Blog Archive

ಅಕ್ರಮ ಚಿನ್ನ ವಶ ಪ್ರಕರಣ: ಗುಪ್ತಚರ ನಿರ್ದೇಶನಾಲಯದ ಅಧಿಕಾರಿಗಳ ಬಂಧನ

Tuesday, October 30th, 2018
airport

ಮಂಗಳೂರು: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸೆ.20 ರಂದು ನಡೆದ ಅಕ್ರಮ ಚಿನ್ನ ವಶ ಪ್ರಕರಣಕ್ಕೆ ಸಂಬಂಧಿಸಿ, ಕಸ್ಟಮ್ಸ್ ಇಲಾಖೆಯ ಸಿಬ್ಬಂದಿವೋರ್ವರನ್ನು ಗುಪ್ತಚರ ನಿರ್ದೇಶನಾಲಯದ ಅಧಿಕಾರಿಗಳು ಬಂಧಿಸಿದ್ದಾರೆ. ಕಸ್ಟಮ್ಸ್ ಇಲಾಖೆಯ ಸಿಬ್ಬಂದಿ ಅಶ್ವಿನ್ ಎನ್.ವಿ. ಬಂಧಿತ ಆರೋಪಿ. ದುಬೈಯಿಂದ ಸ್ಪೈಸ್ ಜೆಟ್ ವಿಮಾನದಲ್ಲಿ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ಕಾಸರಗೋಡಿನ ಮುಳ್ಳೇರಿಯಾ ನಿವಾಸಿ ನಿಝಾರ್ ಖಾದರ್ ಅಕ್ರಮವಾಗಿ ಸಾಗಿಸುತ್ತಿದ್ದ ಸುಮಾರು 47 ಲಕ್ಷ ರೂ. ಮೌಲ್ಯದ ಚಿನ್ನವನ್ನು ಕಂದಾಯ ಗುಪ್ತಚರ ನಿರ್ದೇಶನಾಲಯದ ಅಧಿಕಾರಿಗಳು ವಶಪಡಿಸಿಕೊಂಡು, ಆತನನ್ನು‌ […]

ಯುವಕನಿಗೆ ಚೂರಿ ಇರಿದು ಪರಾರಿಯಾದ ದುಷ್ಕರ್ಮಿಗಳು

Tuesday, October 30th, 2018
assulted

ಮಂಗಳೂರು: ಯುವಕನೋರ್ವನಿಗೆ ದುಷ್ಕರ್ಮಿಗಳು ಚೂರಿಯಿಂದ ಇರಿದು ಪರಾರಿಯಾಗಿರುವ ಘಟನೆ ಬಜ್ಪೆ ಭಟ್ರಕೆರೆಯ ಪಡೀಲ್ ಎಂಬಲ್ಲಿ ನಡೆದಿದೆ. ಭಟ್ರಕೆರೆ ನಿವಾಸಿ ಶಾಹಿಕ್(18) ಚೂರಿ ಇರಿತದಿಂದ ಗಾಯಗೊಂಡ ಯುವಕ. ಈತನನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಶಾಹಿಕ್ ಅಂಗಡಿಯ ಎದುರು ನಿಂತಿದ್ದಾಗ ದುಷ್ಕರ್ಮಿಗಳು ಈ ಕೃತ್ಯ ನಡೆಸಿದ್ದಾರೆ. ಹಲ್ಲೆಗೆ ನೈಜ ಕಾರಣ ತಿಳಿದು ಬಂದಿಲ್ಲ. ಈ ಬಗ್ಗೆ ಬಜ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಂಗಳೂರು ಏರ್​ಪೋರ್ಟ್ ಅಭಿವೃದ್ಧಿ ಕಾಮಗಾರಿ ತ್ವರಿತಗೊಳಿಸಲು ಸಿ ಎಸ್​ ಸೂಚನೆ

