Blog Archive

ಶಿವಕುಮಾರ ಸ್ವಾಮೀಜಿ ತಮ್ಮ ಬಾಳನ್ನು ಸಾರ್ಥಕವಾಗಿ ಪೂರೈಸಿದ್ದಾರೆ : ಹೆಗ್ಗಡೆ

Tuesday, January 22nd, 2019
veeredra-heggade

ಧರ್ಮಸ್ಥಳ  : ಶಾಸ್ತ್ರಗಳಲ್ಲಿ ದೇಹ ಮತ್ತುಆತ್ಮದ ಬೇಧವನ್ನು ತಿಳಿಸಲಾಗಿದೆ. ಆತ್ಮಕಲ್ಯಾಣಕ್ಕಾಗಿ ಮತ್ತು ಸಮಾಜೋನ್ನತಿಗಾಗಿಯೇ ದೇಹವನ್ನು ಬಳಸಬೇಕು ಎನ್ನುವುದು ಭಾರತೀಯರ ನಂಬಿಕೆ.ತಮ್ಮ ಬದುಕನ್ನು ಯಶಸ್ವಿಯಾಗಿ ನಿರ್ವಹಿಸುವುದು ಹೇಗೆ ಎಂಬುದನ್ನು ಸ್ವಾಮೀಜಿಯವರು ತಮ್ಮ ಬದುಕಿನಲ್ಲಿಮಾದರಿಯಾಗಿ ಸ್ವಾಮೀಜಿ ತೋರಿಸಿಕೊಟ್ಟವರು. ಬಾಲ್ಯದಿಂದಲೇ ವಿರಕ್ತಿ ಮಾರ್ಗವನ್ನು ಅನುಸರಿಸಿ, ಆತ್ಮೋನ್ನತಿಗಾಗಿ ಪೂಜೆ, ಧ್ಯಾನ, ತಪಸ್ಸು- ಅಂತೆಯೇ ಸಮಾಜದ ಮತ್ತು ದೇಶದಕಲ್ಯಾಣಕ್ಕಾಗಿ ದೇಹವನ್ನು ಕೊರಡಿನಂತೆ ಸವೆಸಿದರು. ಅವರು ಧಾರ್ಮಿಕರಾದರೂ ಅವರಲ್ಲಿ ದೇಶಭಕ್ತಿ ಆಳವಾಗಿನೆಲೆಯೂರಿತ್ತು. ದೇಶ ಉದ್ಧಾರವಾಗಬೇಕಾದರೆ ಜನತೆಯ ಬಡತನ ನಿವಾರಣೆಯಾಗಬೇಕು. ವಿದ್ಯಾರ್ಜನೆಗೆ ಅವಕಾಶಗಳಿರಬೇಕು ಎಂದು ಅವರು ಯೋಜನೆಗಳನ್ನು […]

