Blog Archive

ಕೇವಲ 50 ಸಾವಿರಕ್ಕೆ ಫ್ಲಾಟ್- ಯು.ಟಿ.ಖಾದರ್ ಬಂಪರ್ ಆಫರ್

Tuesday, June 12th, 2018
karnataka housing board

ಮಂಗಳೂರು  : ಕರ್ನಾಟಕ ಗೃಹ ಮಂಡಳಿ ಫ್ಲಾಟ್‍ಗಳನ್ನು ಸಾರ್ವಜನಿಕರು ಇನ್ನು ಸುಲಭವಾಗಿ ಪಡೆಯಬಹುದು. ಫ್ಲಾಟ್‍ಗಳನ್ನು ಪಡೆಯಲು ವಿಧಿಸಿದ್ದ ನಿರ್ಬಂಧಗಳನ್ನು ಕರ್ನಾಟಕ ಸರ್ಕಾರದ ವಸತಿ ಇಲಾಖೆ ತೆರವುಗೊಳಿಸಿದೆ. ಠೇವಣಿ ಮೊತ್ತವನ್ನು ಕಡಿತಗೊಳಿಸಿದೆ, ಆದಾಯ ಮಿತಿಯ ನಿರ್ಬಂಧವನ್ನೂ ತೆಗೆದು ಹಾಕಿದೆ. ಒಟ್ಟಾರೆ ಯಾರಾದರೂ 50 ಸಾವಿರ ಠೇವಣಿ ಇಟ್ಟು ಸ್ಥಳದಲ್ಲೇ ಗೃಹ ಮಂಡಳಿಯ ಫ್ಲಾಟ್‍ಗಳನ್ನು ಖರೀದಿಸಬಹುದಾಗಿದೆ. ಈ ಸಂಬಂಧ ವಸತಿ ಹಾಗೂ ನಗರಾಭಿವೃದ್ದಿ ಸಚಿವ ಯು.ಟಿ.ಖಾದರ್ ಇಂದು ಇಲಾಖಾ ಅಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆ ನಡೆಸಿದ ನಂತರ ಬೆಂಗಳೂರಿನ ವಿಕಾಸಸೌಧದಲ್ಲಿ […]

ಜಿಲ್ಲೆಯ ಸೋತ ಕಾಂಗ್ರೆಸ್ ಶಾಸಕರನ್ನು ಭೇಟಿ ಮಾಡಿ ಸಚಿವ ಯು.ಟಿ.ಖಾದರ್ ಮಾತುಕತೆ

Sunday, June 10th, 2018
ut-kadher

ಮಂಗಳೂರು: ನೂತನ ನಗರಾಭಿವೃದ್ಧಿ ಮತ್ತು ವಸತಿ ಸಚಿವ ಯು.ಟಿ.ಖಾದರ್ ಭಾನುವಾರ  ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ದ.ಕ.ಜಿಲ್ಲೆಯ 8 ಕ್ಷೇತ್ರಗಳಲ್ಲಿ 6 ಮಂದಿ ಕಾಂಗ್ರೆಸ್ ಪಕ್ಷದ ಶಾಸಕರಾಗಿದ್ದವರು ಸೋಲನುಭವಿಸಿದರು. ಯುಟಿ ಖಾದರ್ ಒಬ್ಬರೇ ಗೆದ್ದು ಕಾಂಗ್ರೆಸ್ಸಿನ ಮಾನ ಉಳಿಸಿದ್ದರು. ಬಂಟ್ವಾಳ ಶಾಸಕರಾಗಿದ್ದ ಬಿ. ರಮಾನಾಥ ರೈ, ಮೂಡಬಿದ್ರೆ ಶಾಸಕರಾಗಿದ್ದ ಅಭಯಚಂದ್ರ ಜೈನ್, ಬೆಳ್ತಂಗಡಿ ಶಾಸಕರಾಗಿದ್ದ ವಸಂತ ಬಂಗೇರ, ಪುತ್ತೂರು ಶಾಸಕಿಯಾಗಿದ್ದ ಶಕುಂತಳಾ ಟಿ. ಶೆಟ್ಟಿ ಅವರನ್ನು ನಿವಾಸಕ್ಕೆ ತೆರಳಿ ರಾಜ್ಯ ನಗರಾಭಿವೃದ್ಧಿ ಮತ್ತು ವಸತಿ ಸಚಿವರಾದ ಯು.ಟಿ.ಖಾದರ್ […]

