Blog Archive

ಒಂದೂವರೆ ವರ್ಷದಿಂದ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ

Monday, November 19th, 2018
arrested

ಮಂಗಳೂರು: ನಗರದ ಭಾರತ್ ಮಾಲ್ನಲ್ಲಿ‌ ಮಹಿಳೆಯೋರ್ವರ ಪರ್ಸ್ ಮತ್ತು ಮೊಬೈಲ್ ಸುಲಿಗೆ ಮಾಡಿ ಒಂದೂವರೆ ವರ್ಷದಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಮಂಗಳೂರು ನಗರ ಕೇಂದ್ರ ಉಪ ವಿಭಾಗದ ರೌಡಿ ನಿಗ್ರಹ ದಳದ ಅಧಿಕಾರಿ ಹಾಗೂ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ಬಂಟ್ವಾಳ ತಾಲೂಕು ಬಿ.ಕಸಬಾ ಗ್ರಾಮದ ಪೆರ್ನಂಕಿಲ ಹೌಸ್ನ ಮ್ಯಾಕ್ಸಿಂ ಆಲ್ವಿನ್ ರೋಡ್ರಿಗಸ್ ಬಂಧಿತ ಆರೋಪಿ. 2017ರ ಮೇ 26ರಂದು ಈ ಕೃತ್ಯ ಎಸಗಿ ತಲೆಮರೆಸಿಕೊಂಡಿದ್ದ ಈತನನ್ನು ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಬಳಿಯಿರುವ ಜಾನ್ ವೈನ್ ಶಾಪ್ ಬಳಿ‌ […]

ಮೀನುಗಳಿಗೆ ತಡೆ: ಗೋವಾದ ಮೀನುಗಾರಿಕಾ ಸಚಿವರ ಜೊತೆ ಶೀಘ್ರ ಮಾತುಕತೆ: ಯು.ಟಿ. ಖಾದರ್​

Saturday, November 17th, 2018
circuit-house

ಮಂಗಳೂರು: ಗೋವಾದಲ್ಲಿ ಕರ್ನಾಟಕದ ಮೀನುಗಳಿಗೆ ತಡೆಯೊಡ್ಡುತ್ತಿರುವ ವಿಚಾರಕ್ಕೆ ಸಂಬಂಧಿಸಿದಂತೆ ಗೋವಾದ ಮೀನುಗಾರಿಕಾ ಸಚಿವರ ಜೊತೆ ಕರ್ನಾಟಕದ ಮೀನುಗಾರಿಕಾ ಸಚಿವರು ಶೀಘ್ರ ಮಾತನಾಡಲಿದ್ದಾರೆ ಎಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಯು. ಟಿ. ಖಾದರ್ ತಿಳಿಸಿದ್ದಾರೆ. ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮೀನುಗಾರಿಕೆ ಕರಾವಳಿ ಕರ್ನಾಟಕದ ಪ್ರಮುಖ ಉದ್ಯಮ. ಇಲ್ಲಿಯ ಮೀನುಗಳು ಅಲ್ಲಿಗೆ ಹೋಗಬಾರದೆಂದು ತಡೆಯುವುದು ಸರಿಯಲ್ಲ. ಭಾರತ ದೇಶದಲ್ಲಿ ಸೀಮಿತ ಪ್ರದೇಶಕ್ಕೆ ವ್ಯಾಪಾರ ಮಾಡಲು ಸಾಧ್ಯವಿಲ್ಲ. ನಾನು, ಕಾರವಾರ ಉಸ್ತುವಾರಿ ಸಚಿವರು ಹಾಗೂ ಮೀನುಗಾರಿಕಾ ಸಚಿವರು ಭೇಟಿಯಾಗಿ […]