ಫೆ.9 ರಿಂದ 18ರವರೆಗೆ ಧರ್ಮಸ್ಥಳದ ಬಾಹುಬಲಿಗೆ ವೈಭವದ ಮಹಾಮಸ್ತಕಾಭಿಷೇಕ

Wednesday, January 2nd, 2019
Masthkabhisheka

ಧರ್ಮಸ್ಥಳ:ತ್ಯಾಗತಪಸ್ಸು ಮತ್ತು ಮೋಕ್ಷದ ಪ್ರತೀಕವಾದ ಬಾಹುಬಲಿ ಜೈನಧರ್ಮದ ಸಮಸ್ಥ ಮೌಲ್ಯಗಳ ಪ್ರತಿರೂಪ. ರಾಜಭೋಗಜೀವನ ತ್ಯಜಿಸಿ ಮೋಕ್ಷದಋಜು ಮಾರ್ಗವನ್ನು ಆರಿಸಿಕೊಂಡು ಆಧ್ಯಾತ್ಮಿಕ ಉತ್ತುಂಗಕ್ಕೇರಿದ ಬಾಹುಬಲಿಯ ಜೀವನ ಇಂದಿಗೂ ಎಲ್ಲಾ ಜೈನಧರ್ಮೀಯರಿಗೆ ಆದರ್ಶ ಪ್ರಾಯವಾದದ್ದು. ರಾಜ್ಯದೊಂದಿಗೆ ಉಟ್ಟ ಬಟ್ಟೆಯನ್ನೂ ತ್ಯಜಿಸಿದ ಬಾಹುಬಲಿ ಆಡಂಬರ, ಅಭಿಷೇಕ ಇವೆಲ್ಲವುಗಳ ಪರಿಧಿಯನ್ನು ಮೀರಿ ನಿಂತವರು. ಆದರೂ ಅವರ ಪರಮೋಚ್ಛತ್ಯಾಗ- ತಪಸ್ಸಿನ ಗುಣಗಳನ್ನು ಆರಾಧಿಸುವ ಭಕ್ತರು 12 ವರ್ಷಗಳಿಗೊಮ್ಮೆ ಮಹಾಮಸ್ತಕಾಭಿಷೇಕ ನೆರವೇರಿಸುವ ಸಂಪ್ರದಾಯವನ್ನು ಪಾಲಿಸುತ್ತಾ ಬಂದಿದ್ದಾರೆ. ಗಗನ ಸದೃಶ ಮೂರ್ತಿಯತಲೆಯಿಂದ ಕಾಲಿನೆಡೆಗೆ ಹರಿದು ಬರುವ ಅಭಿಷೇಕ ದ್ರವ್ಯಗಳು […]

ಉತ್ತಮ ಆರೋಗ್ಯ ಆರ್ಥಿಕ ಪ್ರಗತಿಗಾಗಿ ದುಶ್ಚಟ ಮುಕ್ತರಾಗಬೇಕು

Tuesday, December 25th, 2018
dharmasthala alcohol

ಉಜಿರೆ: ಉತ್ತಮ ಆರೋಗ್ಯ, ಸಂಸಾರದಲ್ಲಿ ನೆಮ್ಮದಿ, ಸಾಮಾಜಿಕ ಗೌರವ ಹಾಗೂ ಆರ್ಥಿಕ ಪ್ರಗತಿಗಾಗಿ ದುಶ್ಚಟ ಮುಕ್ತರಾಗಬೇಕು ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಹೇಳಿದರು. ಅವರು ಮಂಗಳವಾರ ಧರ್ಮಸ್ಥಳದಲ್ಲಿ ಅಮೃತವರ್ಷಿಣಿ ಸಭಾ ಭವನದಲ್ಲಿ ಮದ್ಯವರ್ಜನ ಶಿಬಿರದಲ್ಲಿ ಭಾಗವಹಿಸಿ ವ್ಯಸನಮುಕ್ತರಾಗಿ ನೂರು ದಿನಗಳನ್ನು ಪೂರೈಸಿದ ಮೂರು ಸಾವಿರ ವ್ಯಸನಮುಕ್ತರಿಗೆ ಹಿತ ವಚನ ನೀಡಿದರು. ವ್ಯಸನ ಮುಕ್ತ ಜೀವನ ನಡೆಸಲು ಜನಜಾಗೃತಿ ವೇದಿಕೆ ಪ್ರೇರಣೆ, ಮಾರ್ಗದರ್ಶನ ನೀಡುತ್ತದೆ. ದುಶ್ಚಟದಿಂದಾಗಿ ಕೋಟ್ಯಾಂತರ ಹಣ ಪೋಲಾಗುತ್ತಿದೆ. ಇರುವ ಜೀವನದಲ್ಲಿ ಸುಖ, ನೆಮ್ಮದಿ […]

