Blog Archive

ಆಳ್ವಾಸ್‌ನಲ್ಲಿ ದೀಪಾವಳಿ ಸಾಂಸ್ಕೃತಿಕ ಸಂಭ್ರಮ

Saturday, November 11th, 2017
alvas

ಮಂಗಳೂರು: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಶ್ರಯದಲ್ಲಿ ಪುತ್ತಿಗೆ ವಿವೇಕಾನಂದ ನಗರದ ಶ್ರೀಮತಿ ವನಜಾಕ್ಷಿ ಕೆ.ಶ್ರೀಪತಿ ಭಟ್ ವೇದಿಕೆಯಲ್ಲಿ ಶುಕ್ರವಾರ ಸಾಯಂಕಾಲ ‘ಆಳ್ವಾಸ್ ದೀಪಾವಳಿ 2017 ಸಾಂಸ್ಕೃತಿಕ ವೈಭವ ನಡೆಯಿತು. ಶ್ರೀ ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾತೀರ್ಥ ಪ್ರಸನ್ನ ಸ್ವಾಮೀಜಿ ಆಶೀರ್ವಚನ ನೀಡಿದರು. ಆಳ್ವಾಸ್ ಮುಖ್ಯಸ್ಥ ಡಾ.ಎಂ ಮೋಹನ ಆಳ್ವ, ತುಳುನಾಡಿನ ಸಾಂಪ್ರಾದಾಯಿಕ ತುಳಸೀ ಪೂಜೆ, ಕೃಷಿ ಪರಿಕರಗಳಿಗೆ ಪೂಜೆ, ಸರಸ್ವತಿ ಪೂಜೆ, ಲಕ್ಷ್ಮೀ ಪೂಜೆ, ಗೋಪೂಜೆ ನೆರವೇರಿಸಿದರು. ಕದ್ರಿ ನವನೀತ ಶೆಟ್ಟಿ ಬಲೀಂದ್ರ ಪೂಜೆ ಮಹತ್ವವನ್ನು ತಿಳಿಸಿದರು. ಚೌಟರ […]

ರಾಜ್ಯಮಟ್ಟದ ಕುಸ್ತಿ ಪಂದ್ಯಾಟದಲ್ಲಿ ಆಳ್ವಾಸ್ ಬಾಲಕಿಯರಿಗೆ ಪ್ರಶಸ್ತಿ

Tuesday, November 7th, 2017
alvas

ಮಂಗಳೂರು: ಪದವಿ ಪೂರ್ವ ಶಿಕ್ಷಣ ಇಲಾಖೆ, ಬೆಳಗಾವಿ ಹಾಗೂ ಅರವಿಂದ ಪ.ಪೂ. ಕಾಲೇಜು ಕುಣಿಗಲ್ ಇವರ ಆಶ್ರಯದಲ್ಲಿ ರಾಜ್ಯಮಟ್ಟದಲ್ಲಿ ನಡೆದ ಕುಸ್ತಿ ಪಂದ್ಯಾಟದಲ್ಲಿ ಬಾಲಕಿಯರ 8 ವಿಭಾಗದಲ್ಲಿ ನಡೆದ ಸ್ಪರ್ಧೆಯಲ್ಲಿ ಆಳ್ವಾಸ್ 5 ವಿಭಾಗದಲ್ಲಿ ಚಿನ್ನದ ಪದಕ ಮತ್ತು 1 ಬೆಳ್ಳಿ ಪದಕ ಮತ್ತು 2 ವಿಭಾಗದಲ್ಲಿ ಕಂಚಿನ ಪದಕಗಳನ್ನು ಪಡೆದು ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ. ಪದಕ ವಿಜೇತರು: ಮಮತಾ ಕೇಳೋಜಿ( 44 ಕೆ.ಜಿ ವಿಭಾಗ) ಪ್ರಥಮ, ಅಂಕಿತ ಹೆಚ್. (59 ಕೆ.ಜಿ ವಿಭಾಗ) ಪ್ರಥಮ, ತುಷಾರ ಎ.(63 ಕೆ.ಜಿ ವಿಭಾಗ) ಪ್ರಥಮ ,ಡೆಲ್ಫಿ ವರ್ಗೀಸ್( 67 ಕೆ.ಜಿ ವಿಭಾಗ) […]

