Blog Archive

ದಕ್ಷಿಣ ಕನ್ನಡ ಕೋಮುವಾದದ ಪ್ರಯೋಗಾಲಯ ಆಗಬಾರದು: ಸಿದ್ದರಾಮಯ್ಯ

Monday, January 8th, 2018
Ramanath-rai

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಭೇಟಿ ನೀಡಿ ಇಲ್ಲಿನ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ 76 ಕೋಟಿ ರೂಪಾಯಿ ವೆಚ್ಚದ ಅಭಿವೃದಿ ಕಾಮಗಾರಿಗಳನ್ನು ಉದ್ಘಾಟಿಸಿದರು . ಈ ನಡುವೆ ವಿವಿಧ ಅಭಿವೃದ್ಧಿ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿದರು. ಬೆಳ್ತಂಗಡಿ ತಾಲೂಕು ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಮಂಗಳೂರಿನಲ್ಲಿ ಮೃತಪಟ್ಟ ದೀಪಕ್ ರಾವ್ ಹಾಗು ಅಬ್ದುಲ್ ಬಷೀರ್ ಅವರ ಸಾವಿಗೆ ಸಂತಾಪ ಸೂಚಿಸಲಾಯಿತು. ನಂತರ ಕಾರ್ಯಕ್ರಮವನ್ನು ಉದೇಶಿಸಿ ಮಾತನಾಡಿದ ಅವರು, “ನಾವು ವಿಶ್ವ ಮಾನವರಾಗಬೇಕು. ಮೊದಲು ನಾವು […]

ಬೆಳ್ತಂಗಡಿ: ಹೊನಲು ಬೆಳಕಿನ ನೇತ್ರಾವತಿ-ಶರಾವತಿ ಜೋಡು ಕೆರೆ ಕಂಬಳ

Tuesday, October 31st, 2017
kambala

ಮಂಗಳೂರು: ಒಂದುವರೆ ವರ್ಷದ ಹಿಂದೆ ನಿಂತು ಹೋಗಿದ್ದ ಅಪ್ಪಟ ಜನಪದ ಕ್ರೀಡೆ ಕಂಬಳಕ್ಕೆನಿಷೇಧದ ಕರಿ ಛಾಯೆಯ ನಡುವೆ ಕರಾವಳಿಯಲ್ಲಿ ಮರು ಚಾಲನೆ ಸಿಕ್ಕಿದೆ. ಕರಾವಳಿಯಲ್ಲಿ ಮತ್ತೆ ಕೊಂಬು-ಕಹಳೆ, ಡೋಲಿನ ಸದ್ದು ಮತ್ತೆ ಮೊಳಗಲಾರಂಭಿಸಿದೆ. ಬೆಳ್ತಂಗಡಿ ತಾಲೂಕಿನ ಕಡಿರುದ್ಯಾವರದಲ್ಲಿ ನಿನ್ನೆ ಹೊನಲು ಬೆಳಕಿನ ನೇತ್ರಾವತಿ-ಶರಾವತಿ ಜೋಡು ಕೆರೆ ಕಂಬಳ ವೈಭವದಿಂದ ನಡೆದಿದೆ. ಬೆಳ್ತಂಗಡಿಯ ಕಡಿರುದ್ಯಾವರ ದಲ್ಲಿ ನಡೆಯುವ ನೇತ್ರಾವತಿ-ಶರಾವತಿ ಜೋಡುಕೆರೆ ಕಂಬಳ 8 ವರ್ಷದ ಹಿಂದೆ ನಡೆದು ಬಳಿಕ ಕಾರಣಾಂತರಗಳಿಂದ ನಿಂತು ಹೋಗಿತ್ತು. ಈ ಬಾರಿ ಮತ್ತೆ ಈ ಕಂಬಳ […]

