Blog Archive

ಕೊರೊನಾ ಗುಣ ಪಡಿಸುತ್ತೇನೆಂದು ಕಿಸ್ ಕೊಟ್ಟ ಬಾಬಾ ಮೃತ್ಯು, ಕಿಸ್ ಕೊಡಿಸಿಕೊಂಡ ನಾಲ್ವರು ಬಲಿ

Friday, June 12th, 2020
aslam-baba

ಮಧ್ಯಪ್ರದೇಶ :  ಮಧ್ಯಪ್ರದೇಶದ ರತ್ನಂ ಜಿಲ್ಲೆಯಲ್ಲೊಬ್ಬ ಕೈಗೆ ಮುತ್ತು ಕೊಡುವ ಮೂಲಕ ಕರೊನಾ ಓಡಿಸುತ್ತೇನೆಂದು ನಂಬಿಸಿ, ಅನೇಕ ಮಂದಿಗೆ ಮುತ್ತುಕೊಟ್ಟಿದ್ದ. ಇದೀಗ ಅದೇ ಬಾಬಾ ಕರೊನಾ ಸೋಂಕಿನಿಂದ ಮೃತಪಟ್ಟಿದ್ದಾನೆ. ಈತನಿಂದ ಮುತ್ತು ಪಡೆದಿರುವ 85ಕ್ಕೂ ಅಧಿಕ ಮಂದಿಗೆ ಸೋಂಕು ತಗುಲಿದ್ದು, ಎಲ್ಲರೂ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಪೈಕಿ 19 ಮಂದಿಯಲ್ಲಿ ಸೋಂಕಿನ ಪ್ರಮಾಣ ಹೆಚ್ಚಾಗಿರುವುದಾಗಿ ಆರೋಗ್ಯ ಇಲಾಖೆ ಹೇಳಿದೆ. ಈ ಪೈಕಿ ನಾಲ್ವರು ಇದಾಗಲೇ ಮೃತಪಟ್ಟಿದ್ದಾರೆ! ಈ ಸ್ವಯಂ ಘೋಷಿತ ಮುಸ್ಲಿಂ ದೇವಮಾನವ ಬಾಬಾನ ಹೆಸರು ಅಸ್ಲಾಂ ಎಂದು […]

ದ.ಕ. ಜಿಲ್ಲೆಯಲ್ಲಿ ರವಿವಾರದಂದು 14 ಮಂದಿಯಲ್ಲಿ ಕೊರೊನಾ ಪತ್ತೆ, ಒಂದೇ ದಿನ 12 ಮಂದಿ ಬಿಡುಗಡೆ

Sunday, May 31st, 2020
Dk corona

ಮಂಗಳೂರು : ದ.ಕ. ಜಿಲ್ಲೆಯಲ್ಲಿ ರವಿವಾರದಂದು 14 ಮಂದಿಯಲ್ಲಿ ಕೊರೊನಾ ಕಾಣಿಸಿಕೊಂಡಿದೆ. ಜೊತೆಗೆ  ಒಂದೇ ದಿನ 12 ಮಂದಿ ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. ಸೋಂಕಿತರ ಪೈಕಿ 9 ಮಂದಿ ಮಹಾರಾಷ್ಟ್ರದಿಂದ ಬಂದವರಾಗಿದ್ದಾರೆ. ಒಬ್ಬರು ದುಬೈನಿಂದ ಬಂದಿದ್ದು, ಮತ್ತೊಬ್ಬರು ಮಲೇಶ್ಯಾದಿಂದ ಮರಳಿದವರಾಗಿದ್ದಾರೆ. ಇನ್ನು ಮೂರು ಮಂದಿ ಮಹಾರಾಷ್ಟ್ರದಿಂದ ಮರಳಿದವರಲ್ಲಿ ಸೋಂಕು ಪತ್ತೆಯಾಗಿದೆ. 3 ಹಾಗೂ 11 ವರ್ಷದ ಬಾಲಕಿಯರು, 71 ಹಾಗೂ 76 ವರ್ಷದ ವ್ಯಕ್ತಿಗಳು ಕೂಡ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. ಇನ್ನುಳಿದಂತೆ 69, 41, 36 ವರ್ಷದ […]

