Blog Archive

ಜನತೆಗೆ ಸಂಕಷ್ಟ ತರುವ ಯೋಜನೆಗಳು ಜಾರಿಯಾಗಬಾರದು :ಡಿ.ವಿ.ಸದಾನಂದ ಗೌಡ

Monday, November 6th, 2017
harihara pallathadka

ಮಂಗಳೂರು: ಜನತೆಗೆ ಸಂಕಷ್ಠ ತರುವ ಯೋಜನೆಗಳು ಜಾರಿಗೆ ಬಾರದಂತೆ ತಡೆಯಲು ಶ್ರಮಿಸುತ್ತೇನೆ. ಮೊದಲು ಜನರು ನಂತರ ಪರಿಸರ ಎಂಬ ಧ್ಯೇಯವಾಗಬೇಕು. ಯಾರು ಕೂಡಾ ಆತಂಕ ಪಡಬೇಕಾಗಿಲ್ಲ. ಅಂತಃಕರಣ ಸಾಕ್ಷಿಯಾಗಿ ಈ ಯೋಜನೆ ಆಗದಂತೆ ತಡೆಯಲು ಶ್ರಮಿಸುತ್ತೇನೆ. ಊರಿನ ಉದ್ದಾರ ರಾಜಕಾರಣಿಗಳು ಅಥವಾ ಅಧಿಕಾರಿಗಳಿಂದ ಆಗುವುದಿಲ್ಲ ಬದಲಾಗಿ ಜನತೆಯಿಂದ ಊರಿನ ಪ್ರಗತಿಯಾಗುತ್ತದೆ. ಆದುದರಿಂದ ಜನತೆಗೆ ಬಂದ ಈ ಸಂಕಷ್ಠವನ್ನು ದೂರೀಕರಿಸಲು ಶತ ಪ್ರಯತ್ನ ಮಾಡುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಹೇಳಿದರು. ಪರಿಸರ […]

ಬಂಟ್ವಾಳದಲ್ಲಿ ಕಾರ್ಯಕರ್ತರಿಗೆ ಧೈರ್ಯ ತುಂಬಿದ ಡಿ.ವಿ.ಸದಾನಂದ ಗೌಡ

Tuesday, July 11th, 2017
dvs

ಬಂಟ್ವಾಳ : ಬಂಟ್ವಾಳ ವಿಧಾನಸಭಾ ಕ್ಷೇತ್ರದ ಬಿಜೆಪಿ ಪಕ್ಷದ ಕಚೇರಿಗೆ ಮಾನ್ಯ ಸಾಂಖ್ಯಿಕ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವರು ಕೇಂದ್ರ ಸರಕಾರ, ಮಾಜಿ ಮುಖ್ಯಮಂತ್ರಿಗಳು ಡಿ.ವಿ.ಸದಾನಂದ ಗೌಡ ಭೇಟಿ ನೀಡಿದರು. ಕಾರ್ಯಕರ್ತರನ್ನು ಉದ್ದೇಶಿಸಿ ನೀವು ಯಾರು ಧೃತಿಗೇಡಬೇಡಿ ನಿಮ್ಮದೊಂದಿಗೆ ಕಠಿಣ ಪರಿಸ್ಥಿತಿಯಲ್ಲಿ ನಾವು ಇದ್ದೇವೆ ಎಂದು ಪಕ್ಷದ ಕಾರ್ಯಕರ್ತರಲ್ಲಿ ಧೈರ್ಯ ತುಂಬಿದರು. ಬಿಜೆಪಿ ಜಿಲ್ಲಾಧ್ಯಕ್ಷರು ಸಂಜೀವ ಮಠಂದೂರು, ಶ್ರೀ ವಿ ಸುನೀಲ್ ಕುಮಾರ್ ವಿಧಾನಸಭೆಯ ಪ್ರತಿಪಕ್ಷ ಮುಖ್ಯಸಚೇತಕರು, ಕ್ಯಾ.ಗಣೇಶ್ ಕಾರ್ಣಿಕ್ ವಿಧಾನ ಪರಿಷತ್‌ನ ಪ್ರತಿಪಕ್ಷ ಮುಖ್ಯಸಚೇತಕರು, ದ.ಕ […]