ಮುಡಿಪುವಿನಲ್ಲಿ ಮೂರು ದಿನಗಳ ಸೂರಜ್‌ ಕಲಾಸಿರಿ-2018ಕ್ಕೆ ವೀರೇಂದ್ರ ಹೆಗ್ಗಡೆಯವರಿಂದ ಚಾಲನೆ

Saturday, December 1st, 2018
Suraj-Kalasiri

ಉಳ್ಳಾಲ:  ಮುಡಿಪುವಿನ ಸೂರಜ್‌ ಶಿಕ್ಷಣ ಸಂಸ್ಥೆಯ ಆಶ್ರಯದಲ್ಲಿ ಸೂರಜ್‌ ಪ.ಪೂ. ಕಾಲೇಜಿನ ಸಭಾಂಗಣದಲ್ಲಿ ಮೂರು ದಿನಗಳ ಸೂರಜ್‌ ಕಲಾಸಿರಿ-2018ನ್ನು ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರು ಶುಕ್ರವಾರ ಉದ್ಘಾಟಿಸಿದರು . ಸೂರಜ್‌ ಶಿಕ್ಷಣ ಸಂಸ್ಥೆ ಸೂರಜ್‌ ಕಲಾಸಿರಿಯ ಮೂಲಕ ಮಕ್ಕಳ ಸಾಧನೆಯನ್ನು  ಹೊರತರುವ ಕಾರ್ಯ ಮಾಡುತ್ತಿರುವುದು  ಶ್ಲಾಘನೀಯ ಎಂದು ವೀರೇಂದ್ರ ಹೆಗ್ಗಡೆ ಅಭಿಪ್ರಾಯಪಟ್ಟರು. ಅವರು  ವಿವಿಧ ಕ್ಷೇತ್ರದ ಸಾಧಕರಿಗೆ ಸೂರಜ್‌ ಸೇವಾ ಪ್ರಶಸ್ತಿ ಪ್ರದಾನಗೈದು ಅವರು ಮಾತನಾಡಿದರು. ಯವಜನತೆ ಪಾಶ್ಚಾತ್ಯ ಸಂಸ್ಕೃತಿಯತ್ತ ಹೆಚ್ಚಿನ ಆಸಕ್ತಿ ತೋರಿಸುತ್ತಿದ್ದಾರೆ. ಇನ್ಫೋಸಿಸ್‌ ಸೇರಿದಂತೆ ಹಲವಾರು […]

ಧರ್ಮಸ್ಥಳದಲ್ಲಿ ಮಂಜೂಷಾ ವಸ್ತು ಸಂಗ್ರಹಾಲಯ ಲೋಕಾರ್ಪಣೆ, ವೀರೇಂದ್ರ ಹೆಗ್ಗಡೆಯವರ ಪಟ್ಟಾಭಿಷೇಕ ಸುವರ್ಣ ಮಹೋತ್ಸವ

Thursday, October 25th, 2018
Manjusha Museum

ಉಜಿರೆ: ಕೇಂದ್ರ ಸರ್ಕಾರದ ನೂರು ಕೋಟಿ ರೂ. ಅನುದಾನದೊಂದಿಗೆ ಬಿ.ಸಿ.ರೋಡ್-ಧರ್ಮಸ್ಥಳ ರಾಷ್ಟ್ರೀಯ ಹೆದ್ದಾರಿಯನ್ನು ಅಭಿವೃದ್ಧಿಗೊಳಿಸಲಾಗು ವುದು. 2019 ರ ಫೆಬ್ರವರಿಯಲ್ಲಿ ಧರ್ಮಸ್ಥಳದಲ್ಲಿ ನಡೆಯಲಿರುವ ಭಗವಾನ್ ಶ್ರೀ ಬಾಹುಬಲಿ ಸ್ವಾಮಿ ಮಹಾಮಸ್ತಕಾಭಿಷೇಕದ ಹಿನ್ನೆಲೆಯಲ್ಲಿ ಧರ್ಮಸ್ಥಳವನ್ನು ಸಂಪರ್ಕಿಸುವ ರಸ್ತೆ ಅಭಿವೃದ್ಧಿಗೆ ರಾಜ್ಯ ಸರ್ಕಾರದಿಂದ 23.5 ಕೋಟಿ ರೂ. ಮಂಜೂರು ಮಾಡಲಾಗಿದೆ ಎಂದು ಲೋಕೋಪಯೋಗಿ ಸಚಿವ ಎಚ್.ಡಿ. ರೇವಣ್ಣ ಪ್ರಕಟಿಸಿದರು. ಧರ್ಮಸ್ಥಳದಲ್ಲಿ ಬುಧವಾರ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರ ಪಟ್ಟಾಭಿಷೇಕ ಸುವರ್ಣ ಮಹೋತ್ಸವ ಆಚರಣೆ ಸಂದರ್ಭ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಿಲಾನ್ಯಾಸ […]

