ಕರಾವಳಿಯಲ್ಲಿ ದೀಪಾವಳಿ ಹಬ್ಬದ ಸಂಭ್ರಮ ಸಡಗರ

Monday, November 12th, 2012
Diwali

ಮಂಗಳೂರು :ನಮ್ಮದೇಶದ ಅತೀ ದೊಡ್ಡ ಹಬ್ಬಗಳಲ್ಲಿ ದೀಪಾವಳಿಯೂ ಒಂದು. ಕತ್ತಲನ್ನೋಡಿಸಿ ಬೆಳಕನ್ನು ತರುವ ಬೆಳಕಿನ ಹಬ್ಬದೀಪಾವಳಿ. ದೀಪಾವಳಿ ಹಬ್ಬದ ಆಚರಣೆಗೆ ಅವಶ್ಯಕತೆಯಿರುವ ವಸ್ತುಗಳನ್ನು ಖರೀದಿಸಲು ಗ್ರಾಹಕರು ಮುಗಿಬೀಳುತ್ತಿರುವ ದೃಶ್ಯ ಮಂಗಳೂರಿನ ವ್ಯಾಪಾರ ಮಳಿಗೆಗಳಲ್ಲಿ ಬಾನುವಾರದಿಂದಲೇ ಆರಂಭವಾಗಿದೆ. ದೀಪಾವಳಿಯ ಹಬ್ಬದ ಪ್ರಯುಕ್ತ ನಗರದಲ್ಲಿ ಜನರು ಪಟಾಕಿ, ಗೂಡುದೀಪಗಳ ಖರೀದಿಯಲ್ಲಿ ತೊಡಗಿದ್ದು, ನಗರದ ಪಟಾಕಿ ಅಂಗಡಿಗಳಲ್ಲಿ ಜನರು ಪಟಾಕಿ ಖರೀದಿಗಾಗಿ ಮುಗಿಬೀಳುತ್ತಿರುವ ದೃಶ್ಯ ಕಂಡುಬರುತ್ತಿದೆ. ಅಲ್ಲದೆ ಹೂವು, ಹಣ್ಣುಗಳ ಮಾರಾಟ ಭರದಿಂದ ಸಾಗಿದೆ. ಈ ಬಾರಿ ಪಟಾಕಿ ಬೆಲೆಯಲ್ಲಿ ಶೇ.25ರಿಂದ […]

ವೇಣೂರು ಠಾಣಾ ವ್ಯಾಪ್ತಿ ಅಕ್ರಮ ಮಗು ಮಾರಾಟ, ಐವರ ಬಂಧನ

Monday, November 12th, 2012
Sold baby arrested

ಮಂಗಳೂರು :ವೇಣೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಕ್ರಮವಾಗಿ ಮಗುವನ್ನು ಮಾರಾಟ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಐದು ಮಂದಿಯನ್ನು ಬಂಧಿಸಿ, ಮಗುವನ್ನು ವಶಕ್ಕೆ ತೆಗೆದುಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ದ.ಕ. ಎಸ್‌ಪಿ ಅಭಿಷೇಕ್ ಗೋಯಲ್ ತಿಳಿಸಿದರು. ಬೆಳ್ತಂಗಡಿ ತಾಲೂಕಿನ ಮಹಿಳೆಯೊಬ್ಬರು ಹೆಣ್ಣು ಮಗುವಿಗೆ ಜನ್ಮ ನೀಡಿ ಮಾರಾಟ ಮಾಡಿದ್ದಾರೆ ಎಂಬುದಾಗಿ ಏಪ್ರಿಲ್ 1ರಂದು ಗ್ರಾಮ ಪಂಚಾಯಿತಿಯಿಂದ ದೂರು ಬಂದ ಹಿನ್ನೆಲೆಯಲ್ಲಿ ತನಿಖೆ ನಡೆಸಿದಾಗ ಪ್ರಕರಣ ಬಯಲಿಗೆ ಬಂದಿದೆ ಎಂದರು. ನಗರದ ಲೇಡಿಗೋಶನ್ ಆಸ್ಪತ್ರೆಯಲ್ಲಿ ಬೆಳ್ತಂಗಡಿ […]

