Blog Archive

3 ದಿನಗಳಲ್ಲಿ ಶಾಸಕ ಸ್ಥಾನಕ್ಕೆ ರಮೇಶ್ ರಾಜೀನಾಮೆ:ರಮೇಶ್ ಜಾರಕಿಹೊಳಿ

Monday, December 24th, 2018
ramesh-jarakihole

ಬೆಂಗಳೂರು: ರಮೇಶ್ ಜಾರಕಿಹೊಳಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತಾರೆ ಎನ್ನುವ ಊಹಾಪೋಹಗಳಿಗೆ ತೆರೆ ಬಿದ್ದಿದೆ. ಇನ್ನು 3 ದಿನಗಳಲ್ಲಿ ರಾಜೀನಾಮೆ ನೀಡುತ್ತೇನೆ ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸ್ಪಷ್ಟಪಡಿಸಿದ್ದಾರೆ. ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ನಾನು ರಾಜೀನಾಮೆ ನೀಡುವುದು ಸತ್ಯ, ಇನ್ನು ಮೂರು ದಿನಗಳಲ್ಲಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆ. ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್ ಅವರ ಜೊತೆಗೆ ಚರ್ಚೆ ನಡೆಸುವುದಿಲ್ಲ, ಹಾಗೆಯೇ ಬಿಜೆಪಿಗೂ ಹೋಗುವುದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ

ರಮೇಶ್‌ ಜಾರಕಿಹೊಳಿ ಅವರನ್ನು ಸಂಪುಟದಿಂದ ತೆಗೆದು ಹಾಕಿದ್ದು ನನಗೆ ದುಃಖ ತಂದಿದೆ: ಲಕ್ಷ್ಮಿ ಹೆಬ್ಬಾಳ್‌ ಕರ್‌

Saturday, December 22nd, 2018
laxmi-hebbalkar

ಬೆಂಗಳೂರು: ರಮೇಶ್‌ ಜಾರಕಿ ಹೊಳಿ ಅವರನ್ನು ಸಂಪುಟದಿಂದ ತೆಗೆದು ಹಾಕಿರುವುದು ನನಗೆ ವೈಯಕ್ತಿಕವಾಗಿ ತುಂಬಾ ದುಃಖ ತಂದಿದೆ ಎಂದು ಕಾಂಗ್ರೆಸ್‌ ಶಾಸಕಿ ಲಕ್ಷ್ಮಿ ಹೆಬ್ಬಾಳ್‌ ಕರ್‌ ಹೇಳಿಕೆ ನೀಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು ವರಿಷ್ಠರು 22 ರಂದು ಸಂಪುಟ ವಿಸ್ತರಣೆ ಮಾಡುತ್ತೇವೆ ಎಂದಿದ್ದರು. ಅವರು ಕೊಟ್ಟ ಮಾತು ಉಳಿಸಿಕೊಂಡಿದ್ದಾರೆ. ಎಲ್ಲವೂ ಸುಖಾಂತ್ಯವಾಗಿದೆ ಎಂದರು. ಹೈಕಮಾಂಡ್‌ ಏನು ಹೇಳುತ್ತದೆಯೋ ಅದನ್ನು ಕೇಳುವವಳು ನಾನು ,ಪಕ್ಷದ ಶಿಸ್ತಿನ ಸಿಪಾಯಿ,ಚೌಕಟ್ಟನ ಒಳಗೆ ಇರುವವಳು. ಎಂದೂ ಸಚಿವ ಹುದ್ದೆಯ ಆಕಾಂಕ್ಷಿ ಎಂದಿರಲಿಲ್ಲ ಎಂದರು. […]