ಸಮ್ಮಿಶ್ರ ಸರಕಾರದ ನೂತನ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ ಯು.ಟಿ.ಖಾದರ್

Wednesday, June 6th, 2018
u-t-kader-minister

ಮಂಗಳೂರು: ಸಮ್ಮಿಶ್ರ ಸರಕಾರದ ನೂತನ ಸಚಿವರಾಗಿ ಯು.ಟಿ.ಖಾದರ್ ಬೆಂಗಳೂರಿನ ರಾಜಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ರಾಜ್ಯಪಾಲ ವಜುಬಾಯಿ ವಾಲಾ ಪ್ರಮಾಣವಚನ ಬೋಧಿಸಿದರು. ಎಚ್.ಡಿ.ರೇವಣ್ಣ, ಆರ್.ವಿ.ದೇಶಪಾಂಡೆ, ಬಂಡೆಪ್ಪ ಕಾಶೆಂಪೂರ್, ಡಿ.ಕೆ.ಶಿವಕುಮಾರ್, ಜಿ.ಟಿ.ದೇವೇಗೌಡ, ಕೆ.ಜೆ.ಜಾರ್ಜ್ , ಡಿ.ಸಿ.ತಮ್ಮಣ್ಣ, ಕೃಷ್ಣ ಭೈರೇಗೌಡ, ಎಂ.ಸಿ. ಮನಗುಳಿ, ಎನ್.ಎಚ್.ಶಿವಶಂಕರ ರೆಡ್ಡಿ, ಎಸ್.ಆರ್.ಶ್ರೀನಿವಾಸ್, ರಮೇಶ್ ಜಾರಕಿಹೊಳಿ, ವೆಂಕಟರಾವ್ ನಾಡಗೌಡ, ಪ್ರಿಯಾಂಕ್ ಖರ್ಗೆ, ಸಾ.ರಾ.ಮಹೇಶ್, ಝಮೀರ್ ಅಹ್ಮದ್ ಖಾನ್ ಹಾಗು ಎನ್. ಮಹೇಶ್ ಈಗಾಗಲೇ ಪ್ರಮಾಣವಚನ ಸ್ವೀಕರಿಸಿದ್ದಾರೆ.

ಶಾಸಕ ಯು.ಟಿ.ಖಾದರ್ ಅವರಿಗೆ ಸಚಿವ ಸ್ಥಾನ ಖಚಿತ

Wednesday, June 6th, 2018
u-t-kader

ಮಂಗಳೂರು: ಸಚಿವ ಸಂಪುಟ ರಚನೆ ಹಿನ್ನೆಲೆಯಲ್ಲಿ ಸ್ಥಾನಗಳ ಹಂಚಿಕೆ ಬಗ್ಗೆ ಕುತೂಹಲ ಮೂಡಿರುವ ನಡುವೆಯೇ ಮಂಗಳೂರು ಶಾಸಕ ಯು.ಟಿ.ಖಾದರ್ ಅವರಿಗೆ ಸಚಿವ ಸ್ಥಾನ ಖಚಿತಗೊಂಡಿದೆ ಎನ್ನಲಾಗಿದೆ. ಮುಖ್ಯಮಂತ್ರಿಯಾಗಿ ಕುಮಾರಸ್ವಾಮಿ, ಉಪಮುಖ್ಯಮಂತ್ರಿಯಾಗಿ ಡಾ.ಜಿ.ಪರಮೇಶ್ವರ್ ಪ್ರಮಾಣವಚನ ಸ್ವೀಕರಿಸಿದ ಬಳಿಕ ಸಚಿವ ಸಂಪುಟ ರಚನೆ ತೀವ್ರ ಕುತೂಹಲ ಸೃಷ್ಟಿಸಿತ್ತು. ಈ ಹಿಂದಿನ ಕಾಂಗ್ರೆಸ್ ಸರಕಾರದಲ್ಲಿದ್ದ ಹಲವು ಘಟಾನುಘಟಿಗಳು ಸಚಿವ ಸ್ಥಾನದಿಂದ ವಂಚಿತರಾಗಲಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿದ್ದವು. ಅಲ್ಲದೆ ಯು.ಟಿ. ಖಾದರ್ ರಿಗೆ ಸಚಿವ ಸ್ಥಾನ ಈ ಬಾರಿ ಸಿಗುವುದು ಸುಲಭದ […]