ಹತ್ತನೇ ವರ್ಷದ ಸಂಭ್ರಮದಲ್ಲಿ ತುಳುನಾಡು ರಕ್ಷಣಾ ವೇದಿಕೆ

Wednesday, November 14th, 2018
tulunadu

ಮಂಗಳೂರು: ತುಳುನಾಡು ರಕ್ಷಣಾ ವೇದಿಕೆ ಸ್ಥಾಪನೆಗೊಂಡು ಹತ್ತನೇ ವರ್ಷವಾಗಿದ್ದು, ಈ ಸಂಸ್ಥೆ ಹಲವಾರು ಜನಪರ ಕಾರ್ಯಕ್ರಮಗಳಿಂದ ಸಾಮಾಜಿಕ ರಂಗದಲ್ಲಿ ಹಲವಾರು ಕೊಡುಗೆಗಳನ್ನು‌ ನೀಡಿದೆ ಎಂದು ತುಳು ನಾಡು ರಕ್ಷಣಾ ವೇದಿಕೆಯ ಸ್ಥಾಪಕಾಧ್ಯಕ್ಷ ಯೋಗೀಶ್ ಶೆಟ್ಟಿ ಜಪ್ಪು ಹೇಳಿದರು. ಈ ಸಂಸ್ಥೆಯು ಕಾಸರಗೋಡು ಗಡಿ ಸಮಸ್ಯೆಯಿಂದ ಹಿಡಿದು ನೀರಿನ ಸಮಸ್ಯೆ, ನಗರಪಾಲಿಕೆಯ ಸಮಸ್ಯೆ, ಚಲನಚಿತ್ರ ಕ್ಷೇತ್ರದ ಸಮಸ್ಯೆಗಳ ವಿರುದ್ಧ ನಿರಂತರವಾಗಿ ಹೋರಾಟಗಳನ್ನು ನಡೆಸಿ ಜನರ ಆಶೋತ್ತರಗಳಿಗೆ ಸ್ಪಂದಿಸಿದೆ ಎಂದರು. ಈ ದಶಮಾನೋತ್ಸವ ಸಂಭ್ರಮದ ಹಿನ್ನೆಲೆಯಲ್ಲಿ ನಗರದ ಪುರಭವನದಲ್ಲಿ 2019 […]

ಅನಂತಕುಮಾರ್ ನಿಧನಕ್ಕೆ ಸಚಿವ ಯು. ಟಿ. ಖಾದರ್ ಸಂತಾಪ

Tuesday, November 13th, 2018
u-t-khader

ಮಂಗಳೂರು: ಕೇಂದ್ರ ಸಚಿವ ಅನಂತಕುಮಾರ್ ನಿಧನಕ್ಕೆ ನಗರಾಭಿವೃದ್ಧಿ ಸಚಿವ ಯು. ಟಿ.‌ ಖಾದರ್ ಸಂತಾಪ ಸೂಚಿಸಿದ್ದಾರೆ. ಮಂಗಳೂರಿನಲ್ಲಿ ಮಾತನಾಡಿದ ಅವರು, ರಾಜ್ಯದ ಧೀಮಂತ ನಾಯಕರಲ್ಲಿ ಅನಂತಕುಮಾರ್ ಒಬ್ಬರಾಗಿದ್ದರು. ನಾನು ಸಚಿವನಾಗಿ ಕೆಲಸ ಮಾಡಿದ್ದಾಗ ಹಲವಾರು ವಿಚಾರಗಳ ಬಗ್ಗೆ ಅನಂತಕುಮಾರ್ ಸಲಹೆ ನೀಡಿದ್ದಾರೆ. ಅನಂತ್ ಕುಮಾರ್ ಅಗಲಿಕೆ ದುಃಖ ತಂದಿದೆ. ಅವರ ಅಗಲಿಕೆ ರಾಜ್ಯಕ್ಕೆ ಭರಿಸಲಾರದ ನಷ್ಟ ಎಂದು ಅವರು ಹೇಳಿದ್ದಾರೆ.

