Blog Archive

ಮೈಸೂರು : ಗ್ರಾಮಸ್ಥರಲ್ಲಿ ಆತಂಕವನ್ನು ಹೆಚ್ಚಿಸಿದ್ದ ಚಿರತೆ ಕೊನೆಗೂ ಸೆರೆ

Thursday, January 16th, 2020
chirate

ಮೈಸೂರು : ಒಂದು ತಿಂಗಳಿನಿಂದ ಗ್ರಾಮದ ಜಮೀನುಗಳಿಗೆ ನುಗ್ಗಿ ಜಾನುವಾರುಗಳನ್ನು ಭಕ್ಷಿಸಿ‌ ಗ್ರಾಮಸ್ಥರಲ್ಲಿ ಆತಂಕವನ್ನು ಹೆಚ್ಚಿಸಿದ್ದ ಚಿರತೆ ಇದೀಗ ಬೋನಿಗೆ ಬಿದ್ದಿದೆ. ಸರಗೂರು ತಾಲೂಕಿನ ಹಲಸೂರು ಗ್ರಾಮದ ಹೆಚ್.ಎಲ್ ಶಂಭುಲಿಂಗನಾಯ್ಕ್ ರವರ ಜಮೀನಿನಲ್ಲಿ ಅರಣ್ಯ ಇಲಾಖೆ ಇಟ್ಟಿದ್ದ ಬೋನಿಗೆ ಚಿರತೆ ಸೆರೆಯಾಗಿದೆ. ಕಳೆದು ಒಂದು ತಿಂಗಳಿನಿಂದ ಗ್ರಾಮದ ಜಮೀನುಗಳಲ್ಲಿ ಕಾಣಿಸಿಕೊಂಡಿದ್ದ ಚಿರತೆ ಜಮೀನುಗಳಲ್ಲಿ ಇರುತ್ತಿದ್ದ ಜಾನುವಾರುಗಳನ್ನು ತಿಂದು ಕಣ್ಮರೆಯಾಗುತ್ತಿತ್ತು. ಚಿರತೆ ಸೆರೆ ಹಿಡಿಯುವಂತೆ ಗ್ರಾಮಸ್ಥರು ಅರಣ್ಯಾಧಿಕಾರಿಗಳಿಗೆ ಮನವಿ ಮಾಡಿದ್ದರು. ಅರಣ್ಯಾಧಿಕಾರಿಗಳು ಒಂದು ತಿಂಗಳಿನಿಂದ ಬೋನು ಇಟ್ಟಿದ್ದರೂ ಸೆರೆಯಾಗದೇ […]

ಮೈಸೂರು ಕೆಆರ್​ಎಸ್​ ಅಣೆಕಟ್ಟಿನ ಸುತ್ತಮುತ್ತಲಿನ ಗಣಿಗಾರಿಕೆ ನಿಲ್ಲಿಸಲು ಸಿಎಂ ಬಿಎಸ್​ವೈ ಆದೇಶ

Monday, January 6th, 2020
KSR

ಬೆಂಗಳೂರು : ಮೈಸೂರಿನ ಕೃಷ್ಣ ರಾಜ ಸಾಗರ ಅಣೆಕಟ್ಟು ಹಾಗೂ ಬೃಂದಾವನ ಉದ್ಯಾನದ ಪರಿಸರದಲ್ಲಿ ಗಣಿಗಾರಿಕೆ ನಿಲ್ಲಿಸಲು ಅಧಿಕಾರಿಗಳಿಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಕೆಆರ್ಎಸ್ ಡ್ಯಾಮ್ ಸಮೀಪದ ಬೇಬಿ ಬೆಟ್ಟದಲ್ಲಿ ಗಣಿಗಾರಿಕೆ ನಡೆಯುತ್ತಿದೆ. ಇದರಿಂದ ಅಣೆಕಟ್ಟಿನ ಭದ್ರತೆಗೆ ಧಕ್ಕೆಯಾಗುತ್ತಿದೆ ಎನ್ನಲಾಗುತ್ತಿದೆ. ಹೀಗಾಗಿ, ಗಣಿಗಾರಿಕೆ ನಿಲ್ಲಿಸುವಂತೆ ಸ್ಥಳೀಯರು ಒತ್ತಡ ಹೇರುತ್ತಿದ್ದಾರೆ. ಈ ವಿಚಾರವಾಗಿ ಭಾರೀ ಪ್ರತಿಭಟನೆಗಳು ಕೂಡ ನಡೆದಿವೆ. ಆದರೆ, ಗಣಿಗಾರಿಕೆ ನಿಲ್ಲುವ ಯಾವುದೇ ಲಕ್ಷಣ ಗೋಚರವಾಗುತ್ತಿಲ್ಲ. ಅಣೆಕಟ್ಟಿನ ಭದ್ರತೆಗೆ ಧಕ್ಕೆಯಾಗುತ್ತಿದೆ. ಹೀಗಾಗಿ […]

