Blog Archive

ವಿಚ್ಛೇದನಕ್ಕೆ ಲೈಂಗಿಕತೆ ಕೊರತೆ ಕಾರಣ

Friday, February 7th, 2014
Divorce-cases

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ವಿಚ್ಛೇದನ ಪ್ರಕರಣಗಳು ಹೆಚ್ಚಲು ದಾಂಪತ್ಯದಲ್ಲಿ ಲೈಂಗಿಕ ಕ್ರಿಯೆ ಕೊರತೆಯೇ ಕಾರಣ..! ಅಚ್ಚರಿ ಎಂದರೂ ಇದು ನಿಜ. ವಿಚ್ಛೇದನ ಪ್ರಕರಣಗಳಲ್ಲಿ ದಂಪತಿಗಳ ಕೌನ್ಸಿಲಿಂಗ್ ನಡೆಸುವ ಸಮಾಲೋಚಕರ ಅಂಕಿ- ಅಂಶದಿಂದಲೇ ಈ ವಿಷಯ ಹೊರಬಿದ್ದಿದೆ. ಅಷ್ಟೇ ಅಲ್ಲ, ದೇಶದಲ್ಲಿ ಅತಿ ಹೆಚ್ಚು ವಿಚ್ಛೇದನ ಪ್ರಕರಣಗಳ ದಾಖಲಿನಲ್ಲಿ ಬೆಂಗಳೂರು ಮೂರನೇ ಸ್ಥಾನದಲ್ಲಿದೆ. ಇಲ್ಲಿ ಪ್ರತಿ ವರ್ಷ ಸರಾಸರಿ 5ರಿಂದ 6 ಸಾವಿರ ಪ್ರಕರಣಗಳು ದಾಖಲಾಗುತ್ತಿವೆ. ದೆಹಲಿ, ಮುಂಬಯಿ ನಗರಗಳಲ್ಲಿ ದಾಖಲಾಗುವ ವಿಚ್ಛೇದನ ಪ್ರಕರಣಗಳು ಹೆಚ್ಚಿದ್ದು, ಸರಾಸರಿ 10 […]

ಯುವಿಸಿಇಗೆ ವಿವಿ ಮಾನ್ಯತೆ ಬಯಕೆ

Friday, February 7th, 2014
Bangalore-University

ಬೆಂಗಳೂರು: ಖಾಸಗಿ ಕಾಲೇಜುಗಳಿಗೆ ಮಾತ್ರವಲ್ಲ ಬೆಂಗಳೂರು ವಿವಿ ವ್ಯಾಪ್ತಿಯ ಕಾಲೇಜಿಗೂ ‘ವಿಶ್ವವಿದ್ಯಾಲಯ’ ಎಂಬ ನಾಮಫಲಕ ಧರಿಸಬೇಕೆಂಬ ಆಕಾಂಕ್ಷೆ ಮೂಡಿದೆ. ಮಹಾನಗರದಲ್ಲಿರುವ ಸಾಕಷ್ಟು ಖಾಸಗಿ ಎಂಜಿನಿಯರಿಂಗ್ ಕಾಲೇಜುಗಳು ‘ವಿಶ್ವವಿದ್ಯಾಲಯ’ ಎಂಬ ಮಾನ್ಯತೆ ಪಡೆದುಕೊಳ್ಳುತ್ತಿವೆ. ಈ ಸಂದರ್ಭವನ್ನೇ ಬಳಸಿಕೊಳ್ಳುತ್ತಿರುವ ಬೆಂಗಳೂರು ವಿವಿ ವ್ಯಾಪ್ತಿಯ ‘ವಿಶ್ವೇಶ್ವರಯ್ಯ ಕಾಲೇಜ್ ಆಫ್ ಎಂಜಿನಿಯರಿಂಗ್‌’ (ಯುವಿಸಿಇ) ಪ್ರತ್ಯೇಕ ವಿಶ್ವವಿದ್ಯಾಲಯ ಮ್ಯಾನತೆ ಪಡೆದುಕೊಳ್ಳಲು ಚಿಂತಿಸಿದೆ. ಇದೀಗ ಈ ಕಾಲೇಜು ಬೆಂಗಳೂರು ವಿವಿ ವ್ಯಾಪ್ತಿಯಲ್ಲಿದ್ದು ನೂತನ ಕೋರ್ಸ್‌ಗಳ ಪರಿಚಯಿಸಿ ಹಾಗೂ ಹಾಲಿ ಇರುವ ಕಟ್ಟಡಗಳ ರಿಪೇರಿ ಸೇರಿದಂತೆ ನೂತನ […]

