Blog Archive

ಮಹಾರಾಷ್ಟ್ರದ ಸಾಧು ಹತ್ಯೆ ಖಂಡನೀಯ. ಪುತ್ತಿಗೆ ಶ್ರೀ

Friday, April 24th, 2020
Sugunedra Thirtha

ಉಡುಪಿ : ಮಹಾರಾಷ್ಟ್ರದ ಪಾಲ್ಗರ್ನಲ್ಲಿ ನಡೆದ ಸಾಧು ಸಂತರ ಹತ್ಯೆ ಸರ್ವಥಾ ಖಂಡನೀಯವಾಗಿದ್ದು,ಇದರಿಂದ ಸಾಧು ಸಂತರಿಗೆ ತುಂಬಾ ನೋವಾಗಿದೆ, ಈ ಹತ್ಯೆಯ ವೀಡಿಯೊ ದಾಖಲಾತಿಯನ್ನು ಗಮನಿಸಿದಾಗ ಇದು ಅತ್ಯಂತ ಪೂರ್ವ ನಿಯೋಜಿತ ವಾಗಿದ್ದು, ಅತ್ಯಂತ ಕೆಟ್ಟ ದುರುದ್ದೇಶವನ್ನು ಒಳಗೊಂಡಂತೆ ಭಾಸವಾಗುತ್ತಿದೆ. ಎಂದು ಉಡುಪಿಯ ಅಷ್ಟ ಮಠಗಳಲ್ಲಿ ಒಂದಾಗಿರುವ ಪುತ್ತಿಗೆ ಮಠದ ಶ್ರೀ ಶ್ರೀ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ ತಿಳಿಸಿರುವರು ಕೊರೋನಾ ವೈರಸ್ಸಿನ ಮಹಾ ಸಮಸ್ಯೆಯಿಂದ ದೇಶವು ತಲ್ಲಣಗೊಂಡು ತತ್ತರಿಸುತ್ತಿರುವಾಗ, ಈ ಒಂದು ಸಂದರ್ಭದಲ್ಲಿ ದೇಶದಲ್ಲಿ ಮತೀಯ ಸಾಮರಸ್ಯವನ್ನು […]

ಮಹಾರಾಷ್ಟ್ರ ಸಾಧುಗಳ ಹತ್ಯೆ : ಕೇಮಾರು ಶ್ರೀ ಗರಂ ಅಪರಾಧಿಗಳಿಗೆ ಗಲ್ಲು ಶಿಕ್ಷೆ ಆಗಬೇಕು

Thursday, April 23rd, 2020
Kemaru-Swamiji

ಮಂಗಳೂರು  : ಸಾಧು ಸಂತರ ನಾಡು ಹಿಂದೂ ಸಾಮ್ರಾಜ್ಯ ಚಕ್ರವರ್ತಿ ಶಿವಾಜಿ ಮಹಾರಾಜರ ಪುಣ್ಯಭೂಮಿ ಮಹಾರಾಷ್ಟ್ರದ ಪಾಲ್ಘರ್‌ ಜಿಲ್ಲೆಯಲ್ಲಿ ಸಾಧುಗಳು ಹಾಗೂ ಅವರ ವಾಹನ ಚಾಲಕರನ್ನು ನಿರ್ದಾಕ್ಷಿಣ್ಯವಾಗಿ ಹಿಂಸಿಸಿ ಹತ್ಯೆ ಮಾಡಿರುವ ಘಟನೆಯನ್ನು ಕೇಮಾರು ಸಾಂದೀಪನೀ ಸಾಧನಾಶ್ರಮದ ಶ್ರೀಶ್ರೀಶ್ರೀ ಈಶವಿಠಲದಾಸ ಸ್ವಾಮೀಜಿ ತೀವ್ರವಾಗಿ ಖಂಡಿಸಿದ್ದಾರೆ. ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ಎಲ್ಲ ಅಪರಾಧಿಗಳಿಗೆ ಗಲ್ಲು ಶಿಕ್ಷೆ ಆಗಬೇಕು ಮುಂದೆಂದೂ ನಮ್ಮ ದೇಶದಲ್ಲಿ ಈ ರೀತಿಯ ಕೃತ್ಯಗಳು ನಡೆಯದಂತೆ ಸರಕಾರ ಸೂಕ್ತ ವ್ಯವಸ್ಥೆ ಮಾಡಬೇಕೆಂದು ಎಂದು […]

