ್ಲಿ ಸಭೆ ನಡೆಸಲಾಗುವುದು ಮತ್ತು ಆರೋಗ್ಯ ಜಾಗೃತಿಯ ಬಗ್ಗೆ ಜಿಲ್ಲಾವಾರು ಸಮೀಕ್ಷೆ ನಡೆಸಿ ಒಂದು ತಿಂಗಳೊಳಗೆ ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ.ಖಾದರ್ ಹೇಳಿದರು. ಅವರು ನಗರದ ಸರ್ಕ್ಯೂಟ್ ಹೌಸ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಮೈಸೂರಿನಲ್ಲಿ […]

ಎ.ಎಸ್.ಐ ಶ್ರೀಕಲಾ ನೀಡಿರುವ ದೂರಿನ ಹಿನ್ನಲೆಯಲ್ಲಿ ಎಸಿಪಿ ಜಗನ್ನಾಥ್ ರ ವಿರುದ್ದ ಸೂಕ್ತ ಕ್ರಮ ಕೈಗೊಳ್ಳುವಂತೆ ಡಿವೈಎಫ್ ಐ ಒತ್ತಾಯ

Saturday, May 25th, 2013
DYFI protest at DC office

ಮಂಗಳೂರು : ಎಸಿಪಿ ಜಗನ್ನಾಥ್ ರಿಂದ ದೌರ್ಜನ್ಯಕ್ಕೊಳಗಾದ ಪಾಂಡೇಶ್ವರ ಠಾಣಾ ಎ.ಎಸ್.ಐ ಶ್ರೀಕಲಾ ರವರಿಗೆ ಕಿರುಕುಳ ನೀಡಿದ ಎಸಿಪಿ ಟಿ.ಆರ್. ಜಗನ್ನಾಥ್ ರವರ ಮೇಲೆ ಈ ಕೂಡಲೇ ಶಿಸ್ತು ಕ್ರಮ ಜರುಗಿಸಬೇಕೆಂದು ಒತ್ತಾಯಿಸಿ  ಶುಕ್ರವಾರ ಡಿವೈಎಫ್ ಐ ಜಿಲ್ಲಾ ಘಟಕ ಹಾಗೂ ಜಿಲ್ಲಾ ಮಹಿಳಾ ದೌರ್ಜನ್ಯ ವಿರೋಧಿ ವೇದಿಕೆ ವತಿಯಿಂದ ಮಂಗಳೂರು ಜಿಲ್ಲಾಧಿಕಾರಿ ಕಚೇರಿ ಮುಂಬಾಗದಲ್ಲಿ ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು. ಡಿ.ವೈ.ಎಫ್.ಐ ಜಿಲ್ಲಾಧ್ಯಕ್ಷ ಮುನೀರ್ ಕಾಟಿಪಳ್ಳ ಮಾತನಾಡಿ, ದೇಶಾದ್ಯಂತ ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯದ ವಿರುದ್ದ ತೀವ್ರ […]

ಮಾಣಿ ಸಮೀಪದ ಕೊಡಾಜೆಯ ಬಳಿ ಅಪಘಾತ, ಇಬ್ಬರು ಗಂಭೀರ

Friday, May 24th, 2013
Bantwal serial accident

ಬಂಟ್ವಾಳ : ಮಂಗಳೂರಿನಿಂದ ಹೊರಟ ಬಸ್ಸೊಂದು ಮಾಣಿ ಸಮೀಪದ ಕೊಡಾಜೆಯ ಬಳಿ ಇನೋವಾ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಇನೋವಾ ಕಾರು ಹಿಂದಿನಿಂದ ಬರುತ್ತಿದ್ದ ಸಿಫ್ಟ್ ಕಾರಿಗೆ ಡಿಕ್ಕಿ ಹೊಡೆದು ಮಾಣಿ ಮೈಸೂರು ರಾಜ್ಯ ಹೆದ್ದಾರಿಯಲ್ಲಿ ಕೆಲ ತಾಸು ವಾಹನ ಸಂಚಾರಕ್ಕೆ ಅಡಚಣೆ ಉಂಟಾದ ಘಟನೆ ಮೇ 23  ಗುರುವಾರ ನಡೆದಿದೆ. ಘಟನೆಯಿಂದ ಕಾರಿನಲ್ಲಿದ್ದ ಉನೈದ್ ಹಾಗು ಕಸ್ತೂರಿ ಶಂಕರ್ ಈ ಇಬ್ಬರಿಗೆ ಗಂಭೀರ ಗಾಯಗಳಾಗಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನು ಬಸ್ಸಿನಲ್ಲಿದ್ದ ಪ್ರಯಾಣಿಕರಿಗೂ ಚಿಕ್ಕ ಪುಟ್ಟ […]

