Blog Archive

ಹಿರಿಯ ಐಎಎಸ್ ಅಧಿಕಾರಿಗಳಿಗೆ ಬಡ್ತಿ, ವರ್ಗ

Tuesday, February 4th, 2014
IAS

ಬೆಂಗಳೂರು: ಆರ್ಥಿಕ ವರ್ಷ ಅಂತ್ಯವಾಗುತ್ತಿದ್ದಂತೆ ಆಡಳಿತಕ್ಕೆ ಇನ್ನಷ್ಟು ಚುರುಕು ನೀಡುವ ಉದ್ದೇಶದಿಂದ ಹಿರಿಯ ಐಎಎಸ್ ಅಧಿಕಾರಿಗಳಿಗೆ ಬಡ್ತಿ ನೀಡುವುದರ ಜತೆಗೆ ಕೆಲವರನ್ನು ಆಯಕಟ್ಟಿನ ಸ್ಥಳಗಳಿಗೆ ನೇಮಕ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಪ್ರಸಕ್ತ ಆರ್ಥಿಕ ಸಾಲಿನಲ್ಲಿ ಆದಾಯ ಸಂಗ್ರಹದಲ್ಲಿ ನಿರೀಕ್ಷಿತ ಪ್ರಗತಿ ಕಾಣದೇ ಇರುವುದರಿಂದ ಹಣಕಾಸು ವಿಭಾಗದ ಜವಾಬ್ದಾರಿಯನ್ನು ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳ ಕೈಗೆ ನೀಡಲಾಗಿದೆ. ಇದಕ್ಕಾಗಿ ಕರ್ನಾಟಕ ನಗರ ಮೂಲ ಸೌಕರ್ಯ ಮತ್ತು ಹಣಕಾಸು ನಿಗಮದ ಅಧ್ಯಕ್ಷರಾಗಿದ್ದ ಎಲ್.ವಿ. ನಾಗರಾಜನ್ ಅವರನ್ನು ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಾಗಿ […]

ನಿತ್ಯಾನಂದ ನಮ್ಮ ಕುಟುಂಬದ ಆನಂದವನ್ನೇ ಕೊಂದ,

Saturday, February 1st, 2014
nithyananda

ಬೆಂಗಳೂರು: ರಾಷ್ಟ್ರಪತಿ, ಪ್ರಧಾನಮಂತ್ರಿ, ವಿದೇಶಾಂಗ ಸಚಿವಾಲಯ, ಹೀಗೆ ನಾನು ಅಲೆಯದ ಜಾಗವಿಲ್ಲ. ಮಾಡಿಕೊಳ್ಳದ ಮನವಿಗಳಿಲ್ಲ. ಆದರೆ ಒಬ್ಬರೂ ಕಿಂಚಿತ್ತು ಸಹಾಯ ಮಾಡಿಲ್ಲ. ಕರ್ನಾಟಕದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರೇ ನೀವಾದರೂ ದಯವಿಟ್ಟು ನನ್ನ ಮಗನನ್ನು ನನಗೆ ಮರಳಿ ಕೊಡಿಸುತ್ತೀರಾ?ಇದ್ದೊಬ್ಬ ಮಗ ಜೈಲಿನಲ್ಲಿರುವಾಗ ನಾನಾದರೂ ಹೇಗೆ ನೆಮ್ಮದಿಯಿಂದಿರಲಿ? ಮಗನನ್ನು ಉಳಿಸಿಕೊಳ್ಳಲು ನಾನು ಪಟ್ಟಪಾಡು ಅಷ್ಟಿಷ್ಟಲ್ಲ. ಆದರೆ ಈ ದೇಶದಲ್ಲಿ ಒಬ್ಬ ಸಾಮಾನ್ಯ ತಾಯಿಯ ನೋವಿಗೆ ಬೆಲೆ ಎಲ್ಲಿದೆ ಹೇಳಿ? ಸಿದ್ದರಾಮಯ್ಯನವರೇ, ನಾನು ಮೈಸೂರಿನವಳು. ನನ್ನ ಮಗನಾದ ವಿನಯ್ ಭಾರದ್ವಾಜ್ ಅಮೆರಿಕದಲ್ಲಿ ಶಿಕ್ಷೆಗೆ […]

