Blog Archive

ಪೇಜಾವರ ಶ್ರೀಗಳು ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭೇಟಿ, ಜೂನ್ 10 ಕ್ಕೆ ಮತ್ತೆ ಸಭೆ

Saturday, June 8th, 2019
Kukke-Math

ಮಂಗಳೂರು : ಪೇಜಾವರ ಶ್ರೀಗಳು ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಜೂನ್ 7ರ ಸಂಜೆ ಭೇಟಿ ನೀಡಿ ಎರಡೂ ಕಡೆಯಿಂದ ಅಭಿಪ್ರಾಯ ಸಂಗ್ರಹಿಸಿದರೂ ಮತ್ತೆ ಭಿನ್ನಾಭಿಪ್ರಾಯ ಉಂಟಾಗಿದೆ. ಹಾಗಾಗಿ ಜೂನ್ 10ರ ಒಳಗೆ ಮತ್ತೊಮ್ಮೆ ಸಭೆ ಕರೆಯಲು ಸ್ವಾಮೀಜಿ ನಿರ್ಧರಿಸಿದ್ದಾರೆ. ದಕ್ಷಿಣ ಭಾರತದ ಪವಿತ್ರ ನಾಗಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಮಠ ಮತ್ತು ದೇವಸ್ಥಾನದ ನಡುವಿನ ತಿಕ್ಕಾಟ ಮುಂದುವರಿದಿದೆ. ಸರ್ಪ ಸಂಸ್ಕಾರ ವಿಚಾರದಲ್ಲಿ ಹಲವಾರು ವರ್ಷಗಳ ಕಾಲದ ಸಂಘರ್ಷಕ್ಕೆ ಮಂಗಳ ಹಾಡಲು ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಆಗಮಿಸಿದ ಹಿರಿಯ ಯತಿ ಪೇಜಾವರ […]

ಶ್ರೀಗಳ ಅಗಲಿಕೆ ನೋವು ತಂದಿದೆ..ಶೀರೂರು ಸ್ವಾಮೀಜಿಗಳಿಗೆ ವಿಷ ನಿಡೋ ಪ್ರಮೇಯವೇ ಇಲ್ಲ: ಪೇಜಾವರ ಶ್ರೀ

Thursday, July 19th, 2018
pejwara-shree

ಉಡುಪಿ: ಶೀರೂರು ಲಕ್ಷ್ಮೀವರತೀರ್ಥ ಶ್ರೀಗಳ ಅಗಲಿಕೆ ನೋವು ತಂದಿದೆ. ವಿಷ ಪ್ರಾಶನದ ಬಗ್ಗೆ ಮಾಹಿತಿ ಇಲ್ಲವೆಂದು ಪೇಜಾವರ ಶ್ರೀಗಳು ಹೇಳಿದ್ದಾರೆ. ನಗರದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಎಲ್ಲಿ ಆಹಾರ ಸ್ವೀಕಾರ ಮಾಡಿದ್ದಾರೋ ಏನೋ ಗೊತ್ತಿಲ್ಲ. ಲಿವರ್, ಕಿಡ್ನಿ ಫೇಲ್ ಆಗಿತ್ತು ಎಂದು ಮಾಹಿತಿ ಬಂದಿದೆ. ಅವರಿಗೆ ವಿಷ ಪ್ರಾಶನ ಯಾರು ಮಾಡ್ತಾರೆ? ಶೀರೂರು ಸ್ವಾಮೀಜಿಗಳಿಗೆ ವಿಷ ನಿಡೋ ಪ್ರಮೇಯವೇ ಇಲ್ಲ ಎಂದಿದ್ದಾರೆ. ಸ್ವಾಮಿಗಳನ್ನು ಯಾರೂ ಕೊಲೆ ಮಾಡುವುದಿಲ್ಲ. ಅವರನ್ನು ಕೊಲೆ ಮಾಡಿ ಪಟ್ಟಕ್ಕೆ ಏರುವ ಉದ್ದೇಶ […]