ಸಹ್ಯಾದ್ರಿ ಎಂಜಿನಿಯರಿಂಗ್ ಕಾಲೇಜ್ ನಲ್ಲಿ ವಿವಿಧ ಸಂಶೋಧನಾ ಕೇಂದ್ರಗಳ ಉದ್ಘಾಟನಾ ಸಮಾರಂಭ

Saturday, November 10th, 2012
Sahyaadri College

ಮಂಗಳೂರು :ಅಡ್ಯಾರ್‌ನಲ್ಲಿರುವ ಸಹ್ಯಾದ್ರಿ ಕಾಲೇ ಜ್ ಅಫ್ ಎಂಜಿನಿಯರಿಂಗ್ ಹಾಗೂ ಮ್ಯಾನೇಜ್‌ಮೆಂಟ್‌ನಲ್ಲಿ ಕರ್ನಾಟಕ ಸರಕಾರ ಹಾಗೂ ವಿಶ್ವೇಶ್ವರಯ್ಯ ತಾಂತ್ರಿಕ ವಿವಿಯ ಸಹಯೋಗದೊಂದಿಗೆ ನೂತನವಾಗಿ ಸ್ಥಾಪನೆಗೊಂಡಿರುವ ಸಂಶೋಧನಾ ಕೇಂದ್ರ, ಇನ್‌ಕುಬೇಶನ್ ಸೆಂಟರ್, ಉದ್ಯೋಗಾವಕಾಶ ಒದಗಣೆ ಕೇಂದ್ರ, ತರಬೇತಿ ಕೇಂದ್ರಗಳು ಹಾಗೂ ಅಲಹಾಬಾದ್‌ನ ಐಐಐಟಿ ಸಂಸ್ಥೆಯ ಸಹಯೋಗದಲ್ಲಿ ಸ್ಥಾಪನೆಗೊಂಡಿರುವ ಉತ್ಕೃಷ್ಟತಾ ಕೇಂದ್ರ ಹಾಗೂ ನಾವಿನ್ಯತಾ ಪ್ರಯೋಗಾಲಯ ಮೊದಲಾದವುಗಳ ಉದ್ಘಾಟನೆಯನ್ನು ಉನ್ನತ ಶಿಕ್ಷಣ ಸಚಿವ ಹಾಗೂ ದಕ್ಷಿಣ ಕನ್ನಡ ಉಸ್ತುವಾರಿ ಸಚಿವರಾದ ಸಿ.ಟಿ ರವಿ ಉದ್ಘಾಟಿಸಿದರು. ಬಳಿಕ ಮಾತನಾಡಿದ ಭಾರತ ದೇಶವು […]

ದೀಪಗಳಿಂದ ದೀಪ ಹಚ್ಚುವ ದೀಪಾವಳಿ

Saturday, November 10th, 2012
Diwali Celebration

ಮಂಗಳೂರು :ದೀಪಾವಳಿಗೆ ಮುಂದೆ ಹಲವಾರು ಐತಿಹ್ಯಗಳು ಸೇರಿಕೊಂಡವು. ದುಷ್ಟ ಶಕ್ತಿಯೆಂಬ ಕತ್ತಲೆಯನ್ನು ಜಯಿಸಿ ಬೆಳಕನ್ನು ಹರಿಸುವ ಸಂಕೇತವಾಗಿ ಇಂದು ದೀಪಾವಳಿ ಆಚರಿಸಲ್ಪಡುತ್ತಿದೆ. ದೀಪ ಬೆಳಗುವುದು ನಮ್ಮ ಸಂಸ್ಕೃತಿ. ದೀಪ ಹತ್ತಿದ ಕೂಡಲೇ ನಮ್ಮ ಅರಿವಿಗೆ ಬಾರದಂತೆ ಮನಸ್ಸು ತಮಸೋಮಾ ಜ್ಯೋತಿರ್ಗಮಯ ಮೃತ್ಯೋಮ ಅಮೃತಂಗಮಯ ಎಂದು ನಮಿಸುತ್ತದೆ. ಭಾರತೀಯ ಸಂಸ್ಕೃತಿಯ ದೀಪ ಹಚ್ಚುವ ಕ್ರಿಯೆಯಲ್ಲಿ ಪ್ರೀತಿಯ ಕರೆಯಿದೆ – ಆತ್ಮದ ಮೊರೆಯೂ ಇದೆ. ನಮ್ಮ ಆತ್ಮಸಾಕ್ಷಿಯನ್ನು ಜಾಗೃತಗೊಳಿಸುವ ಈ ಬೆಳಕು ಬರಲಿರುವ ಇರುಳಿಗೆ, ಕಷ್ಟಗಳಿಗೆ, ಭಯ ಪಡಬೇಡ ಎಂಬ […]

