Blog Archive

ಅಮೇಠಿ ಮರೆತಿರುವ ರಾಗಾ ಇಲ್ಲಿ ಅಭಿವೃದ್ಧಿ ಬಗ್ಗೆ ಮಾತಾಡ್ತಾರೆ : ಸ್ಮೃತಿ ಇರಾನಿ

Tuesday, May 8th, 2018
smriti-irani

ಮಂಗಳೂರು: ತಾನು ಪ್ರತಿನಿಧಿಸುವ ಅಮೇಠಿ ಕ್ಷೇತ್ರದಲ್ಲೇ ಅಭಿವೃದ್ಧಿ ಮಾಡದ ರಾಹುಲ್‌‌, ಇಲ್ಲಿ ಬಂದು ಅಭಿವೃದ್ಧಿಯ ಭಾಷಣ ಮಾಡುತ್ತಾರೆ ಎಂದು ಕೇಂದ್ರ ಸಚಿವೆ ಸ್ಮೃತಿ ಇರಾನಿ ಟೀಕಿಸಿದ್ದಾರೆ. ಬೆಳ್ತಂಗಡಿಯಲ್ಲಿಂದು ತಮ್ಮ ಅಭ್ಯರ್ಥಿ ಪರ ಪ್ರಚಾರ ನಡೆಸಿದ ಬಳಿಕ ಮಾತನಾಡಿದ ಅವರು, ರಾಹುಲ್ ಗಾಂಧಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ರು. ಗಾಂಧಿ ಕುಟುಂಬ 60 ವರ್ಷಗಳಿಂದ ಅಮೇಠಿ ಕ್ಷೇತ್ರ ಪ್ರತಿನಿಧಿಸುತ್ತಿದೆ. ಆದರೆ, ಅಲ್ಲಿ ಕನಿಷ್ಠ ರೈಲ್ವೆ ಹಳಿಯನ್ನು ತರಲು ಸಾಧ್ಯವಾಗಿಲ್ಲ. ಅಲ್ಲಿನ ಬಡಜನರ ಕಷ್ಟವನ್ನು ನೋಡಲಾಗದು. ನಾಲ್ಕು ತಲೆಮಾರುಗಳಿಂದ ಸಾಧ್ಯವಾಗದ […]

ರಾಹುಲ್ ಗಾಂಧಿ ಟೆಂಪಲ್ ರನ್ ವಿರುದ್ಧ ಸಾಧ್ವಿ ಬಾಲಿಕಾ ಸರಸ್ವತಿ ವಾಗ್ದಾಳಿ

Saturday, April 28th, 2018
rahul-gandhi

ಮಂಗಳೂರು: ರಾಜ್ಯ ವಿಧಾನ ಸಭಾ ಚುನಾವಣೆ ಸಂದರ್ಭದಲ್ಲಿ ಎಸ್.ಡಿ.ಪಿ.ಐ ಪಕ್ಷದೊಂದಿಗೆ ಒಪ್ಪಂದ ಮಾಡಿಕೊಂಡಿರುವ ಕಾಂಗ್ರೆಸ್ ಪಕ್ಷದ ವಿರುದ್ಧ ಸಾಧ್ವಿ ಬಾಲಿಕಾ ಸರಸ್ವತಿ ಪರೋಕ್ಷ ವಾಗ್ದಾಳಿ ನಡೆಸಿದ್ದಾರೆ. ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದೂ ಕಾರ್ಯಕರ್ತರನ್ನು ಹತ್ಯೆ ಮಾಡಿದ ದುಷ್ಟ ಶಕ್ತಿಗಳೊಂದಿಗೆ ರಾಷ್ಟ್ರೀಯ ಪಕ್ಷವೊಂದು ಚುನಾವಣೆಗೋಸ್ಕರ ಒಪ್ಪಂದ ಮಾಡಿಕೊಂಡಿರುವುದು ದುರದೃಷ್ಟಕರ ಈ ಬೆಳವಣಿಗೆ ಮುಂಬರುವ ದಿನಗಳಲ್ಲಿ ಹಿಂದೂಗಳ ಸ್ಥಿತಿ ಏನಾಗಲಿದೆ ಎಂಬುದನ್ನು ಸೂಚಿಸುತ್ತದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು. ಧರ್ಮಸ್ಥಳ ಮಂಜುನಾಥ ಸ್ವಾಮಿಯ ದರ್ಶನ ಪಡೆದ ರಾಹುಲ್ ಗಾಂಧಿ […]

ಮೋದಿ ಬಸವಣ್ಣನ ವಚನ ಪುಸ್ತಕ ಓದಿ, ವಚನಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಲಿ: ರಾಹುಲ್‌ ಗಾಂಧಿ

