Blog Archive

ರಾಷ್ಟ್ರಪತಿ ಭವನದ ವಸತಿ ಗೃಹದಲ್ಲಿ ಶವವಾಗಿ ಉದ್ಯೋಗಿ ಮೃತದೇಹ ಪತ್ತೆ

Friday, June 8th, 2018
raj-bhavan

ನವದೆಹಲಿ: ರಾಷ್ಟ್ರಪತಿ ಭವನದ ಕೆಲಸಗಾರರ ವಸತಿಗೃಹದಲ್ಲಿ ಉದ್ಯೋಗಿಯೊಬ್ಬನ ಶವ ಪತ್ತೆಯಾಗಿದ್ದು, ಆತ ರಾಷ್ಟ್ರಪತಿ ಭವನದಲ್ಲಿ 4ನೇ ದರ್ಜೆಯ ಕೆಲಸಗಾರನಾಗಿದ್ದ ಎಂದು ತಿಳಿದು ಬಂದಿದೆ. ಮೃತನನ್ನು ತ್ರಿಲೋಕಚಂದ್ರ ಎಂದು ಗುರುತಿಸಲಾಗಿದೆ. ಆತ ಕೆಲ ಸಮಯದಿಂದ ಅನಾರೋಗ್ಯ ಪೀಡಿತನಾಗಿದ್ದ ಎಂದು ತಿಳಿದು ಬಂದಿದೆ. ಬಂದಿದೆ. ಆತನ ಕೊಠಡಿಯಿಂದ ಕೆಟ್ಟ ವಾಸನೆ ಬರುತ್ತಿದ್ದು, ಈ ಬಗ್ಗೆ ನೆರೆಹೊರೆಯವರು ಪೊಲೀಸರಿಗೆ ದೂರು ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ಪೊಲೀಸರು ಒಳಗಿಂದ ಹಾಕಲಾಗಿದ್ದ ಚಿಲಕ ಒಡೆದು ಕೋಣೆಯ ಕದ ತೆಗೆದಾಗ ಆತ ಮೃತಪಟ್ಟಿರುವುದು ಬೆಳಕಿಗೆ ಬಂದಿದೆ. ಮೃತದೇಹವನ್ನು […]

ವಾಟ್ಸ್‌ಆ್ಯಪ್‌ನಲ್ಲಿ ಹರಿದಾಡುತ್ತಿರುವ ಕರ್ನಾಟಕ ಚುನಾವಣಾ ಸಮೀಕ್ಷೆ , ಬಿಬಿಸಿ ಸ್ಪಷ್ಟನೆ..!

Tuesday, May 8th, 2018
bbc-bjp

ನವದೆಹಲಿ: ಕರ್ನಾಟಕ ವಿಧಾನಸಭಾ ಚುನಾವಣೆ ಕುರಿತಂತೆ ಬಿಬಿಸಿ ಸಮೀಕ್ಷೆ ಹೆಸರಲ್ಲಿ ಹರಿದಾಡುತ್ತಿರುವ ಸುದ್ದಿ ಬಗ್ಗೆ ಸ್ವತಃ ಬಿಬಿಸಿಯೇ ಸ್ಪಷ್ಟನೆ ನೀಡಿದೆ. ಬಿಬಿಸಿ ಹೆಸರಲ್ಲಿನ ಕರ್ನಾಟಕ ಚುನಾವಣಾ ಸರ್ವೇ ಶುದ್ಧ ಸುಳ್ಳು ಎಂದು ಬಿಬಿಸಿ ಹೇಳಿದೆ. ಅಂತಾರಾಷ್ಟ್ರೀಯ ಸುದ್ದಿ ವಾಹಿನಿಯಾಗಿರುವ ಬಿಬಿಸಿ (British Broadcasting Corporation) ರಾಜ್ಯ ಚುನಾವಣೆ ಕುರಿತು ಸಮೀಕ್ಷೆ ನಡೆಸಿದೆ. ಈ ಸಮೀಕ್ಷೆ ಪ್ರಕಾರ ಚುನಾವಣೆಯಲ್ಲಿ ಬಿಜೆಪಿ 135 ಸ್ಥಾನಗಳನ್ನು ಪಡೆಯಲಿದ್ದರೆ, ಜೆಡಿಎಸ್‌‌ 45, ಕಾಂಗ್ರೆಸ್‌ 35 ಮತ್ತು ಇತರ ಪಕ್ಷಗಳು 15 ಸ್ಥಾನಗಳನ್ನು ಪಡೆಯಲಿವೆ […]