ಹಿಂದೂ ಯುವಕನೊಂದಿಗೆ ಪ್ರಯಾಣಿಸುತ್ತಿದ್ದ ಮುಸ್ಲಿಂ ಯುವತಿಯ ಮೇಲೆ ಹಲ್ಲೆ, ಹಣ ಲೂಟಿ

Saturday, November 10th, 2012
Muslim women

ಮಂಗಳೂರು :ಬಜ್ಪೆ ಬಳಿಯ ಮರವೂರು ಎಂಬಲ್ಲಿ ಕಾರಿನಲ್ಲಿ ಹಿಂದೂ ಯುವಕನೊಂದಿಗೆ ಪ್ರಯಾಣಿಸುತ್ತಿದ್ದ ಮುಸ್ಲಿಂ ಯುವತಿಯನ್ನು ಯುವಕರ ಗುಪೊಂದು ಹಿಗ್ಗಾಮುಗ್ಗಾ ಥಳಿಸಿ, ಆಕೆಯ ಬಳಿಯಿದ್ದ 3.7 ಲಕ್ಷ ರೂಪಾಯಿ ನಗದು ಹಣವನ್ನು ಕಿತ್ತುಕೊಂಡು ಪರಾರಿಯಾದ ಘಟನೆ ಶುಕ್ರವಾರ ನಡೆದಿದೆ. 23 ವರ್ಷದ ದೀಬಾ ಅಲ್ಗನಿ ಎಂಬಾಕೆ ಕಾರಿನಲ್ಲಿ ಸಂಚರಿಸುತ್ತಿದ್ದ ವೇಳೆ ಕಾರನ್ನು ಅಡ್ಡಗಟ್ಟಿದ ಯುವಕರ ತಂಡವೊಂದು ಹಿಂದುವಿನೊಂದಿಗೆ ಏಕೆ ಪ್ರಯಾಣಿಸುತ್ತಿದ್ದಿ ಎಂದು ಪ್ರಶ್ನಿಸಿ ಆಕೆಯ ಬಳಿಯಿದ್ದ ಮೊಬೈಲ್ ಹಾಗೂ 3.7 ಲಕ್ಷ ರೂಪಾಯಿಗಳನ್ನು ದೋಚಿದಲ್ಲದೆ, ಆಕೆ ಮತ್ತು ಡ್ರೈವೆರ್ […]

ಸೂಪರ್‌ಹಿಟ್ಸ್ 93.5 ರೆಡ್ ಎಫ್‌ಎಮ್ ನಿಂದ ರೆಡ್ ರಥ

Saturday, November 10th, 2012
RED FM 93.5

ಮಂಗಳೂರು :ಸೂಪರ್‌ಹಿಟ್ಸ್ 93.5 ರೆಡ್ ಎಫ್‌ಎಮ್ ವತಿಯಿಂದ ದೀಪಾವಳಿ ಹಬ್ಬವನ್ನು ವಿಶಿಷ್ಠ ರೀತಿಯಲ್ಲಿ ಆಚರಿಸುವ ನಿಟ್ಟಿನಲ್ಲಿ ರೆಡ್ ರಥವನ್ನು ನಗರದಲ್ಲಿ ನಿನ್ನೆ ಆರಂಭಿಸಲಾಗಿದೆ. ಇನ್‌ಲ್ಯಾಂಡ್ ಗ್ರೂಪ್‌ನ ಚೇರ್‌ಮನ್ ಶ್ರೀ ಸಿರಾಜ್ ಅಹಮ್ಮದ್ ಅವರು ರೆಡ್ ಎಫ್ಎಮ್ ರೆಡ್ ರಥಕ್ಕೆ ಚಾಲನೆ ನೀಡಿದರು. ಮಂಗಳೂರಿನ ರೇಡಿಯೋ ಇತಿಹಾಸದಲ್ಲಿಯೇ ಇದು ಮೊಟ್ಟ ಮೊದಲ ಪ್ರಯತ್ನವಾಗಿದ್ದು ಮಂಗಳೂರಿನ ಪ್ರಮುಖ ರಸ್ತೆಗಳ ಮೂಲಕ ಸಂಚರಿಸಿ ಮಂಗಳೂರಿನ ಜನತೆಗೆ ದೀಪಾವಳಿ ಕೊಡುಗೆಯೊಂದಿಗೆ ವಿಶಿಷ್ಠ ಅನುಭವ ನೀಡಲಿದೆ. ಈ ರೆಡ್ ರಥ ದಲ್ಲಿ ಕಚೇರಿಯಲ್ಲಿರುವಂತೆ ಸ್ಟೂಡೀಯೋ […]

