ಭಾರೀ ಗಾಳಿ-ಮಳೆಯಿಂದಾಗಿ ರಸ್ತೆ ಸಂಚಾರ ಅಸ್ತವ್ಯಸ್ತ, ಶಾಲೆಗಳಿಗೆ ರಜೆ ಘೋಷಣೆ..!
Tuesday, May 29th, 2018ಉಡುಪಿ: ಉದ್ಯಾವರ ಪರಿಸರದಲ್ಲಿ ನಿನ್ನೆ ರಾತ್ರಿ ಭಾರೀ ಗಾಳಿಯೊಂದಿಗೆ ಸುರಿದ ಮಳೆಗೆ ಹಲವೆಡೆ ಬೃಹತ್ ಮರಗಳು, ವಿದ್ಯುತ್ ಕಂಬಗಳು ಧರೆಗುರುಳಿವೆ. ಇದರಿಂದ ಹಲವೆಡೆ ರಸ್ತೆ ಸಂಚಾರ ಅಸ್ತವ್ಯಸ್ತಗೊಂಡಿರುವ ಹಿನ್ನೆಲೆಯಲ್ಲಿ ಉದ್ಯಾವರ ಪರಿಸರದ ಶಾಲೆಗಳಿಗೆ ಇಂದು ರಜೆ ಸಾರಲಾಗಿದೆ. ರಾತ್ರಿ ಬೀಸಿದ ಭಾರೀ ಗಾಳಿಗೆ ಉದ್ಯಾವರ ಪೇಟೆಯ ಕಾಮತ್ ಹೊಟೇಲ್ ಬಳಿಯಿದ್ದ ಬೃಹತ್ ಮರವೊಂದು ರಸ್ತೆಗಡ್ಡವಾಗಿ ಉರುಳಿಬಿದ್ದಿದೆ. ಶಂಭುಕಲ್ಲು ದೇವಳದ ಬಳಿ ಹಾಗೂ ಪಿತ್ರೋಡಿಯಲ್ಲಿ ಮರಗಳು ಉರುಳಿ ರಸ್ತೆಗೆ ಬಿದ್ದಿವೆ. ಕೆಲವೆಡೆ ವಿದ್ಯುತ್ ಕಂಬಗಳು ರಸ್ತೆಗುರುಳಿವೆ. ಇದರಿಂದ ರಸ್ತೆ […]