Blog Archive

ಮೊದಲ ಆದ್ಯತೆ ರಸ್ತೆಗಳ ದುರಸ್ಥಿ, ವಿಪತ್ತಿನಿಂದಾದ ಹಾನಿಗೆ ತಕ್ಷಣ ಪರಿಹಾರ ಸಚಿವ ಅಶೋಕ ಸೂಚನೆ

Wednesday, May 19th, 2021
R Ashoka

ಮಂಗಳೂರು : ಟೌಟೆ ಚಂಡಮಾರುತದ ಪರಿಣಾಮ ಕರಾವಳಿ ಜಿಲ್ಲೆಗಳಲ್ಲಿ ಹಾನಿಗೀಡಾದ ಪ್ರದೇಶಗಳಿಗೆ ಕಂದಾಯ ಸಚಿವ ಆರ್ ಅಶೋಕ್ ಅವರು ಭೇಟಿ ನೀಡಿ ಪರಿಸ್ಥಿತಿಯ ಅವಲೋಕನ ನಡೆಸಿದರು. ಪ್ರಕೃತಿ ವಿಕೋಪದಿಂದಾಗಿ ನೂರಾರು ಮನೆಗಳಿಗೆ ಹಾನಿಯುಂಟಾಗಿದ್ದು, ದುರಂತದಲ್ಲಿ ಒರ್ವ ವ್ಯಕ್ತಿ ಮೃತಪಟ್ಟಿದ್ದಾನೆ. ಸಾರ್ವಜನಿಕ ಆಸ್ತಿಗೂ ಸಾಕಷ್ಟು ನಷ್ಟ ಉಂಟಾಗಿದ್ದು, ಸಚಿವರು ಈ ಎಲ್ಲಾ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಕುರಿತು ಮಾತನಾಡಿದ ಸಚಿವ ಅಶೋಕ್ ಅವರು,”ಚಂಡಮಾರುತದ ಪರಿಣಾಮ ಸಾಕಷ್ಟು ಹಾನಿ ಸಂಭವಿಸಿದೆ. ಬೆಳೆ ಹಾನಿ, ಸಾರ್ವಜನಿಕ ಆಸ್ತಿ […]

ಟೌಟೆ ಚಂಡಮಾರುತಕ್ಕೆ ಸಿಲುಕಿದವರ ರಕ್ಷಣೆ ಕಾರ್ಯಾಚರಣೆ ಜಾರಿ: ಸಚಿವ ಆರ್ ಅಶೋಕ್ ಮಾಹಿತಿ*

Monday, May 17th, 2021
R Ashoka

ಬೆಂಗಳೂರು : ಟೌಟೆ ಚಂಡಮಾರುತ ಹಿನ್ನೆಯಲ್ಲಿ ಜಿಲ್ಲಾಡಳಿತ ಮುನ್ನೆಚ್ಚರಿಕಾ ನೀಡಿದ್ದಾಗಲೂ ದಡ ಸೇರದ ಎಂ ಆರ್ ಪಿ ಎಲ್ ಅಂಡರ್ ವಾಟರ್ ಏಜೆನ್ಸಿಯ ಅಲಯನ್ಸ್ ಟಗ್ ನಲ್ಲಿದ್ದ 8 ಜನರಲ್ಲಿ ಮೂವರು ನಾಪತ್ತೆಯಾಗಿದ್ದಾರೆ. ಉಳಿದ ಇಬ್ಬರ ಮೃತದೇಹ ಸಿಕ್ಕಿದ್ದು, ಮೂವರು ಈಜಿ ದಡ ಸೇರಿದ್ದಾರೆ. ಟಗ್ ನ ಅವಶೇಷಗಳು ಪಡುಬಿದ್ರೆ ಬೀಚ್ ಬಳಿ ಪತ್ತೆಯಾಗಿವೆ, ಎಂದು ಕಂದಾಯ ಸಚಿವ ಹಾಗೂ ವಿಪತ್ತು ನಿರ್ವಹಣಾ ಪ್ರಾಧಿಖಾರದ ಉಪಾಧ್ಯಕ್ಷರಾದ ಆರ್ ಅಶೋಕ್ ತಿಳಿಸಿದ್ದಾರೆ. ಈ ಕುರಿತಂತೆ ವಿವರಗಳನ್ನ ನೀಡಿದ ಆರ್ […]