ಕುಸಿದು ಬಿದ್ದು ಮೃತಪಟ್ಟ ಹೋಟೆಲು ಕಾರ್ಮಿಕ, ಕೊರೊನಾ ಎಂದು ವದಂತಿ

Friday, May 29th, 2020
dead body

ಉಪ್ಪಿನಂಗಡಿ : ಮನೆಯವರಿಂದ ದೂರವಾಗಿದ್ದ ಉಡುಪಿ ಮೂಲದ 56 ವರ್ಷ ವ್ಯಕ್ತಿಯೋರ್ವ ಪರಿಚಯಸ್ಥರ ಮನೆಯಲ್ಲಿ ಕುಸಿದು ಬಿದ್ದು ಸಾವನ್ನಪ್ಪಿದ ಘಟನೆ  ಪುತ್ತೂರು ತಾಲೂಕಿನ ನೆಕ್ಕಿಲಾಡಿ ಗ್ರಾಮದ ದರ್ಬೆಯಲ್ಲಿ ಬುಧವಾರ ನಡೆದಿದೆ. ಮೃತ ವ್ಯಕ್ತಿ ಉಪ್ಪಿನಂಗಡಿಯ ಹೊಟೇಲ್‌‌ವೊಂದರಲ್ಲಿ ಕಾರ್ಮಿಕರಾಗಿದ್ದರು. ಲಾಕ್ ಡೌನ್ ಕಾರಣದಿಂದ ಹೊಟೇಲ್‌‌ ಮುಚ್ಚಿದ ಕಾರಣ ಕಾರಣ ಅವರು ನೆಕ್ಕಿಲಾಡಿಯ ಪರಿಚಯಸ್ಥರ ಮನೆಯಲ್ಲಿದ್ದರು. ಈ ನಡುವೆ ಅವರು ಜ್ವರದಿಂದ ಬಳಲುತ್ತಿದ್ದರು ಎಂದು ಯಾರೋ ವದಂತಿ ಹಬ್ಬಿಸಿದ್ದು, ಕೊರೊನಾ ಭಯದಿಂದಾಗಿ ಯಾರೂ ಕೂಡಾ ಶವದ ಬಳಿ ಬರಲು ಒಪ್ಪದೆ  ಹೆಣ ಬೀದಿಯಲ್ಲಿಯೇ ಉಳಿಯುವಂತಾಯಿತು. ತಂದೆ ಮೃತಪಟ್ಟ ವಿಷಯ […]

ದಕ್ಷಿಣ ಕನ್ನಡದಲ್ಲಿ ಗುರುವಾರ 6 ಮಂದಿಯಲ್ಲಿ ಕೊರೊನಾ ದೃಢ

Thursday, May 28th, 2020
corona-virus

ಮಂಗಳೂರು : ದೇಶದಲ್ಲಿ ಹಂತ ಹಂತವಾಗಿ ಲಾಕ್ ಡೌನ್ ತೆರವು ಗೊಳ್ಳುತ್ತಿದ್ದಂತೆ ಕೊರೊನಾ ಸೋಂಕು ಜಿಲ್ಲೆಯಲ್ಲಿ ತೀವ್ರಗತಿಯಲ್ಲಿ ಏರಿದೆ. ಇಂದು ಮತ್ತೆ 6 ಕೊರೊನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿದ್ದು, ಸೋಂಕಿಗೆ ಒಳಗಾದ ಬಹುತೇಕ ಮಂದಿ ಮಹಾರಾಷ್ಟ್ರದ ಮುಂಬಯಿಂದಲೇ ಬಂದವರಾಗಿದ್ದಾರೆ. ದಕ್ಷಿಣ ಕನ್ನಡದಲ್ಲಿ ಗುರುವಾರ ಒಂದೇ ದಿನ 6 ಮಂದಿಯಲ್ಲಿ ಕೊರೊನಾ ದೃಢಪಟ್ಟಿದ್ದು , 61, 18 ವರ್ಷದ ಮಹಿಳೆ, 62 , 50 , 24, 36 ವರ್ಷದ ಪುರುಷರಲ್ಲಿ ಕೊರೊನಾ ಪತ್ತೆಯಾಗಿದೆ. ಇವರೆಲ್ಲರೂ ಮಹಾರಾಷ್ಟ್ರದ ರಾಜ್ಯದಿಂದ […]