ಚಲಿಸುತ್ತಿದ್ದ ಶಾಲಾ ಬಸ್​ನಿಂದ ಆಕಸ್ಮಿಕವಾಗಿ ಹೊರಗೆ ಬಿದ್ದ ವಿದ್ಯಾರ್ಥಿ ಸಾವು

Monday, November 12th, 2018
died

ಮಂಗಳೂರು: ಆಂಗ್ಲ ಮಾಧ್ಯಮ‌ ಶಾಲೆಗೆ ಹೋಗುತ್ತಿದ್ದ ವಿದ್ಯಾರ್ಥಿಯೋರ್ವ ಚಲಿಸುತ್ತಿದ್ದ ಶಾಲಾ ಬಸ್ನಿಂದ ಆಕಸ್ಮಿಕವಾಗಿ ಹೊರಗೆ ಬಿದ್ದು ಮೃತಪಟ್ಟ ಘಟನೆ ಪುತ್ತೂರಿನ ಪಡುವನ್ನೂರು ಗ್ರಾಮದ ಪುಂಡಿಕಾಯಿ ಎಂಬಲ್ಲಿ ನಡೆದಿದೆ. ಘಟನೆಗೆ ಶಾಲಾ ಬಸ್ ಚಾಲಕ ನಿರ್ಲಕ್ಷ್ಯವೇ ಕಾರಣ ಎಂದು ಮೃತ ವಿದ್ಯಾರ್ಥಿ ಹೆತ್ತವರು ದೂರು ನೀಡಿದ್ದಾರೆ. ಪುತ್ತೂರು ತಾಲೂಕು ಬಡಗನ್ನೂರು ಗ್ರಾಮದ ಅನಿಲೆ ಮನೆ ನಿವಾಸಿ ಜಗನ್ನಾಥ ಆಳ್ವರ ಪುತ್ರ ಗಗನ್ ಆಳ್ವ (15) ಮೃತಪಟ್ಟ ವಿದ್ಯಾರ್ಥಿ. ಈಶ್ವರಮಂಗಲದ ಗಜಾನನ ಆಂಗ್ಲ ಮಾಧ್ಯಮ ಶಾಲೆಯ 10ನೇ ತರಗತಿ ವಿದ್ಯಾರ್ಥಿಯಾಗಿದ್ದ. […]

ಕಾವೂರು ಶ್ರೀ ಮಹಾಲಿಂಗೇಶ್ವರ ದೇವಳದಲ್ಲಿ ಮನಮೋಹಕ‌ ಆಕಾಶ ಬುಟ್ಟಿಗಳ ಸ್ಪರ್ಧೆ

Tuesday, November 6th, 2018
deepavali

ಮಂಗಳೂರು: ನಗರದ ಕಾವೂರು ಶ್ರೀ ಮಹಾಲಿಂಗೇಶ್ವರ ದೇವಳದಲ್ಲಿ ಮನಮೋಹಕ‌ ಆಕಾಶ ಬುಟ್ಟಿಗಳ ಸ್ಪರ್ಧೆ ನಡೆಯಿತು. ವಿವಿಧ ಪ್ರಕಾರದ ಆಕಾಶ ಬುಟ್ಟಿಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದವು. ಸೆಗಣಿ, ವ್ಯಾಲ್ವೇಟ್, ರಬ್ಬರ್ ಬ್ಯಾಂಡ್, ಶಂಖ, ಧಾನ್ಯಗಳು, ಭತ್ತ, ಹುಣಸೆ ಬೀಜ, ಕಡಲೆಕಾಳು, ಕ್ಯಾಸೇಟ್ ರೀಲ್, ಕ್ರೇಯಾನ್ಸ್, ಬಿದಿರಿನ ಕೋಲು, ನ್ಯೂಸ್ ಪೇಪರ್ ಹೀಗೆ ವಿವಿಧ ಪ್ರಕಾರದ ವಸ್ತುಗಳಿಂದ ತಯಾರಿಸಿದ ಆಕಾಶ ಬುಟ್ಟಿಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದವು. ಸಾಂಪ್ರದಾಯಿಕ, ಆಧುನಿಕ ಹಾಗೂ ಪ್ರತಿಕೃತಿ ವಿಭಾಗ ಹೀಗೆ ಮೂರು ಮೂರು ವಿಭಾಗಗಳಲ್ಲಿ ಸ್ಪರ್ಧೆ ನಡೆಯಿತು. ಸುಮಾರು […]