ಮೈಸೂರಿನಲ್ಲಿ ನಕಲಿ ಗೈಡ್‌ ಗಳ ಹಾವಳಿ

Wednesday, December 11th, 2019
mysore-palace

ಮೈಸೂರು ; ನಗರದಲ್ಲಿ ಇದೀಗ ನಕಲಿ ಪ್ರವಾಸೀ ಮಾರ್ಗದರ್ಶಿಗಳ ಹಾವಳಿ ಹೆಚ್ಚಾಗಿದೆ. ಪ್ರತಿನಿತ್ಯವೂ ಮೈಸೂರಿಗೆ ಸಹಸ್ರಾರು ಜನ ಪ್ರವಾಸಿಗರು ಹೊರ ರಾಜ್ಯಗಳಿಂದ ಆಗಮಿಸುತ್ತಾರೆ. ಇಲ್ಲಿ ಬರುವ ಪ್ರವಾಸಿಗರು ಮೊದಲೇ ಇಂಟರ್‌ ನೆಟ್‌ ನಲ್ಲಿ ನೋಡಬೇಕಾದ ಸ್ಥಳಗಳ ಮಾಹಿತಿಯನ್ನೂ ಪಡೆದೇ ಬಂದಿರುತ್ತಾರೆ. ಆದರೆ ಪ್ರವಾಸಿಗರು ನೋಡಬಯಸುವ ಸ್ಥಳಗಳಿಗೆ ಭೇಟಿ ನೀಡುವುದಕ್ಕೂ ಮುನ್ನವೇ ಅವರನ್ನು ರೈಲ್ವೇ ನಿಲ್ದಾಣ, ಬಸ್‌ ನಿಲ್ದಾಣ , ಅಥವಾ ಖಾಸಗೀ ವಾಹನ ಟೆಂಪೋ , ಪಾರ್ಕ್‌ ಮಾಡಿರುವ ಸ್ಥಳಗಳಿಗೆ ತೆರಳುವ ಈ ನಕಲಿ ಪ್ರವಾಸೀ ಗೈಡ್‌ […]

ಮೈಸೂರು : ಹುತಾತ್ಮ ಪೊಲೀಸ್ ರಿಗೆ ಗೌರವ ಸಮರ್ಪಣೆ

Monday, October 21st, 2019
mysuru-Martyrs-day

ಮೈಸೂರು : ಪೊಲೀಸ್ ಮಹಾನಿರೀಕ್ಷಕರು, ದಕ್ಷಿಣ ವಲಯ, ಮೈಸೂರು ನಗರ, ಜಿಲ್ಲೆ, ಕರ್ನಾಟಕ ಪೊಲೀಸ್ ಅಕಾಡೆಮಿ, ಕೆಎಸ್ಆರ್ ಪಿ ಮತ್ತು ಕೆಎಆರ್ ಪಿ ಘಟಕದ ವತಿಯಿಂದ ನಗರದ ನಜರ್ ಬಾದ್ ನಲ್ಲಿರುವ ಪೊಲೀಸ್ ಹುತಾತ್ಮರ ಸ್ಮಾರಕ ಉದ್ಯಾನವನದಲ್ಲಿ ಪೊಲೀಸ್ ಹುತಾತ್ಮರ ದಿನಾಚರಣೆಯನ್ನು ಸೋಮವಾರ ಆಚರಿಸಲಾಯಿತು. ಮೈಸೂರು ವೃತ್ತ ಅರಣ್ಯ ಸಂರಕ್ಷಣಾಧಿಕಾರಿ ಟಿ.ಹೀರಾಲಾಲ್ ಅವರು ಪೊಲೀಸ್ ಹುತಾತ್ಮರ ಸ್ಮಾರಕಕ್ಕೆ ಹೂವಿನ ಗುಚ್ಛವಿಟ್ಟು ಗೌರವ ಅರ್ಪಿಸಿದರು. ಪೊಲೀಸ್ ಸಿಬ್ಬಂದಿಯಿಂದ ವಾಲಿ ಫೈರಿಂಗ್ ಮೂಲಕ ಹುತಾತ್ಮ ಪೊಲೀಸ್ ರಿಗೆ ಗೌರವ ಸಮರ್ಪಿಸಿದರು. […]

