Blog Archive

ದೇಶದಾದ್ಯಂತ ಲಾರಿ ಮುಷ್ಕರ..ಕರ್ನಾಟಕ ಸರಕು ಸಾಗಣೆದಾರರ ಸಂಘದಿಂದ ಪ್ರತಿಭಟನೆ!

Friday, July 20th, 2018
lori-protest

ಬೆಂಗಳೂರು: ದೇಶದಾದ್ಯಂತ ಲಾರಿ ಮುಷ್ಕರ ಹಿನ್ನಲೆ ನಗರದ ಟೌನ್ ಹಾಲ್ ಮುಂದೆ ಅಖಿಲ ಭಾರತ ಮೋಟಾರ್ ಟ್ರಾನ್ಸ್ಪೋರ್ಟ್ ಕಾಂಗ್ರೆಸ್ ಹಾಗೂ ಕರ್ನಾಟಕ ಸರಕು ಸಾಗಣೆದಾರರ ಸಂಘದಿಂದ ಪ್ರತಿಭಟನೆ ನಡೆಯಿತು. ಟೋಲ್ ಮುಕ್ತ ಭಾರತಕ್ಕೆ ಒತ್ತಾಯಿಸಿ ಹಾಗೂ ಇಂಧನ ದರ ಕಡಿಮೆ ಮಾಡಬೇಕು ಹಾಗೂ ಥರ್ಡ್ ಪಾರ್ಟಿ ಇನ್ಸೂರೆನ್ಸ್ ದರ ಕಡಿಮೆ ಮಾಡುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿದರು‌. ದೇಶಾದ್ಯಂತ ವಾಣಿಜ್ಯ ವಾಹನಗಳ ಸ್ಥಗಿತ ಮಾಡಲಾಗುವುದು, ದೇಶದಲ್ಲಿ 412 ಟೋಲ್ ಗೇಟ್ ಹಾಗೂ ರಾಜ್ಯದಲ್ಲಿ 29 ಟೋಲ್ ಗೇಟ್ ಗಳಿವೆ. […]

ಮೈಸೂರು -ಮಂಗಳೂರು ನಡುವಿನ ರಾಷ್ಟ್ರೀಯ ಹೆದ್ದಾರಿ..ಆಗಸ್ಟ್​​ 31ರವರೆಗೆ ಅನ್ವಯ!

Friday, July 6th, 2018
kodagu

ಕೊಡಗು: ಜಿಲ್ಲೆಯ ಮೈಸೂರು -ಮಂಗಳೂರು ನಡುವಿನ ರಾಷ್ಟ್ರೀಯ ಹೆದ್ದಾರಿ – 275 ಸೇರಿದಂತೆ ಅಂತಾರಾಜ್ಯ ಸಂಪರ್ಕ ಕಲ್ಪಿಸುವ ಹೆದ್ದಾರಿಗಳಲ್ಲಿ ವಾಹನ ಸಂಚಾರವನ್ನು ನಿರ್ಬಂಧಿಸಲಾಗಿದೆ. ಈ ನಿಯಮ ಆಗಸ್ಟ್ 31ರವರೆಗೆ ಅನ್ವಯವಾಗಲಿದೆ ಎಂದು ಜಿಲ್ಲಾಡಳಿತ ಆದೇಶ ಹೊರಡಿಸಿದೆ. ಈ ಹೆದ್ದಾರಿಗಳಲ್ಲಿ ಮರಳು, ಮರದ ದಿಮ್ಮಿ ಸೇರಿದಂತೆ ಕಂಟೇನರ್ಗಳು ತೆರಳುವುದರಿಂದ ರಸ್ತೆ ಕುಸಿಯುತ್ತಿದ್ದು, ರಸ್ತೆಯ ಇಕ್ಕೆಲಗಳಿಗೂ ಹಾನಿಯುಂಟಾಗುತ್ತಿದೆ. ಇದರಿಂದ ಅಪಘಾತ ನಡೆದು ಸ್ಥಳೀಯರ ಆಸ್ತಿಪಾಸ್ತಿಗೂ ಹಾನಿಯಾಗುತ್ತಿದೆ. ಆದ್ದರಿಂದ ಇದನ್ನೆಲ್ಲಾ ತಡೆಯಲು ಜಿಲ್ಲಾಡಳಿತ ಈ ಕ್ರಮ ಕೈಗೊಂಡಿದೆ. ಕೊಡಗು ಜಿಲ್ಲೆ ಒಂದು […]

ರಾಷ್ಟ್ರೀಯ ಹೆದ್ದಾರಿ 66 ರ ಸುರಂಗ ಮಾರ್ಗಗಳ ಕಾಮಗಾರಿಗೆ ಮಳೆ ಅಡ್ಡಿ..!