ಕನ್ನಡ ಸಾಹಿತ್ಯ ಪರಿಷತ್ತು ಮಹಾರಾಷ್ಟ್ರ ಘಟಕದ ಮಾಜಿ ಅಧ್ಯಕ್ಷ ಹೆಚ್.ಬಿ. ಎಲ್. ರಾವ್ ನಿಧನ

Wednesday, April 22nd, 2020
HBL-Rao

ಮುಂಬಯಿ: ಕನ್ನಡ ಸಾಹಿತ್ಯ ಪರಿಷತ್ತು ಮಹಾರಾಷ್ಟ್ರ ಘಟಕದ ಮಾಜಿ ಅಧ್ಯಕ್ಷ ಹೆಚ್.ಬಿ. ಎಲ್. ರಾವ್ (87) ಅವರು ಅಲ್ಪ ಕಾಲದ ಅನಾರೋಗ್ಯದಿಂದ ಇಂದು ಬೆಳಿಗ್ಗೆ (ಏಪ್ರಿಲ್ 22) ರಂದು ದೈವಾಧೀನರಾದರು. ಮೂಲತಃ ಮಂಗಳೂರಿನ ಹೆಜ್ಮಾಡಿಯವರಾಗಿದ್ದು ಪತ್ನಿ, ಪುತ್ರಿ, ಅಳಿಯ, ಮೊಮ್ಮಗಳು ಹಾಗೂ ಅಪಾರ ಬಂಧುಗಳನ್ನು ಅಗಲಿದ್ದಾರೆ. ಬದುಕಿನಲ್ಲಿ ಮನಸ್ಸು ಮಾಡಿದರೆ ಏನೆಲ್ಲ ಮಾಡಬಹುದು ಎಂಬುದಕ್ಕೆ ಹೆಚ್.ಬಿ.ಎಲ್ ರಾವ್ ಉದಾಹರಣೆ. ಅವರ ಹೆಸರು ಕೇಳಿದರೆ ನಮಗೆ ನೆನಪಾಗುವುದು ಅವರು ಮುಂಬಯಿಯಲ್ಲಿ ನಡೆಸಿಕೊಂಡು ಬರುತ್ತಿದ್ದ ಕನ್ನಡ ಸಾಹಿತ್ಯ ಪರಿಷತ್ತು ಮಹಾರಾಷ್ಟ್ರ […]

