Blog Archive

ದಕ್ಷಿಣ ಕನ್ನಡ ಜಿಲ್ಲೆಯ ‘ಬಿಜೆಪಿ’ ಪ್ರಣಾಳಿಕೆ ಬಿಡುಗಡೆ

Monday, May 7th, 2018
nalin-kumar

ಮಂಗಳೂರು: ಸಂಸದ ನಳಿನ್ ಕುಮಾರ್ ಕಟೀಲ್ ಅವರು ದಕ್ಷಿಣ ಕನ್ನಡ ಜಿಲ್ಲೆಯ ಬಿಜೆಪಿ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದರು. ನಗರದ ಬಿಜೆಪಿ ಕಚೇರಿಯಲ್ಲಿ ಉತ್ತರ ಪ್ರದೇಶ ಸಚಿವ ಮಹೇಂದ್ರ ಸಿಂಗ್ ಸಮ್ಮುಖದಲ್ಲಿ ಸಂಸದರು ಪ್ರಣಾಳಿಕೆ ಬಿಡುಗಡೆ ಮಾಡಿದರು. ಪ್ರಣಾಳಿಕೆ ಬಿಡುಗಡೆಗೊಳಿಸಿ ಮಾತನಾಡಿದ ಸಂಸದರು, ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯ ಮಾಡಿದ್ದೇವೆ. ಮುಂದೆ ಅಧಿಕಾರಕ್ಕೆ ಬಂದರೆ ಜಿಲ್ಲೆಯಲ್ಲಿ ಕೈಗೊಳ್ಳುವ ಅಭಿವೃದ್ಧಿ ಕಾರ್ಯದ ಬಗ್ಗೆ ಪ್ರಣಾಳಿಕೆಯಲ್ಲಿ ಉಲ್ಲೇಖಿಸಿದ್ದೇವೆ. ಎತ್ತಿನಹೊಳೆ ಯೋಜನೆಗೆ ನಮ್ಮ ವಿರೋಧವಿದೆ ಎಂದು ತಿಳಿಸಿದರು.

ಬಿಜೆಪಿ ಟಿಕೆಟ್ ತಪ್ಪಲು ಸಂಸದ ಕಟೀಲ್‌ ನೇರ ಕಾರಣ: ಸತ್ಯಜಿತ್‌‌

Monday, April 23rd, 2018
sathyajith

ಮಂಗಳೂರು: ತಮಗೆ ಬಿಜೆಪಿ ಟಿಕೆಟ್ ತಪ್ಪಲು ಸಂಸದ ನಳಿನ್ ಕುಮಾರ್ ಕಟೀಲ್ ಮತ್ತು ಪ್ರಾಂತ ಪ್ರಮುಖ್ ಪಿ.ಎಸ್. ಪ್ರಕಾಶ್ ಸಹ ಕಾರಣ ಎಂದು ಬಿಜೆಪಿ ಮುಖಂಡ ಸತ್ಯಜಿತ್ ಸುರತ್ಕಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಂಗಳೂರಿನ ಹೊಸಬೆಟ್ಟು ಬಬ್ಬುಸ್ವಾಮಿ ದೇವಸ್ಥಾನದಲ್ಲಿ ನಡೆದ ಸತ್ಯಜಿತ್ ಅಭಿಮಾನಿಗಳ ಸಭೆಯಲ್ಲಿ ಅವರು ಮಾತನಾಡಿದರು. ತಮಗೆ ಟಿಕೆಟ್‌ ಕೈತಪ್ಪಲು ಸಂಸದ ನಳಿನ್ ಕುಮಾರ್ ಕಟೀಲ್ ಅವರೇ ನೇರ ಕಾರಣ. ಇದರ ಜೊತೆಗೆ ಆರ್‌‌ಎಸ್‌ಎಸ್‌‌ ಎಂದು ಆರೋಪ ಮಾಡಿದ ಸತ್ಯಜಿತ್ ಸುರತ್ಕಲ್, ಟಿಕೆಟ್ ಕೈತಪ್ಪಿದ್ದಕ್ಕೆ ಸೂಕ್ತ ಕಾರಣ […]