ಪಾತರಗಿತ್ತಿ ಪಕ್ಕ ಖ್ಯಾತಿ ಗಾಯಕ ಯಶವಂತ ಹಳಿಬಂಡಿ ವಿಧಿವಶ

Thursday, January 23rd, 2014
Yashwath-Halibandi

ಬೆಂಗಳೂರು : ‘ವರಕವಿ ಬೇಂದ್ರೆಯವರ ‘ಪಾತರಗಿತ್ತಿ ಪಕ್ಕ ನೋಡಿದ್ದೇನ ಅಕ್ಕ..’ ಹಾಡಿನ ಮೂಲಕ ಖ್ಯಾತಿ ಪಡೆದಿದ್ದ ಸುಗುಮ ಸಂಗೀತ ಕ್ಷೇತ್ರದ ಗಾಯಕ ಯಶವಂತ ಹಳಿಬಂಡಿ ಅವರು ಮಂಗಳವಾರ ನಗರದ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಯಶವಂತ ಹಳಿಬಂಡಿ ಅವರ ಪಾರ್ಥೀವ ಶರೀರವನ್ನು ಬ್ಯಾಂಕ್ ಕಾಲೋನಿಯಲ್ಲಿರುವ ಅವರ ನಿವಾಸದಲ್ಲಿ ಇರಿಸಲಾಗಿದೆ. ನಂತರ ರವೀಂದ್ರ ಕಲಾಕ್ಷೇತ್ರದಲ್ಲಿ ಸಾರ್ವಜನಿಕ ದರ್ಶನಕ್ಕೆ ಇಡಲಾಗುತ್ತದೆ ಎಂದು ಕುಟುಂಬ ಸದಸ್ಯರು ಹೇಳಿದ್ದಾರೆ. ಧಾರಾವಾಡದಲ್ಲಿ 1950, ಮೇ 25ರಂದು ಜನಿಸಿದ ಯಶವಂತ ಹಳಿಬಂಡಿ ಅವರು ಸುಗಮ ಸಂಗೀತ ಕ್ಷೇತ್ರದಲ್ಲಿ […]

ಮುಖ್ಯಮಂತ್ರಿ ಸಿದ್ದರಾಮಯ್ಯ ಸಿದ್ದಗೊಳಿಸಿರುವ ನೂತನ ಸಚಿವ ಸಂಪುಟ ಪಟ್ಟಿಯಲ್ಲಿ ದ.ಕ ದ ಶಾಸಕರು

Friday, May 17th, 2013
Rai-Sorake-UT Khader

ಬೆಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸುಮಾರು 25 ಮಂದಿ ಸಚಿವರ ಸಂಭವನೀಯ ನೂತನ ಸಚಿವ ಸಂಪುಟ ಪಟ್ಟಿಯನ್ನು ಸಿದ್ದಪಡಿಸಿದ್ದು,  ಈ ಪಟ್ಟಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಮೂವರು ಶಾಸಕರ ಹೆಸರಿರುವುದು ಮೂಲಗಳಿಂದ ತಿಳಿದುಬಂದಿದೆ. ದಕ್ಷಿಣ ಕನ್ನಡ ಜಿಲ್ಲೆಯ ರಮಾನಾಥ ರೈ, ಯು.ಟಿ.ಖಾದರ್, ವಿನಯ್ ಕುಮಾರ ಸೊರಕೆ ಈ ಮೂವರ ಹೆಸರು ನೂತನ ಸಚಿವ ಸಂಪುಟ ಪಟ್ಟಿಯಲ್ಲಿರುವುದಾಗಿ ತಿಳಿದುಬಂದಿದೆ. ರಮಾನಾಥ ರೈ ಯವರು ಮೊದಲ ಹಂತದ ಸಚಿವ ಸಂಪುಟದಲ್ಲಿ ಸ್ಥಾನ ಪಡೆಯುವ ಸಾಧ್ಯತೆ ಹೆಚ್ಚಿದೆ. ಇನ್ನುಳಿದಂತೆ ವಿನಯ್ ಕುಮಾರ […]

ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಪ್ರಮಾಣವಚನ ಸ್ವೀಕಾರ

Monday, May 13th, 2013
Siddaramaiah

ಬೆಂಗಳೂರು : ಅಕ್ಷಯ ತೃತೀಯ ಮತ್ತು ಬಸವ ಜಯಂತಿಯ ವಿಶೇಷ ದಿನವಾದ ಸೋಮವಾರ ಕಂಠೀರವ ಕ್ರೀಡಾಂಗಣದಲ್ಲಿ ನಡೆದ ವರ್ಣರಂಜಿತ ಸಮಾರಂಭದಲ್ಲಿ   ಕರ್ನಾಟಕ ರಾಜ್ಯದ 28 ನೇ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ನವರು ಅಧಿಕಾರ ಸ್ವೀಕರಿಸಿದರು. ಸಹಸ್ರಾರು ಅಭಿಮಾನಿಗಳಿಂದ ಕಿಕ್ಕಿರಿದು ತುಂಬಿದ ಕಂಠೀರವ ಕ್ರೀಡಾಂಗಣದಲ್ಲಿ ರಾಜ್ಯಪಾಲ ಹಂಸರಾಜ ಭಾರದ್ವಾಜ್‌ ರವರು ಸಿದ್ದರಾಮಯ್ಯನವರಿಗೆ ಪ್ರತಿಜ್ಗ್ನಾ ವಿಧಿ ಬೋಧಿಸಿದರು. ಭಯ, ಪಕ್ಷಪಾತ, ಯಾವುದೇ ದ್ವೇಷವಿಲ್ಲದೆ, ರಾಜ್ಯದ ಜನರಿಗೆ ಸಂವಿಧಾನಬದ್ದವಾಗಿ ಹಾಗು ಕಾನೂನಿಗೆ ಅನುಸಾರವಾಗಿ ಆಡಳಿತ ನೀಡುತ್ತೇನೆ ಎಂದು ಸತ್ಯದ ಹೆಸರಿನಲ್ಲಿ ಸಿದ್ದರಾಮಯ್ಯನವರು ಪ್ರಮಾಣವಚನ […]