ದೇವಾಲಯಗಳನ್ನು ವಶಕ್ಕೆ ತೆಗೆದುಕೊಳ್ಳುವ ಸರ್ಕಾರದ ನಿರ್ಧಾರಕ್ಕೆ ಬಿಜೆಪಿಯಿಂದ ತೀವ್ರ ವಿರೋಧ

Friday, May 24th, 2013
Nalin Kumar Kateel

ಮಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯನವರು ಉಡುಪಿ ಕೃಷ್ಣಮಠ ಹಾಗು ಗೋಕರ್ಣ ದೇವಾಲಯಗಳನ್ನು ಸರ್ಕಾರದ ವಶಕ್ಕೆ ತೆಗೆದುಕೊಳ್ಳುವ ಕ್ರಮವನ್ನು ಬಿಜೆಪಿ ತೀವ್ರವಾಗಿ ವಿರೋಧಿಸುತ್ತದೆ ಎಂದು  ಸಂಸದ ನಳಿನ್ ಕುಮಾರ್ ಕಟೀಲ್ ತಿಳಿಸಿದ್ದಾರೆ. ಸಿದ್ದರಾಮಯ್ಯನವರ, ದೇವಾಲಯಗಳನ್ನು ಸರ್ಕಾರದ ವಶಕ್ಕೆ ಒಳಪಡಿಸುವ ನಿರ್ಧಾರ ಭಕ್ತರ ಧಾರ್ಮಿಕ ಭಾವನೆ ಮತ್ತು ಮಠದ ಪರಂಪರೆಗೆ ಧಕ್ಕೆಯುಂಟುಮಾಡುವಂತದ್ದಾಗಿದೆ. ಯಾರದೇ ಧಾರ್ಮಿಕ ಭಾವನೆಗಳಿಗೆ  ಮತ್ತು ಮಠದ ಪರಂಪರೆಗೆ ಧಕ್ಕೆ ತರುವ ಕೆಲಸಕ್ಕೆ ಸರ್ಕಾರ ಕೈ ಹಾಕಬಾರದು  ಒಂದು ವೇಳೆ ಸರ್ಕಾರ ಮುಂದಾದರೆ ಇದರ ವಿರುದ್ದ ಬಿಜೆಪಿ ಬೃಹತ್ […]

ಮುಂಗಾರು ಮಳೆಯಿಂದ ಉಂಟಾಗಬಹುದಾದ ಪ್ರಾಕೃತಿಕ ವಿಕೋಪಕ್ಕೆ ಸೂಕ್ತ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಸೂಚನೆ

Thursday, May 23rd, 2013
N Prakash

ಮಂಗಳೂರು : ಮುಂಗಾರು ಶೀಘ್ರವೇ ಜಿಲ್ಲೆಗೆ ಕಾಲಿಡಲಿದ್ದು, ಅದಕ್ಕೂ ಮುನ್ನ ಪಾಲಿಕೆ ವ್ಯಾಪ್ತಿಯಲ್ಲಿನ ಚರಂಡಿ ಮತ್ತು ಕಾಲುವೆಗಳನ್ನು ಶುಚಿಗೊಳಿಸಿ ಕೃತಕ ನೆರೆ ಉಂಟಾಗದಂತೆ ಎಚ್ಚರವಹಿಸಿ ಎಂದು ಜಿಲ್ಲಾಧಿಕಾರಿ ಎನ್. ಪ್ರಕಾಶ್ ಹೇಳಿದರು. ಅವರು ಬುಧವಾರ ತಮ್ಮ ಕಚೇರಿಯಲ್ಲಿ ಆಯೋಜಿಸಿದ್ದ ಜಿಲ್ಲಾಮಟ್ಟದ ಹಾಗು ತಾಲೂಕು ಮಟ್ಟದ ಅಧಿಕಾರಿಗಳ ಸಭೆಯನ್ನುದ್ದೇಶಿಸಿ ಮಾತನಾಡಿದರು. ಪಾಲಿಕೆ ಮತ್ತು ತಾಲೂಕು ವ್ಯಾಪ್ತಿಯಲ್ಲಿ, ಮುಂಬರುವ ಮುಂಗಾರು ಮಳೆಯಿಂದ ಸಂಭವಿಸಬಹುದಾದ ಪ್ರಾಕೃತಿಕ ವಿಕೋಪದ ಬಗ್ಗೆ ಮುಂಜಾಗ್ರತೆ ವಹಿಸುವಂತೆ ತಿಳಿಸಿದ ಅವರು ಮೇ 25 ರೊಳಗೆ ಸಹಾಯಕ ಕಮೀಷನರ್ […]