ಜಿಲ್ಲಾ ಮಟ್ಟದ ಪ.ಪೂ ಕಾಲೇಜುಗಳ ಬಾಸ್ಕೆಟ್‌ಬಾಲ್ ಪಂದ್ಯಾಟ, ಆಳ್ವಾಸ್ ಬಾಲಕಿಯರಿಗೆ ಪ್ರಶಸ್ತಿ

Tuesday, November 7th, 2017
alvas

ಮೂಡುಬಿದಿರೆ: ಪದವಿಪೂರ್ವ ಶಿಕ್ಷಣ ಇಲಾಖೆ ಮಂಗಳೂರು ಮತ್ತು ಬೆಥನಿ ಪದವಿಪೂರ್ವ ಕಾಲೇಜು ನೆಲ್ಯಾಡಿ ಇವರ ಸಂಯುಕ್ತ ಆಶ್ರಯದಲ್ಲಿ ನೆಲ್ಯಾಡಿಯಲ್ಲಿ ಬಡೆದ ಜಿಲ್ಲಾ ಮಟ್ಟದ ಬಾಸ್ಕೆಟ್‌ಬಾಲ್ ಪಂದ್ಯಾಟದಲ್ಲಿ ಆಳ್ವಾಸ್ ಬಾಕಿಯರ ತಂಡವು ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ. ಫೈನಲ್‌ನಲ್ಲಿ ಆಳ್ವಾಸ್ ಬಾಲಕಿಯರ ತಂಡವು ಸೈಂಟ್ ಅಲೋಶಿಯಸ್ ಪ.ಪೂ. ಕಾಲೇಜು ತಂಡವನ್ನು ೨೮-೫ ಅಂಕಗಳ ಅಂತರದಿಂದ ಸೋಲಿಸಿ ಪ್ರಶಸ್ತಿಯನ್ನು ಪಡೆಯಿತು. ರಾಜ್ಯ ಮಟ್ಟದ ಪಂದ್ಯಾಟವು ಚಿಕ್ಕಬಳ್ಳಾಪುರದಲ್ಲಿ ನಡೆಯಲಿದೆ.

ಆಳ್ವಾಸ್‌ನಲ್ಲಿ ಸಾಹಿತ್ಯ ಬೆರಗು, ಬೆಡಗು: ಉಪನ್ಯಾಸ

Wednesday, November 1st, 2017
alvas

ಮೂಡುಬಿದಿರೆ: ಭಾಷೆಯಿಂದ ಕೇವಲ ಸಂವಹನ ನಡೆಯುವುದಲ್ಲ. ಅದು ನಮ್ಮ ಯೋಚನಾಕ್ರಮವನ್ನು ಬದಲಾಯಿಸುತ್ತದೆ. ಸಂಬಂಧಗಳನ್ನು ಬೆಸೆಯುತ್ತದೆ. ಕಲ್ಪನಾ ಶಕ್ತಿ ಹೆಚ್ಚಿಸುವ ಸಾಹಿತ್ಯ ಆತ್ಮ ಗೌರವ, ಆತ್ಮ ವಿಶ್ವಾಸವನ್ನು ವೃದ್ಧಿಸುವಂತೆ ಮಾಡುತ್ತದೆ. ಮೌಲ್ಯಗಳನ್ನು ನಮ್ಮೊಳಗೆ ಜಾಗೃತಿಗೊಳಿಸುವ ಸಾಹಿತ್ಯ ವ್ಯಕ್ತಿತ್ವವನ್ನು ಬೆಳಗುತ್ತದೆ. ಉತ್ತಮ ಬದುಕಿಗೆ ಬೇಕಾದ ಬಹುರೂಪಿ ದಾರಿಯನ್ನು ತೋರಿಸುವ ಸಾಮರ್ಥ್ಯ ಸಾಹಿತ್ಯಕ್ಕಿದೆ ಎಂದು ವಿಮರ್ಶಕ ಡಾ.ವರದರಾಜ ಚಂದ್ರಗಿರಿ ಅಭಿಪ್ರಾಯಪಟ್ಟರು. ಆಳ್ವಾಸ್ ಪದವಿಪೂರ್ವ ಕಾಲೇಜಿನ ಸಾಹಿತ್ಯ ಸಂಘದ ಆಶ್ರಯದಲ್ಲಿ ಮಂಗಳವಾರ ವಿದ್ಯಾಗಿರಿಯ ಡಾ.ವಿ.ಎಸ್ ಆಚಾರ್ಯ ಸಭಾಭವನದಲ್ಲಿ ನಡೆದ ‘ಸಾಹಿತ್ಯ ಬೆರಗು, ಬೆಡಗು’ […]

