Blog Archive

ಸಿದ್ದರಾಮಯ್ಯ ಅವರ ಹಿರಿಯ ಸಹೋದರಿ ನಿಧನ,ಕಾರ್ಯಕ್ರಮ ರದ್ದು

Saturday, October 7th, 2017
siddaramiah

ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹಿರಿಯ ಸಹೋದರಿ ಚಿಕ್ಕಮ್ಮ ಮೈಸೂರಿನಲ್ಲಿ ನಿಧನರಾಗಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಸಹೋದರಿ ಚಿಕ್ಕಮ್ಮ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. 90 ವರ್ಷ ವಯಸ್ಸಿನ ಚಿಕ್ಕಮ್ಮ ಅವರು ವಯೋ ಸಹಜ ಆನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫ‌ಲಕಾರಿಯಾಗದೆ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ. ಇಂದು ದೇವೇಗೌಡನ ಹುಂಡಿಯಲ್ಲಿ ಅಂತ್ಯಕ್ರಿಯೆ ನೆರವೇರಲಿದೆ.ಅಂತ್ಯಕ್ರಿಯೆಯಲ್ಲಿ ಸಿಎಂ ಸಿದ್ದರಾಮಯ್ಯ ಭಾಗವಹಿಸಲಿದ್ದು, ಇಂದಿನ ತಮ್ಮ ಎಲ್ಲ ಅಧಿಕೃತ ಕಾರ್ಯಕ್ರಮಗಳನ್ನು ರದ್ದು ಮಾಡಿದ್ದಾರೆ.

2018ರ ಚುನಾವಣೆ ಕಡೆಯ ಚುನಾವಣೆ, ಇನ್ನು ಚುನಾವಣೆಗೆ ನಿಲ್ಲಲ್ಲ :ಸಿದ್ದರಾಮಯ್ಯ

Wednesday, October 4th, 2017
CM

ಮೈಸೂರು:  “ರಾಜಕೀಯವಾಗಿ ಜನ್ಮ ನೀಡಿದ, ಉಪ ಚುನಾವಣೆಯಲ್ಲಿ ಮರುಜನ್ಮ ನೀಡಿದ ಚಾಮುಂಡೇಶ್ವರಿ ಕ್ಷೇತ್ರದಿಂದಲೇ ಸ್ಪರ್ಧಿಸುತ್ತೇನೆ. 2018ರ ವಿಧಾನಸಭೆ ಚುನಾವಣೆಯೇ ನನ್ನ ಕಡೆಯ ಚುನಾವಣೆ “ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಹೂಟಗಳ್ಳಿಯ ಸಂತೆ ಮೈದಾನದಲ್ಲಿಮಂಗಳವಾರ ಏರ್ಪಡಿಸಿದ್ದ ಚಾಮುಂಡೇಶ್ವರಿ ಕ್ಷೇತ್ರದ ಕಾಂಗ್ರೆಸ್‌ ಕಾರ್ಯಕರ್ತರ ಬೃಹತ್‌ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು  “2013ರ ಚುನಾವಣೆಯೇ ಅಂತಿಮ, ಇನ್ನು ಸ್ಪರ್ಧೆ ಮಾಡಲ್ಲ ಎಂದು ಹೇಳಿದ್ದೆ, ಆದರೆ, ಕಾಂಗ್ರೆಸ್‌ ಹೈಕಮಾಂಡ್‌ ನನ್ನ ನಾಯಕತ್ವದಲ್ಲೇ ಚುನಾವಣೆಗೆ ಹೋಗಲು ಹೇಳಿರುವುದರಿಂದ ಅನಿವಾರ್ಯವಾಗಿ 2018ರ ಚುನಾವಣೆಗೆ ಸ್ಪರ್ಧಿಸುತ್ತಿದ್ದೇನೆ. ಇದೊಂದೇ ಚುನಾವಣೆ, ಇನ್ನು […]

