Blog Archive

ಓಮ್ನಿ ವಾಹನದಲ್ಲಿ ಅಕ್ರಮ ಗೋಸಾಗಟ, ಆರೋಪಿಗಳು ಪರಾರಿ

Tuesday, July 28th, 2020
cattle transport

ಬಂಟ್ವಾಳ: ಅಕ್ರಮವಾಗಿ  ಓಮ್ನಿ ವಾಹನದಲ್ಲಿ ಗೋಸಾಗಟ ನಡೆಸುತ್ತಿದ್ದ ತಂಡವನ್ನು ಸೋಮವಾರ ರಾತ್ರಿ ಬಂಟ್ವಾಳ ನಗರ ಪೊಲೀಸರು ತಡೆದಿದ್ದು, ಓಮ್ನಿ ಮತ್ತು ಒಂದು ದನವನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಮಾರ್ನಬೈಲು ಎಂಬಲ್ಲಿ ಒಮ್ನಿ ಕಾರೊಂದು ವೇಗವಾಗಿ ಬರುತ್ತಿದ್ದು ಪೊಲೀಸರು ನಿಲ್ಲಿಸಲು ಸೂಚನೆ ನೀಡಿದಾಗ ನಿಲ್ಲಿಸಿದೆ ನಂದವಾರ ರಸ್ತೆಯ ಮೂಲಕ ವೇಗವಾಗಿ ಕಾರು ಮುಂದೆ ಹೋಗಿದೆ. ಪೊಲೀಸರು ವಾಹನವನ್ನು ಬೆನ್ನಟ್ಟಿ ಕೊಂಡು ಹೋದಾಗ ನಂದಾವರ ಎಂಬಲ್ಲಿ ಅಂಗಡಿಯೊಂದಕ್ಕೆ ಕಾರು ಡಿಕ್ಕಿ ಹೊಡೆದು ನಿಲ್ಲಿಸಿ ಆರೋಪಿಗಳು ಪರಾರಿಯಾಗಿದ್ದಾರೆ. ವಾಹನವನ್ನು ಪರಿಶೀಲಿಸಿದಾಗ ವಾಹನದೊಳಗೆ ಒಂದು […]

ಕೊರೋನ ಸೋಂಕು ಜುಲೈ 20 : ದಕ್ಷಿಣ ಕನ್ನಡ 89, ಉಡುಪಿ ಜಿಲ್ಲೆ 99, ಕಾಸರಗೋಡು 28

Tuesday, July 21st, 2020
CORONA

ಮಂಗಳೂರು :  ದಕ್ಷಿಣ ಕನ್ನಡ  ಜಿಲ್ಲೆಯಲ್ಲಿ ಸೋಮವಾರ  89 ಮಂದಿಯಲ್ಲಿ ಕೊರೋನ ಸೋಂಕು ಕಾಣಿಸಿದೆ. ಇದರೊಂದಿಗೆ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 3,685ಕ್ಕೆ ಏರಿಕೆಯಾಗಿದೆ. ದ.ಕ. ಜಿಲ್ಲೆಯಲ್ಲಿ ಸೋಂಕಿತರ ಪ್ರಾಥಮಿಕ ಸಂಪರ್ಕದಲ್ಲಿದ್ದ 11 ಮಂದಿ, ಶೀತ-45, ತೀವ್ರ ಉಸಿರಾಟ ತೊಂದರೆ-16, ವಿದೇಶದಿಂದ ಆಗಮಿಸಿದ ಇಬ್ಬರು, ಕಾಂಟ್ಯಾಕ್ಟ್ ಅಂಡರ್ ಟ್ರೇಸಿಂಗ್‌ನ 15 ಮಂದಿಯಲ್ಲಿ ಸೋಂಕು ಇರುವುದು ದೃಢಪಟ್ಟಿದೆ. ಜಿಲ್ಲೆಯ ವಿವಿಧ ಆಸ್ಪತ್ರೆಗಳಲ್ಲಿ ಸೋಂಕಿತರಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್ ತಿಳಿಸಿದ್ದಾರೆ. ಜಿಲ್ಲೆಯ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದ […]

