Blog Archive

ಬಿಜೆಪಿ ಅಭ್ಯರ್ಥಿ ನಳಿನ್ ಕುಮಾರ್ ಕಟೀಲ್ ಮತದಾನ

Thursday, April 18th, 2019
Nalin Kumar

ಮಂಗಳೂರು : ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ  ಮತದಾನ ಪ್ರಕ್ರಿಯೆ ಆರಂಭಗೊಂಡಿದ್ದು ಬೆಳಗ್ಗೆ 11ರ ವೇಳೆಗೆ 32.5 % ಮತದಾನವಾಗಿದೆ . ಉರ್ವ ಲೇಡಿಹಿಲ್ ಸಮೀಪದ  ಸಂತ ಅಲೋಶಿಯಸ್ ಕಾಲೇಜಿನಲ್ಲಿ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ನಳಿನ್ ಕುಮಾರ್ ಕಟೀಲ್ ಮತ ಚಲಾಯಿಸಿದ್ದಾರೆ. ಮತದಾರರು ಮತಗಟ್ಟೆಯಲ್ಲಿ ಬೆಳಿಗ್ಗೆಯೇ ಮತದಾನಕ್ಕೆ ಸರತಿ ಸಾಲಿನಲ್ಲಿ ನಿಂತಿದ್ದು, ಚುರುಕಿನಿಂದ ಮತದಾನ ನಡೆಯುತ್ತಿದೆ. ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಮತಗಟ್ಟೆಗಳಲ್ಲಿ ಬೆಳಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಮತದಾನ ಪ್ರಕ್ರಿಯೆ […]

ಬಂಟ್ವಾಳ ಇಂದು ಹಸೆಮಣೆ ಏರುವ ಹೊಸ ಜೋಡಿಗಳಿಂದ ಮತದಾನ

Thursday, April 18th, 2019
Mundadi

ಬಂಟ್ವಾಳ  : ಬಂಟ್ವಾಳದಲ್ಲಿ ಬೆಳಿಗ್ಗೆ 11 ರ ವೇಳೆಗೆ 33.89 ಶೇಕಡಾ ಮತದಾನವಾಗಿದ್ದು, ಮತದಾರರು ಉತ್ಸುಕತೆಯಿಂದ ಮತದಾನ ಮಾಡುತ್ತಿದ್ದಾರೆ.  ಇಂದು ಮದುವೆಯಾಗುವ ನವಜೋಡಿ ಬೆಳಗ್ಗೆ ಓಟ್ ಮಾಡಿದ್ದಾರೆ. ಬಂಟ್ವಾಳ ತಾಲೂಕಿನ ಸಜೀಪ ನಡು ಗ್ರಾಮದ ಸುಭಾಸ್ ನಗರದ ಬೇಂಕೆ ನಿವಾಸಿ ಅಶೋಕ್ ಪುಷ್ಪಲತಾ ಅವರ ಪುತ್ರಿ ಪ್ರತಿಜ್ಞಾ ಅವರು ಬೇಂಕ್ಯೆ ಸರಕಾರಿ ಶಾಲೆಯ ಮತಗಟ್ಟೆಯಲ್ಲಿ ಚಲಾಯಿಸಿದ್ದಾರೆ. ಅದಲ್ಲದೆ, ಮದುಮಗ ಸುಮಿತ್ ಪೂಜಾರಿ ಅವರು ತನ್ನ ಬಾವಿ ಪತ್ನಿ ಪ್ರತಿಜ್ಞಾ ಅವರ ಜೊತೆ ಪೊಳಲಿ ಸರಕಾರಿ ಶಾಲೆಯ ಮತಗಟ್ಟೆಗೆ ತೆರಳಿ ಮತಚಲಾಯಿಸಿದರು. […]

ಮಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಅತೀ ಕಡಿಮೆ ಮತದಾನ ಸುಳ್ಯ ಕ್ಷೇತ್ರದಲ್ಲಿ ಅತೀ ಹೆಚ್ಚು ಮತದಾನ