ಮೈಸೂರು ದಸರಾ ಕ್ರೀಡಾಕೂಟ ಉದ್ಘಾಟಿಸಿದ : ಪಿ.ವಿ.ಸಿಂಧು

Wednesday, October 2nd, 2019
PV-Sindhu

ಮೈಸೂರು : ಕ್ರೀಡಾಪಟುಗಳು ಪಿ.ವಿ.ಸಿಂಧು ಅವರನ್ನು ಮಾದರಿಯಾಗಿಸಿಕೊಂಡು ಪರಿಶ್ರಮದಿಂದ ಯಶಸ್ಸು ಸಾಧಿಸಿ ಎಂದು ಸಿಎಂ ಬಿ.ಎಸ್‌.ಯಡಿಯೂರಪ್ಪ ಶುಭ ಹಾರೈಸಿದರು. ದಸರಾ ಮಹೋತ್ಸವದ ಅಂಗವಾಗಿ ನಗರದ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ರಾಜ್ಯ ದಸರಾ ಕ್ರೀಡಾಕೂಟ ಹಾಗೂ ಮುಖ್ಯಮಂತ್ರಿ ಕಪ್‌ – 2019 ಉದ್ಘಾಟಿಸಿ ಅವರು ಮಾತನಾಡಿದರು. ಅಂತಾರಾಷ್ಟ್ರೀಯ ಬ್ಯಾಡ್ಮಿಂಟನ್‌ ಕ್ರೀಡಾಪಟು ಪಿ.ವಿ.ಸಿಂಧು ಮಾತನಾಡಿ, ಕಠಿಣ ಪರಿಶ್ರಮದಿಂದ ಮಾತ್ರ ಯಶಸ್ಸು ಸಾಧ್ಯ. ಎಲ್ಲ ಕ್ರೀಡಾಪಟುಗಳೂ ಕಠಿಣ ಪರಿಶ್ರಮದಲ್ಲಿ ತೊಡಗುವ ಮೂಲಕ ತಮ್ಮ ಗುರಿ ತಲುಪಿ ಎಂದು ಸಲಹೆ ನೀಡಿದರು. […]

ಮೈಸೂರು : ಮರದ ಅಂಬಾರಿ ಬೆನ್ನ ಮೇಲೆ ಹೊತ್ತು ಸಾಗಿದ ಅರ್ಜುನ ತಾಲೀಮು

Thursday, September 19th, 2019
Mysure

ಮೈಸೂರು : ನಾಡಹಬ್ಬ ಮೈಸೂರು ದಸರಾ ಉತ್ಸವದ ಜಂಬೂ ಸವಾರಿ ಮೆರವಣಿಗೆಗೆ ದಿನಗಣನೆ ಆರಂಭವಾಗಿರುವ ಹಿನ್ನೆಲೆಯಲ್ಲಿ ಗಜಪಡೆ ತಾಲೀಮು ನಡೆಯುತ್ತಿದ್ದು, ಗುರುವಾರ ಬೆಳಗ್ಗೆ “ಅರ್ಜುನನ ಬೆನ್ನ ಮೇಲೆ 280ಕೆಜಿ ತೂಕದ ಮರದ ಅಂಬಾರಿ ಸೇರಿದಂತೆ ಒಟ್ಟು 650ಕೆಜಿ ಭಾರ ಹೊರಿಸಿ ತಾಲೀಮು ನಡೆಸಿದರು. ಈ ವರ್ಷ ಅಕ್ಟೋಬರ್ 8ರಂದು ವಿಜಯದಶಮಿಯಂದು ಜಂಬೂ ಸವಾರಿ ನಡೆಯಲಿದ್ದು, ಇಂದು ಮೈಸೂರಿನಲ್ಲಿ ದಸಾರ ಮೆರವಣಿಗೆ ಸಾಗುವ ಹಾದಿಯಲ್ಲಿ ಅರ್ಜುನ ಆನೆ ಮೈಮೇಲೆ ಮರಳು ತುಂಬಿಸಿದ್ದ ಚೀಲ, ಮರದ ಅಂಬಾರಿಯನ್ನು ಬೆನ್ನ ಮೇಲೆ […]

