Blog Archive

ಸಂಪ್ಯದಲ್ಲಿ ಕಾರು, ಬಸ್‌ ಢಿಕ್ಕಿ: ಯುವ ವಕೀಲೆ ಸಾವು

Tuesday, April 3rd, 2018
advocate

ಪುತ್ತೂರು: ಸಂಪ್ಯ ಮಸೀದಿ ಮುಂಭಾಗದಲ್ಲಿ ಶನಿವಾರ ವ್ಯಾಗನರ್‌ ಕಾರು ಹಾಗೂ ಕೆಎಸ್‌ ಆರ್‌ಟಿಸಿ ಬಸ್‌ ಮುಖಾಮುಖೀ ಢಿಕ್ಕಿಯಾಗಿ ಯುವ ವಕೀಲೆ ಸಾವಿಗೀಡಾಗಿ, ಮತ್ತೋರ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಕಾರಿನಲ್ಲಿದ್ದ ಬೆಳ್ತಂಗಡಿಯ ಕುಳ ನಿವಾಸಿ ಗಾಯತ್ರಿ (23) ಮೃತ ವಕೀಲೆ.ಇವರ ಸಂಬಂಧಿ ಯೋಗೀಶ (35) ಗಂಭೀರ ಗಾಯಗೊಂಡಿದ್ದು, ಅವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಂಭೀರ ಗಾಯಗೊಂಡಿದ್ದ ಗಾಯತ್ರಿ ಅವರನ್ನು ಕೂಡ ಆಸ್ಪತ್ರೆಗೆ ಸೇರಿಸಲಾಗಿತ್ತು. ಅಲ್ಲಿ ಅವರು ಕೊನೆಯುಸಿರೆಳೆದರು.

ಕರಾವಳಿಯಲ್ಲಿ ಮಳೆ: ಬೆಳ್ತಂಗಡಿಯಲ್ಲಿ ಸಿಡಿಲು ಬಡಿದು ಐವರಿಗೆ ಗಾಯ

Thursday, March 15th, 2018
mangaluru

ಮಂಗಳೂರು: ಬಿಸಿಲ ಬೇಗೆ ಮತ್ತು ಹೆಚ್ಚಿದ ಉಷ್ಣಾಂಶದಿಂದ ಕಾದು ಕೆಂಡವಾಗಿದ್ದ ಇಳೆಗೆ ನಿನ್ನೆ ಸಂಜೆ ಮಳೆರಾಯ ತಂಪೆರೆದಿದ್ದಾನೆ. ಕಳೆದ ಕೆಲವು ತಿಂಗಳಿನಿಂದ 35 ಡಿಗ್ರಿವರೆಗೂ ಏರಿದ ಉಷ್ಣಾಂಶದಿಂದಾಗಿ ಬೇಸತ್ತಿದ್ದ ಜನತೆಗೆ ಮಳೆಯ ಸಿಂಚನ ತಂಪಿನ ಸೋಪಾನವಾಯಿತು. ಮಧ್ಯಾಹ್ನದಿಂದಲೇ ಮೋಡ ಕವಿದ ವಾತಾವರಣವಿದ್ದು, ಮೂರು ಗಂಟೆಯ ಬಳಿಕ ಮಳೆ ಸುರಿಯಲಾರಂಭಿಸಿತು. ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ಉತ್ತಮ ಮಳೆ ಸುರಿಯಿತು. ಬಳಿಕ ಸಂಜೆಯವರೆಗೂ ಹನಿ ಮಳೆ ಮುಂದುವರಿದಿತ್ತು. ಶ್ರೀಲಂಕಾ ಸಮೀಪದಲ್ಲಿ ಆಳ ಸಮುದ್ರದಲ್ಲಿ ಉಂಟಾದ ವಾಯುಭಾರ ಕುಸಿತದಿಂದಾಗಿ […]

