Blog Archive

ಕರಾವಳಿಯಲ್ಲಿ ಮಳೆ: ಬೆಳ್ತಂಗಡಿಯಲ್ಲಿ ಸಿಡಿಲು ಬಡಿದು ಐವರಿಗೆ ಗಾಯ

Thursday, March 15th, 2018
mangaluru

ಮಂಗಳೂರು: ಬಿಸಿಲ ಬೇಗೆ ಮತ್ತು ಹೆಚ್ಚಿದ ಉಷ್ಣಾಂಶದಿಂದ ಕಾದು ಕೆಂಡವಾಗಿದ್ದ ಇಳೆಗೆ ನಿನ್ನೆ ಸಂಜೆ ಮಳೆರಾಯ ತಂಪೆರೆದಿದ್ದಾನೆ. ಕಳೆದ ಕೆಲವು ತಿಂಗಳಿನಿಂದ 35 ಡಿಗ್ರಿವರೆಗೂ ಏರಿದ ಉಷ್ಣಾಂಶದಿಂದಾಗಿ ಬೇಸತ್ತಿದ್ದ ಜನತೆಗೆ ಮಳೆಯ ಸಿಂಚನ ತಂಪಿನ ಸೋಪಾನವಾಯಿತು. ಮಧ್ಯಾಹ್ನದಿಂದಲೇ ಮೋಡ ಕವಿದ ವಾತಾವರಣವಿದ್ದು, ಮೂರು ಗಂಟೆಯ ಬಳಿಕ ಮಳೆ ಸುರಿಯಲಾರಂಭಿಸಿತು. ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ಉತ್ತಮ ಮಳೆ ಸುರಿಯಿತು. ಬಳಿಕ ಸಂಜೆಯವರೆಗೂ ಹನಿ ಮಳೆ ಮುಂದುವರಿದಿತ್ತು. ಶ್ರೀಲಂಕಾ ಸಮೀಪದಲ್ಲಿ ಆಳ ಸಮುದ್ರದಲ್ಲಿ ಉಂಟಾದ ವಾಯುಭಾರ ಕುಸಿತದಿಂದಾಗಿ […]

ಕರಾವಳಿಯಲ್ಲಿ ಧಾರಾಕಾರ ಮಳೆ… ಸುಳ್ಯ, ಬೆಳ್ತಂಗಡಿಯಲ್ಲಿ ತಂಪೆರೆದ ವರುಣ

Thursday, March 15th, 2018
karavali

ಮಂಗಳೂರು: ಬೇಸಿಗೆಯ ಬಿಸಿ ಆರಂಭವಾಗುತ್ತಿರುವಂತೆಯೇ ಕರಾವಳಿಯಲ್ಲಿ ವರುಣ ಪ್ರತ್ಯಕ್ಷನಾಗಿದ್ದಾನೆ. ಇಂದು ಅಪರಾಹ್ನ ಪುತ್ತೂರು, ಸುಳ್ಯ, ಬೆಳ್ತಂಗಡಿ ಸೇರಿದಂತೆ ಕರಾವಳಿಯ ಹಲವು ಭಾಗಗಳಲ್ಲಿ ಧಾರಾಕಾರ ಮಳೆ ಸುರಿದಿದೆ. ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ಒತ್ತಡದಿಂದ ವಾಯುಭಾರ ಕುಸಿತಗೊಂಡಿದ್ದು, ಈ ಹಿನ್ನೆಲೆಯಲ್ಲಿ ತಮಿಳುನಾಡು, ಕೇರಳ ಮತ್ತು ಕರ್ನಾಟಕದ ಕರಾವಳಿ ಭಾಗಗಳಲ್ಲಿ ಮಳೆ ಸುರಿಯುತ್ತಿದೆ.

