ಮಂಗಳಾದೇವಿ ದೇವಸ್ಥಾನದಲ್ಲಿ ಪರಂಪರೆಯ ನವರಾತ್ರಿ ಮಹೋತ್ಸವ

Tuesday, October 5th, 2010
ಮಂಗಳಾದೇವಿ ದೇವಸ್ಥಾನದಲ್ಲಿ ಪರಂಪರೆಯ ನವರಾತ್ರಿ ಮಹೋತ್ಸವ

ಮಂಗಳೂರು : ಇತಿಹಾಸ ಪ್ರಸಿದ್ಧ ಹಾಗೂ ಸಾವಿರಾರು ವರ್ಷಗಳ ಇತಿಹಾಸವಿರುವ ಮಹತೋಭಾರ ಶ್ರೀ ಮಂಗಳಾದೇವಿ ದೇವಸ್ಥಾನದಲ್ಲಿ ನವರಾತ್ರಿ ಮಹೋತ್ಸವವು ಅ 8 ರಿಂದ 18 ರವರೆಗೆ ನಡೆಯಲಿರುವುದು ಎಂದು ದೇವಳದ ಆಡಳಿತ ಮಂಡಳಿ ಅಧ್ಯಕ್ಷರಾದ ರಾಮಾನಾಥ ಹೆಗ್ಡೆಯವರು ಇಂದು ದೇವಸ್ಥಾನದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು. ಅ. 8ರಂದು ಎರಡೂವರೆ ಕೆ.ಜಿ. ಚಿನ್ನದಿಂದ ತಯಾರಿಸಿದ ಚಿನ್ನದ ಮುಖವಾಡವನ್ನು ದ.ಕ. ಜಿಲ್ಲಾಧಿಕಾರಿ ಪೊನ್ನುರಾಜ್ ಹಾಗೂ ಬಂಟರ ಸಂಘದ ಅಧ್ಯಕ್ಷರಾದ ಅಜಿತ್ ಕುಮಾರ್ ರೈ ಮಾಲಾಡಿಯವರ ಮತ್ತು ಭಕ್ತಾದಿಗಳ ಸಮ್ಮುಖದಲ್ಲಿ ಶ್ರೀ […]

ಹಿರಿಯ ಸಾಹಿತಿ ಡಾ| ಕೋಟ ಶಿವರಾಮ ಕಾರಂತರ 109ನೇ ಹುಟ್ಟು ಹಬ್ಬ. ಅ 10ಕ್ಕೆ.

Tuesday, October 5th, 2010
ಕೋಟ ಶಿವರಾಮ ಕಾರಂತರ 109ನೇ ಹುಟ್ಟು ಹಬ್ಬ

ಮಂಗಳೂರು : ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕಲ್ಕೂರ ಪ್ರತಿಷ್ಠಾನ ಇದರ ಆಶ್ರಯದಲ್ಲಿ ಅ. 10ನೇ ರವಿವಾರ ಮಂಗಳೂರು ಪುರಭವನದಲ್ಲಿ ಜ್ಞಾನಪೀಠ ಪ್ರಶಸ್ತಿ ವಿಜೇತ ಹಿರಿಯ ಸಾಹಿತಿ ದಿವಂಗತ ಡಾ| ಕೋಟ ಶಿವರಾಮ ಕಾರಂತ ಅವರ 109 ಹುಟ್ಟು ಹಬ್ಬವನ್ನು ಆಚರಿಸಲಾಗುವುದು ಎಂದು ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಇಂದು ಕರೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಜಿಲ್ಲಾ ಉಸ್ತುವಾರಿ ಸಚಿವ ಜೆ.ಕೃಷ್ಣಪಾಲೇಮಾರ್ ಅ 10ರ ಸಂಜೆ ಐದು ಗಂಟೆಗೆ […]

ಕಟ್ಟಾ ಸುಬ್ರಹ್ಮಣ್ಯ ನಾಯ್ಡು ರಾಜಿನಾಮೆ ನೀಡಲು ಜಿಲ್ಲಾ ಕಾಂಗ್ರೆಸ್ ಆಗ್ರಹ

Tuesday, October 5th, 2010
ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಪ್ರತಿಭಟನೆ

