ದೀಪ್ತಿ ಮಾರ್ಲ ಅಲಿಯಾಸ್ ಮರಿಯಂ ಕುರಿತ ಸ್ಫೋಟಕ ಮಾಹಿತಿ ಬಹಿರಂಗ

Thursday, January 6th, 2022
Deepthi Marla

ಬೆಂಗಳೂರು :  ಉಳ್ಳಾಲದಲ್ಲಿ ರಾಷ್ಟ್ರೀಯ ತನಿಖಾ ದಳ ಬಂಧಿಸಿರುವ ದಂತ ವೈದ್ಯೆ ದೀಪ್ತಿ ಮಾರ್ಲ ಅಲಿಯಾಸ್ ಮರಿಯಂ ಕುರಿತ ಸ್ಫೋಟಕ ಮಾಹಿತಿ ಬಹಿರಂಗವಾಗಿದೆ. ಪ್ರಕರಣದಲ್ಲಿ ಹನಿಟ್ರ್ಯಾಪ್, ಮತಾಂತರ ಹಾಗೂ ಉಗ್ರ ಸಂಘಟನೆಯ ಒಡನಾಟವಿರುವ ಮಾಹಿತಿ ಹೊರಬಿದ್ದಿದೆ. ಮಾಜಿ ಶಾಸಕ ಇದನಬ್ಬರ ಮೊಮ್ಮಗನ ಮದುವೆ ಆದ ಬಳಿಕ ಇಸ್ಲಾಂಗೆ ಮತಾಂತರವಾಗಿದ್ದ ದೀಪ್ತಿ ಮಾರ್ಲ ಕ್ರೋನಿಕಲ್ ಫೌಂಡೇಶನ್ ಎಂಬ ಇನ್ಸ್ಟಾಗ್ರಾಂ ಪೇಜ್‌ನಲ್ಲಿ ಯುವಕರನ್ನ ಮತಾಂತರಕ್ಕೆ ಪ್ರೇರೇಪಿಸುತ್ತಿದ್ದಳಂತೆ. ಬಳಿಕ ಮತಾಂತರಗೊಂಡ ಯುವಕರನ್ನ ಇಸ್ಲಾಮಿಕ್‌ ಸ್ಟೇಟ್‌ ಉಗ್ರ ಸಂಘಟನೆಗೆ ಸೇರಿಸುತ್ತಿದ್ದಳು ಎಂದು ಎನ್‌ಐಎ ಪ್ರಾಥಮಿಕ‌ […]

ಹಿಂದೂ ಯುವಕನನ್ನು ಅಪಹರಿಸಿ ಮತಾಂತರ ಶಂಕೆ

Monday, October 25th, 2021
Praveen Poojary

ಬದಿಯಡ್ಕ: ಪುತ್ತಿಗೆ ಗ್ರಾಮ ಪಂಚಾಯತಿನ ಬಾಡೂರು ಎಂಬಲ್ಲಿ ಹಿಂದೂ ಯುವಕನೊಬ್ಬನನ್ನು ರಾತ್ರಿ ವೇಳೆ ಅಪಹರಿಸಿ ಮತಾಂತರ ಗೊಳಿಸಿರುವ ಬಗ್ಗೆ ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಚಾಕಟೆಚಾಲ್ ರಾಮಣ್ಣ ಪೂಜಾರಿ ಎಂಬವರ ಪುತ್ರ ಪ್ರವೀಣ್ ಕುಮಾರ್ ಸಿ.ಎಚ್ (32) ಎಂಬಾತನನ್ನು ತಂಡವೊಂದು ಶುಕ್ರವಾರ ರಾತ್ರಿ ಬೆದರಿಸಿ ಅಪಹರಿಸಿರುವುದಾಗಿ ದೂರು ನೀಡಲಾಗಿದೆ. ಯುವಕನನ್ನು ಶೀಘ್ರ ಪತ್ತೆ ಹಚ್ಚಿ ಕ್ರಮಕೈಗೊಳ್ಳದಿದ್ದರೆ ಬಹಿರಂಗ ಹೋರಾಟಕ್ಕಿಳಿಯುವುದಾಗಿ ವಿಶ್ವಹಿಂದು ಪರಿಷತ್,ಬಜರಂಗದಳ,ಮಾತೃಶಕ್ತಿ ದುರ್ಗಾವಾಹಿನಿ ಜಿಲ್ಲಾ ಸಂಘಟನೆ ಎಚ್ಚರಿಸಿದೆ. ಬಾಡೂರಿನ ಪ್ರವೀಣ್ ಪೂಜಾರಿ ಎಂಬಾತ ನೆಲ್ಲಿಕಟ್ಟೆಯ ಮಾಲೀಕರೋರ್ವರ ಪೆಟ್ರೋಲ್ ಪಂಪ್ ಒಂದರಲ್ಲಿ ಬದಿಯಡ್ಕ ಹಾಗೂ ನೆಲ್ಲಿಕಟ್ಟೆಯಲ್ಲಾಗಿ ಕಳೆದ […]

