Blog Archive

ಬ್ರಹ್ಮಾವರ : 10ನೇ ವರ್ಷದ ಕಿಶೋರ ಯಕ್ಷಗಾನಕ್ಕೆ ವಿದ್ಯುಕ್ತ ತೆರೆ

Tuesday, December 26th, 2017
yakshagana

ಬ್ರಹ್ಮಾವರ:ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕೆ ಯಕ್ಷಗಾನ ಅತ್ಯುತ್ತಮ ಮಾಧ್ಯಮ. ಈ ಹಿನ್ನಲೆಯಲ್ಲಿ ಉಡುಪಿ ವಿಧಾನಸಭಾ ವ್ಯಾಪ್ತಿಯಲ್ಲಿ 11 ವರ್ಷಗಳ ಹಿಂದೆ ಪ್ರಾರಂಭಿಸಲಾದ ಹೈಸ್ಕೂಲ್ ವಿದ್ಯಾರ್ಥಿಗಳಿಗೆ ಯಕ್ಷಶಿಕ್ಷಣ ಕಾರ್ಯಕ್ರಮದ ಹತ್ತನೇ ವರ್ಷದ ಕಿಶೋರ ಯಕ್ಷಗಾನ ರವಿವಾರ ಇಲ್ಲಿ ವಿದ್ಯುಕ್ತವಾಗಿ ಮುಕ್ತಾಯಗೊಂಡಿತು. ಕಿಶೋರ ಯಕ್ಷಗಾನ ದಶಮಾನೋತ್ಸವ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಮಾಜಿ ಶಾಸಕ ಹಾಗೂ ಯಕ್ಷಶಿಕ್ಷಣದ ಸ್ಥಾಪಕ ಕೆ.ರಘುಪತಿ ಭಟ್ ಮಾತನಾಡಿ, ತಾನು ಶಾಸಕನಾಗಿ ಆರಂಭಿಸಿದ ಈ ಯೋಜನೆ ಪ್ರಕೃತ ಶಾಸಕರಾದ ಪ್ರಮೋದ್ ಮಧ್ವರಾಜ್‌ರ ನೇತೃತ್ವದಲ್ಲಿ ಯಶಸ್ವಿಯಾಗಿ ಮುಂದುವರಿದಿರುವುದು ಸಂತೋಷದ ವಿಷಯ […]

ಯಕ್ಷಗಾನ ಲೋಕದ ದಿಗ್ಗಜ ಚಿಟ್ಟಾಣಿ ಅವರ ಅಂತಿಮ ಯಾತ್ರೆ, ಅಂತಿಮ ದರ್ಶನ

Wednesday, October 4th, 2017
chittani RH

ಉಡುಪಿ : ಮಣಿಪಾಲ ಆಸ್ಪತ್ರೆಯಲ್ಲಿ ಇಹಲೋಕ ತ್ಯಜಿಸಿದ ಯಕ್ಷಗಾನ ಲೋಕದ ದಿಗ್ಗಜ ಚಿಟ್ಟಾಣಿ ರಾಮಚಂದ್ರ ಹೆಗಡೆ ಅವರ ಅಂತಿಮ ಯಾತ್ರೆ  ನಡೆಸಲಾಗುತ್ತಿದ್ದು, ಇಂದು ಸಂಜೆ ಸ್ವಗೃಹ ಹೊನ್ನಾವರದ ಗುಡ್ಡೆಕೇರಿಯಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತಿಮ ಸಂಸ್ಕಾರಗಳು ನಡೆಯಲಿವೆ. ಬೆಳಗ್ಗೆ 8.30 ರ ವರಗೆ ಉಡುಪಿ ಜಿಲ್ಲಾಸ್ಪತ್ರೆಯ ಶವಾಗಾರದ ಬಳಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಮಾಜಿ ಶಾಸಕ ರಘುಪತಿ ಭಟ್‌, ಯಕ್ಷಗಾನ ಮೇಳಗಳ ಯಜಮಾನ ಕಿಶನ್‌ ಹೆಗ್ಡೆ ಸೇರಿದಂತೆ ನೂರಾರು ಗಣ್ಯರು ,ಅಭಿಮಾನಿಗಳು ಅಂತಿಮ ದರ್ಶನ ಪಡೆದರು. ವಿಶೇಷ […]