ಕಾಂಗ್ರೆಸ್‌ ಮುಖಂಡರೇ ಬಿಜೆಪಿ ಸೇರಲಿದ್ದಾರೆ : ನಳಿನ್‌ ಕುಮಾರ್‌

Thursday, April 12th, 2018
nalin-bjp

ಸುಳ್ಯ: ಬಿಜೆಪಿಯ ಕಾರ್ಯಕರ್ತರು ಅಥವಾ ಮುಖಂಡರು ಕಾಂಗ್ರೆಸ್‌ ಪಕ್ಷದತ್ತ ಹೋಗುವ ಪ್ರಶ್ನೆಯೇ ಉದ್ಭವಿಸಿಲ್ಲ. ಆದರೆ ಕಾಂಗ್ರೆಸ್‌ ಪಕ್ಷದ ನೀತಿಯಿಂದ ಬೇಸತ್ತು, ಕೆಲವೇ ದಿನಗಳಲ್ಲಿ ಜಿಲ್ಲೆಯ ಕಾಂಗ್ರೆಸ್‌ ಮುಖಂಡರು ಬಿಜೆಪಿಗೆ ಸೇರ್ಪಡೆಗೊಳ್ಳುವುದು ನಿಶ್ಚಿತ ಎಂದು ಸಂಸದ ನಳಿನ್‌ ಕುಮಾರ್‌ ಕಟೀಲು ಅವರು ಸಚಿವ ರಮಾನಾಥ ರೈ ಅವರ ಹೇಳಿಕೆಗೆ ತಿರುಗೇಟು ನೀಡಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲಾ ಬಿಜೆಪಿಯಲ್ಲಿ ಅಸಮಾಧಾನಗೊಂಡಿರುವ ಮುಖಂಡರು ಕಾಂಗ್ರೆಸ್‌ ಸಂಪರ್ಕದಲ್ಲಿದ್ದು ಶೀಘ್ರ ಪಕ್ಷವನ್ನು ಸೇರಲಿದ್ದಾರೆ ಎಂಬ ಸಚಿವ ರಮಾನಾಥ ರೈ ಅವರ ಹೇಳಿಕೆಯನ್ನು ಅಲ್ಲಗಳೆದರು. […]

ಬೂತ್ ಮಟ್ಟದಲ್ಲಿ ಪಕ್ಷ ಸಂಘಟನೆ ಕಾರ್ಯ

Tuesday, April 3rd, 2018
nalin-kumar

ಮಂಗಳೂರು : ಭಾರತೀಯ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರ ಮಾರ್ಗದರ್ಶನದಲ್ಲಿ ಬೂತ್ ಮಟ್ಟದಲ್ಲಿ ಕಾರ್ಯಕರ್ತರನ್ನು ಸದೃಢಗೊಳಿಸುವ ಕಾರ್ಯ ನಡೆಯುತ್ತಿದೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಅವರು ಹೇಳಿದರು. ಅವರು ಮಂಗಳೂರು ನಗರ ದಕ್ಷಿಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ದೇರೆಬೈಲ್ ನೈರುತ್ಯದ ವಾರ್ಡ್ ನಂಬ್ರ 26 ರಲ್ಲಿ ಬಿಜೆಪಿಯ ಮನೆಮನೆಗೆ ಭೇಟಿಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು. ಮಂಗಳೂರು ದಕ್ಷಿಣ ಮಂಡಲದ ಅಧ್ಯಕ್ಷ ಡಿ ವೇದವ್ಯಾಸ್ ಕಾಮತ್ ಮಾತನಾಡಿ, ಸಂಸದ ನಳಿನ್ ಕುಮಾರ್ ಕಟೀಲ್ ಅವರ ನೇತೃತ್ವದಲ್ಲಿ […]