‘ಪೇಜಾವರ ಶ್ರೀ ಟಿವಿ ನೋಡಲ್ಲ, ಹಾಗಾಗಿ ಮೋದಿ ಅಭಿವೃದ್ಧಿ ಬಗ್ಗೆ ಗೊತ್ತಿಲ್ಲ’: ಶೋಭಾ ಕರಂದ್ಲಾಜೆ

Wednesday, June 6th, 2018
shobha-karandlaje

ಮಂಗಳೂರು: ಪೇಜಾವರ ಸ್ವಾಮೀಜಿಯವರು ಸನ್ಯಾಸಿಗಳು. ಅವರು ಹೆಚ್ಚಾಗಿ ಟಿವಿ ನೋಡೋದಿಲ್ಲ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ಅಭಿವೃದ್ಧಿ ಯೋಜನೆಗಳು ಹಾಗೂ ಸಾಧನೆಗಳ ಬಗ್ಗೆ ಅವರಿಗೆ ಅರಿವಿಲ್ಲ ಎಂದು ಸಂಸದೆ ಶೋಭಾ ಕರಂದ್ಲಾಜೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಮಂಗಳೂರಿನಲ್ಲಿ ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರಕಾರ ನಿರೀಕ್ಷಿತ ಮಟ್ಟದ ಸಾಧನೆ ಮಾಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದ ಉಡುಪಿಯ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿಯವರ ಬಗ್ಗೆ ಪ್ರತಿಕ್ರಿಯೆ ನೀಡಿದರು. ಕೇಂದ್ರ ಸರಕಾರ ದಾಖಲೆ ಪ್ರಮಾಣದ ಸಾಧನೆಗಳನ್ನು ಮಾಡಿದೆ. ಅಂತರಾಷ್ಟ್ರೀಯ […]

ನರೇಂದ್ರ ಮೋದಿ ಅವರ ಮೇಲೆ ನನಗೆ ಯಾವುದೇ ಅಸಮಾಧಾನವಿಲ್ಲ: ಪೇಜಾವರ ಶ್ರೀ

Tuesday, June 5th, 2018
pejwar-shree

ಉಡುಪಿ: ಪ್ರಧಾನಿ ನರೇಂದ್ರ ಮೋದಿ ಅವರ ಮೇಲೆ ನನಗೆ ಯಾವುದೇ ಅಸಮಾಧಾನವಿಲ್ಲ. ಕೆಲ ಮಾಧ್ಯಮಗಳು ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಿವೆ. ಸಂಪೂರ್ಣ ಸಮಾಧಾನ ಇಲ್ಲ ಅಂತಷ್ಟೆ ನಾನು ಹೇಳಿದ್ದೆ ಎಂದು ಪೇಜಾವರ ಶ್ರೀ ವಿಶ್ವೇಶ್ವರ ತೀರ್ಥ ಶ್ರೀಪಾದರು ಸ್ಪಷ್ಟನೆ ನೀಡಿದರು. ಮೈಸೂರು ಮಾಧ್ವ ವಿದ್ಯಾರ್ಥಿ ನಿಲಯದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಕೇಂದ್ರ ಸರ್ಕಾರದ ಸಾಧನೆಗಳು ಸಮಾಧಾನ ತಂದಿಲ್ಲ ಅಂತ ನಾನು ಹೇಳಿಲ್ಲ.‌ ಕಪ್ಪು ಹಣ, ಗಂಗಾ ನದಿ ಶುದ್ಧೀಕರಣ ಆಗಿಲ್ಲ ಎಂದು ನನಗೆ ಮಾಹಿತಿ ಬಂತು. ಈ […]

ಸಿಎಂ ಹೆಚ್‌ಡಿಕೆ ಅನುಭವಿ ರಾಜಕಾರಣಿ, ಕೇಂದ್ರದಿಂದ ನಿರೀಕ್ಷೆಯಷ್ಟು ಕೆಲಸವಾಗಿಲ್ಲ: ಪೇಜಾವರ ಶ್ರೀ