ಕೊರೊನಾ ನಡುಟು “ತೆಲಿಪುಲೆಯೆ ಬೇನೆ ಮದಪುಲೆಯೆ” ಇನಿ ರಿಲೀಸ್

Tuesday, April 28th, 2020
telipule

ಮಂಗಳೂರು :  ಫೋಲಿಸರಿಗೆ ಮತ್ತು ಡಾಕ್ಟರ್ಸ್ ಗಳಿಗೆ ಗೌರವ ಸಲ್ಲಿಸುವ ಈ ಹಾಡು ರಿಲೀಸ್ ಗೂ ಮೊದಲೇ ಬಾರಿ ಸದ್ದು ಮಾಡುತಿದ್ದು. ಮಂಗಳೂರೇ ಕಾದು ಕುಳಿತಿದೆ. ಈ ಸಾಂಗ್ ಗೆ ತುಳುನಾಡಿನ ಸಾಹಿತ್ಯಗಾರ ಕೌಶಿಕ್ ಜೆ.ಎಸ್ ಶೆಟ್ಟಿ ಸಾಹಿತ್ಯ ಬರೆದಿದ್ದು ತುಳುನಾಡಿನಲ್ಲೆ ತನ್ನ ಸ್ವರದ ಮೂಲಕ ಮೋಡಿ ಮಾಡಿರುವ ಖ್ಯಾತ ಗಾಯಕ ಸಂತೋಷ್ ಬೇಂಕ್ಯ ಈ ಹಾಡಿಗೆ ಸ್ವರ ನೀಡಿದ್ದಾರೆ. ಈ ಹಾಡಿಗೆ ಎಲ್ಲಾ ತುಳುಚಿತ್ರರಂಗ ಒಟ್ಟಾಗಿ ಸೇರಿಕೊಂಡಿದೆ.ಎಲ್ಲರೂ ಇಂದು ಇದರ ರಿಲೀಸ್ ಗೆ ಕಾಯುತ್ತಿದ್ದಾರೆ.

ಕೊರೊನಾದಿಂದ ಮೃತ ವ್ಯಕ್ತಿಯನ್ನು ದಫನ ಮಾಡುವುದರಿಂದ ಸೋಂಕು ಹರಡಲ್ಲ : ಜಿಲ್ಲಾಧಿಕಾರಿ

Friday, April 24th, 2020
DC Sindhu

ಮಂಗಳೂರು: ಸೋಂಕಿತ ವ್ಯಕ್ತಿಯ ಮೃತದೇಹವನ್ನು ಹೂಳುವುದು ಅಥವಾ ದಹನ ಮಾಡುವ ಮೂಲಕ ಅಂತ್ಯಕ್ರಿಯೆ ಜರುಗಿಸಬಹುದು. ಹೀಗೆ ದಹಿಸಿದ ಅಥವಾ ದಫನ ಮಾಡಿದ ದೇಹದ ಬೂದಿಯಿಂದ ಮತ್ತೊಬ್ಬರಿಗೆ ಯಾವುದೇ ವೈರಾಣು ಹರಡುವುದಿಲ್ಲ. ಈ ಬೂದಿಯನ್ನು ಸಂಗ್ರಹಿಸಿ ಇತರ ಧಾರ್ಮಿಕ ಆಚರಣೆಗಳನ್ನೂ ನಡೆಸಬಹುದು ಎಂದು ಜಿಲ್ಲಾಧಿಕಾರಿ  ತಿಳಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ ನಿವಾಸಿ 78 ವರ್ಷದ ಮಹಿಳೆ ಕೋವಿಡ್-19ನಿಂದ ಮೃತಪಟ್ಟ ಬಳಿಕ ಅಂತ್ಯಸಂಸ್ಕಾರಕ್ಕೆ ಸಂಬಂಧಿಸಿದಂತೆ ಉಂಟಾದ ಗೊಂದಲದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಸಿಂಧೂ ರೂಪೇಶ್ ಕೆಲವು ಮಾಹಿತಿಗನ್ನು ಸಾರ್ವಜನಿಕರಿಗೆ ನೀಡಿದ್ದಾರೆ. ಕೊರೊನಾ ಸೋಂಕಿತರ ಮೃತದೇಹದಿಂದ […]

