Blog Archive

ವಿವಾದದ ನಡುವೆ ಬಿತ್ತು ಎತ್ತಿನಹೊಳೆಗೆ ಅಡಿಗಲ್ಲು

Tuesday, March 4th, 2014
Yettinaholege

ಮಂಗಳೂರು: ಬಂದ್ ಹಾಗೂ ಪ್ರತಿಭಟನೆ ನಡುವೆಯೇ ವಿವಾದಿತ ಎತ್ತಿನಹೊಳೆ ಯೋಜನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೋಮವಾರ ಶಂಕುಸ್ಥಾಪನೆ ನೆರವೇರಿಸಿದ್ದಾರೆ. ಎತ್ತಿನಹೊಳೆ ಯೋಜನೆ ವಿರೋಧಿಸಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಟೈರ್‌ಗೆ ಬೆಂಕಿ ಹಚ್ಚಿ ಬಂದ್ ಆಚರಿಸಿದರೆ, ಚಿಕ್ಕಬಳ್ಳಾಪುರದಲ್ಲಿ ಶಾಶ್ವತ ನೀರಾವರಿ ಹೋರಾಟ ಸಮಿತಿ ನೇತೃತ್ವದಲ್ಲಿ ಕಪ್ಪು ಪಟ್ಟಿ ಹಾಗೂ ಖಾಲಿ ಪೈಪುಗಳನ್ನು ಪ್ರದರ್ಶಿಸಿ ತೀವ್ರ ಆಕ್ರೋಶ ವ್ಯಕ್ತಪಡಿಸಲಾಯಿತು. ಈ ವೇಳೆ 50ಕ್ಕೂ ಹೆಚ್ಚು ಪ್ರತಿಭಟನಾಕಾರರನ್ನು ಬಂಧಿಸಿ, ಬಿಡುಗಡೆ ಮಾಡಲಾಗಿದೆ. ಚಿಕ್ಕಬಳ್ಳಾಪುರ ನಗರದ ಹೊರ ವಲಯದ ಬಿ.ಬಿ. ರಸ್ತೆಯಲ್ಲಿರುವ (ಆದಿಚುಂಚನಗಿರಿ ಶಾಖಾ […]

ದಕ್ಷಿಣ ಕನ್ನಡ ಜಿಲ್ಲೆಯ 50 ಕೇಂದ್ರಗಳಲ್ಲಿ ಏಕ ಕಾಲದಲ್ಲಿ ಯೋಗ ಕಾರ್ಯಕ್ರಮ

Friday, December 13th, 2013
yoga

ಮಂಗಳೂರು : ಧರ್ಮಸ್ಥಳದ ಶಾಂತಿವನ ಟ್ರಸ್ಟ್ ನ ಯೋಗ ಮತ್ತು ನೈತಿಕ ಶಿಕ್ಷಣ ಇಲಾಖೆ ಹಾಗೂ ಸರ್ಕಾರವು ಜಂಟಿಯಾಗಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ 50 ಕೇಂದ್ರಗಳಲ್ಲಿ ಯೋಗ ಕಾರ್ಯಕ್ರಮವನ್ನು ಹಮ್ಮಿಕೊಂಡು ಒಂದೇ ಬಾರಿ 70000 ಕ್ಕೂ ಅಧಿಕ ವಿದ್ಯಾರ್ಥಿಗಳು ಯೋಗದ ವಿವಿಧ ಅಭ್ಯಾಸಗಳನ್ನು ಪ್ರದರ್ಶಿಸಿದರು. ನಗರದ ಶಾರದಾ ಕಾಲೇಜಿನಲ್ಲಿ ಏರ್ಪಡಿಸಲಾಗಿದ್ದ ಭವಿಷ್ಯತ್ತಿಗಾಗಿ ಯೋಗ ಕಾರ್ಯಕ್ರಮದಲ್ಲಿ ಮಾತನಾಡಿದ ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ಯೋಗ ಸಚಿವ ಯು.ಟಿ.ಖಾದರ್ ಇಂದಿನ ಯುವಜನಾಂಗ ದೈಹಿಕವಾಗಿ ಹಾಗೂ ಮಾನಸಿಕವಾಗಿ ಬಲಿಷ್ಟರಾಗ […]

