ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನಕ್ಕೆ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಯವರಿಂದ ಮೂರು ಸ್ವರ್ಣ ಶಿಖರಗಳ ಸಮರ್ಪಣೆ

Monday, January 7th, 2013
Vittal Panchalingeshwara Temple

ಮಂಗಳೂರು : ರವಿವಾರ ಧರ್ಮಸ್ಥಳದ ಅಮೃತವರ್ಷಿಣಿ ಸಭಾಭವನದಲ್ಲಿ ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನಕ್ಕೆ ಧರ್ಮಸ್ಥಳ ಕ್ಷೇತ್ರದಿಂದ 1.2 ಕೋಟಿ ರೂಪಾಯಿ ವೆಚ್ಚದಲ್ಲಿ ಮೂರು ಸ್ವರ್ಣ ಶಿಖರಗಳ ಸಮರ್ಪಣಾ ಸಮಾರಂಭವು ಏರ್ಪಟ್ಟಿದ್ದು ಇದರ ಅಧ್ಯಕ್ಷತೆಯನ್ನು ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ವಹಿಸಿದ್ದರು. ಸಮಾರಂಭವನ್ನು ಕುರಿತಂತೆ ಮಾತನಾಡಿದ ಅವರು ದೇವಾಲಯಗಳ ಮೂಲರೂಪ ಮತ್ತು ಅವುಗಳ ಸಂರಕ್ಷಣೆ ದೊಡ್ಡ ಕಾರ್ಯವಾಗಿದ್ದು, ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನ ಮೂಲ ಸ್ವರೂಪದಲ್ಲೇ ನಿರ್ಮಾಣವಾಗಿರುವುದು ನಿಜಕ್ಕೂ ಅದ್ಭುತ. ಪರಂಪರೆ ರೂಪ ಉಳಿಸಿಕೊಂಡು ಪುನರ್‌ನವೀಕರಣ ನಡೆಯಬೇಕು. ವಿಟ್ಲ […]

ಕರ್ನಾಟಕ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಎರಡು ದಿನಗಳ ರಾಷ್ಟ್ರೀಯ ಮಾರಾಟಗಾರರ ಸಮಾವೇಶ ಹಾಗೂ ಕಾರ್ಯಾಗಾರ

Monday, January 7th, 2013
P P Upadhya

ಮಂಗಳೂರು : ನಗರದ ಕರ್ನಾಟಕ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಸಣ್ಣ ಕೈಗಾರಿಕೆಗಳ ಸಚಿವಾಲಯ, ಜಿಲ್ಲಾ ಕೈಗಾರಿಕಾ ಕೇಂದ್ರ, ಜಿಲ್ಲಾ ಸಣ್ಣ ಕೈಗಾರಿಕೆಗಳ ಒಕ್ಕೂಟ ಹಾಗೂ ಎಂ.ಎಸ್.ಎಂ.ಇ.ಡಿ.ಐ ವತಿಯಿಂದ ಆಯೋಜಿಸಲಾಗಿರುವ ಎರಡು ದಿನಗಳ ರಾಷ್ಟ್ರೀಯ ಮಾರಾಟಗಾರರ ಸಮಾವೇಶ ಹಾಗೂ ಕಾರ್ಯಾಗಾರವನ್ನು ಎಂಆರ್ ಪಿಎಲ್ ನ ಆಡಳಿತ ನಿರ್ದೇಶಕ ಪಿ.ಪಿ.ಉಪಾದ್ಯಾಯ ಉದ್ಘಾಟಿಸಿ ಮಾತನಾಡಿರು ಎಂಆರ್ ಪಿಎಲ್ ನಂತಹ ಬೃಹತ್ ಕಂಪನಿಗಳಲ್ಲಿ ಉದ್ಯೋಗದಲ್ಲಿರುವವರಲ್ಲಿ ಶೇಕಡ 60 ಮಂದಿ ಉದ್ಯೋಗಿಗಳು ಡಿಪ್ಲೊಮ ಪದವಿ ಪಡೆದವರಾಗಿದ್ದಾರೆ. ಈ ಪದವಿ ಪಡೆದವರಿಗೆ ಕೈಗಾರಿಕೆಗಳಲ್ಲಿ ಸಾಕಷ್ಟು ಅವಕಾಶಗಳಿರುವುದರಿಂದ, ರಾಜ್ಯದ […]