ಬಂಟ್ವಾಳ : ಕೇಂದ್ರದ ಮಾಜಿ ಸಚಿವ ಹಾಗೂ ಅವರ ಪತ್ನಿಗೆ ಕೊರೋನ ಸೋಂಕು ದೃಢ

Sunday, July 5th, 2020
Bantwal Covid

ಬಂಟ್ವಾಳ : ದಕ್ಷಿಣ ಕನ್ನಡ ಜಿಲ್ಲೆಯ  ಬಂಟ್ವಾಳ ತಾಲೂಕಿನಲ್ಲಿರುವ ಕೇಂದ್ರದ ಮಾಜಿ ಸಚಿವ ಹಾಗೂ ಅವರ ಪತ್ನಿ, ಮಕ್ಕಳಿಗೆ ಕೊರೋನ ಸೋಂಕು ದೃಢಪಟ್ಟಿದೆ ಎಂದು ಹೇಳಲಾಗಿದೆ. ಈ ಬಗ್ಗೆ ಅವರ ಹಿರಿಯ ಪುತ್ರ ಸಾಮಾಜಿಕ ಜಾಲತಾಣದಲ್ಲಿ ‘ತಂದೆ ಕ್ಷೇಮವಾಗಿದ್ದಾರೆ’ ಎಂದು ತಿಳಿಸಿದ್ದಾರೆ. ತಂದೆಗೆ ಶನಿವಾರ ಕೋವಿಡ್ ತಪಾಸಣೆ ನಡೆಸಲಾಗಿದ್ದು ವರದಿ ಪಾಸಿಟಿವ್ ಬಂದಿದೆ. ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರು ಕ್ಷೇಮವಾಗಿದ್ದು ಕೊರೋನ ಸಂಬಂಧಿಸಿ ಯಾವುದೇ ರೋಗ ಲಕ್ಷಣಗಳು ಕಂಡು ಬಂದಿಲ್ಲ. ಯಾರೂ ಆತಂಕಪಡುವ ಅಗತ್ಯವಿಲ್ಲ […]

ಬಂಟ್ವಾಳ : ಅದಾಯಕ್ಕಿಂತ ಹೆಚ್ಚಿನ ಆಸ್ತಿ ಜೋಸೆಫ್ ಡೇನಿಸ್ ಮಿರಾಂಡ ನಿರೀಕ್ಷಣಾ ಜಾಮೀನು ಅರ್ಜಿ ವಜಾ 

Wednesday, June 10th, 2020
Miranda

ಬಂಟ್ವಾಳ :  ತಮ್ಮ ಸೇವಾ ಅವಧಿಯಲ್ಲಿ ನಿಗದಿತ ಆದಾಯಕ್ಕಿಂತಲೂ ಮೀರಿ ಹೆಚ್ಛಿನ ಆಸ್ತಿಗಳನ್ನು ಹೊಂದಿದ್ದಾರೆಂದು ಬಂಟ್ವಾಳ ತಾಲೂಕು ಸಹಾಯಕ ಕೃಷಿ ನಿರ್ದೇಶಕರಾಗಿದ್ದ ಜೋಸೆಫ್ ಡೇನಿಸ್ ಮಿರಾಂಡ ರವರ ವಿರುದ್ಧ  ಆಗಿನ ಭ್ರಷ್ಟಾಚಾರ ನಿಗ್ರಹದಳದ ಡಿ. ವೈ.ಎಸ್.ಪಿ. ಸುಧೀರ್ ಹೆಗ್ಡೆ ಮತ್ತು ಇನ್ಸ್ಪೆಕ್ಟರ್ ಯೋಗೀಶ್ ಕುಮಾರ್ ತಂಡ ಕೇಸು ದಾಖಲಿಸಿ ದಾಳಿ ನಡೆಸಿ ಹಲವು ಸ್ವತ್ತುಗಳನ್ನು ವಶ ಪಡಿಸಿಕೊಂಡಿದ್ದರು. 2017 ರಂದುಸುಮಾರು ಒಂದು ಕೋಟಿ ಏಳು ಲಕ್ಷದಷ್ಟು ಆದಾಯಕ್ಕಿಂತ ಹೆಚ್ಚಿನ ಆಸ್ತಿ ಪತ್ತೆಯಾದ ಬಗ್ಗೆ ವರದಿಯಾಗಿತ್ತು. ಬಂದನದ ಬೀತಿಯಿಂದ ಆರೋಪಿ ಯು […]

