Blog Archive

ನಂದನ್ ನಿಲೇಕಣಿ ಅಧಿಕೃತವಾಗಿ ಕಾಂಗ್ರೆಸ್ ಸೇರ್ಪಡೆ

Monday, March 10th, 2014
Nandan-Nilekani

ಬೆಂಗಳೂರು: ‘ಆಧಾರ್‌’ ವಿಶೇಷ ಗುರುತಿನ ಚೀಟಿ ಪ್ರಾಧಿಕಾರದ ಅಧ್ಯಕ್ಷ ನಂದನ್ ನಿಲೇಕಣಿ ಅವರು ಭಾನುವಾರ ಅಧಿಕೃತವಾಗಿ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ ಅವರ ಸಮ್ಮುಖದಲ್ಲಿ ಇಂದು ಬೆಳಗ್ಗೆ ಬೆಂಗಳೂರಿನ ಕ್ವೀನ್ಸ್ ರಸ್ತೆಯಲ್ಲಿರುವ ಕರ್ನಾಟಕ ಪ್ರದೇಶ ಕಾಂಗ್ರೆಸ್ ಕಚೇರಿಯಲ್ಲಿ ನಿಲೇಕಣಿ ಅವರು ಅಧಿಕೃತವಾಗಿ ಕಾಂಗ್ರೆಸ್ ಸೇರ್ಪಡೆಯಾದರು. ಈ ವೇಳೆ ಸಚಿವರು ಹಾಗೂ ಶಾಸಕರು ಸೇರಿದಂತೆ ಹಲವು ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು. ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಿಂದ ನಿಲೇಕಣಿ ಅವರಿಗೆ ಕಾಂಗ್ರೆಸ್ ಟಿಕೆಟ್ ಖಚಿತವಾಗಿದ್ದು, […]

ಕೇಜ್ರಿವಾಲ್ ಜತೆ ಡಿನ್ನರ್ ಗೆ 20 ಸಾವಿರ ರುಪಾಯಿ ಶುಲ್ಕ!

Saturday, March 8th, 2014
Arvind-Kejriwal

ಬೆಂಗಳೂರು: ದೆಹಲಿ ಮಾಜಿ ಮುಖ್ಯಮಂತ್ರಿ ಹಾಗೂ ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರೊಂದಿಗೆ ಊಟ ಮಾಡುವ ಭಾಗ್ಯ ಬೆಂಗಳೂರಿಗರಿಗೆ ಸಿಕ್ಕಿದೆ. ಆದರೆ ಅದಕ್ಕಾಗಿ ನೀವು 20 ಸಾವಿರ ರುಪಾಯಿ ಖರ್ಚು ಮಾಡಬೇಕು ಅಷ್ಟೆ. ಅರವಿಂದ್ ಕೇಜ್ರಿವಾಲ್ ಅವರು ಇದೇ ಮಾರ್ಚ್ 15ರಂದು ನಗರಕ್ಕೆ ಆಗಮಿಸುತ್ತಿದ್ದು, ಈ ವೇಳೆ ಆಪ್ ನಾಯಕರು ಪಕ್ಷದ ನಿಧಿ ಸಂಗ್ರಹಣೆಗೆ ಭೋಜನಕೂಟ ಏರ್ಪಡಿಸಿದ್ದಾರೆ. ನೀವು 20 ಸಾವಿರ ರುಪಾಯಿ ಕೊಟ್ಟರೆ, ಕೇಜ್ರಿವಾಲ್ ಜತೆ ಊಟದೊಂದಿಗೆ ಸಂದರ್ಶನ ಮಾಡಬಹುದು. ಇತ್ತಿಚೀಗಷ್ಟೆ ಎಎಪಿ […]