ಕೇಂದ್ರ ಮಾನವ ಸಂಪದ ಸಚಿವ ಪಲ್ಲಂರಾಜು ರವರಿಂದ ಕೇರಳದ ನೂತನ ಕೇಂದ್ರೀಯ ವಿಶ್ವವಿದ್ಯಾನಿಲಯ ಸಮುಚ್ಚಯಕ್ಕೆ ಶಿಲಾನ್ಯಾಸ

Monday, January 7th, 2013
Pallam Raju

ಕಾಸರಗೋಡು : ಕೇಂದ್ರ ಸರ್ಕಾರ ಗುಣಮಟ್ಟದ ಶಿಕ್ಷಣಕ್ಕೆ ವಿಶೇಷ ಆದ್ಯತೆ ಯನ್ನು ನೀಡುತ್ತಿದ್ದು, ಶಿಕ್ಷಣದಲ್ಲಿ ಯುವ ಪೀಳಿಗೆಯ ವಿಶೇಷ ಶಿಕ್ಷಣದ ಅಗತ್ಯತೆಯನ್ನು ಕೇಂದ್ರ ಸರಕಾರ ಮನಗಂಡು ಆದ್ಯತೆಯನ್ನು ನೀಡಲಾಗುತ್ತಿದೆ. ಎಂದು ಜನವರಿ 5 ಶನಿವಾರದಂದು ಕೇಂದ್ರ ಮಾನವ ಸಂಪದ ಸಚಿವರಾದ ಪಲ್ಲಂರಾಜು ಕಾಸರಗೋಡು ಜಿಲ್ಲೆಯ ಪೆರಿಯಾದಲ್ಲಿ ಕೇಂದ್ರೀಯ ವಿಶ್ವವಿದ್ಯಾನಿಲಯ ಕೇರಳದ ನೂತನ ಸಮುಚ್ಚಯಕ್ಕೆ ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು. ಸ್ಥಳೀಯ ವಿದ್ಯಾರ್ಥಿಗಳು ಉನ್ನತ ಶಿಕ್ಷಣಕ್ಕಾಗಿ ವಿದೇಶಕ್ಕೆ ತೆರಳುವುದನ್ನು ತಪ್ಪಿಸಲು ಹೆಚ್ಚಿನ ಕಡೆಗಳಲ್ಲಿ ವಿ.ವಿ. ಆರಂಭಿಸಲಾಗುವುದು, ಅದರಲ್ಲೂ ಕಾಸರಗೋಡು ಜಿಲ್ಲೆಯ […]

ಕೆಎಂಸಿ: ಶಾರ್ಟ್ ಸರ್ಕ್ಯೂಟ್ ತಪ್ಪಿದ ಭಾರೀ ಅನಾಹುತ

Saturday, January 5th, 2013
KMC hospital Fire

ಮಂಗಳೂರು : ನಗರದ ಕೆಎಂಸಿ ಆಸ್ಪತ್ರೆಯ ಪ್ರಥಮ ಮಹಡಿಯಲ್ಲಿರುವ ಮೈಕ್ರೋಬಯಾಲಜಿ ಪ್ರಯೋಗ ಶಾಲೆಯಲ್ಲಿನ ಎ.ಸಿಯಲ್ಲಿ ಶಾರ್ಟ್ ಸರ್ಕ್ಯೂಟ್ ಪರಿಣಾಮ ಉಂಟಾದ ಬೆಂಕಿ ಕೆಲ ಕ್ಷಣಗಳಲ್ಲೇ ಕೋಣೆಯ ತುಂಬಾ ಹರಡಿ ಭಾರಿ ಅನಾಹುತ ಸಭಾವಿಸುತ್ತಿತ್ತು ಆದರೆ ಆಸ್ಪತ್ರೆಯ ಸಿಬ್ಬಂದಿ ವರ್ಗ ಮತ್ತು ಅಗ್ನಿ ಶ್ಯಾಮಕ ಸಿಬ್ಬಂದಿಗಳ ತ್ವರಿತ ಕಾರ್ಯಾಚರಣೆಯಿಂದಾಗಿ ಆಗಬಹುದಾದ ಭಾರಿ ಅನಾಹುತವೊಂದು ತಪ್ಪಿದೆ. ಶನಿವಾರ ಮುಂಜಾನೆ ಸುಮಾರು 2.30 ರ ವೇಳೆಗೆ ಎ ಸಿ ಯಲ್ಲಿ ಉಂಟಾದ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಬೆಂಕಿ ಕಾಣಿಸಿಕೊಂಡು ಕೆಲವೇ ಕ್ಷಣದಲ್ಲಿ […]

