Blog Archive

‘ರೈತರ ಬಗ್ಗೆ ಅಪ್ಪ-ಮಕ್ಕಳಿಗೆ ಕಾಳಜಿ ಇದ್ದರೆ ಕಾಂಗ್ರೆಸ್‌ಗೆ ಸಾಲಮನ್ನಾ ಷರತ್ತು ವಿಧಿಸಬೇಕಿತ್ತು’

Saturday, June 9th, 2018
yedyurappa

ಬೆಂಗಳೂರು: ರೈತರ ಬಗ್ಗೆ ನಿಜವಾದ ಕಾಳಜಿ ಇದ್ದಿದ್ದರೆ ಅಪ್ಪ-ಮಕ್ಕಳು ಸಾಲಮನ್ನಾ ಮಾಡುವ ಷರತ್ತನ್ನು ಕಾಂಗ್ರೆಸ್ ಮುಂದಿಡಬೇಕಿತ್ತು. ಅದರ ಬದಲು ಅಧಿಕಾರ ಉಳಿಸಿಕೊಳ್ಳಲು ಬೇಕಾದ ಷರತ್ತು ಹಾಕಿದ್ದಾರೆ ಎಂದು ದೇವೇಗೌಡ ಹಾಗೂ ಕುಮಾರಸ್ವಾಮಿ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ವಾಗ್ದಾಳಿ ನಡೆಸಿದ್ದಾರೆ. ಮಲ್ಲೇಶ್ವರಂ ಪಕ್ಷದ ಕಚೇರಿಯಲ್ಲಿ ನಡೆದ ಬಿಜೆಪಿ ರೈತ ಮೋರ್ಚಾ ಕಾರ್ಯಕಾರಿಣಿ ಸಭೆ ಉದ್ಘಾಟಿಸಿ ಯಡಿಯೂರಪ್ಪ ಮಾತನಾಡಿದರು. ಅಪ್ಪ-ಮಕ್ಕಳಿಗೆ ನಿಜವಾಗಲೂ ರೈತರ ಬಗ್ಗೆ ಕಾಳಜಿ ಇದ್ದಿದ್ದರೆ ರೈತರ ಸಾಲಮನ್ನಾ ಮಾಡಿದರೆ ಮಾತ್ರ ಹೊಂದಾಣಿಕೆ ಮಾಡಿಕೊಳ್ಳುತ್ತೇವೆ ಎಂದು ಕಾಂಗ್ರೆಸ್‌ಗೆ […]

ಮಂಗಳೂರಿಗೆ ಆಗಮಿಸಿದ ನೂತನ ಸಚಿವ ಯು.ಟಿ.ಖಾದರ್‌ಗೆ ಅದ್ದೂರಿ ಸ್ವಾಗತ

Saturday, June 9th, 2018
u-t-kader

ಮಂಗಳೂರು: ನಗರಾಭಿವೃದ್ಧಿ ಮತ್ತು ವಸತಿ ಸಚಿವ ಯು.ಟಿ.ಖಾದರ್ ಅವರು ಇಂದು ಪೂರ್ವಾಹ್ನ ಬೆಂಗಳೂರಿನಿಂದ ಮಂಗಳೂರಿಗೆ ಆಗಮಿಸಿದ್ದು, ಅವರನ್ನು ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಹಿತೈಷಿಗಳು ಮಂಗಳೂರು ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅದ್ದೂರಿಯಾಗಿ ಸ್ವಾಗತಿಸಿದರು. ಯು.ಟಿ.ಖಾದರ್ ಅವರು ಇಂದು ಬೆಳಗ್ಗೆ 9 ಗಂಟೆಗೆ ಮಂಗಳೂರು ವಿಮಾನ ನಿಲ್ದಾಣಕ್ಕೆ ತಲುಪಬೇಕಿತ್ತು. ಆದರೆ ಭಾರೀ ಮಳೆ ಕಾರಣ ಬೆಂಗಳೂರಿನಿಂದ ವಿಮಾನ ಹೊರಡಲು ವಿಳಂಬವಾಗಿತ್ತು. ಆದ್ದರಿಂದ ಅವರು ಮಂಗಳೂರು ವಿಮಾನ ನಿಲ್ದಾಣ ತಲುಪುವಷ್ಟರಲ್ಲಿ 11:30 ಆಗಿತ್ತು. ಈ ವೇಳೆ ವಿಮಾನ ನಿಲ್ದಾಣದಲ್ಲಿ ನೆರೆದಿದ್ದ ಕಾಂಗ್ರೆಸ್ […]

ಕಾಂಗ್ರೆಸ್‌ ಹೈಕಮಾಂಡ್‌ಗೆ ತಮ್ಮ ಶಕ್ತಿ ತೋರಿಸಲು ಹೊರಟ ಎಂ.ಬಿ.ಪಾಟೀಲ್‌‌!