ಸೈನ್ಯಕ್ಕಿಂತ ಪೊಲೀಸ್ ಇಲಾಖೆಯಲ್ಲಿ ಕರ್ತವ್ಯದಲ್ಲಿರುವಾಗ ಪ್ರಾಣ ತ್ಯಾಗ ಮಾಡುವ ಅಧಿಕಾರಿಗಳ ಸಂಖೆಯೇ ಹೆಚ್ಚು : ಪ್ರತಾಪ್ ರೆಡ್ಡಿ

Tuesday, February 19th, 2013
Prataap Reddy

ಮಂಗಳೂರು : ಪೊಲೀಸ್ ಇಲಾಖೆಯನ್ನು ರಾಷ್ಟ್ರದ ಸೈನ್ಯಕ್ಕೆ ಹೋಲಿಸಿದರೆ ಪೊಲೀಸ್ ಇಲಾಖೆಗೆ ಸೈನ್ಯದಂತೆ ನೇರವಾದ ಶತ್ರುಗಳಿಲ್ಲ ಬದಲಿಗೆ ಶತ್ರುಗಳು ಸಮಾಜದಲ್ಲಿ ವಿವಿಧ ಸ್ತರಗಳಲ್ಲಿ, ಬೇರೆ ಬೇರೆ ರೂಪದಲ್ಲಿದ್ದಾರೆ. ಇಂತಹ  ಸಮಾಜ ಘಾತುಕ ವ್ಯಕ್ತಿಗಳನ್ನು ಮಟ್ಟ ಹಾಕಲು ಪೊಲೀಸರು ತಮ್ಮ ಇತಿಮಿತಿಗಳಿಗಿಂತ ಸ್ವಲ್ಪ ಹೆಚ್ಚಾಗಿ ಕ್ರಮ ಕೈಗೊಂಡರು ಕೂಡ ನಾಗರಿಕ ಸಮಾಜದ ಕೆಂಗಣ್ಣಿಗೆ ಗುರಿಯಾಗಬೇಕಾಗುತ್ತದೆ. ಸೈನ್ಯಕ್ಕಿಂತ ಪೊಲೀಸ್ ವ್ಯವಸ್ಥೆಯಲ್ಲಿ ಕರ್ತವ್ಯದಲ್ಲಿರುವಾಗ  ಪ್ರಾಣ ತ್ಯಾಗ ಮಾಡಿದ ಅಧಿಕಾರಿಗಳೆ ಹೆಚ್ಚಿನ  ಸಂಖ್ಯೆಯಲ್ಲಿದ್ದರು ಪೊಲೀಸ್ ಇಲಾಖೆಗೆ ಮಾತ್ರ ಸರಿಯಾದ ವ್ಯವಸ್ಥೆಗಳು ಸಿಗುತ್ತಿಲ್ಲ ಎಂದು ಪಶ್ಚಿಮವಲಯ […]

ಕೊಂಕಣಿ ಚಲನಚಿತ್ರ ಉಜ್ವಾಡು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಆಯ್ಕೆ

Wednesday, December 19th, 2012
ಕೊಂಕಣಿ ಚಲನಚಿತ್ರ ಉಜ್ವಾಡು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಆಯ್ಕೆ

ಮಂಗಳೂರು :ಕಾಸರಗೋಡು ಚಿನ್ನಾ ನಿರ್ದೇಶನದ, ಗೌಡ ಸರಸ್ವತ ಬ್ರಾಹ್ಮಣ ಸಮಾಜದವರು ಮಾತನಾಡುವ ಕೊಂಕಣಿ ಭಾಷೆಯಲ್ಲಿ ತಯಾರಾದ ಕೊಂಕಣಿ ಚಲನಚಿತ್ರ ಉಜ್ಜಾಡು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಆಯ್ಕೆಯಾಗಿದೆ. ಇದೆ ಮೊದಲ ಬಾರಿಗೆ ಬೆಂಗಳೂರಿನಲ್ಲಿ ಡಿಸೆಂಬರ್ 20 ರಿಂದ 27 ರ ತನಕ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ನಡೆಯಲಿದ್ದು, ಡಿಸೆಂಬರ್‌ 21 ರಂದು ಬೆಳಗ್ಗೆ 10.15 ಕ್ಕೆ ಬೆಂಗಳೂರಿನ ಲೀಡೋ ಚಿತ್ರ ಮಂದಿರದಲ್ಲಿ ಅಸಂಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಆಯ್ಕೆಖ್ಯಾತ ಚಿತ್ರ ಕಲಾವಿದರ, ತಂತ್ರಜ್ಞರ ಸಮ್ಮುಖದಲ್ಲಿ ಈ ಚಿತ್ರ ಪ್ರದರ್ಶಿಸಲ್ಪಡುತ್ತದೆ. ಕಾರ್ಕಳ, ಗೋವಾದಲ್ಲಿ ಕೇವಲ 18 […]