ಬಂಟ್ವಾಳ: ವಿದ್ಯುತ್ ಕಂಬಕ್ಕೆ ಲಾರಿ ಢಿಕ್ಕಿ, ಚಾಲಕ ಪಾರು

Friday, June 5th, 2020
lorry

ಬಂಟ್ವಾಳ: ಮರದ ದಿಮ್ಮಿಗಳನ್ನು ಹೊತ್ತ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಗಳಿಗೆ ಡಿಕ್ಕಿಯಾಗಿ ಉರುಳಿ ಬಿದ್ದ ಘಟನೆ ಬಂಟ್ವಾಳದ ಮಾರ್ನಬೈಲು ಜಂಕ್ಷನ್ ನಲ್ಲಿ ನಡೆದಿದೆ. ಘಟನೆಯಲ್ಲಿ ಲಾರಿ ಜಖಂಗೊಂಡಿದ್ದು, ಮೂರಕ್ಕೂ ಅಧಿಕ ವಿದ್ಯುತ್ ಕಂಬಗಳು ರಸ್ತೆಗೆ ಉರುಳಿಬಿದ್ದಿದೆ. ವಿದ್ಯುತ್ ತಂತಿಗಳು ಕಡಿದುಹೋಗಿ ಅಪಾರ ನಷ್ಟ ಸಂಭವಿಸಿದೆ. ಮೆಲ್ಕಾರ್ ನಿಂದ ಬೃಹತ್ ಗಾತ್ರದ ಮರಗಳನ್ನು ತುಂಬಿಸಿಕೊಂಡು ಹೋಗುತ್ತಿದ್ದ ಲಾರಿ ಬೆಳಿಗ್ಗೆ ಸುಮಾರು 5.30ರ ವೇಳೆ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯಲ್ಲಿದ್ದ ವಿದ್ಯುತ್ ಕಂಬಗಳಿಗೆ ಡಿಕ್ಕಿಹೊಡೆದಿದೆ ನಂತರ […]

ಬಂಟ್ವಾಳ: ಮನೆಗೆ ಬಂದ ಬಿಳಿ ಬಣ್ಣದ ಅಪರೂಪದ ಹೆಬ್ಬಾವು

Thursday, June 4th, 2020
ಬಂಟ್ವಾಳ:  ಮನೆಗೆ ಬಂದ ಬಿಳಿ ಬಣ್ಣದ ಅಪರೂಪದ ಹೆಬ್ಬಾವು

ಬಂಟ್ವಾಳ:  ಲಾಕ್ ಡೌನ್ ಸರಳವಾಗುತ್ತಿದ್ದಂತೆ ಬಿಳಿ ಬಣ್ಣದ ಅಪರೂಪದ ಹೆಬ್ಬಾವೊಂದು ಬಂಟ್ವಾಳ ತಾಲೂಕಿನ ಕಾವಳಕಟ್ಟೆಯ ಮನೆಯೊಂದಕ್ಕೆ ಗುರುವಾರ ಬಂದಿದ್ದು, ಉರಗತಜ್ಞ ಸ್ನೇಕ್ ಕಿರಣ್ ನೇತೃತ್ವದ ಉರಗಪ್ರೇಮಿಗಳ ತಂಡ ಹೆಬ್ಬಾವನ್ನು ಹಿಡಿದು ವಲಯ ಅರಣ್ಯಾಧಿಕಾರಿಗಳ ನಿರ್ದೇಶನದಂತೆ ಪಿಲಿಕುಳಕ್ಕೆ ಕಳುಹಿಸಿಕೊಟ್ಟಿದ್ದಾರೆ. ಅಪರೂಪದ ಬಿಳಿ ಬಣ್ಣದ ಈ ಹೆಬ್ಬಾವು ಕಾವಳಕಟ್ಟೆ ನಿವಾಸಿ ನೌಶಾದ್ ಅವರ ಮನೆಯಲ್ಲಿ ಕಂಡುಬಂದಿದ್ದು, ಈ ವಿಚಾರವನ್ನು ಸ್ನೇಕ್ ಕಿರಣ್ ಅವರ ಗಮನಕ್ಕೆ ತರಲಾಯಿತು. ಅವರು ಸ್ಥಳಕ್ಕೆ ಭೇಟಿ ನೀಡಿ ಛಾಯಾಗ್ರಾಹಕರಾದ ನಿತ್ಯಪ್ರಕಾಶ್ ಬಂಟ್ವಾಳ ಹಾಗೂ ಪ್ರಸಾದ್ ಅವರ […]