ಎನ್‌ಪಿಆರ್‌ಗೆ ಮಹಾರಾಷ್ಟ್ರದಲ್ಲಿ ಅವಕಾಶ : ಮಹಾರಾಷ್ಟ್ರ ಸಿಎಂ ಉದ್ಧವ್‌ ಠಾಕ್ರೆ

Wednesday, February 19th, 2020
maharashtra

ಮುಂಬೈ : ಎಲ್ಗಾರ್‌ ಪರಿಷತ್‌ ತನಿಖೆಯನ್ನು ಎನ್‌ಐಎಗೆ ವರ್ಗಾಯಿರಿಸುವುದಕ್ಕೆ ಕಾಂಗ್ರೆಸ್‌, ಎನ್‌ಸಿಪಿ ಆಕ್ಷೇಪ ಮಾಡಿರುವಂತೆಯೇ, ಮಹಾರಾಷ್ಟ್ರ ಸಿಎಂ ಉದ್ಧವ್‌ ಠಾಕ್ರೆ ಪೌರತ್ವ ತಿದ್ದುಪಡಿ ವಿಧೇಯಕಕ್ಕೆ ಯಾರೂ ಭಯಪಡಬೇಕಾಗಿಲ್ಲ ಎಂದಿದ್ದಾರೆ. ಇದರ ಜತೆಗೆ ರಾಷ್ಟ್ರೀಯ ಜನ ಸಂಖ್ಯಾ ನೋಂದಣಿ (ಎನ್‌ಪಿಆರ್‌) ಅರ್ಜಿ ಯಲ್ಲಿರುವ ಅಂಶಗಳನ್ನು ತಾವೇ ಖುದ್ದು ಪರಿಶೀಲಿಸುವುದಾಗಿ ಹೇಳಿಕೊಂಡಿದ್ದಾರೆ. ಸಿಂಧೂದುರ್ಗದಲ್ಲಿ ಮಾತನಾಡಿದ ಅವರು, ಸಿಎಎ, ಎನ್‌ಆರ್‌ಸಿ ಎರಡು ಪ್ರತ್ಯೇಕ ವಿಚಾರಗಳು. ಎನ್‌ಪಿಆರ್‌ ಮೂರನೇ ವಿಚಾರ. ಎನ್‌ಪಿಆರ್‌ ಜಾರಿಗೆ ಮಹಾರಾಷ್ಟ್ರ ಅವಕಾಶ ಮಾಡಿಕೊಡಲಿದೆ ಎಂದಿದ್ದಾರೆ. ಆದರೆ ಎನ್‌ಆರ್‌ಸಿಗೆ ಅವಕಾಶವಿಲ್ಲ. […]

ಮಹಾರಾಷ್ಟ್ರದ ಉದ್ಧವ್‌ ಠಾಕ್ರೆ ನೇತೃತ್ವದ ಸರಕಾರ ಅಸ್ವಾಭಾವಿಕ, ಅವಾಸ್ತವಿಕದ್ದು : ಜೆ.ಪಿ. ನಡ್ಡಾ

Monday, February 17th, 2020
JP-Nadda

ಮುಂಬಯಿ : ಮಹಾರಾಷ್ಟ್ರದ ಉದ್ಧವ್‌ ಠಾಕ್ರೆ ನೇತೃತ್ವದಲ್ಲಿನ ಸರಕಾರ ಅಸ್ವಾಭಾವಿಕ, ಅವಾಸ್ತವಿಕ ಎಂದು ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ಹೇಳಿದ್ದಾರೆ. ಮುಂಬಯಿನಲ್ಲಿ ಪಕ್ಷದ ಕಾರ್ಯರ್ತರ ಸಭೆಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‌-ಎನ್‌ಸಿಪಿ- ಶಿವಸೇನೆ ಮೈತ್ರಿ ಕೂಟ ರಾಜ್ಯದ ಅಭಿವೃದ್ಧಿಗೆ ತಡೆಯಾಗಿದೆ ಎಂದು ದೂರಿದ್ದಾರೆ. ಕಳೆದ ಅಕ್ಟೋಬರ್‌ನಲ್ಲಿ ಪಕ್ಷಕ್ಕೆ ಉತ್ತಮ ಸ್ಥಾನಗಳು ಬಂದಿದ್ದರೂ ಕೆಲವರ ವೈಯಕ್ತಿಕ ಹಿತಾಸಕ್ತಿಗಳಿಂದಾಗಿ ಸರಕಾರ ರಚನೆ ಸಾಧ್ಯವಾಗಿರಲಿಲ್ಲ. ಮುಂಬರುವ ಚುನಾವಣೆಗಾಗಿ ಪಕ್ಷ ಸ್ವಯಂ ಶಕ್ತಿಯಿಂದ ಸ್ಪರ್ಧಿಸಲು ಈಗಿನಿಂದಲೇ ಸಿದ್ಧಗೊಳ್ಳಬೇಕು. ‘ಬಿಜೆಪಿ ವರ್ಸಸ್‌ ಎಲ್ಲರೂ’ ಎಂಬಂಥ ಸ್ಪರ್ಧೆಗೆ ಅಣಿಯಾಗಬೇಕು. […]

