Blog Archive

ಗುರುವಾರದಂದು ಭಾರಿ ತಲ್ಲಣ ಮೂಡಿಸಿದ್ದ ಷೇರು ಮಾರುಕಟ್ಟೆ..ಶುಕ್ರವಾರ ಹೂಡಿಕೆದಾರರಿಗೆ ಶುಭದಾಯಕ

Friday, October 12th, 2018
share-market

ನವದೆಹಲಿ: ಗುರುವಾರದಂದು ಭಾರಿ ತಲ್ಲಣ ಮೂಡಿಸಿದ್ದ ಭಾರತೀಯ ಷೇರು ಮಾರುಕಟ್ಟೆ, ಶುಕ್ರವಾರ ಹೂಡಿಕೆದಾರರಿಗೆ ಶುಭದಾಯಕವಾಗಿ ಆರಂಭಗೊಂಡಿದೆ. ದಿನದ ಆರಂಭದಲ್ಲೇ ಸೆನ್ಸೆಕ್ಸ್ 650ಕ್ಕೂ ಹೆಚ್ಚು ಅಂಕ ಜಿಗಿತ ಕಂಡಿದ್ದು, ಹೂಡಿಕೆದಾರರ ಮೊಗದಲ್ಲಿ ಮಂದಹಾಸ ಮೂಡಿಸಿದೆ. ಜೊತೆಯಲ್ಲಿ ನಿಫ್ಟಿ ಸಹ ಕೊಂಚ ಚೇತರಿಕೆಯನ್ನು ಪಡೆದು, 10,350ರ ಅಸುಪಾಸಿನಲ್ಲಿ ಆರಂಭ ಪಡೆದಿದೆ. ಕಳೆದ ಕೆಲ ದಿನಗಳಲ್ಲಿ ಕೆಟ್ಟ ಪರಿಸ್ಥಿತಿ ಅನುಭವಿಸುತ್ತಿದ್ದ ಅದಾನಿ ಪೋರ್ಟ್, ವೇದಾಂತ, ಇಂಡಸ್ಸಿಂಡ್ ಬ್ಯಾಮಕ್, ರಿಲಯನ್ಸ್,ಆಕ್ಸಿಸ್ ಬ್ಯಾಂಕ್, ಟಾಟಾ ಸ್ಟೀಲ್, ಏಷ್ಯನ್ ಪೈಂಟ್ಸ್, ಹೀರೋ ಮೋಟೋ ಕಾರ್ಪ್ಗಳು ಚೇತರಿಕೆಯ […]

ಪೊಲೀಸ್ ಇಲಾಖೆ: ಒಂದೇ ಬಾರಿಗೆ 25 ಸಾವಿರ ಕಾನ್ಸ್​ಟೇಬಲ್ಸ್​ಗಳಿಗೆ ಹೆಡ್​ ಪಿಸಿಯಾಗಿ ಬಡ್ತಿ

Tuesday, October 9th, 2018
police-u-p

ನವದೆಹಲಿ: ಉತ್ತರಪ್ರದೇಶ ಪೊಲೀಸ್ ಇಲಾಖೆಯಲ್ಲಿ ದೊಡ್ಡ ಇತಿಹಾಸವೇ ಸೃಷ್ಟಿಯಾಗಿದೆ. ಒಂದೇ ಬಾರಿಗೆ 25 ಸಾವಿರ ಕಾನ್ಸ್ಟೇಬಲ್ಸ್ಗಳಿಗೆ ಹೆಡ್ ಪಿಸಿಯಾಗಿ ಬಡ್ತಿ ನೀಡಿ ಆದೇಶ ಹೊರಡಿಸಿದೆ. ಈ ಮೂಲಕ ಮಾಸ್ ಪ್ರಮೋಷನ್ ನೀಡಿ ಹೊಸ ಇತಿಹಾಸವನ್ನೇ ಬರೆದಿದೆ. ಇದು 25091 ಪೊಲೀಸ್ ಪೇದೆಗಳ ಮೊಗದಲ್ಲಿ ಸಂತಸ ಮೂಡಿಸಿದೆ. ಇದೇ ಖುಷಿಗೆ ಹೆಡ್ ಪಿಸಿಯಾಗಿ ಬಡ್ತಿ ಪಡೆದಿರುವವರು ಸ್ಪೀಟ್ ಹಂಚಿ ಸಂತಸ ಪಡುತ್ತಿದ್ದಾರೆ. ಇದು ಉತ್ತರ ಪ್ರದೇಶ ಇತಿಹಾಸದಲ್ಲಿ ಮೊದಲು ಎನ್ನಲಾಗುತ್ತಿದೆ. ಈ ವಿಷಯವನ್ನ ಉತ್ತರಪ್ರದೇಶ ಪೊಲೀಸ್ ಇಲಾಖೆ ತನ್ನ […]