Friday, June 8th, 2018
M-B-Patel

ಬೆಂಗಳೂರು: ರಾಜ್ಯ ಸಮ್ಮಿಶ್ರ ಸರ್ಕಾರದ ಅತೃಪ್ತಿ ದಿಲ್ಲಿಗೆ ಶಿಫ್ಟ್ ಆಗಿದೆ. ಅತೃಪ್ತ ಶಾಸಕರ ಗುಂಪು ದಿಲ್ಲಿಗೆ ತೆರಳಲು ಸಜ್ಜಾಗಿತ್ತು. ಆದರೆ ಹೈಕಮಾಂಡ್ ಬುಲಾವ್ ಮೇರೆಗೆ ಎಂ.ಬಿ.ಪಾಟೀಲ್ ಒಬ್ಬರೇ ಸಂಜೆ 5.30ರ ವಿಮಾನದಲ್ಲಿ ದಿಲ್ಲಿಗೆ ಪ್ರಯಾಣ ಬೆಳೆಸಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ. ಮೊದಲ ಹಂತದಲ್ಲಿ ಸಚಿವ ಸ್ಥಾನ ಸಿಗದಿರುವುದಕ್ಕೆ ಮುನಿಸಿಕೊಂಡಿರುವ ಎಂ.ಬಿ.ಪಾಟೀಲ್ ಸದ್ಯ ಡಿಸಿಎಂ ಹುದ್ದೆ ಸೃಷ್ಟಿಸಿ ನೀಡುವಂತೆ ಒತ್ತಡ ಹೇರುತ್ತಿದ್ದಾರೆ ಎನ್ನಲಾಗಿದೆ. ಇದರಿಂದಲೇ ಇಂದು ಬಂದ ರಾಜ್ಯ ನಾಯಕರಿಗೆ ಕೂಡ ಅವರು ಸೊಪ್ಪು ಹಾಕಿಲ್ಲ. ಅಲ್ಲದೇ ಹೈಕಮಾಂಡ್ […]

ಕಾಂಗ್ರೆಸ್‌ – ಜೆಡಿಎಸ್‌ ಹಿಂದೂ ವಿರೋಧಿ ನೀತಿ

Thursday, June 7th, 2018
police

ಉಡುಪಿ: ರಾಜ್ಯದ ಹಿಂದಿನ ಸರಕಾರದಲ್ಲಿ ಸಿದ್ದರಾಮಯ್ಯ ಹಿಂದೂ ವಿರೋಧಿಯಾಗಿ ವರ್ತಿಸುತ್ತಿದ್ದರು. ಈಗ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಎರಡೂ ಕೂಡ ಒಂದಾಗಿ ಹಿಂದೂ ವಿರೋಧಿ ನೀತಿ ಅನುಸರಿಸುತ್ತಿವೆ ಎಂದು ಉಡುಪಿ ಶಾಸಕ ಕೆ. ರಘಪತಿ ಭಟ್‌ ಹೇಳಿದ್ದಾರೆ. ಪೆರ್ಡೂರಿನ ಗೋಸಾಗಾಟ ಪ್ರಕರಣದಲ್ಲಿ ಅಮಾಯಕರನ್ನು ಬಂಧಿಸಿರುವುದನ್ನು ಖಂಡಿಸಿ ಮತ್ತು ಸರಕಾರದ ಹಿಂದೂ ವಿರೋಧಿ ನೀತಿಯನ್ನು ವಿರೋಧಿಸಿ ಉಡುಪಿ ಜಿಲ್ಲಾಧಿಕಾರಿ ಕಚೇರಿ ಎದುರು ಜೂ.6ರಂದು ಬಿಜೆಪಿ, ವಿಎಚ್‌ಪಿ ಮತ್ತು ಬಜರಂಗದಳ ವತಿಯಿಂದ ನಡೆದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು. ಜಿಲ್ಲೆಯಲ್ಲಿ ಗೋಸಾಗಾಟ ರಾಜಾರೋಷವಾಗಿ […]

ಘಟಾನುಘಟಿಗಳನ್ನೇ ಸಂಪುಟದಿಂದ ಕೈಬಿಟ್ಟ ಕಾಂಗ್ರೆಸ್-ಜೆಡಿಎಸ್..!

