Blog Archive

ಸ್ಕೂಟಿಗೆ ಪೆಟ್ರೋಲ್ ಹಾಕಿಸಿ ಹಣ ನೀಡದೆ ಯುವಕನೋರ್ವ ಪರಾರಿ..!

Monday, November 5th, 2018
petrol

ಚಿಕ್ಕಮಗಳೂರು: ಸ್ಕೂಟಿಗೆ ಪೆಟ್ರೋಲ್ ಹಾಕಿಸಿ ಹಣ ನೀಡದೆ ಯುವಕನೋರ್ವ ಪರಾರಿಯಾದ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ. ಚಿಕ್ಕಮಗಳೂರು ಜಿಲ್ಲೆ ಎನ್.ಆರ್.ಪುರ ತಾಲೂಕಿನ ಬಾಳೆಹೊನ್ನೂರಿನಲ್ಲಿ ಈ ಘಟನೆ ನಡೆದಿದ್ದು, ಬಾಳೆಹೊನ್ನೂರಿನ ಶ್ರೀರಂಭಾಪುರಿ ಸವಿ೯ಸ್ ಸ್ಟೇಷನ್ಗೆ ಸ್ಕೂಟಿಯಲ್ಲಿ ಬಂದ ಯುವಕ 300 ರೂ. ಪೆಟ್ರೋಲ್ ಹಾಕಿಸಿ ಹಣ ಪಾವತಿಸದೆ ಪರಾರಿಯಾಗಿದ್ದಾನೆ. ಹಣ ನೀಡದೆ ಯುವಕ ಪರಾರಿಯಾಗುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಮೊದಲಿಗೆ ಎಟಿಎಂ ಕಾರ್ಡ್ ಕೊಟ್ಟಿದ್ದಾನೆ. ಆದರೆ ಅದರಲ್ಲಿ ಹಣ ಇಲ್ಲದ ಕಾರಣ ಪೆಟ್ರೋಲ್ ಬಂಕ್ನವರು ಯುವಕನ ಬಳಿ ಹಣ ಕೇಳಿದ್ದಾರೆ. […]

ಭಾರೀ ಮಳೆಯಿಂದಾಗಿ ಈರುಳ್ಳಿ ಬೆಲೆ ಕುಸಿತ: ರೈತರು ಕಂಗಾಲು

Friday, September 28th, 2018
onion-cost

ಚಿಕ್ಕಮಗಳೂರು: ಕಳೆದ ಮೂರು ವರ್ಷದ ಹಿಂದೆ ಬಂಪರ್ ಬೆಳೆಯಿಂದಾಗಿ ರೈತರಿಗೆ ಹೆಚ್ಚಿನ ಲಾಭ ತಂದುಕೊಟ್ಟಿದ್ದ ಈರುಳ್ಳಿ ಈ ಬಾರಿ ರೈತರಿಗೆ ಕಣ್ಣೀರು ತರಿಸಿದೆ. ಚಿಕ್ಕಮಗಳೂರಿನ ಬಯಲುಸೀಮೆ ಭಾಗದಲ್ಲಿ ಬೆಳೆದ ಶೇ. 50 ರಷ್ಟು ಈರುಳ್ಳಿ ಈ ಬಾರಿಯ ಅತಿಯಾದ ಮಳೆಯಿಂದ ಸಂಪೂರ್ಣ ಹಾನಿಯಾಗಿತ್ತು. ಸದ್ಯ ಮಾರುಕಟ್ಟೆಯಲ್ಲಿ ಈರುಳ್ಳಿ ಧಾರಣೆ ಕೆಜಿಗೆ 3 ರಿಂದ 4 ರೂ. ಕುಸಿತ ಕಂಡಿರೋದು ಈರುಳ್ಳಿ ಬೆಳೆಗಾರರನ್ನ ಕಂಲಾಗಿಸಿದೆ. ಹೌದು, ಬಿರು ಬಿಸಿಲಲ್ಲಿ ಈರುಳ್ಳಿ ಚೀಲ ರೆಡಿ ಮಾಡ್ತಿರೋ ರೈತರ ಮನದಲ್ಲಿ ಈಗ […]

ಕಾರುಗಳ ನಡುವೆ ಮುಖಾಮುಖಿ ಡಿಕ್ಕಿ: ಓರ್ವ ಸಾವು!