Friday, June 1st, 2018
pejawar-swamii

ಉಡುಪಿ: ಸಿಎಂ ಕುಮಾರಸ್ವಾಮಿ ಅನುಭವಿ ರಾಜಕಾರಣಿ. ರಾಜ್ಯ ಸರ್ಕಾರ ಪೂರ್ಣಾವಧಿ ಅಧಿಕಾರ ಮಾಡಲಿ ಎಂದು ಪೇಜಾವರ ಶ್ರೀಗಳು ಹಾರೈಸಿದರು. ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಶ್ರೀಗಳು, ರಾಜಕೀಯ ಪಕ್ಷಗಳು ಪ್ರಜಾಪ್ರಭುತ್ವದ ವಿಕೃತಿ. ರಾಜಕಾರಣಿಗಳು ರೆಸಾರ್ಟ್, ಆಪರೇಷನ್‌ನಲ್ಲಿ ತಲ್ಲೀನರಾಗಿದ್ದಾರೆ. ಯಾವುದೇ ರಾಜಕೀಯ ಪಕ್ಷಗಳು ನೈತಿಕತೆ ಹೊಂದಿಲ್ಲ. ಗೊಂದಲ ನಿರ್ಮಾಣವಾದ್ರೆ ಕರ್ನಾಟಕದಲ್ಲಿ ರಾಷ್ಟ್ರಪತಿ ಆಡಳಿತ ಬೇಡ. ಸರ್ವ ಪಕ್ಷ ಸರ್ಕಾರ ಜಾರಿಗೆ ಬರಬೇಕು. ಅಂತಹ ಪ್ರಯೋಗ ರಾಜ್ಯದಲ್ಲಿ ನಡೆಯಬೇಕು. ಆದರ್ಶ ಮಂತ್ರಿ ಮಂಡಲ ರಚನೆಯಾಗಲಿ ಎಂದರು. ವಿರೋಧ ಪಕ್ಷ ಮುಕ್ತ ಸರ್ಕಾರ […]

ಸಂವಿಧಾನವನ್ನು ಅಂಬೇಡ್ಕರ್ ಒಬ್ಬರೇ ಮಾಡಿದ್ದಲ್ಲ : ಪೇಜಾವರ ಶ್ರೀ

Saturday, November 25th, 2017
pejavar seer

ಉಡುಪಿ :  ಕೇವಲ ಅಲ್ಪಸಂಖ್ಯಾತರು ಹಾಗೂ ಬಹುಸಂಖ್ಯಾತರ ನಡುವೆ ಇರುವ ತಾರತಮ್ಯವನ್ನು ತೊಡೆದು ಹಾಕಲು ಸಂವಿಧಾನದ ತಿದ್ದುಪಡಿ ಮಾಡುವಂತೆ ಸೂಚಿಸಿದ್ದೇನೆಯೇ ಹೊರತು ಸಂವಿಧಾನವನ್ನು ಬದಲಾಯಿಸುವಂತೆ ಕರೆ ನೀಡಿಲ್ಲ ಎಂದು ಪರ್ಯಾಯ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಧರ್ಮ ಸಂಸದ್‌ನಲ್ಲಿ ಶನಿವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಸ್ಪಷ್ಟಪಡಿಸಿದ್ದಾರೆ. ಅಲ್ಪಸಂಖ್ಯಾತರಿಗೆ ಹಾಗೂ ಬಹುಸಂಖ್ಯಾತರಿಗೆ ಬೇರೆ ಬೇರೆ ನಿಯಮಗಳಿರುವುದನ್ನು ಟೀಕಿಸಿ, ಅಲ್ಪಸಂಖ್ಯಾತರಿಗೆ ಸಿಗುವ ಎಲ್ಲಾ ಸೌಲಭ್ಯಗಳು ಬಹುಸಂಖ್ಯಾತರಿಗೂ ಸಿಗುವಂತಾಗಬೇಕು. ಇದಕ್ಕಾಗಿ ಸಂವಿಧಾನದಲ್ಲಿ ಬದಲಾವಣೆಯಾಗಬೇಕು ಎಂದು ಉಡುಪಿಯಲ್ಲಿ ನಡೆದಿರುವ ಧರ್ಮ ಸಂಸದ್‌ನ ಉದ್ಘಾಟನಾ […]