ಡಿ.ವಿ.ಸದಾನಂದ ಗೌಡರ ಸಹೋದರ ಡಿ.ವಿ ಭಾಸ್ಕರ್‌ ನಿಧನ

Tuesday, November 22nd, 2016
bhashkar gowda

ಮಂಗಳೂರು: ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡರ ಸಹೋದರ ಡಿ.ವಿ ಭಾಸ್ಕರ್‌ ಇಂದು ಕಾಮಾಲೆ ರೋಗದ  ಚಿಕತ್ಸೆ ಫಲಕಾರಿಯಾಗದೆ ನಗರದ ಕೆ.ಎಮ್‌.ಸಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಸುಳ್ಯ ತಾಲೂಕಿನ ಮಂಡೆಕೋಲು ಗ್ರಾಮದ ದೇವರ ಗುಂಡ ವೆಂಕಪ್ಪ ಗೌಡ ಹಾಗೂ ಕಮಲಮ್ಮ ಅವರ ಮೂರನೆ ಪುತ್ರನಾಗಿರುವ ಇವರು ಕಾಮಾಲೆ ರೋಗಕ್ಕೆ ತುತ್ತಾಗಿ 15 ದಿನಗಳ ಹಿಂದೆ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕತ್ಸೆ ಫಲಕಾರಿಯಾಗದೆ ಇಂದು ಸಾವನ್ನಪ್ಪಿದ್ದಾರೆ. ಭಾಸ್ಕರ್‌ ವಕೀಲರಾಗಿ ವೃತ್ತಿ ಜೀವನ ಪ್ರಾರಂಭಿಸಿದ್ದರು. ಕೆಲ ದಿನಗಳ ಬಳಿಕ ವಕೀಲ ವೃತ್ತಿ ಬಿಟ್ಟು ಕೃಷಿಯಲ್ಲಿ ತೊಡಗಿಕೊಂಡಿದ್ದರು. […]

ಪಕ್ಷದೊಳಗಿನ ಭಿನ್ನಾಭಿಪ್ರಾಯಗಳನ್ನು ಕೋರ್‌ ಕಮಿಟಿ ಸಭೆಯಲ್ಲಿ ಚರ್ಚಿಸಿ ಪರಿಹರಿಸಲು ಪ್ರಯತ್ನಿಸಲಾಗುವುದು: ಡಿ.ವಿ.ಎಸ್

Tuesday, August 23rd, 2016
Sadananda-gouda

ಮಂಗಳೂರು: ಭಾರತೀಯ ಜನತಾ ಪಕ್ಷದೊಳಗಿನ ಭಿನ್ನಾಭಿಪ್ರಾಯಗಳನ್ನು ಮಂಗಳವಾರ ದಿಲ್ಲಿಯಲ್ಲಿ ನಡೆಯುವ ಕೋರ್‌ ಕಮಿಟಿ ಸಭೆಯಲ್ಲಿ ಚರ್ಚಿಸಿ ಪರಿಹರಿಸಲು ಪ್ರಯತ್ನಿಸಲಾಗುವುದು ಎಂದು ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ ತಿಳಿಸಿದ್ದಾರೆ. ಅವರು ಸೋಮವಾರ ಇಲ್ಲಿ ಸುದ್ದಿಗಾರರ ಜತೆ ಮಾತನಾಡಿ, ಪಕ್ಷದ ರಾಜ್ಯ ಅಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಅವರು ಪ್ರಶ್ನಾತೀತ ನಾಯಕರಾಗಿದ್ದಾರೆ. ಪಕ್ಷವನ್ನು ಅಧಿಕಾರಕ್ಕೆ ತರಲು ಎಲ್ಲ ನಾಯಕರು ಒಟ್ಟಾಗಿ ಶ್ರಮಿಸಲಿದ್ದಾರೆ ಎಂದರು. ಪಕ್ಷದೊಳಗೆ ಸಣ್ಣಪುಟ್ಟ ಭಿನ್ನಾಭಿಪ್ರಾಯ ಇರುವುದು ನಿಜ. ಆಗಸ್ಟ್‌ 23ರಂದು ದಿಲ್ಲಿಯಲ್ಲಿ ನಡೆಯುವ ಪಕ್ಷದ ಕೋರ್‌ ಕಮಿಟಿ […]