Thursday, September 20th, 2018
accident

ಚಿಕ್ಕಮಗಳೂರು: ಎರಡು ಕಾರುಗಳ ನಡುವೆ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಕಾರೊಂದು 300 ಅಡಿ ಪ್ರಪಾತಕ್ಕೆ ಉರುಳಿ ಬಿದ್ದಿರುವ ಘಟನೆ ಚಿಕ್ಕಮಗಳೂರು ತಾಲೂಕಿನ ಕಲ್ಲುದೇವರ ಎಸ್ಟೇಟ್ನಲ್ಲಿ ನಡೆದಿದೆ. ಕಾರಿನಲ್ಲಿದ್ದ ಲಕ್ಕಪ್ಪ(60) ಎಂಬಾತ ಸ್ಥಳದಲ್ಲಿಯೇ ಮೃತಪಟ್ಟಿದ್ದರೆ, ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಲಕ್ಕಪ್ಪ ಚಿಕ್ಕಮಗಳೂರು ತಾಲೂಕಿನ ಹರಿಹರದ ಹಳ್ಳಿ ನಿವಾಸಿಯಾಗಿದ್ದಾರೆ. ಗಂಭೀರವಾಗಿ ಗಾಯಾಗೊಂಡವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಈ ಸಂಬಂಧ ಗ್ರಾಮಾಂತರ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಮಾಜಿ ನಕ್ಸಲ್ ‌ನಿಲಗುಳಿ ಪಧ್ಮನಾಭ ಜೈಲಿನಿಂದ ಬಿಡುಗಡೆ..!

Tuesday, September 18th, 2018
jail

ಚಿಕ್ಕಮಗಳೂರು: ಮಾಜಿ ನಕ್ಸಲ್ ‌ನಿಲಗುಳಿ ಪಧ್ಮನಾಭರನ್ನು ನಾಲ್ಕು ತಿಂಗಳ‌ ಬಳಿಕ‌ ಬೆಳಗಾವಿ ಜಿಲ್ಲೆಯ ಕೇಂದ್ರ ಕಾರಾಗೃಹದಿಂದ ಬಿಡುಗಡೆ ಮಾಡಲಾಗಿದೆ. ಕುಂದಾಪುರ ತಾಲೂಕಿನ ಮಡಮಕ್ಕಿ ಬಳಿ‌ ಸೇತುವೆ ಧ್ವಂಸ, ನಕ್ಸಲ್ ಬ್ಯಾನರ್ ಕಟ್ಟಿದ ಆರೋಪ ಮತ್ತು ಕುದುರೆಮುಖದಲ್ಲಿ ವ್ಯಕ್ತಿ ಮೇಲೆ‌ ಹಲ್ಲೆ ಪ್ರಕರಣದಲ್ಲಿ ಬಂಧಿತನಾಗಿದ್ದ ಪಧ್ಮನಾಭರನ್ನು ಬಂಧಿಸಲಾಗಿತ್ತು. ಈ ಪ್ರಕರಗಳಲ್ಲೀಗ ಕುಂದಾಪುರ, ಚಿಕ್ಕಮಗಳೂರು ನ್ಯಾಯಾಲಯ ನಿರೀಕ್ಷಣಾ ಜಾಮೀನು ನೀಡಿದೆ. ಗೌರಿಲಂಕೇಶ್ ನೇತೃತ್ವದಲ್ಲಿ, ನಕ್ಸಲ್ ಶರಣಾಗತಿ ಪ್ಯಾಕೇಜ್ ಅಡಿಯಲ್ಲಿ ನಿಲಗುಳಿ ಪಧ್ಮನಾಭ ಚಿಕ್ಕಮಗಳೂರು ಜಿಲ್ಲಾಡಳಿತದ ಮುಂದೆ ಶರಣಾಗಿದ್ದರು. ಈ ಮೂಲಕ […]

ಚಾರ್ಮಾಡಿ ಘಾಟ್​ನಲ್ಲಿ ಟ್ರಾಫಿಕ್ ಜಾಮ್..!

