Blog Archive

ಕಡಲಬ್ಬರಕ್ಕೆ ಆಳ ಸಮುದ್ರದಲ್ಲೇ ಲಂಗರು ಹಾಕಿದ ಮೀನುಗಾರಿಕಾ ದೋಣಿಗಳು..!

Friday, August 10th, 2018
fisheries

ಮಂಗಳೂರು: ರಾಜ್ಯದ ಕರಾವಳಿ ಸೇರಿದಂತೆ ಪಶ್ಚಿಮ ಘಟ್ಟ ತಪ್ಪಲಿನಲ್ಲಿ ಭಾರೀ ಮಳೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕರಾವಳಿಯ ಎಲ್ಲಾ ನದಿಗಳು ತುಂಬಿ ಅಪಾಯ ಮಟ್ಟದಲ್ಲಿ ಹರಿಯುತ್ತಿದ್ದು, ಪಶ್ಚಿಮ ಘಟ್ಟದ ತಪ್ಪಲು ಪ್ರದೇಶದಲ್ಲಿ ನೆರೆಯ ಪರಿಸ್ಥತಿ ಸೃಷ್ಟಿಯಾಗಿದೆ. ಇನ್ನೊಂದೆಡೆ ಕಡಲು ರೌದ್ರವತಾರ ತಾಳಿದೆ. ಮಂಗಳೂರಿನಿಂದ ಮೀನುಗಾರಿಕೆಗೆ ತೆರಳಿದ್ದ ಮೀನುಗಾರಿಕಾ ದೋಣಿಗಳು ತಟಕ್ಕೆ ಹಿಂದಿರುಗಲಾಗದೇ ಆಳ ಸಮುದ್ರದಲ್ಲೇ ಲಂಗರುಹಾಕಿವೆ. ಸರಿಸುಮಾರು 800 ಮೀನುಗಾರಿಕಾ ದೋಣಿಗಳು ಮಂಗಳೂರು ಮೀನುಗಾರಿಕಾ ಬಂದರಿನಿಂದ ಅಳ ಸಮುದ್ರ ಮೀನುಗಾರಿಕೆಗೆ ತೆರಳಿದ್ದವು. ಆದರೆ ಈ ಪೈಕಿ ಕೆಲವು ಮೀನುಗಾರಿಕಾ […]

ದೇಶದಲ್ಲಿ ಉತ್ತಮ ಆಡಳಿತ ನೀಡುವ ರಾಜ್ಯಗಳಲ್ಲಿ ಕರ್ನಾಟಕ ನಾಲ್ಕನೇ ಸ್ಥಾನ..!

Monday, July 23rd, 2018
vidhana-souda

ಬೆಂಗಳೂರು: ದೇಶದಲ್ಲಿ ಉತ್ತಮ ಆಡಳಿತ ನೀಡುವ ರಾಜ್ಯಗಳಲ್ಲಿ ಕರ್ನಾಟಕ ನಾಲ್ಕನೇ ಸ್ಥಾನ ಪಡೆದಿದೆ. ಪಕ್ಕದ ಕೇರಳ ಪ್ರಥಮ ಸ್ಥಾನ ಪಡೆದರೆ, ಬಿಹಾರ ಕೊನೆ ಸ್ಥಾನದಲ್ಲಿದೆ. ಬೆಂಗಳೂರು ಮೂಲದ ಪಬ್ಲಿಕ್ ಅಫೇರ್ಸ್ ಸೆಂಟರ್ (ಪಿಎಸಿ) ಉತ್ತಮ ಆಡಳಿತದ ರಾಜ್ಯಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. 2016ರಿಂದಲೂ ಪಿಎಸಿ ಅತ್ಯುತ್ತಮ ಆಡಳಿತ ನಡೆಸುವ ರಾಜ್ಯಗಳ ಪಟ್ಟಿಯನ್ನು ಬಿಡುಗಡೆ ಮಾಡುತ್ತಿದೆ. ಸಾಮಾಜಿಕ ಹಾಗೂ ಆರ್ಥಿಕ ಅಭಿವೃದ್ಧಿಯನ್ನು ಆಧರಿಸಿ, ಲಭ್ಯವಾದ ದತ್ತಾಂಶಗಳ ಚೌಕಟ್ಟಿನಲ್ಲಿ ರಾಜ್ಯಗಳ ಆಡಳಿತವನ್ನು ಈ ಸಂಸ್ಥೆ ಪಟ್ಟಿ ಮಾಡುತ್ತಿದೆ. ಕಳೆದ ಮೂರು […]