Saturday, October 27th, 2018
mangaluru

ಮಂಗಳೂರು: ನಗರದ ಹೊರವಲಯದಲ್ಲಿರುವ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ರನ್ ವೇ ವಿಸ್ತರಣೆ ಹಾಗೂ ಇತರೆ ಅಭಿವೃದ್ಧಿ ಕಾಮಗಾರಿಗಳನ್ನು ಇನ್ನಷ್ಟು ತ್ವರಿತವಾಗಿ ಮಾಡುವಂತೆ ರಾಜ್ಯದ ಮುಖ್ಯ ಕಾರ್ಯದರ್ಶಿ ಟಿ ಎಂ ವಿಜಯ ಭಾಸ್ಕರ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಅವರು ಶುಕ್ರವಾರ ಮಂಗಳೂರು ವಿಮಾನ ನಿಲ್ದಾಣಕ್ಕೆ ಭೇಟಿ ನೀಡಿ, ಅಲ್ಲಿ ನಡೆಯುತ್ತಿರುವ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಪರಿಶೀಲಿಸಿ ಈ ಸೂಚನೆ ನೀಡಿದ್ದಾರೆ. ರನ್ವೇ ವಿಸ್ತರಣೆ ಸೇರಿದಂತೆ ಮಂಗಳೂರು ವಿಮಾನ ನಿಲ್ದಾಣದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳು ಇಲ್ಲಿನ ದೀರ್ಘಕಾಲದ ಬೇಡಿಕೆಯಾಗಿದೆ. ಈ […]

ಕಾಡಿನಲ್ಲಿ ಅಕ್ರಮವಾಗಿ ಮರ ಸಾಗಾಟ: ಓರ್ವನ ಬಂಧನ

Friday, October 26th, 2018
arrested

ಮಂಗಳೂರು: ಕಾಡಿನಲ್ಲಿ ಅಕ್ರಮವಾಗಿ ಮರ ಕಡಿದು ಸಾಗಾಟ ಮಾಡುತ್ತಿದ್ದ ಓರ್ವನನ್ನು ಬಂಧಿಸಿ, ವಾಹನ ಸಹಿತ ಮರಗಳನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ವಶಪಡಿಸಿಕೊಂಡ ಘಟನೆ ಧರ್ಮಸ್ಥಳದ ಪುದುವೆಟ್ಟು ಎಂಬಲ್ಲಿ ನಡೆದಿದೆ. ಅಬ್ಬಾಸ್ ಎಂಬಾತ ಬಂಧಿತ ಆರೋಪಿ. ಇತರ ಮೂವರು ಪರಾರಿಯಾಗಿದ್ದಾರೆ. ಇವರು ಕಾಡಿನಲ್ಲಿ ಅಕ್ರಮವಾಗಿ ಬೀಟೆ, ಸಾಗುವಾನಿ ಮರಗಳನ್ನು ಕಡಿದು ವಾಹನದಲ್ಲಿ ಸಾಗಾಟ ಮಾಡುವ ಪ್ರಯತ್ನದಲ್ಲಿದ್ದಾಗ ಅರಣ್ಯ ಇಲಾಖೆ ಕಾರ್ಯಾಚರಣೆ ನಡೆಸಿದೆ. ರಾತ್ರಿಯಿಡೀ ಕಾದು ಬೆಳಗಿನ ಜಾವ ಮೂರು ಗಂಟೆ ಹೊತ್ತಿಗೆ ಅಕ್ರಮ ಮರ ಸಾಗಾಟದ ಯತ್ನವನ್ನು ಅರಣ್ಯ […]