ಯಕ್ಷಗಾನ ಕಲಾವಿದ ಚಿಟ್ಟಾಣಿ ರಾಮಚಂದ್ರ ಹೆಗಡೆ ಚಿರನಿದ್ರೆಗೆ

Wednesday, October 4th, 2017
chittani

ಕಾರವಾರ: ಯಕ್ಷಗಾನ ಮೇರು ಕಲಾವಿದ ಚಿಟ್ಟಾಣಿ ರಾಮಚಂದ್ರ ಹೆಗಡೆ ಅವರು ಅನಾರೋಗ್ಯದಿಂದ ಕೊನೆಯುಸಿರೆಳೆದಿದ್ದಾರೆ.ಇತ್ತೀಚಿನವರೆಗೂ ಯಕ್ಷಗಾನದಲ್ಲಿ ಸಕ್ರಿಯವಾಗಿದ್ದ 84 ವರ್ಷದ ರಾಮಚಂದ್ರ ಹೆಗಡೆ ಕೆಲವಾರು ದಿನಗಳಿಂದ ಪಾರ್ಶ್ವವಾಯು ಸಮಸ್ಯೆಯಿಂದ ಬಳಲುತ್ತಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾತ್ತಿತ್ತು. ಆದರೆ ನಿನ್ನೆ ಚಿಕಿತ್ಸೆಗೆ ಸ್ಪಂದಿಸದೆ ಒಂಬತ್ತುಗಂಟೆ ಸುಮಾರಿಗೆ ನಿಧನರಾಗಿದ್ದಾರೆ. ಇವರ ಸಾವು ಕೋಟ್ಯಾಂತರ ಅಭಿಮಾನಿಗಳನ್ನು ಹಾಗೂ ಕುಟುಂಬುದವರನ್ನು ಶೋಕಸಾಗರದಲ್ಲಿ ಮುಳುಗಿಸಿದೆ. 1933ರ ಜನವರಿ 1ರಂದು ಚಿಟ್ಟಾಣಿ ರಾಮಚಂದ್ರ ಹೆಗಡೆಯವರು  ಜಿಲ್ಲೆಯ ಹೊನ್ನಾವರದಲ್ಲಿ ಜನಿಸಿದವರು. ಏಳು ವರ್ಷ ವಯಸ್ಸಿದ್ದಾಗಲೇ ಯಕ್ಷಗಾನಕ್ಕೆ ಧುಮುಕಿದ ಹೆಗಡೆಯವರು, 14ನೇ […]

‘ಕನ್ನಡ ಭಾಷೆ ಮತ್ತು ಸಾಹಿತ್ಯಕ್ಕೆ ಯಕ್ಷಗಾನದ ಕೊಡುಗೆ ಬಹುಮುಖ್ಯವಾದುದು’