ದೇಶದ ಶ್ರೀಮಂತ ಸಂಸದೆ ಜಯಾ ಬಚ್ಚನ್‌… ವಿವಾದಾತ್ಮಕ ಹೇಳಿಕೆ ವಾಪಸ್‌ ಪಡೆದ ಬಿಜೆಪಿ ಮುಖಂಡ

Tuesday, March 13th, 2018
jaya-bacchan

ನವದೆಹಲಿ : ರಾಜ್ಯಸಭೆ ಸದಸ್ಯೆ, ಬಾಲಿವುಡ್ ಹಿರಿಯ ನಟಿ ಜಯಾ ಬಚ್ಚನ್ ದೇಶದ ಶ್ರೀಮಂತ ಸಂಸದೆ ಎಂಬ ಸಂಗತಿ ಬಯಲಾಗಿದೆ. 4ನೇ ಬಾರಿಗೆ ರಾಜ್ಯಸಭಾ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿರುವ ಜಯಾ ಬಚ್ಚನ್ ತಮ್ಮ ಆಸ್ತಿ ಮೌಲ್ಯ ಒಂದು ಸಾವಿರ ಕೋಟಿ ಎಂದು ಘೋಷಿಸಿಕೊಂಡಿದ್ದಾರೆ. ಇದರ ಬೆನ್ನಲ್ಲೇ ಸಮಾಜವಾದಿ ಪಕ್ಷದ ಜಯಾ ಬಚ್ಚನ್ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ್ದ ಬಿಜೆಪಿ ಮುಖಂಡ ನರೇಶ್ ಅಗರ್‌ವಾಲ್ ಕ್ಷಮೆಯಾಚಿಸಿದ್ದಾರೆ. ಒಬ್ಬ ನಟಿಯಿಂದಾಗಿ ನಾನು ಟಿಕೆಟ್ ಕಳೆದುಕೊಂಡಿರುವುದು ಅವಮಾನಕರ ಎಂದು ನಿನ್ನೆ ಅಗರ್‌ವಾಲ್ […]

ಪ್ರಶ್ನೆಗಳಿಗೆ ಉತ್ತರಿಸಿ, ಆರೋಪಗಳು ಬೇಡ: ಪ್ರಧಾನಿಗೆ ರಾಹುಲ್ ತಿರುಗೇಟು

Wednesday, February 7th, 2018
rahul-gandhi

ನವದೆಹಲಿ: “ಪ್ರಶ್ನೆಗಳಿಗೆ ಉತ್ತರ ನೀಡಿ. ನಿಮ್ಮ ಆರೋಪಗಳು ಬೇಕಾಗಿಲ್ಲ,” ಎಂದು ಲೋಕಸಭೆಯಲ್ಲಿ ದೀರ್ಘ ಭಾಷಣ ಮಾಡಿದ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾಫೆಲ್ ಡೀಲ್, ರೈತರು ಮತ್ತು ಉದ್ಯೋಗಕ್ಕೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಉತ್ತರಿಸಬೇಕು ಎಂದು ರಾಹುಲ್ ಆಗ್ರಹಿಸಿದರು. ರಾಹುಲ್ ಗಂಭೀರ ಆರೋಪ “ನಾನು ವಿರೋಧ ಪಕ್ಷದ ನಾಯಕ ಅಲ್ಲ, ಪ್ರಧಾನಿ ಎಂಬುದನ್ನು ಅವರು ಮರೆತಂತೆ ಕಾಣಿಸುತ್ತಿದೆ,” ಎಂದು ವರದಿಗಾರರಿಗೆ ರಾಹುಲ್ ಗಾಂಧಿ ಪ್ರತಿಕ್ರಿಯೆ ನೀಡಿದರು. “ಪ್ರಧಾನಿಗೆ […]

ಪ್ರಧಾನಿ ಮೋದಿ ದಾವೋಸ್‌ ಭಾಷಣಕ್ಕೆ ತಲೆದೂಗಿದ ಚೀನಾ!