Saturday, August 18th, 2018
charmadi-ghat

ಚಿಕ್ಕಮಗಳೂರು: ಲಾರಿಯೊಂದು ಕೆಟ್ಟು ನಿಂತ ಪರಿಣಾಮ ಮೂಡಿಗೆರೆ ತಾಲೂಕಿನಲ್ಲಿರುವ ಚಾರ್ಮಾಡಿ ಘಾಟ್ನಲ್ಲಿ ಟ್ರಾಫಿಕ್ ಜಾಮ್ ಉಂಟಾಗಿ ಸುಮಾರು 5 ಕಿಮೀ‌ ವರೆಗೂ ವಾಹನಗಳು ಸಾಲು ಗಟ್ಟಿ ನಿಂತಿವೆ. ವಾಹನಗಳು ಕೊಟ್ಟಿಗೆಹಾರದ ಬಳಿ ವಾಪಸ್ ‌ತೆರಳುತ್ತಿವೆ. ದಟ್ಟ ಮಂಜು ಹಾಗೂ ತುಂತುರು ಮಳೆಯಿಂದಾಗಿ ಪ್ರಯಾಣಿಕರು ಕಂಗಾಲಾಗಿದ್ದು, ಮಂಗಳೂರು-ಧರ್ಮಸ್ಥಳ ಕಡೆ ತೆರಳುವ ಪ್ರಯಾಣಿಕರು ಪರದಾಟ ನಡೆಸುತ್ತಿದ್ದಾರೆ. ಶಿರಾಡಿ‌ ಘಾಟ್ ರಸ್ತೆ ಬಂದ್ ಹಿನ್ನೆಲೆಯಲ್ಲಿ ಪರ್ಯಾಯವಾಗಿ ಚಾರ್ಮಾಡಿಯಲ್ಲಿ ಭಾರೀ ವಾಹನಗಳು ಸಂಚರಿಸುತ್ತಿವೆ. ಹೀಗಾಗಿ ವಾಹನದಟ್ಟಣೆಯೂ ಹೆಚ್ಚಿದೆ.

ಚಿಕ್ಕಮಗಳೂರಲ್ಲಿ ಕಾರದ ಪುಡಿ ಎರಚಿ ಮಹಿಳೆಯ ಬರ್ಬರ ಹತ್ಯೆ

Saturday, August 18th, 2018
dies-lady

ಚಿಕ್ಕಮಗಳೂರು: ಕಾರದ ಪುಡಿ ಎರಚಿ ಮಹಿಳೆಯೊಬ್ಬರನ್ನು ಕೊಲೆ ಮಾಡಿರುವ ಘಟನೆ ತರೀಕೆರೆ ತಾಲೂಕಿನಲ್ಲಿ ದುಗ್ಲಾಪುರ ಕ್ವಾಟ್ರಸ್ ಬಳಿ ನಡೆದಿದೆ. ಶಾರದಮ್ಮ (55) ಕೊಲೆಯಾದ ಮಹಿಳೆ ಎಂದು ತಿಳಿಸದು ಬಂದಿದೆ. ಶಾರದಮ್ಮ ಮೇಲೆ ಕಲ್ಲು ಎತ್ತಿ ಹಾಕಿ ನಿನ್ನೆ ರಾತ್ರಿ ಕೊಲೆ ಮಾಡಲಾಗಿದೆ. ಮಗಳ ಮಕ್ಕಳೊಂದಿಗೆ ಮೃತ ಶಾರದಮ್ಮ ವಾಸವಾಗಿದ್ದರು. ನಿನ್ನೆ ಶಾರದಮ್ಮಳನ್ನು ಬಿಟ್ಟು ತಾಯಿ ಮನೆಗೆ ಮಕ್ಕಳು ಹೋಗಿದ್ದಾಗ ಕೊಲೆ ನಡೆದಿದೆ. ಇನ್ನು ಮೃತ ಶಾರದಮ್ಮ ಬಡ್ಡಿ ವ್ಯವಹಾರ ನಡೆಸುತ್ತಿದ್ದರು. ಹಣದ ವ್ಯವಹಾರದ ಹಿನ್ನೆಲೆಯಲ್ಲಿ ಹತ್ಯೆ ನಡೆದಿರಬಹುದು […]

ಜಿಲ್ಲೆಯಲ್ಲಿ ಮಳೆ ನಿಂತರೂ ನಿಲ್ಲದ ಭೂಕುಸಿತ..!