ಕೊರೊನಾ ನಿಯಂತ್ರಣ : ಕಾಸರಗೋಡು ದೇಶಕ್ಕೆ ಮಾದರಿ ; ಕೇಂದ್ರ ಆರೋಗ್ಯ ಸಚಿವಾಲಯ

Saturday, April 18th, 2020
corona kasaragod

ಕಾಸರಗೋಡು : ಜಿಲ್ಲೆಯಲ್ಲಿ ಅತಿ ಹೆಚ್ಚು ಕೊರೊನಾ ಪ್ರಕರಣಗಳು ದಾಖಲಾಗದ್ದರೂ ಸೋಂಕು ತಡೆಯುವಲ್ಲಿ ಕಾಸರಗೋಡು ದೇಶಕ್ಕೆ ಮಾದರಿ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮೆಚ್ಚುಗೆ ವ್ಯಕ್ತಪಡಿಸಿದೆ. ಆರಂಭದಿಂದಲೇ ಆತಂಕದ ವಾತಾವರಣ ಕಾಸರಗೋಡಿನಲ್ಲಿ ಕಂಡು ಬಂದಿತ್ತು. 168 ಮಂದಿಯಲ್ಲಿ ಸೋಂಕು ದೃಢಪಟ್ಟಿತ್ತು . ಈ ಪೈಕಿ 117 ಮಂದಿ ಗುಣಮುಖರಾಗಿದ್ದಾರೆ . ಯಾವುದೇ ಸಾವು ಸಂಭವಿಸಿಲ್ಲ. ಕೇರಳ ಸರಕಾರ, ಆರೋಗ್ಯ ಇಲಾಖೆ, ಜಿಲ್ಲಾಡಳಿತ ಕಾರ್ಯವನ್ನು ಶ್ಲಾಘಿಸಿದೆ. ಸೋಂಕು ಹರಡದಂತೆ ಆರಂಭದಲ್ಲಿ ಕ್ರಮ ತೆಗೆದುಕೊಂಡಿತ್ತು . ಕೊರೊನಾ ರೋಗಿಗಳಿಗೆ ವಿಶೇಷ ಆಸ್ಪತ್ರೆ […]

ಕೋವಿಡ್19 ಪಾಸಿಟಿವ್ ಆಗಿದ್ದ 10 ತಿಂಗಳ ಮಗು ಸಂಪೂರ್ಣ ಗುಣಮುಖ ವಾಗಿ ಮನೆಗೆ

Saturday, April 11th, 2020
baby

ಬಂಟ್ವಾಳ : ಕೋವಿಡ್19 ಪಾಸಿಟಿವ್ ಆಗಿದ್ದ ಬಂಟ್ವಾಳ ತಾಲೂಕಿನ ಸಜೀಪನಡು ಗ್ರಾಮದ 10 ತಿಂಗಳ ಮಗುವು ಸಂಪೂರ್ಣ ಗುಣಮುಖ ವಾಗಿ, ಇಂದು ಆಸ್ಪತ್ರೆ ಯಿಂದ ಬಿಡುಗಡೆಗೊಂಡು ಮನೆಗೆ ತೆರಳಿದೆ. ಮಗುವಿನ ತಾಯಿ ಹಾಗೂ ಅಜ್ಜಿಯ ಪರೀಕ್ಷಾ ವರದಿಗಳು ನೆಗೆಟಿವ್ ಆಗಿರುತ್ತದೆ. ಇವರೂ ಕೂಡಾ ಇಂದು ಡಿಸ್ಚಾಜ್೯ ಆಗಿರುತ್ತಾರೆ.  ಇದುವರೆಗೆ ದ.ಕ. ಜಿಲ್ಲೆಯ 12 ಕೊರೊನಾ ಪಾಸಿಟಿವ್ ಪ್ರಕರಣಗಳಲ್ಲಿ 6 ಮಂದಿ ಗುಣಮುಖರಾಗಿ, ಬಿಡುಗಡೆಗೊಂಡಿದ್ದು, ಶೇಕಡಾ 50 ಪ್ರಗತಿಯಾಗಿದೆ. ಈ ವಾರ ಪೂರ್ತಿ ಅಂದರೆ ಏಪ್ರಿಲ್ 5 ರಿಂದ […]