ಮಂಗಳೂರು: ದ.ಕ. ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಕೆ.ಐ.ಎ.ಡಿ.ಬಿ ಹಗರಣದಲ್ಲಿ ಭಾಗಿಯಾಗಿರುವ ವಸತಿ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಟು ರಾಜಿನಾಮೆ ನೀಡಬೇಕೆಂದು ಆಗ್ರಹಿಸಿ ಇಂದು ಬೆಳಿಗ್ಗೆ 11 ಗಂಟೆಗೆ ಜಿಲ್ಲಾಧಿಕಾರಿ ಕಛೇರಿಯೆದುರು ಪ್ರತಿಭಟನೆ ನಡೆಸಿದರು. ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ಮೇಲೆ ರಾಜ್ಯದಲ್ಲಿ ಹಗರಣಗಳ ಸರಮಾಲೆಯೇ ನಡೆದಿದೆ, ಮುಖ್ಯಮಂತ್ರಿಗಳು ಅದಕ್ಕೆ ರಕ್ಷಣೆ ನೀಡುತ್ತಿದ್ದಾರೆ. ಕಟ್ಟಾ ಸುಬ್ರಹ್ಮಣ್ಯ ಹಾಗೂ ಅವರ ಮಗ ಕಟ್ಟಾ ಜಗದೀಶ್ ನಾಯ್ಡು ಅಧಿಕಾರವನ್ನು ದುರುಪಯೋಗ ಮಾಡಿ ರಾಜ್ಯದ ಸಂಪತ್ತನ್ನು ಲೂಟಿಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ಮುಖಂಡ […]

ಜಿಲ್ಲೆಯ ಆದಿವಾಸಿ ಜನಾಂಗದ ಸಮಸ್ಯೆಗಳ ಪರಿಹಾರಕ್ಕೆ ಜಿಲ್ಲಾಧಿಕಾರಿಗಳಿಗೆ ಮನವಿ.

Tuesday, October 5th, 2010
ಆದಿವಾಸಿ ಜನಾಂಗದ ಸಮಸ್ಯೆಗಳ ಪರಿಹಾರಕ್ಕೆ ಜಿಲ್ಲಾಧಿಕಾರಿಗಳಿಗೆ ಮನವಿ

ಮಂಗಳೂರು: ಬುಡಕಟ್ಟು ಜನರ ಹಕ್ಕುಗಳ ರಾಷ್ಟ್ರೀಯ ವೇದಿಕೆಯ ವತಿಯಿಂದ ಬೆಳ್ತಂಗಡಿ ಮತ್ತು ಮಂಗಳೂರಿನಲ್ಲಿ, ನಿನ್ನೆ ಹಾಗೂ ಇಂದು ಪ್ರತಿಭಟನಾ ಸಭೆ ನಡೆಯಿತು. ಇಂದು ಬೆಳಗ್ಗೆ ಮಂಗಳೂರಿನ ಜಿಲ್ಲಾಧಿಕಾರಿ ಕಛೇರಿಯ ಮುಂಭಾಗದಲ್ಲಿ ಬುಡಕಟ್ಟು ಜನರ ವಿವಿಧ ಬೇಡಿಕೆಗಳು ಮತ್ತು ಸಮಸ್ಯೆಗಳ ಪರಿಹಾರಕ್ಕಾಗಿ ನಡೆದ ಪ್ರತಿಭಟನೆಯಲ್ಲಿ ಕುದುರೆಮುಖ ರಾಷ್ಟ್ರೀಯ ಉದ್ಯಾನವನ ಯೋಜನೆಯ ವ್ಯಾಪ್ತಿಯಲ್ಲಿ ವಾಸಿಸುತ್ತಿರುವ ಆದಿವಾಸಿಗಳ ಮೇಲೆ ನಡೆಯುತ್ತಿರುವ ದಬ್ಬಾಳಿಕೆಯನ್ನು ಮತ್ತು ಆಕ್ರಮಣವನ್ನು ಕೂಡಲೇ ನಿಲ್ಲಿಸಬೇಕು ಎಂದು ಬುಡಕಟ್ಟು ಹಕ್ಕುಗಳ ರಾಷ್ಟ್ರೀಯ ವೇದಿಕೆಯ ಸದಸ್ಯ ಕೃಷ್ಣಪ್ಪ ಕೊಂಚಾಡಿ ಒತ್ತಾಯಿಸಿದರು. ಅರಣ್ಯ […]