ಹಿಂದೂ ಕಾರ್ಯಕರ್ತನ ಪ್ರಕರಣ, ಅ.28ರಂದು ಬಂದ್ ಗೆ ಕರೆ

Friday, October 27th, 2017
Belthangadi

ಮಂಗಳೂರು: ಮುಸ್ಲಿಮರ ಪವಿತ್ರ ಕ್ಷೇತ್ರವಾದ ಮೆಕ್ಕಾ ಮಸೀದಿಯ ಅವಹೇಳನ ಪ್ರಕರಣ ಸಾಮಾಜಿಕ ಜಾಲತಾಣದಲ್ಲಿ ಸಂಬಂಧಪಟ್ಟಂತೆ ಆರೋಪಿಯನ್ನು ಪೋಲಿಸರಿಗೆ ಒಪ್ಪಿಸಿದರೂ ಪೋಲೀಸರು ಅಮಾಯಕ ಹಿಂದೂ ಕಾರ್ಯಕರ್ತರನ್ನು ಪ್ರಕರಣದಲ್ಲಿ ಸಿಲುಕಿಸಲು ಹುನ್ನಾರ ನಡೆಸಿದ್ದಾರೆ ಎಂದ ಬೆಳ್ತಂಗಡಿ ಹಿಂದೂ ಸಂಘಟನೆಗಳು ಆರೋಪಿಸಿವೆ. ಪೊಲೀಸ್ ಅಧಿಕಾರಿಗಳ ಈ ಹುನ್ನಾರವನ್ನು ವಿರೋಧಿಸಿ ಅಕ್ಟೋಬರ್ 28 ಶನಿವಾರದಂದು ಬೆಳ್ತಂಗಡಿಯ ಕಡಬ ಬಂದ್ ಗೆ ಕರೆ ನೀಡಲು ಹಿಂದೂಪರ ಸಂಘಟನೆಗಳು ನಿರ್ಧರಿಸಿವೆ. ಕಡಬದಲ್ಲಿ ಗುರುವಾರ ಸಂಜೆ ಬಿಜೆಪಿ ಹಾಗೂ ಹಿಂದೂಪರ ಸಂಘಟನೆಗಳು ತುರ್ತು ಸಭೆ ನಡೆಸಿ ಈ ನಿರ್ಧಾರ ಕೈಗೊಂಡಿವೆ. ವಾಟ್ಸಾಪ್ […]

ಬೆಳ್ತಂಗಡಿ: ಮಾಂಸದ ಲಾಲಸೆಗೆ ಲಂಗೂರ್ ಗಳು ಬಲಿ

Thursday, October 26th, 2017
langur

ಮಂಗಳೂರು: ಆಹಾರ ಅರಸಿ ನಾಡಿಗೆ ಬಂದ ಲಂಗೂರ್ ಗಳ ಕುಟುಂಬವನ್ನೇ ಕೊಂದು ತಿಂದು ತೇಗಿದ ಘಟನೆ ಬೆಳ್ತಂಗಡಿಯಲ್ಲಿ ಬೆಳಕಿಗೆ ಬಂದಿದೆ. ಲಂಗೂರ್ ಅಥವಾ ಮುಸುವ ಇತ್ತೀಚಿನ ದಿನಗಳಲ್ಲಿ ಅವನತಿಯ ಅಂಚಿಗೆ ಸರಿಯುತ್ತಿದೆ. ಮಾನವನ ಮಾಂಸದ ಲಾಲಸೆಗೆ ಈ ಲಂಗೂರ್ ಗಳು ಬಲಿಯಾಗುತ್ತಿವೆ. ಕಾಡುಗಳು ನಾಶವಾಗುತ್ತಿರುವ ಹಿನ್ನೆಲೆಯಲ್ಲಿ ನಾಡು ಸೇರುತ್ತಿರುವ ಈ ಲಂಗೂರ್ ಗಳು ಬೇಟೆಗಾರರ ಗುರಿಗೆ ಸಿಕ್ಕಿ ಸಾಯುತ್ತಿವೆ. ಹೀಗೆ  ಪಶ್ಚಿಮ ಘಟ್ಟದ ಕೆಲವು ಭಾಗಗಳಲ್ಲಿ ಕಂಡು ಬರುವ ಈ ಲಂಗೂರ್ ಅಥವಾ ಮುಸುವಗಳ ಕುಟುಂಬವೊಂದು ಇತ್ತೀಚೆಗೆ ಬೆಳ್ತಂಗಡಿ […]

