Blog Archive

ಚುನಾವಣಾ ಕಣದಿಂದ ಹಿಂದೆ ಸರಿದ ಶಿರೂರು ಶ್ರಿಗಳು

Friday, April 27th, 2018
shiroor-shri

ಉಡುಪಿ: ಉಡುಪಿ ವಿಧಾನಸಭೆ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ ಶಿರೂರು ಲಕ್ಷ್ಮೀವರ ತೀರ್ಥ ಶ್ರಿಗಳು ಕಣದಿಂದ ಹಿಂದೆ ಸರಿದಿದ್ದಾರೆ. ಕೇಂದ್ರ ಬಿಜೆಪಿ ನಾಯಕರು ಪಕ್ಷವನ್ನು ಬೆಂಬಲಿಸುವಂತೆ ಮನವಿ ಮಾಡಿದ ಹಿನ್ನೆಲೆಯಲ್ಲಿ ಮತ್ತು ನರೇಂದ್ರ ಮೋದಿ, ಅಮಿತ್ ಶಾಗೆ ಬೆಂಬಲ‌ ನೀಡುವ ಉದ್ದೇಶದಿಂದ ನಾಮಪತ್ರ ಹಿಂಪಡೆದಿರುವುದಾಗಿ ಶ್ರೀಗಳು ತಿಳಿಸಿದ್ದಾರೆ. ಪ್ರಧಾನಿ ಮೋದಿ ಉಡುಪಿಗೆ ಬರುವುದರಿಂದ ತಮ್ಮಿಂದಾಗಿ ಬಿಜೆಪಿಯ ಧ್ಯೇಯ ಚಿಂತನೆಗಳಿಗೆ ತೊಡಕುಂಟಾಗಬಾರದು ಎಂಬ ಉದ್ದೇಶದಿಂದ ಚುನಾವಣೆಯಿಂದ ಹಿಂದೆ ಸರಿದಿದ್ದಾಗಿ ಶ್ರೀಗಳು ಸ್ಪಷ್ಟನೆ ನೀಡಿದ್ದಾರೆ.

ನಾನು ಭಾರತೀಯ ಮಹಿಳೆ ಎಂದು ಹೇಳಲು ನಾಚಿಕೆಯಾಗುತ್ತಿದೆ : ಪ್ರತಿಭಾ ಕುಳಾಯಿ

Monday, April 16th, 2018
prathiba-speach

ಮಂಗಳೂರು : ಉನ್ನಾವೋ, ಕಥುವಾ ಅತ್ಯಾಚಾರ ಪ್ರಕರಣ ಸಂಬಂಧ ಮಾತನಾಡಿದ ಪ್ರತಿಭಾ ಕುಳಾಯಿ ಅವರು ತುಂಬಾ ಹೆಣ್ಮಕ್ಕಳು ಈ ದೇಶದಲ್ಲಿ ಅತ್ಯಾಚಾರಕ್ಕೊಳಗಾಗಿದ್ದಾರೆ.ನಾನು ಭಾರತೀಯ ಮಹಿಳೆ ಎಂದು ಹೇಳಲು ನಾಚಿಕೆಯಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಾನು ಹಿಂದೂ, ಆದರೆ ಬಿಜೆಪಿ ಹಿಂದೂ ಅಲ್ಲ. ವಿಶ್ವದಲ್ಲಿ ಗಂಡು, ಹೆಣ್ಣು ಜಾತಿ ಮಾತ್ರ ಇರುವುದು. ನನಗೆ, ನಮಗೆ ಖಂಡಿತಾ ಜಾತಿ ಇಲ್ಲ. ಭಾರತ ಮಾತೆ ಅನ್ನುವವರು ಮಹಿಳೆಯರಿಗೆ ರಕ್ಷಣೆ ಕೊಡುತ್ತಿಲ್ಲ. ಸ್ವತಃ ನಾನು ಕೂಡಾ ಹಿಂಸೆ ಅನುಭವಿಸಿದ್ದೇನೆ. ಅದಕ್ಕಾಗಿ ಯಾರು ರಕ್ಷಣೆ […]

ಚುನಾವಣಾ ಅಖಾಡಕ್ಕೆ ಹುಚ್ಚ ವೆಂಕಟ್‌‌… ಯಾರ ವಿರುದ್ಧ ಸ್ಪರ್ಧೆ!