ಬಂಟ್ವಾಳದಲ್ಲಿ ಮತ್ತೆ ಮೂವರಿಗೆ ಕೋವಿಡ್ -19 ಸೋಂಕು, ಜಿಲ್ಲೆಯಲ್ಲಿ ಜನರಲ್ಲಿ ಮಡುಗಟ್ಟಿದ ಆತಂಕ

Saturday, May 9th, 2020
Bantwal Covid

ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ ಒಂದೇ ಮನೆಯ ಮೂವರಿಗೆ ಇಂದು ಕೋವಿಡ್ -19 ಸೋಂಕು ದೃಢವಾಗಿದೆ. ಇದರೊಂದಿಗೆ ದಕ್ಷಿಣ ಕನ್ನಡ ಜಿಲ್ಲೆಯ ಜನರ ಆತಂಕ ಮತ್ತಷ್ಟು ಹೆಚ್ಚಿದೆ. ಈ ಹಿಂದೆ ಸೋಂಕು ದೃಢವಾಗಿದ್ದ ಸೋಂಕಿತ ಸಂಖ್ಯೆ 578ರ ಸಂಪರ್ಕದಿಂದ ಈಗ ಮತ್ತೆ ಮೂವರಿಗೆ ಸೋಂಕು ತಾಗಿದೆ. 30 ವರ್ಷದ ಪುರುಷ, 60 ಮತ್ತು 70 ವರ್ಷದ ಇಬ್ಬರು ಮಹಿಳೆಯರಿಗೆ ಕೋವಿಡ್-19 ಸೋಂಕು ತಾಗಿರುವುದು ದೃಢಪಟ್ಟಿದೆ. ಇವರು ಮೊದಲು ಮೃತಪಟ್ಟಿದ್ದ ಬಂಟ್ವಾಳದ ಮಹಿಳೆಯ ಮಹಿಳೆಯ ದ್ವಿತೀಯ ಸಂಪರ್ಕದವರಾಗಿದ್ದಾರೆ. […]

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶುಕ್ರವಾರ ಮತ್ತೆ ಎರಡು ಕೋವಿಡ್-19 ಸೋಂಕು ಪ್ರಕರಣ ಪತ್ತೆ

Friday, May 1st, 2020
Covid 19

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶುಕ್ರವಾರ ಮತ್ತೆ ಎರಡು ಕೋವಿಡ್-19 ಸೋಂಕು ಪ್ರಕರಣಗಳು ಪತ್ತೆಯಾಗಿದೆ. ಒಬ್ಬರು ಗುರುವಾರ  ಸಾವನ್ನಪ್ಪಿದ ಮಹಿಳೆಯ ನೆರೆಮನೆಯಲ್ಲಿ ವಾಸವಿದ್ದವರು, ಇನ್ನೊಬ್ಬರು ಕೋವಿಡ್-19 ಪಾಸಿಟಿವ್ ಆಗಿದ್ದ ಮಹಿಳೆಯ ಪತಿ ಎಂದು ತಿಳಿದು ಬಂದಿದೆ. ಒಂದು ಪ್ರಕರಣ ಬಂಟ್ವಾಳದಲ್ಲಿ ದೃಢವಾದರೆ ಮತ್ತೊಂದು ಮಂಗಳೂರಿನ ಬೋಳೂರು ವ್ಯಕ್ತಿಗೆ ಸೋಂಕು ತಾಗಿರುವುದು ಖಚಿತವಾಗಿದೆ. ಬಂಟ್ವಾಳದ 69 ವರ್ಷದ ವೃದ್ಧನಿಗೆ ಸೋಂಕು ದೃಢವಾಗಿದೆ. ಇವರಿಗೆ ಸೋಂಕಿತ ಸಂಖ್ಯೆ 390ರ ಸಂಪರ್ಕದಿಂದ ಸೋಂಕು ತಾಗಿದೆ. ಏಪ್ರಿಲ್ 19ರಂದು ಕೋವಿಡ್-19 ಸೋಂಕಿಗೆ ಬಲಿಯಾದ ಮಹಿಳೆಯ ಸಂಬಂಧಿಯಾಗಿರುವ ಇವರು ಸಾವನ್ನಪ್ಪಿದ ಮಹಿಳೆಯ ನೆರೆಮನೆಯಲ್ಲಿ […]