ಮಹಾರಾಷ್ಟ್ರದಲ್ಲಿರುವ ಕನ್ನಡಿಗರಿಗೆ ತೊಂದರೆಯಾದರೆ ತಕ್ಕ ಪಾಠ ಕಲಿಸಬೇಕಾಗುತ್ತೆ : ಲಕ್ಷ್ಮಣ ಸವದಿ ಎಚ್ಚರಿಕೆ

Wednesday, January 1st, 2020
lakshman

ಬೆಂಗಳೂರು : ಪ್ರಸ್ತುತ ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದ ವಿಚಾರ ಭಾರೀ ಚರ್ಚೆಯಲ್ಲಿದೆ. ಈ ಬಗ್ಗೆ ಡಿಸಿಎಂ ಲಕ್ಷ್ಮಣ ಸವದಿ ಪ್ರತಿಕ್ರಿಯೆ ನೀಡಿದ್ದು, ಗಡಿ ರಕ್ಷಣೆಗೆ ಕೆಲವೇ ದಿನಗಳಲ್ಲಿ ಸಿಎಂ ಬಿ.ಎಸ್. ಯಡಿಯೂರಪ್ಪ ಸದಸ್ಯರೊಬ್ಬರನ್ನು ನೇಮಕ ಮಾಡಲಿದ್ದಾರೆ ಎಂದು ಹೇಳಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಹಾರಾಷ್ಟ್ರದ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅನಾವಶ್ಯಕ ಹೇಳಿಕೆ ಕೊಟ್ಟಿದ್ದಾರೆ. ಗಡಿ ವಿವಾದದ ಕುರಿತು ರಾಜ್ ಠಾಕ್ರೆ ಹೇಳಿಕೆ ಕೊಟ್ಟಿದ್ದರು. ಅದನ್ನು ಈಗ ಉದ್ದವ್ ಠಾಕ್ರೆಗೆ ನೆನಪು ಮಾಡಿಕೊಡುತ್ತಿದ್ದಾರೆ. ಅನಾವಶ್ಯಕವಾಗಿ ಗೊಂದಲ ಸೃಷ್ಟಿಸಿ […]

ಮಹಾರಾಷ್ಟ್ರದಲ್ಲಿ ಬಿಜೆಪಿ-ಶಿವಸೇನೆ ಮೈತ್ರಿಗೆ ಬಹುಮತ, ಸಿಎಂ ಹುದ್ದೆಗೆ ಸೇನೆ ಪಟ್ಟು

Friday, October 25th, 2019
shivasene

ಮುಂಬೈ : ಮಹಾರಾಷ್ಟ್ರದಲ್ಲಿ ಬಿಜೆಪಿ-ಶಿವಸೇನೆ ಮೈತ್ರಿ ಬಹುಮತ ಪಡೆದುಕೊಂಡು ರಾಜ್ಯದಲ್ಲಿ ಅಧಿಕಾರ ಉಳಿಸಿಕೊಂಡಿದ್ದರೂ ನಿರೀಕ್ಷಿಸಿದಷ್ಟು ಪ್ರಚಂಡ ಬಹುಮತ ಸಿಕ್ಕಿಲ್ಲ. ಸರಳ ಬಹುಮತಕ್ಕಿಂತ ತುಸು ಹೆಚ್ಚಿನ ಸ್ಥಾನಕ್ಕೆ ತೃಪ್ತಿಪಟ್ಟಿದೆ. ಕಾಂಗ್ರೆಸ್ ಮತ್ತು ಎನ್ಸಿಪಿ ಮೈತ್ರಿ ಸೋಲು ಕಂಡಿದ್ದರೂ, ಎರಡೂ ಪಕ್ಷಗಳು ಕಳೆದ ಚುನಾವಣೆಗಿಂತ ಹೆಚ್ಚಿನ ಸ್ಥಾನಗಳಲ್ಲಿ ಗೆಲುವು ಸಾಧಿಸಿವೆ. ಇದು ಆಡಳಿತಾರೂಢ ಬಿಜೆಪಿ, ಶಿವಸೇನೆಗೆ ಎಚ್ಚರಿಕೆ ಗಂಟೆಯಾಗಿದೆ. ಪತ್ರಿಕೆ ಮುದ್ರಣಕ್ಕೆ ಹೋಗುವ ವೇಳೆ, ಬಿಜೆಪಿ 100 ಕ್ಷೇತ್ರಗಳಲ್ಲಿ ಜಯಶಾಲಿಯಾಗಿದ್ದು, 5ರಲ್ಲಿ ಮುನ್ನಡೆಯಲ್ಲಿದೆ. ಶಿವಸೇನೆ 56 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. […]