ರೌಡಿ ಶೀಟರ್ ಕೊಲೆ ಪ್ರಕರಣ: ನಟೋರಿಯಸ್​ ಗ್ಯಾಂಗ್​ನ ರೌಡಿ ಅರೆಸ್ಟ್

Friday, October 26th, 2018
mangaluru

ಮಂಗಳೂರು: ಉಪ್ಪಿನಂಗಡಿಯ ಕುಪ್ಪೆಟ್ಟಿ ನದಿ ಬಳಿ ನಡೆದ ಕೇರಳದ ರೌಡಿ ಶೀಟರ್ ಉಣ್ಣಿಕೃಷ್ಣನ್ ಕೊಲೆಗೆ ಸಂಬಂಧಿಸಿದಂತೆ ಪ್ರಮುಖ ಆರೋಪಿವೋರ್ವನನ್ನು ಪೊಲೀಸರು ಕೊಚ್ಚಿಯಲ್ಲಿ ಬಂಧಿಸಿದ್ದಾರೆ. ಕೇರಳದ ಎರ್ನಾಕುಲಂ ನಿವಾಸಿ ನಟೋರಿಯಸ್ ಗ್ಯಾಂಗ್ನ ರೌಡಿ ಶೀಟರ್ ಅನಾಸ್(35) ಬಂಧಿತ ಆರೋಪಿ. ಸೆ.2 ರಂದು ಉನ್ನಿಕೃಷ್ಣನ್ನನ್ನು ಕೊಲೆ ಮಾಡಿ ಉಪ್ಪಿನಂಗಡಿಯ ಕುಪ್ಪೆಟ್ಟಿ ನದಿ ಬಳಿ ಶವ ಎಸೆದು ಹೋಗಿದ್ದರು. ಸೆ.4ರಂದು ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಈ ಬಗ್ಗೆ ಉಪ್ಪಿನಂಗಡಿ ಪೊಲೀಸರು ತನಿಖೆ ನಡೆಸಿ 4 ಜನರನ್ನು ಬಂಧಿಸಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ […]

ಜನರ ಮರಳು ಸಮಸ್ಯೆಯನ್ನು ಶಾಶ್ವತವಾಗಿ ಪರಿಹರಿಸಲು ಮಧ್ಯೆ ಪ್ರವೇಶಿಸಬೇಕೆಂದು ಕೋರಿ ಮನವಿ

Wednesday, October 24th, 2018
mangaluru

ಮಂಗಳೂರು: ಕಳೆದ ಹಲವು ತಿಂಗಳುಗಳಿಂದ ಕರಾವಳಿ ಜಿಲ್ಲೆಯಲ್ಲಿ ಮರಳು ಸಮಸ್ಯೆ ತೀವ್ರವಾಗಿ ಉಲ್ಬಣಗೊಂಡಿದೆ. ದ.ಕ.ಜಿಲ್ಲೆಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ಮರಳು ನದಿಗಳಲ್ಲಿ ದೊರೆಯುತ್ತಿದ್ದರೂ ರಾಜ್ಯ ಸರ್ಕಾರ ಮರಳು ನೀತಿ ತರಲಿದೆಯೆಂದು ಮರಳುಗಾರಿಕೆಗೆ ಅವಕಾಶ ನೀಡಲು ಜಿಲ್ಲಾಡಳಿತ ವಿಳಂಬ ನೀತಿ ಅನುಸರಿಸುತ್ತಿದೆ. ಮರಳು ಸಮಸ್ಯೆಯಿಂದಾಗಿ ಜಿಲ್ಲೆಯಲ್ಲಿ ನಿರ್ಮಾಣ ಕ್ಷೇತ್ರವು ಸಂಪೂರ್ಣವಾಗಿ ನೆಲಕಚ್ಚಿದೆ.ದುಡಿಮೆಯನ್ನೇ ನಂಬಿ ಸಾಲ ಮಾಡಿ ಕುಟುಂಬ ನಿರ್ವಹಿಸುತ್ತಿದ್ದ ಸಾವಿರಾರು ಕುಟುಂಬಗಳು ಕೆಲಸ ಇಲ್ಲದೆ ಸಂಕಷ್ಟದಲ್ಲಿದೆ. ಮರಳು ಸಮಸ್ಯೆಯನ್ನು ಬಗೆಹರಿಸಲು ವಿಫಲವಾದ ಜಿಲ್ಲಾಡಳಿತವೇ ಕಟ್ಟಡ ಕಾರ್ಮಿಕರಿಗೆ ಕೆಲಸ ನಿರಾಕರಣೆ ಮಾಡಿದಂತಾಗಿದೆ. […]