ಶಬರಿಮಲೆ ಕ್ಷೇತ್ರಕ್ಕೆ ಅದರದ್ದೇ ಆದ ಸಾಂಪ್ರದಾಯಿಕ ಸೌಂದರ್ಯವಿದ್ದು, ಅದನ್ನು ಉಳಿಸಿಕೊಳ್ಳಬೇಕು: ವೀರೇಂದ್ರ ಹೆಗ್ಗಡೆ

Wednesday, October 24th, 2018
Manjusha

ಧರ್ಮಸ್ಥಳ: ಮಹಿಳೆಯರು ಶಬರಿಮಲೆಗೆ ಹೋದರೆ ಸಂಯಮದ ತತ್ವವೇನಿದೆಯೋ, ಅದು ಸಡಿಲವಾಗುತ್ತದೆ. ಅವರ ಪ್ರವೇಶದಿಂದ ಸಂಯಮಕ್ಕೆ, ಮನೋನಿಗ್ರಹಕ್ಕೆ ಧಕ್ಕೆಯಾಗಬಹುದು ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ ವೀರೇಂದ್ರ ಹೆಗ್ಗಡೆ ಅಭಿಪ್ರಾಯಪಪಟ್ಟಿದ್ದಾರೆ. ಶಬರಿಮಲೆಗೆ ಸ್ತ್ರೀಯರ ಪ್ರವೇಶ ವಿವಾದಕ್ಕೆ ಕುರಿತಂತೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಮಹಿಳೆಯರ ಶಬರಿಮಲೆ ಪ್ರವೇಶ ಭಕ್ತಿಯಿಂದ ಮಾಡುವುದಾದರೆ ಮನೆಯಲ್ಲಿ ಕೂಡಾ ಮಾಡಬಹುದು. ಅಲ್ಲಿಗೇ ಹೋಗಬೇಕಾಗಿಲ್ಲ. ಪುರುಷರಿಗೆ ಸಂಯಮದ ಅಭ್ಯಾಸ ಮಾಡಿಸಲಿಕ್ಕಾಗಿ ಈ ಪದ್ಧತಿಯಿದೆ ಎಂದು ನನ್ನ ಒಂದು ಕಲ್ಪನೆ. ಯಾಕೆಂದರೆ 48 ದಿನಗಳ ಕಾಲ […]

ಧರ್ಮಸ್ಥಳದಲ್ಲಿ “ಮಂಜೂಷಾ” ವಸ್ತು ಸಂಗ್ರಹಾಲಯ ಬುಧವಾರ ಲೋಕಾರ್ಪಣೆ

Tuesday, October 23rd, 2018
Manjusha Museum

ಧರ್ಮಸ್ಥಳ : ವಿವಿಧ ವಿನ್ಯಾಸದ ಆಭರಣಗಳು, ಪೂಜಾ ಪರಿಕರಗಳು, ಕಲ್ಲಿನ ಹಾಗೂ ಲೋಹದ ಕಲಾಕೃತಿಗಳು, ವಿಂಟೇಜ್ ಕಾರುಗಳು, ಚಿತ್ತಾಕರ್ಷಕ ವರ್ಣಚಿತ್ರಗಳು, ಗೃಹ ಬಳಕೆಯ ವಸ್ತುಗಳು, ವೈವಿಧ್ಯಮಯ ಕ್ಯಾಮರಾಗಳು, ರೈಲ್ವೆ ಎಂಜಿನ್, ವಿಮಾನ, ಮರದ ರಥಗಳು, ಪೆನ್ನುಗಳು, ಕನ್ನಡಕಗಳು – ಹೀಗೆ ವೈವಿಧ್ಯಮಯ ಅಪೂರ್ವ ವಸ್ತುಗಳ ಭಂಡಾರ “ಮಂಜೂಷಾ” ವಸ್ತು ಸಂಗ್ರಹಾಲಯ. ಅಪಾರ ಜ್ಞಾನದ ಆಕರ, ಮಾಹಿತಿಯ ಕಣಜವಾಗಿದ್ದು ಎಲ್ಲರ ಕಣ್ಮನ ಸೆಳೆಯುತ್ತಿದೆ. ಇತಿಹಾಸ, ಕಲೆ, ಸಾಹಿತ್ಯ, ಸಂಸ್ಕೃತಿ, ವಿಜ್ಞಾನ, ಸಂಗೀತ, ಯಕ್ಷಗಾನ, ಭೂತಾರಾಧನೆ – ಹೀಗೆ ಬದುಕಿನ […]