ಕಲ್ಲಿನಿಂದ ತಲೆಗೆ ಜಜ್ಜಿ ವ್ಯಕ್ತಿಯ ಬರ್ಬರ ಕೊಲೆ

Saturday, December 22nd, 2018
murdered

ಬೆಂಗಳೂರು: ಆನೇಕಲ್ ತಾಲೂಕಿನ ಅತ್ತಿಬೆಲೆ ಠಾಣಾ ವ್ಯಾಪ್ತಿಯಲ್ಲಿ ಅಪರಿಚಿತ ಶವವೊಂದು ಪತ್ತೆಯಾಗಿದ್ದು, ವ್ಯಕ್ತಿಯ ತಲೆಗೆ ಕಲ್ಲಿನಿಂದ ಜಜ್ಜಿ ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಕೊಲೆಯಾಗಿರುವ ವ್ಯಕ್ತಿಯ ಚಹರೆ ಕಾಣದ ರೀತಿ ಮುಖವನ್ನು ಜಜ್ಜಲಾಗಿದೆ. ನಿನ್ನೆ ರಾತ್ರಿ ತಲೆಗೆ ಕಲ್ಲಿನಿಂದ ಜಜ್ಜಿದ್ದು ಇಂದು ದಾರಿ ಹೋಕರಿಗೆ ಶವ ಕಾಣಿಸಿದ್ದು ಪೊಲೀಸರಿಗೆ ತಿಳಿಸಿದ್ದಾರೆ. ಯಡವನಹಳ್ಳಿಯ ಸರ್ಕಾರಿ ಶಾಲೆಯ ಆವರಣದ ಮುಂಭಾಗದ ದಟ್ಟವಾದ ಹುಲ್ಲಿನ ಮರೆಯಲ್ಲಿ ಶವ ಬಿದ್ದಿದೆ. ತಲೆಯಲ್ಲಿ ರಕ್ತಗಾಯಗಳಿಂದ ಕೂಡಿದ್ದು ಸಹಚರರೊಡನೆ ಜಗಳ ತೆಗೆದು ಕೊಲೆಯಾಗಿರಬಹುದು ಎಂಬ ಶಂಕೆ ಸ್ಥಳ […]

ವಿಜಯ್​​​ ಮಲ್ಯ ಸಾಲ ಮರುಪಾವತಿ ಕೇಸ್​​​​​​​​​​​​​​​​​​​: ವಿಚಾರಣೆ ಮುಂದೂಡಿದ ಹೈಕೋರ್ಟ್​

Tuesday, December 18th, 2018
vijay-malya

ಬೆಂಗಳೂರು: ಬಹುಕೋಟಿ ವಂಚನೆ ಆರೋಪ ಎದುರಿಸುತ್ತಿರುವ ಉದ್ಯಮಿ ವಿಜಯ್ ಮಲ್ಯ ಸಾಲದ ಮರುಪಾವತಿ ವಿಚಾರಣೆಯನ್ನು ಹೈಕೋರ್ಟ್ ಡಿಸೆಂಬರ್ 20ಕ್ಕೆ ಮುಂದೂಡಿದೆ. ಈ ಹಿಂದೆ ಇದೇ ಪ್ರಕರಣ ಹೈಕೋರ್ಟ್ನಲ್ಲಿ ವಿಚಾರಣೆಗೆ ಬಂದಿತ್ತು. ‘ವಿಜಯ್ ಮಲ್ಯಗೂ ಯುಎಸ್ಎಲ್ಗೂ ಸಂಬಂಧವಿಲ್ಲ. ಹೀಗಾಗಿ, ಐಡಿಬಿಐ ಸಾಲದಿಂದ ಯುಎಸ್ಎಲ್ ಮುಕ್ತಗೊಳಿಸಿ, ವಿಜಯ್ ಮಲ್ಯ ಕೇವಲ ಶೇ. 2 ರಷ್ಟು ಷೇರು ಹೊಂದಿದ್ದಾರೆ. ಯುಎಸ್ಎಲ್ ಪ್ರತ್ಯೇಕ ಕಂಪನಿ ಎಂದು ವಕೀಲ/ಕಾಂಗ್ರೆಸ್ ಮುಖಂಡ ಪಿ. ಚಿದಂಬರಂ ವಾದ ಮಂಡಿಸಿದ್ದರು. ಪಿ.ಚಿದಂಬರಂ ಅವರ ವಾದ ಒಪ್ಪದ ಐಡಿಬಿಐ ವಕೀಲರು, […]

ಆ್ಯಂಬಿಡೆಂಟ್​ ಮಾದರಿಯಲ್ಲೇ ಮತ್ತೊಂದು ಚೀಟಿಂಗ್​ ಕೇಸ್​!