ಅಕ್ರಮ ಗೋ ಸಾಗಾಟ ಮತ್ತು ಅಕ್ರಮ ಮತಾಂತರ ಚಟುವಟಿಕೆಗಳ ವಿರುದ್ಧ ಕಠಿಣ ಕ್ರಮಕ್ಕೆ ಸೂಚನೆ : ವಿ. ಸುನಿಲ್ ಕುಮಾರ್

Friday, September 24th, 2021
Sunil Kumar

ಕಾರ್ಕಳ : ಇತ್ತೀಚಿನ ದಿನಗಳಲ್ಲಿ ಉಡುಪಿ ಜಿಲ್ಲೆಯಲ್ಲಿ ನಡೆಯುತ್ತಿರುವ ಅಕ್ರಮ ಗೋ ಸಾಗಾಟ ಮತ್ತು ಕಾನೂನು ಬಾಹಿರ ಮತಾಂತರ ಚಟುವಟಿಕೆಗಳು ನಡೆಯುತ್ತಿರುವ ಬಗ್ಗೆ ಗಮನಕ್ಕೆ ಬಂದಿದ್ದು ಈ ನಿಟ್ಟಿನಲ್ಲಿ ಇಂತಹ ಕಾನೂನು ಬಾಹಿರ ಚಟುವಟಿಕೆಗಳನ್ನು ಹತ್ತಿಕ್ಕುವಂತೆ ಹಾಗೂ ಕಠಿಣ ಕ್ರಮ ಕೈಗೊಳ್ಳುವಂತೆ ಉಡುಪಿ ಜಿಲ್ಲೆಯ ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಮತ್ತು ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಮಾನ್ಯ ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖಾ ಸಚಿವರಾದ ವಿ ಸುನಿಲ್ ಕುಮಾರ್ ರವರು ಕಟ್ಟು ನಿಟ್ಟಿನ ಸೂಚನೆ […]