ಸಮಾಜದ ಸಭ್ಯ ನಾಗರಿಕರಾಗಿ ದುಶ್ಚಟ ಮುಕ್ತ ಜೀವನ ನಡೆಸಿದರೆ ಶಾಂತಿ, ನೆಮ್ಮದಿ

Monday, July 2nd, 2018
Drug day

ಉಜಿರೆ : ಸುಸಂಸ್ಕೃತರಾಗಿ, ಸಮಾಜದ ಸಭ್ಯ ನಾಗರಿಕರಾಗಿ ದುಶ್ಚಟ ಮುಕ್ತ ಜೀವನ ನಡೆಸಿದರೆ ಶಾಂತಿ, ನೆಮ್ಮದಿ ಸಿಗುತ್ತದೆ. ಆರೋಗ್ಯಪೂರ್ಣ ಸಮಾಜ ನಿರ್ಮಾಣವಾಗುತ್ತದೆ. ವ್ಯಸನದಿಂದ ವ್ಯಕ್ತಿತ್ವ ನಾಶವಾಗುತ್ತದೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಹೇಳಿದರು. ಅವರು ಸೋಮವಾರ ಉಜಿರೆಯಲ್ಲಿ ಎಸ್.ಡಿ.ಎಂ. ಕಾಲೇಜಿನಲ್ಲಿ ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ ಪ್ರಾಯೋಜಕತ್ವದಲ್ಲಿ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ, ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳು ಹಾಗೂ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾದ ರಾಜ್ಯವ್ಯಾಪಿ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮಗಳಿಗೆ […]

ಸಿದ್ದರಾಮಯ್ಯರನ್ನು ಭೇಟಿಯಾದ ವೀರೇಂದ್ರ ಹೆಗ್ಗಡೆ..!

Thursday, June 21st, 2018
siddaramaih

ಬೆಳ್ತಂಗಡಿ: ಧರ್ಮಸ್ಥಳದ ಶಾಂತಿವನ ಯೋಗ ಮತ್ತು ಪ್ರಕೃತಿ ಚಿಕಿತ್ಸಾಲಯದಲ್ಲಿ ಸಾಧಕರಾಗಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ, ಸಚಿವ ಪುಟ್ಟರಾಜು ಶಾಂತಿವನಕ್ಕೆ ತೆರಳಿ ಅವರನ್ನು ಭೇಟಿ ಮಾಡಿ ಕುಶಲೋಪರಿ ನಡೆಸಿದರು. ಸಣ್ಣ ನೀರಾವರಿ ಸಚಿವ ಸಿ. ಎಸ್. ಪುಟ್ಟರಾಜು ಅವರು ಬುಧವಾರ ಸಂಜೆ ಧರ್ಮಸ್ಥಳಕ್ಕೆ ಭೇಟಿ ನೀಡಿದರು. ನಂತರ ಶಾಂತಿವನದಲ್ಲಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು. ಈ ಸಂದರ್ಭ ಮಾಜಿ ಶಾಸಕ ವಸಂತ ಬಂಗೇರ, ಶಾಂತಿವನ ಟ್ರಸ್ಟಿನ […]

ಧರ್ಮಸ್ಥಳದಲ್ಲಿ ಹೆಗ್ಗಡೆಯವರು ಮತ್ತು ಕುಟುಂಬದವರಿಂದ ಮತದಾನ

Saturday, May 12th, 2018
Hegde Vote

ಧರ್ಮಸ್ಥಳ : ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಮತ್ತು ಹೇಮಾವತಿ ವಿ. ಹೆಗ್ಗಡೆಯವರು ಹಾಗೂ ಸಹೋದರ ಡಿ. ಹರ್ಷೇಂದ್ರ ಕುಮಾರ್ ಮತ್ತು ಸುಪ್ರಿಯಾ ಹರ್ಷೇಂದ್ರ ಕುಮಾರ್ ಶನಿವಾರ ಧರ್ಮಸ್ಥಳದಲ್ಲಿ ಎಸ್.ಡಿ.ಎಮ್. ಪ್ರಾಥಮಿಕ ಶಾಲೆಯಲ್ಲಿ ಮತದಾನ ಮಾಡಿದರು.