ಸಿದ್ದರಾಮಯ್ಯನವರು ಮಾತನಾಡುವ ಮುನ್ನ ಆತ್ಮವಿಮರ್ಶೆ ಮಾಡಿಕೊಳ್ಳಬೇಕಿದೆ: ಪ್ರತಾಪ್ ಸಿಂಹ

Monday, December 26th, 2016
prathap-simha

ಮೈಸೂರು: ಭಾರತರತ್ನ ಅಂಬೇಡ್ಕರ್‌ ಅವರ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಾತನಾಡುವ ಮುನ್ನ ಆತ್ಮವಿಮರ್ಶೆ ಮಾಡಿಕೊಳ್ಳಬೇಕಿದೆ ಎಂದು ಸಂಸದ ಪ್ರತಾಪ್ ಸಿಂಹ ಕಾಂಗ್ರೆಸ್‌ ವಿರುದ್ಧ ಕಿಡಿಕಾರಿದರು. ಆರ್‌ಎಸ್ಎಸ್, ಬಿಜೆಪಿ ಹಾಗೂ ಬಜರಂಗದಳ ಹಿಂದುತ್ವವನ್ನು ಪ್ರತಿಪಾದಿಸುತ್ತಿದ್ದು, ಅಂಬೇಡ್ಕರ್ ಅನುಯಾಯಿಗಳು ಹಿಂದುತ್ವ ಪ್ರತಿಪಾದಿಗಳನ್ನು ನಂಬಬಾರದು ಎಂದು ಸಿಎಂ ಸಿದ್ದರಾಮಯ್ಯ ಹೇಳಿಕೆ ನೀಡಿದ್ದರು. ಇದಕ್ಕೆ ಪ್ರತಿಯಾಗಿ ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಮಾತನಾಡಿದ ಪ್ರತಾಪ್ ಸಿಂಹ, ಅಂಬೇಡ್ಕರ್‌ ಅವರಿಗೆ ಭಾರತರತ್ನ ಪ್ರಶಸ್ತಿಯನ್ನು ಕಾಂಗ್ರೆಸ್ ಏಕೆ ನೀಡಲಿಲ್ಲ. ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಅವರಿಗೆ […]

ಶಾಸಕ ಎಚ್.ವೈ.ಮೇಟಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು ಅದನ್ನು ಅಂಗೀಕರಿಸಿದ್ದೇನೆ: ಸಿದ್ದರಾಮಯ್ಯ

Wednesday, December 14th, 2016
Siddaramaiah

ಬೆಂಗಳೂರು: ರಾಸಲೀಲೆ ಸಿಡಿ ಬಯಲಾದ ಹಿನ್ನೆಲೆಯಲ್ಲಿ ಬಾಗಲಕೋಟೆ ಶಾಸಕ ಎಚ್.ವೈ.ಮೇಟಿ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು ಅದನ್ನು ನಾನು ಅಂಗೀಕರಿಸಿದ್ದೇನೆ. ಅದನ್ನು ಶಿಫಾರಸು ಮಾಡಿ ರಾಜ್ಯಪಾಲರಿಗೆ ಕಳುಹಿಸಿದ್ದೇನೆ. ಅಲ್ಲದೇ ಪ್ರಕರಣದ ಸತ್ಯಾಸತ್ಯತೆ ತಿಳಿಯಲು ಪ್ರಕರಣವನ್ನು ಸಿಐಡಿಗೆ ವಹಿಸಿದ್ದೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ. ಎಚ್.ವೈ.ಮೇಟಿ ರಾಸಲೀಲೆ ಸಿಡಿಯನ್ನು ಆರ್ ಟಿಐ ಕಾರ್ಯಕರ್ತ ರಾಜಶೇಖರ್ ನವದೆಹಲಿಯಲ್ಲಿ ಬಿಡುಗಡೆ ಮಾಡಿದ್ದರು. ಪ್ರಕರಣ ಮಾಧ್ಯಮಗಳಲ್ಲಿ ಪ್ರಸಾರವಾದ ಬಳಿಕ ಮೇಟಿ ಸಿಎಂ ಅವರನ್ನು ಭೇಟಿಯಾಗಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. […]

ಅದ್ದೂರಿ ಮದುವೆ ಬಗ್ಗೆ ಟೀಕಿಸುತ್ತಿದ್ದ ಸಿಎಂ ಸಿದ್ದರಾಮಯ್ಯ ಈ ದುಂದು ವೆಚ್ಚ ಮಾಡಿದ್ದು ಸರಿಯೇ: ಎಚ್.ಡಿ.ಕುಮಾರಸ್ವಾಮಿ

