Blog Archive

ನಾಳೆ ಮೂರು ಕಡೆ ಸಿಎಂ ಸಮಾವೇಶ: ಅಹಿತಕರ ಘಟನೆ ನಡೆಯದಂತೆ ಬಿಗಿ ಭದ್ರತೆ

Saturday, January 6th, 2018
mangaluru

ಮಂಗಳೂರು: ಅಹಿತಕರ ಘಟನೆಗಳ ನಡುವೆ ರವಿವಾರ ಮುಖ್ಯ ಮಂತ್ರಿ ಸಿದ್ದರಾಮಯ್ಯ ಜಿಲ್ಲೆಗೆ ಆಗಮಿಸುತ್ತಿದ್ದಾರೆ. ಜಿಲ್ಲಾ ಬಂದ್‌ಗೆ ಕರೆ ನೀಡುವ ತವಕದಲ್ಲಿರುವ ಹಿಂದೂ ಸಂಘಟನೆಗಳು, ಕರಿಪತಾಕೆ ಹಿಡಿಯುತ್ತೇವೆ ಎಂದು ಸವಾಲೆಸೆದ ಜೆಡಿಎಸ್‌, ಇಷ್ಟಲ್ಲದೆ ಭದ್ರತೆ, ಕಾರ್ಯಕ್ರಮ ಜೋಡಣೆಯ ತಯಾರಿ ಪೊಲೀಸ್‌ ಇಲಾಖೆಯ ನಿದ್ದೆಗೆಡಿಸಿದೆ. ಜಿಲ್ಲೆಯ ಮೂರು ಕಡೆ ಬೃಹತ್‌ ಸಮಾವೇಶ ಆಯೋಜಿಸಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಈ ಅವಧಿಯ ಕೊನೆಯ ಭೇಟಿ ಇದಾಗಿದೆ. ಮುಂದಿನ ಕೆಲ ತಿಂಗಳಲ್ಲಿ ಚುನಾವಣೆ ಎದುರಿಸಲಿರುವ ಕಾರಣ, ಕಾಂಗ್ರೆಸ್‌ಗೆ ಇದು ಶಕ್ತಿ ಪ್ರದರ್ಶನದ ವೇದಿಕೆ. […]

ಜನವರಿ 3 ರಿಂದ ಲವ್ ಜಿಹಾದ್ ವಿರುದ್ಧ ಜಾಗೃತಿ ಅಭಿಯಾನ

Tuesday, January 2nd, 2018
Love-jihad

ಮಂಗಳೂರು: ವಿಶ್ವ ಹಿಂದೂ ಪರಿಷತ್, ಬಜರಂಗದಳದ ಯುವ ವಿಭಾಗ ಹಾಗೂ ದುರ್ಗಾವಾಹಿನಿ ವತಿಯಿಂದ ಲವ್ ಜಿಹಾದ್ ವಿರುದ್ಧ ಜನಜಾಗೃತಿ ಅಭಿಯಾನವನ್ನು ಜನವರಿ 3 ರಿಂದ 15 ದಿನಗಳವರೆಗೆ ಹಮ್ಮಿಕೊಳ್ಳಲಾಗಿದೆ ಎಂದು ವಿಶ್ವ ಹಿಂದೂ ಪರಿಷತ್ ಕಾರ್ಯಾಧ್ಯಕ್ಷ ಪ್ರೊ. ಎಂ.ಬಿ. ಪುರಾಣಿಕ್ ಮಾಹಿತಿ ನೀಡಿದ್ದಾರೆ. ಮಂಗಳೂರಲ್ಲಿ ಶಂಕಿತ ಲವ್ ಜಿಹಾದ್ ಪ್ರಕರಣ, ಎನ್ಐಎ ತನಿಖೆಗೆ ಆಗ್ರಹ ವಾರ್ಡ್, ಗ್ರಾಮಗಳಲ್ಲಿ ಜಾಗೃತಿ ಕಾರ್ಯಕ್ರಮ ನಡೆಸಲಾಗುತ್ತಿದೆ. ಗ್ರಾಮಕ್ಕೊಂದು ಸಮಿತಿ ರಚಿಸಿ, ತಿಂಗಳಿಗೊಮ್ಮೆ ಸಭೆ ನಡೆಸಲಾಗುವುದು ಎಂದ ಅವರು ಲವ್ ಜಿಹಾದ್ ವಿರೋಧಿಸಿ, […]