ತಾಲೂಕು ಮಟ್ಟದ ಕಬಡ್ಡಿ ಪಂದ್ಯಾಟ ಆಳ್ವಾಸ್ ಪಿಯು ಕಾಲೇಜಿಗೆ ಅವಳಿ ಪ್ರಶಸ್ತಿ

Tuesday, October 31st, 2017
alvas

ಮೂಡುಬಿದಿರೆ: ಪರಿಜ್ಞಾನ ಪದವಿ ಪೂರ್ವ ಕಾಲೇಜು, ಸೋಮೇಶ್ವರದಲ್ಲಿ ನಡೆದ ತಾಲೂಕು ಮಟ್ಟದ ಪದವಿಪೂರ್ವ ಕಾಲೇಜುಗಳ ಕಬಡ್ಡಿ ಪಂದ್ಯಾಟದಲ್ಲಿ ಮೂಡುಬಿದಿರೆ ಆಳ್ವಾಸ್ ಪದವಿಪೂರ್ವ ಕಾಲೇಜಿನ ಬಾಲಕರ ಮತ್ತು ಬಾಲಕಿಯರ ತಂಡ ಪ್ರಥಮ ಸ್ಥಾನವನ್ನು ಪಡೆದುಕೊಂಡಿದೆ. ಫೈನಲ್ ಪಂದ್ಯದಲ್ಲಿ ಆಳ್ವಾಸ್ ಬಾಲಕರ ತಂಡ ಪರಿಜ್ಞಾನ ಪಿ.ಯು. ಕಾಲೇಜು, ಸೋಮೇಶ್ವರ ತಂಡವನ್ನು ಸೋಲಿಸಿ ಪ್ರಶಸ್ತಿಯನ್ನು ತನ್ನ ಮುಡಿಗೇರಿಸಿಕೊಂಡಿತು. ಆಳ್ವಾಸ್ ಬಾಲಕಿಯರ ತಂಡ, ಪರಿಜ್ಞಾನ ಪದವಿಪೂರ್ವ ಕಾಲೇಜನ್ನು ಸೋಲಿಸಿ ಪ್ರಶಸ್ತಿಯನ್ನು ಪಡೆದುಕೊಂಡಿತು.

ಅಥ್ಲೆಟಿಕ್ಸ್ ಕ್ರೀಡಾಕೂಟ, ಆಳ್ವಾಸ್ ಪ್ರೌಢಶಾಲೆಗೆ ಸಮಗ್ರ ಪ್ರಶಸ್ತಿ

Saturday, October 21st, 2017
alvas

ಮೂಡುಬಿದಿರೆ: ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಬೆಳಗಾವಿ, ಉಪನಿರ್ದೇಶಕರ ಕಾರ್ಯಾಲಯ, ಸಾರ್ವಜನಿಕ ಶಿಕ್ಷಣ ಇಲಾಖೆ, ಬೆಳಗಾವಿ ಇವರ ವತಿಯಿಂದ ಅಕ್ಟೋಬರ್ 16 ರಿಂದ 18ರವರೆಗೆ ಬೆಳಗಾವಿ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಕರ್ನಾಟಕ ರಾಜ್ಯಮಟ್ಟದ 17 ವಯೋಮಿತಿಯ ಪ್ರೌಢಶಾಲಾ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ದಕ್ಷಿಣ ಕನ್ನಡವನ್ನು ಪ್ರತಿನಿಧಿಸಿದ ಆಳ್ವಾಸ್ ಪ್ರೌಢಶಾಲೆ ಮೂಡುಬಿದಿರೆ ವಿದ್ಯಾರ್ಥಿಗಳು ಒಟ್ಟು 17 ಚಿನ್ನ, 04 ಬೆಳ್ಳಿ ಹಾಗೂ 08 ಕಂಚಿನ ಪದಕಗಳನ್ನು ಪಡೆದು ಒಟ್ಟು 29 ಪದಕವನ್ನು ತನ್ನದಾಗಿಸಿಕೊಂಡು 4 ನೂತನ ಕೂಟ ದಾಖಲೆಗಳನ್ನು ಮಾಡಿರುತ್ತಾರೆ. ಹೊಸ […]

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದಲ್ಲಿ ಕೇಂಬ್ರಿಡ್ಜ್ ಇಂಗ್ಲೀಷ್ ಪರೀಕ್ಷಾ ಕೇಂದ್ರ