Saturday, August 18th, 2018
chik-magaluru

ಚಿಕ್ಕಮಗಳೂರು: ಮಲೆನಾಡಿನಲ್ಲಿ ಮಳೆ ನಿಂತರು ಭೂ ಕುಸಿತ ನಿಲ್ಲುತ್ತಿಲ್ಲ. ಮಳೆ ನಿಂತ ಬಳಿಕ ಮಲೆನಾಡಲ್ಲಿ ಭಾರೀ ಗಾಳಿ ಬೀಸುತ್ತಿದೆ. ಕೊಪ್ಪ ತಾಲೂಕಿನ ಶಾನುವಳ್ಳಿಯಲ್ಲಿ ಬಾವಿ ಕುಸಿದು ಸುರಂಗ ಸೃಷ್ಟಿಯಾಗಿದೆ. ಪ್ರೇಮಾ ಶೆಟ್ಟಿ ಎಂಬುವರಿಗೆ ಸೇರಿದ ಬಾವಿ ಕುಸಿದಿದ್ದು, ಸುರಂಗ ನಿರ್ಮಾಣವಾಗಿದೆ.

ಜಿಲ್ಲೆಯಲ್ಲಿ ಭೂ ಕುಸಿತ..ಸಂಪರ್ಕ ಕಳೆದುಕೊಂಡ ಗ್ರಾಮಗಳು!

Thursday, August 16th, 2018
chikmagaluru

ಚಿಕ್ಕಮಗಳೂರು: ಮಲೆನಾಡಿನಲ್ಲಿ ಮಳೆಯ ಆರ್ಭಟಕ್ಕೆ ಕೆಲವೆಡೆ ಭೂ ಕುಸಿತವಾಗಿದ್ದು, ಕಳಸ-ಹೊರನಾಡು, ಕೊಪ್ಪ, ಎನ್.ಆರ್.ಪುರ, ಮೇಲ್ಪಾಲ್, ಹೊದಸಾಳು, ಕೆರೆಹಕ್ಲು ಸೇರಿದಂತೆ ಹಲವು ಗ್ರಾಮಗಳು ಸಂಪರ್ಕ ಕಳೆದುಕೊಂಡಿವೆ. ನಗರದ ಹೆಬ್ಬಾಳೆ ಸೇತುವೆ ಮತ್ತೆ ಮುಳುಗಿದ್ದು 45 ದಿನದಲ್ಲಿ 15 ನೇ ಬಾರಿ ಮುಳುಗಿದೆ. ಹೆಬ್ಬಾಳೆ ಸೇತುವೆ ಕುದುರೆಮುಖ, ಕಳಸದ ಭಾಗದಲ್ಲಿ ಮಳೆ ಆಗುತ್ತಲೇ ಇರುವುದರಿಂದ ಭದ್ರೆಗೆ‌ ಅಪಾರ ಪ್ರಮಾಣದ ನೀರು ಹರಿದು ಬರುತ್ತಿದ್ದು, ಕಳಸ-ಹೊರನಾಡು ಸಂಪರ್ಕ ಸೇತುವೆಯನ್ನು ಸಂಪೂರ್ಣ ಮುಳುಗುವಂತೆ ಮಾಡಿದೆ. ಇನ್ನೂ ಮಳೆಯಿಂದ ಮೂರು ದಿನದಲ್ಲಿ ನಾಲ್ಕೈದು ಕಡೆ […]

ಚಿಕ್ಕಮಗಳೂರಿನಲ್ಲಿ ಉಕ್ಕಿ ಹರಿಯುತ್ತಿರುವ ನದಿಗಳು..ಅನೇಕ ಮಾರ್ಗಗಳಲ್ಲಿ ಸಂಚಾರ ಸ್ಥಗಿತ!