ಪಶ್ಚಿಮವಾಹಿನಿ ಯೋಜನೆ:1,394 ಕೋ.ರೂ.ಗಳ ಸಮಗ್ರ ವರದಿ ಸಿದ್ಧ

Tuesday, March 13th, 2018
ivan-desouza

ಮಂಗಳೂರು: ಕರಾವಳಿಯ ಮೂರು ಜಿಲ್ಲೆಗಳಿಗೆ ಕುಡಿಯುವ ನೀರು ಒದಗಿಸುವ ಪಶ್ಚಿಮವಾಹಿನಿ ಯೋಜನೆಗೆ 1,394 ಕೋಟಿ ರೂ.ಗಳ ಸಮಗ್ರ ವರದಿ ತಯಾರಿಸಲಾಗಿದೆ. ಮುಂದಿನ ಮೂರು ವರ್ಷಗಳಲ್ಲಿ ಮೂರು ಹಂತಗಳಲ್ಲಿ ಯೋಜನೆ ಕಾರ್ಯಗತಗೊಳ್ಳುವ ನಿರೀಕ್ಷೆಯಿದೆ ಎಂದು ವಿಧಾನ ಪರಿಷತ್‌ ಮುಖ್ಯ ಸಚೇತಕ ಐವನ್‌ ಡಿ’ಸೋಜಾ ತಿಳಿಸಿದರು. ವಿಧಾನ ಪರಿಷತ್‌ನಲ್ಲಿ ತಾನು ಕೇಳಿದ ಪ್ರಶ್ನೆಗೆ ಕಾನೂನು, ಸಂಸದೀಯ ವ್ಯವಹಾರಗಳ, ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಸಚಿವ ಟಿ.ಬಿ. ಜಯಚಂದ್ರ ಅವರು ನೀಡಿದ ಉತ್ತರದ ಕುರಿತು ಐವನ್‌ ಡಿ’ಸೋಜಾ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ […]

ರಾಹುಲ್ ಗಾಂಧಿ ಕರಾವಳಿ ಪ್ರವಾಸಕ್ಕೆ ಡೇಟ್ ಫಿಕ್ಸ್‌!

Tuesday, March 13th, 2018
Rahul-Gandhi

ಮಂಗಳೂರು: ಈಗಾಗಲೇ ಹೈದರಾಬಾದ್ ಕರ್ನಾಟಕ, ಮುಂಬೈ ಕರ್ನಾಟಕದಲ್ಲಿ ಯಶಸ್ವಿ ಪ್ರವಾಸ ಕೈಗೊಂಡಿದ್ದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಇದೀಗ ರಾಜ್ಯ ಕರಾವಳಿಯಲ್ಲೂ ಪ್ರಚಾರ ಕೈಗೊಳ್ಳುವ ದಿನ ನಿಗದಿಯಾಗಿದೆ. ಮಾರ್ಚ್‌ 20 ಹಾಗೂ 21ರಂದು ರಾಹುಲ್ ಗಾಂಧಿ ದಕ್ಷಿಣ ಕನ್ನಡ, ಉಡುಪಿ ಹಾಗೂ ಕಾರವಾರದಲ್ಲಿ ಪ್ರಚಾರ ನಡೆಸಲಿದ್ದಾರೆ. ಮಂಗಳೂರಿನ ನೆಹರೂ ಮೈದಾನದಲ್ಲಿ ಕಾಂಗ್ರೆಸ್ ಸಮಾವೇಶ ನಡೆಸಲು ಉದ್ದೇಶಿಸಿದೆ. ಪಕ್ಷದ ಪ್ರಮುಖರು ಈಗಾಗಲೇ ಸ್ಥಳ ಪರಿಶೀಲನೆ ನಡೆಸಿದ್ದಾರೆ. ಮಾರ್ಚ್ 20ರಂದು ಕರಾವಳಿ ಜಿಲ್ಲೆಗೆ ಆಗಮಿಸಿ ರಾಹುಲ್ ಗಾಂಧಿ ಮಂಗಳೂರಿನಲ್ಲಿಯೇ […]