Saturday, April 7th, 2018
huccha-venkat

ಬೆಂಗಳೂರು: ಮೇ ತಿಂಗಳಿನಲ್ಲಿ‌ ನಡೆಯಲಿರುವ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ರಾಜರಾಜೇಶ್ವರಿ ನಗರ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತೇವೆ ಎಂದು‌ ನಟ ಹುಚ್ಚ ವೆಂಕಟ್ ಹೇಳಿದ್ದಾರೆ. ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಈಗಾಗಲೇ ಇತರ ಪಕ್ಷಗಳ ಅಭ್ಯರ್ಥಿಗಳು ಸೀರೆ, ಕುಕ್ಕರ್, ಹೆಂಡ ನೀಡುತ್ತಿದ್ದಾರೆ. ಹಾಲಿ ಶಾಸಕ ಮುನಿರತ್ನ ವಿರುದ್ಧ ನಾನು ಮಾಡೋ ಚುನಾವಣಾ ಪ್ರಚಾರ ಯಾರೂ ಮಾಡಕ್ಕಾಗಲ್ಲ. ಮೋದಿ, ಒಬಾಮಾ ಯಾರಿಂದಲೂ ನನ್ನಂತೆ ಪ್ರಚಾರ ಮಾಡೋಕೆ ಆಗಲ್ಲ. ಕಾರಣ ನಾನು ಕುಕ್ಕರ್, ಸೀರೆ ಕೊಟ್ಟು ಪ್ರಚಾರ ಮಾಡಲ್ಲ. […]

ಬರದ ಪರಿಸ್ಥಿತಿಯಲ್ಲೂ ಕೇಂದ್ರದಿಂದ ಮಲತಾಯಿ ಧೋರಣೆ: ಪ್ರಿಯಾಂಕ ಚತುರ್ವೇದಿ

Friday, March 30th, 2018
priyanka

ಮಂಗಳೂರು: ಕೇಂದ್ರ ಸರಕಾರವು ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಆಡಳಿತದಲ್ಲಿ ಇದೆ ಎಂಬ ಕಾರಣಕ್ಕಾಗಿಯೇ ಬರದಂತಹ ಪರಿಸ್ಥಿತಿಯಲ್ಲೂ ಮಲತಾಯಿ ಧೋರಣೆ ಅನುರಿಸಿದೆ ಎಂದು ಎಐಸಿಸಿ ವಕ್ತಾರೆ ಹಾಗೂ ಪಕ್ಷದ ಸಂವಹನ ವಿಭಾಗದ ಸಂಚಾಲಕಿ ಪ್ರಿಯಾಂಕ ಚತುರ್ವೇದಿ ಆರೋಪಿಸಿದ್ದಾರೆ. ಪಕ್ಷದ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯವು 2017ರಲ್ಲಿ ಹಿಂದೆಂದೂ ಕಂಡಿರದ ಬರವನ್ನು ಎದುರಿಸಬೇಕಾಯಿತು. ಈ ಸಂದರ್ಭ ಕೇಂದ್ರ ಸರಕಾರ ಒಂದಿಷ್ಟಾದರೂ ಕಾಳಜಿಯನ್ನು, ಕನಿಕರವನ್ನು ರಾಜ್ಯದ ಬಗ್ಗೆ ತೋರಿಸಿ ಬರ ಪರಿಹಾರ ವಿತರಣೆಯಲ್ಲಾದರೂ ಸಮಾನತೆಯನ್ನು ತೋರ್ಪಡಿಸಬಹುದಿತ್ತು ಎಂದರು. ಬಿಜೆಪಿ ತನ್ನ […]