Monday, October 9th, 2017
CAMBRIDGE ENGLISH CENTRE

ಮೂಡಬಿದಿರೆ: ಯು.ಕೆ.ಯ ಕೇಂಬ್ರಿಡ್ಜ್ ಇಂಗ್ಲೀಷ್ ಅಸೆಸ್‍ಮೆಂಟ್ ಸಂಸ್ಥೆ ಮೂಡಬಿದಿರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದಲ್ಲಿ ಕೇಂಬ್ರಿಡ್ಜ್ ಇಂಗ್ಲೀಷ್ ಪರೀಕ್ಷಾ ಕೇಂದ್ರವನ್ನು ಪ್ರಾರಂಬಿಸಿದೆ. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಯು.ಕೆ.ಯ ಕೇಂಬ್ರಿಡ್ಜ್ ಇಂಗ್ಲೀಷ್ ಅಸೆಸ್‍ಮೆಂಟ್ ಸಂಸ್ಥೆಯ ಅತ್ಯುತ್ತಮ 50 ತರಬೇತಿ ಕೇಂದ್ರಗಳ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದೆ. ಪ್ರತಿಷ್ಠಾನದ 162 ವಿದ್ಯಾರ್ಥಿಗಳು ಕೇಂಬ್ರಿಡ್ಜ್ ಇಂಗ್ಲೀಷ್ ತರಬೇತಿಯ ಸರ್ಟಿಫಿಕೇಟ್ ಅನ್ನು ಪಡೆದುಕೊಂಡಿತು. ವಿದ್ಯಾರ್ಥಿಗಳಲ್ಲಿ ಆಂಗ್ಲ ಭಾಷಾ ಕಲಿಕಾ ಸಾಮಥ್ರ್ಯ ಹೆಚ್ಚಿಸುವ ನಿಟ್ಟಿನಲ್ಲಿ ಆಳ್ವಾಸ್ ಶಿಕ್ಷಣ ಸಂಸ್ಥೆ ಇಂಜಿನಿರಿಂಗ್, ಪದವಿ ಹಾಗೂ ಎಮ್.ಬಿ.ಎ ವಿದ್ಯಾರ್ಥಿಗಳಿಗಾಗಿ ಬ್ಯುಸಿನಸ್ […]

ರಾಜ್ಯ ಮಟ್ಟದ ವೇಟ್ ಲಿಪ್ಟಿಂಗ್ ಆಳ್ವಾಸ್ ಗೆ ಸಮಗ್ರ ಪ್ರಶಸ್ತಿ

Tuesday, September 5th, 2017
Alvas champions

ಮುಡುಬಿದಿರೆ: ದಾವಣಗೆರೆಯ ಕೆಇಬಿ ಇಂಜಿನಿಯರ್ ಅಸೋಸಿಯೇಶನ್ ಹಾಲ್ ನಲ್ಲಿ ಜಿಲ್ಲಾ ವೇಟ್ ಲಿಪ್ಟಿಂಗ್ ಅಸೋಸಿಯೇಷನ್, ರಾಜ್ಯ ವೇಟ್ ಲಿಪ್ಟರ್ ಅಸೋಸಿಯೇಸನ್ ಸಹ ಯೋಗದಲ್ಲಿ ಏರ್ಪಡಿಸಿದ್ದ ರಾಜ್ಯ ಮಟ್ಟದ ವೇಟ್ ಲಿಪ್ಟಿಂಗ್ ಸ್ಪರ್ಧೆ ಯಲ್ಲಿ ಆಳ್ವಾಸ್ ಕಾಲೇಜ್ ತಂಡ ವೇಟ್ ಲಿಪ್ಟಿಂಗ್ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಆಳ್ವಾಸ್ ಕಾಲೇಜಿನ ಸ್ವಸ್ತಿಕ್ ಶೆಟ್ಟಿ ಸ್ನ್ಯಾಚ್ ನಲ್ಲಿ 115, ಕ್ಲೀನ್ ಆ್ಯಂಡ್ ಜರ್ಕ್ ನಲ್ಲಿ 150 ಕೆ.ಜಿ.ಭಾರ ಎತ್ತಿದ ಸಾಧನೆ ಮಾಡಿದರು. ಸೀನಿಯರ್ ವಿಭಾಗದ ಬೆಸ್ಟ್ ಲಿಪ್ಟರ್ ಪ್ರಶಸ್ತಿಗೆ ಅವರು ಬಾಜನರಾದರು. ಆಳ್ವಾಸ್ ಕಾಲೇಜಿನ […]

