ಪರೀಕ್ಷೆಗೆ ಸ್ಯಾನಿಟೈಸರ್, ಮಾ‌ಸ್ಕ್ ಗಳ ಕೊಡುಗೆ

Friday, July 9th, 2021
Exam

ಬೆಂಗಳೂರು: ಈ ಬಾರಿಯ ಎಸ್ಸೆಸ್ಸೆಲ್ಲಿ ಪರೀಕ್ಷೆಯು ಸುರಕ್ಷಿತ ವಾತಾವರಣದಲ್ಲಿ ನಡೆಸುವ ಸಲುವಾಗಿ ಹಲವಾರು ಸಂಘ ಸಂಸ್ಥೆಸಗಳು ಮಾಸ್ಕ್, ಸ್ಯಾನಿಟೈಸರ್ ಗಳನ್ನು ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಗೆ ನೀಡಿದ್ದಾರೆ. ಈ ಸಂಘ ಸಂಸ್ಥೆಗಳವರು ತಾವು ಪರೀಕ್ಷಾ‌ರ್ಥಿಗಳಿಗೆ ಒದಗಿಸುವ ಪರಿಕರಗಳನ್ನು ಶುಕ್ರವಾರ ಡಿ.ಎಸ್‍.ಇ.ಆರ್.ಟಿ.ಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಅವರಿಗೆ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು, ಕಳೆದ ವರ್ಷದಂತೆಯೇ ಅನೇಕ ಸಂಘಸಂಸ್ಥೆಗಳವರು ನಮ್ಮ ಮಕ್ಕಳ ಹಿತಕ್ಕೋಸ್ಕರ ಮತ್ತು ಪರೀಕ್ಷೆಯ ಸಂದರ್ಭದಲ್ಲಿ […]

ಪೊಲೀಸರು ಜಪ್ತಿ ಮಾಡಿದ 35 ಸಾವಿರ ವಾಹನಗಳ ದಂಡದ ಮೊತ್ತ ನೋಡಿ ಗೃಹ ಸಚಿವರೇ ಶಾಕ್!

Saturday, May 29th, 2021
Bommai

ಬೆಂಗಳೂರು : ಕೋವಿಡ್ 19 ಎರಡನೇ ಅಲೆ ಭೀತಿ ಹಿನ್ನೆಲೆಯಲ್ಲಿ ಕಠಿಣ ಲಾಕ್ ಡೌನ್ ನಿಯಮ ಜಾರಿಗೊಳಿಸಲಾಗಿದೆ. ಲಾಕ್ ಡೌನ್ ನಿಯಮ ಉಲ್ಲಂಘಿಸಿ ಬೀದಿಗೆ ಇಳಿದವರ ವಿರುದ್ಧ ದಂಡಾಸ್ತ್ರ ಪ್ರಯೋಗಿಸಿದ ಪೊಲೀಸರು ಬರೋಬ್ಬರಿ 35905 ಸಾವಿರ ವಾಹನ ಜಪ್ತಿ ಮಾಡಿದ್ದಾರೆ. ಅದರಲ್ಲೂ 32 ಸಾವಿರ ದ್ವಿಚಕ್ರ ವಾಹನ. ಇವುಗಳಿಂದ ಸರಾಸರಿ ದಂಡ ಎಷ್ಟು ಸಂಗ್ರಹವಾಗುತ್ತದೆ. ಈ ದಂಡದ ಮೊತ್ತವನ್ನು ಏನು ಮಾಡುತ್ತಾರೆ ಎಂಬುದರ ಪೂರ್ಣ ವಿವರ ಇಲ್ಲಿದೆ ನೋಡಿ! 35 ಸಾವಿರ ವಾಹನ ಜಪ್ತಿ ರಾಜಧಾನಿಯಲ್ಲಿ ಬೆಳಗ್ಗೆ […]