Wednesday, June 6th, 2018
congress-JDs

ಬೆಂಗಳೂರು: ಹಲವು ಕಸರತ್ತಿನ ಮೂಲಕ ರಚನೆಗೊಂಡ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರವು ಕೊನೆಗೂ ಸಚಿವ ಸಂಪುಟ ರಚನೆಯ ಕಸರತ್ತು ಪೂರ್ಣಗೊಳಿಸಿದೆ. ಸಮ್ಮಿಶ್ರ ಸರ್ಕಾರದ ಸಚಿವರಾಗಿ ಜೆಡಿಎಸ್ ನ 10 ಮಂದಿ ಮತ್ತು ಕಾಂಗ್ರೆಸ್ ನ 15 ಮಂದಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಅತ್ತ ಸಂಪುಟದಲ್ಲಿ ಸ್ಥಾನ ಪಡೆದವರು ಸಂಭ್ರಮಿಸುತ್ತಿದ್ದರೆ, ಹಲವು ಲಾಬಿಗಳನ್ನು ನಡೆಸಿದ ಹೊರತಾಗಿಯೂ ಸ್ಥಾನ ವಂಚಿತರಾದವರು ಬಹಿರಂಗವಾಗಿಯೇ ತಮ್ಮ ಅಸಮಾಧಾನಗಳನ್ನು ಹೊರಹಾಕುತ್ತಿದ್ದಾರೆ. ಸಚಿವ ಸಂಪುಟಕ್ಕೆ ಆಯ್ಕೆ ಸಂದರ್ಭದಲ್ಲಿ ಎರಡೂ ಪಕ್ಷಗಳಲ್ಲಿ ಹಲವು ಹಿರಿಯರನ್ನು ದೂರ ಇಡಲಾಗಿದೆ. ಅವರ ಸ್ಥಾನದಲ್ಲಿ […]

ಕಾಂಗ್ರೆಸ್‌ನ್ನು ಮುಗಿಸಲು ಅಪ್ಪ- ಮಕ್ಕಳು ಸಂಚು ಮಾಡಿದ್ದಾರೆ: ಬಿ.ಎಸ್‌. ಯಡಿಯೂರಪ್ಪ

Wednesday, June 6th, 2018
yedeyurappa

ಮೈಸೂರು: ಕಾಂಗ್ರೆಸ್ ಪಕ್ಷವನ್ನು ಮುಗಿಸಲು ಅಪ್ಪ- ಮಕ್ಕಳ ಸಂಚು ಮಾಡಿದ್ದಾರೆ ಎಂದು ಜೆಡಿಎಸ್‌ ವಿರುದ್ಧ ಮಾಜಿ ಸಿಎಂ ಬಿ.ಎಸ್‌. ಯಡಿಯೂರಪ್ಪ ವಾಗ್ದಾಳಿ ನಡೆಸಿದರು. ನಗರದ ಪ್ರೆಸಿಡೆಂಟ್ ಹೊಟೇಲ್‌ನಲ್ಲಿ ಮಾತನಾಡಿದ ಅವರು, ಹೊಂದಾಣಿಕೆ ರಾಜಕೀಯದ ಮೂಲಕ ಕಾಂಗ್ರೆಸ್ ಮುಗಿಸಲು ಸಂಚು ರೂಪಿಸಿದ್ದಾರೆ. ಈ ಅಪ್ಪ-ಮಕ್ಕಳ ಸಂಚಿಗೆ ಕಾಂಗ್ರೆಸ್ ಬಲಿಯಾಗಲಿದೆ ಎಂದು ದೇವೇಗೌಡರು ಮತ್ತು ಕುಮಾರಸ್ವಾಮಿಯವರ ಹೆಸರನ್ನು ಹೇಳದೆಯೇ ಟೀಕಿಸಿದರು. ಜೆಡಿಎಸ್‌ನ್ನು ಟೀಕಿಸಿದ ಬಿಎಸ್‌ವೈ ಕಾಂಗ್ರೆಸ್‌ ಬಗ್ಗೆ ಮೃದು ಧೋರಣೆ ತೋರಿದರು. ಕುಮಾರಸ್ವಾಮಿ ಬಜೆಟ್ ಮಂಡಿಸುವುದನ್ನ ಕಾದು ನೋಡೋಣ. ಒಂದು, […]