Wednesday, November 23rd, 2016
siddaramaiah

ಬೆಳಗಾವಿ: ಅದ್ದೂರಿ ಮದುವೆ ಎಂಬ ಕಾರಣಕ್ಕೆ ಬಿಜೆಪಿಯ ಮಾಜಿ ಸಚಿವ ಜನಾರ್ದನ ರೆಡ್ಡಿ ಅವರ ಪುತ್ರಿ ಬ್ರಹ್ಮಿಣಿ ಮದುವೆಯಿಂದ ದೂರ ಉಳಿದಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅದೇ ಕಾರಣಕ್ಕೆ ತಮ್ಮ ಸಚಿವ ಸಂಪುಟದ ಸಹೋದ್ಯೋಗಿ ರಮೇಶ್ ಜಾರಕಿಹೊಳಿ ಅವರ ಪುತ್ರನ ಮದುವೆ ಸಂಭ್ರಮದಿಂದ ದೂರ ಉಳಿದಿದ್ದರು. ಆದರೆ ಇದೀಗ ಅದ್ದೂರಿ ಮದುವೆ ಹೋಗಲ್ಲ ಎಂದಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬುಧವಾರ ಜಾರಕಿಹೊಳಿ ಮಗನ ಮದುವೆಗೆ ಶುಭಾಶಯ ಹೇಳಲು ಖಾಸಗಿ ಹೆಲಿಕಾಪ್ಟರ್ ಬಳಸುವ ಮೂಲಕ ವಿವಾದಕ್ಕೆ ಸಿಲುಕಿದ್ದಾರೆ. ಸಿಎಂ ಅವರು […]

ಮಗನನ್ನು ಮತದಾರರಿಗೆ ಪರಿಚಯಿಸಿದ್ದರಲ್ಲಿ ತಪ್ಪೇನಿದೆ : ಸಿದ್ದರಾಮಯ್ಯ

Monday, October 10th, 2016
cm airport

ಮಂಗಳೂರು: ಕಾವೇರಿ ಕಣಿವೆ ವ್ಯಾಪ್ತಿಯ ಜಲಾಶಯಗಳನ್ನು ಪರಿಶೀಲನೆ ನಡೆಸಿರುವ ಕೇಂದ್ರ ತಜ್ಞರ ತಂಡಕ್ಕೆ ರಾಜ್ಯದ ಸಂಕಷ್ಟ ಪರಿಸ್ಥಿತಿ ಅರ್ಥವಾಗಿದ್ದು, ರಾಜ್ಯಕ್ಕೆ ನ್ಯಾಯ ಸಿಗುವ ಭರವಸೆ ಇದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ದ.ಕ. ಜಿಲ್ಲೆಯಲ್ಲಿ ರವಿವಾರ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಆಗಮಿಸಿದ ಸಂದರ್ಭ ಬಜಪೆ ಅಂತಾರಾಷ್ಟ್ರೀಯ ವಿಮಾನನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾವೇರಿ ನದಿ ನೀರು ಬಗ್ಗೆ ಎರಡೂ ರಾಜ್ಯಗಳಲ್ಲಿರುವ ವಸ್ತುಸ್ಥಿತಿ ಅಧ್ಯಯನ ನಡೆಸಲು ಒಂದು ತಜ್ಞರ ತಂಡ ಕಳುಹಿಸುವಂತೆ ನಾವೇ ಕೇಳಿದ್ದು. ಕರ್ನಾಟಕ ಹಾಗೂ ತಮಿಳುನಾಡಿನ […]

ಸಿದ್ದರಾಮಯ್ಯ,ಡಿವಿಎಸ್‌ ಮತ್ತು ಮೊಯ್ಲಿ ಅವರಿಗೆ ಕ್ರೀಡಾಪಟುಗಳಿಗೆ ನೀಡುವ ಖೇಲ್‌ ರತ್ನ ಪ್ರಶಸ್ತಿ ಕೊಡಬೇಕು: ಪೂಜಾರಿ