ರೂಪಾಯಿ ಮೌಲ್ಯ ಕುಸಿತ: ರೂಪಾಯಿ ಕುಸಿತಕ್ಕೆ ಷೇರು ಮಾರುಕಟ್ಟೆ ವಿಚಲಿತ

Wednesday, October 3rd, 2018
rupees-rate

ನವದೆಹಲಿ: ಭಾರತದ ರೂಪಾಯಿ ಮೌಲ್ಯ ಮತ್ತೆ ಮುಗ್ಗರಿಸಿದ್ದು, ಈ ಬಾರಿ ಇದು ದಾಖಲೆಯ ಕುಸಿತವನ್ನು ಕಂಡಿದೆ. ದಿನದ ಆರಂಭದಲ್ಲೇ ರೂಪಾಯಿ ಕುಸಿತಕ್ಕೆ ಷೇರು ಮಾರುಕಟ್ಟೆ ಸಹ ವಿಚಲಿತವಾಗಿದೆ. ಇದೇ ಮೊದಲ ಬಾರಿಗೆ ರೂಪಾಯಿ ಮೌಲ್ಯ 73ರ ಗಡಿ ತಲುಪಿದ್ದು ಈ ಮೂಲಕ ದಾಖಲೆಯ ಕುಸಿತವಾಗಿದೆ. ದಿನದ ಆರಂಭಕ್ಕೆ 34 ಪೈಸೆ ಇಳಿಕೆಯಾಗುವ ಮೂಲಕ ರೂಪಾಯಿ ಮೌಲ್ಯ 73.33 ರೂ.ಗೆ ಬಂದು ನಿಂತಿದೆ. ಇದರ ಜೊತೆಗೆ ಅತ್ತ ಸೆನ್ಸೆಕ್ಸ್ 200 ಅಂಕ ಇಳಿಕೆಯಾಗಿ ಆರಂಭದಲ್ಲೇ ಹೂಡಿಕೆದಾರರನ್ನು ಕಂಗಾಲು ಮಾಡಿದೆ. […]

ನರೇಂದ್ರ ಮೋದಿಯವರಿಗೆ ಇಂದು 68ನೇ ಹುಟ್ಟು ಹಬ್ಬದ ಸಂಭ್ರಮ

Monday, September 17th, 2018
narendra-modi

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರಿಗೆ ಇಂದು ಹುಟ್ಟು ಹಬ್ಬದ ಸಂಭ್ರಮ. 68ನೇ ವಸಂತಕ್ಕೆ ಕಾಲಿಟ್ಟ ಪ್ರಧಾನಿ ಮೋದಿ ಅವರಿಗೆ ದೇಶದೆಲ್ಲೆಡೆಯಿಂದ ಶುಭಾಶಯಗಳ ಸುರಿಮಳೆಯಾಗುತ್ತಿದೆ. ಅಭಿಮಾನಿಗಳು, ಪಕ್ಷದ ಕಾರ್ಯಕರ್ತರು, ರಾಜಕೀಯ ಮುಖಂಡರು, ಗಣ್ಯರು ಸೋಶಿಯಲ್ ಮೀಡಿಯಾಗಳ ಮೂಲಕ ಪ್ರಧಾನಿಗೆ ಹುಟ್ಟುಹಬ್ಬದ ಶುಭಾಶಯ ಕೋರುತ್ತಿದ್ದಾರೆ. ಇನ್ನು ಪ್ರಧಾನಿ ನರೇಂದ್ರ ಮೋದಿ ತಾವು ಪ್ರತಿನಿಧಿಸುತ್ತಿರುವ ಲೋಕಸಭಾ ಕ್ಷೇತ್ರ ವಾರಣಾಸಿಯಲ್ಲಿ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಇನ್ನು ಇಲ್ಲಿ ಶಾಲಾ ಮಕ್ಕಳೊಂದಿಗೆ ಒಂದು ದಿನವನ್ನು ಪ್ರಧಾನಿ ಕಳೆಯಲಿದ್ದಾರೆ. ಕೆಲ ಅಧಿಕೃತ ಮಾಹಿತಿಗಳ ಪ್ರಕಾರ […]