Friday, July 6th, 2018
highway

ಕಾರವಾರ: ರಾಷ್ಟ್ರೀಯ ಹೆದ್ದಾರಿ 66 ರ ಚತುಷ್ಪಥದಲ್ಲಿ ನಿರ್ಮಿಸಲಾಗುತ್ತಿರುವ ಸುರಂಗ ಮಾರ್ಗಗಗಳ ಕಾಮಗಾರಿಗೆ ಮಳೆ ಅಡ್ಡಿಯಾಗಿದೆ. ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಗುಡ್ಡದ ಮೇಲ್ಭಾಗದ ಝರಿ ನೀರು ಸುರಂಗದೊಳಕ್ಕೆ ನುಗ್ಗುತ್ತಿದ್ದು, ಒಂದು ಮಾರ್ಗದ ಕಾಮಗಾರಿಯೇ ಸ್ಥಗಿತಗೊಂಡಿದೆ. ಕಾರವಾರದ ಜಿಲ್ಲಾಧಿಕಾರಿ ವಸತಿಗೃಹವಿರುವ ಬಾವುಟೆ ಕಟ್ಟೆ ಸಮೀಪದ ಗುಡ್ಡಕ್ಕೆ ಸುರಂಗ ಮಾರ್ಗ ನಿರ್ಮಿಸುವ ಕಾಮಗಾರಿ ಕಳೆದ ಎರಡ್ಮೂರು ವರ್ಷಗಳಿಂದ ಪ್ರಗತಿಯಲ್ಲಿದೆ. ಈ ಬೃಹತ್ ಗುಡ್ಡದ ಅಡಿಯಿಂದ ಚತುಷ್ಪಥ ಹೆದ್ದಾರಿ ಹಾದು ಹೋಗುತ್ತಿದ್ದು, ದ್ವಿಪಥ ವಿಸ್ತೀರ್ಣದ ರಸ್ತೆ ನಿರ್ಮಾಣಕ್ಕಾಗಿ ಅರ್ಧ ಕಿ.ಮೀ. ಉದ್ದದ […]

ಗುಂಡಿ ಮುಕ್ತ ರಸ್ತೆಗಳಿಗೆ ಕಾರಣರಾದ ಸಂಚಾರಿ ಪೊಲೀಸರು!

Saturday, June 30th, 2018
road-repair

ಮಂಗಳೂರು: ಬಂಟ್ವಾಳದ ರಾಷ್ಟ್ರೀಯ ಹೆದ್ದಾರಿಯಲ್ಲಿ ಹಲವೆಡೆ ಕಾಣಿಸಿಕೊಂಡ ಗುಂಡಿಗಳನ್ನು ಮುಚ್ಚುವಂತೆ ಸೂಚಿಸಲಾಗಿದ್ದರೂ ನಿರ್ಲಕ್ಷ್ಯ ತೋರಿದ ಗುತ್ತಿಗೆದಾರರ ವಿರುದ್ಧ ಸಂಚಾರಿ ಪೊಲೀಸರ ತಂಡ ಪ್ರಕರಣ ದಾಖಲಿಸುವ ಪತ್ರವನ್ನು ಕಳುಹಿಸಿದೆ. ಈ ಬೆನ್ನಲ್ಲೇ ಗುತ್ತಿಗೆದಾರರು ರಸ್ತೆ ಗುಂಡಿ ಮುಚ್ಚಿದ್ದಾರೆ. ದೂರು ದಾಖಲು ಪತ್ರದ ವಿಚಾರ ತಿಳಿಯುತ್ತಿದ್ದಂತೆ ತಕ್ಷಣ ಕಾರ್ಯಪ್ರವೃತ್ತರಾದ ರಾಷ್ಟ್ರೀಯ ಹೆದ್ದಾರಿ ನಿರ್ವಹಣೆಯ ಗುತ್ತಿಗೆದಾರರು, ರಾಷ್ಟ್ರೀಯ ಹೆದ್ದಾರಿಯಲ್ಲಿನ ಗುಂಡಿ ಮುಚ್ಚುವ ಕೆಲಸ ಮಾಡುತ್ತಿದ್ದಾರೆ. ಬಂಟ್ವಾಳ ಟ್ರಾಫಿಕ್ ಪೊಲೀಸರು ಮೊದಲು‌ ಮೌಖಿಕವಾಗಿ ಸೂಚಿಸಿದ್ದರೂ ಇದರ ಬಗ್ಗೆ ಗುತ್ತಿಗೆದಾರರು ನಿರ್ಲಕ್ಷ್ಯ ತೋರಿದ್ದರು. ಈ […]