ಕೇರಳದಿಂದ ಕೋಳಿ ತ್ಯಾಜ್ಯವನ್ನು ತಂದು ನಿರ್ಜನ ಪ್ರದೇಶದ ರಸ್ತೆಗಳಲ್ಲಿ ಸುರಿಯುತ್ತಿದ್ದ ಆರೋಪಿಗಳ ಬಂಧನ

Saturday, July 14th, 2018
chikan-wastage

ಮಂಗಳೂರು: ಕೇರಳದಿಂದ ಕೋಳಿ ತ್ಯಾಜ್ಯವನ್ನು ತಂದು ನಿರ್ಜನ ಪ್ರದೇಶದ ರಸ್ತೆಗಳಲ್ಲಿ ಸುರಿಯುತ್ತಿದ್ದ ಆರೋಪದ ಮೇರೆಗೆ ಐವರನ್ನು ವಿಟ್ಲ ಪೊಲೀಸರು ಬಂಧಿಸಿದ್ದಾರೆ. ಪುತ್ತೂರು ವಳಮೊಗರು ಗ್ರಾಮದ ಆಜ್ಜಿಕಲ್ಲು ನಿವಾಸಿ ರಫೀಕ್ (30), ಕೇರಳದ ಕೋಯಿಕ್ಕೋಡ್ ನಿವಾಸಿ ಅಹ್ಮದ್ ಗಜನಿ (34), ಮಲಪರಂಬ ತಿರೂರನ್ನಾಳಿ ನಿವಾಸಿ ಸೌಫಿ (30), ಕೋಝಿಕೋಡ್ ಬೇಪೂರ್ ನಿವಾಸಿ ಮಸೂದ್ (25), ಬಿಹಾರ ಬಾಕಾ ನಿವಾಸಿ ಝಿಯಾವುಲ್ ಅನ್ಸಾರಿ (20) ಬಂಧಿತರು. ವಿಟ್ಲ ವ್ಯಾಪ್ತಿಯಲ್ಲಿ ಎಲ್ಲೆಂದರಲ್ಲಿ ತ್ಯಾಜ್ಯವನ್ನು ಹಾಕುವ ಬಗ್ಗೆ ಅಳಿಕೆ ಗ್ರಾಮ ಪಂಚಾಯತ್ ಅಭಿವೃದ್ಧಿ […]

ಕೇರಳಕ್ಕೆ ಗೋ ಸಾಗಿಸಲು ಯತ್ನ: ಇಬ್ಬರು ಅರೆಸ್ಟ್

Tuesday, June 12th, 2018
cow-trackling

ಮಂಗಳೂರು: ರಾಜ್ಯದ ಗಡಿ ಭಾಗದಿಂದ ಕೇರಳಕ್ಕೆ ಅಕ್ರಮವಾಗಿ ಗೋವು ಸಾಗಾಟ ಮಾಡಲು ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರನ್ನು ವಿಟ್ಲ ಠಾಣಾ ಪೊಲೀಸರು ಬಂಧಿಸಿದ್ದಾರೆ. ಕೇರಳದ ಎಣ್ಮಕಜೆ ಗ್ರಾಮದ ಬಳಪು ಮನೆ ನಿವಾಸಿ ಇಷಾದ್ (21) ಮತ್ತು ಬಂಟ್ವಾಳ ತಾಲೂಕಿನ ಕೇಪು ಗ್ರಾಮದ ಮರಕ್ಕಿಣಿ ನಿವಾಸಿ ರಶೀದ್ (19) ಬಂಧಿತ ಆರೋಪಿಗಳು. ದ.ಕ. ಜಿಲ್ಲೆಯ ಬಂಟ್ವಾಳ ತಾಲೂಕಿನ ಪೆರುವಾಯಿ ಎಂಬಲ್ಲಿ ಪೆರುವಾಯಿ ಕಡೆಯಿಂದ ಕೇರಳದ ಕಡೆಗೆ ಜಾನುವಾರು ಸಾಗಾಟ ಮಾಡಲಾಗುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ವಿಟ್ಲ ಪೊಲೀಸರು […]

