ತಲಪಾಡಿ ಹೆದ್ದಾರಿ ಪಕ್ಕ ಇರುವ ಗೂಡಂಗಡಿಗಳನ್ನು ತೆರವು ಮಾಡಲು ಮುಂದಾದ ಟೋಲ್ ಗೇಟ್ ಕಂಪೆನಿ

Friday, July 5th, 2024
Talapady Toll-gate

ಮಂಗಳೂರು : ಕುಂದಾಪುರದಿಂದ ತಲಪಾಡಿವರೆಗಿನ ರಸ್ತೆ ಬದಿಯ ಅಂಗಡಿಗಳನ್ನು ತೆರವು ಗೊಳಿಸಲು ಮುಂದಾಗಿರುವ ಟೋಲ್ ಗೇಟ್ ಕಂಪೆನಿ ತಲಪಾಡಿ ಟೋಲ್ ಗೇಟ್ ಸುತ್ತಮುತ್ತ ನಿರ್ಮಿಸಲಾಗಿದ್ದ ಅಂಗಡಿಗಳನ್ನು ತೆರವುಗೊಳಿಸಲು ಮುಂದಾದಾಗ ಸ್ಥಳೀಯರು ಹಾಗೂ ತಲಪಾಡಿ ಗ್ರಾಮ ಪಂಚಾಯಿತಿ ಸದಸ್ಯರು ಕಾರ್ಯಾಚರಣೆ ನಿಲ್ಲಿಸಿದರು. ನವಯುಗ ಉಡುಪಿ ಟೋಲ್ ವೇ ಖಾಸಗಿ ಲಿಮಿಟೆಡ್ ಸಿಬ್ಬಂದಿಗಳು ಟೋಲ್ ಗೇಟ್ ಸುತ್ತಮುತ್ತಇರುವ ಅಂಗಡಿಗಳನ್ನು ಜುಲೈ 20ರೊಳಗೆ ತೆರವುಗೊಳಿಸಲು ಗಡುವು ನೀಡಿದ್ದಾರೆ. ಅಂಗಡಿಗಳನ್ನು ಜುಲೈ 20ರೊಳಗೆ ತೆರವುಗೊಳಿಸದೇ ಇದ್ದಲ್ಲಿ ನೆಲಸಮಗೊಳಿಸಲಾಗುವುದು ಎಂದು ತಿಳಿಸಿದ್ದಾರೆ. ಈ ವರ್ಷ […]

ಬೈಕ್ ಗಳ ನಡುವೆ ಡಿಕ್ಕಿ : ಗಾಯಗೊಂಡಿದ್ದ ಮಂಜೇಶ್ವರದ ಮೆಡಿಕಲ್ ಶಾಪ್ ಮಾಲಕ ಮೃತ್ಯು

Wednesday, March 16th, 2022
Nagappa

ಮಂಜೇಶ್ವರ : ತಲಪಾಡಿ ಟೋಲ್ ಗೇಟ್ ಬಳಿ ಬೈಕ್ ಗಳ ನಡುವೆ ಉಂಟಾದ ಅಪಘಾತದಲ್ಲಿ ಗಂಭೀರ ಗಾಯಗೊಂಡು ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದ್ದ ನಿವೃತ್ತ ಅಧ್ಯಾಪಕರೋರ್ವರು ಬುಧವಾರ ಮೃತ ಪಟ್ಟಿದ್ದಾರೆ. ವರ್ಕಾಡಿ ಗುಡ್ಡೊಡಿಯ ನಾಗಪ್ಪ (68) ಮೃತಪಟ್ಟವರು. ಅವರು ಕೊಡ್ಲ ಮೊಗರು ವಾಣಿ ವಿಜಯ ಶಾಲೆಯಲ್ಲಿ ಅಧ್ಯಾಪಕರಾಗಿ ಸೇವೆ ಸಲ್ಲಿಸಿದ್ದರು. ಮಂಜೇಶ್ವರದ ಮೆಡಿಕಲ್ ಶಾಪ್ ಮಾಲಕರಾಗಿದ್ದರು. ಪ್ರಸ್ತುತ ಎಕ್ಕೂರಿನಲ್ಲಿ ವಾಸವಾಗಿದ್ದರು. ಫೆ. 28ರಂದು ತಲಪಾಡಿ ಟೋಲ್ ಗೇಟ್ ಬಳಿ ಬೈಕ್ ಗಳ ನಡುವೆ ಅಪಘಾತ ನಡೆದು ಗಂಭೀರ ಗಾಯಗೊಂಡಿದ್ದರು