`ಸರದಿ’ ಕಾದಂಬರಿ ಮರು ಚಿಂತನಾ ಕಾರ್ಯಕ್ರಮ

Monday, October 4th, 2010
ಶ್ರೀನಿವಾಸ ದೇಶಪಾಂಡೆ

ಮಂಗಳೂರು : ದಾಸಜನ ಮಂಗಳೂರು ಹಾಗೂ ಮನೋಹರ ಗ್ರಂಥಮಾಲ ಧಾರವಾಡ ಇವುಗಳ ಸಹಮಿಲನದಲ್ಲಿ ಡಾ| ನಾ. ದಾಮೋದರ ಶೆಟ್ಟಿ ರಚಿಸಿದ `ಸರದಿ’ ಕಾದಂಬರಿಯ ಮರು ಚಿಂತನಾ ಕಾರ್ಯಕ್ರಮ ಸಂತ ಅಲೋಷಿಯಸ್ ಕಾಲೇಜಿನ ಸಭಾಂಗಣದಲ್ಲಿ ಇಂದು ಸಂಜೆ 5.30ಕ್ಕೆ ನಡೆಯಿತು. ದಾರವಾಡದಲ್ಲಿ ಇತ್ತೀಚೆಗೆ ಬಿಡುಗಡೆಗೊಂಡ `ಸರದಿ’ ಕಾದಂಬರಿಯ ಮರು ಚಿಂತನಾ ವಿಷಯದಲ್ಲಿ ಶ್ರೀನಿವಾಸ ದೇಶಪಾಂಡೆ ಮಾತಾಡಿದರು. ಓದುಗನಲ್ಲಿ ಕಾದಂಬರಿಯ ವಿಷಯ ವಿಸ್ತಾರಗೊಳ್ಳಲು ಓದುಗರು ಅದರ ವಿಷಯವನ್ನು ಸಂಭಾಷಿಸ ಬೇಕು, ಕೃತಿ ಚಿಕ್ಕದಾದರೂ ಅದರಲ್ಲಿರುವ ಅನೇಕ ವಿಷಯಗಳು ನಮ್ಮ ಬುದ್ದಿ […]

ಪಂಚಾಯತ್ ರಾಜ್ ಜಿಲ್ಲಾಮಟ್ಟದ ಜಾಗೃತಿ ಕಾರ್ಯಕ್ರಮ.

Monday, October 4th, 2010
ಪಂಚಾಯತ್ ರಾಜ್ ಜಿಲ್ಲಾಮಟ್ಟದ ಜಾಗೃತಿ ಕಾರ್ಯಕ್ರಮ

ಮಂಗಳೂರು : ಪಂಚಾಯತ್ ರಾಜ್ ಕುರಿತು ಗ್ರಾಮ ಸಭಾ ವರ್ಷಾಚರಣೆ 2009-10 ರ ಅಂಗವಾಗಿ ಜಿಲ್ಲಾ ಮಟ್ಟದ ಜಾಗೃತಿ ಕಾರ್ಯಕ್ರಮ ದ.ಕ ಜಿಲ್ಲಾ ಪಂಚಾಯತ್ ನ ನೇತ್ರಾವತಿ ಸಭಾಂಗಣದಲ್ಲಿ ಇಂದು ಬೆಳಿಗ್ಗೆ 11.30ಕ್ಕೆ ನಡೆಯಿತು. ಜಾಗೃತಿ ಕಾರ್ಯಕ್ರಮವನ್ನು ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಕೆ. ಸಂತೋಷ್ ಕುಮಾರ್ ಭಂಡಾರಿ ದೀಪಬೆಳಗಿಸುವುದರ ಮೂಲಕ ನೆರವೇರಿಸಿದರು. ಪಂಚಾಯತ್ ರಾಜ್ ನ ವಿವಿಧ ಮಜಲುಗಳ ಬಗ್ಗೆ ಜನರಿಗೆ ತಿಳುವಳಿಕೆ ಇದ್ದರೆ, ಸರಕಾರ ರೂಪಿಸುವ ವಿವಿಧ ಸವಲತ್ತುಗಳನ್ನು ಪಡೆಯಲು ಸಾಧ್ಯ ಎಂದು ಕಾರ್ಯಕ್ರಮವನ್ನು ಉದ್ಘಾಟಿಸಿದ […]

ಬ್ಯಾರಿ ಅಧ್ಯಯನ ಕೇಂದ್ರಕ್ಕೆ ‘ಡಾ. ವಹಾಬ್’ ಹೆಸರು.