ನರೇಂದ್ರ ಮೋದಿ ಅವರ ಮೇಲೆ ನನಗೆ ಯಾವುದೇ ಅಸಮಾಧಾನವಿಲ್ಲ: ಪೇಜಾವರ ಶ್ರೀ

Tuesday, June 5th, 2018
pejwar-shree

ಉಡುಪಿ: ಪ್ರಧಾನಿ ನರೇಂದ್ರ ಮೋದಿ ಅವರ ಮೇಲೆ ನನಗೆ ಯಾವುದೇ ಅಸಮಾಧಾನವಿಲ್ಲ. ಕೆಲ ಮಾಧ್ಯಮಗಳು ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಿವೆ. ಸಂಪೂರ್ಣ ಸಮಾಧಾನ ಇಲ್ಲ ಅಂತಷ್ಟೆ ನಾನು ಹೇಳಿದ್ದೆ ಎಂದು ಪೇಜಾವರ ಶ್ರೀ ವಿಶ್ವೇಶ್ವರ ತೀರ್ಥ ಶ್ರೀಪಾದರು ಸ್ಪಷ್ಟನೆ ನೀಡಿದರು. ಮೈಸೂರು ಮಾಧ್ವ ವಿದ್ಯಾರ್ಥಿ ನಿಲಯದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಕೇಂದ್ರ ಸರ್ಕಾರದ ಸಾಧನೆಗಳು ಸಮಾಧಾನ ತಂದಿಲ್ಲ ಅಂತ ನಾನು ಹೇಳಿಲ್ಲ.‌ ಕಪ್ಪು ಹಣ, ಗಂಗಾ ನದಿ ಶುದ್ಧೀಕರಣ ಆಗಿಲ್ಲ ಎಂದು ನನಗೆ ಮಾಹಿತಿ ಬಂತು. ಈ […]

ಮೊದಲ ಹಂತದಲ್ಲಿ ಜೆಡಿಎಸ್‌ನ 9 ಶಾಸಕರಿಗೆ ಸಚಿವ ಸ್ಥಾನ: ಹೆಚ್.ಡಿ.ಕುಮಾರಸ್ವಾಮಿ

Tuesday, June 5th, 2018
kumarswamy-2

ಬೆಂಗಳೂರು: ಜೆಡಿಎಸ್ ಮತ್ತು ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದ ಮಂತ್ರಿಮಂಡಲ ರಚನೆಯ ಮೊದಲ ಹಂತದಲ್ಲಿ ಜಾತ್ಯತೀತ ಜನತಾ ದಳದ 9 ಮಂದಿ ಶಾಸಕರಿಗೆ ಸಚಿವ ಸ್ಥಾನ ನೀಡುವುದಾಗಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ. ನಗರದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಥಮ ಹಂತದಲ್ಲಿ ತಮ್ಮ ಪಕ್ಷದ 8 ರಿಂದ 9 ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ಚೀಕರಿಸಲಿದ್ದಾರೆ. ಇನ್ನು ಮೂರು ನಾಲ್ಕು ಸಚಿವ ಸ್ಥಾನಗಳ ಬಗ್ಗೆ ಆಯ್ಕೆ ನಡೆಯಲಿದೆ. ಸಂಪುಟದಲ್ಲಿ ಸ್ಥಾನ ಮತ್ತು ಖಾತೆಗಳ ಹಂಚಿಕೆ ಬಗ್ಗೆ ಜೆಡಿಎಸ್ ಶಾಸಕರಲ್ಲಿ […]