Friday, December 14th, 2018
banglore

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಒಂದಾದರೊಂದಂತೆ ಚೀಟಿಂಗ್ ಪ್ರಕರಣಗಳು ಹೊರ ಬರುತ್ತಲೇ ಇವೆ. ಆ್ಯಂಬಿಡೆಂಟ್ ಪ್ರಕರಣದ ಮಾದರಿಯಲ್ಲಿ ಮತ್ತೊಂದು ಕಂಪನಿ ನೂರಾರು ಜನರಿಗೆ ವಂಚನೆ ಮಾಡಿರುವ ಆರೋಪ ಪ್ರಕರಣ ಬೆಳಕಿಗೆ ಬಂದಿದೆ. ಹಣ ಡಬಲ್ ಮಾಡುವುದಾಗಿ ಹಾಗೂ ಸೈಟ್ ಕೊಡಿಸುವುದಾಗಿ ಸಾರ್ವಜನಿಕರಿಗೆ ನಂಬಿಸಿ ಪ್ರತಿ ಸದಸ್ಯರಿಂದ ಒಂದು ಸಾವಿರ ಸದ್ಯಸತ್ವ ಶುಲ್ಕ ಪಾವತಿಸಿಕೊಂಡು 40 ಸಾವಿರ ರೂಪಾಯಿಯಿಂದ ಒಂದು ಲಕ್ಷ ರೂಪಾಯಿವರೆಗೆ ಹಣವನ್ನು ಠೇವಣಿಯಾಗಿಸಿಕೊಂಡು, ಹಣ ನೀಡದೇ ವಂಚನೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ರಾಜಾಜಿನಗರದ ವಿಶ್ವಜ್ಯೋತಿ ಚ್ಯಾರಿಟೇಬಲ್ ಟ್ರಸ್ಟ್ […]

ಕುಡಿದ ಅಮಲಿನಲ್ಲಿ ಅಪಾರ್ಟ್​ಮೆಂಟ್​ನಿಂದ ಬಿದ್ದು ಕೊಲಂಬಿಯಾ ಯುವತಿ ಸಾವು

Monday, December 10th, 2018
colombia

ಬೆಂಗಳೂರು: ಕುಡಿದ ಅಮಲಿನಲ್ಲಿ ಅಪಾರ್ಟ್ಮೆಂಟ್ನಿಂದ ಬಿದ್ದು ಕೊಲಂಬಿಯಾ ಪ್ರಜೆ ಸಾವನ್ನಪ್ಪಿರುವ ಘಟನೆ ಜೆ.ಬಿ. ನಗರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಕರೀನಾ ಡೇನಿಯಲ್ (25) ಮೃತಪಟ್ಟಿರುವ ಕೆನಡಿಯನ್ ಪ್ರಜೆ. ಕಳೆದ ನಾಲ್ಕು ವರ್ಷಗಳ ಹಿಂದೆ ಬೆಂಗಳೂರಿಗೆ ಬಂದು ನೆಲೆಸಿದ್ದ ಕರೀನಾ ‌ಇಂದಿರಾ ನಗರದ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಳು. ನಿನ್ನೆ ಸ್ನೇಹಿತೆ ಮರಿಯಾ ಜೊತೆ ಜೆ.ಬಿ. ನಗರದ ಅಪಾರ್ಟ್ಮೆಂಟ್ನಲ್ಲಿ ಪಾರ್ಟಿ ಮಾಡುತ್ತಿದ್ದಳು. ಈ ವೇಳೆ ಕುಡಿದ ಅಮಲಿನಲ್ಲಿ ಅಪಾರ್ಟ್ಮೆಂಟ್ನಿಂದ ಕೆಳಗೆ ಬಿದ್ದ ಪರಿಣಾಮ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ. ಈ ಸಂಬಂಧ […]