Friday, January 26th, 2018
modi-speak

ನವದೆಹಲಿ: ಸ್ವಿಡ್ಜರ್‌ಲ್ಯಾಂಡ್‌‌ನ ದಾವೋಸ್‌ನಲ್ಲಿ ನಡೆದ ವರ್ಲ್ಡ್‌‌‌ ಎಕನಾಮಿಕ್ಸ್‌ ಫೋರಂ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮಾಡಿರುವ ಭಾಷಣವನ್ನು ಚೀನಾ ಸ್ವಾಗತಿಸಿದೆ. ದಾವೋಸ್‌ನಲ್ಲಿ ಪ್ರಧಾನಿ ಮೋದಿ ತಮ್ಮ ಭಾಷಣದಲ್ಲಿ ಆರ್ಥಿಕ ರಕ್ಷಣಾ ನೀತಿ ಭಯೋತ್ಪಾದನೆಯಷ್ಟೇ ಅಪಾಯಕಾರಿ ಎಂದು ಪ್ರತಿಪಾದಿಸಿದ್ದರು. ಈ ಮೂಲಕ ಅಮೆರಿಕ ಅಧ್ಯಕ್ಷ ಡೊನಾಲ್ಡ್‌‌ ಟ್ರಂಪ್‌ ಅವರ ‘ಅಮೆರಿಕ ಫಸ್ಟ್‌‌’ ನೀತಿ ವಿರುದ್ಧ ಪರೋಕ್ಷವಾಗಿ ಮೋದಿ ದನಿ ಎತ್ತಿದ್ದರು. ಪ್ರಧಾನಿ ಮೋದಿ ಅವರ ಈ ಭಾಷಣವನ್ನು ಸ್ವಾತಿಸಿರುವ ಚೀನಾ ಮೆಚ್ಚುಗೆ ವ್ಯಕ್ತಪಡಿಸಿದೆ. ‘ಪ್ರಧಾನಿ ನರೇಂದ್ರ ಮೋದಿ ಭಾಷಣವನ್ನು […]

ಕೇವಲ 99 ರೂಪಾಯಿಗೇ ವಿಮಾನ ಟಿಕೆಟ್‌‌…ಅತಿ ಕಡಿಮೆ ದರದಲ್ಲಿ ಈ 7 ನಗರಗಳಲ್ಲಿ ಸುತ್ತಾಡಿ!

Monday, January 15th, 2018
airasia

ನವದೆಹಲಿ: ಹಬ್ಬದ ಸಂಭ್ರಮದಲ್ಲಿ ಏರ್‌‌ಏಷ್ಯಾ ವಿಮಾನಯಾನ ಸಂಸ್ಥೆ ಪ್ರಯಾಣಿಕರಿಗೆ ಬಂಪರ್‌‌ ಆಫರ್‌ ಪ್ರಕಟಿಸಿದೆ. ಕೇವಲ 99 ರೂಪಾಯಿಗೆ ವಿಮಾನ ಟಿಕೆಟ್‌‌ಅನ್ನು ಘೋಷಿಸಿದೆ. ಭಾರತದ ಏಳು ಪ್ರಮುಖ ನಗರಗಳಿಗೆ ಪ್ರಯಾಣಿಸುವವರಿಗೆ 99 ರೂಪಾಯಿಯ ಟಿಕೆಟ್‌ ನೀಡಲಿದೆ. ಬೆಂಗಳೂರು, ಹೈದರಾಬಾದ್‌, ಕೊಚ್ಚಿ, ಕೋಲ್ಕತ್ತಾ, ನವದೆಹಲಿ, ಪುಣೆ ಮತ್ತು ರಾಂಚಿಗೆ ಪ್ರಯಾಣಿಸುವವರಿಗೆ ಈ ಭರ್ಜರಿ ಆಫರ್‌ ನೀಡಿದೆ. ಇಂದಿನಿಂದ ಜನವರಿ 21ರವರೆಗೆ ಗ್ರಾಹಕರು 99ರೂಪಾಯಿ ಬೆಲೆ ಟಿಕೆಟ್‌ ಬುಕ್ ಮಾಡಬಹುದಾಗಿದೆ. ಜನವರಿ 15ರಿಂದ ಜುಲೈ 31ರೊಳಗೆ ಬೆಂಗಳೂರು, ಹೈದರಾಬಾದ್‌, ಕೊಚ್ಚಿ, ಕೋಲ್ಕತ್ತಾ, […]