ದ್ವೇಷ ರಾಜಕಾರಣ ಕಾಂಗ್ರೆಸ್ ಸಂಸ್ಕೃತಿಯಲ್ಲ…ಅದು ಬಿಜೆಪಿಯ ಸಂಸ್ಕೃತಿ: ಯು.ಟಿ.ಖಾದರ್

Tuesday, June 5th, 2018
u-t-kader

ಮಂಗಳೂರು: ದ್ವೇಷ ರಾಜಕಾರಣ ಕಾಂಗ್ರೆಸ್ ಸಂಸ್ಕೃತಿಯಲ್ಲ. ಅದು ಬಿಜೆಪಿಯ ಸಂಸ್ಕೃತಿ. ನಮ್ಮದು ಏನಿದ್ದರೂ ಪ್ರೀತಿಯ ರಾಜಕಾರಣ. ಜಿಲ್ಲೆಯಲ್ಲಿ, ರಾಜ್ಯದಲ್ಲಿ ಕಾಂಗ್ರೆಸ್‌ಗೆ ಹಿನ್ನಡೆಯಾಗಿದ್ದರೂ ಮಂಗಳೂರು ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಜಯಗಳಿಸುವುದರಲ್ಲಿ ಕಾರ್ಯಕರ್ತರ ಪರಿಶ್ರಮವೇ ಕಾರಣ. ಮುಂದಿನ ಲೋಕಸಭೆ ಚುನಾವಣೆಗೆ ನಾವೆಲ್ಲರೂ ಸಿದ್ದರಾಗಬೇಕಿದೆ ಎಂದು ಶಾಸಕ ಯು.ಟಿ.ಖಾದರ್ ಅವರು ಅಭಿಪ್ರಾಯಪಟ್ಟರು. ಅವರು ದೇರಳಕಟ್ಟೆಯ ಖಾಸಗಿ ಸಭಾಂಗಣದಲ್ಲಿ ಸೋಮವಾರ ನಡೆದ ಕಾಂಗ್ರೆಸ್ ಕಾರ್ಯಕರ್ತರಿಗೆ ಅಭಿನಂದನೆ ಕಾರ್ಯಕ್ರಮ ಹಾಗೂ ಇಪ್ತಾರ್‌ಕೂಟದಲ್ಲಿ ಭಾಗವಹಿಸಿ ಮಾತನಾಡಿದರು. ಮಂಗಳೂರು ಕ್ಷೇತ್ರದ ಜನತೆ ಅತ್ಯಂತ ಪ್ರೀತಿ ವಿಶ್ವಾಸ ನಂಬಿಕೆಯೊಂದಿಗೆ […]

ಸೋಮವಾರ ಬಂದ್ ಗೆ ಕರೆ ನೀಡಿರುವುದು ಶೋಭೆ ತರುವ ವಿಚಾರವಲ್ಲ: ಯು ಟಿ ಖಾದರ್

Saturday, May 26th, 2018
u-t-kader

ಮಂಗಳೂರು: ಸೋಮವಾರ ಬಂದ್ ಗೆ ಕರೆ ನೀಡಿರುವುದು ಶೋಭೆ ತರುವ ವಿಚಾರವಲ್ಲಎಂದು ಮಂಗಳೂರಿನಲ್ಲಿ ಶಾಸಕ ಯು ಟಿ ಖಾದರ್ ಹೇಳಿಕೆ ನೀಡಿದ್ದಾರೆ. ಮಂಗಳೂರಿನಲ್ಲಿ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಯು ಟಿ ಖಾದರ್ ಅವರು ವಿಶ್ವಾಸಮತ ಯಾಚನೆ ಮುಂಚೆಯೇ ಬಂದ್ ಗೆ ಕರೆ ನೀಡಿದ್ದಾರೆ. ಇನ್ನೂ ಸಚಿವ ಸಂಪುಟ ರಚನೆಯಾಗಿಲ್ಲ,ಸಚಿವ ಸಂಪುಟ ಸಭೆ ಆಗಿಲ್ಲ. ಇದು ಶೋಭೆ ತರುವ ವಿಚಾರವಲ್ಲ ಎಂದಿದ್ದಾರೆ. ಈಗ ಪ್ರತಿಭಟನೆ ಕರೆ ನೀಡುವುದು ರಾಜಕೀಯ ಕಾರಣಕ್ಕಾಗಿ, ಪೆಟ್ರೋಲ್ ಬೆಲೆ ಏರಿಕೆಯಾದರೂ ಒಂದೆ ಒಂದು ದಿನ ಪ್ರತಿಭಟನೆ […]