ದ್ವೇಷ ರಾಜಕಾರಣ ಕಾಂಗ್ರೆಸ್ ಸಂಸ್ಕೃತಿಯಲ್ಲ…ಅದು ಬಿಜೆಪಿಯ ಸಂಸ್ಕೃತಿ: ಯು.ಟಿ.ಖಾದರ್

Tuesday, June 5th, 2018
u-t-kader

ಮಂಗಳೂರು: ದ್ವೇಷ ರಾಜಕಾರಣ ಕಾಂಗ್ರೆಸ್ ಸಂಸ್ಕೃತಿಯಲ್ಲ. ಅದು ಬಿಜೆಪಿಯ ಸಂಸ್ಕೃತಿ. ನಮ್ಮದು ಏನಿದ್ದರೂ ಪ್ರೀತಿಯ ರಾಜಕಾರಣ. ಜಿಲ್ಲೆಯಲ್ಲಿ, ರಾಜ್ಯದಲ್ಲಿ ಕಾಂಗ್ರೆಸ್‌ಗೆ ಹಿನ್ನಡೆಯಾಗಿದ್ದರೂ ಮಂಗಳೂರು ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಜಯಗಳಿಸುವುದರಲ್ಲಿ ಕಾರ್ಯಕರ್ತರ ಪರಿಶ್ರಮವೇ ಕಾರಣ. ಮುಂದಿನ ಲೋಕಸಭೆ ಚುನಾವಣೆಗೆ ನಾವೆಲ್ಲರೂ ಸಿದ್ದರಾಗಬೇಕಿದೆ ಎಂದು ಶಾಸಕ ಯು.ಟಿ.ಖಾದರ್ ಅವರು ಅಭಿಪ್ರಾಯಪಟ್ಟರು. ಅವರು ದೇರಳಕಟ್ಟೆಯ ಖಾಸಗಿ ಸಭಾಂಗಣದಲ್ಲಿ ಸೋಮವಾರ ನಡೆದ ಕಾಂಗ್ರೆಸ್ ಕಾರ್ಯಕರ್ತರಿಗೆ ಅಭಿನಂದನೆ ಕಾರ್ಯಕ್ರಮ ಹಾಗೂ ಇಪ್ತಾರ್‌ಕೂಟದಲ್ಲಿ ಭಾಗವಹಿಸಿ ಮಾತನಾಡಿದರು. ಮಂಗಳೂರು ಕ್ಷೇತ್ರದ ಜನತೆ ಅತ್ಯಂತ ಪ್ರೀತಿ ವಿಶ್ವಾಸ ನಂಬಿಕೆಯೊಂದಿಗೆ […]

ಇವಿಎಂ ಮೇಲೆ ಅನುಮಾನ ನಿಲ್ಲಿಸದ ಜೆ ಆರ್ ಲೋಬೋ

Saturday, June 2nd, 2018
j-r-lobo-speech

ಮಂಗಳೂರು: ಚುನಾವಣೆಯಲ್ಲಿ ಅನಿರೀಕ್ಷಿತವಾಗಿ ಸೋಲು‌ ಕಂಡಿದ್ದೇನೆ ಈ ಬಗ್ಗೆ ಇವಿಎಂ ಮೇಲೆ ಅನುಮಾನ ಇದೆ ಎಂದು ಮಾಜಿ ಶಾಸಕ ಜೆ ಆರ್ ಲೋಬೋ ಹೇಳಿದ್ದಾರೆ. ಮಂಗಳೂರಿನಲ್ಲಿ ಮಾತನಾಡಿದ ಜೆ ಆರ್ ಲೋಬೋ ಅವರು ನನಗೆ ಇವಿಎಂ ಮೇಲೆ ಅನುಮಾನ ಇದೆ, ಇದಕ್ಕಾಗಿ ನ್ಯಾಯಲಯದ ‌ ಮೊರೆ ಹೋಗಲು ನಿರ್ಧರಿಸಿದ್ದೇನೆ ಎಂದಿದ್ದಾರೆ, ಈ ಬಗ್ಗೆ ನ್ಯಾಯಾಲಯದಲ್ಲಿ ಕಾನೂನು ಸಮರ ಮಾಡಲಾಗುವುದು. ಇವಿಎಂ ನ ಎಲ್ಲಾ ಬೂತ್ ಗಳ ವಿವಿ ಪ್ಯಾಟ್ ನ ಮತ ಎಣಿಕೆ ಗೆ ನ್ಯಾಯಲಯದ ಅನುಮತಿ […]