ಬೆಳ್ತಂಗಡಿ: 12 ಕಡೆಗಳಲ್ಲಿ ಅಂಗಡಿಗೆ ನುಗ್ಗಿ ಕಳ್ಳತನ

Monday, October 16th, 2017
belthangadi

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯಲ್ಲಿ ಒಂದೇ ರಾತ್ರಿ ಕಳ್ಳರು 12 ಕಡೆಗಳಲ್ಲಿ ಅಂಗಡಿಗೆ ನುಗ್ಗಿ ಕಳ್ಳತನ ಮಾಡಿದ ಘಟನೆ ನಡೆದಿದೆ. ಬೆಳ್ತಂಗಡಿ ತಾಲ್ಲೂಕಿನ ಹಲವೆಡೆ ಸರಣಿ ಕಳ್ಳತನ ನಡೆದಿದ್ದು ಇಂದು ಮುಂಜಾನೆ ಬೆಳಕಿಗೆ ಬಂದಿದೆ. ಮರವಂತೆ ಬೀಚ್ ಬಳಿ 3 ಕಾರಿನ ಗ್ಲಾಸ್‌ ಒಡೆದು ಕಳ್ಳತನ ಬೆಳ್ತಂಗಡಿಯ ಅಳದಂಗಡಿ ಎಂಬಲ್ಲಿ 7 ಅಂಗಡಿ ಸೇರಿದಂತೆ ಕಾಲೇಜಿಗೆ ನುಗ್ಗಿದ ಕಳ್ಳರು ನಗದು ಸೇರಿದಂತೆ ಇನ್ನಿತರ ವಸ್ತುಗಳನ್ನು ದೋಚಿದ್ದಾರೆ. ಬೆಳ್ತಂಗಡಿ ಪೇಟೆಯಲ್ಲೂ ಕಳ್ಳರು ತಮ್ಮ ಕೈಚಳಕ ತೋರಿದ್ದು ಅಂಗಡಿಯ […]

ಬೆಳ್ತಂಗಡಿ : ಬೇಲಿ ಹಾಕಲು ಸೊಸೆ ಮತ್ತು ಇಬ್ಬರು ಮಕ್ಕಳ ಮೇಲೆ ಹಲ್ಲೆ ಮಾಡಿದ ಅತ್ತೆ

Tuesday, June 20th, 2017
Belthangady

ಬೆಳ್ತಂಗಡಿ :  ಆಸ್ತಿ ವಿಚಾರದಲ್ಲಿ ತನ್ನ ಸೊಸೆ ಮತ್ತು ಇಬ್ಬರು ಮಕ್ಕಳ ಮೇಲೆ ಅತ್ತೆ ಮತ್ತು ನಾದಿನಿ ಅಮಾನುಷ ಹಲ್ಲೆ ನಡೆಸಿರುವ ಘಟನೆ ಬೆಳ್ತಂಗಡಿ ತಾಲೂಕಿನಲ್ಲಿ ನಡೆದಿದೆ. ರಾಧಮ್ಮ ಎಂಬುವರು ನಾದಿನಿ ಯೊಂದಿಗೆ ಸೇರಿ  ಸೊಸೆ ಮತ್ತು ಇಬ್ಬರು ಮಕ್ಕಳ ಮೇಲೆ ದೌರ್ಜನ್ಯವೆಸಗುತ್ತಿರುವ ವಿಡಿಯೋ ಸಾಮಾಜಿಕ ತಾಣ ದಲ್ಲಿ ಹರಿದಾಡುತ್ತಿದೆ. ಕೊಯ್ಯೂರು ಗ್ರಾಮದ ನೆಕ್ಕರಕೋಡಿ ಎಂಬಲ್ಲಿ ಭಾನುವಾರ ಜಾಗಕ್ಕೆ ಬೇಲಿ ಹಾಕುವ ವಿಚಾರಕ್ಕೆ ಸಂಬಂಧಿಸಿದಂತೆ ತಾಯಿ ಹಾಗೂ ಮಗನ ನಡುವೆ ಗಲಾಟೆ ನಡೆದಿತ್ತು. ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿರುವ ಜಾಗಕ್ಕೆ ಬೇಲಿ ಹಾಕಲು […]