ಹಾಡುವ ಮೂಲಕ ಜನರಂಜನೆಗೈದ ಮಂಗಳೂರು ಮೇಯರ್

Wednesday, October 24th, 2018
bhaskar

ಮಂಗಳೂರು: ಇತ್ತೀಚೆಗೆ ಎಸ್.ಕೆ. ಮುನಿಸಿಪಲ್ ಎಂಪ್ಲಾಯಿಸ್‌ ಯೂನಿಯನ್ ಸಂಸ್ಥೆಯು ದಸರಾ ಪ್ರಯುಕ್ತ ಹಮ್ಮಿಕೊಂಡಿದ್ದ ಸಾಧಕರಿಗೆ ಸನ್ಮಾನ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಮ.ನಾ.ಪ ಮೇಯರ್ ಭಾಸ್ಕರ ಕೆ. ಸಭಾ ಕಾರ್ಯಕ್ರಮದ ಬಳಿಕ ವೇದಿಕೆಯಲ್ಲಿ ’ಸಿನಿಮಾ ಹಾಡು’ ಹಾಡುವ ಮೂಲಕ ಜನಮನ ರಂಜಿಸಿದರು. ಸುರ್ ಸಂಗಮ್‌ ಆರ್ಕೆಸ್ಟ್ರಾ ತಂಡದವರು ಹಿನ್ನಲೆ ಸಂಗೀತ ನೀಡಿದ್ದರು. ಶಾಸಕ ವೇದವ್ಯಾಸ ಕಾಮತ್ ದೀಪ ಬೆಳಗಿ ಕಾರ್ಯಕ್ರಮ ಉದ್ಘಾಟಿಸಿದರು. ಮ.ನಾ.ಪ ಮುಖ್ಯ ಸಚೇತಕ ಎಂ. ಶಶಿಧರ ಹೆಗ್ಡೆ, ಸ್ಥಾಯಿ ಸಮಿತಿಅಧ್ಯಕ್ಷ ನವೀನ್‌ಆರ್. ಡಿ’ಸೋಜಾ, ಕಾರ್ಪೋರೇಟರ್‌ಗಳಾದ ರೂಪಾ […]

ಶಬರಿಮಲೆ ಕ್ಷೇತ್ರಕ್ಕೆ ಅದರದ್ದೇ ಆದ ಸಾಂಪ್ರದಾಯಿಕ ಸೌಂದರ್ಯವಿದ್ದು, ಅದನ್ನು ಉಳಿಸಿಕೊಳ್ಳಬೇಕು: ವೀರೇಂದ್ರ ಹೆಗ್ಗಡೆ

Wednesday, October 24th, 2018
Manjusha

ಧರ್ಮಸ್ಥಳ: ಮಹಿಳೆಯರು ಶಬರಿಮಲೆಗೆ ಹೋದರೆ ಸಂಯಮದ ತತ್ವವೇನಿದೆಯೋ, ಅದು ಸಡಿಲವಾಗುತ್ತದೆ. ಅವರ ಪ್ರವೇಶದಿಂದ ಸಂಯಮಕ್ಕೆ, ಮನೋನಿಗ್ರಹಕ್ಕೆ ಧಕ್ಕೆಯಾಗಬಹುದು ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ ವೀರೇಂದ್ರ ಹೆಗ್ಗಡೆ ಅಭಿಪ್ರಾಯಪಪಟ್ಟಿದ್ದಾರೆ. ಶಬರಿಮಲೆಗೆ ಸ್ತ್ರೀಯರ ಪ್ರವೇಶ ವಿವಾದಕ್ಕೆ ಕುರಿತಂತೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಮಹಿಳೆಯರ ಶಬರಿಮಲೆ ಪ್ರವೇಶ ಭಕ್ತಿಯಿಂದ ಮಾಡುವುದಾದರೆ ಮನೆಯಲ್ಲಿ ಕೂಡಾ ಮಾಡಬಹುದು. ಅಲ್ಲಿಗೇ ಹೋಗಬೇಕಾಗಿಲ್ಲ. ಪುರುಷರಿಗೆ ಸಂಯಮದ ಅಭ್ಯಾಸ ಮಾಡಿಸಲಿಕ್ಕಾಗಿ ಈ ಪದ್ಧತಿಯಿದೆ ಎಂದು ನನ್ನ ಒಂದು ಕಲ್ಪನೆ. ಯಾಕೆಂದರೆ 48 ದಿನಗಳ ಕಾಲ […]