ಮಂಗಳೂರು : ಪಂಪ್​ವೆಲ್​ ಮೇಲ್ಸೇತುವೆ ಕಾಮಗಾರಿ; ಟೋಲ್​​ ಗೇಟ್ ಬಂದ್​ ಮಾಡಿ ಬಿಜೆಪಿ ಕಾರ್ಯಕರ್ತರ ಪ್ರತಿಭಟನೆ

Wednesday, January 1st, 2020
tollgate

ಮಂಗಳೂರು : ಪಂಪ್ವೆಲ್ ಮೇಲ್ಸೇತುವೆ ಕಾಮಗಾರಿ ಪೂರ್ಣಗೊಳ್ಳದ ಹಿನ್ನೆಲೆಯಲ್ಲಿ ಕಾಮಗಾರಿ ಗುತ್ತಿಗೆ ಪಡೆದಿರುವ ನವಯುಗ ಸಂಸ್ಥೆ ವಿರುದ್ಧ ಬಿಜೆಪಿ ಶಾಸಕರಾದ ವೇದವ್ಯಾಸ ಕಾಮತ್ ಮತ್ತು ಭರತ್ ಶೆಟ್ಟಿ ನೇತೃತ್ವದಲ್ಲಿ ತಲಪಾಡಿಯ ಟೋಲ್ ಗೇಟ್ ಬಂದ್ ಮಾಡಿ ಪ್ರತಿಭಟನೆ ನಡೆಸಲಾಯಿತು. ತಲಪಾಡಿಯಲ್ಲಿರುವ ನವಯುಗ ಉಡುಪಿ ಪ್ರೈವೇಟ್ ಲಿಮಿಟೆಡ್ನ ಟೋಲ್ ಗೇಟ್ ಅನ್ನು ಬಿಜೆಪಿ ಕಾರ್ಯಕರ್ತರು ಬಂದ್ ಮಾಡಿ ಪ್ರತಿಭಟನೆ ನಡೆಸಿದರು. ಜನವರಿ 1ಕ್ಕೆ ಈ ಸೇತುವೆ ಉದ್ಘಾಟನೆ ಆಗಲಿದೆ ಎಂದು ಸಂಸ್ಥೆ ಮಾತು ಕೊಟ್ಟಿತ್ತು. ಆದರೆ, ಇನ್ನೂ ಸಹ […]

