Blog Archive

ಗ್ರಾಮಾಂತರ ರಿಕ್ಷಾ ಚಾಲಕರ ವಿವಿಧ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ಪ್ರತಿಭಟನಾ ಸಭೆ

Tuesday, December 5th, 2017
TulunadRakshanaVedike

ಉಳ್ಳಾಲ :  ತುಳುನಾಡ ರಕ್ಷಣಾ ವೇದಿಕೆ ಮಂಗಳೂರು ವಿಧಾನ ಸಭಾ ಕ್ಷೇತ್ರದ ವತಿಯಿಂದ ಗ್ರಾಮಾಂತರ ರಿಕ್ಷಾ ಚಾಲಕರಿಗೆ ಮಂಗಳೂರು ನಗರ ಪ್ರವೇಶ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ಸೋಮವಾರ ತೊಕ್ಕೊಟ್ಟುನಲ್ಲಿ ಬೃಹತ್ ಹಕ್ಕೊತ್ತಾಯ ಪ್ರತಿಭಟನಾ ಸಭೆ  ನಡೆಯಿತು . ತುಳುನಾಡ ರಕ್ಷಣಾ ವೇದಿಕೆ ಸ್ಥಾಪಕಾಧ್ಯಕ್ಷ ಯೋಗೀಶ್ ಶೆಟ್ಟಿ ಜಪ್ಪು ಮಾತನಾಡಿ  ಗ್ರಾಮಾಂತರ ರಿಕ್ಷಾ ಚಾಲಕರಿಗೆ ರಕ್ಷಣೆಯಾಗಿ ತುಳುನಾಡ ರಕ್ಷಣಾ ವೇದಿಕೆ ಸದಾ ಸಿದ್ಧವಾಗಿರುತ್ತದೆ. ನಮಗೆ ನಗರ ಪ್ರದೇಶದ ರಿಕ್ಷಾ ಚಾಲಕರ ಮೇಲೆ ಯಾವುದೇ ದ್ವೇಷವಿಲ್ಲ, ಆದರೆ ಬಡ ಗ್ರಾಮಾಂತರ ರಿಕ್ಷಾ ಚಾಲಕರಿಗೆ ಆಗುತ್ತಿರುವ […]

ಖಾಸಗಿ ಆ್ಯಂಬುಲೆನ್ಸ್ ಚಾಲಕರಿಗೆ ಸೂಕ್ತ ಮೂಲಭೂತ ಸೌಕರ್ಯಬೇಕು : ಯೋಗೀಶ್ ಶೆಟ್ಟಿ,

Monday, July 17th, 2017
TRV

ಮಂಗಳೂರು : ತುಳುನಾಡ ರಕ್ಷಣಾ ವೇದಿಕೆಯು ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ ಸರಕಾರಿ ಮತ್ತು ಖಾಸಗಿ ಆ್ಯಂಬುಲೆನ್ಸ್ ಚಾಲಕರಿಗೆ ಸೂಕ್ತ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವಂತೆ ಆಗ್ರಹಿಸಿ ನಗರದ ವೆನ್ಲಾಕ್ ಜಿಲ್ಲಾಸ್ಪತ್ರೆಯ ಎದುರುಗಡೆ ಸೋಮವಾರ ಪ್ರತಿಭಟನೆ ನಡೆಸಿತು. ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ  ಮಾತನಾಡಿದ ವೇದಿಕೆಯ ಸ್ಥಾಪಕಾಧ್ಯಕ್ಷ ಯೋಗೀಶ್ ಶೆಟ್ಟಿ, ರೋಗಿಗಳ ಸೇವೆಗಾಗಿ ಕರ್ತವ್ಯ ನಿರ್ವಹಿಸುವ ಆ್ಯಂಬುಲೆನ್ಸ್ ಚಾಲಕರು ಜಿಲ್ಲಾಸ್ಪತ್ರೆ ವೆನ್ಲಾಕ್  ಹಾಗೂ ಇತರೆಡೆಗಳಲ್ಲಿ  ತಂಗುದಾಣ, ಮೂಲಭೂತ ಸೌಕರ್ಯಗಳಾದ ಶೌಚಾಲಯ ಹಾಗೂ ಸ್ನಾನಗೃಹದ ಸೌಲಭ್ಯಗಳಿಲ್ಲದೆ  ಕಷ್ಟ ಪಡುತ್ತಿದ್ದಾರೆ ಅವರಿಗೆ ಈ ಸೌಲಭ್ಯಗಳನ್ನು ಒದಗಿಸಬೇಕೆಂದು ಒತ್ತಾಯಿಸಿದರು. ವೆನ್ಲಾಕ್ ಆಸ್ಪತ್ರೆಯ ಹೊರಗಡೆ […]