ಶಾಲೆಗಳಿಗೆ ಮಕ್ಕಳ ದಾಖಲು; ರಾಜ್ಯಾದ್ಯಂತ ಅಭಿಯಾನವಾಗಲಿ

Thursday, February 6th, 2014
Enroll-children

ಬೆಂಗಳೂರು: ರಾಜ್ಯದಲ್ಲಿ ಶಾಲೆಯಿಂದ ಹೊರಗುಳಿದಿರುವ 1.70 ಲಕ್ಷ ಮಕ್ಕಳನ್ನು ಶಾಲೆಗೆ  ಕರೆತರುವ ಸಲುವಾಗಿ ಪೋಲಿಯೋ ತಡೆ ಅಭಿಯಾನದ ಮಾದರಿಯಲ್ಲೇ ರಾಜ್ಯಾದ್ಯಂತ ಶಿಬಿರಗಳನ್ನು ನಡೆಸಿ ಮಕ್ಕಳನ್ನು ದಾಖಲು ಮಾಡಿಕೊಳ್ಳುವಂತೆ ಸರ್ಕಾರಕ್ಕೆ  ಹೈಕೋರ್ಟ್ ಸೂಚಿಸಿದೆ. ಮುಂದಿನ ಸಾಲಿಗೆ ದಾಖಲು ಆರಂಭಿಸಲು ಇದು ಸೂಕ್ತ ಸಮಯ. ರಾಜ್ಯಾದ್ಯಂತ ಶಿಬಿರ ನಡೆಸಿ ಮಕ್ಕಳನ್ನು ಅಲ್ಲಿಯೇ ನೇರ ದಾಖಲು ಮಾಡಿಕೊಳ್ಳಬೇಕು. ಶಾಲೆಯಿಂದ ಹೊರಗುಳಿದಿರುವ ಮಕ್ಕಳ ಜೊತೆಗೆ, 6 ವರ್ಷ ಮೇಲ್ಪಟ್ಟ ಎಲ್ಲಾ ವಿದ್ಯಾರ್ಥಿಗಳನ್ನು ಕೂಡ ಸೇರಿಸಿಕೊಳ್ಳಬೇಕು ಎಂದು ತಿಳಿಸಿದೆ. ಈ ಯೋಜನೆಗೆ ಸ್ಥಳೀಯ ಸಂಸ್ಥೆಗಳು […]

ಬಿಎಸ್‌ವೈ ಬೆಂಬಲಿಗರಿಗೆ ಸ್ಥಾನಮಾನ

Thursday, February 6th, 2014
yeddyurappa

ಬೆಂಗಳೂರುಃ ಯಡಿಯೂರಪ್ಪ ಒತ್ತಡಕ್ಕೆ ಮಣಿದಿರುವ ಬಿಜೆಪಿ ಅವರ ಬೆಂಬಲಿಗರಿಗೆ ಸ್ಥಾನಮಾನ ನೀಡುವ ಪ್ರಕ್ರಿಯೆಗೆ ಅಧಿಕೃತವಾಗಿ ಚಾಲನೆ ನೀಡಿದ್ದು, ಬುಧವಾರ ಹಲವರಿಗೆ ಸ್ಥಾನ ಮಾನ ಕಲ್ಪಿಸಿದೆ. ಯಡಿಯೂರಪ್ಪ ಜತೆ ಕೆಜೆಪಿಗೆ ಹೆಜ್ಜೆ ಹಾಕಿ ವಾಪಸಾಗಿರುವ ನಿಂಬಣ್ಣನವರ್‌ ಹಾಗೂ ಮಂಜುಳಾ ಅವರನ್ನು ರಾಜ್ಯ ಮಾಧ್ಯಮ ಸಹ ವಕ್ತಾರರನ್ನಾಗಿ ನೇಮಿಸ ಲಾಗಿದೆ. ಅಲ್ಲದೆ, ಮಾಜಿ ಶಾಸಕರಾದ ಸುನೀಲ್‌ ವಲ್ಯಾಪುರೆ ಹಾಗೂ ವಿಟuಲ ಕಟಕದೊಂಡ ಅವರಿಗೆ ರಾಜ್ಯ ಎಸ್‌ಸಿ ಮೋರ್ಚಾದ ಉಪಾಧ್ಯಕ್ಷ ಸ್ಥಾನದ ಜವಾಬ್ದಾರಿ ವಹಿಸಲಾಗಿದೆ. ಎಂ. ಚಂದ್ರಪ್ಪ ಹಾಗೂ ಬಾಬೂರಾವ್‌ ಚವಾಣ್‌ […]