ಸುರತ್ಕಲ್‌ : ಟೋಲ್ ಗೇಟ್ ಸಿಬ್ಬಂದಿಯಿಂದ ವಾಹನ ಸವಾರರ ಮೇಲೆ ದೌರ್ಜನ್ಯ; ವೀಡಿಯೋ ವೈರಲ್

Tuesday, December 10th, 2019
toll-gate

ಮಂಗಳೂರು : ಸುರತ್ಕಲ್‌ ಎನ್‌ಐಟಿಕೆ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಟೋಲ್ ಗೇಟ್‌ನಲ್ಲಿ ವಾಹನ ಸವಾರರ ಮೇಲೆ ಟೋಲ್ ಗೇಟ್ ಸಿಬ್ಬಂದಿ ದೌರ್ಜನ್ಯ ಎಸಗುತ್ತಿದ್ದಾರೆ ಎಂಬ ಆರೋಪ ಕೇಳಿಬರುತ್ತಿದೆ. ಈ ಟೋಲ್ ಗೇಟ್ ಸಿಬ್ಬಂದಿ ಬಸ್ ಸಹಿತ ಇತರ ವಾಹನ ಸವಾರರ ಮೇಲೆ ದೌರ್ಜನ್ಯ ಎಸಗುತ್ತಿದ್ದಾರೆ ಎನ್ನಲಾಗುತ್ತಿದೆ. ಇದೇರೀತಿ ಟೋಲ್ ಗೇಟ್ ಸಿಬ್ಬಂದಿಯು ಸೋಮವಾರ ಬಸ್ಸೊಂದನ್ನು ಟೋಲ್ ಗೇಟ್ ಬಳಿ ನಿಲ್ಲಿಸಿ ಅದರ ಚಾಲಕನನ್ನು ತರಾಟೆಗೈಯುತ್ತಿರುವ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮೂವರು ಸಿಬ್ಬಂದಿ ಬಸ್ ಸಿಬ್ಬಂದಿಯನ್ನು […]

ಸುರತ್ಕಲ್ ಟೋಲ್ ಗೇಟ್ ವಿರುದ್ಧ ಧರಣಿ: ತುರ್ತು ಸಭೆ ನಡೆಸಿದ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್

Tuesday, October 30th, 2018
sesikanth-senthil

ಮಂಗಳೂರು: ಸುರತ್ಕಲ್ ಟೋಲ್ಗೇಟ್ ಮುಚ್ಚಬೇಕು ಅಥವಾ ಹೆಜಮಾಡಿ ಟೋಲ್ ಗೇಟ್ ನೊಂದಿಗೆ ವಿಲೀನ ಗೊಳಿಸಬೇಕು ಹಾಗೂ ಟೋಲ್ಗೇಟ್ ಗುತ್ತಿಗೆ ನವೀಕರಣದ ವಿರುದ್ಧ ಏಳು ದಿನಗಳಿಂದ ನಡೆಯುತ್ತಿರುವ ಪ್ರತಿಭಟನೆಯ ಹಿನ್ನೆಲೆಯಲ್ಲಿ ದ.ಕ. ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಟೋಲ್ಗೇಟ್ ವಿರೋಧಿ ಸಮಿತಿಯ ಸದಸ್ಯರೊಂದಿಗೆ ಸೋಮವಾರ ತುರ್ತು ಸಭೆ ನಡೆಸಿ ಸಮಸ್ಯೆಯನ್ನು ಆಲಿಸಿದರು. ಸಭೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಯೊಬ್ಬರು ಉಪಸ್ಥಿತರಿದ್ದರು. ರಾಜ್ಯದ ಅಪರ ಕಾರ್ಯದರ್ಶಿಗಳ ಸಭೆಯಲ್ಲಿ ಟೋಲ್ಗೇಟ್ ವಿಲೀನಗೊಳಿಸುವ ಮಾತುಕತೆ ನಡೆದಿರುವುದನ್ನು ಒಪ್ಪಿಕೊಂಡರು. ಆದರೆ ಕೇಂದ್ರದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ […]

ಟೋಲ್ ಗೇಟ್ ಮುಚ್ಚಲು ಆಗ್ರಹ: ಎರಡನೇ ದಿನಕ್ಕೆ ಮುಂದುವರೆದ ಧರಣಿ..!