ರಾಜ್ಯಕ್ಕೆ ಅಪ್ಪಳಿಸಲಿರುವ ‘ತೌಕ್ತೇ’ ಚಂಡಮಾರುತ: ಅನಾಹುತ ತಪ್ಪಿಸಲು ಸರ್ಕಾರದಿಂದ ಹೈ ಅಲರ್ಟ್

Saturday, May 15th, 2021
R Ashoka

ಬೆಂಗಳೂರು : ಅರಬ್ಬಿ ಸಮುದ್ರದಲ್ಲಿ ಸೃಷ್ಟಿಯಾಗಿರುವ ತೌಕ್ತೇ ಚಂಡಮಾರುತವು ರಾಜ್ಯದ ಕಡೆಗೆ ಆಗಮಿಸಲಿದ್ದು, ಈ ಕುರಿತಂತೆ ಸಂಭವನೀಯ ಅನಾಹುತ ತಪ್ಪಿಸುವ ನಿಟ್ಟಿನಲ್ಲಿ ವಿಪತ್ತು ನಿರ್ವಹಣಾ ಪ್ರಾಧಿಕಾರದ ಉಪಾಧ್ಯಕ್ಷರಾದ ಕಂದಾಯ ಸಚಿವ ಆರ್ ಅಶೋಕ್ ಹಾಗೂ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರು ತುರ್ತು ಸಭೆ ಕರೆದು ಮುನ್ನೆಚ್ಚರಿಕಾ ಕ್ರಮಗಳ ಕುರಿತಂತೆ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು. ನಂತರ ಸುದ್ದಿಗಾರರೊಂದಿಗೆ ಸಭೆಯ ವಿವರಗಳನ್ನ ಹಂಚಿಕೊಂಡು ಸಚಿವ ಆರ್ ಅಶೋಕ್ ಅವರು,”ರಾಜ್ಯದಿಂದ ಕೇವಲ 200 ಕಿ.ಮೀ. ದೂರದಲ್ಲಿರುವ ಚಂಡಮಾರುತ ತೌಕ್ತೇ ರಾಜ್ಯಕ್ಕೆ […]

ಸುಸಜ್ಜಿತ ಆರೈಕೆ ಕೇಂದ್ರವಾಗಿ ಬದಲಾದ ಹಜ್ ಭವನ

Saturday, May 15th, 2021
Haj Bhavan

ಬೆಂಗಳೂರು : ಬೆಂಗಳೂರಿನ ಉತ್ತರ ಭಾಗದ ಕೋವಿಡ್ ಸೋಂಕಿತರ ಅನುಕೂಲಕ್ಕಾಗಿಯೇ ಥಣಿಸಂದ್ರದ ಹಜ್ ಭವನದಲ್ಲಿ ಸಿದ್ಧಗೊಂಡಿರುವ ಸುಸಜ್ಜಿತ ಕೋವಿಡ್ ಆರೈಕೆ ಕೇಂದ್ರವನ್ನ ಕಂದಾಯ ಸಚಿವರಾದ ಆರ್ ಅಶೋಕ್ ಅವರು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಆರ್ ಅಶೋಕ್ ಅವರು,”ಈ ಭಾಗದ ಸೋಂಕಿತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸರ್ಕಾರ ಹಜ್ ಭವನವನ್ನ ಹಲವು ಅನುಕೂಲಗಳುಳ್ಳ ಸುಸಜ್ಜಿತ ಕೋವಿಡ್ ಆರೈಕೆ ಕೇಂದ್ರವಾಗಿ ಸಜ್ಜುಗೊಳಿಸಿದೆ. ಇಲ್ಲಿ ನೂರಕ್ಕೂ ಅಧಿಕ ಆಕ್ಸಿಜನ್ ಹಾಸಿಗೆ ಗಳಿದ್ದು, 50 ಐಸಿಯೂ ಹಾಗೂ 50 ಹೆಚ್‍ಡಿಯೂ ಹಾಸಿಗೆಗಳನ್ನ ಸಿದ್ಧಪಡಿಸಲು […]