ಶಿರೂರು ರಾಷ್ಟ್ರೀಯ ಹೆದ್ದಾರಿ ಹಳ್ಳದಲ್ಲಿ 3ಸಾವಿರಕ್ಕೂ ಅಧಿಕ ಪಡಿತರ ಚೀಟಿ..!

Thursday, June 21st, 2018
ration-card

ಬೈಂದೂರು: ಶಿರೂರು ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಹಳ್ಳದಲ್ಲಿ 3ಸಾವಿರಕ್ಕೂ ಅಧಿಕ ಪಡಿತರ ಚೀಟಿಗಳು ಗುರುವಾರ ಬೆಳಿಗ್ಗೆ ಪತ್ತೆಯಾಗಿದೆ. ಬಂಟ್ವಾಳ ಗ್ರಾಮ ಪಂಚಾಯತ್ ಸಂಬಂಧಪಟ್ಟಿರುವ 2003,2004 ಹಾಗೂ 2011 ಇಸವಿಯ ಸಾಕಷ್ಟು ಪಡಿತರ ಚೀಟಿಗಳು ಪತ್ತೆಯಾಗಿದೆ. ಇಷ್ಟೇ ಅಲ್ಲದೇ ಗ್ರಾಮ ಪಂಚಾಯತ್‍ನ ಹಲವಾರು ದಾಖಲೆಗಳು ಕೂಡ ಪತ್ತೆಯಾಗಿದೆ. ಬುಧವಾರ ತಡರಾತ್ರಿ ಅಪರಿಚಿತರು ಬಂದು ಬಿಸಾಡಿರುವುದು ಅಥವಾ ಗುಜರಿ ವಾಹನದಿಂದ ಗೋಣಿ ಚೀಲ ಬಿದ್ದಿರಬಹುದು ಎಂದು ಶಂಕಿಸಲಾಗಿದೆ. ಬೈಂದೂರು ಪೊಲೀಸರು ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿ […]

ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನೆಪದಲ್ಲಿ ಅಕ್ರಮ ಮರಳು ದಾಸ್ತಾನು ವಶ

Wednesday, April 25th, 2018
national-highway

ಮಂಗಳೂರು: ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನೆಪದಲ್ಲಿ ಅಕ್ರಮ ಮರಳು ದಾಸ್ತಾನು ಮಾಡಿರುವುದನ್ನು ಪತ್ತೆ ಹಚ್ಚಿರುವ ಪೊಲೀಸರು ಅಕ್ರಮ ಮರಳನ್ನು ವಶಪಡಿಸಿಕೊಂಡಿದ್ದಾರೆ. ಬಿ.ಸಿ.ರೋಡ್ ಬಳಿಯ ಎಲ್ ಎನ್ ಟಿ ಪ್ಲಾಂಟ್‌ನಲ್ಲಿ ಅಪಾರ ಮರಳು ಸಂಗ್ರಹ ಮಾಡಲಾಗಿತ್ತು. ಪರವಾನಿಗೆ ಇಲ್ಲದೆ ದಾಸ್ತಾನು ಮಾಡಿದ್ದರಿಂದ 1,100 ಲೋಡ್ ಮರಳು ವಶಕ್ಕೆ ಪಡೆಯಲಾಗಿದೆ. ಬಂಟ್ವಾಳ ನಗರ ಮತ್ತು ಗ್ರಾಮಾಂತರ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಮರಳು ವಶಪಡಿಸಿಕೊಂಡಿದ್ದಾರೆ. 33 ಲಕ್ಷ ರೂ. ಮೌಲ್ಯದ ಅಕ್ರಮ ಮರಳು ದಾಸ್ತಾನು ಜಪ್ತಿ ಮಾಡಲಾಗಿದೆ.