ಅಮಾಯಕ ಹಿಂದುಗಳಿಗೆ ಆಮಿಷ ಒಡ್ಡಿ ಮತಾಂತರ ಸಹಿಸಲು ಸಾಧ್ಯವಿಲ್ಲ : ಕಾರ್ಕಳ ಬಿಜೆಪಿ

Saturday, September 11th, 2021
Pragathi Center

ಕಾರ್ಕಳ   : ಹಿಂದೂ ಧರ್ಮೀಯರನ್ನು ಗುರಿಯಾಗಿಸಿಕೊಂಡು ಷಡ್ಯಂತ್ರ ನಡೆಸಿ ಮತಾಂತರ ಮಾಡುವ ಆರೋಪಗಳು ಕಾರ್ಕಳದ ವಿವಿಧೆಡೆ ಕಂಡು ಬರುತ್ತಿದೆ, ಇತ್ತೀಚೆಗೆ ಮಿಷನರಿಗಳ ಕುಕೃತ್ಯ ಮಿತಿಮೀರಿದ್ದು ಪ್ರಾರ್ಥನೆ ಹೆಸರಿನಲ್ಲಿ ಮತಾಂತರ ನಡೆಸಿ ಹಿಂದೂಗಳ ಸಹನೆಯನ್ನ ಪರೀಕ್ಷೆಗೆ ಒಡ್ಡುತ್ತಿದ್ದಾರೆ. ಒಂದೆಡೆಯಲ್ಲಿ ಮತಾಂತರ ಮತ್ತೊಂದು ಕಡೆ ಗೋಕಳ್ಳತನ ಹಿಂದುಗಳ ಸಹನೆಯ ಕಟ್ಟೆ ಒಡೆಯುವಂತೆ ಮಾಡುತ್ತಿದೆ ಇದು ತಕ್ಷಣ ನಿಲ್ಲಬೇಕು ಇಲ್ಲವಾದಲ್ಲಿ, ಇಂತಹ ಕೃತ್ಯಗಳು ಮುಂದೆ ಸಾಮಾಜಿಕ ಅಶಾಂತಿಗೆ ಕಾರಣವಾಗುವುದರಲ್ಲಿ ಸಂದೇಹವಿಲ್ಲ. ಇಂತಹ ಕೃತ್ಯಗಳನ್ನು ಬಿಜೆಪಿ ತೀಕ್ಷ್ಣವಾಗಿ ಖಂಡಿಸುತ್ತದೆ. ಸಾಮಾಜಿಕ ಶಾಂತಿ ಕದಡುವ […]

ಲವ್‌ ಜಿಹಾದ್, ಮತಾಂತರವನ್ನು ಇನ್ನೂ ಪ್ರಶ್ನಿಸುತ್ತೇವೆ : ಸುದರ್ಶನ್ ಮೂಡುಬಿದಿರೆ

Saturday, August 14th, 2021
sudarshan

ಮಂಗಳೂರು : ಯು ಟಿ ಖಾದರ್ ಹೇಳಿಕೆಗೆ ಪ್ರತಿಕ್ರಿಯಿಸಿರುವ ದ.ಕ. ಜಿಲ್ಲಾ ಬಿಜೆಪಿ ಅಧ್ಯಕ್ಷ ಸುದರ್ಶನ್ ಮೂಡುಬಿದಿರೆ ಎನ್‌ಐಎ ತನಿಖೆಯ ಕುರಿತು ಮಾಜಿ ಸಚಿವ ಯು.ಟಿ.ಖಾದರ್ ಅವರೇ ಗೊಂದಲಮಯ ಹೇಳಿಕೆ ನೀಡಿದ್ದಾರೆ. ಅದನ್ನು ಪಕ್ಷ ಖಂಡಿಸುತ್ತದೆ ಎಂದು ಅವರು ತಿಳಿಸಿದ್ದಾರೆ. ಶನಿವಾರ ನಗರದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಉಳ್ಳಾಲದ ಮನೆಯೊಂದರಲ್ಲಿ ನಡೆದ ಲವ್ ಜಿಹಾದ್ ಮತ್ತು ಉಗ್ರರ ಜೊತೆಗಿನ ಸಂಬಂಧದ ವಿಚಾರವನ್ನು ಖಂಡಿಸಿ ವಿಎಚ್‌ಪಿ ಪ್ರತಿಭಟನೆ ನಡೆಸಿರುವುದು ಶ್ಲಾಘನೀಯ. ಆ ಮನೆಯಲ್ಲಿ ನಡೆದ ಮತಾಂತರದ ವಿಚಾರವನ್ನು ಕೇಳಲು […]