ಕರಾವಳಿಯಲ್ಲಿ ಧಾರಾಕಾರ ಮಳೆ… ಸುಳ್ಯ, ಬೆಳ್ತಂಗಡಿಯಲ್ಲಿ ತಂಪೆರೆದ ವರುಣ

Thursday, March 15th, 2018
karavali

ಮಂಗಳೂರು: ಬೇಸಿಗೆಯ ಬಿಸಿ ಆರಂಭವಾಗುತ್ತಿರುವಂತೆಯೇ ಕರಾವಳಿಯಲ್ಲಿ ವರುಣ ಪ್ರತ್ಯಕ್ಷನಾಗಿದ್ದಾನೆ. ಇಂದು ಅಪರಾಹ್ನ ಪುತ್ತೂರು, ಸುಳ್ಯ, ಬೆಳ್ತಂಗಡಿ ಸೇರಿದಂತೆ ಕರಾವಳಿಯ ಹಲವು ಭಾಗಗಳಲ್ಲಿ ಧಾರಾಕಾರ ಮಳೆ ಸುರಿದಿದೆ. ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ಒತ್ತಡದಿಂದ ವಾಯುಭಾರ ಕುಸಿತಗೊಂಡಿದ್ದು, ಈ ಹಿನ್ನೆಲೆಯಲ್ಲಿ ತಮಿಳುನಾಡು, ಕೇರಳ ಮತ್ತು ಕರ್ನಾಟಕದ ಕರಾವಳಿ ಭಾಗಗಳಲ್ಲಿ ಮಳೆ ಸುರಿಯುತ್ತಿದೆ.

ತ್ರಿಪುರಾದಲ್ಲಿ ಸಿಪಿಎಂ ವಿರುದ್ಧದ ದೌರ್ಜನ್ಯ ಖಂಡಿಸಿ ಬೆಳ್ತಂಗಡಿಯಲ್ಲಿ ಪ್ರತಿಭಟನೆ

Tuesday, March 13th, 2018
belthangady

ಬೆಳ್ತಂಗಡಿ: ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ರಶ್ಯದ ಕಮ್ಯೂನಿಸ್ಟ್‌ ನಾಯಕ ಲೆನಿನ್ ಪಾತ್ರ ಮಹತ್ತರವಾದುದು. ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸದ ಆರೆಸ್ಸೆಸ್ ಇದೀಗ ಲೆನಿನ್ ಪ್ರತಿಮೆಯನ್ನು ಧ್ವಂಸ ಮಾಡುವ ಮೂಲಕ ಇತಿಹಾಸವನ್ನು ತಿರುಚಲು ಪ್ರಯತ್ನಿಸುತ್ತಿದೆ ಎಂದು ಸಿಪಿಐ(ಎಂ) ತಾಲೂಕು ಕಾರ್ಯದರ್ಶಿ, ನ್ಯಾಯವಾದಿ ಶಿವಕುಮಾರ್ ಎಸ್‌.ಎಂ. ಟೀಕಿಸಿದ್ದಾರೆ. ತ್ರಿಪುರದಲ್ಲಿ ಬಿಜೆಪಿ, ಐ.ಪಿ.ಎಫ್.ಟಿ. ಕಾರ್ಯಕರ್ತರು ಕಮ್ಯೂನಿಸ್ಟ್‌ ಪಕ್ಷದ ಕಚೇರಿ, ಕಾರ್ಯಕರ್ತರ ಮೇಲೆ ನಡೆಸುತ್ತಿರುವ ಧಾಳಿಯನ್ನು ಖಂಡಿಸಿ ಸೋಮವಾರ ಬೆಳ್ತಂಗಡಿ ಬಸ್ ನಿಲ್ದಾಣದಲ್ಲಿ ನಡೆದ ಪ್ರತಿಭಟನೆಯನ್ನು ಉದ್ದೇಶಿಸಿ ಅವರು ಮಾತನಾಡುತ್ತಿದ್ದರು. ಬಿಜೆಪಿ ದೇಶದಾದ್ಯಂತ ಅಧಿಕಾರದ ಮದದಲ್ಲಿ […]