ಆರತಕ್ಷತೆ ಕಾರ್ಯಕ್ರಮದಲ್ಲಿ ಸಖತ್‌‌ ಡ್ಯಾನ್ಸ್‌‌ ಮಾಡಿದ ನವಜೋಡಿ ಕೊಹ್ಲಿ-ಅನುಷ್ಕಾ!

Friday, December 22nd, 2017
reception

ನವದೆಹಲಿ: ಟೀಂ ಇಂಡಿಯಾ ಕ್ಯಾಪ್ಟನ್‌‌ ವಿರಾಟ್‌‌ ಕೊಹ್ಲಿ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು, ನಿನ್ನೆ ದೆಹಲಿಯ ತಾಜ್‌ ಪ್ಯಾಲೇಸ್‌ನಲ್ಲಿ ಅದ್ದೂರಿ ಆರತಕ್ಷತೆ ಕಾರ್ಯಕ್ರಮ ನಡೆದಿದ್ದು, ನವಜೋಡಿ ಬಿಂದಾಸ್‌‌‌‌ ಡ್ಯಾನ್ಸ್‌‌‌‌ ಮಾಡಿ ಸಂಭ್ರಮಿಸಿದ್ದಾರೆ. ಕಾರ್ಯಕ್ರಮದಲ್ಲಿ ಪಂಜಾಬಿ ಸಾಂಗ್‌‌ಗೆ ನವಜೋಡಿ ಸಖತ್‌‌ ಡ್ಯಾನ್ಸ್‌‌ ಮಾಡಿದ್ದು, ಸದ್ಯ ಅವರ ವಿಡಿಯೋ ವೈರಲ್‌‌ ಆಗಿದೆ. ಆರತಕ್ಷತೆ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಹಣಕಾಸು ಸಚಿವ ಅರುಣ್‌ ಜೇಟ್ಲಿ ಅವರು ಭಾಗವಹಿಸಿ ನವ ದಂಪತಿಗೆ ಶುಭ ಹಾರೈಸಿದ್ದಾರೆ. ಎರಡು […]

ಮಮತಾಗೆ ಕೈಕೊಟ್ಟ ‘ಅಣ್ಣಾ’ ರಾಜಕೀಯ!

Thursday, March 13th, 2014
Mamata-Banerjee

ನವದೆಹಲಿ: ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ ಮುಂದಿಟ್ಟುಕೊಂಡು ದೆಹಲಿಯಲ್ಲಿ ರಾಜಕೀಯ ಮಾಡಲು ಹೊರಟ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಯೋಜನೆ ವಿಫಲವಾಗಿದೆ. ರಾಮಲೀಲಾ ಮೈದಾನದಲ್ಲಿ ಬುಧವಾರ ಆಯೋಜಿಸಲಾಗಿದ್ದ ರ್ಯಾಲಿಗೆ ಅಣ್ಣಾ ಕೈಕೊಟ್ಟಿದ್ದಾರೆ. ಬೆರಳೆಣಿಕೆ ಸಂಖ್ಯೆಯ ಜನರಿಗೆ ಮಮತಾ ಅವರೊಬ್ಬರೇ ಭಾಷಣ ಮಾಡಿ ಹೋಗಿದ್ದಾರೆ. ಅಣ್ಣಾ ಗೈರು ಹಾಜರಾಗಲು ಅನಾರೋಗ್ಯದ ಕಾರಣ ನೀಡಲಾಗುತ್ತಿದೆ. ಆದರೆ, ಇತ್ತೀಚೆಗಷ್ಟೇ ಬಿಜೆಪಿ ಸೇರಿದ್ದ ಬೆಂಬಲಿಗ, ಭೂ ಸೇನೆ ನಿವೃತ್ತ ಮುಖ್ಯಸ್ಥ ಜ. ವಿ.ಕೆ. ಸಿಂಗ್ ಪ್ರಭಾವವೇ ರ್ಯಾಲಿಯಿಂದ ಅಣ್ಣಾ ದೂರ ಉಳಿಯಲು […]