Sunday, May 13th, 2018
vote

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಒಟ್ಟು ಎಂಟು ಕ್ಷೇತ್ರಗಳಲ್ಲಿ ಶನಿವಾರ ಬಿರುಸಿನ ಹಾಗೂ ಶಾಂತಿಯುತ ಮತದಾನವಾಗಿದ್ದು ಸಂಜೆಯ ವೇಳೆಗೆ  ಶೇ. 77.63ರಷ್ಟು ಮತದಾನ ದಾಖಲಾಗಿದೆ. ಬೆಳಗ್ಗೆ 7 ಗಂಟೆಗೆ ಮತ ದಾರರು ಬಹಳ ಉತ್ಸುಕತೆಯಿಂದ ಸರದಿಯಲ್ಲಿ ನಿಂತಿದ್ದ ದೃಶ್ಯ ಬಹುತೇಕ ಎಲ್ಲ ಮತಗಟ್ಟೆಗಳಲ್ಲಿಯೂ ಕಂಡು ಬಂದಿತ್ತು. ಕೆಲವು ಮತಗಟ್ಟೆಗಳಲ್ಲಿ ಮುಂಜಾನೆ 6.45ರ ವೇಳೆಗೇ ಮತದಾರರು ತಮ್ಮ ಹಕ್ಕು ಚಲಾಯಿಸುವುದಕ್ಕೆ ಬಂದು ಕಾದು ಕುಳಿತದ್ದು ವಿಶೇಷ. 2013ಕ್ಕಿಂತ ಈ ಬಾರಿ ಶೇ. 3.25ರಷ್ಟು ಅಧಿಕ ಮತದಾನವಾಗಿದೆ. ಈ ಬಾರಿ […]

ಧರ್ಮಸ್ಥಳದಲ್ಲಿ ಹೆಗ್ಗಡೆಯವರು ಮತ್ತು ಕುಟುಂಬದವರಿಂದ ಮತದಾನ

Saturday, May 12th, 2018
Hegde Vote

ಧರ್ಮಸ್ಥಳ : ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಮತ್ತು ಹೇಮಾವತಿ ವಿ. ಹೆಗ್ಗಡೆಯವರು ಹಾಗೂ ಸಹೋದರ ಡಿ. ಹರ್ಷೇಂದ್ರ ಕುಮಾರ್ ಮತ್ತು ಸುಪ್ರಿಯಾ ಹರ್ಷೇಂದ್ರ ಕುಮಾರ್ ಶನಿವಾರ ಧರ್ಮಸ್ಥಳದಲ್ಲಿ ಎಸ್.ಡಿ.ಎಮ್. ಪ್ರಾಥಮಿಕ ಶಾಲೆಯಲ್ಲಿ ಮತದಾನ ಮಾಡಿದರು.

ಮತದಾನಕ್ಕೆ ತೆರಳುತ್ತಿದ್ದ ವ್ಯಕ್ತಿ ಹೃದಯಾಘಾತದಿಂದ ಸಾವು

Saturday, May 12th, 2018
Anni Acharya

ಬೆಳ್ತಂಗಡಿ :  ತಾಲೂಕಿನ ಅಂಡಿಜೆ ಗ್ರಾಮದ ಶಾಲೆಯಲ್ಲಿ ಮತದಾನಕ್ಕೆ ತೆರಳುತ್ತಿದ್ದ ವ್ಯಕ್ತಿಯೋರ್ವರು ಹೃದಯಾಘಾತದಿಂದ ಮೃತಪಟ್ಟ ಘಟನೆ ಶನಿವಾರ ಬೆಳಗ್ಗೆ ನಡೆದಿದೆ. ಬೆಳ್ತಂಗಡಿ ತಾಲೂಕಿನ ಜಾರಿಗೆದಡಿ ನಿವಾಸಿ ಅಣ್ಣಿ ಅಚಾರ್ಯ(70) ಹೃದಯಾಘಾತದಿಂದ ಮೃತಪಟ್ಟವರು ಎಂದು ಗುರುತಿಸಲಾಗಿದೆ. ಮತದಾನ ಮಾಡಲು ತೆರಳಿದ್ದ ಶಾಲೆಯ ಮುಂಭಾಗದಲ್ಲಿ ಹೃದಯಘಾತವಾಗಿ ಕುಸಿದುಬಿದ್ದು ಸ್ಥಳದಲ್ಲೇ ಮೃತಪಟ್ಟರು ಎಂದು ತಿಳಿದುಬಂದಿದೆ. ಈ ಬಗ್ಗೆ ವೇಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ಮತದಾನ ಮಾಡಿ ನಿಮ್ಮ ಹಕ್ಕು ಚಲಾಯಿಸಿ’… ಕೆಎಸ್‌ಆರ್‌ಟಿಸಿ ಟಿಕೆಟ್‌ ವಿಶೇಷ!