ಸರಕಾರಿ ಆಧಾರ್: ನಿಲೇಕಣಿ ವಿರುದ್ಧ ಬಿಜೆಪಿ ದೂರು

Saturday, March 8th, 2014
Nandan-Nilekani

ಬೆಂಗಳೂರು: ದಕ್ಷಿಣ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ಸಿನ ಘೋಷಿತ ಅಭ್ಯರ್ಥಿ ನಂದನ್ ನಿಲೇಕಣಿ ವಿರುದ್ಧ ಚುನಾವಣಾ ಆಯೋಗಕ್ಕೆ ಬಿಜೆಪಿ ದೂರು ಸಲ್ಲಿಸಿದೆ. ಸದ್ಯಕ್ಕೆ ‘ಆಧಾರ್’ ಯೋಜನೆಯ ಅಧ್ಯಕ್ಷರಾಗಿರುವ ನಂದನ್ ನಿಲೇಕಣಿ ಅವರು ತಮ್ಮ ಅಧಿಕಾರ ಸ್ಥಾನವನ್ನು ದುರುಪಯೋಗ ಮಾಡಿಕೊಂಡು ಕೇಂದ್ರದ ಆಧಾರ್ ಸರಕಾರಿ ಯೋಜನೆಯನ್ನು ತಮ್ಮ ಸ್ವಂತ ಕಾರ್ಯಕ್ರಮದಂತೆ ಕ್ಷೇತ್ರದಾದ್ಯಂತ ಬಿಂಬಿಸಿಕೊಳ್ಳುತ್ತಿದ್ದಾರೆ. ಇದರಿಂದ ಮತದಾರರಿಗೆ ತಪ್ಪು ಸಂದೇಶ ರವಾನೆಯಾಗುತ್ತಿದೆ ಎಂದು ದೂರಿನಲ್ಲಿ ಬಿಜೆಪಿ ಗಮನ ಸೆಳೆದಿದೆ. ಸರಕಾರಿ ಆಧಾರ್: ನಿಲೇಕಣಿ ವಿರುದ್ಧ ಬಿಜೆಪಿ ದೂರು ಮಾರ್ಚ್ 5ರಿಂದ ದೇಶಾದ್ಯಂತ […]

ಆಕಾಂಕ್ಷಾ ಚಿತ್ರಕಲಾ ಪ್ರದರ್ಶನ

Saturday, March 8th, 2014
Art-Exhibition

ಬೆಂಗಳೂರು: ಮಹಿಳಾ ದಿನದ ಅಂಗವಾಗಿ ಐವತ್ತು ಮಹಿಳಾ ಕಲಾವಿದರು ಒಟ್ಟಿಗೆ ಸೇರಿ ನಡೆಸುವ ಕಲಾಪ್ರದರ್ಶನ ಇಂದು ಸಂಜೆ ೩ ಗಂಟೆಗೆ ಚಿತ್ರಕಲಾ ಪರಿಷತ್ತಿನಲ್ಲಿ ಆರಂಭವಾಗಲಿದೆ . ಇವರ ಸುಂದರ ಕಲಾಕೃತಿಗಳು ‘ಆಕಾಂಕ್ಷಾ’ ಹೆಸರಿನಲ್ಲಿ ಪ್ರದರ್ಶನಗೊಳ್ಳಲಿದ್ದು, ಚಿತ್ರಕಲಾ ಪರಿಷತ್‌ನಲ್ಲಿ ಮಾರ್ಚ್ 8, 9 ಮತ್ತು 10ರಂದು ನಡೆಯಲಿದೆ. ಈ ಐವತ್ತು ಪ್ರತಿಭಾನ್ವಿತ ಕಲಾವಿದರ ಕಲಾಕೃತಿಗಳು ಒಟ್ಟಿಗೆ ಒಂದೇ ವೇದಿಕೆಯಲ್ಲಿ ಪ್ರದರ್ಶನಗೊಳ್ಳುತ್ತಿರುವುದು ವಿಶೇಷ. ಇವರಿಗೆ ಪ್ರೇರಕಶಕ್ತಿಯಾಗಿ ಕೆಲಸ ಮಾಡುತ್ತಿರುವವರು ಉಷಾ ರೈ, ಶ್ಯಾಮಲಾ ರಮಾನಂದ ಮತ್ತು ಕವಿತಾ ಪ್ರಸನ್ನ. ಪ್ರದರ್ಶನವನ್ನು […]