ಒಂದಾಗಿ ಇರುವುದರಿಂದ ಲಿಂಗಾಯತ ಸಮಾಜಕ್ಕೆ ಹೆಚ್ಚಿನ ಬಲ ಬರುತ್ತದೆ :ಪೇಜಾವರ ಶ್ರೀ

Wednesday, October 18th, 2017
Pejavara shree

ಉಡುಪಿ: ಪೇಜಾವರ ಮಠದ ಶ್ರೀವಿಶ್ವೇಶತೀರ್ಥ ಶ್ರೀಪಾದರು, ಇವೆರಡೂ ಒಂದೇ ಧರ್ಮದ ಎರಡು ಪ್ರಭೇದಗಳಾಗಿದ್ದು, ಅವುಗಳು ಒಂದಾಗಿ ಇರುವುದರಿಂದ ಲಿಂಗಾಯತ ಸಮಾಜಕ್ಕೆ ಹೆಚ್ಚಿನ ಬಲ ಬರುತ್ತದೆ ಎಂದು ಹೇಳಿದ್ದಾರೆ. ರಾಜ್ಯದಲ್ಲಿ ತೀವ್ರಗೊಳ್ಳುತ್ತಿರುವ ಲಿಂಗಾಯತ ಮತ್ತು ವೀರಶೈವ ವಿವಾದದ ಕುರಿತಂತೆ ತನ್ನ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಶ್ರೀಕೃಷ್ಣ ಮಠದಲ್ಲಿ ಇಂದು ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ವಿವಾದ ವೀರಶೈವ ಮತ್ತು ಲಿಂಗಾಯತ ಧರ್ಮಗಳ ಆಂತರಿಕ ವಿಷಯವಾಗಿರುವುದರಿಂದ ನಾನು ಅದರಲ್ಲಿ ಹೆಚ್ಚಿನ ಮೂಗು ತೂರಿಸುವುದಿಲ್ಲ. ಆದರೆ ಹೊರಗಿನವನಾಗಿ ಕೆಲವು ಸಲಹೆ ನೀಡುತ್ತೇನೆ ಎಂದರು. […]

ಅಲ್ಪಸಂಖ್ಯಾತರಾದರೆ ಸೌಲಭ್ಯ ಸಿಗುತ್ತದೆ ಎಂದು ಹಿಂದೂ ಧರ್ಮದಿಂದ ದೂರವಾಗಬೇಡಿ : ಪೇಜಾವರ ಶ್ರೀ

Tuesday, July 25th, 2017
Swamiji

ಉಡುಪಿ : ಅಲ್ಪಸಂಖ್ಯಾತರಾಗಿ ಮಾನ್ಯತೆ ಪಡೆದರೆ ಸಿಗುವ ಸೌಲಭ್ಯದ ಲಾಭ ಪಡೆಯುವ ಉದ್ದೇಶದಿಂದ ಲಿಂಗಾಯಿತರು, ವೀರಶೈವರು ತಾವು ಹಿಂದೂಗಳಲ್ಲ ಎಂದು ಹೇಳುತ್ತಿದ್ದಾರೆ ಎಂದು ಪರ್ಯಾಯ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥರು ಹೇಳಿದ್ದಾರೆ. ಉಡುಪಿ ಶ್ರೀ ಕೃಷ್ಣಮಠದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ  ಪೇಜಾವರ ಶ್ರೀ ಗಳು, ಶಿವನೇ ಪರದೈವವೆಂದು ಪ್ರತಿಪಾದಿಸುವ ಲಿಂಗಾಯಿತ ಧರ್ಮವು ಹಿಂದೂ ಧರ್ಮವೇ ಆಗಿದೆ. ರಾಜಕೀಯ ಪ್ರೇರಿತರಾಗಿ ಧರ್ಮವನ್ನು ಒಡೆದು ತಾವು ಬೇರೆ ಎಂದು ಹೇಳುವುದು ಮೂರ್ಖತನ ಎಂದು ಪೇಜಾವರ ಶ್ರೀಗಳು ಹೇಳಿದ್ದಾರೆ. ಜಾತಿ ವ್ಯವಸ್ಥೆಯನ್ನು ಒಪ್ಪದ ರಾಮಕೃಷ್ಣ ಆಶ್ರಮ, ಆರ್ಯ ಸಮಾಜ ಹಿಂದೂ ಧರ್ಮವೇ ಆಗಿಲ್ಲವೇ […]