ಮಹಾಮಳೆಗೆ ಕೇರಳವೇ ಮಾಯ..ತಿಂಗಳ ವೇತನ ನೀಡಿದ ವೆಂಕಯ್ಯ ನಾಯ್ಡು!

Monday, August 20th, 2018
venkaih-naidu

ನವದೆಹಲಿ: ಮಹಾ ಮಳೆಗೆ ಕೇರಳವೇ ಮಾಯವಾಗಿದ್ದು, ಅಲ್ಲಿನ ಜನರ ಬದುಕು ಅಯೋಮಯವಾಗಿದೆ. ಕೇರಳಿಗರಿಗಾಗಿ ದೇಶಾದ್ಯಂತ ನೆರವಿನ ಮಹಾಪೂರವೇ ಹರಿದುಬರುತ್ತಿದೆ. ಅಂತೆಯೇ ಇದೀಗ ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಸೇರಿದಂತೆ ಹಲವರು ತಮ್ಮ ತಿಂಗಳ ಸಂಬಳ ನೀಡಲು ನಿರ್ಧರಿಸಿದ್ದಾರೆ. ಕೇರಳ ಪ್ರವಾಹ ಸಂಬಂಧ ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು ರಾಜ್ಯಸಭಾ ಉಪ ಸಭಾಪತಿ ಹರಿವಂಶ್ ಹಾಗೂ ರಾಜ್ಯಸಭೆ, ಉಪ ರಾಷ್ಟ್ರಪತಿ ಸಚಿವಾಲಯದ ಇತರ ಅಧಿಕಾರಿಗಳ ಜೊತೆ ಸಭೆ ನಡೆಸಿದ ಈ ವೇಳೆ ಸಂಬಳ ನೀಡುವ ಬಗ್ಗೆ ತೀರ್ಮಾನಿಸಿದ್ದಾರೆ. […]

ಮಾಜಿ ಪ್ರಧಾನಿ ವಾಜಪೇಯಿಗೆ ಗೀತ ನಮನ..!

Friday, August 17th, 2018
vajpayee-funeral

ನವದೆಹಲಿ: ನಿನ್ನೆ ನಿಧನರಾದ ವಾಜಪೇಯಿ ಅವರ ಅಂತ್ಯಸಂಸ್ಕಾರ ಸಂಜೆ 4 ಗಂಟೆಗೆ ರಾಷ್ಟ್ರೀಯ ಸ್ಮೃತಿ ಸ್ಥಳದಲ್ಲಿ ನಡೆಯಲಿದೆ. ಬೆಳಗ್ಗೆಯಿಂದ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಅವರ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಈಡಲಾಗಿತ್ತು. ಸುಮಾರು ಎರಡು ಗಂಟೆ ಸುಮಾರಿಗೆ ಅವರ ಪಾರ್ಥಿವ ಶರೀರದ ಅಂತಿಮಯಾತ್ರೆ ಆರಂಭಗೊಂಡಿದ್ದು, ಸಂಜೆ 3;50 ರವೇಳೆಗೆ ಸ್ಮೃತಿ ಸ್ಥಳವನ್ನ ತಲುಪಲಿದೆ.