ನಗರದ ಎಲ್ಲಾ ಆರೈಕೆ ಕೇಂದ್ರಗಳಲ್ಲಿ ಆಕ್ಸಿಜೆನ್ ಕಾನ್ಸ್ಂಟ್ರೇಟರ್ ಲಭ್ಯ: ಆರ್ ಅಶೋಕ್ ಹೇಳಿಕೆ

Thursday, May 13th, 2021
R Ashoka

ಬೆಂಗಳೂರು  : “ಹಾಸಿಗೆ ನೀಡದೆ ಕಣ್ಣಾಮುಚ್ಚಾಲೆ ಆಡುತ್ತಿದ್ದ ಖಾಸಗಿ ಆಸ್ಪತ್ರೆಗಳ ಮೇಲೆ ಸರ್ಕಾರ ಕಠಿಣ ಕ್ರಮ ತೆಗೆದುಕೊಳ್ಳಲು ಮುಂದಾದ ತಕ್ಷಣ ಹಲವು ಆಸ್ಪತ್ರೆಗಳು ತಮ್ಮ ಬಳಿಯಿರುವ ಹಾಸಿಗೆಗಳನ್ನ ನೀಡಲು ಮುಂದೆ ಬರುತ್ತಿವೆ. ಇದರಿಂದ ಲಭ್ಯ ಬೆಡ್ ಗಳ ಸಂಖ್ಯೆ ಹೆಚ್ಚಾಗಲಿದೆ,” ಎಂದು ಕಂದಾಯ ಸಚಿವರಾದ ಆರ್ ಅಶೋಕ್ ಅವರು ತಿಳಿಸಿದರು. ಪದ್ಮನಾಭನಗರ ವಿಧಾನಸಭಾ ಕ್ಷೇತ್ರದ ಹೊಸಕೆರೆಹಳ್ಳಿ ವಾರ್ಡ್‍ನ ರೆಫೆರೆಲ್ ಆಸ್ಪತ್ರೆಯಲ್ಲಿ ಸಿದ್ಧಗೊಂಡಿರುವ ಕೋವಿಡ್ ಆರೈಕೆ ಕೇಂದ್ರ ಹಾಗೂ ಇದೇ ವಾರ್ಡ್‍ನಲ್ಲಿ ನಿರ್ಮಾಣವಾಗುತ್ತಿರುವ ಸಮುದಾಯಭವನ ಸ್ಥಳಕ್ಕೆ ಬೇಟಿ ನೀಡಿದ […]

ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿನ ಕೋವಿಡ್ ಆರೈಕೆ ಕೇಂದ್ರಕ್ಕೆ 160 ಆಕ್ಸಿಜೆನ್ ಕಾನ್ಸ್‍ಂಟ್ರೇಟರ್ ವಿತರಣೆ – ಸಚಿವ ಶ್ರೀ ಆರ್ ಅಶೋಕ್

Wednesday, May 12th, 2021
oxygen

ಬೆಂಗಳೂರು :  ಆಕ್ಸಿಜೆನ್ ಅಭಾವ ನೀಗಿಸುವ ನಿಟ್ಟಿನಲ್ಲಿ ಸರ್ಕಾರ ಮಹತ್ವದ ಹೆಜ್ಜೆ ಇರಿಸಿದೆ. ಈ ನಿಟ್ಟಿನಲ್ಲಿ ಇಂದು ದೇವನಹಳ್ಳಿಯ ತಾಲ್ಲೂಕು ಕಚೇರಿ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿನ ಕೋವಿಡ್ ಆರೈಕೆ ಕೇಂದ್ರಗಳಿಗೆ 160 ಆಕ್ಸಿಜೆನ್ ಕಾನ್ಸ್‍ಂಟ್ರೇಟರ್ ಗಳನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಉಸ್ತುವಾರಿ ಸಚಿವರಾದ ಆರ್ ಅಶೋಕ್ ಅವರು, ಕೋವಿಡ್ ಸೋಂಕಿತರಿಗೆ ಆಕ್ಸಿಜೆನ್ ಅಭಾವ ಅಧಿಕವಾಗಿ ಕಾಡುತ್ತಿದೆ. ಈ ಕಾರಣಕ್ಕೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಪ್ರತಿ ತಾಲ್ಲೂಕಿಗೆ 40 […]