ಮಾಸ್ಕ್‌ ಧರಿಸದಕ್ಕೆ ಫೊಟೊ ತೆಗೆದ ಪಿಡಿಒ ಕಪಾಳಕ್ಕೊಡೆದ ನಾಲ್ವರು ಆರೋಪಿಗಳ ಬಂಧನ

Thursday, May 27th, 2021
Rajendra Shetty

ಮಂಗಳೂರು : ಕೊರೋನಾ ನಿಯಮಗಳನ್ನು ಪಾಲಿಸದೆ ಮಾಸ್ಕ್‌ ಧರಿಸದ ಕಾರಣಕ್ಕಾಗಿ ಫೊಟೊ ತೆಗೆದ  ಮಲ್ಲೂರು ಗ್ರಾಮ ಪಂಚಾಯತ್ ಪಿಡಿಒ ಕೆನ್ನೆಗೆ ಹೊಡೆದು ಹಲ್ಲೆ ಮಾಡಿದ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಪರಂಗಿಪೇಟೆಯ ಮಹಮ್ಮದ್‌ ಇದಾಯತುಲ್ಲಾ(25), ಅಹ್ಮದ್‌ ಬಶೀರ್(‌30), ಕುತ್ತಾರ್‌ನ ಅಬೂಬಕರ್‌ ಸಿದ್ದಿಕ್‌(26) ಹಾಗೂ ಪರಂಗಿಪೇಟೆ ಪುದುವಿನ ಅಬ್ದುಲ್‌ ಸಿದ್ದಿಕ್‌(33) ಬಂಧಿತರು. ಇವರಲ್ಲಿ ಇದಾಯತುಲ್ಲಾ ಹಾಗೂ ಬಶೀರ್‌ ವಿರುದ್ಧ ವಿವಿಧ ಪ್ರಕರಣಗಳು ಹಿಂದೆಯೂ ದಾಖಲಾಗಿವೆ. ಮೇ 25 ರಂದು ಮಲ್ಲೂರು ರಸ್ತೆಯಲ್ಲಿ ಈ ನಾಲ್ವರು ಮಾಸ್ಕ್‌ ಧರಿಸದೆ ನಿಂತಿದ್ದರು. ಇದನ್ನು ಪ್ರಶ್ನಿಸಿದ್ದ […]

ಮಂಗಳೂರು : ಗ್ರಾಮ ಪಂಚಾಯಿತಿ ಕಚೇರಿಯ ಸಮೀಪ ಮಾಸ್ಕ್ ಹಾಕಲು ಹೇಳಿದ ಪಿಡಿಒ ಕಪಾಳಕ್ಕೊಡೆದ ಯುವಕರು

Tuesday, May 25th, 2021
Rajendra Shetty

ಮಂಗಳೂರು : ಮಲ್ಲೂರ್ ಗ್ರಾಮ ಪಂಚಾಯಿತಿ ಸಮೀಪ ಅಲೆದಾಡುತ್ತಿದ್ದ  ಐದು ಮಂದಿ ಯುವಕರಿಗೆ  ಮಾಸ್ಕ್ ಧರಿಸುವಂತೆ ಹೇಳಿದ್ದಕ್ಕೆ ಸಾರ್ವಜನಿಕ ಅಭಿವೃದ್ಧಿ ಅಧಿಕಾರಿ (ಪಿಡಿಒ) ಮೇಲೆ  ಮೇ 25 ರ ಮಂಗಳವಾರ ದಂದು  ಕಪಾಳಕ್ಕೊಡೆದು ಹಲ್ಲೆ ಮಾಡಲಾಗಿದೆ ಎಂದು ದೂರು ನೀಡಲಾಗಿದೆ. ಪಿಡಿಒ ರಾಜೇಂದ್ರ ಶೆಟ್ಟಿ ಅವರು ಗ್ರಾಮ ಪಂಚಾಯಿತಿ ಕಚೇರಿಯ ಸಮೀಪದಲ್ಲಿದ್ದ ಐದು ಮಂದಿ ಯುವಕರಿಗೆ ಮಾಸ್ಕ್  ಧರಿಸಿ ಕೋವಿಡ್ -19 ಮಾರ್ಗಸೂಚಿಗಳನ್ನು ಪಾಲಿಸುವಂತೆ ಕೇಳಿದ್ದರು ಎಂದು ಹೇಳಲಾಗಿದೆ. ಆದರೆ ಅಬೂಬಕರ್  ಎಂಬ ವ್ಯಕ್ತಿ  ಇತರ ನಾಲ್ವರೊಂದಿಗೆ ಸೇರಿ  ಪಿಡಿಒ ಮುಖದ ಮೇಲೆ  ಹಲ್ಲೆ […]

ಶಿಕ್ಷಕರನ್ನು ಸರಕಾರಿ, ಅನುದಾನಿತ, ಖಾಸಗಿ ಅನುದಾನ ರಹಿತ, ಅತಿಥಿ ಶಿಕ್ಷಕರೆಂಬ ಭೇದಭಾವ ಮಾಡದೇ ಶಿಕ್ಷಕರಿಗೆ ಎಲ್ಲ ಸೌಲಭ್ಯ ನೀಡಿ