ಲಂಚಾವತಾರ ಹಿನ್ನೆಲೆಯಲ್ಲಿ ಎಸಿಬಿ ದಾಳಿ: ಬೆಳ್ತಂಗಡಿಯಲ್ಲಿ ಕೋಟ್ಯಾಂತರ ಮೌಲ್ಯದ ಸೊತ್ತು ವಶ

Friday, December 23rd, 2016
belthangady

ಬೆಳ್ತಂಗಡಿ: ಭ್ರಷ್ಟಾಚಾರ ನಿಗ್ರಹ ದಳಕ್ಕೆ ಸಾರ್ವಜನಿಕರ ದೂರಿನ ಮೇರೆಗೆ ಗುರುವಾರ ಮುಂಜಾನೆ ಬೆಳ್ತಂಗಡಿ ತಾಲೂಕು ಕಚೇರಿಯ ಪ್ರಥಮ ದರ್ಜೆ ಸಹಾಯಕ ಗೋವಿಂದ ನಾಯ್ಕ ಅವರ ಮನೆ ಮೇಲೆ ದಾಳಿ ನಡೆಸಿದ್ದು, ಕೋಟ್ಯಾಂತರ ಮೌಲ್ಯದ ಆಸ್ತಿಗಳ ದಾಖಲೆ ಪತ್ರ, ಚಿನ್ನಾಭರಣ, ನಗದು ಹಣವನ್ನು ವಶಪಡಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಬೆಳ್ತಂಗಡಿ ತಾಲೂಕು ಕಚೇರಿಯ ಸಿಬ್ಬಂದಿ ಗೋವಿಂದ ನಾಯ್ಕ ಅವರು ಕುವೆಟ್ಟು ಗ್ರಾಮದ ಗುರುವಾಯನಕರೆ ಹವ್ಯಕ ಭವನದ ಸನಿಹದ ವಾಸ್ತವ್ಯವಿರುವ ಮನೆಗೆ ಮಂಗಳೂರು ಎಸಿಬಿಯ ತಂಡ ದಾಳಿ ಬೆಳಿಗ್ಗೆ 6 ಗಂಟೆಯ […]

ಬೆಳ್ತಂಗಡಿಯಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಮೆರವಣಿಗೆ ಸಂದರ್ಭ ಕಪ್ಪು ಬಾವುಟ ಪ್ರದರ್ಶನ

Tuesday, August 16th, 2016
Belthangadi

ಬೆಳ್ತಂಗಡಿ: ದೇಶದಾದ್ಯಂತ ಹಲವಾರು ರಾಜ್ಯಗಳಲ್ಲಿ ಗೋವಿನ ರಕ್ಷಣೆ ಹೆಸರಲ್ಲಿ ದಲಿತರ ಮೇಲಿನ ದೌರ್ಜನ್ಯ, ದಬ್ಬಾಳಿಕೆ ಹಾಗೂ ಪ್ರಧಾನಮಂತ್ರಿ ನರೇಂದ್ರ ಮೋದಿ ಸರ್ಕಾರದ ದಲಿತ ವಿರೋಧ ನೀತಿ ಖಂಡಿಸಿ ಬೆಳ್ತಂಗಡಿ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ಸ್ವಾತಂತ್ರ್ಯ ದಿನಾಚರಣೆ ಧ್ವಜಾರೋಹಣಕ್ಕೆ ಕಪ್ಪುಪಟ್ಟಿ ಪ್ರದರ್ಶಿಸಿದರು. ಸ್ವಾತಂತ್ರ್ಯ ದಿನಾಚರಣೆಯ ಮೆರವಣಿಗೆ ಸಂದರ್ಭ ಮೆರವಣಿಗೆಗೆ ತಡೆ ಮಾಡಿ ಕಪ್ಪು ಬಾವುಟವನ್ನು ಬೆಳ್ತಂಗಡಿ ಸಂತೆಕಟ್ಟೆ ಬಳಿ ಪ್ರದರ್ಶಿಸಿದರು. ಧ್ವಜಾರೋಹಣಕ್ಕೆ ಅಡ್ಡಿಪಡಿಸುವ ಬಗ್ಗೆ ಈ ಮೊದಲೇ ದ.ಸಂ.ಸ ಸರಕಾರಕ್ಕೆ ಎಚ್ಚರಿಕೆ ನೀಡಿತ್ತು. ಮುನ್ನೆಚ್ಚರಿಕಾ ಕ್ರಮವಾಗಿ ಪೊಲೀಸ್ […]