ಸುಮಾರು 20 ಸಾವಿರ ಮತಗಳ ಅಂತರದಲ್ಲಿ ಯು.ಟಿ ಖಾದರ್ ಗೆಲುವು

Tuesday, May 15th, 2018
kader-won

ಮಂಗಳೂರು: ದ.ಕ. ಜಿಲ್ಲೆಯ 8 ವಿಧಾನಸಭಾ ಕ್ಷೇತ್ರಗಳ ಪೈಕಿ ಎಲ್ಲಾ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಭಾರೀ ಮುನ್ನಡೆ ಸಾಧಿಸಿರುವ ನಡುವೆ ಉಳ್ಳಾಲ ಕ್ಷೇತ್ರದ ಅಭ್ಯರ್ಥಿ ಯು.ಟಿ ಖಾದರ್ ಗೆಲುವು ಸಾಧಿಸಿದ್ದಾರೆ. ಸುಮಾರು 20 ಸಾವಿರ ಮತಗಳ ಅಂತರದಲ್ಲಿ ಯು.ಟಿ ಖಾದರ್ ಅವರು ತಮ್ಮ ಸ್ಪರ್ಧಿ ಬಿಜೆಪಿಯ ಸಂತೋಷ್ ಕುಮಾರ್ ರೈ ಅವರ ವಿರುದ್ಧ ಗೆಲುವು ದಾಖಲಿಸಿದ್ದಾರೆ.

ಮಂಗಳೂರು ನೆಚ್ಚಿನ ಶಾಸಕ ಸಂತೋಷ್ ಕುಮಾರ್ ರೈ

Friday, May 11th, 2018
santhosh-rai

ಮಂಗಳೂರು: ಮಂಗಳೂರು ವಿಧಾನಸಭಾ ಕ್ಷೇತ್ರದಲ್ಲಿ ಅಲ್ಪಸಂಖ್ಯಾತರೇ ನಿರ್ಣಾಯಕ ಮತದಾರರು. ಆಹಾರ ಮತ್ತು ನಾಗರೀಕ ಪೂರೈಕೆ ಸಚಿವ ಯು.ಟಿ.ಖಾದರ್ ಇಲ್ಲಿಯ ಶಾಸಕರಾಗಿದ್ದಾರೆ. ಆದರೆ, ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಶಚಿವರಿಗ ಜಿದ್ದಾಜಿದ್ದಿನ ಸ್ಪರ್ಧೆ ನೀಡುವವ ಉತ್ಸಾಹಿ ಬಿಜೆಪಿ ಅಭ್ಯರ್ಥಿ ಸಂತೋಷ್ ಕುಮಾರ್ ರೈ ಬೊಳ್ಯಾರು. ಕಳೆದ ಬಾರಿಯೇ ವಿಧಾನಸಭೆ ಚುನಾವಮೆಗೆ ಸ್ಪರ್ಧಿಸಿ ಶಾಸಕರಾಗಿದ್ದ ಖಾದರ್ ಅವರನ್ನು ಸೋಲಿಸಲು ಪ್ರಯತ್ನಿಸಬೇಕು ಎಂದು ಹಮ್ಮನಸ್ಸಿನಲ್ಲಿದ್ದವರು ಸಂತೋಷ್ ರೈ. ಕಳೆದ ಬಾರಿ ಅವರಿಗೆ ಪಕ್ಷದ ವತಿಯಿಂದ ಅವಕಾಶ ದೊರೆತಿರಲಿಲ್ಲ. ಈ ಬಾರಿ ಗೆದ್ದೆ […]