Monday, October 4th, 2010
ಡಾ. ವಹಾಬ್ ಶ್ರಾದ್ದಾಂಜಲಿ

ಮಂಗಳೂರು: ಶುಕ್ರವಾರ ಮುಂಜಾನೆ ನಿಧನರಾದ ಹಿರಿಯ ಸಂಶೋಧಕ ಸಾಹಿತಿ, ಲೇಖಕ ವಹಾಬ್ ದೊಡ್ಡ ಮನೆ ಅವರ ಹೆಸರನ್ನು ಅಖಿಲ ಭಾರತ ಬ್ಯಾರಿ ಪರಿಷತ್ (ರಿ) ನ ಅಧೀನದಲ್ಲಿರುವ ಬ್ಯಾರಿ ಅಧ್ಯಯನ ಕೇಂದ್ರಕ್ಕಿಡಲಾಗಿದೆ ಎಂದು ಪರಿಷತ್ ಅಧ್ಯಕ್ಷ ನ್ಯಾಯವಾದಿ ಬಿ.ಎ ಮಹ್ಮಮದ್ ಹನೀಫ್ ಘೋಷಿಸಿದ್ದಾರೆ. ಪರಿಷತ್ ಕಛೇರಿಯಲ್ಲಿ ಸಂಜೆ ನಡೆದ ಡಾ| ವಹಾಬ್ ದೊಡ್ಡಮನೆ ಅವರ ಶ್ರಾದ್ದಾಂಜಲಿ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು. ಬ್ಯಾರಿ, ಭಾಷೆ, ಜನಾಂಗ, ಸಾಹಿತ್ಯ ಸಂಸ್ಕೃತಿಯ ಬಗ್ಗೆ ಅಪಾರ ಒಲವು ತೋರಿಸುತ್ತಿದ್ದ ಡಾ| ವಹಾಬ್ […]

ಧರ್ಮಸ್ಥಳದಲ್ಲಿ ಭಜನೋತ್ಸವ ಸಮಾರಂಭ ಉದ್ಘಾಟನೆ

Monday, October 4th, 2010
ಧರ್ಮಸ್ಥಳದಲ್ಲಿ ಭಜನೋತ್ಸವ ಸಮಾರಂಭ

ಧರ್ಮಸ್ಥಳ : ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಭಜನೋತ್ಸವ ಸಮಾರಂಭವನ್ನು ಧರ್ಮಸ್ಥಳದಲ್ಲಿ ಭಾನುವಾರ ಉದ್ಘಾಟಿಸಿದರು. ಖ್ಯಾತ ಸಂಗೀತ ನಿರ್ದೇಶಕರಾದ ಹಂಸಲೇಖ, ಹೇಮಾವತಿ ವಿ. ಹೆಗ್ಗಡೆಯವರು, ಮಾಣಿಲದ ಮೋಹನದಾಸ ಸ್ವಾಮೀಜಿ ರಾಜ್ಯ ಸರಕಾರ ಅಪರ ಮುಖ್ಯ ಕಾರ್ಯದರ್ಶಿ ಜೈರಾಜ್, ಚಲನಚಿತ್ರ ನಟ ಟೆನಿಸ್ ಕೃಷ್ಣ, ಡಿ. ಹರ್ಷೇಂದ್ರ ಕುಮಾರ್ ಮತ್ತು ಸುಪ್ರಿಯಾ ಹರ್ಷೇಂದ್ರ ಕುಮಾರ್ ಉಪಸ್ಥಿತರಿದ್ದರು. ಭಕುತ ಜನ ಮುಂದೆ, ನೀನವರ ಹಿಂದೆ, ಇಂದಿನ ವಾರ ಶುಭವಾರ, ಇಂದಿನ ದಿನವೇ ಶುಭ ದಿನವು ಧರ್ಮಸ್ಥಳಾಧೀಶ ಶರಣಂ, ಜಗದೀಶ, […]

ಪಾಂಡೇಶ್ವರದಲ್ಲಿ ಸುಸಜ್ಜಿತ ಅಗ್ನಿಶಾಮಕ ಕೇಂದ್ರ : ಜೀಜಾ ಮಾಥವನ್ ಹರಿಸಿಂಗ್.