ಪಿಲಿಕುಳ ಜೈವಿಕ ಉದ್ಯಾನವನದಲ್ಲಿ ಅವಳಿ ಮರಿಗಳಿಗೆ ಜನ್ಮ ನೀಡಿದ ಹುಲಿ ಶಾಂಭವಿ

Friday, November 9th, 2012
Pilkula tiger Shaambhavi

ಮಂಗಳೂರು :ಮಂಗಳೂರು ಪಿಲಿಕುಳ ಜೈವಿಕ ಉದ್ಯಾನವನದ ವನ್ಯಜೀವಿ ಸಂಕುಲಕ್ಕೆ ಐದು ಹೊಸ ಸದಸ್ಯರ ಸೇರ್ಪಡೆಯಾಗಿದೆ. 4 ವರ್ಷ ಪ್ರಾಯದ ಹುಲಿ ಶಾಂಭವಿ ಬುಧವಾರ ಅವಳಿ ಮರಿಗಳಿಗೆ ಜನ್ಮನೀಡಿದೆ. ಹೊಸ ಅತಿಥಿಗಳ ಆಗಮನದಿಂದ ಪಿಲಿಕುಳದಲ್ಲಿ ಹುಲಿಗಳ ಸಂಖ್ಯೆ 9ಕ್ಕೆ ಏರಿದೆ. ಉದ್ಯಾನದ ಸಿಬ್ಬಂದಿ ವಿಶೇಷ ಕಾಳಜಿಯಿಂದ ಶಾಂಭವಿಯ ಆರೈಕೆ ಮಾಡುತ್ತಿದ್ದು, ಪ್ರಸ್ತುತ ಪಿಲಿಕುಳ ಜೈವಿಕ ಉದ್ಯಾನವನದಲ್ಲಿ ರಾಜ, ವಿಕ್ರಮ, ನೇತ್ರಾವತಿ, ಶರಾವತಿ, ಕೃಷ್ಣ, ಕದಂಬ ಸೇರಿದಂತೆ 7 ಹುಲಿಗಳಿವೆ. ಈ ಉದ್ಯಾನವನದಲ್ಲಿಯೇ ಗೌರಿ ಎಂಬ ಹೆಸರಿನ ಚಿರತೆಯೊಂದು ಒಂದು […]

ನಕಲಿ ಅಂಕಪಟ್ಟಿ, ಸರ್ಟಿಫಿಕೆಟ್ ಮಾರಾಟ ಜಾಲ ಪತ್ತೆ ಇಬ್ಬರು ಆರೋಪಿಗಳ ಬಂಧನ

Friday, November 9th, 2012
Fake Certificate

ಮಂಗಳೂರು :ಮಂಗಳೂರು ಸಿಸಿಬಿ ಪೊಲೀಸರು ದೇಶದ ನಾನಾ ವಿಶ್ವವಿದ್ಯಾನಿಲಯಗಳ ಅಂಕಪಟ್ಟಿ ಹಾಗೂ ಪದವಿ ಸರ್ಟಿಫಿಕೇಟ್‌ಗಳನ್ನು ನಕಲಿಯಾಗಿ ತಯಾರಿಸಿ ಮಾರಾಟ ಮಾಡುತ್ತಿದ್ದ ಜಾಲವನ್ನು ಪತ್ತೆಹಚ್ಚಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಸುರತ್ಕಲ್ ಮಾರಿಗುಡಿ ಸಮೀಪದ ಶ್ರೀದೇವಿ ಅಪಾರ್ಟ್‌ಮೆಂಟ್ ನಿವಾಸಿ ಅವಿನಾಶ್ ಶೆಟ್ಟಿ (31) ಹಾಗೂ ಕಾಸರಗೋಡು ಜಿಲ್ಲೆಯ ವಲುಕ್ಕಾಡ್ ಎಲಂಬಾಚಿ ನಿವಾಸಿ ಮೊಹಮ್ಮದ್ ಶಾಹಿದ್ ಎನ್.ಪಿ. ಬಂಧಿತ ಆರೋಪಿಗಳಾಗಿದ್ದಾರೆ. ಆಗ್ರಾದ ಡಾ.ಬಿ.ಆರ್.ಅಂಬೇಡ್ಕರ್ ವಿವಿ, ಚತ್ತಿಸ್‌ಘಡ ವಿವಿ, ಬಿಸ್ಲಾಪುರ್ ಡಾ.ಸಿ.ವಿ.ರಾಮನ್ ವಿವಿ, ಕರ್ನಾಟಕದ ಎಸ್ಸೆಸ್ಸೆಲ್ಸಿ ಬೋರ್ಡ್, ಮೀರತ್‌ನ ಚೌದರಿ ಚರಣಸಿಂಹ ವಿವಿ, […]