Wednesday, October 24th, 2018
tollgate

ಮಂಗಳೂರು: ಸುರತ್ಕಲ್ ಎನ್.ಐ.ಟಿ.ಕೆ ಬಳಿ ಇರುವ ಟೋಲ್ ಗೇಟ್ ಮುಚ್ಚುವಂತೆ ಆಗ್ರಹಿಸಿ ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ ನಡೆಸುತ್ತಿರುವ ಧರಣಿ ಎರಡನೇ ದಿನಕ್ಕೆ ಕಾಲಿಟ್ಟಿದೆ. ಎನ್.ಐ.ಟಿ.ಕೆ ಟೋಲ್ ಗೇಟ್ ನಲ್ಲಿ ಸುಂಕ ವಸೂಲಿ ಒಪ್ಪಂದ ಅಕ್ಟೋಬರ್ 30 ಕ್ಕೆ ಕೊನೆಗೊಳ್ಳಲಿದೆ. ಮುಂದೆ ನವೀಕರಣಕ್ಕೆ ಅವಕಾಶ ಕೊಡಬಾರದು ಎಂದು ಆಗ್ರಹಿಸಿ ನಿನ್ನೆಯಿಂದ ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ ಅನಿರ್ಧಿಷ್ಠಾವಧಿ ಮುಷ್ಕರ ಆರಂಭಿಸಿದೆ. ಹೋರಾಟ ಸಮಿತಿಯ ಮುಖಂಡ, ಡಿವೈಎಫ್ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ, ಮಾಜಿ ಶಾಸಕ ವಿಜಯಕುಮಾರ್ […]

ಬ್ರಹ್ಮರಕೂಟ್ಲಿನ ಬಳಿ ಟೋಲ್ ಗೇಟನ್ನು ತಕ್ಷಣ ನಿಲ್ಲಿಸಬೇಕೆಂದು ಪ್ರತಿಭಟನೆ

Friday, April 25th, 2014
Toll Gate

ಬಂಟ್ವಾಳ: ಬಂಟ್ವಾಳ ತಾಲೂಕು ನಾಗರಿಕ ಹಿತರಕ್ಷಣಾ ಸಮಿತಿ ವತಿಯಿಂದ ರಾಷ್ಟ್ರೀಯ ಹೆದ್ದಾರಿ ಬ್ರಹ್ಮರಕೂಟ್ಲಿನ ಬಳಿ ಕಾರ್ಯಾಚರಿಸುತ್ತಿರುವ ಟೋಲ್ ಗೇಟನ್ನು ತಕ್ಷಣ ನಿಲ್ಲಿಸಬೇಕೆಂದು ಆಗ್ರಹಿಸಿ ಶುಕ್ರವಾರ ಟೋಲ್ ಗೇಟ್ ಮುಂಬಾಗದಲ್ಲಿ ಹೆದ್ದಾರಿ ತಡೆ ಹಾಗೂ ಪ್ರತಿಭಟನೆ ನಡೆಸಲಾಯಿತು. ಪ್ರತಿಭಟನಾಕಾರರು ರಸ್ತೆಯಲ್ಲಿ ಕುಳಿತು ಹೆದ್ದಾರಿ ತಡೆ ನಡೆಸಿದರು ಬಳಿಕ ಪ್ರತಿಭಟನಾಕಾರರು ಟೋಲ್ ಸಂಗ್ರಹ ಕೇಂದ್ರದೆಡೆಗೆ ನುಗ್ಗಿ ಟೋಲ್ ಸಂಗ್ರಹವನ್ನು ತಡೆದರು. ಪ್ರತಿಭಟನೆಯ ನೇತೃತ್ವ ವಹಿಸಿದ್ದ ತಾಲೂಕು ನಾಗರಿಕ ಹಿತರಕ್ಷಣಾ ಸಮಿತಿ ಅಧ್ಯಕ್ಷ, ಜಿಲ್ಲಾ ಪಂಚಾಯತು ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ಮಾತನಾಡಿ […]