ಕುಡಿಯುವ ನೀರಿಗೆ ಶಾಶ್ವತ ಪರಿಹಾರ : ಹೆಚ್. ಡಿ ಕುಮಾರಸ್ವಾಮಿ

Saturday, January 5th, 2013
HD Kumaraswamy

ಮಂಗಳೂರು : ಅಸೈಗೋಳಿಯಲ್ಲಿ ನಡೆದ ಮಂಗಳೂರು ವಿಧಾನಸಭಾ ಕ್ಷೇತ್ರದ ಜಾತ್ಯತೀತ ಜನತಾದಳ ಪಕ್ಷ ದ ಕಾರ್ಯಕರ್ತರ ಬೃಹತ್ ಸಮಾವೇಶವನ್ನು ಶುಕ್ರವಾರ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಮುಂದಿನ ಚುನಾವಣೆಗೆ ಜೆಡಿಎಸ್ ಪಕ್ಷ ಸಂಪೂರ್ಣ ಸಜ್ಜಾಗಿದ್ದು ಯಾವುದೇ ಸಮಯದಲ್ಲಿ ಚುನಾವಣೆ ಬಂದರೂ ಎದುರಿಸಿ ಅಧಿಕಾರಕ್ಕೆ ಬರುತ್ತದೆ, ಮುಂದಿನ ಸಂಕ್ರಾಂತಿ ವೇಳೆಗೆ ಪಕ್ಷವು ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಲಿದೆ ಎಂದರು. ಅಲ್ಲದೆ ಬಿಜೆಪಿ ನಾಯಕರ ಒಳಜಗಳದಿಂದಾಗಿ ಪಕ್ಷ ನಿಷ್ಕ್ರಿಯ ವಾಗಿದ್ದು ಸಾಧ್ಯವಿದ್ದರೆ ಬಿಜೆಪಿ ಸರಕಾರವನ್ನು ತ್ಯಜಿಸಿ […]

ಅತ್ಯಾಚಾರಿಗಳ ವಿರುದ್ದ ಪ್ರಬಲ ಕಾನೂನು ರೂಪಿಸುವಂತೆ ಎಬಿವಿಪಿ ಮನವಿ

Saturday, January 5th, 2013
ABVP Protest

ಮಂಗಳೂರು : ದೆಹಲಿ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಧಪಟ್ಟಂತೆ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ನೀಡಿದ ದೇಶವ್ಯಾಪಿ ಪ್ರತಿಭಟನೆಗೆ ಎಲ್ಲೆಡೆಯಂತೆ ಮಂಗಳೂರಿನಲ್ಲು ಉತ್ತಮ ಬೆಂಬಲ ವ್ಯಕ್ತವಾಗಿದೆ. ದಿಲ್ಲಿ ಅತ್ಯಾಚಾರ ಅತ್ಯಂತ ಹೇಯ ಕೃತ್ಯವಾಗಿದ್ದು ಅತ್ಯಾಚಾರಕೊಳಪಟ್ಟ ವಿದ್ಯಾರ್ಥಿಯ ಸಾವು ದುರದೃಷ್ಟಕರ ಸಂಗತಿ. ಸಮಾಜದಲ್ಲಿ ಇಂತಹ ಪ್ರಕರಣಗಳು ಮತ್ತೆ ಮತ್ತೆ ನಡೆಯುತ್ತಿದ್ದು ದೇಶದ ಜನತೆ ತಲೆತಗ್ಗಿಸುವಂತಾಗಿದೆ ಆದರಿಂದ ಇಂತಹ ಘಟನೆಗಳು ಮರುಕಳಿಸದಂತೆ ಎಚ್ಚರಿಕೆ ವಹಿಸುವುದಲ್ಲದೆ ಯುವಶಕ್ತಿ ಇದರ ವಿರುದ್ಧ ಹೋರಾಡಬೇಕು ಪ್ರತಿಭಟನೆಯ ಸಂಘಟನಾ ಕಾರ್ಯದರ್ಶಿ ವಿನಯ್ ಹೊರಟ್ಟಿ ಹೇಳಿದರು. ಅತ್ಯಾಚಾರಿಗಳ […]