ಡಿ.ವಿ.ಸದಾನಂದ ಗೌಡರಿಗೆ ಮಾತೃ ವಿಯೋಗ

Saturday, October 11th, 2014
Kamalamma

ಸುಳ್ಯ : ಕೇಂದ್ರ ರೈಲ್ವೆ ಸಚಿವ ,ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಅವರ ತಾಯಿ ಕಮಲಾ ವೆಂಕಪ್ಪ ಗೌಡ (9೨0) ಅವರು ಅ. 11ರಂದು ಮುಂಜಾನೆ 2.30ಕ್ಕೆ ನಿಧನ ಹೊಂದಿದರು. ವಯೋ ಸಹಜ ಅಲ್ಪ ಅನಾರೋಗ್ಯದಿಂದ ಬಳಲುತ್ತಿದ್ದು ಸ್ವಗೃಹದಲ್ಲಿ ನಿಧನ ಹೊಂದಿದರು. ದೇವರಗುಂಡ ಕಮಲಮ್ಮ ಅವರಿಗೆ ಆರು ಮಕ್ಕಳು.ರತ್ನಾವತಿ, ಎರಡನೆಯವರು ಡಿ.ವಿ.ಶಿವರಾಮ, ಮೂರನೆಯವರು ಡಿ.ವಿ.ಸದಾನಂದ ಗೌಡ, ನಾಲ್ಕನೆಯವರು ಸಾವಿತ್ರಿ ಶಿವರಾಮ, ಐದನೆಯವರು ಡಿ.ವಿ.ಭಾಸ್ಕರ್‌, ಕೊನೆಯವರು ಡಿ.ವಿ.ಸುರೇಶ್‌ ಇವರನ್ನು ಅಗಲಿದ್ದಾರೆ. ಸಾವಿತ್ರಿ ಶಿವರಾಮ್‌ ಅವರು ಇತ್ತೀಚೆಗೆ ಅ. 6ರಂದು […]

ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ : ಡಿ.ವಿ

Wednesday, March 6th, 2013
DV Sadananda Gowda

ಮಂಗಳೂರು : ವೈಯಕ್ತಿಕ ಕಾರಣಗಳಿಂದಾಗಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ನಾನು ಸ್ಪರ್ಧಿಸುವುದಿಲ್ಲ ಎಂಬುದಾಗಿ ಮಾಜಿ ಮುಖ್ಯಮಂತ್ರಿ ಡಿ. ವಿ. ಸದಾನಂದ ಗೌಡ ಹೇಳಿದ್ದಾರೆ. ಮಂಗಳೂರಿನಲ್ಲಿ ಮಂಗಳವಾರ ತನ್ನನ್ನು ಭೇಟಿಯಾದ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ವಿಧಾನಸಭಾ ಕ್ಷೇತ್ರದ ಚುನಾವಣೆಗೆ ಸ್ಪರ್ಧಿಸಲಿರುವ ಬಿಜೆಪಿಯ 125 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಮಾರ್ಚ್ 25ರ ಒಳಗೆ ಪ್ರಕಟಿಸಲಾಗುವುದು. ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆದ ಬಳಿಕ ರಾಜ್ಯದ ಬಿಜೆಪಿ ನಾಯಕರು ಹಾಗೂ ಉನ್ನತ ಮಟ್ಟದ ನಾಯಕರ ಸಭೆ ನಡೆಸಲಾಗುವುದು. ಇದರಲ್ಲಿ ವಿಧಾನಸಭಾ ಅಭ್ಯರ್ಥಿಗಳ ಮೊದಲ […]