ನಾಡಹಬ್ಬ ಮೈಸೂರು ದಸರಾ ಮಹೋತ್ಸವದ 2019ರ ವೆಬ್ ಸೈಟ್, ಫೋಸ್ಟರ್ ಬಿಡುಗಡೆ

Saturday, August 31st, 2019
mysuru-dasara

ಮೈಸೂರು : ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವ 2019ರ ವೆಬ್ ಸೈಟ್ ಹಾಗೂ ಫೋಸ್ಟರ್ ಅನ್ನು ಇಂದು ಬಿಡುಗಡೆಗೊಳಿಸಲಾಯಿತು. ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ವೆಬ್ ಸೈಟ್ ಹಾಗೂ ಪೋಸ್ಟರ್ ಬಿಡುಗಡೆಗೊಳಿಸಿದ್ದು, ಇವರೊಂದಿಗೆ ಸಂಸದ ಪ್ರತಾಪ್ ಸಿಂಹ, ಶಾಸಕರಾದ ಎಲ್.ನಾಗೇಂದ್ರ, ಎಸ್.ಎ.ರಾಮದಾಸ್, ಮೇಯರ್ ಪುಷ್ಪಲತಾ ಜಗನ್ನಾಥ್, ಜಿಲ್ಲಾಧಿಕಾರಿ ಅಭಿರಾಂ ಜಿ.ಶಂಕರ್, ಕಮೀಷನರ್ ಕೆ.ಟಿ.ಬಾಲಕೃಷ್ಣ ಇದ್ದರು. “ವಸ್ತು ಪ್ರದರ್ಶನ ಆರಂಭಗೊಂಡ ಬಹಳ ದಿನಗಳು ಕಳೆದರೂ ಸರ್ಕಾರಿ ಮಳಿಗೆಗಳೇ ಉದ್ಘಾಟನೆ ಅಗಿರುವುದಿಲ್ಲ ಎನ್ನುವ ವಿಷಯ ನನ್ನ ಗಮನಕ್ಕೆ ಬಂದಿದೆ. […]

ಬೆಂಗಳೂರು-ಮೈಸೂರು ಮಧ್ಯೆ 2 ಹೊಸ ರೈಲಿಗೆ ಗ್ರೀನ್ ಸಿಗ್ನಲ್

Thursday, August 29th, 2019
bengaluru-mysuru

ಮೈಸೂರು : ರೈಲ್ವೆ ಇಲಾಖೆ ಬೆಂಗಳೂರು – ಮೈಸೂರು ನಡುವೆ ಬೆಳಗ್ಗೆ, ಮಧ್ಯಾಹ್ನ ಸಂಚರಿಸುತ್ತಿದ್ದ ಪುಷ್ಪುಲ್ ರೈಲನ್ನು ರದ್ದುಗೊಳಿಸಿ ಮೆಮು ರೈಲನ್ನು ಆರಂಭಿಸಿದೆ. ಇದರಿಂದ ಪ್ರಯಾಣಿಕರಲ್ಲಿ ಸಂತಸ ವ್ಯಕ್ತವಾಗಿದೆ. ಈ ಹಿಂದೆ ಇದ್ದ ಪುಷ್ಪುಲ್ ರೈಲುಗಳಲ್ಲಿ ಇದ್ದ 16 ಬೋಗಿಗಳಲ್ಲಿ 1700ರಷ್ಟು ಪ್ರಯಾಣಿಕರು ಸಂಚರಿಸಬಹುದಾಗಿತ್ತು. ಅಲ್ಲದೇ ಈ ರೈಲಿನಲ್ಲಿ ಬೆಂಗಳೂರು ಸಮೀಪಿಸಿದಂತೆ ಮಂಡ್ಯ, ರಾಮನಗರ, ಚನ್ನಪಟ್ಟಣ ರೈಲ್ವೆ ನಿಲ್ದಾಣಗಳಲ್ಲಿ ರೈಲು ಹತ್ತಲೂ ಸಾಧ್ಯವಾಗುತ್ತಿರಲಿಲ್ಲ. ಅಷ್ಟು ಜನಸಂದಣಿಯಿಂದ ರೈಲು ತುಂಬಿರುತ್ತಿತ್ತು. ಆದರೆ ಮೆಮು ರೈಲಿನಲ್ಲಿ ವಿಶೇಷ ವಿನ್ಯಾಸದ ಬೋಗಿಗಳಿಂದಾಗಿ […]