ರಸ್ತೆ ಸುರಕ್ಷಾ ಪ್ರಾಧಿಕಾರದ ಕಟ್ಟುನಿಟ್ಟಿನ ಕ್ರಮ

Wednesday, February 7th, 2018
traffic-police

ಮಂಗಳೂರು: ವಾಹನ ಚಾಲನೆ ಮಾಡುವಾಗ ರಸ್ತೆ ಅಪಘಾತ ತಡೆಯುವ ನಿಟ್ಟಿನಲ್ಲಿ ರಸ್ತೆ ಸುರಕ್ಷಾ ಪ್ರಾಧಿಕಾರ ಕಟ್ಟು ನಿಟ್ಟಿನ ಕಾನೂನು ಜಾರಿಗೆ ತರುತ್ತಿದೆ. ಅದಕ್ಕೆ ಹೊಸ ಸೇರ್ಪಡೆ ಎಂಬಂತೆ ಸುರಕ್ಷೆಯ ದೃಷ್ಟಿಯಿಂದ ಕೆಲ ತಿಂಗಳ ಹಿಂದೆ ಸುಪ್ರೀಂ ಕೋರ್ಟ್‌ ರೋಡ್‌ ಸೇಫ್ಟಿ ಕಮಿಟಿಯನ್ನು ರಚನೆ ಮಾಡಿತ್ತು. ಈ ಕಮಿಟಿಯ ಪ್ರಕಾರ ಸಂಚರಿಸುವ ವಾಹನಗಳು ಸಾರಿಗೆ ನಿಯಮವನ್ನು ಚಾಚೂ ತಪ್ಪದೆ ಪಾಲಿಸಲೇಬೇಕು. ಇಲ್ಲವಾದರೆ ಚಾಲಕನ ಮೇಲೆ ಸಾರಿಗೆ ಇಲಾಖೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬಹುದು. ಈ ನಿಯಮದ ಪ್ರಕಾರ ವಾಹನ ಚಾಲನೆಯ […]

ಬಡ ಸಂತ್ರಸ್ತೆಯ ಹಣ ಮರಳಿ ದೊರಕಿಸಿಕೊಟ್ಟ ಎಸ್ಐ ನಿಷ್ಠೆಗೆ ಸಾರ್ವಜನಿಕರ ಶ್ಲಾಘನೆ

Saturday, February 3rd, 2018
nanda-kumar

ಮಂಗಳೂರು: ಬಡವರ ದುಡ್ಡು ನುಂಗುವ ಅಧಿಕಾರಿಗಳಿಂದ ಕಸಿದು ಮತ್ತೆ ಬಡವರಿಗೆ ಹಂಚಿದ ನಿಷ್ಠಾವಂತ ಎಸ್ಐ ನಂದಕುಮಾರ್ ಅವರ ಬಗ್ಗೆ ಸಾರ್ವಜನಿಕ ವಲಯದಲ್ಲಿ ಶ್ಲಾಘನೆ ವ್ಯಕ್ತವಾಗಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವತಿಯಿಂದ 2016ರಲ್ಲಿ ರಸ್ತೆ ಸಮೀಪದ ಮನೆಗಳನ್ನು ತೆರವುಗೊಳಿಸಿ, ಸಂತ್ರಸ್ತರಿಗೆ ಪರಿಹಾರವನ್ನೂ ನೀಡಿತ್ತು. ಆದರೆ ಆ ಸಂದರ್ಭ ಬಡ ಕುಟುಂಬದ ಮಹಿಳೆಯೊಬ್ಬರಿಗೆ ಭೂ ಸ್ವಾಧೀನ ಮಾಡಿದ ಹೆದ್ದಾರಿ ಪ್ರಾಧಿಕಾರ 5.20ಲಕ್ಷ ರೂ. ಪರಿಹಾರ ನೀಡಬೇಕಿತ್ತು. ಆದರೆ, ಮಧ್ಯವರ್ತಿಗಳ ತಂಡವೊಂದು 4.30ಲಕ್ಷ ರೂ. ವಂಚನೆ ಮಾಡಿತ್ತು. ಇದರಿಂದ ನೊಂದ ಆ […]