Monday, October 4th, 2010
ಜೀಜಾ ಮಾಥವನ್ ಹರಿಸಿಂಗ್ ಪಾಂಡೇಶ್ವರ ಅಗ್ನಿಶಾಮಕ ಕೇಂದ್ರಕ್ಕೆ ಭೇಟಿ

ಮಂಗಳೂರು: 1942ರಲ್ಲಿ ಸ್ಥಾಪಿತವಾದ ಮಂಗಳೂರಿನ ಪಾಂಡೇಶ್ವರ ಅಗ್ನಿಶಾಮಕ ಕೇಂದ್ರವನ್ನು ಹೊಸ ವಿನ್ಯಾಸದೊಂದಿಗೆ 8 ಅಗ್ನಿಶಾಮಕ ವಾಹನಗಳನ್ನು ಇರಿಸುವಂತೆ ಇನ್ನು ಒಂದು ವರ್ಷದೊಳಗೆ ನವೀಕರಿಸಲಾಗುವುದು ಎಂದು ರಾಜ್ಯ ಡೈರೆಕ್ಟರ್ ಜನರಲ್ ಆಫ್ ಪೊಲೀಸ್ ಅಗ್ನಿಶಾಮಕ ದಳ ಬೆಂಗಳೂರು ಇವರು ಹೇಳಿದರು. ಅವರು ಕದ್ರಿ ಅಗ್ನಿ ಶಾಮಕ ಕೇಂದ್ರಕ್ಕೆ ಬೇಟಿ ನೀಡಿದ ಬಳಿಕ, ಪಾಂಡೇಶ್ವರ ಅಗ್ನಿ ಶಾಮಕ ಕೇಂದ್ರಕ್ಕೆ ಭೇಟಿ ನೀಡಿದರು. ಅಲ್ಲಿ ಅಗ್ನಿ ಶಾಮಕ ಸಿಬ್ಬಂದಿಗಳಿಂದ ಗೌರವವಂದನೆ ಸ್ವೀಕರಿಸಿದ ಬಳಿಕ ಅಗ್ನಿ ಶಾಮಕ ಕೇಂದ್ರದ ಪರಿಶೀಲನೆ ನಡೆಸಿದರು. ಮಂಗಳೂರಿಗೆ […]

ಕಟ್ಟಡ ನಿರ್ಮಾಣ ಹಾಗೂ ಕಾರ್ಮಿಕರ ವಿವಿಧ ಬೇಡಿಕೆಗಳ ಈಡೇರಿಕೆಗೆ ಸಿಟಿಯು ಮನವಿ

Monday, October 4th, 2010
ಕಟ್ಟಡ ನಿರ್ಮಾಣ ಕಾರ್ಮಿಕರ ಪ್ರತಿಭಟನೆ

ಮಂಗಳೂರು : ಕಟ್ಟಡ ಹಾಗೂ ಇತರ ನಿರ್ಮಾಣ ಕಾರ್ಮಿಕರಿಗೆ ಸಿಗುವ ಪಿಂಚಣಿಯನ್ನು ಮುನ್ನೂರರಿಂದ ಒಂದು ಸಾವಿರಕ್ಕೆ ಹೆಚ್ಚಿಸಬೇಕು, ಕಟ್ಟಡ ಕಾರ್ಮಿಕರ ಮಕ್ಕಳು ಎಸ್.ಎಸ್.ಎಲ್.ಸಿ ನಂತರದ ವಿದ್ಯಾಬ್ಯಾಸಕ್ಕೆ ವಿದ್ಯಾರ್ಥಿ ವೇತನ ನೀಡಬೇಕು, ಕಟ್ಟಡ ನಿರ್ಮಾಣ ಕೆಲಸಗಳಿಗೆ ಬೇಕಾಗುವ ಸಾಮಾಗ್ರಿಗಳ ಖರೀದಿಗೆ, ಸಾಲ ನೀಡುವ ಬದಲು ಸಹಾಯಧನ ನೀಡಬೇಕು ಎಂಬ ವಿವಿಧ ಬೇಡಿಕೆಗಳನ್ನು ಮುಂದಿಟ್ಟು, ಬೆಂದೂರ್ ವೆಲ್ ನಲ್ಲಿರುವ ಸಹಾಯಕ ಕಾರ್ಮಿಕ ಆಯುಕ್ತರ ಕಛೇರಿಯ ಮುಂಭಾಗದಲ್ಲಿ ಇಂದು ಬೆಳಿಗ್ಗೆ ಸಿಐಟಿಯು ಸಂಘಟನೆ, ಬೃಹತ್ ಪ್ರತಿಭಟನಾ ರ್ಯಾಲಿಯನ್ನು ನಡೆಸಿತು. ಜ್ಯೋತಿ ಮಹಿಳಾ […]