ಸಿಎನ್‌ಆರ್‌ ರಾವ್‌ಗೆ ಭವ್ಯ ಸ್ವಾಗತ

Thursday, February 6th, 2014
C.N.R-Rao

ಬೆಂಗಳೂರುಃ  ದೇಶದ ಪರಮೋತ್ಛ ನಾಗರಿಕ ಪ್ರಶಸ್ತಿ ‘ಭಾರತ ರತ್ನ’   ಸ್ವೀಕರಿಸಿ ಬೆಂಗಳೂರಿಗೆ ಹಿಂತಿರುಗಿದ ಖ್ಯಾತ ವಿಜ್ಞಾನಿ ಡಾ.ಸಿ.ಎನ್‌.ಆರ್‌. ರಾವ್‌ ಅವರನ್ನು ಭವ್ಯ ಸ್ವಾಗತದೊಂದಿಗೆ ಬರಮಾಡಿಕೊಳ್ಳಲಾಯಿತು. ಬುಧವಾರ ಮಧ್ಯಾಹ್ನ 12.20ಕ್ಕೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪತ್ನಿ ಇಂಧುಮತಿ ರಾವ್‌ ಜತೆ ಬಂದಿಳಿದ ಸಿ.ಎನ್‌.ಆರ್‌.ರಾವ್‌ ಅವರನ್ನು ಸರ್ಕಾರದ ಪರವಾಗಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ ವಿಜಯ್‌ಕುಮಾರ್‌ ತೋರ್‌ಗಲ್‌ ಸೇರಿದಂತೆ ಜವಾಹರಲಾಲ್‌ ಉನ್ನತ ವಿಜ್ಞಾನ ಅಧ್ಯಯನ ಕೇಂದ್ರದ ಅಧಿಕಾರಿಗಳು ಹೂಗುತ್ಛ ನೀಡಿ ಸ್ವಾಗತಿಸಿದರು. ಈ […]

ಅಭಿವೃದ್ಧಿಗೆ ವಿವಿ ಸಿಬ್ಬಂದಿ ಅಸಹಕಾರ…

Thursday, February 6th, 2014
Pf.-Thimmegowda

ಬೆಂಗಳೂರು: ನಾನು ಬೆಂಗಳೂರು ವಿಶ್ವವಿದ್ಯಾಲಯಕ್ಕೆ ಬಂದ ಮೇಲೆ ಸಾಕಷ್ಟು ಅಭಿವೃದ್ಧಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಕಾರ್ಯರೂಪಕ್ಕೆ ತರಲು ಪ್ರಯತ್ನಿಸಿದ್ದೇನೆ. ಆದರೆ, ನಾನು ಪ್ರಯತ್ನಿಸಿದ ಎಲ್ಲ ಕೆಲಸಗಳಿಗೆ ವಿವಿ ಸಿಬ್ಬಂದಿ ಸಂಪೂರ್ಣ ಸಹಕರಿಸಿಲ್ಲ ಎಂಬ ಅಸಮಧಾನ ನನ್ನಲ್ಲೇ ಉಳಿದಿದೆ. ಆದರೂ, ಕಳೆದ ಒಂದು ವರ್ಷದಲ್ಲಿ ನಾನು ವಿವಿಯನ್ನು ಅಭಿವೃದ್ಧಿ ಪಥದೆಡೆಗೆ ಕೊಂಡೊಯ್ಯಲು ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ. ಮುಂದೆಯೂ ಮಾಡುತ್ತೇನೆ. ಇದು ಬೆಂಗಳೂರು ವಿವಿ ಕುಲಪತಿ ಪ್ರೊ.ಬಿ.ತಿಮ್ಮೇಗೌಡ ಅವರು ನುಡಿಗಳು.  ಭಾರಿ ವಿವಾದದಲ್ಲಿದ್ದ ಬೆಂಗಳೂರು ವಿಶ್ವವಿದ್ಯಾಲಯವನ್ನು ‘ಶಾಂತನಡೆ’ಯಲ್ಲಿ ಕೊಂಡೊಯ್ಯುವಲ್ಲಿ ಈವರೆಗೂ ತಿಮ್ಮೇಗೌಡ […]