ಮೋದಿ ಅವರ ‘ಮನ್ ಕೀ ಬಾತ್’ನಿಂದ ಚುನಾವಣೆ ಗೆಲ್ಲಲು ಸಾಧ್ಯವಿಲ್ಲ: ಐವನ್ ಡಿಸೋಜ

Tuesday, March 27th, 2018
ivan-desouza

ಮಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರ ‘ಮನ್ ಕೀ ಬಾತ್’ನಿಂದ ಚುನಾವಣೆ ಗೆಲ್ಲಲು ಸಾಧ್ಯವಿಲ್ಲ ಎಂಬುವುದನ್ನು ಬಿಜೆಪಿ ತಿಳಿದುಕೊಳ್ಳಬೇಕು ಎಂದು ವಿಧಾನ ಪರಿಷತ್ ಮುಖ್ಯ ಸಚೇತಕ ಐವನ್ ಡಿಸೋಜ ತಿಳಿಸಿದ್ದಾರೆ.ಮಂಗಳೂರಿನಲ್ಲಿ ಮಾಧ್ಯಮ ಗೋಷ್ಟಿಯಲ್ಲಿ ಮಾತನಾಡಿದ ಅವರು ಅಮಿತ್ ಶಾ ಅವರ ಕುವೆಂಪು ಸ್ಮಾರಕಕ್ಕೆ ಭೇಟಿ ನೀಡುವ ಮೊದಲು ಒಮ್ಮೆ ಯೋಚಿಸಬೇಕು ಎಂದು ಹೇಳಿದರು. ಬಿಜೆಪಿಯ ಸಿದ್ಧಾಂತಕ್ಕೂ ಕುವೆಂಪು ನಿಲುವಿಗೂ ಅಜಗಜಾಂತರ ವ್ಯತ್ಯಾಸವಿದೆ ಎಂದು ಹೇಳಿದರು. ಸದಾನಂದ ಗೌಡರು ಕಾಂಗ್ರೆಸ್ ಗೆ ಕೊನೆ ಚುನಾವಣೆ ಎಂದಿದ್ದಾರೆ. ಆದರೆ ಕಾಂಗ್ರೆಸ್ […]

ಸುರತ್ಕಲ್‌ನಲ್ಲಿ ರಾಹುಲ್ ಗಾಂಧಿ… ಮೋದಿ ವಿರುದ್ಧ ತೀವ್ರ ವಾಗ್ದಾಳಿ

Tuesday, March 20th, 2018
rahul-surathakal

ಮಂಗಳೂರು: ವಿಧಾನಸಭಾ ಚುನಾವಣೆ ಹೊಸ್ತಿಲಲ್ಲಿರುವ ಹಿನ್ನೆಲೆಯಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ರಾಜ್ಯ ಪ್ರವಾಸದಲ್ಲಿದ್ದು, ಇಂದು ಕರಾವಳಿಯ ಸುರತ್ಕಲ್‌ಗೆ ಭೇಟಿ ನೀಡಿದರು. ಇಲ್ಲಿ ನಡೆದ ಬೃಹತ್‌ ಕಾಂಗ್ರೆಸ್ ಸಮಾವೇಶದಲ್ಲಿ ಮಾತನಾಡಿದ ರಾಹುಲ್, ಪ್ರಧಾನಿ ಮೋದಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಕರ್ನಾಟಕ‌‌ ಬಸವಣ್ಣ, ನಾರಾಯಣ ಗುರುಗಳು ನಡೆದಾಡಿದ ನಾಡು. ಅವರ ತತ್ವಾದರ್ಶನಗಳನ್ನು ತಮ್ಮ ಭಾಷಣದಲ್ಲಿ ಪ್ರಯೋಗಿಸುವ ಮೋದಿ ಸುಳ್ಳು ಹೇಳುತ್ತಲೇ ಬರುತ್ತಾರೆ. ಬಸವಣ್ಣನ ನುಡಿದಂತೆ ನಡೆ ತತ್ವದಂತೆ ಮೋದಿಯವರೇ ನೀವು ನಡೆದುಕೊಳ್ಳಿ ಎಂದರು. ಪ್ರಧಾನಿಯಾಗುವ ಮುನ್ನ ಪ್ರತಿಯೊಬ್ಬರ […]