Friday, April 27th, 2018
speech-rahul

ಮಂಗಳೂರು: ಸಚಿವ ರಮಾನಾಥ ರೈ ಮತಕ್ಷೇತ್ರ ಬಂಟ್ವಾಳದಲ್ಲಿ ನಡೆದ ಕಾಂಗ್ರೆಸ್‌ನ ಬೃಹತ್‌ ಸಮಾವೇಶದಲ್ಲಿ ಎಐಸಿಸಿ ರಾಹುಲ್‌ ಗಾಂಧಿ ಭಾಗವಹಿಸಿ ಬಿಜೆಪಿ ಹಾಗೂ ಮೋದಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಮೋದಿ ಹೋದಲ್ಲೆಲ್ಲಾ ಮನ್ ಕೀ ಬಾತ್ ಹೇಳ್ತಾರೆ. ನಮ್ಮದು ಕರ್ನಾಟಕದ ಜನರ ಮನದ ಮಾತು. ಜನರ ಮನವನ್ನು ನಾವು ಪ್ರಣಾಳಿಕೆಯಲ್ಲಿ ಅಳವಡಿಸಿದ್ದೇವೆ. ಮುಚ್ಚಿದ ಕೋಣೆಯಲ್ಲಿ ನಾವು ಪ್ರಣಾಳಿಕೆ ತಯಾರಿಸಿಲ್ಲ. ಬಸವಣ್ಣನ ವಚನ ನುಡಿದಂತೆ ನಡೆಯನ್ನು ನಾವು ಅನುಸರಿಸಿದ್ದೇವೆ. ರೆಡ್ಡಿ ಬ್ರದರ್ಸ್‌ಗೆ 8 ಟಿಕೆಟ್ ಕೊಟ್ಟಿದ್ದಾರೆ. ರೆಡ್ಡಿ, ಯಡಿಯೂರಪ್ಪ, […]

ಧರ್ಮಸ್ಥಳ ಮಂಜುನಾಥ ಸ್ವಾಮಿಯ ದರ್ಶನ ಪಡೆದ ರಾಹುಲ್ ಗಾಂಧಿ

Friday, April 27th, 2018
veerendra-hegde

ಮಂಗಳೂರು: ಕರಾವಳಿ ಪ್ರವಾಸದಲ್ಲಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಇಂದು ಮಧ್ಯಾಹ್ನ ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ತೆರಳಿ ಮಂಜುನಾಥ ಸ್ವಾಮಿಯ ದರ್ಶನ ಪಡೆದರು. ಬಂಟ್ವಾಳದಿಂದ ಹೆಲಿಕಾಪ್ಟರ್ ನಲ್ಲಿ ಧರ್ಮಸ್ಥಳಕ್ಕೆ ಆಗಮಿಸಿದ ರಾಹುಲ್ ಗಾಂಧಿಯವರನ್ನು ಸಾಂಪ್ರದಾಯಿಕವಾಗಿ ಸ್ವಾಗತಿಸಲಾಯಿತು. ಈ ವೇಳೆ ದೇವಸ್ಥಾನಗಳ ಸಿಬ್ಬಂದಿಯನ್ನು ರಾಹುಲ್ ಗಾಂಧಿ ಗುರುತು ಹಿಡಿದಿದ್ದಾರೆ. ತಮಗೆ ನಿಮ್ಮನ್ನು ನೋಡಿದ ನೆನಪಿದೆ ಎಂದಿದ್ದಾರೆ. ಇದರಿಂದ ಸಿಬ್ಬಂದಿಗಳು ಖುಷಿಯಾಗಿದ್ದಾರೆ. ಮಂಜುನಾಥ ಸ್ವಾಮಿಗೆ ಫಲಕಾಣಿಕೆ ಅರ್ಪಿಸಿದ ರಾಹುಲ್ ಗಾಂಧಿ, ವಿಶೇಷ ಪೂಜೆಯಲ್ಲಿ ಭಾಗಿಯಾದರು. ಈ ಸಂದರ್ಭದಲ್ಲಿ ಮಂಜುನಾಥ ಸ್ವಾಮಿ ಎದುರು […]