Monday, May 24th, 2021
Horatti

ಬೆಂಗಳೂರು : ರಾಜ್ಯದಲ್ಲಿ ಸುಮಾರು 60 ಸಾವಿರಕ್ಕೂ ಹೆಚ್ಚು ಶಿಕ್ಷಕರು ಕೋವಿಡ್ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇವರಲ್ಲಿ ಸರಕಾರಿ, ಅನುದಾನಿತ ಹಾಗೂ ಖಾಸಗಿ ಅನುದಾನ ರಹಿತ ಮತ್ತು ಅತಿಥಿ (ಗುತ್ತಿಗೆ) ಶಿಕ್ಷಕರು ಸೇರಿದ್ದಾರೆ. ಈ ಎಲ್ಲಾ ಶಿಕ್ಷಕರನ್ನು ಆಸ್ಪತ್ರೆ, ರೈಲು ಮತ್ತು ಬಸ್ ನಿಲ್ದಾಣ, ಚೆಕ್‍ಪೋಸ್ಟ್‍ಗಳಲ್ಲಿ ಶಿಕ್ಷಕರನ್ನು ನಿಯೋಜಿಸಲಾಗಿದೆ, ಕೋವಿಡ್ ವಾರ್‍ರೂಮ್, ಸಹಾಯವಾಣಿಯಲ್ಲಿ ಇವರು ಕೆಲಸ ಮಾಡುತ್ತಿರುವುದಲ್ಲದೇ ಸೋಂಕಿತರ ಮನೆಗೇ ಹೋಗಿ, ಅವರ ಮತ್ತು ಪ್ರಾಥಮಿಕ, ದ್ವಿತೀಯ ಸಂಪರ್ಕಿತರ ವಿವರಗಳನ್ನು ಸಂಗ್ರಹಿಸಿ, ಅವರ ಕುಟುಂಬದವರೊಂದಿಗೆ ಫೋಟೋ ತೆಗೆಸಿ, ಅದನ್ನು […]

ಲಾಕ್ ಡೌನ್ ಜೂಜಾಟ : ಹನ್ನೊಂದು ಮಂದಿಯ ಬಂಧನ, 1,76,800/- ರೂ ಮೌಲ್ಯದ ಸೊತ್ತು ವಶ

Friday, May 21st, 2021
Andar Bahar

ಮಂಗಳೂರು : ಮಂಗಳೂರು ಪೂರ್ವ ಪೊಲೀಸ್ ಠಾಣಾ ವ್ಯಾಪ್ತಿಯ ಪದವು ಗ್ರಾಮದ ಬಿಕರ್ನಕಟ್ಟೆಯ ಬಾಡಿಗೆ ಮನೆಯೊಂದರಲ್ಲಿ ಲಾಕ್ ಡೌನ್ ನಿಯಮಗಳನ್ನು ಉಲ್ಲಂಘಿಸಿ, ಸಾಮಾಜಿಕ ಅಂತರವನ್ನು ಪಾಲಿಸದೇ ಮಾಸ್ಕ್ ಧರಿಸದೇ ಅಕ್ರಮ ಜೂಜಾಟವಾದ ಆಂದರ್- ಬಾಹರ್ ಆಟವನ್ನು ಆಡುತ್ತಿದ್ದ ಹನ್ನೊಂದು ಮಂದಿಯನ್ನು ಮಂಗಳೂರು ಸಿಸಿಬಿ ಇನ್ಸ್ ಪೆಕ್ಟರ್ ಮಹೇಶ್ ಪ್ರಸಾದ್, ಪಿಎಸ್ಐಯವರಾದ  ರಾಜೇಂದ್ರ. ಬಿ, ಪ್ರದೀಪ ಟಿಆರ್ ಮತ್ತು ಸಿಬ್ಬಂದಿಗಳು ಮೇ 21 ಶುಕ್ರವಾರ ಬಂಧಿಸಿದ್ದಾರೆ. 1) ರಾಜೇಂದ್ರ ಹಲ್ದಾರ್(41), ವಾಸ:, ಆದಿಲಬಾದ್, ತೆಲಂಗಾಣ, ಹಾಲಿ ವಾಸ ಪದವು ಕುಲಶೇಖರ, ಮಂಗಳೂರು 2) […]