Monday, November 14th, 2016
Yakshagana

ಪೆರ್ಲ: ಕನ್ನಡ ಭಾಷೆ ಮತ್ತು ಸಾಹಿತ್ಯವನ್ನು ಶ್ರೀಮಂತವಾಗಿಸುವಲ್ಲಿ ಯಕ್ಷ್ಷಗಾನದ ಕೊಡುಗೆ ಬಹಳಷ್ಟಿದೆ. ಇಂದಿಗೂ ಕನ್ನಡ ಭಾಷೆ ಮತ್ತು ಸಾಹಿತ್ಯವನ್ನು ಯಕ್ಷಗಾನದಷ್ಟು ಸಮರ್ಥವಾಗಿ ದುಡಿಸಿಕೊಳ್ಳುವ ಕಲೆ ಮತ್ತೊಂದಿಲ್ಲ ಎಂದು ವಿಶ್ರಾಂತ ಪ್ರಾಧ್ಯಾಪಕ, ಚಿಂತಕ ಪಕಳಕುಂಜ ಶ್ಯಾಮ ಭಟ್ ಅಭಿಪ್ರಾಪಟ್ಟಿದ್ದಾರೆ. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಪ್ರಾಯೋಜಕತ್ವದಲ್ಲಿ, ಅಪೂರ್ವ ಕಲಾವಿದರು ಸಂಸ್ಥೆಯ ಸಹಕಾರದೊಂದಿಗೆ ಪೆರ್ಲ ಶ್ರೀ ಸತ್ಯನಾರಾಯಣ ಮಂದಿರದ ಸಭಾಂಗಣದಲ್ಲಿ ಶನಿವಾರ ನಡೆದ ಕನ್ನಡ ಚಿಂತನೆ ಕಾರ್ಯಕ್ರಮದಲ್ಲಿ ’ಭಾಷೆ ಮತ್ತು ಯಕ್ಷಗಾನ’ ಎಂಬ ವಿಷಯದಲ್ಲಿ ಅವರು ವಿಶೇಷೋಪನ್ಯಾಸ ನೀಡಿ ಮಾತನಾಡಿದರು. ಭಾಷೆ […]

ಕಲಾಸೇವೆಯ ಬಹು ವರ್ಷಗಳ ಸೇವೆಯನ್ನು ಮನ್ನಿಸಿ ಹಬ್ಬದಂತೆ ಸಂಭ್ರಮಿಸುವುದು ಯಕ್ಷಗಾನದ ಯಶಸ್ವಿ ಕಾರ್ಯಕ್ರಮ: ಜಯರಾಮ ಮಂಜತ್ತಾಯ

Monday, August 22nd, 2016
Kalaseve

ಬದಿಯಡ್ಕ: ಪ್ರಬುದ್ದ ಕಲಾವಿದರನ್ನು ಪ್ರೋತ್ಸಾಹಿಸಿ ಅವರನ್ನು ಬೆಳೆಸುವ ನಿಟ್ಟಿನಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು ಕಲೆ,ಸಂಸ್ಕೃತಿಗಳ ಪುನರುತ್ಥಾನಕ್ಕೆ ಬಲ ನೀಡಿದಂತಾಗುತ್ತದೆ.ಈ ಹಿನ್ನೆಲೆಯಲ್ಲಿ ಕಲಾವಿದರ ಕಲಾಸೇವೆಯ ಬಹು ವರ್ಷಗಳ ಸೇವೆಯನ್ನು ಮನ್ನಿಸಿ ಹಬ್ಬದಂತೆ ಸಂಭ್ರಮಿಸುವುದು ಯಕ್ಷಗಾನದ ಮಟ್ಟಿಗೆ ಯಶಸ್ವಿ ಕಾರ್ಯಕ್ರಮವೆಂದು ಪಾರ್ತಿಸುಬ್ಬ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಜಯರಾಮ ಮಂಜತ್ತಾಯ ಎಡನೀರು ಅಭಿಪ್ರಾಯ ವ್ಯಕ್ತಪಡಿಸಿದರು. ಹಿರಿಯ ಯಕ್ಷಗಾನ ಕಲಾವಿದ ಮಾನ್ಯ ಸಂತೋಷ್ ಕುಮಾರ್ ರವರ ರಜತ ಸಂಭ್ರಮ ಅಭಿನಂದನಾ ಸಮಿತಿ ಭಾನುವಾರ ಮಾನ್ಯ ಜ್ಞಾನೋದಯ ಶಾಲಾ ವಠಾರದಲ್ಲಿ ಆಯೋಜಿಸಿದ್ದ ವಿಜ್ಞಾಪನಾ ಪತ್ರ […]