ರಿಯಾಲಿಟಿ ಚೆಕ್ ಮಾಡಿ ಖಾಸಗಿ ಆಸ್ಪತ್ರೆಗಳಿಂದ ಹಾಸಿಗೆ ವಶಪಡಿಸಿಕೊಳ್ಳಿ

Wednesday, May 12th, 2021
Bommai

ಬೆಂಗಳೂರು :   ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿರುವ ಖಾಸಗಿ ಆಸ್ಪತ್ರೆ ಹಾಗೂ ವೈದ್ಯಕೀಯ ಕಾಲೇಜುಗಳು ಸರ್ಕಾರಕ್ಕೆ ನಿಗದಿತ ಹಾಸಿಗೆಗಳನ್ನ ನೀಡದೆ ವಂಚಿಸುತ್ತಿರುವ ಕುರಿತಂತೆ ಕಂದಾಯ ಸಚಿವರಾದ ಆರ್ ಅಶೋಕ್, ಗೃಹ ಸಚಿವರಾದ ಬಸವರಾಜ್ ಬೊಮ್ಮಾಯಿ ಅವರ ಅಧ್ಯಕ್ಷತೆಯಲ್ಲಿ ವರ್ಚುವಲ್ ಸಭೆ ನಡೆಸಲಾಯಿತು. ಈ ಸಂದರ್ಭದಲ್ಲಿ ಖಾಸಗಿ ಆಸ್ಪತ್ರೆಗಳು ಇನ್ನೂ ಕೂಡಾ ಸರ್ಕಾರಕ್ಕೆ ನಿಗದಿತ ಬೆಡ್ ಗಳನ್ನ ನೀಡದೆ ತಪ್ಪು ಮಾಹಿತಿ ನೀಡುತ್ತಿರುವ ಕುರಿತಂತೆ ಪ್ರಮುಖವಾಗಿ ಚರ್ಚಿಸಲಾಯಿತು. ಈ ನಿಟ್ಟಿನಲ್ಲಿ ಕಂದಾಯ ಸಚಿವ ಆರ್ ಅಶೋಕ್ ಅವರು […]

ಬೈಕಂಪಾಡಿಯ ಮೀನಕಳಿಯ ಕಡಲ್ಕೊರೆತ ಪ್ರದೇಶಕ್ಕೆ ಕಂದಾಯ ಸಚಿವ ಆರ್.ಅಶೋಕ್ ಭೇಟಿ

Saturday, August 8th, 2020
R Ashok

ಮಂಗಳೂರು: ಚಿತ್ರಾಪುರ ಮತ್ತು ಬೈಕಂಪಾಡಿಯ ಮೀನಕಳಿಯ ಪ್ರದೇಶದ ಕಡಲ್ಕೊರೆತ ಪ್ರದೇಶಕ್ಕೆ ಕಂದಾಯ ಸಚಿವ ಆರ್.ಅಶೋಕ್ ಶನಿವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕಡಲ್ಕೊರೆತದಿಂದ  ಅಪಾಯದಂಚಿನಲ್ಲಿರುವ  ಮೀನಕಳಿಯದ ಮೀನು ಹರಾಜು ಕಟ್ಟಡ, ಚಿತ್ರಾಪುರದಲ್ಲಿನ ರಂಗ ಮಂದಿರ ಹಾಗೂ ಶಾಲಾ ಮೈದಾನವನ್ನು ಸಚಿವ ಆರ್.ಅಶೋಕ್ ಭೇಟಿ ಸ್ವತಃ ನೀಡಿ ಸಮಸ್ಯೆಯನ್ನು ತಿಳಿದುಕೊಂಡರು. ಈ ಸಂದರ್ಭ ಶಾಸಕ ಡಾ.ಭರತ್ ಶೆಟ್ಟಿ ವೈ ಅವರು ಚಿತ್ರಾಪುರ ಮತ್ತು ಬೈಕಂಪಾಡಿ ಪ್ರದೇಶದಲ್ಲಿ ಸಮುದ್ರದ ಕೊರೆತದಿಂದ ಆಗುತ್ತಿರುವ ನಷ್ಠದ ಕುರಿತು ಮಾಹಿತಿ ನೀಡಿ, ಶಾಶ್ವತ ಕಾಮಗಾರಿಗೆ ತೆಗೆದುಕೊಳ್ಳಬೇಕಾದ ಕ್ರಮದ ಬಗ್ಗೆ ವಿವರಿಸಿದರು.ಈಗಾಗಲೇ ಚಿತ್ರಾಪುರ ಬಳಿ […]