ಮಾಸ್ಕ್ ಧರಿಸಲು ನಿರಾಕರಿಸಿದ ವೈದ್ಯ, ಸಾಂಕ್ರಾಮಿಕ ಕಾಯ್ದೆಯಡಿ ಪ್ರಕರಣ ದಾಖಲು

Wednesday, May 19th, 2021
Srinivasa kakkilaya

ಮಂಗಳೂರು : ಕದ್ರಿಯ ಜಿಮ್ಮಿಸ್ ಸೂಪರ್ ಮಾರ್ಕೆಟ್‌ನಲ್ಲಿ ಕೊರೊನಾ ನಿಯಮವನ್ನು ಉಲ್ಲಂಘಿಸಿ ಮಾಸ್ಕ್ ಧರಿಸಲು ನಿರಾಕರಿಸಿದಕ್ಕೆ ಕದ್ರಿ ಪೊಲೀಸ್ ಠಾಣೆಯಲ್ಲಿ ಸಾಂಕ್ರಾಮಿಕ ಕಾಯ್ದೆಯಡಿ ಡಾ.ಶ್ರೀನಿವಾಸ ಕಕ್ಕಿಲಾಯ ವಿರುದ್ಧ ಪ್ರಕರಣ ದಾಖಲಾಗಿದೆ. ಬುಧವಾರ ಬೆಳಿಗ್ಗೆ 8.45 ರ ಸುಮಾರಿಗೆ ಸೂಪರ್‌ ಮಾರ್ಕೆಟ್‌ಗೆ ಡಾ.ಶ್ರೀನಿವಾಸ್ ಕಕ್ಕಿಲಾಯ ಮಾಸ್ಕ್ ಧರಿಸದೇ ಬಂದಿದ್ದರು, ಸೂಪರ್ ಮಾರ್ಕೆಟ್‌ನಲ್ಲಿರುವಾಗ ಮಾಸ್ಕ್ ಧರಿಸದಿದ್ದಾಗ ದಯವಿಟ್ಟು ಮಾಸ್ಕ್ ಧರಿಸಿ, ಇಲ್ಲಿ ಎಲ್ಲರಿಗೂ ಒಂದೇ ನಿಯಮ ಎಂದು ಸಿಬ್ಬಂದಿಯೊಂಬರು ಹೇಳಿದಕ್ಕೆ ವಾಗ್ವಾದಕ್ಕೆ ಇಳಿದ ವೈದ್ಯ ಮಾಸ್ಕ್ ಧರಿಸಲು ನಿರಾಕರಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. […]

ಎರಡು ವಾರಗಳ ಕಠಿಣ ಲಾಕ್‌ಡೌನ್‌ ಅಗತ್ಯ ವಸ್ತುಗಳ ಖರೀದಿಗೆ ನೂಕು ನುಗ್ಗಲು

Monday, May 10th, 2021
Heavy Rush

ಮಂಗಳೂರು : ಎರಡು ವಾರಗಳ ಕಠಿಣ ಲಾಕ್‌ಡೌನ್‌ ಸೋಮವಾರದಿಂದ ಜಾರಿಯಾಗಿದ್ದು, ಈ ಹಿನ್ನೆಲೆಯಲ್ಲಿ ಮಂಗಳೂರು ನಗರ ಸೇರಿದಂತೆ ದ.ಕ. ಜಿಲ್ಲೆಯಲ್ಲಿ ಬಹುತೇಕ ಕಡೆಗಳಲ್ಲಿ ಇಂದು ಬೆಳಗ್ಗೆ ಅಗತ್ಯ ವಸ್ತುಗಳ ಖರೀದಿಗೆ ಜನರು ಮಾರುಕಟ್ಟೆಗಳಿಗೆ ಮುಗಿಬಿದ್ದರು. ಮಂಗಳೂರಿನ ಮಲ್ಲಿಕಟ್ಟೆ, ನಗರ ಹೊರ ವಲಯದ ತೊಕ್ಕೊಟ್ಟು ಒಳಪೇಟೆ, ತಲಪಾಡಿ ಕೆ.ಸಿ.ರೋಡ್ ನಲ್ಲಿ ಜನರು ಖರೀದಿಯ ಅವಸರದಲ್ಲಿ ಸಾಮಾಜಿಕ ಅಂತರವನ್ನೇ ಮರೆತಿದ್ದರು ಜನ ಮಾಸ್ಕ್ ಧಾರಣೆಯನ್ನು ಮರೆತಿದ್ದರು. ಮಾರುಕಟ್ಟೆಯನ್ನು ಸಂಪರ್ಕಿಸುವ ರಸ್ತೆಗಳಂತೂ ವಾಹನಗಳು ಹಾಗೂ ಜನಜಂಗುಳಿಯಿಂದ ಗಿಜಿಗುಡುತ್ತಿತ್ತು. ಜನರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ […]