ಸರ್ಕಾರಿ ಕಾಲೇಜಿಗೆ ಯಕ್ಷಗಾನ, ಸಂಶೋಧನಾ ಕೇಂದ್ರ-ಯಕ್ಷಸಂಶೋಧನಾಸಕ್ತರಿಗೆ ವರದಾನ

Sunday, February 28th, 2016
yakshagana research center

ಕಾಸರಗೋಡು: ವಿದ್ಯಾನಗರ ಸರ್ಕಾರಿ ಕಾಲೇಜಿಗೆ ಯಕ್ಷಗಾನ ಸಂಶೋಧನಾ ಕೇಂದ್ರ ಮಂಜೂರಾಗುವ ಮೂಲಕ ಯಕ್ಷಗಾನ ಸಂಶೋಧನಾಸಕ್ತ ವಿದ್ಯಾರ್ಥಿಗಳ ಬಹುಕಾಲದ ಬೇಡಿಕೆಯೊಂದು ಈಡೇರುವ ಸನ್ನಹದಲ್ಲಿದೆ. ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್ ಅನ್ವಯ ಡಾ. ಪ್ರಭಾಕರನ್ ಆಯೋಗ ಶಿಫಾರಸಿನ ಮೇರೆಗೆ ಕಾಸರಗೋಡು ಸರ್ಕಾರಿ ಕಾಲೇಜಿಗೆ ಕೇಂದ್ರ ಲಭ್ಯವಾಗಿದೆ. ಪ್ರಥಮ ಹಂತದಲ್ಲಿ ಯಕ್ಷಗಾನ ಮ್ಯೂಸಿಯಂ ಹಾಗೂ ಯಕ್ಷಗಾನ ಗ್ರಂಥಾಲಯ ಆರಂಭಿಸಲಾಗುವುದು. ಪ್ರಸ್ತುತ ಕಾಲೇಜಿನ ಕನ್ನಡ ವಿಭಾಗದ ಸಮೀಪವಿರುವ ಕೊಠಡಿಯನ್ನು ಇದಕ್ಕಾಗಿ ಬಳಸಿಕೊಳ್ಳಲಾಗುತ್ತಿದೆ. ಶ್ರೇಷ್ಠ ಕಲೆಯಾಗಿರುವ ಯಕ್ಷಗಾನಕ್ಕೆ ಅಕಾಡಮಿಕ್ ಆದ ಅಧ್ಯಯನ ಕೇಂದ್ರದ ಕೊರತೆಯನ್ನು ಈ […]