ಬಾಂಜಾರುಮಲೆಗೆ ಮೊಬೈಲ್ ಟವರ್: ಡಿಸಿ ಸೂಚನೆ

Tuesday, June 17th, 2014
BSNL Tower

ಮಂಗಳೂರು : ಬೆಳ್ತಂಗಡಿ ತಾಲೂಕಿನ ಕುಗ್ರಾಮ ಬಾಂಜಾರುಮಲೆಯಲ್ಲಿ ಮೊಬೈಲ್ ಟವರ್ ಸ್ಥಾಪಿಸುವಂತೆ ಜಿಲ್ಲಾಧಿಕಾರಿ ಎ.ಬಿ. ಇಬ್ರಾಹಿಂ ಅವರು ಬಿ.ಎಸ್.ಎನ್.ಎಲ್. ಗೆ ಸೂಚನೆ ನೀಡಿದ್ದಾರೆ. ಈ ಸಂಬಂಧ ಬಿ.ಎಸ್.ಎನ್.ಎಲ್. ಜನರಲ್ ಮೆನೇಜರ್ಗೆ ಪತ್ರ ಬರೆದಿರುವ ಅವರು, ಸುಮಾರು 42 ಮಲೆಕುಡಿಯ ಕುಟುಂಬಗಳು ಈ ಕುಗ್ರಾಮದಲ್ಲಿ ವಾಸಿಸುತ್ತಿದ್ದು, ಸಂಪರ್ಕ ಮತ್ತು ಸಾರಿಗೆ ವ್ಯವಸ್ಥೆ ಸೇರಿದಂತೆ ಕನಿಷ್ಠ ಮೂಲಸೌಕರ್ಯಗಳು ಇಲ್ಲದಿರುವುದು ಇಲ್ಲಿನ ಸಮಸ್ಯೆಯಾಗಿದೆ. ಈಗಾಗಲೇ ಗ್ರಾಮದಲ್ಲಿ ರಸ್ತೆ, ವಿದ್ಯುತ್, ನೀರು ಸೇರಿದಂತೆ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಲಾಗಿದೆ ಎಂದು ಅವರು ತಿಳಿಸಿದ್ದಾರೆ. […]

ಶಿವ ಧ್ಯಾನದಿಂದ ದೋಷ ನಿವಾರಣೆ: ಡಾ. ಹೆಗ್ಗಡೆ

Friday, February 28th, 2014
Dr.-Veerendra-Heggade

ಬೆಳ್ತಂಗಡಿ: ಶಿವ ಧ್ಯಾನದಿಂದ ಮಂಗಳ ಕಾರ್ಯಗಳು ನಡೆದು ದೋಷಗಳು ನಿವಾರಣೆಯಾಗುತ್ತವೆ. ಸಾಧಕನಿಗೆ ಶಿವ ಒಲಿಯುತ್ತಾನೆ ಎಂದು ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆ ಹೇಳಿದ್ದಾರೆ. ಗುರುವಾರ ಧರ್ಮಸ್ಥಳದಲ್ಲಿ ಪ್ರವಚನ ಮಂಟಪದಲ್ಲಿ ಶಿವಪಂಚಾಕ್ಷರಿ ಪಠಣದೊಂದಿಗೆ ಶಿವರಾತ್ರಿ ಜಾಗರಣದ ಕಾರ್ಯಕ್ಕೆ ಚಾಲನೆ ನೀಡಿ ಅವರು ಸಂದೇಶ ನೀಡಿದರು. ಹಿಂದಿನ ಕಾಲದಲ್ಲಿ ದೇವರ ದರ್ಶನಕ್ಕೆ ಬರುವುದು ಕಷ್ಟಕರವಾಗಿತ್ತು. ಪಾದಯಾತ್ರೆ ಮೂಲಕವೋ, ರೈಲುಗಳ ಮೂಲಕವೋ ಬರಬೇಕಾಗಿತ್ತು. ಅದಕ್ಕೆ ಬೇಕಾದ ಖರ್ಚುವೆಚ್ಚಗಳನ್ನು ವರ್ಷಗಳಿಂದ ಕೂಡಿಡಬೇಕಾಗಿತ್ತು. ಹೀಗೆ ಕಷ್ಟಪಟ್ಟು ಬಂದ ನಂತರ ಮಾಡಿದ ದೇವರ ದರ್ಶನದಿಂದ ಅಪಾರ […]