ಕಣ್ಮುಚ್ಚಿ ಕುಳಿತ ಕನ್ನಡ ಅಭಿವೃದ್ಧಿ ಪ್ರಾಧಿಕಾರ

Wednesday, February 5th, 2014
upavasa-sathyagraha

ಬೆಂಗಳೂರು: ಸರೋಜಿನಿ ಮಹಿಷಿ ವರದಿ ಅನುಷ್ಠಾನಕ್ಕೆ ತರಲೆಂದೇ ನೇಮಕವಾದ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಈ ಕೆಲಸ ಮಾಡುವ ಬದಲು ಕಣ್ಮುಚ್ಚಿ ಕುಳಿತಿದೆ. ಹೀಗಾದರೆ ಮುಂದೊಂದು ದಿನ ಕನ್ನಡ ಭಾಷೆ, ಕನ್ನಡ ಜನರ ಅಸ್ತಿತ್ವವೇ ಇರಲಾರದು. ಇದು ಸರೋಜಿನಿ ಮಹಿಷಿ ವರದಿ ಜಾರಿಯಾಗಲೇಬೇಕೆಂದು ಸ್ವಾತಂತ್ರ್ಯ ಉದ್ಯಾನದಲ್ಲಿ ಉಪವಾಸ ಸತ್ಯಾಗ್ರಹನಡೆಸುತ್ತಿರುವ ‘ಕನ್ನಡಿಗರ ಉದ್ಯೋಗ ವೇದಿಕೆ’ ಅಧ್ಯಕ್ಷೆ ವಿನುತಾ ಅವರ ಮಾತು. ಉಪವಾಸ ಸತ್ಯಾಗ್ರಹದ ಒಂಬತ್ತನೇ ದಿನವಾದರೂ ಸರ್ಕಾರದಿಂದ ಯಾವುದೇ ಭರವಸೆ ಕೇಳಿ ಬಂದಿಲ್ಲ. ಸಾಹಿತಿಗಳೇ, ನೀವು ಕೂಡ ವರದಿ ಅನುಷ್ಠಾನಕ್ಕೆ […]

ಸಂಸ್ಕಾರಯುತ ಶಿಕ್ಷಣದಿಂದ ಸಭ್ಯ ಸಮಾಜ ನಿರ್ಮಾಣ

Wednesday, February 5th, 2014
Vivekananda-Ashram

ಬೆಂಗಳೂರು: ಸಂಸ್ಕಾರ, ಸಂಸ್ಕೃತಿಗಳನ್ನು ಒಳಗೊಂಡ ಶಿಕ್ಷಣದಿಂದ ಮಾತ್ರವೇ ಸದೃಢ ಹಾಗೂ ಸಭ್ಯ ಸಮಾಜ ನಿರ್ಮಾಣ ಸಾಧ್ಯ ಎಂದು ತುಮಕೂರು ಶ್ರೀರಾಮಕೃಷ್ಣ ವಿವೇಕಾನಂದ ಆಶ್ರಮದ ಶ್ರೀ ವೀರೇಶಾನಂದ ಸರಸ್ವತಿ ತಿಳಿಸಿದ್ದಾರೆ. ವಾಸವಿ ವಿದ್ಯಾರ್ಥಿ ನಿಲಯ ಟ್ರಸ್ಟ್ ನಗರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಸುವರ್ಣ ಮಹೋತ್ಸವ ಸಮಾರಂಭದಲ್ಲಿ ಅವರು ಈ ವಿಷಯ ತಿಳಿಸಿದರು. ಸಂಸ್ಕಾರಯುತ ಶಿಕ್ಷಣ ಇಂದಿನ ಅಗತ್ಯವಾಗಿದ್ದು, ಅದನ್ನು ರೂಪಿಸುವ ಜವಾಬ್ದಾರಿ ಸಮಾಜದ ಮೇಲಿದೆ ಎಂದು ಅವರು ತಿಳಿಸಿದರು. ಇದೇ ಸಂದರ್ಭದಲ್ಲಿ ಟ್ರಸ್ಟ್ ಟ್ರಸ್ಟಿಗಳ ಮೂಲಕ ರು. 12 ಕೋಟಿ […]