ಉಡಾಫೆ ಉತ್ತರ ಕೊಟ್ಟರೆ ನಮ್ಮ ಹೋರಾಟ ಮುಂದುವರಿಯುತ್ತದೆ: ಬಿ.ಎಸ್. ಯಡಿಯೂರಪ್ಪ

Friday, December 7th, 2018
yedyurappa

ಬೆಂಗಳೂರು: ಬೆಳಗಾವಿ ಅಧಿವೇಶನದಲ್ಲಿ ನಾವು ಸರ್ಕಾರಕ್ಕೆ ಸಹಕಾರ ಕೊಡುತ್ತೇವೆ. ಆದರೆ ಸರಿಯಾಗಿ ಉತ್ತರ ಕೊಡದೇ ಉಡಾಫೆ ಉತ್ತರ ಕೊಟ್ಟರೆ ನಮ್ಮ ಹೋರಾಟ ಮುಂದುವರಿಯುತ್ತದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಎಚ್ಚರಿಕೆ ನೀಡಿದ್ದಾರೆ. ಡಾಲರ್ಸ್ ಕಾಲೋನಿ ನಿವಾಸದಲ್ಲಿ ಮಾತನಾಡಿದ ಅವರು, ಸಾಲಮನ್ನಾ ವಿಚಾರದಲ್ಲಿ ಸಿಎಂ ಶೋ ಕೊಡುತ್ತಾ ಓಡಾಡುತ್ತಿದ್ದಾರೆ. ಬೆಳಗಾವಿ ಅಧಿವೇಶನದ ಆರಂಭದ ದಿನ ಇತ್ತೀಚೆಗೆ ನಿಧನರಾದ ಗಣ್ಯರಿಗೆ ಸಂತಾಪ ಸೂಚಿಸಿ ಕೆಲ ಕಾಲ ಮುಂದೂಡಲಾಗುತ್ತದೆ. ನಾವು ಅಂದು ಒಂದು‌ ಲಕ್ಷ ಜನ ರೈತರನ್ನು ಸೇರಿಸಿ ಹೋರಾಟ […]

ಕಳ್ಳತನ ಆರೋಪ: ಬೆಂಗಳೂರಲ್ಲಿ ಉದ್ಯಮಿಯಿಂದ‌ ಮಕ್ಕಳ ಅಪಹರಣ

Wednesday, December 5th, 2018
bengaluru

ಬೆಂಗಳೂರು: ಸೈಕಲ್ ಕಳ್ಳತನ ಮಾಡಿದ ಆರೋಪದ ಮೇರೆಗೆ ಟ್ಯೂಷನ್ ಕ್ಲಾಸ್ಗೆ ನುಗ್ಗಿ‌ ಮಕ್ಕಳನ್ನು ಅಪಹರಣ ಮಾಡಿದ ಘಟನೆ ಅಮೃತಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಈ ಸಂಬಂಧ ಇಬ್ಬರನ್ನು ಅಮೃತಹಳ್ಳಿ ಪೊಲೀಸರು ಬಂಧಿಸಿದ್ದಾರೆ. 9ನೇ ತರಗತಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿಗಳ ಪೈಕಿ ಒಬ್ಬ ಸೈಕಲ್ ಕಳ್ಳತನ‌ ಮಾಡಿದ್ದ ಎಂದು ಆರೋಪಿಸಿ ಭಾಸ್ಕರ್ ಮತ್ತು ವಿನೋದ್ ಎಂಬ ಮಕ್ಕಳನ್ನ ಇನೋವಾ ಕಾರಿನಲ್ಲಿ ಉದ್ಯಮಿ ಕೃಷ್ಣಮೂರ್ತಿ ಅಂಡ್ ಗ್ಯಾಂಗ್ ಅಪಹರಣ ಮಾಡಿತ್ತು. ನಂತರ ಮನೆಯೊಂದರಲ್ಲಿ ಕೂಡಿ ಹಾಕಿ ಹಿಗ್ಗಾಮುಗ್ಗಾ ಹಲ್ಲೆ ನಡೆಡಸಿದ್ದಾರೆ […]