ಪುತ್ತೂರಿನಲ್ಲಿ ಸಾಕು ನಾಯಿಗೂ ಮಾಸ್ಕ್‌ ತೊಡಿಸಿ ಪೇಟೆಗೆ ಬಂದ ವ್ಯಕ್ತಿ

Saturday, May 1st, 2021
dog Mask

ಪುತ್ತೂರು :  ಪೇಟೆಗೆ ಬಂದಾಗ ತಮ್ಮ ಜತೆ ಕರೆ ತಂದಿದ್ದ ಸಾಕು ನಾಯಿಗೂ ಮಾಸ್ಕ್‌ ತೊಡಿಸಿ ದ್ವಿಚಕ್ರ ವಾಹನದಲ್ಲಿ ಕರೆತಂದ ಘಟನೆ ಪುತ್ತೂರು ನಗರದಲ್ಲಿ ನಡೆದಿದೆ. ಪ್ರವೀಣ್‌ ಎಂಬವರು ಗುರುವಾರ ಬೆಳಗ್ಗೆ ಪುತ್ತೂರು ನಗರಕ್ಕೆ ದ್ವಿಚಕ್ರ ವಾಹನದಲ್ಲಿ ಬಂದಾಗ ನಾಯಿ ಮರಿಯನ್ನೂ ಕೂರಿಸಿಕೊಂಡು ಬಂದಿದ್ದರು. ಚೆಕ್‌ಪೋಸ್ಟ್‌ನಲ್ಲಿದ್ದ ಪೊಲೀಸರು ಇದನ್ನು ಗಮನಿಸಿದ್ದರು. ತಾವು ಮಾಸ್ಕ್‌ ಧರಿಸಿದ್ದಲ್ಲದೆ ನಾಯಿ ಮರಿಗೂ ಮಾಸ್ಕ್‌ ಹಾಕಿದ್ದರು. ನಮ್ಮ ಸುರಕ್ಷತೆ ಬಗ್ಗೆ ಕಾಳಜಿ ವಹಿಸುತ್ತಿರುವಾಗ ಸಾಕುಪ್ರಾಣಿಗಳ ಬಗೆಗೂ ಕಾಳಜಿ ವಹಿಸಬೇಕಲ್ಲವೇ? ಇದು ನಮ್ಮ ಜವಾಬ್ದಾರಿಯಲ್ಲವೇ ಎಂದು ಹೇಳಿದರು.

ಉಳ್ಳಾಲ : ಸೋಮೇಶ್ವರ ದೇವಸ್ಥಾನದಲ್ಲಿ ಕೊರೊನಾ ನಿಯಮ ಉಲ್ಲಂಘಿಸಿ ಪಾಲ್ಗೊಂಡ ಸಾವಿರಾರು ಭಕ್ತರು

Tuesday, April 27th, 2021
Someshwara

ಮಂಗಳೂರು : ಉಳ್ಳಾಲದ ಸೋಮೇಶ್ವರ ದೇವಸ್ಥಾನದಲ್ಲಿ ಏಪ್ರಿಲ್ 26 ರ ರಾತ್ರಿ  ಬ್ರಹ್ಮಕಲಶೋತ್ಸವ ದ ರಥೋತ್ಸವದಲ್ಲಿ ಕೊರೊನಾ ಮಾರ್ಗಸೂಚಿಗಳನ್ನು ಉಲ್ಲಂಘಿಸಿ ಮಾಸ್ಕ್ ಧರಿಸದೇ ಜನರು ಗುಂಪಾಗಿ ಸೇರಿದ ಘಟನೆ ನಡೆದಿದೆ. ಈ  ವೇಳೆ  ಸಹಾಯಕ ಆಯುಕ್ತ(ಎಸಿ) ಮದನ್ ಮೋಹನ್ ದೇವಾಲಯದ ಆವರಣದ ಮೇಲೆ ದಾಳಿ ನಡೆಸಿ ನೆರೆದಿದ್ದ ಜನರನ್ನು ವಾಪಸ್ ಕಳುಹಿಸಿದ್ದಾರೆ. ಈ ದೇವಾಲಯವು ಕೊರೊನಾ ಮಾರ್ಗಸೂಚಿಯನ್ನು ಉಲ್ಲಂಘಿಸಿ ದೇವಸ್ಥಾನಕ್ಕೆ ನೂತನ ರಥ ಮತ್ತು ಹೊರೆ ಕಾಣಿಕೆ ಮೆರವಣಿಗೆ ನಡೆಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಮಾಸ್ಕ್ ಧರಿಸದೇ ಅಂತರ ಕಾಯ್ದುಕೊಳ್ಳದೇ […]