ಹಸೆಮಣೆ ಏರಲಿರುವ ಮಮತಾ ಪೂಜಾರಿ

Saturday, January 5th, 2013
Mamatha Poojary

ಮಂಗಳೂರು : ದೇಶಕ್ಕೆ ಮೊಟ್ಟಮೊದಲ ವಿಶ್ವಕಪ್ ತಂದುಕೊಟ್ಟ ಕನ್ನಡ ನಾಡಿನ ಹೆಮ್ಮೆಯ ಕಬಡಿ ಪಟು ಮಮತಾ ಪೂಜಾರಿ ಜನವರಿ 23 ರಂದು ಹಸೆಮಣೆ ಏರಲಿದ್ದಾರೆ. ಉಡುಪಿಯ ಖಾಸಗಿ ಹೋಟೆಲ್ ವೊಂದರಲ್ಲಿ ನಡೆಯಲಿರುವ ವಿವಾಹ ಸಮಾರಂಭದ ಮೂಲಕ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ. ಮೂಲತಃ ಉಡುಪಿಯ ಉದ್ಯಾವರದವರಾದ ಬೆಂಗಳೂರಿನಲ್ಲಿ ಸಾಫ್ಟವೇರ್ ಇಂಜಿನಿಯರ್ ಆಗಿರುವ ಅಭಿಷೇಕ್ ಕೋಟ್ಯಾನ್‌ರನ್ನು ಮಮತಾ ವರಿಸಲಿದ್ದಾರೆ. ತೀರಾ ಹತ್ತಿರ ಸಂಬಂಧಿಗಳ ಉಪಸ್ಥಿತಿಯಲ್ಲಿ ಅಕ್ಟೋಬರ್ 9 ರಂದು ಕಾರ್ಕಾಳದ ಅಜೆಕಾರು ಬಳಿಯಿರುವ ಹೆರ್ಮುಂಡೆಯ ಮಮತಾರವರ ಮನೆಯಲ್ಲಿ ಕುಟುಂಬಿಕರ ಹಾಗೂ […]

ಹಳಿ ತಪ್ಪಿದ ಯಶವಂತಪುರ ಎಕ್ಸ್ ಪ್ರೆಸ್ ರೈಲು ರೈಲು ಸಂಚಾರದಲ್ಲಿ ವ್ಯತ್ಯಯ

Saturday, January 5th, 2013
Yashwanthpur express train

ಮಂಗಳೂರು : ಮೈಸೂರು ವಿಭಾಗದ ಸಕಲೇಶಪುರ – ಸುಬ್ರಹ್ಮಣ್ಯ ನಡುವೆ ಶುಕ್ರವಾರ ಬೆಳಗ್ಗೆ ಯಶವಂತಪುರ – ಕಣ್ಣೂರು ಎಕ್ಸ್‌ಪ್ರೆಸ್‌ ರೈಲು ಹಳಿ ತಪ್ಪಿದ ಪರಿಣಾಮ ಆ ಮಾರ್ಗದ ಮೂಲಕ ಜನವರಿ 4 ಮತ್ತು 5ರಂದು ಸಂಚರಿಸಬೇಕಾದ ಎಲ್ಲಾ ರೈಲುಗಳನ್ನು ರದ್ದು ಪಡಿಸಲಾಗಿದೆ. ಮುಂಜಾನೆ 5:30ಕ್ಕೆ ಸಕಲೇಶಪುರ ಬಳಿ ಕಡಗರವಳ್ಳಿ-ಎಡಕುಮೇರಿ ನಡುವೆ ರೈಲಿನ ಮುಂಭಾಗದ ಎಂಜಿನ್ ಸಹಿತ ಎರಡು ಬೋಗಿ ಹಳಿ ತಪ್ಪಿದ್ದು, ಸ್ಪಲ್ಪದರಲ್ಲೇ ಅಪಾಯದಿಂದ ಪಾರಾಗಿದೆ. ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಅಪಘಾತದ ಪರಿಣಾಮ ಸಂಚಾರೀ ವ್ಯವಸ್ಥೆಯಲ್ಲಿ […]