ಅತೃಪ್ತ ಕಾಂಗ್ರೆಸ್ಸಿಗರಿಂದ ಸಚಿವ ಖಾದರ್ ಭೇಟಿ

Friday, March 9th, 2018
u-t-kader

ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆಯ ಮೇಯರ್ ಸ್ಥಾನವನ್ನು ಮುಸ್ಲಿಮರಿಗೆ ನೀಡದ ಹಿನ್ನೆಲೆಯಲ್ಲಿ ಅತೃಪ್ತಗೊಂಡಿರುವ ಕಾಂಗ್ರೆಸ್ಸಿನ ಮುಸ್ಲಿಮರ ನಿಯೋಗ ಶುಕ್ರವಾರ ಬೆಳಗ್ಗೆ ಸರ್ಕ್ಯೂಟ್ ಹೌಸ್‌ನಲ್ಲಿ ಸಚಿವ ಖಾದರ್ ರನ್ನು ಭೇಟಿಯಾಗಿ ಅಸಮಾಧಾನ ವ್ಯಕ್ತಪಡಿಸಿದರು. ಈ ಸಂದರ್ಭ ಸಚಿವ ರಮಾನಾಥ ರೈ ಅವರ ಕಾರ್ಯವೈಖರಿಯ ಬಗ್ಗೆ ತೀವ್ರ ಆಕ್ಷೇಪ ಸಲ್ಲಿಸಿದ ಕಾಂಗ್ರೆಸ್ಸಿನ ಮುಸ್ಲಿಮರ ನಿಯೋಗ ‘ತಾವು ನ್ಯಾಯಯುತವಾಗಿ ಬೇಡಿಕೆ ಸಲ್ಲಿಸಿದ್ದೆವು. ಒಗ್ಗಟ್ಟು ಮೂಡಿಸುವುದಕ್ಕಾಗಿ ಸಭೆ ನಡೆಸಿದೆವು. ಇದನ್ನೇ ತಪ್ಪಾಗಿ ಅರ್ಥೈಸಿಕೊಂಡ ಸಚಿವ ರೈ ತಮ್ಮನ್ನು ಮೂಲಭೂತವಾದಿ ಎನ್ನುತ್ತಿದ್ದಾರೆ. ಕಾಂಗ್ರೆಸ್ಸಿಗರೇ ಅಲ್ಲ […]

ಸಾಮರಸ್ಯಕ್ಕಾಗಿ ಶಾಸಕ ಮೊಯ್ದೀನ್ ಬಾವಾ 10 ದಿನಗಳ ಪಾದಯಾತ್ರೆ

Monday, March 5th, 2018
mohiuddin-bava

ಮಂಗಳೂರು: ರಾಜ್ಯ ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆ ರಾಜಕೀಯ ಪಕ್ಷಗಳ ಪಾದಯಾತ್ರೆ ಬಿರುಸಾಗಿದೆ. ಒಂದೆಡೆ ಬಿಜೆಪಿ ಬೆಂಗಳೂರು ಮತ್ತು ಕರಾವಳಿಯಲ್ಲಿ ಪಾದಯಾತ್ರೆ ನಡೆಸುತ್ತಿದ್ದರೆ ಇತ್ತ ಕಾಂಗ್ರೆಸ್ ನಾಯಕರು ಕೂಡ ಮನೆ ಮನೆ ಸುತ್ತಲು ಮುಂದಾಗಿದ್ದಾರೆ. ಹೀಗೆ ಕಾಂಗ್ರೆಸ್ ಕಡೆಯಿಂದ ಪಾದಯಾತ್ರೆಗೆ ಹೊರಟಿರುವವರು ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಮೊಯ್ದೀನ್ ಬಾವಾ. ಶಾಸಕ ಬಾವಾರ ನಡೆ-ಸಾಮರಸ್ಯದ ಕಡೆ’ ಹೆಸರಿನಲ್ಲಿ ಅವರು ಪಾದಯಾತ್ರೆ ನಡೆಸಲು ನಿರ್ಧರಿಸಿದ್ದಾರೆ. ಇದೇ ಬರುವ ಮಾರ್ಚ್ 7 ರಿಂದ 10 ದಿನಗಳ ಸೌಹಾರ್ದ ನಡಿಗೆಯನ್ನು ಅವರು […]