ಮಂಗಳೂರು ಮೀನಿನ ಖಾದ್ಯಕ್ಕೆ ಮಾರು ಹೋದ ನಟಿ ರಾಗಿಣಿ ದ್ವಿವೇದಿ

Monday, October 22nd, 2018
ragini-fish

ಮಂಗಳೂರು: ತುಪ್ಪದ ಬೆಡಗಿ ರಾಗಿಣಿ ದ್ವಿವೇದಿ ಮಂಗಳೂರು ಮೀನಿನ ಖಾದ್ಯಕ್ಕೆ ಮಾರು ಹೋಗಿದ್ದಾರೆ. ನಾನ್ವೆಜ್ ಪ್ರಿಯೆ ರಾಗಿಣಿ ಎರಡು ದಿನ ಮಂಗಳೂರಿನಲ್ಲಿದ್ದರು. ನಿನ್ನೆ ರಾತ್ರಿ ಏರ್ಪೋರ್ಟ್ಗೆ ತೆರಳುವ ವೇಳೆ ಯೆಯ್ಯಾಡಿಯ ರೆಸ್ಟೋರೆಂಟ್ಗೆ ಎಂಟ್ರಿ ಕೊಟ್ಟ ಅವರು, ಕಾನೆ ಮೀನು, ಏಡಿ, ಅಂಜಲ್, ಸಿಗಡಿ ಮತ್ತು ನೀರು ದೀಸ ಸವಿದರು. ಈ ವೇಳೆ ಬಿಗ್ ಎಫ್ಎಂ ಆರ್ಜೆ ಎರೋಲ್ ಅವರು ರಾಗಿಣಿಗೆ ಸಾಥ್ ನೀಡಿದ್ರು .

ಶ್ರೀ ಮಂಗಳಾದೇವಿ ದೇವಾಲಯದಲ್ಲಿ ಅಕ್ಷರಾಭ್ಯಾಸ ಕಾರ್ಯಕ್ರಮ

Friday, October 19th, 2018
mangaladevi

ಮಂಗಳೂರು: ನವರಾತ್ರಿಯ ಕಡೆಯ ದಿನವಾದ ಇಂದು ವಿಜಯದಶಮಿ ಆಚರಿಸಲಾಗುತ್ತದೆ. ಶುಭಕಾರ್ಯಗಳಿಗೆ ಈ ದಿನ ಸೂಕ್ತವೆಂಬ ನಂಬಿಕೆಯಿದೆ. ಅದರಲ್ಲೂ ಸಣ್ಣ ಮಕ್ಕಳಿಗೆ ಅಕ್ಷರಾಭ್ಯಾಸ ಮಾಡಿಸಲು ಪ್ರಶಸ್ತವಾದ ದಿನ ಎಂಬ ಪ್ರತೀತಿ. ಈ ಹಿನ್ನೆಲೆಯಲ್ಲಿ ಇಲ್ಲಿನ ಮಂಗಳಾದೇವಿ ದೇವಾಲಯದಲ್ಲಿ ಅಕ್ಷರಾಭ್ಯಾಸ ಕಾರ್ಯಕ್ರಮ ನಡೆಯಿತು. ಇಂದು ಮಂಗಳಾದೇವಿ ದೇವಾಲಯದಲ್ಲಿ ಮಕ್ಕಳ ಅಕ್ಷರಾಭ್ಯಾಸ ಪೂಜೆಯು ಬೆಳಗ್ಗೆ 9 ಗಂಟೆಯಿಂದ ಶುರುವಾಗಿ ಮಧ್ಯಾಹ್ನ 12 ಗಂಟೆವೆರೆಗೂ ನಡೆಯಿತು. ಈ ಸಂದರ್ಭ ಸುಮಾರು 300 ಪುಟಾಣಿ ಮಕ್ಕಳು ಅಕ್ಷರಾಭ್ಯಾಸ ಪೂಜೆಯಲ್ಲಿ ಭಾಗವಹಿಸಿ, ತಮ್ಮ ವಿದ್ಯಾಭ್ಯಾಸವನ್ನು ಆರಂಭಿಸಿದರು. […]