ಅಂಬರೀಶ್‌: 15 ದಿನಗಳ ಬಳಿಕ ಮಾತನಾಡಿದ

Friday, March 7th, 2014
Ambarish-Suma

ಬೆಂಗಳೂರು : ಸಿಂಗಾಪುರದ ಮೌಂಟ್ ಎಲಿಜಬೆತ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ನಟ, ವಸತಿ ಸಚಿವ ಅಂಬರೀಶ್‌ ಅವರ ಅರೋಗ್ಯದಲ್ಲಿ ಗಣನೀಯ ಚೇತರಿಕೆ ಕಂಡು ಬಂದಿದ್ದು ಕಳೆದ 15 ದಿನಗಳ ಬಳಿಕ ಇದೇ ಮೊದಲ ಬಾರಿ ಕುಟುಂಬ ಸದಸ್ಯರೊಡನೆ ಮಾತನಾಡಿದ್ದಾರೆ ಎಂದು ತಿಳಿದು ಬಂದಿದೆ. ಅಂಬರೀಶ್‌ ಅವರಿಗೆ ಅಳವಡಿಸಲಾಗಿದ್ದ ವೆಂಟಿಲೇಟರನ್ನು ನಿನ್ನೆ ತೆಗೆದಿದ್ದು ಆರೋಗ್ಯದಲ್ಲಿ ಬಹಳಷ್ಟು ಚೇತರಿಕೆ ಕಂಡು ಬಂದಿದೆ ಹೀಗಾಗಿ ಇನ್ನೆರಡು ದಿನಗಳಲ್ಲಿ ಸಾಮಾನ್ಯ ವಾರ್ಡ್‌ಗೆ ಶಿಫ್ಟ್ ಮಾಡಲಾಗುತ್ತಿದೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ . ಮೌಂಟ್ […]

ದೀಪಿಕಾಗೆ ಭರ್ಜರಿ ಬ್ರಾಂಡ್‌ ವ್ಯಾಲ್ಯೂ

Friday, March 7th, 2014
pika-Padukone

ಬೆಂಗಳೂರುಃ ಯಶಸ್ಸಿನ ಬೇನ್ನೆರಿ ಹೊರಟಿರುವ ದೀಪಿಕಾ ಪಡುಕೋಣೆಗೆ ಅದೃಷ್ಟ ಕುಲಾಯಿಸಿದೆ. ಕಳೆದ ವರ್ಷ ಆಕೆ ನಟಿಸಿದ ನಾಲ್ಕು ಚಿತ್ರಗಳೂ ಬಾಕ್ಸ್‌ ಆಫೀಸ್‌ನಲ್ಲಿ ಸತತವಾಗಿ ಹಿಟ್ ಆದ ಕಾರಣ ಈಕೆಯ ಬ್ರಾಂಡ್ ವ್ಯಾಲ್ಯೂ ಗಗನಕ್ಕೇರಿದೆ. ಕೋಟಿ ಕೋಟಿ ಹಣ ಆಕೆಯ ಬ್ಯಾಂಕ್ ಖಾತೆಗೆ ಬಂದು ಬಿಳುತ್ತಿದೆ. ಸಾಫ್ಟ್ ಡ್ರಿಂಕ್ ಬ್ರಾಂಡೊಂದು ಆಕೆಗೆ ಒಂದು ವರ್ಷದ ಅವಧಿಗೆ ಬರೋಬ್ಬರಿ 6 ಕೋಟಿ ರೂಪಾಯಿ ರಾಯಲ್ಟಿ ನೀಡಿದೆ. ಹಳೇಯ ನಟಿಯರಿಗೆ ಸೆಡ್ಡು ಹೋಡೆದಿರುವ ದೀಪಿಕಾ ತಮ್ಮ ಖ್ಯಾತಿಯನ್ನು ಬಳಸಿಕೊಂಡು ಒಳ್ಳೆಯ ಹಣ […]

ಲೋಕಸಮರ: ಜೆಡಿಎಸ್‌ನಿಂದ ಧನಂಜಯ್ ಕುಮಾರ್ ಸ್ಪರ್ಧೆ?