ಕಾಂಗ್ರೆಸ್ ಪಕ್ಷದ ಪ್ರಣಾಳಿಕೆ ಇಂದು ಮಂಗಳೂರಿನಲ್ಲಿ ಬಿಡುಗಡೆ

Friday, April 27th, 2018
dakshina-kannada

ಮಂಗಳೂರು: ಮುಂಬರುವ ಚುನಾವಣೆಗೆ ಕಾಂಗ್ರೆಸ್ ಅತೀ ಜತನದಿಂದ ತಯಾರಿಸಿರುವ ಚುನಾವಣಾ ಪ್ರಣಾಳಿಕೆ ಇಂದು ಮಂಗಳೂರಿನಲ್ಲಿ ಬಿಡುಗಡೆಯಾಗಲಿದೆ.ಮಂಗಳೂರಿನ ಟಿ.ಎಂ.ಎ ಪೈ ಕನ್ವೆನ್ಷನ್ ಹಾಲ್ ನಲ್ಲಿ‌ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಕಾಂಗ್ರೆಸ್ ಪ್ರಣಾಳಿಕೆಯನ್ನು‌ ಬಿಡುಗಡೆ ಮಾಡಲಿದ್ದಾರೆ. ಈ ಕುರಿತು ಗುರುವಾರ ಮಂಗಳೂರಿನಲ್ಲಿ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಕಾಂಗ್ರೆಸ್ ನ ಚುನಾವಣಾ ಪ್ರಣಾಳಿಕೆ ರಚನಾ ಸಮಿತಿ ಅಧ್ಯಕ್ಷ ಡಾ.ಎಂ. ವೀರಪ್ಪ ಮೊಯ್ಲಿ, “ಈವರೆಗೆ ರಾಜಕೀಯ ಇತಿಹಾಸದಲ್ಲಿ ಯಾವ ರಾಜಕೀಯ ಪಕ್ಷವೂ ಬಿಡುಗಡೆಗೊಳಿಸದ ರೀತಿಯಲ್ಲಿ ಪ್ರಣಾಳಿಕೆ ಬಿಡುಗಡೆ ಮಾಡುತ್ತಿದ್ದೇವೆ,” ಎಂದು ಹೇಳಿದರು. […]

ರಾಹುಲ್‌ ಗಾಂಧಿ ವಿರುದ್ಧ ಏಕವಚನದಲ್ಲೇ ಯಡಿಯೂರಪ್ಪ ವಾಗ್ದಾಳಿ

Thursday, April 26th, 2018
yedeyorappa

ಶಿವಮೊಗ್ಗ: ಹಿಂದಿನ ಬಿಜೆಪಿ ಸರ್ಕಾರ ಹಾಗೂ ಮೋದಿ ವಿರುದ್ಧ ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಮಾಡಿರುವ ಟ್ವೀಟ್‌ಗೆ ಮಾಜಿ ಸಿಎಂ ಬಿ.ಎಸ್‌.ಯಡಿಯೂರಪ್ಪ ಏಕವಚನದಲ್ಲಿಯೇ ವಾಗ್ದಾಳಿ ನಡೆಸಿದ್ದಾರೆ. ರಾಹುಲ್ ಗಾಂಧಿ ಒಬ್ಬ ತಲೆ ತಿರುಕ. ಮಾತನಾಡುವ ಮುನ್ನಾ ತಾನೇನು ಎಂದು ತಿಳಿದುಕೊಳ್ಳಬೇಕು. ಇನ್ನೊಬ್ಬರ ಬಗ್ಗೆ ಮಾತನಾಡುವಾಗ, ಟೀಕೆ-ಟಿಪ್ಪಣಿ ಮಾಡುವಾಗ ತನ್ನ ಸುತ್ತ ಯಾರು ಇದ್ದಾರೆರೆ ಎಂದು ನೋಡಿಕೊಳ್ಳಬೇಕು ಎಂದು ಖಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ರಾಜ್ಯವನ್ನು ಹಾಳು ಮಾಡಿದಂತಹ ಭ್ರಷ್ಟ ಸಿಎಂರನ್ನು ಇಟ್ಟುಕೊಂಡು ಬೇರೆಯವರ ಮೇಲೆ ಬೊಟ್ಟು ಮಾಡುತ್ತಾರೆ. ಇಂತಹವರಿಗೆ […]

ರಾಹುಲ್ ಗಾಂಧಿಯನ್ನು ಪ್ರಧಾನಿ ಹುದ್ದೆಗೇರಿಸುವುದೇ ಯುವ ಕಾಂಗ್ರೆಸ್ ಗುರಿ: ಮಿಥುನ್ ರೈ

Thursday, April 26th, 2018
youth-leader

ಮಂಗಳೂರು: ದ.ಕ. ಜಿಲ್ಲೆಯ ಎಲ್ಲಾ ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಯುವ ಕಾಂಗ್ರೆಸ್ ಶಕ್ತಿ ಮೀರಿ ಶ್ರಮಿಸಲಿದೆ. ರಾಹುಲ್ ಗಾಂಧಿ ದೇಶದ ಪ್ರಧಾನಿ ಹುದ್ದೆ ಅಲಂಕರಿಸುವಂತೆ ಮಾಡುವುದು ಯುವ ಕಾಂಗ್ರೆಸ್‌ನ ಸಂಕಲ್ಪವಾಗಿದೆ. ಈ ನಿಟ್ಟಿನಲ್ಲಿ ಯುವ ಕಾಂಗ್ರೆಸ್ ಕಾರ್ಯನಿರ್ವಹಿಸಲಿದೆ ಎಂದು ದ.ಕ. ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ ತಿಳಿಸಿದ್ದಾರೆ. ಮಂಗಳೂರಿನಲ್ಲಿ ಇಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಲ್ಕಿ- ಮೂಡುಬಿದಿರೆ ವಿಧಾನಸಭಾ ಕ್ಷೇತ್ರದಲ್ಲಿ ತಾನು ಕಳೆದ ಮೂರು ವರ್ಷಗಳಿಂದ ಪಕ್ಷ […]