ನಕ್ಸಲ್ ರಕ್ತದೋಕುಳಿ 20 ಯೋಧರ ಹತ್ಯೆ

Wednesday, March 12th, 2014
Naxal

ನವದೆಹಲಿ: ಛತ್ತೀಸ್‌ಗಡದಲ್ಲಿ ನಕ್ಸಲೀಯರು ಮತ್ತೆ ರಕ್ತದೋಕುಳಿ ಹರಿಸಿದ್ದಾರೆ. ಕೆಂಪು ಉಗ್ರರು ನಡೆಸಿದ ದಾಳಿಗೆ 20 ಮಂದಿ ಭದ್ರತಾ ಸಿಬ್ಬಂದಿ ಬಲಿಯಾಗಿದ್ದಾರೆ. ಛತ್ತೀಸ್‌ಗಡದ ಸುಕ್ಮಾ ಜಿಲ್ಲೆಯ ದಟ್ಟ ಅರಣ್ಯದಲ್ಲಿ ಮಂಗಳವಾರ ಈ ದುರ್ಘಟನೆ ನಡೆದಿದೆ.  ಬೆಳಗ್ಗೆ 10.30ರ ವೇಳೆಗೆ ನಕ್ಸಲರು ಹಾಗೂ ಭದ್ರತಾ ಸಿಬ್ಬಂದಿ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ 15 ಮಂದಿ ಸಿಆರ್‌ಪಿಎಫ್ ಯೋಧರು ಹಾಗೂ 5 ಮಂದಿ ಪೊಲೀಸರು ಸಾವಿಗೀಡಾಗಿದ್ದಾರೆ. ಕೆಲವು ಭದ್ರತಾ ಸಿಬ್ಬಂದಿಗೆ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ನಕ್ಸಲರ ಪ್ರಾಣಹಾನಿ ಬಗ್ಗೆ ಯಾವುದೇ […]

ಯೋಗೇಶ್ವರ್ ಕಾಂಗ್ರೆಸ್ ಗೆ ಸೇರ್ಪಡೆ

Wednesday, March 12th, 2014
CP-Yogeshwar

ನವದೆಹಲಿ: ಚನ್ನಪಟ್ಟಣ ಕ್ಷೇತ್ರದ ಸಮಾಜವಾದಿ ಪಕ್ಷದ ಏಕೈಕ ಶಾಸಕ ಸಿ.ಪಿ. ಯೋಗೇಶ್ವರ್ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ. ಮಂಗಳವಾರ ಎಐಸಿಸಿ ಯೋಗೇಶ್ವರ್ಗೆ ಹಸಿರು ನಿಶಾನೆ ನೀಡಿದೆ. ತಕ್ಷಣಕ್ಕೆ ಜಾರಿಗೆ ಬರುವಂತೆ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳಲಾಗಿದೆ. ಲೋಕಸಭಾ ಉಪ ಚುನಾವಣೆ ವೇಳೆ ಪರೋಕ್ಷವಾಗಿ ಕಾಂಗ್ರೆಸ್ ಪರವಾಗಿ ಕೆಲಸ ಮಾಡಿದ್ದ ಸಿ.ಪಿ. ಯೋಗೇಶ್ವರ್ ಕಾಂಗ್ರೆಸ್ ಸೇರ್ಪಡೆಯೊಂದಿಗೆ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಚುನಾವಣಾ ಲೆಕ್ಕಾಚಾರಗಳು ಬದಲಾಗಿವೆ. ಜೆಡಿಎಸ್ ವಶದಲ್ಲಿದ್ದ ಆ ಕ್ಷೇತ್ರವನ್ನು ಲೋಕಸಭಾ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ವಶಪಡಿಸಿಕೊಂಡಿತ್ತು. ಡಿ.ಕೆ.ಶಿವಕುಮಾರ್ ಅವರ ಸಹೋದರ […]