ಕುತೂಹಲ ಮೂಡಿಸಿದ ಗೌಡ-ಇಬ್ರಾಹಿಂ ಭೇಟಿ

Wednesday, February 5th, 2014
HD-Deve-Gowda

ಬೆಂಗಳೂರು:ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಹಾಗೂ ಕೇಂದ್ರದ ಮಾಜಿ ಸಚಿವ ಸಿ.ಎಂ. ಇಬ್ರಾಹಿಂ ಭೇಟಿ ಮಾಡಿ ಸುಮಾರು ಒಂದು ಗಂಟೆಗಳ ಕಾಲ ಚರ್ಚೆ ನಡೆಸಿದ್ದು, ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ. ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ತೃತೀಯ ರಂಗ ಸ್ಥಾಪನೆಯತ್ತ ಹೆಚ್ಚು ಒಲವು ತೋರಿರುವ ಎಚ್.ಡಿ. ದೇವೇಗೌಡ ಅವರು ಈ ಸಂದರ್ಭದಲ್ಲಿ ಸಿ.ಎಂ. ಇಬ್ರಾಹಿಂ ಅವರನ್ನು ಭೇಟಿ ಮಾಡಿರುವುದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ದೇವೇಗೌಡ ಅವರು ಪ್ರಧಾನಿಯಾಗಿದ್ದಾಗ ಅವರ ಸಚಿವ ಸಂಪುಟದಲ್ಲಿ ಸಚಿವರಾಗಿದ್ದ ಸಿ.ಎಂ. ಇಬ್ರಾಹಿಂ ಅವರು ಗೌಡರಿಗೆ […]

ಸಂತ ಶಿಶುನಾಳ ಷರೀಫ ಸೇರಿ ಹಲವು ಪ್ರಶಸ್ತಿಗೆ ಆಯ್ಕೆ

Tuesday, February 4th, 2014
Umashree

ಬೆಂಗಳೂರು: ಕನ್ನಡ ಮತ್ತು ಸಂಸ್ಕೃತಿ ಇಲಾಖೆ 2012ನೇ ಸಾಲಿನ ವಿವಿಧ ಪ್ರಶಸ್ತಿಗಳಿಗೆ ಅರ್ಹರಾದವರನ್ನು ಆಯ್ಕೆ ಮಾಡಿದ್ದು, ಅವರ ಪಟ್ಟಿಯನ್ನು ಸಚಿವೆ ಉಮಾಶ್ರೀ ಅವರು ಸೋಮವಾರ ಬಿಡುಗಡೆ ಮಾಡಿದ್ದಾರೆ. ಆಯ್ಕೆಯಾದವರ ವಿವರ: ಸಂತ ಶಿಶುನಾಳ ಷರೀಫ ಪ್ರಶಸ್ತಿ- ಎಸ್. ಸೋಮಸುಂದರಂ, ಬೆಂಗಳೂರು; ಶ್ರೀನಿಜಗುಣ ಪುರಂದರ ಪ್ರಶಸ್ತಿ- ಪಂ. ಸಂಗಮೇಶ್ವರ ಗುರವ, ಧಾರವಾಡ; ವರ್ಣಶಿಲ್ಪಿ ವೆಂಕಟಪ್ಪ ಪ್ರಶಸ್ತಿ- ಯು.ಭಾಸ್ಕರ ರಾವ್, ಬೆಂಗಳೂರು; ದಾನ ಚಿಂತಾಮಣಿ ಅತ್ತಿಮಬ್ಬೆ ಪ್ರಶಸ್ತಿ- ಡಾ.ಬಿ.ಎನ್.ಸುಮಿತ್ರಾಬಾಯಿ, ಬೆಂಗಳೂರು; ಕುಮಾರವ್ಯಾಸ ಪ್ರಶಸ್ತಿ- ಮಾರ್ಕಂಡೇಯ ಅವಧಾನಿ, ಶಿವಮೊಗ್ಗ. ಪ್ರತಿ ಪ್ರಶಸ್ತಿಯು […]