Saturday, April 21st, 2018
KSRTC-bus

ಬೆಂಗಳೂರು: ಮತದಾನದ ಬಗ್ಗೆ ಅರಿವು ಮೂಡಿಸಲು ಮುಂದಾದ ಕೆಎಸ್‌ಆರ್‌ಟಿಸಿ ತನ್ನ ಬಸ್ ಟಿಕೆಟ್‌ನಲ್ಲೂ ಮತದಾನ ಮಾಡುವಂತೆ ಮುದ್ರಿಸಿದೆ. ಜನರಲ್ಲಿ ಸಾಧ್ಯವಾದಷ್ಟು ಮತದಾನದ ಬಗ್ಗೆ ಜಾಗೃತಿ ಮೂಡಿಸಲು ಈ ಐಡಿಯಾ ಮಾಡಲಾಗಿದೆ. ಮೇ 12 ರಂದು ‘ಮತದಾನ ಮಾಡಿ ನಿಮ್ಮ ಹಕ್ಕನ್ನು ಚಲಾಯಿಸಿ’ ಎಂಬ ವಾಕ್ಯ ಮುದ್ರಣ ಮಾಡಲಾಗಿದೆ. ಕೆಎಸ್‌ಆರ್‌ಟಿಸಿಯ ಈ ಐಡಿಯಾಗೆ ಸಾರ್ವಜನಿಕರಿಂದಲೂ ಪ್ರಶಂಸೆ ದೊರೆತಿದೆ. ಇಂದಿನಿಂದ ಎಲ್ಲ ಡಿವಿಷನ್‌ನಲ್ಲು ಮತದಾನ ಒಳಗೊಂಡ ಟಿಕೆಟ್ ಸಿಗಲಿದೆ.

ಜಿಲ್ಲೆಯಲ್ಲಿ ಮತದಾನ ಶಾಂತಿಯುತ : ಬಿರುಸಿನ ಮತದಾನ

Monday, May 16th, 2016
Kerala Vote

ಕಾಸರಗೋಡು: ಕಾಸರಗೋಡು ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರದಲ್ಲಿ ಶಾಂತಿಯುತ ಮತದಾನ ನಡೆಯಿತು. ಬೆಳಗ್ಗಿನಿಂದಲೇ ಬಿರುಸಿನ ಮತದಾನ ನಡೆದಿದ್ದು, ವಿದ್ಯುತ್ ಸಂಪರ್ಕ ಸ್ಥಗಿತದಿಂದಾಗಿ ಹಲವೆಡೆ ಸುಗಮ ಮತದಾನಕ್ಕೆ ಅಡ್ಡಿಯುಂಟಾಯಿತು. ವಿದ್ಯುತ್ ಕೈಕೊಟ್ಟ ಮತಗಟ್ಟೆಗಳಲ್ಲಿ ಮೇಣದ ಬತ್ತಿ ಬಳಸಿ ಮತದಾನಕ್ಕೆ ಸೌಕರ್ಯ ಕಲ್ಪಿಸಲಾಯಿತು. ಬಹುತೇಕ ಬೂತ್‌ಗಳಲ್ಲಿ ಬೆಳಗ್ಗಿನಿಂದಲೇ ಮಹಿಳೆಯರ ಉದ್ದನೆಯ ಸರದಿ ಕಂಡು ಬಂತು. ಮೊದಲ ನಾಲ್ಕು ಗಂಟೆಯಲ್ಲಿ ಕಾಸರಗೋಡು ಜಿಲ್ಲೆಯಲ್ಲಿ ಶೇ.28.63 ಮತದಾನವಾಗಿತ್ತು. ಕಾಂಞಂಗಾಡ್ ವಿಧಾನಸಭಾ ಕ್ಷೇತ್ರದಲ್ಲಿ ಅತ್ಯಂತ ಹೆಚ್ಚ ಶೇ.39 ಮತದಾನವಾಗಿದ್ದರೆ, ತೃಕ್ಕರಿಪುರದಲ್ಲಿ ಶೇ. 28.3 ಮತದಾನವಾಗಿತ್ತು. […]

ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ 76.67 ಮತದಾನ

Friday, April 18th, 2014
lok sabha Dakshin Kannada

ಮಂಗಳೂರು: ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರಕ್ಕೆ ಗುರುವಾರ ನಡೆದ ಚುನಾವಣೆ ಸಂಪೂರ್ಣ ಶಾಂತಿಯುತವಾಗಿದ್ದು ಶೇ. 76.67 ಮತದಾನವಾಗಿದೆ. ಒಟ್ಟು 15,64,114 ಮತದಾರನಲ್ಲಿ 11,96,531 ಮಂದಿ ಮತದಾನ ಮಾಡಿದ್ದಾರೆ. ಒಂದೆರಡು ಕಡೆ ಮತಯಂತ್ರಗಳ ತಾಂತ್ರಿಕ ದೋಷದಿಂದ ಸ್ವಲ್ಪ ವಿಳಂಬ‌ ವಾದ ಬಗ್ಗೆ ವರದಿಯಾಗಿದೆ. ಬಿಜೆಪಿ ಅಭ್ಯರ್ಥಿ ನಳಿನ್ ಕುಮಾರ್ ಕಟೀಲ್ ಮಂಗಳೂರಿನ ಲೇಡಿಹಿಲ್ ನ ಮತಗಟ್ಟೆಯೊಂದರಲ್ಲಿ ತಮ್ಮ ಹಕ್ಕನ್ನು ಚಲಾಯಿಸಿದರು. ದ.ಕ. ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಜನಾರ್ದನ ಪೂಜಾರಿ ಬೆಳಗ್ಗೆಯೇ ಬಂಟ್ವಾಳದಲ್ಲಿನ ಮತದಾನ ಕೇಂದ್ರವೊಂದರಲ್ಲಿ ಸರತಿ ಸಾಲಿನಲ್ಲಿ […]