ಮೋದಿ ಆರೋಪಕ್ಕೆ ಮೊಯ್ಲಿ ಸಾಕ್ಷಿ ನೀಡಿದ್ದಾರೆ: ವಾಮನ್‌ ಆಚಾರ್ಯ

Friday, March 16th, 2018
vaman-acharya

ಬೆಂಗಳೂರು: ಕರ್ನಾಟಕ ಸರ್ಕಾರ ಪರ್ಸೆಂಟೇಜ್ ಸರ್ಕಾರ ಎಂದು ಪ್ರಧಾನಿ ನರೇಂದ್ರ ಮೋದಿಯವರು ಮಾಡಿರುವ ಆರೋಪಕ್ಕೆ ಕೇಂದ್ರದ ಮಾಜಿ ಸಚಿವ ಹಾಗೂ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ವೀರಪ್ಪ ಮೊಯ್ಲಿ ಟ್ವೀಟ್ ಮೂಲಕ ಸಾಕ್ಷಿ ಒದಗಿಸಿದ್ದಾರೆ ಎಂದು ಬಿಜೆಪಿ ವಕ್ತಾರ ಡಾ. ವಾಮನ್ ಆಚಾರ್ಯ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನೋಟು ಅಮಾನ್ಯೀಕರಣ ಆದ ತಕ್ಷಣವೇ ಲೋಕೋಪಯೋಗಿ ಇಲಾಖೆಯ ಇಂಜಿನಿಯರ್‌ಗಳಾದ ಚಿಕ್ಕರಾಯಪ್ಪ ಮತ್ತು ಜಯಚಂದ್ರ ಅವರ ಮನೆಯಲ್ಲಿ ಗರಿ ಗರಿ ನೋಟುಗಳು ಸಿಕ್ಕಾಗಲೇ ಪರ್ಸೆಂಟೇಜ್ ವ್ಯವಹಾರದ ಸಾಕ್ಷಿ ಸಿಕ್ಕಿತ್ತು. […]

ಕರ್ನಾಟಕದಲ್ಲಿ ಪ್ರಧಾನಿ ಮೋದಿ ಅಲೆ ಇಲ್ಲ: ಸಿದ್ದರಾಮಯ್ಯ

Monday, March 5th, 2018
narendra-modi

ಬೆಂಗಳೂರು: ರಾಜ್ಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಅಲೆ ಇಲ್ಲ ಹಾಗೂ ತ್ರಿಪುರಾ ಚುನಾವಣಾ ಫಲಿತಾಂಶ ಇಲ್ಲಿ ಪರಿಣಾಮ ಬೀರದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಒಂದು ವೇಳೆ ಕೇಸರಿ ಪಕ್ಷ ರಾಜ್ಯದ ಚುನಾವಣೆಯಲ್ಲಿ ಜಯಸಿದ್ದೇ ಆದರೆ, ಅಕ್ರಮ ಭೂ ಡಿನೋಟಿಫಿಕೇಷನ್ ಹಗರಣದಲ್ಲಿ ಜೈಲು ಶಿಕ್ಷೆ ಅನುಭವಿಸಿದ್ದ ಬಿ.ಎಸ್. ಯಡಿಯೂರಪ್ಪ ಅವರು ಸ್ಥಿರ ಮತ್ತು ಭ್ರಷ್ಟಾಚಾರ ಮುಕ್ತ ಸರ್ಕಾರ ನೀಡುವ ಬಗ್ಗೆ ಜನರಿಗೆ ಹೇಗೆ ಮನವರಿಕೆ ಮಾಡಿಕೊಡುತ್ತಾರೆ ಎಂಬ ಬಗ್ಗೆ ಬಿಜೆಪಿ ಚಿಂತಿಸಬೇಕಾಗಿದೆ ಎಂದು ಸಿಎಂ ಟ್ವಿಟ್ಟರ್‌‌ನಲ್ಲಿ […]