ಕೇರಳದಲ್ಲಿ ನಿಫಾ ವೈರಸ್‌ಗೆ ಮತ್ತೆರಡು ಜೀವಗಳು ಬಲಿ

Thursday, May 31st, 2018
nipah-virus

ಕೇರಳ: ಕೇರಳದಲ್ಲಿ ನಿಫಾ ವೈರಸ್‌ಗೆ ಮತ್ತೆರಡು ಜೀವಗಳು ಬಲಿಯಾಗಿವೆ. ಕೇರಳದಲ್ಲಿ ನಿಫಾ ವೈರಸ್‌ಗೆ ತುತ್ತಾದವರು ಕೋಯಿಕ್ಕೋಡ್‌ನ‌ ನಿವಾಸಿಗಳಾಗಿದ್ದಾರೆ. ಕರಸ್ಸೆರಿಯದ 28 ವರ್ಷ ಪ್ರಾಯದ ವ್ಯಕ್ತಿಯ ರಕ್ತದ ಮಾದರಿಯಲ್ಲಿ ನಿಫಾ ವೈರಸ್‌ ಇರುವುದನ್ನು ಪುಣೆಯ ರಾಷ್ಟ್ರೀಯ ವೈರಾಲಜಿ ಪ್ರಯೋಗಾಲಯದ ದೃಢ ಪಡಿಸಿದೆ. ನಿನ್ನೆ ಬುಧವಾರ ಕೇರಳ ಮೂಲದ ಯೋಧನೋರ್ವ ಕೋಲ್ಕತಾದಲ್ಲಿ ಮೃತಪಟ್ಟಿದ್ದು ಆತನ ಸಾವಿಗೆ ನಿಫಾ ವೈರಸ್‌ ಕಾರಣವೆಂದು ಶಂಕಿಸಲಾಗಿದೆ.

ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಭಾರಿ ಮಳೆ, ಗುಡುಗು- ಸಿಡಿಲು ಸಹಿತ ಮಳೆಗೆ ಹಲವು ಮನೆಗಳು ಹಾನಿ..!

Tuesday, May 29th, 2018
huge-rain

ಮಂಗಳೂರು: ಕೇರಳಕ್ಕೆ ಮುಂಗಾರು ಪ್ರವೇಶಿಸಿರುವ ಹಿನ್ನೆಲೆಯಲ್ಲಿ ಮಂಗಳವಾರ ಮಂಜಾನೆಯಿಂದ ಮಂಗಳೂರಿನಲ್ಲಿ ಭಾರಿ ಮಳೆ ಸುರಿಯುತ್ತಿದೆ. ಎರಡು ದಿನಗಳಿಂದ ರಾತ್ರಿ ಮಳೆ ಸುರಿಯುತ್ತಿತ್ತು. ಅದರೆ ಮಂಗಳವಾರ ಬೆಳಗ್ಗೆಯಿಂದಲೇ ಎಡೆಬಿಡದೆ ಭಾರೀ ಮಳೆ ಸುರಿಯುತ್ತಿದೆ. ಇಂದು ಅತಿ ಹೆಚ್ಚು ಮಳೆ ಬೀಳಲಿದೆ ಎಂದು ಹವಾಮಾನ ಇಲಾಖೆ ಈಗಾಗಲೇ ಮುನ್ನೆಚ್ಚರಿಕೆ ನೀಡಿದ್ದು, ಮಂಗಳೂರು ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಮಳೆ ಸುರಿಯುತ್ತಿದೆ. ಹವಮಾನ ಇಲಾಖೆ ನೀಡಿರುವ ಮುನ್ಸೂಚನೆ ಪ್ರಕಾರ ಕರಾವಳಿಯಲ್ಲಿ ಜೂನ್ 2ರವರೆಗೆ ಭಾರೀ ಮಳೆಯಾಗುವ ಸಾಧ್ಯತೆ ಇದ್ದು, ಮೀನುಗಾರರು ಸಮುದ್ರಕ್ಕೆ […]

ನಿಪಾಹ್ ವೈರಸ್ ಭೀತಿ ಹಿನ್ನೆಲೆ, ಕರಾವಳಿಯಲ್ಲಿ ಭಾರೀ ಕಟ್ಟೆಚ್ಚರ..!