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶೇಕಡ 74.23 ಮತದಾನ

Monday, May 6th, 2013
Assembly election Mangalore

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯ ಎಂಟು ವಿಧಾನಸಭೆ ಕ್ಷೇತ್ರಗಳಿಗೆ ಭಾನುವಾರ ನಡೆದ ಚುನಾವಣೆಯಲ್ಲಿ ಒಟ್ಟು ಶೇ.74.23ರಷ್ಟು ಮತದಾನ ನಡೆದಿದೆ. ಬೆಳಗ್ಗೆ 7  ಗಂಟೆಯಿಂದ ಸಂಜೆ 6 ಗಂಟೆಯವರೆಗೆ ನಡೆದ ಮತದಾನ ಬಹುತೇಕ ಕಡೆಗಳಲ್ಲಿ ಶಾಂತಿಯುತವಾಗಿ ನಡೆಯಿತು.  ಉರಿ ಬಿಸಿಲಿನ ನಡುವೆಯು ಮತದಾರರು ಮತದಾನ ಕೇಂದ್ರಕ್ಕೆ ಆಗಮಿಸಿ ಮತಚಲಾಯಿಸಿದರು. ಚುನಾವಣಾ ಆಯೋಗದ ನಿರ್ದೇಶನದಂತೆ ಚುನಾವಣೆಯಲ್ಲಿ ಮತದಾರರಿಗೆ ಭಾವಚಿತ್ರವಿರುವ ಗುರುತುಚೀಟಿಯೇ ಬೇಕು,ಭಾವಚಿತ್ರವಿರುವ ಮತದಾರರ ಪಟಿಯೇ ಬೇಕು ಎಂಬ ಮತಗಟ್ಟೆ ಅಧಿಕಾರಿಗಳ ವಾದಗಳು ಸ್ವಲ್ಪಮಟ್ಟಿನ ಗೊಂದಲವನ್ನು ಸೃಷ್ಟಿಸಿತು. ಜಿಲ್ಲೆಯಲ್ಲಿ ಇದೇ […]

ಮತದಾನದಲ್ಲಿ ಚೇತರಿಕೆ ಸಂಜೆ 3 ಕ್ಕೆ ದ.ಕ : 61:46% ಉಡುಪಿ 63.42%

Thursday, March 7th, 2013
MCC election

ಮಂಗಳೂರು : ಸ್ಥಳೀಯ ಸಂಸ್ಥೆಗಳ ಸಾರ್ವತ್ರಿಕ ಚುನಾವಣೆ ಸಂಜೆಯ ವೇಳೆಗೆ ಚುರುಕುಗೊಂಡಿದ್ದು ಸಂಜೆ 3 ಗಂಟೆಗೆಯವರೆಗೆ ದ.ಕ ಜಿಲ್ಲೆಯಲ್ಲಿ 61.46 % ಮತ್ತು ಉಡುಪಿ ಜಿಲ್ಲೆಯಲ್ಲಿ 63.42% ಮತದಾನವಾಗಿದೆ. ಮಂಗಳೂರು ನಗರ 51% ಉಳ್ಳಾಳ ಪುರಸಭೆ 54.8%, ಮೂಡಬಿದ್ರೆ ಪುರಸಭೆ 63.3%, ಬಂಟ್ವಾಳ ಪುರಸಭೆ  65.6% ,ಪುತ್ತೂರು ಪುರಸಭೆ 60.4%, ಬೆಳ್ತಂಗಡಿ ಪಟ್ಟಣ ಪಂಚಾಯತ್ 63.6%, ಸುಲ್ಯ ಪಟ್ಟಣ ಪಂಚಾಯತ್ 71.7% ಮತದಾನವಾಗಿದೆ. ಉಡುಪಿ ಜಿಲ್ಲೆಯಲ್ಲಿ ಉಡುಪಿ ನಗರ ಸಭೆ 60.35%, ಸಾಲಿಗ್ರಾಮ 67.14%, ಕುಂದಾಪುರ 61.90%, […]