ಚುನಾವಣಾ ರಣತಂತ್ರ… ಸಿದ್ದರಾಮಯ್ಯ ತವರಲ್ಲಿ ಮೋದಿ ಯಾತ್ರೆಗೆ ಸಜ್ಜು

Saturday, February 10th, 2018
narendra-modi

ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ತವರು ಜಿಲ್ಲೆ ಮೈಸೂರಿನಲ್ಲಿ ಫೆ.19ರಂದು ಪ್ರಧಾನಿ ನರೇಂದ್ರ ಮೋದಿ ದಿನವಿಡೀ ಕಾಯ೯ಕ್ರಮಗಳಲ್ಲಿ ಭಾಗವಹಿಸುವ ಮೂಲಕ ಮೈಸೂರು ಭಾಗದಲ್ಲಿ ರಣತಂತ್ರ ರೂಪಿಸಲು ಸಜ್ಜಾಗಿದ್ದಾರೆ. ಅಂದು ಬೆಳಿಗ್ಗೆ ಮೊದಲಿಗೆ ನಗರದ ರೈಲ್ವೆ ನಿಲ್ದಾಣಕ್ಕೆ ಆಗಮಿಸಲಿರುವ ಅವರು ಜೋಡಿ ಹಳಿಗಳನ್ನು ಉದ್ಘಾಟಿಸಲಿದ್ದಾರೆ. ನಂತರ ಮೈಸೂರಿಂದ ಉತ್ತರ ಕರ್ನಾಟಕಕ್ಕೆ ನೇರ ಸಂಪರ್ಕ ಕಲ್ಪಿಸುವ ಹಾಗೂ ಸಂಚಾರಕ್ಕೆ ನೆರವಾಗುವಂತ ರೈಲಿಗೆ ಚಾಲನೆ ನೀಡಲಿದ್ದಾರೆ. ಆ ನಂತರ ಕೆ.ಆರ್.ಎಸ್ ರಸ್ತೆಯಲ್ಲಿ 35 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿರುವ ಇಎಸ್‍ಐ ಆಸ್ಪತ್ರೆಯನ್ನು ಉದ್ಘಾಟಿಸಲಿದ್ದಾರೆ. […]

ಸಂಸತ್‌‌ನಲ್ಲಿ ಸಿದ್ದರಾಮಯ್ಯ ಹೆಸರು ಉಲ್ಲೇಖ… ಮೋದಿಗೆ ಟ್ಟಿಟ್ಟರ್‌‌ನಲ್ಲಿ ಸಿಎಂ ಟಾಂಗ್‌

Thursday, February 8th, 2018
narendra-modi

ಬೆಂಗಳೂರು: ಲೋಕಸಭೆಯಲ್ಲಿ ನಡೆಯುತ್ತಿರುವ ಬಜೆಟ್‌‌ ಅಧಿವೇಶನದ ವೇಳೆ ಭಾಷಣ ಮಾಡುತ್ತಿದ್ದ ವೇಳೆ ಪ್ರಧಾನಿ ನರೇಂದ್ರ ಮೋದಿ ಕರ್ನಾಟಕದ ಸಿಎಂ ಸಿದ್ದರಾಮಯ್ಯ ಅವರ ಹೆಸರು ಉಲ್ಲೇಖಿಸಿ ಮಾತನಾಡಿದ್ದರು. ಇದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಟ್ವಿಟ್ಟರ್‌ನಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ನೀವು ಸಂಸತ್‌ನಲ್ಲಿ ನನ್ನನ್ನು ಮತ್ತು ಬಸವಣ್ಣನವರನ್ನು ನೆನಪಿಸಿಕೊಂಡಿದ್ದರಿಂದ ಸಂತಸವಾಗಿದೆ. ಉಳ್ಳವರು ಶಿವಾಲಯ ಮಾಡುವರು, ನಾನೇನು ಮಾಡಲಿ ಬಡವನಯ್ಯಾ ಎಂದು ಬಸವಣ್ಣ ಹೇಳಿದ್ದರು. ಬಸವಣ್ಣನವರ ತತ್ವಗಳನ್ನು ನೀವು ಅನುಸರಿಸಿದರೆ ಕನ್ನಡಿಗರು ನಿಮಗೆ ಧನ್ಯವಾದ ಹೇಳುತ್ತಾರೆ ಎಂದು ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ. ಅಟಲ್ ಬಿಹಾರಿ […]