ರಾಜಕೀಯ ಹಸ್ತಕ್ಷೇಪದಿಂದ ಹದಗೆಡುತ್ತಿರುವ ಪೊಲೀಸ್ ಇಲಾಖೆ: ಜಿ.ಎ.ಬಾವಾ

Monday, December 11th, 2017
mangalore-police

ಮಂಗಳೂರು: ಅತಿಯಾದ ರಾಜಕೀಯ ಹಸ್ತಕ್ಷೇಪದಿಂದ ಪೊಲೀಸ್ ಇಲಾಖೆ ಹದಗೆಡುತ್ತಿದೆ ಎಂದು ಕಾಂಗ್ರೆಸ್ ಮುಖಂಡರೂ ಆಗಿರುವ ನಿವೃತ್ತ ಪೊಲೀಸ್ ಅಧಿಕಾರಿ ಜಿ.ಎ.ಬಾವಾ ಹೇಳಿದ್ದಾರೆ. ಮಂಗಳೂರು ನಗರ ಪೊಲೀಸ್ ಕಮಿಷನರ್ ಕಚೇರಿಯಲ್ಲಿ ರವಿವಾರ ನಡೆದ ನಿವೃತ್ತ ಪೊಲೀಸ್ ಮಹಾನಿರ್ದೇಶಕ ಡಾ.ಡಿ.ವಿ.ಗುರುಪ್ರಸಾದ್ ಅವರ ಕೈಗೆ ಬಂದ ತುತ್ತು ಕೃತಿ ಬಿಡುಗಡೆ ಹಾಗೂ ಅಂದಿನ ಮತ್ತು ಇಂದಿನ ಅಪರಾಧಗಳು, ಪೊಲೀಸರು ಕುರಿತ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಸುಮಾರು 30 ವರ್ಷಗಳ ಹಿಂದೆ ಕಿರಿಯ ಪೊಲೀಸ್ ಅಧಿಕಾರಿಗಳು ರಾಜಕಾರಣಿಗಳನ್ನು ಭೇಟಿ ಮಾಡಿದರೆ ಹಿರಿಯ […]

ಮೋದಿ ಭೇಟಿ :ಪೊಲೀಸ್ ಇಲಾಖೆ ಬಿಗಿ ಬಂದೋಬಸ್ತ್ಗುಹಾಗು ಪರಿಶೀಲನೆ

Thursday, October 26th, 2017
darmasthala

ಮಂಗಳೂರು: ಬೆಳ್ತಂಗಡಿಯ ಉಜಿರೆ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ಬಿಗಿ ಬಂದೋಬಸ್ತ್ ಕೈಗೊಂಡಿದೆ. ಕಾರ್ತಿಕ ಮಾಸದಲ್ಲಿ ಧರ್ಮಸ್ಥಳಕ್ಕೆ ಮೋದಿ: ಭಕ್ತರಿಗೆ ದೇವಾಲಯದ ಮನವಿ ಜಿಲ್ಲೆಯ ಎಲ್ಲಾ ಆಯಕಟ್ಟಿನ ಸ್ಥಳಗಳು ಸೇರಿದಂತೆ ಪಶ್ಚಿಮಘಟ್ಟ ತಪ್ಪಲಿನ ಪ್ರದೇಶಗಳಲ್ಲಿ ಪೊಲೀಸ್ ಸರ್ಪಗಾವಲು ಹಾಕಲಾಗಿದೆ . ಪ್ರಧಾನಿ ಅವರ ಭದ್ರತೆಯ ಜವಾಬ್ದಾರಿ ಹೊತ್ತಿರುವ ಎಸ್.ಪಿ.ಜಿ ಪಡೆಯ ಐಜಿ ಶ್ರೇಣಿಯ ಅಧಿಕಾರಿ ಸೇರಿದಂತೆ ಎಸ್.ಪಿ.ಜಿ ಪಡೆಯ ಕಮಾಂಡೋಗಳು ಈಗಾಗಲೇ ಧರ್ಮಸ್ಥಳಕ್ಕೆ ಆಗಮಿಸಿದ್ದಾರೆ. ಧರ್ಮಸ್ಥಳಕ್ಕೆ […]