ಸ್ತ್ರೀ ವೇಷದ ಶಕಪುರುಷ ಐತ್ತಪ್ಪ ಶೆಟ್ಟಿ ಸಂಸ್ಮರಣೆ

Thursday, January 21st, 2016
Ithappa shetty

ಉಪ್ಪಳ: ತೆಂಕುತಿಟ್ಟು ಯಕ್ಷಗಾನದಲ್ಲಿ ಹಲವು ಪಾತ್ರಚಿತ್ರಣಗಳನ್ನು ಸೃಜಿಸಿ, ರಂಗಬದ್ಧ ನಾಟ್ಯಗಳಿಂದ ಕಲೆಗೆ ಜೀವತುಂಬಿದ ದಿ| ಸ್ತ್ರೀವೇಷಧಾರಿ ಐತ್ತಪ್ಪ ಶೆಟ್ಟರು ಅಗಲಿ 4ದಶಕ ಸಂದ ಬಳಿಕ ಅವರ ಸಂಸ್ಮರಣೆ ನಡೆಯುತ್ತಿರುವುದು ಅತ್ಯಂತ ಶ್ಲಾಘನೀಯ. ತೆಂಕಣ ಯಕ್ಷಗಾನದ ಸ್ತ್ರೀವೇಷಗಳಿಗೆ ಖಚಿತವಾದ ರಂಗನಡೆಯನ್ನು ರೂಪಿಸಿಕೊಟ್ಟು ಕೀರ್ತಿಶೇಷರಾದ ಐತ್ತಪ್ಪ ಶೆಟ್ಟರ ಕೊಡುಗೆಗಳ ಬಗ್ಗೆ ದಾಖಲಾತಿಯಾಗದೇ ಹೋದುದು ಚಾರಿತ್ರಿಕ ನಷ್ಟ. ಅವರು ಯಕ್ಷಪರಂಪರೆಗೆ ಅಸಾಮಾನ್ಯ ಕೊಡುಗೆಯನ್ನಿತ್ತ ಅನನ್ಯ ಕಲಾವಿದ ಎಂದು ನಿವೃತ್ತ ಮುಖ್ಯೋಪಾಧ್ಯಾಯ ಎಸ್.ನಾರಾಯಣ ಭಟ್ ಅಭಿಪ್ರಾಯ ವ್ಯಕ್ತಪಡಿಸಿದರು. ಬಾಯಾರು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ […]

ಶೇಣಿ ಗೋಪಾಲಕೃಷ್ಣ ಭಟ್ ಯಕ್ಷಗಾನದ ಸೀಮಾಪುರುಷ : ಕುಂಬ್ಳೆ

Tuesday, September 16th, 2014
SDM

ಮಂಗಳೂರು : ಶೇಣಿ ಗೋಪಾಲಕೃಷ್ಣ ಭಟ್ ಅವರು ಯಕ್ಷಗಾನದ ಸೀಮಾಪುರುಷ. ಪಾತ್ರ ಮತ್ತು ಕಥಾ ನಿರ್ವಹಣೆಯಲ್ಲಿ ಪರಿಪೂರ್ಣತೆ ಸಾಧಿಸಿ ಪ್ರೇಕ್ಷಕರನ್ನು ಭಾವಪರವಶರನ್ನಾಗಿಸಿದ ಪ್ರಶ್ನಾತೀತ ಕಲಾವಿದ ಎಂದು ಯಕ್ಷಗಾನ ಬಯಲಾಟ ಅಕಾಡೆಮಿ ಮಾಜಿ ಅಧ್ಯಕ್ಷ ಕುಂಬ್ಳೆ ಸುಂದರ ರಾವ್ ಬಣ್ಣಿಸಿದರು. ಕಲ್ಕೂರ ಪ್ರತಿಷ್ಠಾನ ವತಿಯಿಂದ ನಗರದ ಎಸ್.ಡಿ.ಎಂ. ಕಾಲೇಜಿನಲ್ಲಿ ಸೋಮವಾರ ನಡೆದ ‘ಶೇಣಿ ಸಂಸ್ಮರಣೆ – ಕಲೋತ್ಸವ’ದಲ್ಲಿ ಅವರು ಶೇಣಿ ಸಂಸ್ಮರಣಾ ಭಾಷಣ ಮಾಡಿದರು. ಶೇಣಿ ಎಂದರೆ ಯಕ್ಷಗಾನ, ಯಕ್ಷಗಾನ ಎಂದರೆ ಶೇಣಿ ಎಂಬ ಮಾತನ್ನು ತಮ್ಮ ಜೀವಿತದ […]