ಸಿಎಂ ಸಿದ್ದರಾಮಯ್ಯ ಓರ್ವ ಭಯೋತ್ಪಾದಕ: ಸಂಸದ ಕಟೀಲು ವಿವಾದಾತ್ಮಕ ಹೇಳಿಕೆ

Tuesday, March 6th, 2018
nalin-kumar

ಮಂಗಳೂರು: ಬಿಜೆಪಿ ಆಯೋಜನೆಯ ಜನಸುರಕ್ಷಾ ಯಾತ್ರೆಯಲ್ಲಿ ರಾಜ್ಯ ಸರ್ಕಾರ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯರ ವಿರುದ್ಧ ಮಾಡುವ ಟೀಕಾ ಪ್ರಹಾರಗಳು ಕರಾವಳಿಯಲ್ಲೂ ಮುಂದುವರಿದಿವೆ. ಈ ಬಾರಿ ಸಂಸದ ನಳಿನ್ ಕುಮಾರ್ ಕಟೀಲು `ಮುಖ್ಯಮಂತ್ರಿ ಸಿದ್ದರಾಮಯ್ಯ ಓರ್ವ ಭಯೋತ್ಪಾದಕ’ ಎಂಬ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಬಂಟ್ವಾಳದಲ್ಲಿ ನಡೆದ `ಮಂಗಳೂರು ಚಲೋ’ ಜನ ಸುರಕ್ಷಾ ಯಾತ್ರೆಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಭಯೋತ್ಪಾದನೆ ಮಾಡುವ ಶಕ್ತಿಗಳ ಹಿಂದಿದ್ದಾರೆ ಎಂದು ಆರೋಪಿಸಿದರು. ಮುಖ್ಯಮಂತ್ರಿ ಬಳಿ ಭಯ ಉತ್ಪಾದನೆ ಮಾಡುವ ಶಕ್ತಿ ಇದೆ ಎಂದ ಸಂಸದ […]

ಬಿಜೆಪಿ ರಾಷ್ಟ್ರಾಧ್ಯಕ್ಷರ ರಾಜ್ಯ ಪ್ರವಾಸ: ಕುಕ್ಕೆ ಸುಬ್ರಹ್ಮಣ್ಯಕ್ಕೆ ತೆರಳಿದ ಶಾ

Tuesday, February 20th, 2018
amit-shah

ಮಂಗಳೂರು: ರಾಜ್ಯದಲ್ಲಿ ಚುನಾವಣಾ ಪೂರ್ವ ಸಿದ್ಧತೆ ಹಿನ್ನೆಲೆಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರ ಮೂರು ದಿನಗಳ ಕರಾವಳಿ ಪ್ರವಾಸ ಆರಂಭಗೊಂಡಿದೆ. ಎರಡು ತಾಸು ವಿಳಂಬವಾಗಿ ಇಂದು ಸಂಜೆ ಸುಮಾರು 7.45ರ ವೇಳೆಗೆ ವಿಶೇಷ ವಿಮಾನದ ಮೂಲಕ ಮಂಗಳೂರಿಗೆ ಅಮಿತ್ ಶಾ ಆಗಮಿಸಿದರು. ಶಾ ಅವರಿಗೆ ವಿಮಾನ ನಿಲ್ದಾಣದ ಕೆಂಜಾರಿನಲ್ಲಿ ಬಿಜೆಪಿ ಕಾರ್ಯಕರ್ತರು ಅಭೂತಪೂರ್ವ ಸ್ವಾಗತ ನೀಡಿ ಬರಮಾಡಿಕೊಂಡರು. ಸೇರಿದ್ದ ಅಪಾರ ಸಂಖ್ಯೆಯ ಕಾರ್ಯಕರ್ತರತ್ತ ಶಾ ಕೈ ಬೀಸಿ ಕುಕ್ಕೆ ಸುಬ್ರಹ್ಮಣ್ಯದತ್ತ ನಿರ್ಗಮಿಸಿದರು. ಈ ಸಂದರ್ಭ […]