ಹರ್ಯಾಣ, ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯ ಅಂತಿಮ ಫಲಿತಾಂಶ

Friday, October 25th, 2019
maharashtra

ನವದೆಹಲಿ : ಮಹಾರಾಷ್ಟ್ರ ಮತ್ತು ಹರ್ಯಾಣ ರಾಜ್ಯಗಳ ವಿಧಾನಸಭೆ ಚುನಾವಣೆಯ ಅಂತಿಮ ಫಲಿತಾಂಶ ಮಧ್ಯರಾತ್ರಿ ಹೊರಬಿದ್ದಿದೆ. ಯಾವ ರಾಜ್ಯದಲ್ಲಿ ಯಾವ ಪಕ್ಷ ಎಷ್ಟು ಕ್ಷೇತ್ರಗಳನ್ನು ಗೆದ್ದುಕೊಂಡಿದೆ ಎಂಬ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ. ಗುರುವಾರ ರಾತ್ರಿ 11.15ರ ಸುಮಾರಿಗೆ ಹರ್ಯಾಣ ವಿಧಾನಸಭೆಯ ಫಲಿತಾಂಶವನ್ನು ಚುನಾವಣಾ ಆಯೋಗ ಅಂತಿಮಗೊಳಿಸಿದೆ. ಒಟ್ಟು ವಿಧಾನಸಭಾ ಚುನಾವಣೆಯ ಒಟ್ಟು 90 ಕ್ಷೇತ್ರಗಳ ಪೈಕಿ ಆಡಳಿತಾರೂಢ ಬಿಜೆಪಿ 40 ಸ್ಥಾನವನ್ನಷ್ಟೇ ಗೆದ್ದುಕೊಳ್ಳಲು ಶಕ್ತವಾಗಿದೆ. ಉಳಿದಂತೆ ಕಾಂಗ್ರೆಸ್ 31, ಜೆಜೆಪಿ 10, ಹರ್ಯಾಣ ಲೋಕಹಿತ ಪಕ್ಷ ಒಂದು, […]