Saturday, September 3rd, 2016
Janardana-poojary

ಮಂಗಳೂರು : ಕಾಂಗ್ರೆಸ್‌ ಹಿರಿಯ ನಾಯಕ ಜನಾರ್ದನ ಪೂಜಾರಿ ಅವರು ಮತ್ತೆ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಸುದ್ದಿಗೋಷ್ಠಿ ನಡೆಸಿ ಕಿಡಿಕಾರಿದ್ದಾರೆ. ನೇತ್ರಾವತಿ ನದಿ ತಿರುವು ಯೋಜನೆಯನ್ನು ವಿರೋಧಿಸಿ ಶನಿವಾರ ಕರೆದಿದ್ದ ಸುದ್ದಿಗೋಷ್ಠಿಯನ್ನುದ್ದೇಸಿ ಮಾತನಾಡಿದ ಪೂಜಾರಿ ಅವರು ಕೇಂದ್ರ ಸಚಿವ ಡಿ.ವಿ ಸದಾನಂದಗೌಡ, ಸಂಸದ ವೀರಪ್ಪ ಮೊಯ್ಲಿ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ದ ಆಕ್ರೋಶ ವ್ಯಕ್ತ ಪಡಿಸಿದರು. ಎತ್ತಿನಹೊಳೆ ಯೋಜನೆಯನ್ನು ಅನುಷ್ಠಾನಕ್ಕೆ ತರುವಲ್ಲಿ ಬದ್ಧರಾಗಿರುವ ಸಿದ್ದರಾಮಯ್ಯನವರು ಯೋಜನೆಗೆ ಅಡ್ಡ ಬಂದರೆ ಅವರನ್ನು ನನ್ನ ಬಳಿ ಕಳುಹಿಸಿ […]

ಸಿಎಂ ಪುತ್ರ ರಾಕೇಶ್‌ ಅವರ ಅಂತಿಮ ವಿದಾಯ

Tuesday, August 2nd, 2016
Rakesh

ಮೈಸೂರು: ಅಕಾಲಿಕ ಮರಣಕ್ಕೆ ತುತ್ತಾದ ಸಿಎಂ ಪುತ್ರ ರಾಕೇಶ್‌ ಅವರ ಅಂತಿಮ ಸಂಸ್ಕಾರ ಮೈಸೂರು ತಾಲೂಕಿನ ಟಿ. ಕಾಟೂರಿನ ಫಾರಂಹೌಸ್‌ನಲ್ಲಿ ಸೋಮವಾರ ಸಂಜೆ ಹಾಲುಮತ ಸಂಪ್ರದಾಯದಂತೆ ನೆರವೇರಿತು. ದಸರಾ ವಸ್ತು ಪ್ರದರ್ಶನ ಆವರಣದಿಂದ ಫಾರಂ ಹೌಸ್‌ಗೆ ಪಾರ್ಥಿವ ಶರೀರವನ್ನು ತರಲಾಯಿತು. ಸಮಾಧಿಗೆ ಉಪ್ಪು, ವಿಭೂತಿ, ಬಿಲ್ವಪತ್ರೆ, ಅರಿಶಿಣ, ಕುಂಕುಮ ಹಾಕಿ ಪೂಜೆ ಸಲ್ಲಿಸಲಾಯಿತು. ರಾಕೇಶ್‌ ಅವರ ಬಾಯಿಗೆ ರುದ್ರಾಕ್ಷಿ ಹಾಕಲಾಯಿತು. ಅಕಾಲಿಕ ಮರಣ ಉಂಟಾಗಿರುವುದರಿಂದ ಅಷ್ಟ ದಿಕ್ಕುಗಳಿಗೂ ದಿಗ್ಬಂಧನ ಹಾಕಿ, ಮಂತ್ರಾಕ್ಷತೆ, ಅಂಕುರಾರ್ಪಣೆ ನೆರವೇರಿಸಿ ಎಂಟು ದಿಕ್ಕಿನಲ್ಲಿಯೂ […]