ಕೋವಿಡ್ 19ರೋಗಿಗೆ ಚಿಕಿತ್ಸೆ ನೀಡಿದ ಬಂಟ್ವಾಳದ ಮಹಿಳೆಗೆ ಸೋಂಕು ದೃಢ

Sunday, April 26th, 2020
corona-narikombu

ಬಂಟ್ವಾಳ: ರಾಜ್ಯದಲ್ಲಿ ದಕ್ಷಿಣ ಕನ್ನಡದ ಬಂಟ್ವಾಳ ತಾಲೂಕಿನಲ್ಲಿ ಮತ್ತೋರ್ವಮಹಿಳೆಗೆ ಸೋಂಕು ದೃಢವಾಗಿದೆ. ಈಕೆ ಕೋವಿಡ್ ಸೋಂಕಿನಿಂದ ಮೃತರಾದ ಬಂತಲಾದ ಮಹಿಳೆಗೆ ಪಡೀಲಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದ ಸಿಬ್ಬಂದಿಯಾಗಿರುತ್ತಾರೆ. ಬಂಟ್ವಾಳ ತಾಲೂಕಿನ ನರಿಕೊಂಬು ಗ್ರಾಮದ ನಾಯಿಲ ನಿವಾಸಿಯಾದ 47 ವರ್ಷದ ಮಹಿಳೆಗೆ ಸೋಂಕು ತಾಗಿರುವುದ ದೃಢವಾಗಿದೆ. ಈಕೆಗೆ ಸೋಂಕಿತ ಸಂಖ್ಯೆ 432ರ ಸಂಪರ್ಕದಿಂದ ಈ ಮಹಿಳೆಗೆ ಸೋಂಕು ತಾಗಿರುವುದು ಖಚಿತವಾಗಿದೆ. ಬಂಟ್ವಾಳದ ವೃದ್ದೆಯೋರ್ವರು ಇದೇ ಆಸ್ಪತ್ರೆಯಲ್ಲಿ ಒಂದು ತಿಂಗಳಿನಿಂದ ಪಾರ್ಶ್ವವಾಯುಗೆ ತುತ್ತಾಗಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ಧರು. […]

ಬಂಟ್ವಾಳ ದಲ್ಲಿ ಕೋವಿಡ್ ಸೋಂಕಿನಿಂದ ಮೃತರಾದ ಮಹಿಳೆಯ ಸಂಬಂಧಿಗೂ ಸೋಂಕು ದೃಢ

Thursday, April 23rd, 2020
covid+ve

ಬಂಟ್ವಾಳ: ಇತ್ತೀಚೆಗೆ ಬಂಟ್ವಾಳ ದಲ್ಲಿ ಕೋವಿಡ್-19 ಸೋಂಕಿನ ಕಾರಣ ಮೃತರಾದ ಮಹಿಳೆ (ಸೋಂಕಿತ ಸಂಖ್ಯೆ 390)ರ ಸಂಪರ್ಕದಿಂದ ಮತ್ತೋರ್ವ ಮಹಿಳೆಗೆ ಸೋಂಕು ತಾಗಿರುವುದು ದೃಢವಾಗಿದೆ. 78 ವರ್ಷದ ಮಹಿಳೆ ಇತ್ತೀಚೆಗೆ ಪಾರ್ಶ್ವವಾಯು ಗೆ ಸಂಬಧಿಸಿದಂತೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇತ್ತೀಚೆಗೆ ಮೃತಪಟ್ಟ ಮಹಿಳೆಗೆ ಹತ್ತಿರದ ಸಂಬಂಧಿಯಾಗಿರುವ ಈಕೆಯನ್ನು ಬುಧವಾರ ಖಾಸಗಿ ಆಸ್ಪತ್ರೆಯಿಂದ ಜಿಲ್ಲೆಯ ಕೋವಿಡ್ ಆಸ್ಪತ್ರೆ ವೆನ್ಲಾಕ್ ಗೆ ದಾಖಲಿಸಲಾಗಿತ್ತು. ಇವರ ಗಂಟಲು ದ್ರವ ಪರೀಕ್ಷೆ ನಡೆಸಲಾಗಿದ್ದು, ಅದರಲ್ಲಿ ಸೋಂಕು ಇರುವುದು ದೃಢಪಟ್ಟಿದೆ. ಇದರಿಂದ ಜಿಲ್ಲೆಯಲ್ಲಿ […]