ರಸ್ತೆ ಅಪಘಾತ: ಪತ್ರಕರ್ತ ಹೇಮಾಚಾರ್ಯರ ಪುತ್ರ ಮೃತ್ಯು

Saturday, December 23rd, 2017
road-accident

ಮಂಗಳೂರು: ಇಲ್ಲಿನ ರಾಷ್ಟ್ರೀಯ ಹೆದ್ದಾರಿಯ ಕುಂಟಿಕಾನದಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಯುವಕರೊಬ್ಬರು ಇಂದು ಬೆಳಗ್ಗೆ ಮೃತಪಟ್ಟಿದ್ದಾರೆ. ದಾಯ್ಜಿವರ್ಲ್ಡ್ ಸಾಪ್ತಾಹಿಕದ ಪ್ರಧಾನ ಸಂಪಾದಕ ಹೇಮಾಚಾರ್ಯರ ಪುತ್ರ ಇಯಾನ್ ಮಸ್ಕರೇನ್ಹಸ್ (27) ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಕುಂಟಿಕಾನದಲ್ಲಿ ನಿಯಂತ್ರಣ ತಪ್ಪಿದ ಕಾರು ಮಗುಚಿ ಬಿದ್ದು ಅಪಘಾತ ಸಂಭವಿಸಿತ್ತು. ಪರಿಣಾಮ ಕಾರಿನಲ್ಲಿದ್ದ ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದರು. ಗಾಯಗೊಂಡವರಲ್ಲಿ ಇಯಾನ್ ಇಂದು ಬೆಳಗ್ಗೆ ಮೃತಪಟ್ಟಿದ್ದಾರೆ.

ನಂತೂರು ವೃತ್ತ : ಬಸ್‌ ನಿಲ್ದಾಣ ಸ್ಥಳಾಂತರ

Thursday, December 14th, 2017
nanthoor-junction

ಮಂಗಳೂರು: ನಂತೂರಿನ ಅವೈಜ್ಞಾನಿಕ ಹಾಗೂ ಅಪಾಯಕಾರಿ ವೃತದ ಬಗ್ಗೆ ಸಾರ್ವಜನಿಕ ವಲಯದಲ್ಲಿ ಆಕ್ರೋಶ ಜೋರಾಗುತ್ತಿದ್ದಂತೆ, ನಗರ ಪಾಲಿಕೆಯೂ ತನ್ನ ಅಧಿಕಾರ ವ್ಯಾಪ್ತಿಯಲ್ಲಿ ಪ್ರಯಾಣಿಕರು ಮತ್ತು ಸವಾರರ ಅನುಕೂಲಕ್ಕಾಗಿ ಕೆಲವು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲು ಮುಂದಾಗಿದೆ.ಪಾಲಿಕೆಯು 50 ಲಕ್ಷ ರೂ. ವೆಚ್ಚದಲ್ಲಿ ವೃತ್ತದ ಬಳಿ ಹೊಸ ಬಸ್‌ ಬೇ, ಸುಗಮ ಸಂಚಾರ ವ್ಯವಸ್ಥೆ (ಫ್ರೀ ಲೆಫ್ಟ್‌) ಹಾಗೂ ಫುಟ್‌ಪಾತ್‌ ನಿರ್ಮಿಸಲು ತೀರ್ಮಾನಿಸಿದೆ. ವೃತ್ತದ ಟ್ರಾಫಿಕ್‌ ಸಮಸ್ಯೆ ಹಲವು ವರ್ಷಗಳಿಂದ ಸಾರ್ವಜನಿಕರ ಟೀಕೆ, ಅಸಮಾಧಾನಕ್ಕೆ ಕಾರಣವಾಗಿದೆ. ಇಲ್ಲಿ ಕಳೆದ ವಾರ ಖಾಸಗಿ […]