ದುರಸ್ತಿಯಾಗದ ರಸ್ತೆ: ಮತದಾನ ಬಹಿಷ್ಕಾರಕ್ಕೆ ಬಂದರು-ಮೊಗ್ರು ಗ್ರಾಮಸ್ಥರ ನಿರ್ಧಾರ

Monday, March 12th, 2018
belthangady

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಕಲ್ಲಮಾಡ-ಮುಗೇರಡ್ಕ ರಸ್ತೆ ದುರಸ್ತಿ ಮಾಡದ ಹಿನ್ನೆಲೆಯಲ್ಲಿ ಬಂದರು-ಮೊಗ್ರು ಗ್ರಾಮಸ್ಥರು ಮುಂಬರುವ ವಿಧಾನಸಭಾ ಚುನಾವಣೆಯ ಮತದಾನ ಬಹಿಷ್ಕಾರ ಮಾಡಲು ನಿರ್ಧರಿಸಿದ್ದಾರೆ. ಬೆಳ್ತಂಗಡಿ-ಉಪ್ಪಿನಂಗಡಿಯನ್ನು ಸಂಪರ್ಕಿಸುವ ಪ್ರಮುಖ ರಸ್ತೆ ಮಾರ್ಗ ಇದಾಗಿದೆ. ಅಲ್ಲದೆ ಬಂದರು-ಮೊಗ್ರು ಗ್ರಾಮದಲ್ಲಿ ಸುಮಾರು 90ಕ್ಕೂ ಅಧಿಕ ಕುಟುಂಬಗಳಿವೆ. ಆದರೆ ರಸ್ತೆಯ ದುರಸ್ತಿ ಆಗದ ಕಾರಣ 90ಕ್ಕೂ ಅಧಿಕ ಕುಟುಂಬದ 500ಕ್ಕೂ ಅಧಿಕ ಜನ ಮತದಾನ ಬಹಿಷ್ಕಾರಕ್ಕೆ ನಿರ್ಧಾರ ಮಾಡಿದ್ದಾರೆ. ರಸ್ತೆ ದುರಸ್ತಿ ಬಗ್ಗೆ ಹಲವು ಬಾರಿ ಸಂಬಂಧಪಟ್ಟ ಅಧಿಕಾರಿಗಳಿಗೆ […]

ಕೋಳಿ ಅಂಕದ ಜೂಜಿಗಾಗಿ ಪತ್ನಿಯ ತಲೆ ಒಡೆದ ಅಚ್ಚುತ

Monday, March 12th, 2018
Vanitha

ಪುತ್ತೂರು : ಕೋಳಿ ಅಂಕದ ಚಾಳಿಯಿದ್ದ ಪತಿರಾಯನೊಬ್ಬ  ಪತ್ನಿಗೆ  ಕುರ್ಚಿಯಿಂದಲೇ ತಲೆಗೆ ಹಲ್ಲೆ ನಡೆಸಿದ ಘಟನೆ ದಕ್ಷಿಣಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಕೊಕ್ಕಡದಲ್ಲಿ ನಡೆದಿದೆ. ಪತಿ ಅಚ್ಚುತನಿಗೆ ಕೋಳಿ ಅಂಕಕ್ಕೆ ಹೋಗುವ ಚಾಳಿಯಿದ್ದು, ಪ್ರತಿದಿನ ಎಲ್ಲೆಂದರಲ್ಲಿ ನಡೆಯುವ ಕೋಳಿ ಅಂಕಕ್ಕೆ ಹೋಗಿ ಜೂಜಾಡುವುದು ಈತನ ಕೆಲಸವಾಗಿತ್ತು ಅದನ್ನು ಪ್ರಶ್ನಿಸಿದ  ಪತ್ನಿ ವನಿತಾ ಗೆ  ಸಿಟ್ಟಿನಿಂದ ಕುರ್ಚಿಯಿಂದಲೇ  ತಲೆಗೆ ಹಲ್ಲೆ ನಡೆಸಿದ್ದಾನೆ. ಕೋಳಿ ಜೂಜಿಗಾಗಿ ಅಡವಿಟ್ಟಿದ್ದ ವನಿತಾ ಚಿನ್ನವನ್ನು ಬಿಡಿಸಿಕೊಡುವಂತೆ ಅಚ್ಚುತನಲ್ಲಿ ಕೇಳಿದ ಸಂದರ್ಭದಲ್ಲಿ ಆತ ಸಿಟ್ಟು ಗೊಂಡು ಈ ಕೃತ್ಯ ನಡೆಸಿದ್ದಾನೆ ಎನ್ನಲಾಗಿದೆ. […]