‘ಲವ್ ಜಿಹಾದ್’ ವಿರುದ್ಧ ಕಠಿಣ ಕಾನೂನು ರೂಪಿಸಲು ಆಗ್ರಹ

Saturday, December 26th, 2020
HJJ

ಮಂಗಳೂರು  : ಪ್ರೇಮದ ಹೆಸರಿನಲ್ಲಿ ಮುಸ್ಲಿಂಮೇತರ ಮಹಿಳೆಯರನ್ನು ಮತಾಂತರಿಸಿ ಚಿತ್ರಹಿಂಸೆ ನೀಡುವ ‘ಲವ್ ಜಿಹಾದ್’ ವಿರುದ್ಧ ಕಠಿಣ ಕಾನೂನು ರೂಪಿಸ ಬೇಕೆಂದು ಬಂಟ್ವಾಳ ತಾಲೂಕಿನ ತಹಶೀಲ್ದಾರರಾದ ಕು.ಅನಿತಾ ಲಕ್ಷ್ಮೀ ಇವರಿಗೆ ಮನವಿಯನ್ನು ನೀಡಲಾಯಿತು. ಇತ್ತಿಚಿಗೆ ಮುಸ್ಲಿಂಮೇತರ ಮಹಿಳೆಯರೊಂದಿಗೆ ಪ್ರೀತಿಯ ನಾಟಕವಾಡಿ, ಅವರನ್ನು ಬಲವಂತವಾಗಿ ಇಸ್ಲಾಂಗೆ ಮತಾಂತರ ಮಾಡುವ, ಮೋಸದಿಂದ ಮದುವೆ ಮಾಡಿ, ತದನಂತರ ಅವರನ್ನು ಬೀದಿ ಪಾಲು ಮಾಡುವ ಅನೇಕ ಘಟನೆಗಳು ಅನೇಕ ರಾಜ್ಯಗಳು ಸೇರಿ, ರಾಜ್ಯದ ಅನೇಕ ಜಿಲ್ಲೆಗಳಲ್ಲಿ ಹೆಚ್ಚಾಗಿ ನಡೆಯುತ್ತಿವೆ. ಈಗಾಗಲೇ ಇಂತಹ ಲವ್ […]

ಲವ್ ಜಿಹಾದ್ ಗೆ ಒಪ್ಪದಕ್ಕೆ ಗುಂಡಿಕ್ಕಿ ಯುವತಿಯ ಕೊಲೆ

Tuesday, October 27th, 2020
paridhabadh

ಚಂಡೀಗಢ: ತನ್ನ ಧರ್ಮಕ್ಕೆ ಮತಾಂತರವಾಗುವಂತೆ ಮೂರು ವರ್ಷದಿಂದ ಯುವತಿಗೆ ಬಲವಂತ ಮಾಡಿ ಕೊನೆಗೆ ಹುಡುಗಿ ಒಪ್ಪದೇ ಇದ್ದುದಕ್ಕೆ ಏಕಾಏಕಿ ಗುಂಡಿನ ದಾಳಿ ನಡೆಸಿ ಹತ್ಯೆ ಮಾಡಿದ ಪ್ರಕರಣ ಹರಿಯಾಣದ ಫರಿದಾಬಾದ್ ನಲ್ಲಿ ನಡೆದಿದೆ. ಇದು ಲವ್ ಜಿಹಾದ್ ಎಂದು ಯುವತಿಯ ಪೋಷಕರು ಗಂಭೀರ ಆರೋಪ ಮಾಡಿದ್ದಾರೆ. ಅಂತಿಮ ವರ್ಷದ ಬಿ.ಕಾಂ ವಿದ್ಯಾರ್ಥಿನಿ ಪರೀಕ್ಷೆ ಮುಗಿಸಿ ಕಾಲೇಜಿನಿಂದ ಹೊರಗೆ ಬರುತ್ತಿದ್ದಂತೆ ದುರುಳರು ಆಕೆಯ ಮೇಲೆ ದಾಳಿ ನಡೆಸಿದ್ದಾರೆ. ಆರಂಭದಲ್ಲಿ ಅಪಹರಿಸಲು ಮುಂದಾಗಿದ್ದು, ಈ ವೇಳೆ ಯುವತಿ ತಪ್ಪಿಸಿಕೊಳ್ಳಲು ಯತ್ನಿಸಿದ್ದಾಗ ಗುಂಡು […]