ಸುರತ್ಕಲ್ : ಟೋಲ್ ಗೇಟ್ ಕೇಂದ್ರ ವಿರೋಧಿಸಿ ಪ್ರತಿಭಟನೆ, ಉತ್ತಮ ಪ್ರತಿಕ್ರಿಯೆ

Thursday, March 28th, 2013
Tollgate, Surathkal bundh

ಸುರತ್ಕಲ್ : ಸುರತ್ಕಲ್ ನಾಗರಿಕ ಹಿತರಕ್ಷಣೆ ಸಮಿತಿ ಆಶ್ರಯದಲ್ಲಿ ಎನ್‌ಐಟಿಕೆ ಬಳಿ ಸ್ಥಾಪಿಸಲು ಉದ್ದೇಶಿಸಿರುವ ಟೋಲ್ ಗೇಟ್ ಕೇಂದ್ರ ವಿರೋಧಿಸಿ ಬುಧವಾರ ನಡೆದ ಬಂದ್‌ಗೆ ಸುರತ್ಕಲ್ ಪರಿಸರದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತ ವಾಯಿತು. ಸುರತ್ಕಲ್‌ನಿಂದ ಎನ್‌ಐಟಿಕೆ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಯಿತು. ಪ್ರತಿಭಟನೆಯಲ್ಲಿ ಎಲ್ಲ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಸಕ್ರಿಯವಾಗಿ ಭಾಗವಹಿಸಿದ್ದು, ಹೋಟೆಲ್ ಗಳು, ಅಂಗಡಿ ಮುಗ್ಗಟುಗಳು ಸ್ವಯಂ ಪ್ರೇರಿತವಾಗಿ ಮುಚ್ಚುವ ಮೂಲಕ ಬಂದ್ ಗೆ ಉತ್ತಮ ಬೆಂಬಲ ವ್ಯಕ್ತವಾಯಿತು. ಒಂದು ಟೋಲ್‌ಗೇಟ್‌ನಿಂದ ಇನ್ನೊಂದಕ್ಕೆ 60 ಕಿ.ಮೀ. […]

ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಟೋಲ್‌ಗೇಟ್‌ ನಿರ್ಮಾಣಕ್ಕೆ ವಿರೋಧ, ಬಂದ್‌ಗೆ ಕರೆ

Wednesday, March 27th, 2013
Tollgate construction

ಸುರತ್ಕಲ್ : ರಾಷ್ಟ್ರೀಯ ಹೆದ್ದಾರಿ 66 ಎನ್‌ಐಟಿಕೆ ಬಳಿ ಇರ್ಕಾನ್ ಸಂಸ್ಥೆಯು ನಿರ್ಮಿಸಲು ಉದ್ದೇಶಿಸಿರುವ ಟೋಲ್ ಗೇಟ್ ಸಂಗ್ರಹ ಕೇಂದ್ರಕ್ಕೆ ಎನ್‌ಐಟಿಕೆ ಹಾಗು ಸುರತ್ಕಲ್ ನಾಗರೀಕ ಸಮಿತಿ ತೀವ್ರ ವಿರೋಧ ವ್ಯಕ್ತಪಡಿಸಿದ್ದು  ಬುಧವಾರ ಸುರತ್ಕಲ್‌  ಬಂದ್‌ಗೆ ಕರೆ ನೀಡಲಾಗಿದೆ. ಎನ್‌ಐಟಿಕೆ ಬಳಿ ಶಾಲೆಗಳು ಹಾಗು ಇಂಜಿನಿಯರಿಂಗ್ ಕಾಲೇಜು, ಕ್ಯಾಂಪಸ್ ಇರುವುದರಿಂದ ವಾಹನಗಳ ಸಾಲುಗಳು, ಅವುಗಳ ಕರ್ಕಶ ಶಬ್ದಗಳು ವಿದ್ಯಾರ್ಥಿಗಳ ಶಿಕ್ಷಣಕ್ಕೆ ಧಕ್ಕೆ ಉಂಟಾಗುವುದಲ್ಲದೆ, ಸುರಕ್ಷತೆಗೂ ಅಡ್ಡಿ ಉಂಟಾಗಬಹುದು, ಅಲ್ಲದೆ ಟೋಲ್‌ಗೇಟ್‌ ನಿರ್ಮಾಣಕ್ಕೆ ಕನಿಷ್ಟ ಆರು ಲೇನ್‌ಗಷ್ಟು ಜಾಗದ […]