ದಕ್ಷಿಣ ಕನ್ನಡ – ಉಡುಪಿ ಜಿಲ್ಲೆಗಳ ಚಲನಚಿತ್ರ ಮಂದಿರದಲ್ಲಿ ತುಳು ಚಲನಚಿತ್ರಗಳಿಗೆ ಪ್ರಥಮ ಆದ್ಯತೆ ನೀಡಲು ಒತ್ತಾಯ

Tuesday, March 14th, 2017
film protest

ಮಂಗಳವಾರ  : ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳ ಚಲನಚಿತ್ರ ಮಂದಿರ /ಮಲ್ಟಿಪ್ಲೆಕ್ಸ್ ಗಳಲ್ಲಿ ಮದಿಪು ತುಳು ಚಿತ್ರ ಸೇರಿದಂತೆ ತುಳು ಚಲನಚಿತ್ರಗಳಿಗೆ ಪ್ರಥಮ ಆದ್ಯತೆ ನೀಡುವಂತೆ ತುಳುನಾಡ ರಕ್ಷಣಾ ವೇದಿಕೆ ಸ್ಥಾಪಾಕಾಧ್ಯಕ್ಷ ಯೋಗೀಶ್ ಶೆಟ್ಟಿ ಜಪ್ಪು ಎಚ್ಚರಿಕೆ ನೀಡಿದ್ದಾರೆ . ಅವರು ಮಂಗಳವಾರ ಮಧ್ಯಾಹ್ನ ಫಳ್ನೀರಿನ ಪ್ಲಾಟಿನಂ ಟಾಕೀಸ್ ಬಳಿ ನಡೆದ ಪ್ರತಿಭಟನಾ ಸಭೆಯಲ್ಲಿ ಮಾತನಾಡುತ್ತಾ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳ ಚಲನಚಿತ್ರ ಮಂದಿರಗಳಲ್ಲಿ ಮದಿಪು ಚಿತ್ರ ಸೇರಿದಂತೆ ತುಳು ಚಲನಚಿತ್ರಗಳಿಗೆ ಪ್ರಥಮ ಆದ್ಯತೆ ನೀಡುವಂತೆ […]

ಅನಾಥಾಶ್ರಮ, ವೃದ್ಧಾಶ್ರಮದಂತಹ ಸಂಘ ಸಂಸ್ಥೆಗೂ ಒಕ್ಕೂಟ ರಚಿಸುವಂತೆ ತುಳುನಾಡ ರಕ್ಷಣಾ ವೇದಿಕೆಯಿಂದ ಒತ್ತಾಯ