ರವೂಫ್ ನತ್ತ ಪೊಲೀಸ್ ಇಲಾಖೆ ಗಮನಹರಿಸಲಿ…

Saturday, January 3rd, 2015
Traffic Rauf

ಮಂಗಳೂರು : ಯಾರಿಗೆ ಏನು ಆಗಬೇಕು ಎಂದು ಮನಸ್ಸಿರತ್ತೋ ಅದೇ ಆಗುತ್ತಾ ಹೋದರೆ ದೇಶದಲ್ಲಿ ಬಡವ, ಶ್ರೀಮಂತ ಅಥವಾ ವಿದ್ಯಾವಂತ, ಅವಿದ್ಯಾವಂತ, ನಿರುದ್ಯೋಗಿ, ಉದ್ಯೋಗಿ ಎನ್ನುವ ವಿಂಗಡನೆನೆ ಇರುತ್ತಿರಲಿಲ್ಲ. ಆದರೆ ಭಗವಂತನ ಮನಸ್ಸಿನಲ್ಲಿ ಹೇಗೆ ಇದೆಯೋ ಪ್ರಪಂಚ ಹಾಗೇ ನಡೆಯುತ್ತದೆ. ನಾಸ್ತಿಕರು ಇದನ್ನು ಒಪ್ಪುತ್ತಾರೋ ಬಿಡ್ತಾರೋ ಅದು ಬೇರೆ ವಿಷಯ. ಆದರೆ ಜೆ. ಅಬ್ದುಲ್ ರವೂಫ್ ಎಂಬ 42 ವರ್ಷದ ವ್ಯಕ್ತಿಯನ್ನು ನೀವು ಸರಿಯಾಗಿ ಗಮನಿಸಿದರೆ ಭಗವಂತ ಇವರ ವಿಷಯದಲ್ಲಿ ಸ್ವಲ್ಪ ಹೆಚ್ಚೇ ಕರುಣೆ ತೋರಬೇಕು ಎಂದು […]

ಗೋ ಹಂತಕರ ಮತ್ತು ದನಗಳ ಡಕಾಯಿತಿಗಳ ಮೇಲೆ ಕಠಿಣ ಕ್ರಮ ಕೈಗೊಳ್ಳಿ : ಮೋನಪ್ಪ ಭಂಡಾರಿ

Tuesday, August 6th, 2013
Monappa Bhandary

ಮಂಗಳೂರು :  ಗೋ ಹತ್ಯೆ ಮತ್ತು ದನಗಳ ಡಕಾಯಿತು ಸಂಖ್ಯೆ ಜಾಸ್ತಿಯಾಗಿದ್ದು ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಸ್ತಿತ್ವಕ್ಕೆ ಬಂದಮೇಲೆ ಗೋ ಹತ್ಯೆ ನಿಲ್ಲಿಸುವಲ್ಲಿ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆಯು ಸಂಪೂರ್ಣ ವಿಫಲವಾಗಿದೆ ಎಂದು ವಿಧಾನ ಸಭೆ ಸದಸ್ಯ ಮೋನಪ್ಪ ಭಂಡಾರಿ ಹೇಳಿದರು. ಅವರು ಇಂದು ನಗರದ ಭಾರತೀಯ ಜನತಾ ಪಾರ್ಟಿ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಟಿಯನ್ನುದ್ದೇಶಿಸಿ ಈ ಮಾತನ್ನು ಹೇಳಿದರು, ಸಂವಿದಾನದ ಪರಿಚ್ಚೇದ 44 ರ ಆಶಯದಂತೆ 64 ರ  ಗೋ ಹತ್ಯೆ ನಿಷೇಧ ಮಸೂದೆಗೆ ತಿದ್ದುಪಡಿ ತಂದು […]

ಸೈನ್ಯಕ್ಕಿಂತ ಪೊಲೀಸ್ ಇಲಾಖೆಯಲ್ಲಿ ಕರ್ತವ್ಯದಲ್ಲಿರುವಾಗ ಪ್ರಾಣ ತ್ಯಾಗ ಮಾಡುವ ಅಧಿಕಾರಿಗಳ ಸಂಖೆಯೇ ಹೆಚ್ಚು : ಪ್ರತಾಪ್ ರೆಡ್ಡಿ