ಬೆಳ್ತಂಗಡಿ ಬಳಿ ಟ್ಯಾಂಕರ್‌‌ನಿಂದ ಗ್ಯಾಸ್ ಸೋರಿಕೆ…ಹೆದ್ದಾರಿ ಸಂಚಾರ, ವಿದ್ಯುತ್‌ ವ್ಯತ್ಯಯ

Friday, March 9th, 2018
tanker

ಮಂಗಳೂರು: ಗ್ಯಾಸ್ ಟ್ಯಾಂಕರ್‌‌ನಿಂದ ಗ್ಯಾಸ್ ಸೋರಿಕೆಯಾದ ಘಟನೆ ಬೆಳ್ತಂಗಡಿ ತಾಲೂಕಿನ ಸಬರಬೈಲು ಎಂಬಲ್ಲಿ ನಡೆದಿದೆ. ಗ್ಯಾಸ್ ಸೋರಿಕೆಯಾದ ಹಿನ್ನೆಲೆಯಲ್ಲಿ ಮಂಗಳೂರು-ಧರ್ಮಸ್ಥಳ ರಾಜ್ಯ ಹೆದ್ದಾರಿಯಲ್ಲಿ ರಸ್ತೆ ಸಂಚಾರಕ್ಕೆ ಅಡಚಣೆ ಉಂಟಾಯಿತು. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳದವರು ಗ್ಯಾಸ್ ಸೋರಿಕೆ ನಿಯಂತ್ರಣಕ್ಕೆ ಕಾರ್ಯಾಚರಣೆ ನಡೆಸಿದರು. ಅಲ್ಲದೆ ಎಂಆರ್‌‌‌ಪಿಎಲ್‌‌ ತಜ್ಞರು ಸ್ಥಳಕ್ಕೆ ಭೇಟಿ ನೀಡಿದ್ದರು. ಮುನ್ನೆಚ್ಚರಿಕಾ ಕ್ರಮವಾಗಿ ಗ್ರಾಮದಲ್ಲಿ ವಿದ್ಯುತ್‌ ಕಡಿತಗೊಳಿಸಲಾಗಿದೆ.

ಬೇಸಿಗೆಯಲ್ಲಿ ಬೆಂಕಿ ಆತಂಕ… ಐತಿಹಾಸಿಕ ತಾಣ ಜಮಾಲಾಬಾದ್‌ ಕೋಟೆಗೆ ಬೀಗ!

Monday, February 26th, 2018
belthangady

ಬೆಳ್ತಂಗಡಿ: ಸಾವಿರಾರು ಪ್ರವಾಸಿಗರು ಪ್ರಕೃತಿ ಸೌಂದರ್ಯ ಸವಿಯಲು ಬರುತ್ತಿದ್ದ ಐತಿಹಾಸಿಕ ಪ್ರವಾಸಿ ತಾಣವಾದ ಜಮಾಲಾಬಾದ್ ಕೋಟೆಗೆ ಪ್ರವೇಶ ನಿರಾಕರಿಸಿ ವನ್ಯಜೀವಿ ವಿಭಾಗದ ಅರಣ್ಯ ಇಲಾಖೆ ಕೋಟೆಗೆ ಬೀಗ ಜಡಿದಿದೆ. ಬೆಳ್ತಂಗಡಿ ತಾಲೂಕಿನ ನಡ ಗ್ರಾಮದಲ್ಲಿರುವ ಸ್ವಾತಂತ್ರ್ಯ ಹೋರಾಟಗಾರ, ಮೈಸೂರು ಹುಲಿ ಖ್ಯಾತಿಯ ಟಿಪ್ಪು ಸುಲ್ತಾನ್ ಕೋಟೆ ಇರುವ ಜಮಾಲಾಬಾದ್ ಕೋಟೆಗೆ ಪ್ರತಿದಿನ ಸಾವಿರಾರು ಪ್ರವಾಸಿಗರು, ವಿದ್ಯಾರ್ಥಿಗಳು ಬರುತ್ತಿದ್ದರು. ಆದರೆ, ಈಗ ಪ್ರಕೃತಿ ಸೌಂದರ್ಯ ಸವಿಯಲು ಕೋಟೆಗೆ ಬರುತ್ತಿದ್ದ ಪ್ರವಾಸಿಗರ ಆಸೆಗೆ ಅಡ್ಡಿ ಉಂಟಾಗಿದೆ. ಪ್ರಾಚ್ಯ ವಸ್ತು ಇಲಾಖೆ, […]