Wednesday, May 23rd, 2018
nipah-virus

ಮಂಗಳೂರು: ಕೇರಳದಲ್ಲಿ 10ಕ್ಕೂ ಹೆಚ್ಚು ಜನರನ್ನು ಬಲಿ ಪಡೆದುಕೊಂಡಿರುವ ನಿಪಾಹ್ ವೈರಸ್ ಆತಂಕ ಕರಾವಳಿ ಜಿಲ್ಲೆಗಳನ್ನೂ ಆವರಿಸಿದೆ. ಪಕ್ಕದ ಕೇರಳದಿಂದ ನಿಪಾಹ್ ವೈರಸ್ ಸೋಂಕು ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಿಗೆ ಹರಡದಂತೆ ಕಟ್ಟೆಚ್ಚರ ವಹಿಸಲಾಗಿದೆ. ಈ ನಡುವೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಕೇರಳ ಮೂಲದ ಇಬ್ಬರು ರೋಗಿಗಳಿಗೆ ನಿಪಾಹ್ ವೈರಸ್ ಸೋಂಕು ತಗಲಿರುವ ಶಂಕೆಯ ಮೇರೆಗೆ ಅವರ ರಕ್ತದ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿದೆ. ನಿಪಾಹ್ ಸೋಂಕು ಮತ್ತು ಮುಂಜಾಗ್ರತಾ ಕ್ರಮಗಳ ಬಗ್ಗೆ ಈಗಾಗಲೇ ದಕ್ಷಿಣ […]

ಆಳ್ವಾಸ್‌ ನಲ್ಲಿ ಕೇರಳೀಯಂ: ಕೇರಳದ ಪರಂಪರೆಯ ವೈಭವ

Monday, February 19th, 2018
keralian

ಮೂಡಬಿದಿರೆ: ಆಳ್ವಾಸ್‌ ಶಿಕ್ಷಣ ಪ್ರತಿಷ್ಠಾನವು ಮಂಗಳವಾರ ಕಾಲೇಜಿನ ನುಡಿಸಿರಿ ವೇದಿಕೆಯಲ್ಲಿ ‘ಕೇರಳೀಯಂ -2018’ ನ್ನು ಆಯೋಜಿಸಿತ್ತು. ಕೇರಳದ ಸಂಸ್ಕೃತಿ ಬಿಂಬಿಸುವ ಹಲವು ಕಾರ್ಯಕ್ರಮಗಳನ್ನು ಪ್ರಸ್ತುತ ಪಡಿಸಲಾಯಿತು. ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಆ್ಯನಿ ಲಿಬು ಮಾತನಾಡಿ, ದೇವರ ಸ್ವಂತ ನಾಡು ಎಂದು ಕರೆಸಿಕೊಳ್ಳುವ ಕೇರಳವನ್ನು ಇಲ್ಲಿ ಚಿತ್ರಿಸಿರುವ ರೀತಿ ನಿಜಕ್ಕೂ ಆಕರ್ಷಣೀಯ. ನನ್ನಂಥ ಅನಿವಾಸಿ ಭಾರತೀಯರಿಗೆ ಇಂತಹ ಆಯೋಜನೆಗಳು ಸ್ಫೂರ್ತಿ ತುಂಬುತ್ತವೆ. ಇಲ್ಲಿ ಓದುವ ಕೇರಳದ ವಿದ್ಯಾರ್ಥಿಗಳಿಗೆ ಕೇರಳೀಯಂ ತಾಯ್ನಾಡಿನ ಅನುಭವ ಕೊಡುತ್ತದೆ ಎಂದರು. ಕೇರಳದ ಸಾಂಪ್ರದಾಯಿಕ ಮೆರವಣಿಗೆಯೊಂದಿಗೆ […]