ಸಹಪಾಠಿಗಳ ಮಾತಿಗೆ ಮರುಳಾಗಿ ಇಸ್ಲಾಂ ಧರ್ಮಕ್ಕೆ ಮತಾಂತರ ಗೊಂಡ ಆದಿರಾ ಮತ್ತೆ ಹಿಂದೂ ಧರ್ಮಕ್ಕೆ

Friday, September 22nd, 2017
Adhira

ಮಂಗಳೂರು : ಇಸ್ಲಾಂ ಸಹಪಾಠಿಗಳ ಮಾತಿಗೆ ಮರುಳಾಗಿ ಇಸ್ಲಾಂ ಧರ್ಮಕ್ಕೆ ಬಲವಂತವಾಗಿ ಮತಾಂತರ ಗೊಂಡು ಮಾತೃ ಧರ್ಮವನ್ನೇ ತ್ಯಜಿಸಿದ್ದ ಕಾಸರಗೋಡು ಜಿಲ್ಲೆಯ ಉದುಮದ ಯುವತಿ ಆದಿರಾ ಇದೀಗ ಮತ್ತೆ ಹಿಂದೂ ಧರ್ಮಕ್ಕೆ ವಾಪಸ್ಸಾಗಿದ್ದಾಳೆ. ಕಳೆದ ಜೂ. 10ರಂದು ಮನೆಯಿಂದ ನಾಪತ್ತೆಯಾಗಿದ್ದ ಆದಿರಾ, ಹೆತ್ತವರಿಗೆ ಪತ್ರ ಬರೆದಿಟ್ಟಿದ್ದಳು. ತಾನು ಇಸ್ಲಾಂ ಧರ್ಮದ ಬಗ್ಗೆ ಆಕರ್ಷಿತಳಾಗಿದ್ದೇನೆ. ಆ ಧರ್ಮದ ಬಗ್ಗೆ ಇನ್ನಷ್ಟು ಕಲಿಯುವ ಉದ್ದೇಶದಿಂದ ಮನೆ ಬಿಡುತ್ತಿದ್ದೇನೆ ಎಂದು ಪತ್ರದಲ್ಲಿ ತಿಳಿಸಿದ್ದಳು. ಇದರಿಂದ ಆತಂಕಗೊಂಡ ಆಕೆಯ ಹೆತ್ತವರು ಪೋಷಕರು ಜೂ. […]

ವಿವಿಧ ಹಿಂದೂ ಸಂಘಟನೆಗಳಿಂದ ಮತಾಂತರದ ವಿರುದ್ಧ ಪ್ರತಿಭಟನೆ

Sunday, April 10th, 2011
ವಿವಿಧ ಹಿಂದೂ ಸಂಘಟನೆಗಳಿಂದ ಮತಾಂತರದ ವಿರುದ್ಧ ಪ್ರತಿಭಟನೆ

ಮಂಗಳೂರು: ವಿಶ್ವ ಹಿಂದೂ ಪರಿಷತ್, ಬಜರಂಗ ದಳ ಹಾಗೂ ಇನ್ನಿತರ ಹಿಂದೂ ಸಂಘಟನೆಗಳು, ಮತಾಂತರದ ವಿರುದ್ಧ ಶನಿವಾರ ದ.ಕ ಜಿಲ್ಲಾಧಿಕಾರಿ ಕಚೇರಿಯ  ಮುಂಭಾಗದಲ್ಲಿ ಪ್ರತಿಭಟನೆ ನಡೆಸಿತು. ಜಿಲ್ಲಾಧಿಕಾರಿಗಳ ಮೂಲಕ ರಾಜ್ಯದ ಮುಖ್ಯಮಂತ್ರಿಗಳಿಗೆ ಮತಾಂತರದ ವಿರದ್ಧ ಕೂಡಲೇ ಕ್ರಮ ಜರಗಿಸುವಂತೆ ಮನವಿ ಸಲ್ಲಿಸಿತು. ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಹಿಂದುಳಿದ  ಬಡ ಹಿಂದೂ ಕುಟುಂಬಗಳ ಎಳೆಯ ಮಕ್ಕಳಿಗೆ ಉಚಿತ ಸೌಲಭ್ಯ ನೀಡುವ  ಆಮಿಷದ ಮೂಲಕ ಕ್ರೈಸ್ತ ಮಿಶನರಿಗಳು ಮತಾಂತರ ಕಾರ್ಯವನ್ನು ಮಾಡುತ್ತಿದೆ. ಕರಾವಳಿ ಜಿಲ್ಲೆಯಲ್ಲಿ 40ಕ್ಕೂ ಮಿಕ್ಕಿದ ಮತಾಂತರ ಕೇದ್ರಗಳು […]