ಮಂಗಳೂರು : ಎಸಿಪಿ ವಿರುದ್ದ ಮಹಿಳಾ ಎಸ್ ಐ ದೂರು

Thursday, May 23rd, 2013
Manish Karbikar

ಮಂಗಳೂರು : ಪಾಂಡೇಶ್ವರ ಠಾಣೆಯ ಮಹಿಳಾ ಎಸ್ ಐ ಶ್ರೀಕಲಾ ತನಗೆ ರಜೆ ಮತ್ತು ಕರ್ತವ್ಯ ವಿಚಾರದಲ್ಲಿ ಮಾನಸಿಕ ಕಿರುಕುಳ ನೀಡಲಾಗುತ್ತಿದೆ ಎಂದು ಆರೋಪಿಸಿ  ಮಂಗಳೂರು ಎಸಿಪಿ ಟಿ.ಆಆರ್.ಜಗನ್ನಾಥ್ ವಿರುದ್ದ ಪೊಲೀಸ್ ಆಯುಕ್ತ ಮನೀಶ್ ಕರ್ಬೀಕರ್ ಅವರಲ್ಲಿ ದೂರು ನೀಡಿದ್ದಾರೆ. ಎಸಿಪಿ ಜಗನ್ನಾಥ್ ತನ್ನನ್ನು ರಾತ್ರಿ ಪಾಳೆಯದಲ್ಲಿ ನಿಯೋಜಿಸುತ್ತಿರುವುದಲ್ಲದೆ, ರಜೆ ಕೇಳಿದರೆ ಮಂಜೂರು ಮಾಡುವುದಿಲ್ಲ ಎಂದು ತಮ್ಮ ದೂರಿನಲ್ಲಿ ತಿಳಿಸಿದ್ದಾರೆ. ಆದರೆ ಎಸಿಪಿ ಜಗನ್ನಾಥ್ ಶ್ರೀಕಲಾ ಕೆಲವು ದಿನಗಳ ಹಿಂದೆಯಷ್ಟೇ ದೀರ್ಘ ಕಾಲದ ರಜೆ ಪಡೆದು ಕರ್ತವ್ಯಕ್ಕೆ […]

ಪಿವಿಎಸ್ ಸಮೂಹ ಸಂಸ್ಥೆಗಳ ಅಧ್ಯಕ್ಷ ಮಧುಸೂದನ ಡಿ.ಕುಶೆ ನಿಧನ

Thursday, May 23rd, 2013
Madhusudan Kushe

ಮಂಗಳೂರು : ನೂರು ವರ್ಷ ಇತಿಹಾಸವುಳ್ಳ ಪ್ರತಿಷ್ಠಿತ ಪಿವಿಎಸ್ ಸಮೂಹ ಸಂಸ್ಥೆಗಳ ಅಧ್ಯಕ್ಷರಾದ ಮಧುಸೂದನ ಡಿ.ಕುಶೆ (78) ಅವರು ಬುಧವಾರ ಆರೋಗ್ಯ ಸಮಸ್ಯೆಯಿಂದಾಗಿ ತಮ್ಮ ಸ್ವಗೃಹದಲ್ಲಿ ನಿಧನ ಹೊಂದಿದ್ದಾರೆ. ಕುಶೆ ಅವರ ತಂದೆ ದಿ. ಪುತ್ತು ವೈಕುಂಠ ಶೇಟ್ ಅವರು ಒಂದು ಶತಮಾನದ ಹಿಂದೆ ಸ್ಥಾಪಿಸಿದ ಪಿ.ವಿ.ಎಸ್ ಬೀಡಿ ಸಂಸ್ಥೆಯ ಆಡಳಿತ ಚುಕ್ಕಾಣಿಯನ್ನು ತಮ್ಮ 21 ನೇ ವಯಸ್ಸಿನಲ್ಲಿ ವಹಿಸಿಕೊಂಡ ಮಧುಸೂದನ ಕುಶೆ ಸಂಸ್ಥೆ ಯನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ಬೆಳೆಸಿ ಜರ್ಮನಿ, ಆಸ್ಟ್ರೇಲಿಯಾ ಮೊದಲಾದ ದೇಶಗಳಿಗೆ ಬೀಡಿಯನ್ನು […]

ಪಡುಬಿದ್ರೆ : ರಾಷ್ಟ್ರೀಯ ಹೆದ್ದಾರಿ ಬೀಡಿನಕೆರೆ ಬಳಿ ಅಪಘಾತ ಮೂವರ ದುರ್ಮರಣ

Wednesday, May 22nd, 2013
car truck accident padubidri

ಪಡುಬಿದ್ರೆ : ಮಂಗಳವಾರ ಮದ್ಯಾಹ್ನ 2;30 ರ ಸುಮಾರಿಗೆ ಪಡುಬಿದ್ರೆ ಮತ್ತು ಕಾಪು ನಡುವಿನ ರಾಷ್ಟ್ರೀಯ ಹೆದ್ದಾರಿ  ಬೀಡಿನಕೆರೆ ಬಳಿ ಕಾರು ಮತ್ತು ಟ್ಯಾಂಕರ್ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ದಂಪತಿ ಸೇರಿದಂತೆ ಒಟ್ಟು ಮೂವರು ಮೃತಪಟ್ಟಿದ್ದಾರೆ. ಮೃತರನ್ನು ಮಜೂರು ಗ್ರಾಮ ಪಂಚಾಯತ್ ಕಾರ್ಯದರ್ಶಿ, ನಿಟ್ಟೆ ನಿವಾಸಿ ಅರುಣಾ ಸತೀಶ್ ರೈ(55), ಆಕೆಯ ಪತಿ ಸತೀಶ್ ರೈ(57) ಹಾಗು ಸತೀಶ ರೈ ರ ಗೆಳೆಯ, ಕಾರು ಚಾಲಕ ಸುರತ್ಕಲ್ ಕೃಷ್ಣಾಪುರ 7  ನೇ ಬ್ಲಾಕ್ ನಿವಾಸಿ […]