ಬಿಜೆಪಿಗೆ ಗೆಲುವಿನ ಭರವಸೆ : ಮಹಾರಾಷ್ಟ್ರದಲ್ಲಿ ಸಂಭ್ರಮಾಚರಣೆಗೆ ಸಿದ್ಧವಾಗಿದೆ 5000 ಲಾಡುಗಳು

Thursday, October 24th, 2019
BJP

ಮುಂಬೈ : ಮಹಾರಾಷ್ಟ್ರ ಮತ್ತು ಹರಿಯಾಣ ವಿಧಾನಸಭೆ ಚುನಾವಣೆಯ ಮತ ಎಣಿಕೆ ಕಾರ್ಯ ಈಗಾಗಲೇ ಪ್ರಾರಂಭವಾಗಿದ್ದು ಎರಡೂ ರಾಜ್ಯಗಳಲ್ಲಿ ಬಿಜೆಪಿ ಮುನ್ನಡೆ ಕಾಯ್ದುಕೊಂಡಿದೆ. ಬಿಜೆಪಿಗಂತೂ ಗೆಲುವು ತಮ್ಮದೇ ಎಂಬ ಭರವಸೆ ಬಲವಾಗಿಯೇ ಇದೆ. ಮಹಾರಾಷ್ಟ್ರದಲ್ಲಿ ಬಿಜೆಪಿ ಕಾರ್ಯಕರ್ತರು ಗೆಲುವು ಸಂಭ್ರಮಿಸಲು ಈಗಾಗಲೇ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಮುಂಬೈನ ಬಿಜೆಪಿ ಮುಖ್ಯಕಚೇರಿಯಲ್ಲಿ ವಿಜಯೋತ್ಸವದ ತಯಾರಿ ಭರ್ಜರಿಯಾಗಿಯೇ ನಡೆಯುತ್ತಿದೆ. ಮತ ಎಣಿಕೆಯ ಪ್ರಕ್ರಿಯೆಯನ್ನು ನೇರ ಪ್ರಸಾರದಲ್ಲಿ ನೋಡಲು ದೊಡ್ಡ ಟಿವಿ ಪರದೆಗಳನ್ನು ಹಾಕಿರುವ ಬಿಜೆಪಿ ಮುಖಂಡರು, ಕಾರ್ಯಕರ್ತರು, ಗೆದ್ದ ಬಳಿಕ ಸಂಭ್ರಮಾಚರಣೆ […]

ಮಹಾರಾಷ್ಟ್ರ ಸಮುದ್ರದಲ್ಲಿ ಮಲ್ಪೆಯ 7 ಮಂದಿಗೆ ಮೀನುಗಾರರಿಂದ ಮಾರಣಾಂತಿಕ ಹಲ್ಲೆ

Thursday, October 17th, 2019
vayuputra-boat

ಉಡುಪಿ : ಕರ್ನಾಟಕ ಮಹಾರಾಷ್ಟ್ರದ ಗಡಿ ಸಮಸ್ಯೆ ಬಗೆಹರಿಯುವ ಲಕ್ಷಣವೇ ಕಾಣುತ್ತಿಲ್ಲ. ಇತ್ತೀಚೆಗೆ ಸಮುದ್ರದಲ್ಲಿ ಕೂಡಾ ಕರ್ನಾಟಕ ಮೀನುಗಾರರ ಜೊತೆ ಮಹಾರಾಷ್ಟ್ರ ಕಚ್ಚಾಟ ಶುರುಮಾಡಿದೆ. ಉಡುಪಿಯಿಂದ ಕಸುಬಿಗೆ ತೆರಳಿದ ಮೀನುಗಾರರಿಗೆ ಮಹಾರಾಷ್ಟ್ರದ ಕಡಲ್ಗಳ್ಳರು ಮಾರಣಾಂತಿಕ ಹಲ್ಲೆ ಮಾಡಿ, ಮೀನು ದೋಚಿ ಅಟ್ಟಹಾಸ ಮೆರೆದಿದ್ದಾರೆ. ಮಲ್ಪೆಯಿಂದ ತೆರಳಿ ಮಹಾರಾಷ್ಟ್ರದ ಮಾಲ್ವಾನ್ ಕಡಲ ತೀರದಲ್ಲಿ 7 ಮೀನುಗಾರರು ಸಾವನ್ನಪ್ಪಿದ ಘಟನೆ ಮಾಸುವ ಮುನ್ನವೇ ಉಡುಪಿಯ ಮಲ್ಪೆಯ ಮೀನುಗಾರರ ಮೇಲೆ ಮಹಾರಾಷ್ಟ್ರದ ಕಡಲ್ಗಳ್ಳರು ಹಲ್ಲೆ ಮಾಡಿದ್ದಾರೆ. ಬೋಟ್ ಮೂಲಕ 200 ಮೀನುಗಾರರು […]