ಕರಾವಳಿ ಸ್ಥಿತಿ ಬದಲಾಗಬೇಕಾದರೆ ಸಿಎಂ ಬದಲಾಗಬೇಕು: ಪ್ರತಾಪ್‌ ಸಿಂಹ ವಾಗ್ದಾಳಿ

Monday, March 5th, 2018
pratap-simha

ಪುತ್ತೂರು: ಮತ್ತೆ ಮಂಗಳೂರು ಚಲೋ ಅಗತ್ಯವಿದೆ. ಪ್ರಸ್ತುತ ದಿನಗಳಲ್ಲಿ ಕರಾವಳಿ ಜನರು ಆತಂಕದಿಂದ ನೋಡುವ ಸ್ಥಿತಿ ಬದಲಾಗಬೇಕಾದರೆ ಸಿಎಂ ಬದಲಾಗಬೇಕೆಂದು ಸಂಸದ ಪ್ರತಾಪ್ ಸಿಂಹ ವಾಗ್ದಾಳಿ ನಡೆಸಿದ್ದಾರೆ. ಮಂಗಳೂರು ಚಲೋದ ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಇಂದು ಮೈಸೂರಿನಲ್ಲಿ ಮಹಾರಾಜರ ನೆನಪಿನ‌ ಬದಲು ಟಿಪ್ಪು ಸಂತತಿ ನೆನಪಾಗುವ ಸ್ಥಿತಿ ನಿರ್ಮಾಣವಾಗಿದೆ. ಹಿಂದೂಗಳ ಹಬ್ಬವನ್ನು ಹತ್ತಿಕ್ಕುವ ಕೆಲಸ ಸಿದ್ದರಾಮಯ್ಯ ಆಡಳಿತದಲ್ಲಿ ನಡೆದಿದೆ. ಜನರು ಎಚ್ಚೆತ್ತುಕೊಳ್ಳದಿದ್ದಲ್ಲಿ ಜಿಹಾದಿ ಮನಸ್ಥಿತಿ ಕಪಿಮುಷ್ಠಿಯೊಳಗೆ ಕರಾವಳಿ ಹೋಗಬಹುದು ಎಂದರು. ತ್ರಿಪುರಾ, ಮೇಘಾಲಯ, ನಾಗಾಲ್ಯಾಂಡ್‌ನಲ್ಲಿ […]

ಅನಿವಾಸಿ ಕರಾವಳಿಗರನ್ನು ದೂಷಿಸಿಲ್ಲ: ಸಚಿವ ಖಾದರ್ ಸ್ಪಷ್ಟನೆ

Friday, March 2nd, 2018
u-t-kader

ಮಂಗಳೂರು: ಅನಿವಾಸಿ ಕರಾವಳಿಗರನ್ನು ದೂಷಿಸಿಲ್ಲ ಎಂದು ಆಹಾರ ಸಚಿವ ಯು. ಟಿ. ಖಾದರ್ ಸ್ಪಷ್ಟಪಡಿಸಿದ್ದಾರೆ. ಸುದ್ದಿಗೋಷ್ಟಿಯಲ್ಲಿ ಈ ಬಗ್ಗೆ ಮಾತನಾಡಿದ ಅವರು, ಪುತ್ತೂರಿನಲ್ಲಿ ನಡೆದ ಧಾರ್ಮಿಕ ಸಮಾರಂಭದಲ್ಲಿ ನನ್ನ ವಿರುದ್ಧ ಪಿತೂರಿ ನಡೆಸಿ ಈಗ ವಿದೇಶದಲ್ಲಿ ಇರುವವರಿಗೆ ನಾನು ಬೈದಿದ್ದೇನೆ. ಅದನ್ನು ಹೊರತುಪಡಿಸಿದರೆ ಬೇರೆ ಯಾರನ್ನು ಉದ್ದೇಶಿ ನಾನು ದೂಷಣೆ ಮಾಡಿಲ್ಲ ಎಂದು ತಿಳಿಸಿದರು. ಇತ್ತೀಚೆಗೆ ಇಲ್ಯಾಸ್ ಕೊಲೆ ಪ್ರಕರಣದ ಆರೋಪಿಗಳು ನನ್ನ ಜೊತೆಗೆ ಇರುವ ಫೋಟೋ ಜಾಲತಾಣಗಳಲ್ಲಿ ವೈರಲ್ ಆಗಿರುವುದು ನಿಜ. ಆದರೆ, ಪ್ರಕರಣಕ್ಕೆ ಮೊದಲು […]