ಭೂಗತ ಪಾತಕಿ ರವಿಪೂಜಾರಿಯ ಇಬ್ಬರು ಸಹಚರರ ಬಂಧನ

Friday, November 9th, 2012
Ravi Poojari aides

ಮಂಗಳೂರು :ಮಂಗಳೂರು ನಗರ ಪೊಲೀಸ್ ಅಯುಕ್ತ ಮನೀಷ್ ಕರ್ಬಿಕರ್ ನಿನ್ನೆ ನಡೆದ ಪತ್ರಿಕಾಗೋಷ್ಠಿಯಲ್ಲಿ ಭೂಗತ ಪಾತಕಿಗಳಾದ ರವಿಪೂಜಾರಿ ಮತ್ತು ಕಲಿಯೋಗೀಶ ರವರುಗಳ ಇಬ್ಬರು ಸಹಚರರನ್ನು ಹಫ್ತಾ ಹಣದೊಂದಿಗೆ ಬಂಧಿಸಿರುವುದಾಗಿ ತಿಳಿಸಿದರು. ಬಂಧಿತರನ್ನು ಸುರತ್ಕಲ್ ಸಮೀಪದ ತಾರಾನಾಥ ಮತ್ತು ಸುಬ್ರಮಣ್ಯ ಅಲಿಯಾಸ್ ಸುಬ್ಬು ಎಂದು ಗುರುತಿಸಲಾಗಿದೆ. ಇಬ್ಬರು ಆರೋಪಿಗಳಿಂದ ಒಂದು ಲಕ್ಷ ರೂಪಾಯಿ ನಗದು ಹಣ ಮತ್ತು 8 ಮೊಬೈಲ್ ಪೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ರವಿಪೂಜಾರಿ ಮತ್ತು ಕಲಿಯೋಗೀಶ ರವರುಗಳು ಶ್ರೀಮಂತ ಉಧ್ಯಮಿಗಳಿಂದ ಹಫ್ತಾ ಹಣಕ್ಕಾಗಿ ಬೇಡಿಕೆ ಒಡ್ಡುತ್ತಿದ್ದು, ಅದನ್ನು […]

ತುಳು ಸಿನಿಮಾ ತೆಲಿಕೆದ ಬೊಳ್ಳಿ ಚಿತ್ರದ ಧ್ವನಿ ಸುರುಳಿ ಬಿಡುಗಡೆ ಸಮಾರಂಭ

Friday, November 9th, 2012
Telikeda Bolli

ಮಂಗಳೂರು :ತುಳು ರಂಗಭೂಮಿಯಲ್ಲಿ ಅತ್ಯಂತ ಪ್ರಸಿದ್ಧಿ ಪಡೆದು ತೆಲಿಕೆದ ಬೊಳ್ಳಿ ಎಂಬ ಬಿರುದು ಹೊಂದಿರುವ ಪ್ರಸಿದ್ಧ ನಟ ದೇವದಾಸ್ ಕಾಪಿಕಾಡ್ ಅವರ ನೇತೃತ್ವದಲ್ಲಿ ನಿರ್ಮಾಣಗೊಂಡಿರುವ ಬಹು ನಿರೀಕ್ಷೆಯ ತೆಲಿಕೆದ ಬೊಳ್ಳಿ ಚಿತ್ರದ ಧ್ವನಿಸುರುಳಿ ಬಿಡುಗಡೆ ಸಮಾರಂಭವು ನಗರದ ಪ್ರತಿಷ್ಠಿತ ಹೊಟೇಲ್ ಓಶಿಯನ್‌ ಪರ್ಲ್‌ನಲ್ಲಿ ಜರಗಿತು. ಕನ್ನಡ ಚಿತ್ರರಂಗದ ಪ್ರಸಿದ್ಧ ಸಂಗೀತ ನಿರ್ದೇಶಕ, ಗಾಯಕ ಗುರುಕಿರಣ್ ತೆಲಿಕೆದ ಬೊಳ್ಳಿ ಚಿತ್ರದ ಧ್ವನಿಸುರುಳಿಯನ್ನು ಬಿಡುಗಡೆಗೊಳಿಸಿದರು. ಚಿತ್ರವು ಅತ್ಯುತ್ತಮ ಹಾಡುಗಳನ್ನು ಹೊಂದಿದ್ದು, ದಕ್ಷಿಣ ಕನ್ನಡದಲ್ಲಿ ಉತ್ತಮ ಕಥಾಹಂದರಗಳುಳ್ಳ ಚಿತ್ರಗಳು ಬಿಡುಗಡೆಯಾಗುತ್ತಿರುವುದು ಸಂತಸದ […]