ಮತದಾರರ ಪಟ್ಟಿಗೆ ಕೇರಳ ವಿದ್ಯಾರ್ಥಿಗಳ ಹೆಸರು ಸೇರಿಸಿರುವ ಬಗ್ಗೆ ದೂರು: ವೇದವ್ಯಾಸ ಕಾಮತ್

Wednesday, January 31st, 2018
kerala-student

ಮಂಗಳೂರು: ಮಹಾನಗರ ಪಾಲಿಕೆ ಚುನಾವಣಾ ಶಾಖೆಯಲ್ಲಿ ಅನಧಿಕೃತವಾಗಿ ಕೇರಳ ಮೂಲದ ಹಾಸ್ಟೆಲ್ ವಿದ್ಯಾರ್ಥಿಗಳನ್ನು ಇಲ್ಲಿನ ಮತದಾರರ ಪಟ್ಟಿಗೆ ಸೇರ್ಪಡೆಗೊಳಿಸಿದ ಕ್ರಮದ ವಿರುದ್ಧ ಜಿಲ್ಲಾ ಚುನಾವಣಾಧಿಕಾರಿ ಹಾಗೂ ರಾಜ್ಯ ಚುನಾವಣಾ ಆಯುಕ್ತರಿಗೆ ದೂರು ನೀಡಲಾಗುವುದು ಎಂದು ಮಂಗಳೂರು ದಕ್ಷಿಣ ಬಿಜೆಪಿ ಅಧ್ಯಕ್ಷ ವೇದವ್ಯಾಸ ಕಾಮತ್ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇರಳದ ಮತದಾರರ ಪಟ್ಟಿಯಲ್ಲಿ ಹೆಸರು ತೆಗೆದುಹಾಕಿರುವುದಕ್ಕೆ ಸೂಕ್ತ ಪುರಾವೆ ಒದಗಿಸದೆ ಇಲ್ಲಿ ಏಕಾಏಕಿ 3 ಸಾವಿರಕ್ಕೂ ಅಧಿಕ ಕೇರಳದ ಹಾಸ್ಟೆಲ್ ವಿದ್ಯಾರ್ಥಿಗಳ ಹೆಸರನ್ನು ಮತದಾರರ ಪಟ್ಟಿಗೆ ಸೇರಿಸಲು […]

ಕೇರಳ – ಕರ್ನಾಟಕ ಗಡಿಯಲ್ಲಿ ಬೃಹತ್ ಗಾಂಜಾ ಜಾಲ ಪತ್ತೆ

Thursday, January 18th, 2018
ganjaa

ಮಂಗಳೂರು: ಕರ್ನಾಟಕ – ಕೇರಳ ಗಡಿ ಪ್ರದೇಶ ನೆತ್ತಿಲಪದವು ಎಂಬಲ್ಲಿ ಗಾಂಜಾ ಮಾರಾಟ ಜಾಲವನ್ನು ಪತ್ತೆ ಹಚ್ಚುವಲ್ಲಿ ಮಂಗಳೂರು ದಕ್ಷಿಣ ರೌಡಿ ನಿಗ್ರಹದ ದಳದ ಪೊಲೀಸರು ಯಶಸ್ವಿಯಾಗಿದ್ದಾರೆ. ಆರೋಪಿಗಳಾದ ಬಂಟ್ವಾಳ ತೌಡುಗೋಳಿ ನರಿಂಗಾನದ ಮಹಮ್ಮದ್ ಅಜೀಜ್ ಯಾನೆ ಅಬ್ದುಲ್ ಅಜೀಜ್ (34), ತಲಪಾಡಿ ಮುಳ್ಳುಗುಡ್ಡೆಯ ಮಹ್ಮಮದ್ ಇಮ್ತಿಯಾಜ್ (26) ಪರಾರಿಯಾಗಿದ್ದಾರೆ. ಮಂಗಳೂರು ದಕ್ಷಿಣ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತರಿಗೆ ನೆತ್ತಿಲಪದವು ಎಂಬಲ್ಲಿ ಮಹಮ್ಮದ್ ಅಜೀಜ್ ಮತ್ತು ಇಮ್ತಿಯಾಜ್ ಆ್ಯಕ್ಟೀವಾ ಸ್ಕೂಟರ್‌ನಲ್ಲಿ ತಿರುಗಾಡುತ್ತಾ ಗಾಂಜಾ ಮಾರಾಟ ಮಾಡುತ್ತಿದ್ದಾರೆ […]