Friday, March 7th, 2014
Dhananjay-Kumar

ಬೆಂಗಳೂರು: ಬಿಜೆಪಿ ಸೇರ್ಪಡೆಗೆ ಗ್ರೀನ್ ಸಿಗ್ನಲ್ ಸಿಗದ ಹಿನ್ನೆಲೆಯಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಪರಮಾಪ್ತ ಧನಂಜಯ್ ಕುಮಾರ್ ಅವರು, ಈಗ ಜೆಡಿಎಸ್ ಕದ ತಟ್ಟಿದ್ದು, ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್‌ನಿಂದ ಸ್ಪರ್ಧಿಸುವ ಯತ್ನ ನಡೆಸಿದ್ದಾರೆ. ಬಿಜೆಪಿ ಸೇರ್ಪಡೆಗೆ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಧನಂಜಯ್ ಕುಮಾರ್ ಅವರು, ಇಂದು ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರನ್ನು ಭೇಟಿ ಮಾಡಿದ್ದು, ಮಂಗಳೂರು ಲೋಕಸಭಾ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಲು ತಮಗೆ ಟಿಕೆಟ್ ನೀಡುವಂತೆ ಮನವಿ ಮಾಡಿದ್ದಾರೆ ಎನ್ನಲಾಗಿದೆ. ಯಡಿಯೂರಪ್ಪ ಅವರು […]

ಅಕ್ರಮಕ್ಕೆ ಅಡ್ಡಿಯಾದ ಅಧಿಕಾರಿಗೆ ರಜೆ ಸಜೆ!

Thursday, March 6th, 2014
Siddaramaiah

ಬೆಂಗಳೂರು: ರಜೆ ಬೇಕೆ, ಪ್ರಾಮಾಣಿಕವಾಗಿ ಕೆಲಸ ಮಾಡಿ! ರಾಜ್ಯ ಸರ್ಕಾರ ಪ್ರಾರಂಭಿಸಿರುವ ನೂತನ ‘ರಜಾ ಭಾಗ್ಯ’ ಯೋಜನೆಯ ಪ್ರಥಮ ಷರತ್ತಿದು! ಕಾಂಗ್ರೆಸ್ ಪ್ರಣಾಳಿಕೆ ಅಥವಾ ಬಜೆಟ್‌ನಲ್ಲಿ ಘೋಷಿಸದೇ ಅನುಷ್ಠಾನಕ್ಕೆ ತಂದಿರುವ ವಿನೂತನ ಯೋಜನೆ!! ಭ್ರಷ್ಟಾಚಾರ ರಹಿತ ಆಡಳಿತ ನೀಡುತ್ತೇವೆ. ಭ್ರಷ್ಟ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದು ಘೋಷಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸರ್ಕಾರದ ಭ್ರಷ್ಟಾಚಾರ ನಿಗ್ರಹದ ರೀತಿಯಿದು! ಸರ್ಕಾರದ ಹಿರಿಯ ಅಧಿಕಾರಿಗಳಿಗೆ ಒಂದು ದಿನ ರಜೆ ಸಿಗುವುದೇ ದೊಡ್ಡ ಮಾತು. ಆದರೆ ಒಬ್ಬ ಹಿರಿಯ ಹಾಗೂ ಪ್ರಾಮಾಣಿಕ […]