ಚುನಾವಣೆಗೂ ಮುನ್ನ ಕಾಂಗ್ರೆಸಿಗರಿಂದ ಶಸ್ತ್ರತ್ಯಾಗ: ನಳಿನ್ ಕುಮಾರ್ ಕಟೀಲ್

Monday, February 19th, 2018
mangaluru

ಮಂಗಳೂರು: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ರಾಜ್ಯಕ್ಕೆ ಕಾಲಿಡುತ್ತಿದ್ದಂತೆ ಕಾಂಗ್ರೆಸ್ ಹುಲಿಗಳು ಭಯಭೀತರಾಗಿ ಗುಹೆ ಸೇರುತ್ತಿದ್ದಾರೆ ಎಂದು ಸಂಸದ ನಳಿನ್ ಕುಮಾರ ಕಟೀಲ್ ವ್ಯಂಗ್ಯವಾಡಿದ್ದಾರೆ. ಮಂಗಳೂರಿನಲ್ಲಿ ಭಾನುವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, “ಅಮಿತ್ ಶಾ ಗಲಭೆಗೆ ಪ್ರಚೋದನೆ ಕೊಡುತ್ತಾರೆಂದು ಕಾಂಗ್ರೆಸಿಗರು ಆರೋಪಿಸುತ್ತಾರೆ. ಆದರೆ, ಎಲ್ಲೆಲ್ಲಿ ಮುಖ್ಯಮಂತ್ರಿ ಹೋಗಿದ್ದಾರೆಯೋ ಅಲ್ಲೆಲ್ಲಾ ಹತ್ಯೆಗಳಾಗುತ್ತಿವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಷಣ ಮಾಡಿ ಹೋದ ಬಳಿಕ ಕೋಮುಗಲಭೆಗಳು ನಡೆದ ನಿದರ್ಶನಗಳಿವೆ,” ಎಂದು ಕಿಡಿಕಾರಿದರು. ಕರಾವಳಿಯಲ್ಲಿ ಸೋಮವಾರದಿಂದ ಅಮಿತ್ ಶಾ ಪ್ರವಾಸ ಆರಂಭ […]

ಸಿದ್ದು ಬಜೆಟ್‌‌ಗೆ ಮಂಗಳೂರು ರಾಜಕೀಯ ಮುಖಂಡರ ಮಿಶ್ರ ಪ್ರತಿಕ್ರಿಯೆ

Saturday, February 17th, 2018
nalin-kumar

ಮಂಗಳೂರು: ಚುನಾವಣೆಯ ದೃಷ್ಟಿಯಿಂದ ಜನಪ್ರಿಯ ಬಜೆಟ್ ಮಂಡಿಸಿದ ಮುಖ್ಯಮಂತ್ರಿ ಹಾಗೂ ಹಣಕಾಸು ಸಚಿವರಾದ ಸಿದ್ದರಾಮಯ್ಯರದ್ದು ಚುನಾವಣಾ ಗಿಮಿಕ್ ಬಜೆಟ್ ಎಂದು ಸಿಪಿಐ(ಎಂ) ದ.ಕ. ಜಿಲ್ಲಾ ಕಾರ್ಯದರ್ಶಿ ವಸಂತ ಆಚಾರಿ ಟೀಕಿಸಿದ್ದಾರೆ. ಇಷ್ಟೊಂದು ಪ್ರಮಾಣದಲ್ಲಿ ಘೋಷಣೆಯಾದ ಅನುದಾನಗಳಿಗೆ ಹಣ ಎಲ್ಲಿಂದ ಸಂಗ್ರಹಿಸುತ್ತಾರೆ ಎಂಬುದಕ್ಕೆ ಯಾವುದೇ ಪ್ರಸ್ತಾಪವಿಲ್ಲ. ಇದೊಂದು ನಿರಾಶಾದಾಯಕ ಬಜೆಟ್ ಎಂದರು. ರೈತರ, ಕಾರ್ಮಿಕರ, ಯುವಕರ ಮೀನುಗಾರರ, ಹಿಂದುಳಿದ ವರ್ಗಗಳ ಅಲ್ಪಸಂಖ್ಯಾತರ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಬಜೆಟ್‌ನ ಪ್ರಯೋಜನವನ್ನು ದೊರಕಿಸಿಕೊಟ್ಟ ಬಜೆಟ್ ಅಭಿವೃದ್ಧಿಯ ದಿಕ್ಷೂಚಕ. ಕರಾವಳಿ ಕರ್ನಾಟಕ ಮೀನುಗಾರರಿಗೆ, […]