ಕರಾವಳಿ ಕರ್ನಾಟಕದ ಪರಿಸರ ಪ್ರವಾಸೋದ್ಯಮಕ್ಕೆ ಹೆಚ್ಚಿನ ಪ್ರಚಾರ ಅಗತ್ಯ: ಸಂಧ್ಯಾ ರಾವ್

Thursday, March 1st, 2018
alwas-college

ಮೂಡುಬಿದಿರ: ಉತ್ತರ ಕನ್ನಡ, ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಪರಿಸರ ಪ್ರವಾಸೋದ್ಯಮದ ಪ್ರಗತಿಗೆ ವಿಫುಲ ಅವಕಾಶಗಳಿವೆ. ಆದರೆ ಈ ಅವಕಾಶಗಳಿಗೆ ಇನ್ನೂ ಹೆಚ್ಚಿನ ಪ್ರಚಾರ ಬೇಕಾಗಿದೆ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಕಾರ್ಯ ಪ್ರವೃತ್ತವಾದರೆ ಸರ್ಕಾರಕ್ಕೆ ಹೇರಳ ಆದಾಯ ಬರುವುದರ ಜೊತೆಗೆ ಸ್ಥಳೀಯರಿಗೆ ಉದ್ಯೋಗಾವಕಾಶಗಳು ಸೃಷ್ಟಿಯಾಗುತ್ತದೆ ಎಂದು ನಿಟ್ಟೆ ಉದ್ಯಮಾಡಳಿತ ಸಂಸ್ಥೆಯ ಪ್ರಾಧ್ಯಾಪಕಿ ಡಾ.ಕೆ.ಪಿ.ಸಂಧ್ಯಾ ರಾವ್ ಹೇಳಿದರು. ಇಲ್ಲಿನ ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ಎಂಬಿಎ ವಿಭಾಗದಲ್ಲಿ ಅವರು ಬುಧವಾರ ವಿಶೇಷ ಉಪನ್ಯಾಸ ನೀಡಿದರು. ಪರಿಸರ ಪ್ರವಾಸದಲ್ಲಿ ಆಸಕ್ತಿಯುಳ್ಳವರು […]

ಮಂಗಳೂರಿನಲ್ಲಿ ತರಬೇತು ಗೊಳ್ಳುತಿದ್ದಾರೆ ಶೂಟಿಂಗ್ ಕಲಿಗಳು

Wednesday, February 28th, 2018
shooting

ಮಂಗಳೂರು: ರೈಫಲ್ ಶೂಟಿಂಗ್ ಸ್ಪರ್ಧೆಯಲ್ಲಿ ಭಾಗವಹಿಸುವ ಬಯಕೆಗೆ ಮಂಗಳೂರಿನಲ್ಲಿ ವೇದಿಕೆ ಕಲ್ಪಿಸಲಾಗಿದೆ. ಕರಾವಳಿ ಭಾಗದ ಮೊಟ್ಟಮೊದಲ ಶೂಟಿಂಗ್ ಸ್ಪೋರ್ಟ್ಸ್ ರೈಫಲ್ ಕ್ಲಬ್ ಮಂಗಳೂರಿನಲ್ಲಿ ಸದ್ದಿಲ್ಲದೇ ಕಾರ್ಯಚರಿಸುತ್ತಿದೆ. ಇಲ್ಲಿ 10 ಮೀಟರ್ ಏರ್ ರೈಫಲ್ , ಹಾಗು ಏರ್ ಪಿಸ್ಟಲ್ ಟ್ರೈನಿಂಗ್ ನೀಡಲಾಗುತ್ತಿದೆ. ಬೆಂಗಳೂರಿನಲ್ಲಿಯೇ ಕೇಂದ್ರಿಕೃತವಾಗಿರುವ 3 ರೈಫಲ್ ತರಬೇತಿ ಕೇಂದ್ರಗಳನ್ನು ಹೊರತುಪಡಿಸಿದರೆ ಮಂಗಳೂರಿನಲ್ಲಿ ಸ್ಥಾಪಿಸಲಾಗಿರುವ ಮಂಗಳೂರು ರೈಫಲ್ ಕ್ಲಬ್ ರಾಜ್ಯದ ನಾಲ್ಕನೇ ತರಬೇತಿ ಕೇಂದ್ರವಾಗಿದೆ. ಒಲಂಪಿಕ್ಸ್ ನಲ್ಲಿ 10 ಮೀಟರ್ ಏರ್ ರೈಫಲ್ ಶೂಟಿಂಗ್ ಸ್ಪರ್ಧೆಯಲ್ಲಿ ನಲ್ಲಿ […]