ನನಗೆ ಈಗಾಗಲೇ ಮದುವೆಯಾಗಿದೆ..ಯುವತಿಯೊಂದಿಗೆ ಅಲ್ಲ ಪಕ್ಷದೊಂದಿಗೆ: ರಾಹುಲ್ ಗಾಂಧಿ

Tuesday, August 14th, 2018
rahul-congress

ನವದೆಹಲಿ: ದೇಶದ ಮೋಸ್ಟ್ ಎಲಿಜೆಬಲ್ ಬ್ಯಾಚುಲರ್‌ಗಳ ಪೈಕಿ ಕಾಂಗ್ರೆಸ್ ರಾಷ್ಟ್ರಾಧ್ಯಕ್ಷ ರಾಹುಲ್ ಗಾಂಧಿ ಕೂಡ ಒಬ್ಬರು. 47 ರಾಹುಲ್ ಮದುವೆ ಸುತ್ತ ಈವರೆಗೆ ಸಾಕಷ್ಟು ಗಾಳಿಸುದ್ದಿಗಳು ಹರಿದಾಡಿವೆ. ಮದುವೆಗೆ ಸಂಬಂಧಿಸಿದಂತೆ ಈಗಾಗಲೇ ಅನೇಕ ಸಲ ಪ್ರಶ್ನೆ ಉದ್ಭವವಾಗಿದ್ದು, ಅದರಿಂದ ಅವರು ತಪ್ಪಿಸಿಕೊಂಡಿದ್ದಾರೆ. ಆದರೆ, ಇದೀಗ ಪತ್ರಕರ್ತನೊಬ್ಬ ಕೇಳಿರುವ ಪ್ರಶ್ನೆಗೆ ನನಗೆ ಈಗಾಗಲೇ ಮದುವೆಯಾಗಿದೆ ಎಂಬ ಉತ್ತರ ನೀಡಿದ್ದಾರೆ. ಆದರೆ ನಾನು ಮದುವೆಯಾಗಿದ್ದು ಯುವತಿಯೊಂದಿಗೆ ಅಲ್ಲ ಬದಲಿಗೆ ಪಕ್ಷದೊಂದಿಗೆ ಎಂದಿದ್ದಾರೆ. ಎರಡು ದಿನಗಳ ಹೈದರಾಬಾದ್ ಪ್ರವಾಸದಲ್ಲಿರುವ ರಾಹುಲ್ ಗಾಂಧಿಗೆ […]

ವಿಶ್ವಾಸಮತ ಸಾಧಿಸುವಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಯಶಸ್ವಿ..!

Saturday, July 21st, 2018
narendra-modi

ನವದೆಹಲಿ: ಲೋಕಸಭೆಯಲ್ಲಿ ಶುಕ್ರವಾರ ನಿರೀಕ್ಷೆಯಂತೆ ವಿಶ್ವಾಸಮತ ಸಾಧಿಸುವಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಯಶಸ್ವಿಯಾಗಿದೆ. ಈ ವೇಳೆ ಪ್ರಧಾನಿ ಮೋದಿಯವರು ತಮ್ಮ ಭಾಷಣದಲ್ಲಿ ಪ್ರತಿಪಕ್ಷಗಳ ಆರೋಪಕ್ಕೆ ತಿರುಗೇಟು ನೀಡಿದರು. ವಿಶ್ವಾಸಮತಕ್ಕೆ 226 ಮಾತ್ರ ಬೇಕಾಗಿತ್ತು. ಎನ್ಡಿಎ 325 ಹಾಗೂ ಪ್ರತಿಪಕ್ಷಗಳು ಕೇವಲ126 ಮತ ಪಡೆದವು. ಹೀಗಾಗಿ ಮೋದಿ ಸರ್ಕಾರ ನಿರೀಕ್ಷೆಯಂತೆ ವಿಶ್ವಾಸ ಮತ ಪರೀಕ್ಷೆಯಲ್ಲಿ ಪಾಸಾಯಿತು. ಒಬ್ಬ ಮೋದಿಯನ್ನು ಅಧಿಕಾರದಿಂದ ಕೆಳಗಿಳಿಸಲು ಇಷ್ಟೊಂದು ಪ್ರಯತ್ನ ಮಾಡುವ ಅಗತ್ಯತೆ ಇತ್ತಾ ಎಂದು ಪ್ರಧಾನಿ ಪ್ರಶ್ನಿಸಿದರು. ಇನ್ನು ಸದನದಲ್ಲಿ […]

ಸದ್ಯದಲ್ಲೇ 100 ರೂ. ಮುಖಬೆಲೆಯ ಹೊಸ ನೋಟ ಜಾರಿಗೆ..!