Wednesday, November 30th, 2016
Thulu Nadu rakshana vedike

ಮಂಗಳೂರು: ಅನಾಥಾಶ್ರಮ, ವೃದ್ಧಾಶ್ರಮದಂತಹ ಸಂಘ ಸಂಸ್ಥೆಗೂ ಒಕ್ಕೂಟ ರಚಿಸುವಂತೆ ತುಳುನಾಡ ರಕ್ಷಣಾ ವೇದಿಕೆ ದ. ಕ. ಜಿಲ್ಲಾಧಿಕಾರಿಗಳನ್ನು ಒತ್ತಾಯಿಸಿದೆ. ಸುದ್ದಿಗಾರರೊಂದಿಗೆ ಮಾತನಾಡಿದ ವೇದಿಕೆ ಅಧ್ಯಕ್ಷ ಯೋಗೀಶ್ ಶೆಟ್ಟಿ, ಅನಾಥಾಶ್ರಮ ಮತ್ತು ವೃದ್ಧಾಶ್ರಮ ಇನ್ನಿತರ ಸಮಾಜಮುಖಿ ಸೇವೆಗೆ ಸರ್ಕಾರದಿಂದ ಸಿಗುವ ಸವಲತ್ತು ದುರ್ಬಳಕೆಯಾಗುತ್ತಿರುವುದರಿಂದ ಜಿಲ್ಲೆಯಲ್ಲಿ ಅನಾಥಾಶ್ರಮ, ವೃದ್ಧಾಶ್ರಮದಂತಹ ಸಂಘಸಂಸ್ಥೆಗಳು ಒಕ್ಕೂಟ ರಚಿಸುವಂತೆ ಜಿಲ್ಲಾಧಿಕಾರಿಗಳು ಸೂಚಿಸಬೇಕೆಂದರು. ಪ್ರಾಮಾಣಿಕವಾಗಿ ಸೇವೆ ಸಲ್ಲಿಸುವ ಸಂಘ ಸಂಸ್ಥೆಗಳಿಗೆ ಸರ್ಕಾರದ ಸವಲತ್ತುಗಳು ದೊರೆಯುತ್ತಿಲ್ಲ. ಕೆಲವು ಸರಕಾರೇತರ ಸಂಘಸಂಸ್ಥೆಗಳು ನೆಪಮಾತ್ರಕ್ಕೆ ಆಶ್ರಮ, ಅನಾಥಶ್ರಮ, ವೃದ್ಧಾಶ್ರಮಗಳನ್ನು ಕಟ್ಟಿ, ಭೂಕಬಳಿಕೆ, […]

ಕದ್ರಿ ಮಾರುಕಟ್ಟೆ ದುರವಸ್ಥೆಯನ್ನು ವಿರೋಧಿಸಿ ತುಳುನಾಡ ರಕ್ಷಣಾ ವೇದಿಕೆ ಪ್ರತಿಭಟನೆ

Thursday, November 24th, 2016
trv

ಮಂಗಳೂರು : ತುಳುನಾಡ ರಕ್ಷಣಾ ವೇದಿಕೆಯ ನೇತೃತ್ವದಲ್ಲಿ ಕದ್ರಿ ಮಾರುಕಟ್ಟೆ ದುರವಸ್ಥೆಯನ್ನು ವಿರೋಧಿಸಿ ಗುರವಾರ ನಡೆದ ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಮಾತನಾಡಿದ ತುಳುನಾಡ ರಕ್ಷಣಾ ವೇದಿಕೆಯ ಸ್ಥಾಪಕ ಅಧ್ಯಕ್ಷ ಯೋಗೀಶ್ ಶೆಟ್ಟಿ ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಗೆ ಒಳಪಟ್ಟ ಕದ್ರಿ ಪ್ರದೇಶವು ಇತಿಹಾಸ ಪ್ರಸಿದ್ಧ ದೇವಸ್ಥಾನ, ಚರ್ಚ್ ಸೇರಿದಂತೆ ಹೆಚ್ಚಿನ ವಸತಿ ಸಂಕೀರ್ಣ, ಆಸ್ಪತ್ರೆ, ಮದುವೆ ಸಭಾಂಗಣಗಳು ಹೊಂದಿವೆ. 2000 ನೇ ಇಸವಿಯಲ್ಲಿ ಆತುರದಲ್ಲಿ ಪ್ರಾರಂಭವಾದ ಕದ್ರಿ ಮಲ್ಲಿಕಟ್ಟೆಯ ಮಾರುಕಟ್ಟೆಯು ಸಮಸ್ಯೆಗಳ ಆಗರವಾಗಿದೆ ಎಂದಿದ್ದಾರೆ. ಕದ್ರಿ ಮಾರುಕಟ್ಟೆ 1980ರ […]