ಅಮಿತ್ ಶಾ ಭಯದಿಂದ ಬಂದ್‌‌ ಬದಲಾವಣೆ ಮಾಡುತ್ತಿದೆ

Wednesday, January 24th, 2018
shobha-karandlaje

ಮಂಗಳೂರು: ಜ.25ರಂದು ಯಡಿಯೂರಪ್ಪ ನೇತೃತ್ವದ ಪರಿವರ್ತನಾ ಸಮಾವೇಶವು ಮೈಸೂರಿನಲ್ಲಿ ಸಮಾಪನಗೊಳ್ಳಲಿದೆ. ಈ ಹಿನ್ನೆಲೆ ಕಾರ್ಯಕ್ರಮಕ್ಕೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಬರುತ್ತಿರುವುದರಿಂದ ಕಾಂಗ್ರೆಸ್ ಸರ್ಕಾರ ಭಯಬಿದ್ದು ಜ.27ರಂದು ನಿಗದಿಯಾಗಿದ್ದ ಬಂದ್‌ ಅನ್ನು 25ಕ್ಕೆ ವಿವಿಧ ಸಂಘಟನೆಗಳ ಮೂಲಕ ಮಾಡಿಸುತ್ತಿದೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಆರೋಪಿಸಿದರು. ನಗರದ ಬಿಜೆಪಿ ಕಚೇರಿಯಲ್ಲಿ ನಡೆದ ಜಿಲ್ಲಾ ಪ್ರಮುಖರ ಸಭೆಯಲ್ಲಿ ಅವರು ಮಾತನಾಡಿದರು. ದೇಶದಲ್ಲಿಯೇ ರಾಜ್ಯದ ಕಾಂಗ್ರೆಸ್‌ ಸರ್ಕಾರ ದರೋಡೆ, ದೌರ್ಜನ್ಯದಲ್ಲಿ ಎರಡನೇ ಸ್ಥಾನ ಗಳಿಸಿದೆ. ಇದು ಕಾಂಗ್ರೆಸ್ ದುರಾಡಳಿತಕ್ಕೆ […]

ಜಾತಿ, ಮತ, ಪಂಥ ಎಲ್ಲವನ್ನು ಒಗ್ಗೂಡಿಸಲು ಕಲೆಯಿಂದ ಸಾಧ್ಯ: ನಳಿನ್ ಕುಮಾರ್

Saturday, January 20th, 2018
nalin-kumar

ಮಂಗಳೂರು: ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಅದ್ಭುತವಾದ ಕಲಾಪ್ರಕಾರಗಳು, ಹತ್ತಾರು ಕಲಾ ಸಂಸ್ಕೃತಿ ಒಕ್ಕೂಟಗಳಿರುವ ದೇಶ ಭಾರತ. ಕಲೆಯಲ್ಲಿ ದೇವರನ್ನು ಕಂಡ ಏಕೈಕ ದೇಶ ಭಾರತ. ಕಲಾವಿದರನ್ನು ಸಂತರೆಂದು ಪೂಜಿಸುತ್ತೇವೆ. ಜಾತಿ, ಮತ, ಪಂಥ ಎಲ್ಲವನ್ನು ಒಗ್ಗೂಡಿಸಲು ಕಲೆಯಿಂದ ಮಾತ್ರ ಸಾಧ್ಯ ಎಂದು ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲು ಹೇಳಿದರು. ಭಾರತ ಸರಕಾರದ ಸಂಸ್ಕೃತಿ ಸಚಿವಾಲಯದ ಆಶ್ರಯದಲ್ಲಿ ನಗರದ ನೆಹರೂ ಮೈದಾನದಲ್ಲಿ ಶುಕ್ರವಾರ ರಾಷ್ಟ್ರೀಯ ಸಂಸ್ಕೃತಿ ಮಹೋತ್ಸವಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಬೇರೆ ಬೇರೆ ರಾಜ್ಯಗಳಿಗೆ, […]