ದ್ವಿತೀಯ ಪಿಯುಸಿ ಫಲಿತಾಂಶ : ಅಕ್ಷಯ ಕಾಮತ್ ರಾಜ್ಯಕ್ಕೆ ಪ್ರಥಮ

Tuesday, May 7th, 2013
Akshay Kamath -Sooraj Hegde

ಮಂಗಳೂರು : ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಗೊಂಡಿದ್ದು, ಈ ಬಾರಿ ಉಡುಪಿ ರಾಜ್ಯಕ್ಕೆ ಪ್ರಥಮ ಸ್ಥಾನವನ್ನು ಪಡೆದರೆ, ದಕ್ಷಿಣ ಕನ್ನಡ ದ್ವಿತೀಯ ಸ್ಥಾನವನ್ನು ಪಡೆದಿದೆ. ಕೆನರಾ ಕಾಲೇಜಿನ ಅಕ್ಷಯ ಕಾಮತ್ ವಿಜ್ಞಾನ ವಿಭಾಗದಲ್ಲಿ  ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆಯುವುದರ ಮೂಲಕ ಜಿಲ್ಲೆಗೆ ಕೀರ್ತಿಯನ್ನು ತಂದಿದ್ದರೆ, ಆಳ್ವಾಸ್ ವಿದ್ಯಾಸಂಸ್ಥೆಯ ವಿದ್ಯಾರ್ಥಿಯಾಗಿರುವ ಸೂರಜ್ ಹೆಗ್ಡೆ ವಾಣಿಜ್ಯ ವಿಭಾಗದಲ್ಲಿ ರಾಜ್ಯಕ್ಕೆ ಅಗ್ರ ಸ್ಥಾನವನ್ನು ಪಡೆದಿದ್ದಾನೆ. ಮಂಗಳೂರಿನ ಕೆನರಾ ಪಿ.ಯು. ಕಾಲೇಜಿನ ವಿದ್ಯಾರ್ಥಿಯಾಗಿರುವ ಅಕ್ಷಯ್‌ ಕಾಮತ್‌ ಈ ಬಾರಿಯ ದ್ವಿತೀಯ ಪಿಯುಸಿ ವಿಜ್ಞಾನ […]

ಬಂಟರ ಗುದ್ದಾಟ : ಕೈಯಲ್ಲಿ ಮತ್ತೇ ತಳಮಳ

Monday, March 25th, 2013
Kripa Alva Shakuntala Shetty

ಮಂಗಳೂರು : ದ.ಕ. ಜಿಲ್ಲೆಯಲ್ಲಿ ಅಸೆಂಬ್ಲಿ ಚುನಾವಣೆಯಲ್ಲಿ ಇಬ್ಬರು ಬಂಟ ಅಭ್ಯರ್ಥಿಗಳಿಗೆ ಸ್ಪರ್ಧಿಸಲು ಅವಕಾಶ ನೀಡುವುದು ಕಾಂಗ್ರೆಸ್ ನಲ್ಲಿ ಮೊದಲಿನಿಂದಲೂ ನಡೆದು ಬಂದ ಸಂಪ್ರದಾಯ. ಕಳೆದ ಅವಧಿಯಲ್ಲಿ ಸುರತ್ಕಲ್ ನಲ್ಲಿ ಅವಕಾಶ ತಪ್ಪಿದ್ದು ಗೊಂದಲಕ್ಕೆ ಕಾರಣವಾಗಿದ್ದು, ಈಗ ಮತ್ತೆ ಅದೇ ಗೊಂದಲ ಮುಂದುವರಿದಿದೆ. ಬಂಟರಿಗೆ ಅವಕಾಶ ಕೊಡಬೇಕು ಎಂಬ ಆಗ್ರಹ ಜೋರಾಗಿದೆ. ಆದರೆ ಎಲ್ಲಿ ಎಂಬ ಪ್ರಶ್ನೆಯೂ ಕಾಡುತ್ತಿದೆ. ಇದೇ ಸಂದರ್ಭದಲ್ಲಿ ಮಹಿಳೆಯರು ತಮಗೆ ಅವಕಾಶ ಕೊಡಲೇಬೇಕು ಎಂದು ರಾಜ್ಯ ಮಟ್ಟದಲ್ಲಿ ಹೋರಾಟಕ್ಕಿಳಿದಿದ್ದಾರೆ. ಈ ಬೆಳವಣಿಗೆ ಕೂಡ […]