Tuesday, August 14th, 2018
chikmagaluru

ಚಿಕ್ಕಮಗಳೂರು: ವಾರದಿಂದ ಸುರಿಯುತ್ತಿರುವ ಮಹಾ ಮಳೆಯಿಂದ ಮಲೆನಾಡಿನ ಕಳಸ ಹೆಬ್ಬಾಳೆ ಸೇತುವೆ ಹಾಗೂ ನಿಡುವಾಳೆ ಸೇತುವೆ ಸಂಪೂರ್ಣ ಮುಳುಗಡೆ ಗೊಂಡಿದ್ದು, ತುಂಗಾ, ಭದ್ರಾ, ಹೇಮಾವತಿ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ಮಲೆನಾಡಲ್ಲಿ ಮಳೆ ಅಬ್ಬರಕ್ಕೆ ಕಳಸ ಹೆಬ್ಬಾಳೆ ಸೇತುವೆ ಸಂಪೂರ್ಣ ಮುಳುಗಡೆ ಗೊಂಡಿವೆ. ಸೇತುವೆ ಕಾಣದಂತೆ ನೀರು ಹರಿಯುತ್ತಿದ್ದು, ನಿಡುವಾಳೆ ಸೇತುವೆ ಕೂಡ ಸಂಪೂರ್ಣ ಮುಳುಗಡೆ ಗೊಂಡಿದೆ. ಸೇತುವೆ ಮೇಲೆ ಭಾರಿ ಪ್ರಮಾಣದಲ್ಲಿ ನೀರು ಹರಿಯುತ್ತಿರುವುದರಿಂದ ಕೊಟ್ಟಿಗೆಹಾರ-ಬಾಳೆಹೊನ್ನೂರು ಸಂಪರ್ಕ ಕಡಿತವಾಗಿದೆ.ಶೃಂಗೇರಿ ಸಮೀಪದ ‌ಕೆರೆಕಟ್ಟೆ ರಸ್ತೆಯ ಮೇಲೆ‌ […]

ಭಾರಿ ಮಳೆ.. ಚಿಕ್ಕಮಗಳೂರಿನಲ್ಲಿ ಗುಡ್ಡ ಕುಸಿತ!

Tuesday, August 14th, 2018
heavy-rain-chikmagaluru

ಚಿಕ್ಕಮಗಳೂರು: ತಾಲೂಕಿನ ಕೊಳಗಾಮೆ ಸಮೀಪ ಗುಡ್ಡ ಕುಸಿದಿದ್ದ ಕಾರಣ ಕೆಡಿಪಿ ಸಭೆಯಲ್ಲಿ ಪಾಲ್ಗೊಳ್ಳಲು ಆಗಮಿಸುತ್ತಿದ್ದ ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ರಸ್ತೆಯಲ್ಲಿಯೇ ಕೆಲಕಾಲ ಕಾಯುವಂತಾಯಿತು. ಕೆ.ಜೆ.ಜಾರ್ಜ್ ಕಳೆದ ರಾತ್ರಿ ಚಿಕ್ಕಮಗಳೂರು ಜಿಲ್ಲೆಯ ಗರಿಗೆಖಾನ್ ಎಸ್ಟೇಟ್ನಲ್ಲಿ ವಾಸ್ತವ್ಯವಾಗಿದ್ದರು. ಇಂದು ನಗರದಲ್ಲಿ ಆಯೋಜಿಸಲಾಗಿದ್ದ ಕೆಡಿಪಿ ಸಭೆಗೆ ಆಗಮಿಸುತ್ತಿದ್ದ ವೇಳೆ ಗುಡ್ಡ ಕುಸಿದಿದೆ. ಇದರಿಂದ ಸಚಿವರು ಅಲ್ಲೇ ಕೆಲಕಾಲ ಕಾಯುಂತಾಯಿತು. ನಂತರ ಸಚಿವರನ್ನು ಬೇರೆ ವಾಹನದಲ್ಲಿ ಕಚೇರಿಗೆ ಕಳುಹಿಸಲಾಯಿತು. ಇನ್ನು ಮಲೆನಾಡಿನಲ್ಲಿ ಮಳೆಯ ಆರ್ಭಟ ಮುಂದುವರೆದಿದ್ದು, ತುಂಗಾ ನದಿ ಅಪಾಯದಮಟ್ಟ ಮೀರಿ […]