50 ಸಾವಿರ ರೂ. ಸಾಲಮನ್ನಾದ ಹಣೆಬರಹ ಇನ್ನೊಂದು ತಿಂಗಳಲ್ಲಿ ಗೊತ್ತಾಗುತ್ತದೆ : ಕುಮಾರಸ್ವಾಮಿ

Monday, June 26th, 2017
Udupi Kumara swamy

ಉಡುಪಿ : ಬಾಬು ಜಗಜೀವನ್‌ರಾಂ ಮಗಳು  ರಾಷ್ಟ್ರಪತಿ ಅಭ್ಯರ್ಥಿ ಮೀರಾ ಕುಮಾರ್ ಅವರಿಗೆ ಜಾತ್ಯತೀತ ಜನತಾದಳ ವಿಪಕ್ಷಗಳ ಬೆಂಬಲ ನೀಡಲು ನಿರ್ಧರಿಸಿದೆ ಎಂದು ರಾಜ್ಯದ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ತಿಳಿಸಿದ್ದಾರೆ. ತನಗೆ ಹಾಗೂ ತಂದೆ ಎಚ್.ಡಿ.ದೇವೇಗೌಡರಿಗೆ ದೂರವಾಣಿ ಕಾಂಗ್ರೆಸ್ ನಾಯಕ ಗುಲಾಂ ನಬಿ ಆಝಾದ್ ಅವರು ಬೆಳಗ್ಗೆ ಕರೆ ಮಾಡಿ ಮಾತನಾಡಿ ಮೀರಾ ಕುಮಾರ್‌ಗೆ ಬೆಂಬಲವನ್ನು ಯಾಚಿಸಿದ್ದು, 17 ಪಕ್ಷಗಳ ಅಭ್ಯರ್ಥಿ ಯಾಗಿರುವ ಅವರಿಗೆ ಪಕ್ಷದ ಬೆಂಬಲ ನೀಡಲು ನಿರ್ಧರಿಸಿದ್ದೇವೆ ಎಂದರು. ರಾಜಕಾರಣಕ್ಕೆ ಬರುವವರೆಗೆ (1997) […]

ಗೋ ರಕ್ಷಣೆಗೆ ಪೇಜಾವರ ಶ್ರೀಗಳ ಕೊಡುಗೆ ಅನನ್ಯ: ನರೇಂದ್ರ ಮೋದಿ

Monday, February 6th, 2017
video-conference

ಉಡುಪಿ: ಕರ್ನಾಟಕ ಮಧ್ವಾಚಾರ್ಯರಿಗೆ ಜನ್ಮಕೊಟ್ಟ ಪುಣ್ಯಭೂಮಿ. ದೇಶದ ನೈತಿಕ ಉದ್ಧಾರಕ್ಕಾಗಿ ಮಧ್ವರು ಜನ್ಮ ತಾಳಿದರು. ಮಧ್ವರ ಭಕ್ತಿ ಆಂದೋಲನ ನೆನೆದರೆ ಹೆಮ್ಮೆಯಾಗುತ್ತೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಶ್ರೀಕೃಷ್ಣ ಮಠದಲ್ಲಿ ನಡೆಯುತ್ತಿರುವ ಜಗದ್ಗುರು ಮಧ್ವಾಚಾರ್ಯರ ಸಪ್ತ ಶತಮಾನೋತ್ಸವ ಅಂಗವಾಗಿ ಪ್ರಧಾನಿ ಮೋದಿ ಇಂದು ಭಾಷಣ ಮಾಡಿದರು. ದೆಹಲಿಯಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ ಶ್ರೀಕೃಷ್ಣ ಮಠದಲ್ಲಿ ನಡೆಯುತ್ತಿರುವ ಮಧ್ವಾಚಾರ್ಯರ ಸಪ್ತಾಹದಲ್ಲಿ ಪಾಲ್ಗೊಂಡು ಮಾತನಾಡಿದ ಮೋದಿ, ಮಧ್ವಾಚಾರ್ಯರ ಗುಣಗಾನ ಮಾಡಿದರು. ಅಲ್ಲದೇ ದೇಶದ ಧಾರ್ಮಿಕ ಪರಂಪರೆಯ ಬಗ್ಗೆಯೂ ಮೋದಿ […]