ರಾಜ್ಯ ವಿಧಾನ ಸಭಾ ಚುನಾವಣೆ : ಏಪ್ರಿಲ್ 17 ನಾಮಪತ್ರ ಸಲ್ಲಿಸಲು ಕೊನೆಯ ದಿನ

Friday, March 22nd, 2013
DC office press meet

ಮಂಗಳೂರು : ಮೇ ೫ ರಂದು ರಾಜ್ಯ ವಿಧಾನ ಸಭಾ ಚುನಾವಣೆಯು ನಡೆಯಲಿದ್ದು ಚುನಾವಣೆಗೆ ಸಂಬಂಧಪಟ್ಟಂತೆ  ದ.ಕ. ಜಿಲ್ಲಾಡಳಿತವು ಹಲವು ಕ್ರಮಗಳನ್ನು ಕೈಗೊಂಡಿರುವುದಾಗಿ ದ.ಕ. ಜಿಲ್ಲಾಧಿಕಾರಿ ಎನ್.ಪ್ರಕಾಶ್ ಹೇಳಿದರು. ಶುಕ್ರವಾರ ಜಿಲಾಧಿಕಾರಿ ಕಚೇರಿಯಲ್ಲಿ ನಡೆದ ಪತ್ರಿಕಾ ಘೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ಭಾರತ ಚುನಾವಣಾ ಆಯೋಗವು ಚುನಾವಣಾ ವೇಳಾಪಟ್ಟಿಯನ್ನು, ದಿನಾಂಕವನ್ನು ಪ್ರಕಟಿಸಿರುವುದರಿಂದ ಮೇ 11 ರವರೆಗೆ ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುತ್ತದೆ. ಈ ಬಾರಿ ಚುನಾವಣೆಯಲ್ಲಿ  7,25,162 ಪುರುಷ ಮತದಾರರು, 7,36,497 ಮಹಿಳಾ ಮತದಾರರು ಸೇರಿ ಒಟ್ಟು […]

ಮತದಾನದಲ್ಲಿ ಚೇತರಿಕೆ ಸಂಜೆ 3 ಕ್ಕೆ ದ.ಕ : 61:46% ಉಡುಪಿ 63.42%

Thursday, March 7th, 2013
MCC election

ಮಂಗಳೂರು : ಸ್ಥಳೀಯ ಸಂಸ್ಥೆಗಳ ಸಾರ್ವತ್ರಿಕ ಚುನಾವಣೆ ಸಂಜೆಯ ವೇಳೆಗೆ ಚುರುಕುಗೊಂಡಿದ್ದು ಸಂಜೆ 3 ಗಂಟೆಗೆಯವರೆಗೆ ದ.ಕ ಜಿಲ್ಲೆಯಲ್ಲಿ 61.46 % ಮತ್ತು ಉಡುಪಿ ಜಿಲ್ಲೆಯಲ್ಲಿ 63.42% ಮತದಾನವಾಗಿದೆ. ಮಂಗಳೂರು ನಗರ 51% ಉಳ್ಳಾಳ ಪುರಸಭೆ 54.8%, ಮೂಡಬಿದ್ರೆ ಪುರಸಭೆ 63.3%, ಬಂಟ್ವಾಳ ಪುರಸಭೆ  65.6% ,ಪುತ್ತೂರು ಪುರಸಭೆ 60.4%, ಬೆಳ್ತಂಗಡಿ ಪಟ್ಟಣ ಪಂಚಾಯತ್ 63.6%, ಸುಲ್ಯ ಪಟ್ಟಣ ಪಂಚಾಯತ್ 71.7% ಮತದಾನವಾಗಿದೆ. ಉಡುಪಿ ಜಿಲ್ಲೆಯಲ್ಲಿ ಉಡುಪಿ ನಗರ ಸಭೆ 60.35%, ಸಾಲಿಗ್ರಾಮ 67.14%, ಕುಂದಾಪುರ 61.90%, […]

ಸ್ಥಳೀಯ ಸಂಸ್ಥೆ ಚುನಾವಣೆ ದ.ಕ 50.97% ಉಡುಪಿ 51.85% ಮತ ಚಲಾವಣೆ.