ಅನರ್ಹರಿಗೆ ಅನ್ಯಾಯವಾಗಲು ಬಿಡಲ್ಲ, ಎಲ್ಲರಿಗೂ ಟಿಕೆಟ್ ಸಿಗುತ್ತೆ : ಕಂದಾಯ ಸಚಿವ ಆರ್.ಅಶೋಕ್

Wednesday, November 13th, 2019
R-Ashok

ಬೆಂಗಳೂರು : ಉಪಚುನಾವಣೆಯಲ್ಲಿ ಸ್ಪರ್ಧಿಸಬಹುದು ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದ ಬೆನ್ನಲ್ಲೇ ಅನರ್ಹರು ಚುನಾವಣೆಗೆ ಸಿದ್ಧತೆ ನಡೆಸಿದ್ದಾರೆ. ಇನ್ನೊಂದೆಡೆ ಬಿಜೆಪಿ ನಾಯಕರು ಸಹ ಇದಕ್ಕೆ ಪೂರಕವಾದ ಹೇಳಿಕೆಯನ್ನು ನೀಡುತ್ತಿದ್ದಾರೆ. ಈ ಕುರಿತು ಕಂದಾಯ ಸಚಿವ ಆರ್.ಅಶೋಕ್ ಪ್ರತಿಕ್ರಿಯಿಸಿ, ಅನರ್ಹ ಶಾಸಕರಿಗೆ ಅನ್ಯಾಯವಾಗಲು ಬಿಡುವುದಿಲ್ಲ. ಎಲ್ಲರಿಗೂ ಟಿಕೆಟ್ ನೀಡಲಾಗುತ್ತದೆ ಎಂದು ಭರವಸೆ ನೀಡಿದ್ದಾರೆ. ಅನರ್ಹ ಶಾಸಕರ ಕುರಿತು ಸುಪ್ರೀಂ ಕೋರ್ಟ್ ನೀಡಿದ ತೀರ್ಪಿನಿಂದ ನಿರಾಳರಾಗಿದ್ದೇವೆ. ಅನರ್ಹರಿಗೆ ಅನ್ಯಾಯವಾಗಲು ನಾವು ಬಿಡುವುದಿಲ್ಲ. ಎಲ್ಲರಿಗೂ ಟಿಕೆಟ್ ನೀಡಲಾಗುವುದು. ಮತ್ತೆ ಶಾಸಕರಾಗಿ […]

ಪತ್ರಕರ್ತರಿಗೆ ನಿವೇಶನ ನೀಡಲು ತಕ್ಷಣ ಕ್ರಮ : ಭರವಸೆ ನೀಡಿದ ಆರ್.ಅಶೋಕ್

Tuesday, October 22nd, 2019
R-Ashok

ಮಂಗಳೂರು : ಪತ್ರಕರ್ತರಿಗೆ ನಿವೇಶನ ನೀಡಲು ಸರಕಾರ ತಕ್ಷಣ ಕ್ರ‌ಮ ಕೈಗೊಳ್ಳಲಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ಭರವಸೆ ನೀಡಿದ್ದಾರೆ. ಪತ್ರಕರ್ತರಿಗೆ ನಿವೇಶನ ಒಸಗಿಸುವುದಕ್ಕೆ ಸಂಬಂಧಿಸಿದಂತೆ ಕಂದಾಯ ಸಚಿವ ಆರ್.ಅಶೋಕ್ ಅವರಿಗೆ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘದ ವತಿಯಿಂದ ಅಧ್ಯಕ್ಷ ಶ್ರೀನಿವಾಸ್ ನಾಯಕ್ ಇಂದಾಜೆ ಮನವಿ ಸಲ್ಲಿಸಿದರು. ಮನವಿ ಸ್ವೀಕರಿಸಿದ ಸಚಿವರು ಪತ್ರಕರ್ತರಿಗೆ ನಿವೇಶನ ನೀಡುವ ಕುರಿತು ಬೆಂಗಳೂರಿನಿಂದಲೂ ಮನವಿ ಬಂದಿದ್ದು ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು. ಈ ಸಂದರ್ಭದಲ್ಲಿ ಶಾಸಕರಾದ […]