ಜನನಾಯಕ ಯು.ಟಿ.ಖಾದರ್

Friday, May 11th, 2018
u-t-kader

ಮಂಗಳೂರು: ಮಾಜಿ ಶಾಸಕ ದಿವಂಗತ ಯು.ಟಿ.ಫರೀದ್ ಎಂಬ ಕರಾವಳಿಯ ಜನನಾಯಕ, ಬದುಕಿನುದ್ದಕ್ಕೂ ಕಳಂಕವಿಲ್ಲದೆ ಬಾಳಿದ ಶುದ್ಧಹಸ್ತದ ಹರಿಕಾರ.ಕಾಂಗ್ರೆಸ್ ಪಕ್ಷದ ನಿಷ್ಠೆಯ ಅನುಯಾಯಿ, ಕಾರ್ಯಕರ್ತನಾಗಿ ಸಲ್ಲಿಸಿದ ಸೇವೆಯ ಫಲವಾಗಿ ಅವರ ಮಗ ಯು.ಟಿ.ಖಾದರ್ ಚಿಕ್ಕ ಪ್ರಾಯದಲ್ಲೇ ಶಾಸಕರಾಗಿ, ಸಚಿವರಾಗಿ ಜನಪ್ರಿಯರಾದವರು. ರಾಜಕೀಯದಲ್ಲಿ ಮೇಲೇರಲು ಕಾಲೆಳೆಯುವ, ಕಾಲು ಹಿಡಿಯುವ, ಕಾಲು ಕೊಡುವ ಜನರಿದ್ದಾರೆ. ಆದರೆಯು.ಟಿ.ಫರೀದ್ ಅಂತಹವರಾಗಿರಲಿಲ್ಲ. ಪಾಲಿಗೆ ಬಂದುದು ಪಂಚಾಮೃತ. ಪಕ್ಷಸೇವೆ, ಜನಸೇವೆಯೇಪ್ರಧಾನ. ಯು.ಟಿ.ಫರೀದರ ಈ ಉದಾತ್ತ ಗುಣವು ಅವರನ್ನು ಕಾಂಗ್ರೆಸ್ ನಾಯಕರ ಮನದಲ್ಲಿಅಚ್ಚಳಿಯದ ಛಾಪು ಮೂಡಿಸಿತ್ತು.ನಾಲ್ಕು ಬಾರಿ ಶಾಸಕರಾಗಿದ್ದಾಗಲೂ […]

ಜಿಲ್ಲೆಯಲ್ಲಿ ರಾಹುಲ್ ಗಾಂಧಿ ಅಲೆ: ಯು.ಟಿ.ಖಾದರ್

Friday, March 16th, 2018
rahul-gandhi

ಮಂಗಳೂರು: ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಮಾ.20ರಂದು ನಗರಕ್ಕೆ ಆಗಮಿಸಲಿದ್ದು, ಈಗಾಗಲೇ ಜಿಲ್ಲೆಯಲ್ಲಿ ಅವರ ಪರವಾದ ಅಲೆ ಜೋರಾಗಿದೆ. ಈ ಅಲೆಯಲ್ಲಿ ಯಾರ್ಯಾರು ಕೊಚ್ಚಿ ಹೋಗಲಿದ್ದಾರೆ ಎಂಬುವುದನ್ನು ಹೇಳಲಾಗದು ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ.ಖಾದರ್ ಹೇಳಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾ.20ರಂದು ನಗರದ ನೆಹರೂ ಮೈದಾನದಲ್ಲಿ ನಡೆಯುವ ಸಮಾವೇಶಕ್ಕೆ ಕ್ಷೇತ್ರದಿಂದ ಸುಮಾರು 15000 ಮಂದಿ ಭಾಗವಹಿಸಲಿದ್ದಾರೆ. ದ.ಕ. ಜಿಲ್ಲೆಯಿಂದ ಸುಮಾರು 75000 ಮಂದಿ ಸೇರುವ ನಿರೀಕ್ಷೆ ಇದೆ. ಅದಕ್ಕಾಗಿಯೇ ವಿಶಾಲವಾದ ನೆಹರೂ […]