Thursday, March 7th, 2013
MCC election

ಮಂಗಳೂರು : ದಕ್ಷಿಣ ಕನ್ನಡ ಮತ್ತು ಉಡುಪಿಯಲ್ಲಿ ನಡೆಯುತ್ತಿರುವ ಸ್ಥಳೀಯ ಸಂಸ್ಥೆ ಚುನಾವಣೆ ಮದ್ಯಾಹ್ನ 1 ಗಂಟೆಗೆ ವೇಳೆಗೆ ಚೇತರಿಸಿದ್ದು ದಕ್ಷಿಣ ಕನ್ನಡ ಜಿಲ್ಲೆಯ 544 ಮತಗಟ್ಟೆಗಳಲ್ಲಿ ಶೇಕಡಾ 5.97% ಮತದಾನವಾಗಿದೆ. ಉಡುಪಿ ಜಿಲ್ಲೆಯ ಒಟ್ಟು 148 ಮತಗಟ್ಟೆಗಳಲ್ಲಿ 51.85% ಮತದಾನವಾಗಿದೆ. ಮಂಗಳೂರು 41% ಉಳ್ಳಾಲ 43.8% ಮೂಡಬಿದ್ರೆ 52.2% ಬಂಟ್ವಾಳ 52.8% ಪುತ್ತೂರು 52.4%, ಬೆಳ್ತಂಗಡಿ 55.5% ಸುಳ್ಯ 59.1% ಮತದಾನವಾಗಿದೆ. ಉಡುಪಿ ನಗರ ಸಭೆ 48.25, ಸಾಲಿಗ್ರಾಮ 56.42, ಕುಂದಾಪುರ 49.31, ಕಾರ್ಕಳ 53.40% […]

ಜಿಲ್ಲೆಯಲ್ಲಿ ಗಣರಾಜ್ಯೋತ್ಸವ ಆಚರಣೆಗೆ ಸಕಲ ಸಿದ್ಧತೆ

Tuesday, January 22nd, 2013
preparation of Republic Day

ಮಂಗಳೂರು : ದೇಶದ ಪ್ರಮುಖ ರಾಷ್ಟ್ರೀಯ ಹಬ್ಬಗಳಲ್ಲಿ ಒಂದಾದ ಗಣರಾಜ್ಯೋತ್ಸವ ದಿನಾಚರಣೆಗೆ ಇನ್ನು ಕೆಲವೇ ದಿನಗಳು ಬಾಕಿ ಇದ್ದು ದೇಶದೆಲ್ಲೆಡೆ ತಯಾರಿ ನಡೆಯುತ್ತಿದ್ದು, ಪ್ರತಿ ವರ್ಷದಂತೆ ಈ ಬಾರಿಯೂ ನಗರದ ಕೇಂದ್ರ ಭಾಗವಾದ ನೆಹರೂ ಮೈದಾನದಲ್ಲಿ ತಯಾರಿ ನಡೆಸಲಾಗುತ್ತಿದೆ. ದ.ಕ. ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ಸುಮಾರು 5000 ವಿದ್ಯಾರ್ಥಿಗಳು ರಾಷ್ಟ್ರ ಪ್ರೇಮದ ಸಂದೇಶ ಸಾರಲು ತಮ್ಮ ತಯಾರಿ ನಡೆಸುತ್ತಿದ್ದಾರೆ. ಇದೇ ಮೊದಲ ಬಾರಿಗೆ ಗಣರಾಜ್ಯೋತ್ಸವದ ಸಾಂಸ್ಕ್ರತಿಕ ಕಾರ್ಯಕ್ರಮದಲ್ಲಿ ನಗರದ ವಿವಿಧ ಶಾಲೆಗಳ 5000 ವಿದ್ಯಾರ್ಥಿನಿಯರು ದೇಶ […]