ಮಂಗಳೂರು :ದಕ್ಷಿಣ ಕನ್ನಡದಲ್ಲಿ ಸೇವೆ ಸಲ್ಲಿಸಿದ ಐಪಿಎಸ್ ಅಧಿಕಾರಿ ಆರ್. ರಮೇಶ್ ನಿಧನ

Monday, August 26th, 2019
R-ramesh

ಮಂಗಳೂರು : ದ.ಕ ಜಿಲ್ಲೆಯಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದ ಐಪಿಎಸ್ ಅಧಿಕಾರಿ ಆರ್. ರಮೇಶ್ ಬೆಂಗಳೂರಿನ ಆಸ್ಪತ್ರೆಯೊಂದರಲ್ಲಿ ಇಂದು ನಿಧನರಾಗಿದ್ದಾರೆ. ಭೂ ಅಂಗಾಂಗ ವೈಫಲ್ಯದಿಂದ ಬೆಂಗಳೂರಿಗೆ ಬಿಜಿಎಸ್ ಆಸ್ಪತ್ರೆಯಲ್ಲಿ ಕಳೆದ 15 ದಿನಗಳಿಂದ ಚಿಕಿಸ್ತೆ ಪಡೆಯುತ್ತಿದ್ದರು. ಡಿಐಜಿ ಭಡ್ತಿ ಹೊಂದಿದ ಬಳಿಕ ಅವರು ಹೋಮ್ ಗಾರ್ಡ್,ಸಿವಿಲ್ ಡಿಫೆನ್ಸ್ ಇಲಾಖೆಯ ಉನ್ನತ ಹುದ್ದೆ ಅಲಂಕರಿಸಿದ್ದರು. 2005 ಬ್ಯಾಚ್ ನ ಐಪಿಎಸ್ ಅಧಿಕಾರಿಯಾಗಿದ್ದ ಆರ್. ರಮೇಶ್ ಸಿಎಆರ್ ಡಿಸಿಪಿ ಬೆಂಗಳೂರು ಅಪರಾಧ ವಿಭಾಗದ ಡಿಸಿಪಿ ಯಾಗಿ ಕಾರ್ಯ ನಿರ್ವಹಿಸುತ್ತಿದ್ದರು. […]

ಮಸಾಜ್ ಮಾಡುವ ನೆಪದಲ್ಲಿ ಚಿನ್ನಾಭರಣ ದೋಚಿ ಪರಾರಿಯಾಗುತ್ತಿದ್ದ ವ್ಯಕ್ತಿ ಬಂಧನ

Saturday, December 29th, 2018
arrested

ಮೈಸೂರು: ಉಚಿತವಾಗಿ ಮಸಾಜ್ ಮಾಡುವ ನೆಪದಲ್ಲಿ ಗ್ರಾಹಕರನ್ನು ಕರೆಸಿ, ಅವರಿಗೆ ಮತ್ತು ಬರುವ ಔಷಧಿ ನೀಡಿ, ಚಿನ್ನಾಭರಣ, ನಗದು ದೋಚಿ ಪರಾರಿಯಾಗುತ್ತಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಕೇರಳದ ಮಲಾಪುರಂ ಜಿಲ್ಲೆಯ ಪೆರಿಂತಲ್ ಮನ್ನಾ ತಾಲೂಕಿನ ಅನಮಂಗಾಡ್ ಗ್ರಾಮದ ಕೆ.ಪಿ.ಸುಮೇಶ್ ಎಂಬುವವನೇ ಬಂಧಿತ ವ್ಯಕ್ತಿ. ಮಸಾಜ್ ಮಾಡುವ ನೆಪದಲ್ಲಿ ಈತ ಗ್ರಾಹಕರ ಚಿನ್ನಾಭರಣ , ಹಣ ಕಳ್ಳತನ ಮಾಡುತ್ತಿದ್ದ ಎನ್ನಲಾಗಿದೆ. ಈತನಿಂದ 6.10 ಲಕ್ಷ ರೂ. ಮೌಲ್ಯದ 203 ಗ್ರಾಂ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ. ಮಸಾಜ್ ಮಾಡುವುದಾಗಿ ಫೋನ್ ಮೂಲಕ […]