ಬಾಲಿವುಡ್ ಅದೃಷ್ಟ ಪರೀಕ್ಷೆ ಕಾಣೆಯಾದ ನಿಧಿ

Friday, January 4th, 2013
Nidhi subbaiah

ಬೆಂಗಳೂರು : ಕನ್ನಡ ಚಿತ್ರರಂಗದ ಹೊಸ ಪ್ರತಿಭೆಯಾದ ನಿಧಿ ಸುಬ್ಬಯ್ಯ ಬಾಲಿವುಡ್ ಚಿತ್ರ ಜಗತ್ತಿಗೆ ಎಂಟ್ರಿ ಕೊಟ್ಟಾಗ ಇಡೀ ಚಿತ್ರೋದ್ಯಮವೇ ಸಂಭ್ರಮ ಪಟ್ಟಿತ್ತು. ಓ ಮೈ ಗಾಡ್, ಅಜಬ್ ಗಜಬ್ ಲವ್ ಮೊದಲಾದ ಹಿಂದಿ ಚಿತ್ರಗಳಲ್ಲಿ ಕಾಣಿಸಿಕೊಂಡ ಈಕೆ ಈ ಚಿತ್ರಗಳ ಮೇಲೆ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದರು ಆದರೆ ಬಾಲಿವುಡ್‌ನಲ್ಲಿ ತೆರೆಕಂಡ ಎರಡೂ ಚಿತ್ರಗಳೂ ಬಾಕ್ಸ್ ಆಫೀಸಿನಲ್ಲಿ ಸೋತ್ತಿದ್ದರಿಂದ ಕಂಗಾಲಾಗಿದ್ದಾರೆ . ಇವರಿಗೆ, ಓ ಮೈ ಗಾಡ್ ಚಿತ್ರಕ್ಕಿಂತ ಅಜಬ್ ಗಜಬ್ ಲವ್ ಚಿತ್ರದ ಮೇಲೆ ಸಾಕಷ್ಟು […]

ಜನವರಿ ಹದಿನೆಂಟ ರಿಂದ ಇಪ್ಪತ್ತರವರೆಗೆ ನಡೆಯಲಿರುವ ಶ್ರೀ ಭೂತನಾಥೇಶ್ವರ ಕ್ರೀಡೋತ್ಸವ

Friday, January 4th, 2013
Bhoothanatheshwara Kreedotsava

ಮಂಗಳೂರು : ಕರಾವಳಿ ಕರ್ನಾಟಕದ ಗ್ರಾಮೀಣ ಪ್ರದೇಶದ ಕ್ರೀಡಾಳುಗಳಿಂದ ಅಭೂತಪೂರ್ವ ಪ್ರತಿಕ್ರಿಯೆ ಪಡೆದ ಬಹು ನಿರೀಕ್ಷಿತ ಶ್ರೀ ಭೂತನಾಥೇಶ್ವರ ಕ್ರೀಡೋತ್ಸವ ಇದೇ ಜನವರಿ 18,19 ಮತ್ತು 20,2013 ರಂದು ಶಾಸ್ತಾವು ಶ್ರೀ ಭೂತನಾಥೇಶ್ವರ ದೇವಸ್ಥಾನ, ಬಡಗ ಎಡಪದವು, ಮಿಜಾರು, ಮಂಗಳೂರು ಇದರ ಬಳಿಯಲ್ಲಿರುವ ಗದ್ದೆಯಲ್ಲಿ ನಡೆಯಲಿದ್ದು, ಪ್ರವೇಶ ಪತ್ರಗಳ ಸ್ವೀಕೃತಿ ಡಿಸೆಂಬರ್ ಒಂದರಿಂದ ಆರಂಭವಾಗಿದ್ದು ಈಗಾಗಲೇ 1500ಕ್ಕಿಂತಲೂ ಹೆಚ್ಚು ಪ್ರವೇಶಪತ್ರಗಳು ಬಂದಿದ್ದು, ಈ ವರ್ಷ ದಾಖಲೆ ಸಂಖ್ಯೆಯ ಸ್ಪರ್ಧಾಳುಗಳ ನಿರೀಕ್ಷೆಯಲ್ಲಿದ್ದೇವೆ ಎಂದು ಕ್ರೀಡೋತ್ಸವದ ಮುಖ್ಯ ಸಂಘಟಕ ವಿಜಯನಾಥ […]