ಪಿಯುಸಿ ಫಲಿತಾಂಶಃ ದಕ್ಷಿಣ ಕನ್ನಡ ಜಿಲ್ಲೆ ಪ್ರಥಮ, ಉಡುಪಿ ದ್ವಿತೀಯ

Thursday, May 24th, 2012
PUC Result

ಮಂಗಳೂರು : ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆ ರಾಜ್ಯದಲ್ಲಿಯೇ ಪ್ರಥಮ ಸ್ಥಾನ ಪಡೆದಿದ್ದು,ಶೇ. 86.1 ಫಲಿತಾಂಶ ಲಭಿಸಿದೆ. ಉಡುಪಿ ದ್ವಿತೀಯ (ಶೇ.85.32) ಸ್ಥಾನ ಹಾಗೂ ಕೊಡಗು ತೃತೀಯ ಸ್ಥಾನ ಪಡೆದಿದ್ದು, ಯಾದಗಿರಿ ಶೇ.32.21ಫಲಿತಾಂಶ ಪಡೆದು ಕೊನೆಯ ಸ್ಥಾನ ಪಡೆದಿದೆ. ರಾಜ್ಯದಲ್ಲಿ ಈ ಬಾರಿ ಪಿಯುಸಿಯಲ್ಲಿ ಒಟ್ಟು ಶೇ.57.03ರಷ್ಟು ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದು, ಇದು ಕಳೆದ ವರ್ಷಕ್ಕಿಂತ ಶೇ.8.01ರಷ್ಟು ಹೆಚ್ಚಳವಾಗಿದೆ. ವಿಜ್ಞಾನ ವಿಭಾಗದಲ್ಲಿ ಅತಿ ಹೆಚ್ಚು ಅಂದರೆ ಎಂ.ದೀಪಾ ಮಲ್ಲೇಶ್ವರದ ಎಂಇಎಸ್ ಕಿಶೋರ ವಿದ್ಯಾಲಯದ ವಿದ್ಯಾರ್ಥಿನಿ 593 […]

ತಾಲೂಕು ಮತ್ತು ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ ಬಿಜೆಪಿಗೆ ಜಯಭೇರಿ

Tuesday, January 4th, 2011
ದ.ಕ.ಜಿಲ್ಲಾ ಪಂಚಾಯತ್ ತಾಲೂಕು ಪಂಚಾಯತ್ ಚುನಾವಣೆ ಫಲಿತಾಂಶ

ಮಂಗಳೂರು : ಡಿ.31ರಂದು ನಡೆದ ಜಿಲ್ಲಾ ಪಂಚಾಯತ್ ಮತ್ತು ತಾಲೂಕು ಪಂಚಾಯತ್ ಕ್ಷೇತ್ರಗಳ ಚುನಾವಣೆಯ ಚುನಾವಣಾ ಫಲಿತಾಂಶ ಹೊರಬಿದ್ದಿದ್ದು , ದಕ್ಷಿಣ ಕನ್ನಡ ಮತ್ತು ಉಡುಪಿಯ ಜಿ.ಪಂ., ತಾ.ಪಂ. ಕ್ಷೇತ್ರಗಳಲ್ಲಿ ಆಡಳಿತಾರೂಢ ಭಾರತೀಯ ಜನತಾ ಪಾರ್ಟಿ ಮೇಲುಗೈ ಸಾಧಿಸಿದೆ ಇಂದು ಬೆಳಿಗ್ಗೆ ಮತ ಎಣಿಕೆ ಮುಗಿದಾಗ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಿಜೆಪಿ 24 ಸ್ಥಾನಗಳನ್ನು  ತನ್ನದಾಗಿಸಿಕೊಂಡಿದೆ, ಕಾಂಗ್ರೆಸ್ 11 ಸ್ಥಾನಗಳನ್ನು ಪಡೆಯಿತು. ಬಂಟ್ವಾಳದಲ್ಲಿ ಜಿ.ಪಂ. ಕ್ಷೇತ್ರದಲ್ಲಿ 6ಸ್ಥಾನಗಳಲ್ಲಿ ಬಿಜೆಪಿ ,ಕಾಂಗ್ರೆಸ್ 3 ಸ್ಥಾನಗಳನ್ನು ಗಳಿಸಿದೆ. ಗೋಳ್ತಮಜಲು ಕ್ಷೇತ್ರದಲ್ಲಿ […]