ಹೊಳೆಯಲ್ಲಿ ಸ್ನಾನಕ್ಕಿಳಿದಿದ್ದ ಯುವಕ ಮುಳುಗಿ ಸಾವು

Monday, November 5th, 2018
mangalore

ಮಂಗಳೂರು: ಹೊಳೆಯಲ್ಲಿ ಸ್ನಾನ ಮಾಡುತ್ತಿದ್ದ ವೇಳೆ ಯುವಕ ಹೊಳೆಯಿಂದ ಮೇಲೆ ಬರಲಾಗದೆ ಸಾವನ್ನಪ್ಪಿರುವ ಘಟನೆ ಬೆಳ್ತಂಗಡಿ ತಾಲೂಕಿನ ಲಾಯಿಲ ಗ್ರಾಮದ ದರ್ಖಾಸ್ ಹೊಳೆಯಲ್ಲಿ ನಡೆದಿದೆ.‌ ಸ್ಟೀವನ್ (24) ಮೃತ ಯುವಕ. ಈತ ಬೆಳ್ತಂಗಡಿ ಕನ್ನಾಜೆ ನಿವಾಸಿಯಾಗಿದ್ದು, ಮೂವರು ಗೆಳೆಯರ ಜೊತೆ ಸ್ನಾನ ಮಾಡಲು ಹೊಳೆಗೆ ಹೋಗಿದ್ದಾಗ ಈ ಘಟನೆ ಸಂಭವಿಸಿದೆ. ಸ್ಥಳೀಯ ಈಜುಗಾರ ಇಸ್ಮಾಯಿಲ್ ಸಂಜಯ್ ನಗರ ಅವರು ನೀರಿನಲ್ಲಿ ಮುಳುಗಿದ್ದ ಸ್ಟೀವನ್ ಮೃತದೇಹವನ್ನು ಮೇಲಕ್ಕೆತ್ತಿದ್ದಾರೆ. ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಂಗಳೂರಲ್ಲಿ ಕೋಕೆನ್ ಮಾರಾಟ ಜಾಲದ ಪ್ರಮುಖ ಆರೋಪಿಯ ಸೆರೆ

Thursday, November 1st, 2018
arrested

ಮಂಗಳೂರು: ಸಾರ್ವಜನಿಕರಿಗೆ ಮಾದಕ ವಸ್ತುವಾದ ಕೋಕೆನ್ ಮಾರಾಟ ಮಾಡುತ್ತಿದ್ದ ಆರೋಪಿಗಳಿಗೆ ಗೋವಾದಿಂದ ಪೂರೈಕೆ ‌ಮಾಡುತ್ತಿದ್ದ ಪ್ರಮುಖ ಆರೋಪಿಯನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಕಾಸರಗೋಡು ಜಿಲ್ಲೆಯ ಕುಂಜತ್ತೂರಿನ ಅಜ್ಮಲ್ ಪುಲಿಕ್ಕಲ್ ಮೊಹಮ್ಮದ್(44) ಬಂಧಿತ ಆರೋಪಿ. ಈ ಹಿಂದೆ ಮಂಗಳೂರು ನಗರದ ಪೂರ್ವ ಪೊಲೀಸ್ ಠಾಣಾ ವ್ಯಾಪ್ತಿಯ ಮರೋಳಿ ಬಳಿಯಲ್ಲಿ ಅಕ್ರಮವಾಗಿ ಮಾದಕ ವಸ್ತುವಾದ ಕೋಕೆನ್ನ್ನು ಹೊಂದಿದ್ದ 5 ಮಂದಿಯನ್ನು ಮಂಗಳೂರು ಸಿಸಿಬಿ ಪೊಲೀಸರು ದಸ್ತಗಿರಿ ಮಾಡಿ 70,000 ರೂ. ಮೌಲ್ಯದ ಕೋಕೆನ್, ಮೂರು ಕಾರು, ನಗದು ಮತ್ತು […]