ಯೋಧರ ಮನೆ ಮಂದಿಯ ರಕ್ಷಣೆ ನನ್ನ ಕರ್ತವ್ಯ: ಡಾ| ಜಿ. ಪರಮೇಶ್ವರ್‌

Thursday, July 28th, 2016
Ekanatha-Shetty

ಬೆಳ್ತಂಗಡಿ: ನಾಪತ್ತೆಯಾಗಿರುವ ಸೇನಾ ವಿಮಾನದಲ್ಲಿದ್ದ ಗುರುವಾಯನಕೆರೆಯ ಯೋಧ ಕೆ. ಏಕನಾಥ ಶೆಟ್ಟಿ ಅವರ ಮನೆಗೆ ಗೃಹಸಚಿವ ಡಾ| ಜಿ. ಪರಮೇಶ್ವರ್‌ ದೂರವಾಣಿ ಕರೆ ಮಾಡಿದ್ದಾರೆ. ಯೋಧನ ಪತ್ನಿ ಶಿಕ್ಷಕಿ ಜಯಂತಿ ಅವರ ಜತೆ ಮಾತನಾಡಿದ ಸಚಿವರು ಮಾಜಿ ಹಾಗೂ ಹಾಲಿ ಯೋಧರ ಮನೆ ಮಂದಿಯ ರಕ್ಷಣೆ ನನ್ನ ಕರ್ತವ್ಯ. ನಾನು ಕರೆ ಮಾಡುವಾಗ ಆದ ವಿಳಂಬಕ್ಕೆ ಕ್ಷಮೆ ಕೇಳುತ್ತೇನೆ ಎಂದು ಹೇಳಿದ್ದಾರೆ. ಮಂಗಳವಾರ ಮುಖ್ಯಮಂತ್ರಿ ಸಿದ್ದರಾಮಯ್ಯ, ಅದಕ್ಕೂ ಮುನ್ನ ಕೇಂದ್ರ ರಕ್ಷಣಾ ಸಚಿವ ಮನೋಹರ ಪಾರಿಕ್ಕರ್‌ ಕರೆ […]

ಸಿದ್ದರಾಮಯ್ಯ ಅವರ ಪುತ್ರ ರಾಕೇಶ್‌ ಶೀಘ್ರ ಗುಣಮುಖರಾಗಲಿ ಎಂದು ವಿಶೇಷ ಪ್ರಾರ್ಥನೆ

Thursday, July 28th, 2016
Rakesh-Siddaramaiah

ಮಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ರ ರಾಕೇಶ್‌ ಅನಾರೋಗ್ಯದಿಂದಾಗಿ ಬೆಲ್ಜಿಯಂನ ಆಸ್ಪತ್ರೆಯೊಂದರಲ್ಲಿ ದಾಖಲಾಗಿದ್ದು, ಶೀಘ್ರ ಗುಣಮುಖರಾಗಲಿ ಎಂದು ಹಾರೈಸಿ ಉಳ್ಳಾಲದ ಸಯ್ಯದ್ ಮದನಿ ದರ್ಗಾ ಸಮಿತಿ ವತಿಯಿಂದ ವಿಶೇಷ ಪ್ರಾರ್ಥನೆ ಮಾಡಲಾಯಿತು. ಸಯ್ಯದ್ ಮದನಿ ಅರಬಿಕ್ ಕಾಲೇಜಿನ ಪ್ರೊ. ಹಾಜಿ ಅಹ್ಮದ್ ಬಾವ ಮುಸ್ಲಿಯಾರ್ ಅವರು ಸಯ್ಯದ್ ಮದನಿ ದರ್ಗಾದಲ್ಲಿ ಪ್ರರ್ಥನೆ ನೆರವೇರಿಸಿದ್ದಾರೆ. ಈ ಸಂದರ್ಭದಲ್ಲಿ ದರ್ಗಾ ಅಧ್ಯಕ್ಷ ಹಾಜಿ ಅಬ್ದುಲ್ ರಶೀದ್, ಉಪಾಧ್ಯಕ್ಷ ಯು.ಕೆ. ಮೋನು ಕೋಟೆಪುರ, ಪ್ರಧಾನ ಕಾರ್ಯದರ್ಶಿ ಹಾಜಿ ತ್ವಾಹ ಮೊಹಮ್ಮದ್, ಸಹ […]