‘ರಘರಾಮಾಭಿನಂದನಮ್’ ಯಕ್ಷಗಾನ ಸಂಮಾನ ಕಾರ್ಯಕ್ರಮ ಉದ್ಘಾಟನೆ

Saturday, July 6th, 2013
Ragghurambhinandanam

ಮಂಗಳೂರು : ರಘರಾಮಾಭಿನಂದನಮ್ ಸಂಮಾನ ಸಮಿತಿಯ ವತಿಯಿಂದ ಮಂಗಳೂರು ಪುರಭವನದಲ್ಲಿ ಜುಲೈ 5 ರಿಂದ 7ರವರೆಗೆ ನಡೆಯುವ ರಘರಾಮಾಭಿನಂದನಮ್ ಕಾರ್ಯಕ್ರಮವನ್ನು ಎಡನೀರು ಸಂಸ್ಥಾನದ ಶ್ರೀ ಶ್ರೀ ಕೇಶವಾನಂದಭಾರತೀ ತೀರ್ಥರು ಹಾಗೂ ಉಡುಪಿ ಪೇಜಾವರ ಮಠದ ವಿಶ್ವೇಶ ತೀರ್ಥ ಶ್ರೀಪಾದರು ಉದ್ಘಾಟಿಸಿದರು. ಯಕ್ಷಗಾನರಂಗದಲ್ಲಿ ಮೂರು ದಶಕಗಳ ಸೇವೆಗೈದ ಪುತ್ತಿಗೆ ರಘುರಾಮಹೊಳ್ಳರ ಸಾಧನೆಯ ಅವಲೋಕನ ಈ ಮೂರು ದಿನಗಳಲ್ಲಿ ನಡೆಯಲಿದೆ. ಉದ್ಘಾಟನೆಯ ಬಳಿಕ ಮಾತನಾಡಿದ ಪೇಜಾವರ ಶ್ರೀಗಳು ಕಲಾಭಿರುಚಿಯಿಂದ ಮನುಷ್ಯ ಆಯುಶ್ಯ ವೃದ್ಧಿಸಲು ಸಾಧ್ಯ. ಹೊಳ್ಳರ ಮೂರು ದಶಕಗಳ ಪರಿಶ್ರಮದಲ್ಲಿ […]

ಗೋ ಶಾಲೆ ಸಹಾಯಾರ್ಥ ಯಕ್ಷಗಾನ

Monday, July 4th, 2011
havyaka go shale

ವೇಣೂರು: ಜಗದ್ಗುರುಶಂಕರಾಚಾರ್ಯ ಮಹಾ ಸಂಸ್ಥಾನಮ್ ,ಶ್ರೀ ಸಂಸ್ಥಾನ ಗೋಕರ್ಣ ಶ್ರೀ ರಾಮಚಂದ್ರಾಪುರ ಮಠದ ಆಶ್ರಯದಲ್ಲಿ ವೇಣೂರು ಸಮೀಪದ ಗುಂಡೂರಿಯಲ್ಲಿರುವ ಕಾವೇರಮ್ಮ ಅಮೃತಧಾರಾ ಗೋಶಾಲೆಯ ಸಹಾಯಾರ್ಥ ಯಕ್ಷಗಾನ ಪ್ರದರ್ಶನ ನಡೆಯಲಿದೆ. ಜುಲೈ 21ರಂದು ಸಂಜೆ 6ಗಂಟೆಗೆ ಗುರುವಾಯನಕೆರೆ “ನಮ್ಮ ಮನೆ” ಹವ್ಯಕ ಭವನದಲ್ಲಿ  ಶ್ರೀ ಧರ್ಮಸ್ಥಳ ಮತ್ತು ಶ್ರೀ ಕಟೀಲು ಮೇಳದ ಸುಪ್ರಸಿದ್ಧ ಕಲಾವಿದರ ಸಮ್ಮಿಲನದಲ್ಲಿ “ವಿಷಮರ್ಧನ – ಕುಶಲವ” ಎಂಬ ಪುರಾಣ ಪುಣ್ಯ ಕಥಾ ಭಾಗವನ್ನು ಯಕ್ಷಗಾನ ರೂಪದಲ್ಲಿ ಆಡಿತೋರಿಸಲಿದ್ದಾರೆ. ಯಸ್.ರಾಮಕೃಷ್ಣ ಮಯ್ಯ ಸಿರಿಬಾಗಿಲು ಹಾಗೂ ಪೆರುವೋಡಿ […]