ಕಸಾಯಿಖಾನೆ ವಿವಾದ: ಮಂಗಳೂರು ಮಹಾನಗರ ಪಾಲಿಕೆ ಸಭೆಯಲ್ಲಿ ವಾಗ್ವಾದ

Wednesday, October 31st, 2018
kavitha-sanil

ಮಂಗಳೂರು: ಮಹಾನಗರ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಇಂದು ಕಸಾಯಿಖಾನೆ ಅಭಿವೃದ್ಧಿಗೆ ಸ್ಮಾರ್ಟ್ ಸಿಟಿ ಅನುದಾನ ನೀಡಿಕೆ ವಿಚಾರ ಸಂಬಂಧಿಸಿ ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ವಾಗ್ವಾದ ನಡೆಯಿತು. ಸ್ಮಾರ್ಟ್ ಸಿಟಿ ಅನುದಾನದಲ್ಲಿ ಕಸಾಯಿಖಾನೆ ಅಭಿವೃದ್ಧಿ ಪಡಿಸುವ ಬಗ್ಗೆ ಪಾಲಿಕೆಯಲ್ಲಿ ಯಾವುದೇ ಚರ್ಚೆ ಮಾಡದೆ ನೇರವಾಗಿ ಸ್ಮಾರ್ಟ್ ಸಿಟಿ ಸಭೆಯಲ್ಲಿ ನಿರ್ಣಯ ತೆಗೆದುಕೊಂಡಿರುವುದರ ವಿರುದ್ಧ ಪ್ರತಿಪಕ್ಷದಲ್ಲಿರುವ ಬಿಜೆಪಿ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು. ಅಂತಿಮವಾಗಿ ಸಭೆಗೆ ಉತ್ತರಿಸಿದ ಮನಪಾ ಮೇಯರ್ ಭಾಸ್ಕರ್ ಮೊಯ್ಲಿ, ಸದ್ಯ ಕುದ್ರೋಳಿಯಲ್ಲಿರುವ ಕಸಾಯಿಖಾನೆಯನ್ನು ಅಭಿವೃದ್ಧಿ ಪಡಿಸೋಣ. […]

ಕೊಲೆ ಪ್ರಕರಣ: ಅಪರಾಧಿಗೆ 8 ವರ್ಷಗಳ ಕಠಿಣ ಶಿಕ್ಷೆ ಮತ್ತು 50 ಸಾವಿರ ರೂ. ದಂಡ

Wednesday, October 31st, 2018
court-complex

ಮಂಗಳೂರು: 2014ರಲ್ಲಿ ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣದ ಬಳಿ ಬಜಾಲ್ ಜಲ್ಲಿಗುಡ್ಡೆ ಜಯರಾಜ್ ಎಂಬುವರನ್ನು ಕೊಲೆ ಮಾಡಿದ್ದ ಅಪರಾಧಿಗೆ ಸೆಷನ್ಸ್ ನ್ಯಾಯಾಲಯವು ಎಂಟು ವರ್ಷಗಳ ಕಠಿಣ ಶಿಕ್ಷೆ ಮತ್ತು 50 ಸಾವಿರ ರೂ. ದಂಡ ವಿಧಿಸಿದೆ. ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ತೇವರತೆಪ್ಪ ನಿವಾಸಿ ಮಾಲ್ತೇಶ್ ಅಲಿಯಾಸ್ ಟಿಕ್ಕಿ ಮೋಹನನಿಗೆ ಮಂಗಳೂರಿನ ಆರನೇ ಜಿಲ್ಲಾ ಹೆಚ್ಚುವರಿ ಮತ್ತು ಸೆಷನ್ಸ್ ನ್ಯಾಯಾಲಯವು ಎಂಟು ವರ್ಷಗಳ ಕಠಿಣ ಶಿಕ್ಷೆ ಮತ್ತು 50 ಸಾವಿರ ರೂ. ದಂಡ ವಿಧಿಸಿದೆ. ಬಸ್ ಕಂಡಕ್ಟರ್ […]