ಮಹಿಳೆ ಆತ್ಮಹತ್ಯೆ; ಮರಣೋತ್ತರ ಪರೀಕ್ಷೆ ಮಾಡಲು ನಿರಾಕರಿಸಿದ ವೈದ್ಯಧಿಕಾರಿಗಳು; ಆರೋಪ

Friday, February 23rd, 2018
belthangady

ಬೆಳ್ತಂಗಡಿ: ಇಲ್ಲಿಗೆ ಸಮೀಪ ಲಾಯಿಲದಲ್ಲಿ ಬುಧವಾರ ಸಂಜೆ ಆತ್ಮಹತ್ಯೆ ಮಾಡಿಕೊಂಡ ಮಹಿಳೆಯ ಮೃತದೇಹದ ಮರಣೋತ್ತರ ಪರೀಕ್ಷೆಯನ್ನು ಇಂದು ಸಂಜೆಯವರೆಗೂ ಬೆಳ್ತಂಗಡಿ ಆಸ್ಪತ್ರೆಯಲ್ಲಿ ಮಾಡಲು ವೈಧ್ಯರು ನಿರಾಕರಿಸಿದ ಹಿನ್ನೆಲೆಯಲ್ಲಿ 24 ಗಂಟೆಯ ಬಳಿಕ ಗುರುವಾರ ಸಂಜೆಯ ವೇಳೆಗೆ ಪೋಲೀಸರು ಮೃತದೇಹವನ್ನು ಮಂಗಳೂರಿನ ವೆನ್ಲಾಕ್ ಆಸ್ಪತ್ರಗೆ ಸಾಗಿಸಿದ್ದಾರೆ. ಲಾಯಿಲದಲ್ಲಿ ಕಲ್ಲಿನ ಕೆಲಸಕ್ಕೆಂದು ಗದಗದಿಂದ ಬಂದಿದ್ದ ಕುಟುಂಬವೊಂದು ಕಳೆದ ಒಂದು ವರ್ಷದಿಂದ ಇಲ್ಲಿ ಕೆಲಸ ಮಾಡುತ್ತಿದ್ದರು. ಬುಧವಾರ ಸಂಜೆಯ ವೇಳೆ ಕುಟುಂಬದಲ್ಲಿ ಯಾವುದೋ ಜಗಳ ನಡೆದು ಜಯಶ್ರೀ (31) ತಮ್ಮ ಮನೆಯಲ್ಲಿಯೇ […]

ಬೈಕ್‌ ಸವಾರನ ಮೇಲೆ ಹರಿದ ಕೋಳಿ ಸಾಗಣೆಯ ಲಾರಿ

Friday, February 23rd, 2018
accident

ಮಂಗಳೂರು: ಕೋಳಿಗಳನ್ನು ಸಾಗಿಸುತ್ತಿದ್ದ ಲಾರಿ ಗುದ್ದಿದ ಪರಿಣಾಮ ಬೈಕ್ ಸವಾರನೋರ್ವ ದಾರುಣವಾಗಿ ಸಾವನ್ನಪ್ಪಿರುವ ಭೀಕರ ಅಪಘಾತ ಬೆಳ್ತಂಗಡಿ ತಾಲೂಕಿನ ವೇಣೂರಿನಲ್ಲಿ ನಡೆದಿದೆ. ಬೆಳಗ್ಗೆ 7.30 ಸುಮಾರಿಗೆ ಈ ಘಟನೆ ನಡೆದಿದೆ. ಬೈಕ್‌ಗೆ ವಿರುದ್ಧ ದಿಕ್ಕಿನಲ್ಲಿ ಅತಿಯಾದ ವೇಗದಲ್ಲಿ ಬಂದ ಕೋಳಿ ಸಾಗಣೆಯ ಲಾರಿ ಬೈಕ್ ಸವಾರರ ಮೇಲೆಯೇ ಹರಿದಿದೆ. ಅಪಘಾತದ ತೀವ್ರತೆಗೆ ಕರಿಮಣೇಲು‌ ನಿವಾಸಿ ಆನಂದ ಎಂಬುವವರು ಸ್ಥಳದಲ್ಲೇ ಸಾವನ್ನಪ್ಪಿದ್ದು ಹಿಂಬದಿ ಕುಳಿತಿದ್ದ ಪುತ್ರಿಯರಿಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಅಪಘಾತದ ದೃಶ್ಯ ಸ್ಥಳೀಯ ಅಂಗಡಿಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.