ಕಾವ್ಯಾ ಮನೆಗೆ ಸಚಿವ ರಮಾನಾಥ ರೈ ಭೇಟಿ

Sunday, July 30th, 2017
Ramanatha Rai

ಮಂಗಳೂರು   : ಇತ್ತೀಚಿಗೆ ಅಸಹಜ ಸಾವಿಗೀಡಾದ ಆಳ್ವಾಸ್ ಕಾಲೇಜಿನ ವಿದ್ಯಾಥಿ೯ನಿ ಕಾವ್ಯಾ ಮನೆಗೆ ಅರಣ್ಯ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಭಾನುವಾರ ಭೇಟಿ ನೀಡಿದರು. ಕಾವ್ಯಾ ಹೆತ್ತವರೊಂದಿಗೆ ಮಾತನಾಡಿ, ಅವರನ್ನು ಸಚಿವರು ಸಂತೈಸಿದರು. ಈ ಪ್ರಕರಣದಲ್ಲಿ ಕೆಲವೊಂದು ಸಂಶಯಗಳು ಕಾವ್ಯಾ ಮನೆಯವರಲ್ಲಿದೆ. ಇದರ ಸತ್ಯಾಸತ್ಯತೆಗಳು ಹೊರಗೆ ಬರಬೇಕೆಂದು ಅವರು ಅಪೇಕ್ಷಿಸಿದ್ದಾರೆ. ಈ ನಿಟ್ಟಿನಲ್ಲಿ ಪೊಲೀಸ್ ಇಲಾಖೆಯು ಪ್ರಾಮಾಣಿಕವಾಗಿ ತನಿಖೆ ನಡೆಸಲಿದೆ ಎಂದು ಹೇಳಿದರು. ಕಾವ್ಯಾ ಉತ್ತಮ ಕ್ರೀಡಾಪಟು ಆಗಿದ್ದು, ಈ ನಿಟ್ಟಿನಲ್ಲಿ […]

ಸಸ್ಯ ವೈವಿದ್ಯತೆಯ ಪಾರಂಪರಿಕ ಸಂರಕ್ಷಣೆ ಹೇಗೆ ?

Wednesday, July 19th, 2017
Alvas Botany

ಮೂಡುಬಿದಿರೆ: ಸಸ್ಯ ವೈವಿದ್ಯತೆಯ ಪಾರಂಪರಿಕ ಸಂರಕ್ಷಣೆ ಮತ್ತು ಉಪಯೋಗ ಎನ್ನುವ ವಿಷಯದ ಕುರಿತು ಆಳ್ವಾಸ್ ಕಾಲೇಜಿನ ಸಸ್ಯಶಾಸ್ತ್ರ ವಿಭಾಗದ ವತಿಯಿಂದ ಉಪನ್ಯಾಸ ಕಾರ್ಯಕ್ರಮವನ್ನು ವಿದ್ಯಾಗಿರಿಯ ಕುವೆಂಪು ಸಭಾಭವನದಲ್ಲಿ ಹಮ್ಮಿಕೊಳ್ಳಲಾಯಿತು. ಕೇರಳ ನೀಲಂಬೂರಿನ ಕೆಎಫ್‍ಆರ್‍ಐ ಸಹಸಂಸ್ಥೆಯ ವಿಜ್ಞಾನಿ ಡಾ.ಯು.ಎಮ್. ಚಂದ್ರಶೇಖರ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು, ಬುಡಕಟ್ಟು ಜನಾಂಗದವರ ಕೃಷಿಪದ್ಧತಿ ಮತ್ತು ಅವರ ವೈಜ್ಞಾನಿಕ ದೃಷ್ಠಿಕೋನವನ್ನು ತುಲನಾತ್ಮಕ ಸಂಶೋಧನೆಗೆ ಒಳಪಡಿಸಿ ದೊರೆತಿರುವ ಫಲಿತಾಂಶದ ವಿವರವನ್ನು ವಿಮರ್ಶಾತ್ಮಕವಾಗಿ ಪ್ರಸ್ತುತ ಪಡಿಸಿದರು. ಪಾರಂಪರಿಕ ಆಹಾರ ಪದ್ಧತಿಯ ಶ್ರೇಷ್ಠತೆಯನ್ನು ಮತ್ತು ಆ […]