ಅಂಬಿ ಆರೋಗ್ಯದಲ್ಲಿ ಚೇತರಿಕೆ

Thursday, March 6th, 2014
Ambarish

ಸಿಂಗಾಪುರ: ಸಿಂಗಾಪುರದ ಮೌಂಟ್ ಎಲಿಜಬೆತ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಹಿರಿಯ ನಟ ಹಾಗೂ ವಸತಿ ಸಚಿವ ಅಂಬರೀಷ್ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದ್ದು, ಅವರಿಗೆ ಅಳವಡಿಸಲಾಗಿದ್ದ ವೆಂಟಿಲೇಟರ್ ಅನ್ನು ತೆಗೆಯಲಾಗಿದೆ. ಅಂಬಿ ಆರೋಗ್ಯದ ಬಗ್ಗೆ ಮಾಧ್ಯಮಕ್ಕೆ ಮಾತನಾಡಿರುವ ಅವರ ಕುಟುಂಬ, ಅಂಬರೀಷ್ ಅವರು ಈಗ ಸಂಪೂರ್ಣ ಗುಣಮುಖರಾಗಿದ್ದು, ಶೀಘ್ರವೇ ಬೆಂಗಳೂರಿಗೆ ವಾಪಸ್ ಬರಲಿದ್ದಾರೆ ಎಂದು ತಿಳಿಸಿದ್ದಾರೆ. ಅಂಬರೀಷ್ ಅವರು ಈಗ ಗುಣಮುಖರಾಗಿದ್ದು, ಅವರಿಗೆ ಅಳವಡಿಸಲಾಗಿದ್ದ ವೆಂಟಿಲೇಟರ್ ಅನ್ನು ತೆಗೆಯಲಾಗಿದೆ. ಈಗ ಅವರು ಸ್ವತಂತ್ರವಾಗಿ ಉಸಿರಾಡುತ್ತಿದ್ದಾರೆ ಎಂದು ಅಂಬರೀಷ್ […]

ಬೆಂಬಲಿಗರ ಬಂಡಾಯ, ಮಾತುಕತೆಗೆ ಬಿಎಸ್‌ವೈ ಆಹ್ವಾನ

Wednesday, March 5th, 2014
Yeddyurappa

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಬಿಜೆಪಿಗೆ ಮರುಸೇರ್ಪಡೆಯಾದ ಬೆನ್ನಲ್ಲೆ ಅವರ ಬೆಂಬಲಿಗರು ಬಂಡಾಯವೆದ್ದಿದ್ದಾರೆ. ಇದು ಬಿಜೆಪಿಗೆ ನಿರೀಕ್ಷತವೇ. ಆದರೆ ಲೋಕಸಭೆ ಚುನಾವಣೆ ಘೋಷಣೆಯಾಗಿರವುದರಿಂದ ಬಿಜೆಪಿಗೆ ಬಿಸಿ ತುಪ್ಪವಾಗುವ ಸಾಧ್ಯತೆ ಇದೆ. ಬಂಡಾಯಕ್ಕೆ ಪ್ರಮುಖ ಕಾರಣ ಯಡಿಯೂರಪ್ಪ ಅವರ ಪರಮಾಪ್ತ, ವಿಧಾನಪರಿಷತ್ ಸದಸ್ಯ ಎಂ.ಡಿ.ಲಕ್ಷ್ಮೀನಾರಾಯಣ ಅವರು ಬಿಎಸ್‌ವೈಗೆ ಬರೆದ ಪತ್ರ. ಯಡಿಯೂರಪ್ಪ ಅವರು ತಮ್ಮ ಜತೆಯಲ್ಲಿದ್ದ ನಿಷ್ಠಾವಂತರನ್ನೇ ಕಡೆಗಣಿಸಿದ್ದಾರೆ. ತಮ್ಮ ಪರ ಹೋರಾಟ ಮಾಡಿದವರನ್ನು ಬೀದಿಪಾಲು ಮಾಡಿದ್ದಾರೆ ಎಂದು ಲಕ್ಷ್ಮೀನಾರಾಯಣ ಆರೋಪಿಸಿದ್ದಾರೆ. ಕೆಜೆಪಿ ಸ್ಥಾಪಿಸಲು ಬಿಎಸ್‌ವೈ ಅವರೊಂದಿಗೆ […]