Tuesday, February 19th, 2013
Prataap Reddy

ಮಂಗಳೂರು : ಪೊಲೀಸ್ ಇಲಾಖೆಯನ್ನು ರಾಷ್ಟ್ರದ ಸೈನ್ಯಕ್ಕೆ ಹೋಲಿಸಿದರೆ ಪೊಲೀಸ್ ಇಲಾಖೆಗೆ ಸೈನ್ಯದಂತೆ ನೇರವಾದ ಶತ್ರುಗಳಿಲ್ಲ ಬದಲಿಗೆ ಶತ್ರುಗಳು ಸಮಾಜದಲ್ಲಿ ವಿವಿಧ ಸ್ತರಗಳಲ್ಲಿ, ಬೇರೆ ಬೇರೆ ರೂಪದಲ್ಲಿದ್ದಾರೆ. ಇಂತಹ  ಸಮಾಜ ಘಾತುಕ ವ್ಯಕ್ತಿಗಳನ್ನು ಮಟ್ಟ ಹಾಕಲು ಪೊಲೀಸರು ತಮ್ಮ ಇತಿಮಿತಿಗಳಿಗಿಂತ ಸ್ವಲ್ಪ ಹೆಚ್ಚಾಗಿ ಕ್ರಮ ಕೈಗೊಂಡರು ಕೂಡ ನಾಗರಿಕ ಸಮಾಜದ ಕೆಂಗಣ್ಣಿಗೆ ಗುರಿಯಾಗಬೇಕಾಗುತ್ತದೆ. ಸೈನ್ಯಕ್ಕಿಂತ ಪೊಲೀಸ್ ವ್ಯವಸ್ಥೆಯಲ್ಲಿ ಕರ್ತವ್ಯದಲ್ಲಿರುವಾಗ  ಪ್ರಾಣ ತ್ಯಾಗ ಮಾಡಿದ ಅಧಿಕಾರಿಗಳೆ ಹೆಚ್ಚಿನ  ಸಂಖ್ಯೆಯಲ್ಲಿದ್ದರು ಪೊಲೀಸ್ ಇಲಾಖೆಗೆ ಮಾತ್ರ ಸರಿಯಾದ ವ್ಯವಸ್ಥೆಗಳು ಸಿಗುತ್ತಿಲ್ಲ ಎಂದು ಪಶ್ಚಿಮವಲಯ […]

ವಿಧ್ಯಾರ್ಥಿಗಳು ಮಾದಕ ವ್ಯಸನಿಗಳಾಗುವುದನ್ನು ತಪ್ಪಿಸಲು ನಗರದಲ್ಲಿ ಪ್ರಥಮ ಹಂತವಾಗಿ ಏರ್ಪಡಿಸಲಾದ ಮಾದಕ ದ್ರವ್ಯ ವಿರೋಧಿ ಅಭಿಯಾನ

Friday, February 8th, 2013
Anti drug campaign

ಮಂಗಳೂರು :ಮಾದಕ ದ್ರವ್ಯ ವಿರೋಧಿ ಅಭಿಯಾನದ ಅಂಗವಾಗಿ ಶುಕ್ರವಾರ ದಕ್ಷಿಣ ಕನ್ನಡ ಜಿಲ್ಲಾಡಳಿತ ಹಾಗೂ ಮಂಗಳೂರು ನಗರ ಪೊಲೀಸ್ ಇಲಾಖೆಗಳ ಸಹಭಾಗಿತ್ವದಲ್ಲಿ ವಿದ್ಯಾರ್ಥಿ ಗಳು ಮಾದಕ ವ್ಯಸನಿ ಗಳಾಗುತ್ತಿರುವುದನ್ನು ತಪ್ಪಿಸುವ ಕುರಿತಂತೆ  ನಗರದ ಎಲ್ಲಾ ಕಾಲೇಜುಗಳ ಮುಖ್ಯಸ್ಥರು ಹಾಗು ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಲಾಯಿತು. ನಗರ ಪೊಲೀಸ್ ಕಮೀಷನರ್ ಮನೀಷ್ ಎ ಕರ್ಬೀಕರ್ ಮಾತನಾಡಿ ಇಂದಿನ ದಿನಗಳಲ್ಲಿ ವಿದ್ಯಾರ್ಥಿಗಳ ಹೆತ್ತವರು ಮಕ್ಕಳ ಎಲ್ಲಾ ಬೇಡಿಕೆಗಳನ್ನು ಪೂರೈಸುತ್ತಾರೆ ಆದರೆ ತಮ್ಮ ಮಕ್ಕಳು ಶಾಲಾ ಕಾಲೇಜುಗಳಲ್ಲಿ ಹಾಗು ಇತರೆಡೆಗಳಲ್ಲಿ ಹೇಗಿರುತ್ತಾರೆ ಎಂಬುದನ್ನು […]

ಸಮವಸ್ತ್ರಕ್ಕಾಗಿ ಪರದಾಡುವ ಪೊಲೀಸರು!