Thursday, July 19th, 2018
currency

ನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್ ಸದ್ಯದಲ್ಲೇ 100 ರೂ. ಮುಖಬೆಲೆಯ ಹೊಸ ನೋಟನ್ನು ಜಾರಿಗೆ ತರಲಿದೆ. ಈಗಿರುವ 100 ರೂ. ನೋಟಿಗಿಂತಲೂ ಚಿಕ್ಕದ್ದಾಗಿ, 10 ರೂ. ನೋಟಿಗಿಂತ ಕೊಂಚ ದೊಡ್ಡದಾಗಿರುವ ನೋಟನ್ನು ಆರ್ಬಿಐ ಪರಿಚಯಿಸಿದೆ. ಹೊಸ ನೋಟನ್ನು ಜಾರಿಗೆ ತರುತ್ತಿರುವ ಆರ್ಬಿಐ ಹಳೆಯ ನೂರರ ನೋಟನ್ನು ಹಿಂಪಡೆಯುವ ಯೋಚನೆ ಇಲ್ಲ ಎಂದು ತಿಳಿಸಿದೆ. ಈಗಾಗಲೇ ಹೊಸ ನೋಟಿನ ವಿನ್ಯಾಸ ಅಂತಿಮವಾಗಿದ್ದು, ಮುದ್ರಣ ಕಾರ್ಯ ಸದ್ದಿಲ್ಲದೇ ನಡೆಯುತ್ತಿದೆ. ಮುಂದಿನ ತಿಂಗಳು ಇಲ್ಲವೇ ಸೆಪ್ಟೆಂಬರ್ ನಲ್ಲಿ ಹೊಸ ನೋಟು ಜನಸಾಮಾನ್ಯರ […]

ಸೌತ್​ ಕೊರಿಯಾ ಅಧ್ಯಕ್ಷರ ಜತೆ ಮೋದಿ ಚರ್ಚೆ..ಸ್ಮಾರ್ಟ್​ ಸಿಟಿಗೆ ನೆರವಿನ ಭರವಸೆ

Monday, July 9th, 2018
narendra-modi

ನವದೆಹಲಿ: ಮೂರು ದಿನಗಳ ಭಾರತದ ಪ್ರವಾಸದಲ್ಲಿರುವ ಸೌತ್ ಕೊರಿಯಾ ಅಧ್ಯಕ್ಷ ಮೂನ್ ಜೇ-ಇನ್ ಇಂದು ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಹಲವು ವಿಷಯಗಳ ಕುರಿತು ಚರ್ಚೆ ನಡೆಸಿದರು. ನೋಯ್ಡಾದಲ್ಲಿ ಹೊಸದಾಗಿ ಆರಂಭಗೊಳ್ಳುತ್ತಿರುವ ದೇಶದ ಅತಿದೊಡ್ಡ ಮೊಬೈಲ್ ಕಂಪನಿ ಉದ್ಘಾಟನೆ ಮಾಡಲು ಇಬ್ಬರು ನಾಯಕರು ಪ್ರಯಾಣ ಬೆಳೆಸಿದರು. ಇದಕ್ಕೂ ಮೊದಲು ಜೇ-ಇನ್ ರಾಜ್ಘಾಟ್ನಲ್ಲಿ ಮಹಾತ್ಮ ಗಾಂಧಿ ಸಮಾಧಿಗೆ ಭೇಟಿ ನೀಡಿ ಪುಷ್ಪ ನಮನ ಸಲ್ಲಿಸಿದರು. ಇದಕ್ಕೂ ಮೊದಲು ವಿದೇಶಾಂಗ ವ್ಯವಹಾರಗಳ ಖಾತೆ ಸಚಿವೆ ಸುಷ್ಮಾ ಸ್ವರಾಜ್ ಹಲವು ವಿಷಯಗಳ ಕುರಿತು […]