ತಾಯಿ ಹಾಗೂ ತಂಗಿಯನ್ನ ಕೊಂದು ಆತ್ಮಹತ್ಯೆಗೆ ಯತ್ನಿಸಿದ್ದ ಆರೋಪಿ ವೈದ್ಯನ ಬಂಧನ

Wednesday, December 5th, 2018
murder

ಬೆಂಗಳೂರು: ತಾಯಿ ಹಾಗೂ ತಂಗಿಯನ್ನ ಕೊಂದು ಆತ್ಮಹತ್ಯೆಗೆ ಯತ್ನಿಸಿದ್ದ ಆರೋಪಿ ವೈದ್ಯ ಗೋವಿಂದ್ ಪ್ರಕಾಶ್ನನ್ನು ಆರ್.ಆರ್ ನಗರ ಪೊಲೀಸರು ಬಂಧಿಸಿದ್ದಾರೆ. ತಾಯಿ ಹಾಗೂ ತಂಗಿಗೆ ಇಂಜೆಕ್ಷನ್ ನೀಡಿ ಸಾಯಿಸಿ, ತಾನೂ ಆತ್ಮಹತ್ಯೆಗೆ ಯತ್ನಿಸಿದ್ದ ಆರೋಪಿ ವೈದ್ಯನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಗೋವಿಂದ್ ಗುಣಮುಖ ಎಂದು ವೈದ್ಯರು ರಿಪೋರ್ಟ್ ನೀಡಿದ ಬೆನ್ನಲ್ಲೇ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇನ್ನು ಆರೋಪಿ ಪೊಲೀಸರ ಬಳಿ ತಾನು ಮಾಡಿದ ಕೃತ್ಯಕ್ಕೆ ಪಶ್ಚಾತಾಪ ಪಟ್ಟಿದ್ದಾನೆ. 48 ವರ್ಷ ಆದರೂ ಮದುವೆಯಾಗಿಲ್ಲ ಎಂದು ಸ್ನೇಹಿತರು ರೇಗಿಸುತ್ತಾ […]

ಬೆಂಗಳೂರಿನಲ್ಲಿ ಲಾರಿ ಚಾಲಕನ ಬರ್ಬರ ಹತ್ಯೆ

Saturday, December 1st, 2018
bengalore

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಮತ್ತೆ ಮಚ್ಚು ಲಾಂಗ್ಗಳು ಸದ್ದು ಮಾಡಿದೆ. ವ್ಯಕ್ತಿವೋರ್ವನನ್ನು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ಹೆಣ್ಣೂರು ಬಂಡೆಯಲ್ಲಿ ನಡೆದಿದೆ. ಕೇಶವ್ (30) ಹತ್ಯೆಗೊಳಗಾದ ವ್ಯಕ್ತಿ. ನಿನ್ನೆ ರಾತ್ರಿ 9 ಗಂಟೆ ಸುಮಾರಿಗೆ ಹೆಣ್ಣೂರು ಬಂಡೆ ಮುಖ್ಯ ರಸ್ತೆಯ ಬಳಿ ಕೇಶವ್ ಲಾರಿಯಲ್ಲಿ ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದರು. ಈ ವೇಳೆ ಕುಡಿದು ಬಂದ ದುಷ್ಕರ್ಮಿಗಳು ಲಾರಿಗೆ ಅಡ್ಡ ಗಟ್ಟಿ ಮಚ್ಚು, ಲಾಂಗ್ಗಳಿಂದ ಹತ್ಯೆ ಮಾಡಿ ಪರಾರಿಯಾಗಿದ್ದಾರೆ. ಘಟನಾ ಸ್ಥಳಕ್ಕೆ ಹೆಣ್ಣೂರು ಪೊಲೀಸರು ಹಾಗೂ […]