Tuesday, January 29th, 2013
Indian police

ಮಂಗಳೂರು : ಪೊಲೀಸರು ಲಾಠಿಚಾರ್ಜ್ ಮಾಡಿದರು… ಪೊಲೀಸರು ಸುಳ್ಳು ಪ್ರಕರಣ ದಾಖಲಿಸಿದರು… ಪೊಲೀಸರು ಲಂಚ ಕೇಳಿದರು… ಪೊಲೀಸರು ದರ್ಪದಿಂದ ವರ್ತಿಸಿದರು… ಪೊಲೀಸರು ಹಲ್ಲೆ ಮಾಡಿದರು… ಪೊಲೀಸರು ದೌರ್ಜನ್ಯ ಎಸಗಿದರು… ಹೀಗೆ ಸಾಗುತ್ತದೆ, ಪೊಲೀಸರ ಮೇಲಿನ ಆರೋಪ. ಕೆಲವು ಪೊಲೀಸರು ರಾಜಕೀಯ ಒತ್ತಡಕ್ಕೆ ಮಣಿದು ಹೀಗೆಲ್ಲ ವರ್ತಿಸಿದರೆ ಇನ್ನು ಕೆಲವರಿಗೆ ಜಾತಿ, ಧರ್ಮದ ಅಮಲು ತಗಲಿರುವುದು ಸುಳ್ಳಲ್ಲ. ಹಾಗಂತ ಎಲ್ಲ ಪೊಲೀಸರನ್ನು ಒಂದೆ ತಕ್ಕಡಿಯಲ್ಲಿ ತೂಗುವುದು ಕೂಡ ಸಮಂಜಸವಲ್ಲ. ಸರಕಾರದ ನೂರಾರು ಇಲಾಖೆಗಳ ಪೈಕಿ ಜನರು ಹೆದರುವುದು ಪೊಲೀಸ್ […]

ಜಿಲ್ಲಾ ಎಸ್ಪಿಯವರಿಂದ ಕಾನೂನು ಸಮಸ್ಯೆಗಳ ದೂರು ಆಲಿಕೆ

Sunday, October 10th, 2010
ಜಿಲ್ಲಾ ಎಸ್ಪಿಯವರಿಂದ ಕಾನೂನು ಸಮಸ್ಯೆಗಳ ದೂರು ಆಲಿಕೆ

ಮಂಗಳೂರು : ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ, ದಲಿತರಿಗೆ ಆಗುವ ತೊಂದರೆಗಳು, ಪೊಲೀಸ್ ಇಲಾಖೆಗಳಲ್ಲಿ ಜನ ಸಾಮಾನ್ಯರಿಗೆ ಆಗುವ ಕಿರುಕುಳ ಮೊದಲಾದ ದೂರುಗಳನ್ನು ಇಂದು ಜಿಲ್ಲಾ ಎಸ್ಪಿ ಡಾ| ಸುಬ್ರಹ್ಮಣೇಶ್ವರ ರಾವ್ ಅವರು ತಮ್ಮ ಕಛೇರಿಯಲ್ಲಿ ಆಲಿಸಿದರು. ಪೊಲೀಸ್ ನಿರೀಕ್ಷಕರಾದ ಬಿ.ಜೆ.ಭಂಡಾರಿ, ಬಂಟ್ವಾಳ ಪೊಲೀಸ್ ನಿರೀಕ್ಷಕರಾದ ನಜುಂಡೇ ಗೌಡ, ಸುಳ್ಯ ಪೊಲೀಸ್ ನಿರೀಕ್ಷಕರಾದ ಮಂಜಯ್ಯ ಹಾಗೂ ಜಿಲ್ಲೆಯ ಇನ್ನಿತರ ಠಾಣೆಗಳ ಉಪ ನಿರೀಕ್ಷಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ದ.ಕ. ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಗೋಪಾಲ ಕಾಡು […]