ಕಾವೂರು ಮೂಲಭೂತ ಸೌಕರ್ಯ ಒತ್ತಾಯಿಸಿ ತುಳುನಾಡ ರಕ್ಷಣಾ ವೇದಿಕೆ ಪ್ರತಿಭಟನೆ

Saturday, March 14th, 2015
yogish shetty

ಮಂಗಳೂರು : ಕುಂಜತ್ತಬೈಲು ಗ್ರಾಮದ ಕಾವೂರು ಶ್ರೀ ವೈದ್ಯನಾಥ ದೇವಸ್ಥಾನದಿಂದ ತೋಡಲ ಗುಡ್ಡೆ ಮಲ್ಲಿ ಲೇಔಟ್ ವರೆಗೆ ಸುಮಾರು 600 ಮನೆಗಳಿದ್ದು , ಅಲ್ಲದೆ ಆದಿಚುಂಚನಗಿರಿ ಶಾಲೆ ಹಾಗೂ ಮಠ ಕಾಲೇಜು ಮತ್ತು ವಿದ್ಯಾರ್ಥಿ ನಿಲಯಗಳೆಂದು ಇಲ್ಲಿ ಸುಮಾರು 750 ಮಂದಿ ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದು, ಇಲ್ಲಿ ಉಪಯೋಗಿಸುವ ನೀರನ್ನು ರಸ್ತೆಗೆ ಬಿಡುತ್ತಿದ್ದು ಹಾಗೂ ತೆರೆದ ಚರಂಡಿಯಲ್ಲಿ ಶೌಚಾಲಯ ಹಾಗೂ ಇತರ ಕೊಳಚೆ ನೀರು ಹರಿಯುತ್ತಿದ್ದು, ರಸ್ತೆಯಲ್ಲಿ ಪ್ರಯಾಣಿಸಬೇಕಾದರೆ ವಾಸನೆಯಿಂದಾಗಿ ಮೂಗು ಹಿಡಿದು ಹೋಗಬೇಕಾಗುತ್ತದೆ. ಈ ಪರಿಸ್ಥಿತಿಯು […]

ಏಕ ಪೌರತ್ವದ ಕಾರ್ಡ್ ನೀಡಿ, ಸರ್ಕಾರಕ್ಕೆ ಎಂ.ಜಿ. ಹೆಗ್ಡೆ ಸೂಚನೆ

Friday, July 26th, 2013
card system

ಮಂಗಳೂರು : ಸರಕಾರದ ಬಗೆ ಬಗೆಯ ಕಾರ್ಡ್ ಬದಲು ಒಂದೇ ಕಾರ್ಡ್ ಮಾಡಿ ಗೊಂದಲ ನಿವಾರಿಸಲು  ಸಮಾನ ಮನಸ್ಕ ಸಂಘಟನೆಗಳಾದ ತುಳುನಾಡ ರಕ್ಷಣಾ ವೇದಿಕೆ, ಪ್ರೇಮ್ ಎಸೋಸಿಯೇಶನ್ ಸುರತ್ಕಲ್, ಕಡಲ ಸೇನೆ ಯುವ ಸೇವಾ ಟ್ರಸ್ಟ್ ಜಂಟಿಯಾಗಿ ಗುರುವಾರ ನಗರದ ಜಿಲ್ಲಾಧಿಕಾರಿ ಕಚೇರಿಯ ಎದುರು ಪ್ರತಿಭಟನೆ ನಡೆಸಿತು. ಆಧಾರ್ ಕಾರ್ಡ್ ಪಡೆಯಲು ಹರಸಾಹಸ ಪಡಬೇಕಿದೆ. ಸರ್ಕಾರವು ಕಾರ್ಡ್ ಪದ್ದತಿಗಳನ್ನು ಜಾರಿ ಮಾಡುತ್ತಿದ್ದರೂ ಯಾವುದೇ ಕಾರ್ಡ್ ವ್ಯವಸ್ಥೆಯ ಕೆಲಸವನ್ನು ಸಮರ್ಪಕವಾಗಿ ನಿರ್ವಹಿಸುತ್ತಿಲ್ಲ. ಇದರಿಂದ ಜನತೆ ಕಾರ್ಡ್ ಪಡೆಯುವಲ್ಲಿ ಹರಸಾಹಸ […]

ತುಳುನಾಡ ರಕ್ಷಣಾ ವೇದಿಕೆಯಿಂದ ಜೆಪ್ಪು ಪಟ್ನ ಪ್ರದೇಶದಲ್ಲಿ ಒಳ ಚರಂಡಿ ಹಾಗೂ ರೈಲ್ವೆ ಕೆಳ ಸೇತುವೆ ನಿರ್ಮಾಣಕ್ಕೆ ಒತ್ತಾಯಿಸಿ ಪ್ರತಿಭಟನೆ