ಕೊರೊನಾ : ಹಾಲು ಹಾಕುವವನನ್ನು ಬಂಧಿಸಿದ ಪೊಲೀಸರು

Monday, March 23rd, 2020
ಕೊರೊನಾ : ಹಾಲು ಹಾಕುವವನನ್ನು ಬಂಧಿಸಿದ ಪೊಲೀಸರು

ವಿಟ್ಲ :  ಕರ್ನಾಟಕ ಕೇರಳ ಗಡಿ ಭಾಗವಾದ ಕಲ್ಲಡ್ಕ – ಕಾಂಞಂಗಾಡು ಅಂತರ್‌ ರಾಜ್ಯ ಹೆದ್ದಾರಿಯ ಸಾರಡ್ಕದಲ್ಲಿ ರಸ್ತೆಯಲ್ಲಿ  ಪೆರ್ಲ ಸಮೀಪದ ನಲ್ಕ ನಿವಾಸಿ ಹಾಲು ವಿತರಿಸುವ ರಾಘವೇಂದ್ರ ರಾವ್‌ (50)  ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ. ಶನಿವಾರ  ಬೆಳಗ್ಗಿನಿಂದಲ್ಲೇ ಅಡ್ಯನಡ್ಕದಿಂದ ಕೇರಳಕ್ಕೆ ಪ್ಯಾಕೆಜ್‌ ಹಾಲು ವಿತರಿಸಲು ಸ್ಕೂಟರಿನಲ್ಲಿ  ಸಂಚರಿಸಿದ್ದ ಈತನಿಗೆ ಮಧ್ಯಾಹ್ನ 2 ರ ಬಳಿಕ ವಾಹನ ಸಂಚಾರ ಇಲ್ಲ ಎಂದು ಪೊಲೀಸರು ತಿಳಿಸಿದ್ದರು. ಸಂಜೆ ವಿಟ್ಲ ಠಾಣಾಧಿಕಾರಿ ಜೊತೆಗೆ ಮಾತನಾಡಿ ಅಡ್ಕನಡ್ಕದಲ್ಲಿ ಅಂಗಡಿ ಇರುವ ಕಾರಣದಿಂದಾಗಿ ವಾಹನ […]

ಕೊರೊನಾ ನಡುವೆ ಹರೇಕಳದಲ್ಲಿ ಅಣೆಕಟ್ಟು ನಿರ್ಮಾಣ ಕಾಮಗಾರಿಗೆ ಶಿಲಾನ್ಯಾಸ, ಶಾಸಕ ಅಧಿಕಾರಿಗಳು ಬಾಗಿ

Saturday, March 21st, 2020
Dam

ಮಂಗಳೂರು : ಮಾಜಿ ಸಚಿವ ಬಿ.ರಮಾನಾಥ ರೈ ಹಾಗೂ ಶಾಸಕ ಯು.ಟಿ ಖಾದರ್ ಅವರು ಹರೇಕಳದಲ್ಲಿ ನೇತ್ರಾವತಿ ನದಿಗೆ ರೂ. 174 ಕೋಟಿ ವೆಚ್ಚದಲ್ಲಿ ಸೇತುವೆ ಸಹಿತ ಉಪ್ಪು ನೀರು ತಡೆ ಅಣೆಕಟ್ಟು ನಿರ್ಮಾಣ ಕಾಮಗಾರಿಗೆ ಶಿಲಾನ್ಯಾಸ ನೆರವೇರಿಸಿದ್ದಾರೆ. ದೇಶದಾದ್ಯಂತ ಸಾಂಕ್ರಾಮಿಕವಾಗಿ ವ್ಯಾಪಿಸುತ್ತಿರುವ ಕೊರೊನಾ ವೈರಸ್‌ನ ಹಬ್ಬುವಿಕೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಕೇಂದ್ರ, ರಾಜ್ಯ ಸರ್ಕಾರ ಹಾಗೂ ಜಿಲ್ಲಾಡಳಿತ ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿದ್ದು, ಹೆಚ್ಚು ಜನ ಸೇರಿ ಸಾರ್ವಜನಿಕ ಸಭೆ ನಡೆಸದಂತೆ ಆದೇಶಿಸಿದ್ಧಾರೆ. ಈ ನಡುವೆ, ಹರೇಕಳದಲ್ಲಿ ನೇತ್ರಾವತಿ […]