ಹತ್ತೂರಿನ ಪುತ್ತೂರಿನಲ್ಲಿ ಡಿವಿಎಸ್ ವಿರುದ್ಧ ಕರಂದ್ಲಾಜೆ

Monday, January 28th, 2013
Sadananda Gowda, Shobha Karandlaje

ಮಂಗಳೂರು : ಸದಾನಂದ ಗೌಡ ಮೇಲೆ ಶೋಭಾ ಕರಂದ್ಲಾಜೆ ಆಕ್ರೋಶಿತರಾಗಿಯೇ ಇದ್ದಾರೆ. ಯಡಿಯೂರಪ್ಪರೊಂದಿಗೆ ಗುರುತಿಸಿಕೊಂಡ ನೆಪದಲ್ಲಿ ಶೋಭಾ ಕರಂದ್ಲಾಜೆಯ ಮಂತ್ರಿ ಸ್ಥಾನ ಕಿತ್ತುಕೊಳ್ಳಲು ಸದಾನಂದ ಗೌಡರು ಪಿತೂರಿ ನಡೆಸಿದ್ದರು ಎಂದು ಶೋಭಾರ ಹಿಂಬಾಲಕರು ನಂಬಿದ್ದಾರೆ. ಇದೇ ಕೋಪದಲ್ಲಿ ಡಿ.ವಿ. ವಿರುದ್ಧ ಪುತ್ತೂರಿನಲ್ಲಿ ಸ್ಪರ್ಧಿಸುತ್ತೇನೆ ಎಂದು ಶೋಭಾ ಎಚ್ಚರಿಕೆ ಸಂದೇಶವನ್ನೂ ನೀಡಿದ್ದರು. ಡಿ.ವಿ.ವಿರುದ್ಧ ಶೋಭಾ ಸ್ಪರ್ಧಿಸದೇ ಇದ್ದರೂ ಕೂಡ ಡಿ.ವಿ. ಗೆಲವು ತಡೆಯಲು ಹೋರಾಡದೆ ಇರಲಾರರು. ಶೋಭಾ ಪುತ್ತೂರಿನಲ್ಲಿ ಓಡಾಡಿದ್ದೇ ಆದರೆ ಒಕ್ಕಲಿಗ ಮತಗಳು ಒಡೆಯದಿರಲಾರವು ಎಂದು ಸದಾನಂದ […]

ಆಮ್ಮಿ ಕೊಂಕಣಿ ಸಾಂಸ್ಕೃತಿಕ ಮಹೋತ್ಸವಕ್ಕೆ ಚಾಲನೆ

Friday, November 23rd, 2012
Aami Konkani

ಮಂಗಳೂರು :ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಆಶ್ರಯದಲ್ಲಿ ನಗರದ ಪುರಭವನದಲ್ಲಿ ಆಯೋಜಿಸಿರುವ ಆಮ್ಮಿ ಕೊಂಕಣಿ ನಾಲ್ಕು ದಿನಗಳ ಕೊಂಕಣಿ ಸಾಂಸ್ಕೃತಿಕ ಮಹೋತ್ಸವವನ್ನು ಮಾಜಿ ಮುಖ್ಯಮಂತ್ರಿ ಡಿ ವಿ ಸದಾನಂದ ಗೌಡ ಗುರುವಾರ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಯಾವುದೇ ಒಂದು ದೇಶದ, ಸಮುದಾಯದ ಅಸ್ತಿತ್ವ ಅದರ ಭಾಷೆ, ಸಂಸ್ಕೃತಿ, ಸಂಸ್ಕಾರ, ಆಚಾರ ವಿಚಾರಗಳ ಉಳಿವಿನ ಮೇಲಿದೆ. ಒಂದು ಸಮುದಾಯದ ಸಂಸ್ಕೃತಿಯ ಆಚರಣೆ ಎಂದಿಗೂ ಶಾಶ್ವತವಾಗಿ ಉಳಿಯಬೇಕಾದರೆ ಆ ಸಮುದಾಯದ ಭಾಷೆಯನ್ನು ಉಳಿಸಿ ಬೆಳೆಸಬೇಕು. ದೇಶದ ವಿವಿಧ ಜನರನ್ನು […]