Friday, December 28th, 2012
Tulunada Rakshana Vedike

ಮಂಗಳೂರು : ಜೆಪ್ಪು ಮಹಾಕಾಳಿಪಡ್ಪು,ಶೆಟ್ಟಿಬೆಟ್ಟು, ಜೆಪ್ಪು ಪಟ್ನ ಪ್ರದೇಶದಲ್ಲಿ ಒಳ ಚರಂಡಿ ವ್ಯವಸ್ಥೆ ಹಾಗೂ ರೈಲ್ವೆ ಕೆಳ ಸೇತುವೆ ನಿರ್ಮಾಣಕ್ಕೆ ಒತ್ತಾಯಿಸಿ ತುಳುನಾಡ ರಕ್ಷಣಾ ವೇದಿಕೆಯಿಂದ ಗುರುವಾರ ಮಹಾಕಾಳಿ ಪಡ್ಪುವಿನಿಂದ ಮೋರ್ಗನ್ ಗೇಟ್ ವರೆಗೆ ರಸ್ತೆ ತಡೆ ಹಾಗು ಪ್ರತಿಭಟನಾ ಜಾಥಾ ವನ್ನು ಹಮ್ಮಿಕೊಳ್ಳಲಾಗಿತ್ತು. ತುಳುನಾಡು ರಕ್ಷಣಾ ವೇದಿಕೆಯ ಸ್ಥಾಪಕ, ಅಧ್ಯಕ್ಷ ಯೋಗೀಶ್ ಶೆಟ್ಟಿ ಜೆಪ್ಪು ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿದರು, ಕುಡ್ಸೆಂಫ್ ಯೋಜನೆಯಲ್ಲಿ 350 ಕೋಟಿ ರೂಪಾಯಿ ಖರ್ಚು ಮಾಡಿದರೂ ಇಲ್ಲಿ ಒಳಚರಂಡಿಯೇ ಇಲ್ಲದ ಪರಿಸ್ಥಿತಿ ಇದೆ. ಚರಂಡಿ […]

ಗಜಾನನ ಮಿತ್ರ ಮಂಡಳಿ ವತಿಯಿಂದ ಕೋಟೆಕಾರಿನಲ್ಲಿ ಬಿಸುಪರ್ಬ

Wednesday, April 20th, 2011
ಗಜಾನನ ಮಿತ್ರ ಮಂಡಳಿ

ಮಂಗಳೂರು : ಕೋಟೆಕಾರಿನಲ್ಲಿ ಗಜಾನನ ಮಿತ್ರ ಮಂಡಳಿ ಆಶ್ರಯದಲ್ಲಿ ದಿ. 17-4-2011 ರಂದು ವಿಜೃಂಭಣೆಯಿಂದ ಬಿಸುಪರ್ಬ ಆಚರಿಸಲಾಯಿತು. ಬೆಳಿಗ್ಗೆ ಕೋಟೆಕಾರಿನ  ಸಿಂಹವಾಹಿನಿಯ ದೇವಸ್ಥಾನದ ಎದುರಿನ ಮೈದಾನದಲ್ಲಿ ಗ್ರಾಮೀಣ ಕ್ರೀಡಾಕೂಟ  ಉದ್ಘಾಟನೆ ನಡೆಯಿತು.  ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸ್ಥಳೀಯ ಪಂಚಾಯತ್  ಸದಸ್ಯರಾದ ಗೀತಾ.ಜಿ.ಪ್ರಭು ವಹಿಸಿದ್ದರು. ಉದ್ಘಾಟನೆಯನ್ನು ತುಳುನಾಡ ರಕ್ಷಣಾ ವೇದಿಕೆಯ ಅಧ್ಯಕ್ಷರಾದ ಯೋಗೀಶ್ ಶೆಟ್ಟಿ ಜೆಪ್ಪು ವಹಿಸಿ ತುಳುನಾಡಿನ ಪ್ರಮುಖ ಹಬ್ಬವಾದ ಬಿಸುಪರ್ಬ ಕಳೆದ ಜೀವನದಲ್ಲಿ ಸುಖ ಹಾಗೂ ದು:ಖವನ್ನು ಮರೆತು  ಮುಂದಿನ ವರ್ಷದಲ್ಲಿ    ಸಂತೋಷವನ್ನು ತರಲಿ ಎಂದು ಹಾರೈಸಿದರು. […]