ಡಾ. ಬಿ.ಮಾಧವ ಭಂಡಾಯವರಿಗೆ ಗಣ್ಯರಿಂದ ಅಂತಿಮ ನಮನ

Friday, July 20th, 2012
Madava Bandary

ಮಂಗಳೂರು : ಮಂಗಳವಾರ ರಾತ್ರಿ ನಿಧನರಾದ ಆರೆಸ್ಸೆಸ್ ಮಾಜಿ ವಿಭಾಗ ಸಂಘ ಚಾಲಕ, ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಡಾ. ಮಾಧವ ಭಂಡಾರಿ ಯವರ ಪಾರ್ಥಿವ ಶರೀರದ ಅಂತ್ಯಕ್ರಿಯೆ ನಗರದ ಬೋಳೂರು ರುದ್ರಭೂಮಿಯಲ್ಲಿನೆರವೇರಿತು. ನಗರದ ಸಂಘನಿಕೇತನದಲ್ಲಿ ಪಾರ್ಥಿವ ಶರೀರದ ಅಂತಿಮ ದರ್ಶನವನ್ನು  ಸಮಾಜ ಬಾಂಧವರು ಪಡೆದು ಗೌರವ ಸಲ್ಲಿಸಿದರು. ಬಿ. ಜನಾರ್ದನ ಪೂಜಾರಿ  ಮಾಧವ ಭಂಡಾರಿಯವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದರು. ಈ ಸಂದರ್ಭದಲ್ಲಿ ಆರೆಸ್ಸೆಸ್ ಹಿರಿಯ ನಾಯಕ ದಾ.ಮ. ರವೀಂದ್ರ, ಆರೆಸ್ಸೆಸ್ ನಲ್ಲಿ […]

ಯುವಜನರು ಶುದ್ಧ ಹೊಸ ರಾಜಕೀಯ ಪರ್ವಕ್ಕೆ ನಾಂದಿ ಹಾಡಲು ಮುಂದಾಗಿ : ಡಿವಿಎಸ್

Wednesday, May 23rd, 2012
BjpYuva Jagruti samavesha

ಮಂಗಳೂರು : ರಾಜ್ಯ ಬಿಜೆಪಿ ಯುವಮೋರ್ಚಾ ವತಿಯಿಂದ ನಗರದ ನೆಹರೂ ಮೈದಾನದಲ್ಲಿ ಮಂಗಳವಾರ ನಡೆದ ಬೃಹತ್‌ ಯುವ ಜಾಗೃತಿ ಸಮಾವೇಶವನ್ನು ಬಿಜೆಪಿ ಯುವಮೋರ್ಚಾದ ರಾಷ್ಟ್ರೀಯ ಅಧ್ಯಕ್ಷ ಅನುರಾಧ್‌ ಠಾಕೂರ್‌ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ವಿಶೇಷ ಅಹ್ವಾನಿತರಾಗಿದ್ದ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಮಾತನಾಡಿ ದೇಶ 60 ವರ್ಷಗಳ ಅನಂತರ ಇನ್ನೊಂದು ಸ್ವಾತಂತ್ರ್ಯ ಸಂಗ್ರಾಮಕ್ಕೆ ಸಜ್ಜಾಗಿದೆ. ವ್ಯಾಪಕ ಭ್ರಷ್ಟಾಚಾರ, ಭಯೋತ್ಪಾದನೆ, ಲವ್‌ ಜೆಹಾದ್‌, ನಕ್ಸಲ್‌, ಕಪ್ಪು ಹಣದಂತಹ ಸಮಸ್ಯೆಗಳಿಗೆ ಪರಿಣಾಮಕಾರಿ ಪರಿಹಾರ ಕಂಡುಕೊಳ್ಳುವ ಇಚ್ಛಾಶಕ್ತಿ ಕೇಂದ್ರದ ಯುಪಿಎ […]