ಕಾಂಗ್ರೆಸಿನ ತುಂಡು ರಾಜಕಾರಣಿಗಳಿಂದ ಟಿಕೆಟ್ ಕೈತಪ್ಪಿದೆ: ವಿಜಯ ಕುಮಾರ್ ಶೆಟ್ಟಿ ಆಕ್ರೋಶ

Thursday, April 26th, 2018
vijay-kumar

ಮಂಗಳೂರು : ಮಂಗಳೂರು ಉತ್ತರ ಕ್ಷೇತ್ರದ ಮಾಜಿ ಶಾಸಕ ವಿಜಯಕುಮಾರ್ ಶೆಟ್ಟಿ ಕಾಂಗ್ರೆಸ್ ಗೆ ಬಿಸಿ ಮುಟ್ಟಿಸಿದ್ದಾರೆ. ರಾಹುಲ್ ಗಾಂಧಿ ಮಂಗಳೂರಿಗೆ ಬಂದು ತಮಗೆ ನೀಡಬೇಕಾದ ಸ್ಥಾನಮಾನ ಕುರಿತು ಭರವಸೆ ನೀಡುವವರೆಗೂ ಚುನಾವಣಾ ಪ್ರಚಾರಕ್ಕೆ ತೆರಳುವುದಿಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ. ಮಂಗಳೂರಿನಲ್ಲಿ ಬುಧವಾರ ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಅವರು, 2013 ರ ಚುನಾವಣೆ ಸಂದರ್ಭದಲ್ಲಿ ಪಕ್ಷದ ಕೆಲ ತುಂಡು ರಾಜಕಾರಣಿಗಳಿಂದಾಗಿ ನನಗೆ ಟಿಕೆಟ್ ಕೈ ತಪ್ಪಿತ್ತು. ಆದರೆ ಈ ಬಾರಿಯಾದರೂ ಪಕ್ಷ ಟಿಕೆಟ್ ನೀಡಬಹುದೆಂಬ ಆಶಾಭಾವದಲ್ಲಿದ್ದೆ. ಆದರೆ […]

ಎಪ್ರಿಲ್ 27ರ ರಾಹುಲ್ ಗಾಂಧಿ ಭೇಟಿ ಕುರಿತಂತೆ ಭದ್ರತಾ ದಳ ಸ್ಥಳ ಪರಿಶೀಲನೆ

Wednesday, April 25th, 2018
ಎಪ್ರಿಲ್ 27ರ ರಾಹುಲ್ ಗಾಂಧಿ ಭೇಟಿ ಕುರಿತಂತೆ ಭದ್ರತಾ ದಳ ಸ್ಥಳ ಪರಿಶೀಲನೆ

ಬಂಟ್ವಾಳ: ರಾಹುಲ್ ಗಾಂಧಿ ಭೇಟಿ ಕುರಿತಂತೆ ಭದ್ರತಾದಳ, ಸ್ಥಳ ಪರಿಶೀಲನೆ ನಡೆಸಿತು. ಗರಿಷ್ಠ ಭದ್ರತೆ ಇರುವ ಕಾರಣ ಹಿರಿಯ ಅಧಿಕಾರಿಗಳು ಬಂಟ್ವಾಳ ಕಾಂಗ್ರೆಸ್ ನಾಯಕರೊಂದಿಗೆ ಸ್ಥಳದಲ್ಲಿ ಚರ್ಚೆ ನಡೆಸಿದರು. ಸ್ಥಳದಲ್ಲಿ ಪಾಣೆಮಂಗಳೂರು ಬ್ಲಾಕ್ ಅಧ್ಯಕ್ಷರಾದ ಅಬ್ಬಾಸ್ ಅಲಿ, ಬಿ. ಎಚ್. ಖಾದರ್, ಸಂಜೀವ ಪೂಜಾರಿ ಬೊಳ್ಳಾಯಿ, ಇದಿನಬ್ಬ, ರಾಜಶೇಖರ್ ನಾಯಕ್, ಶಬೀರ್ ಸಿದ್ಧಕಟ್ಟೆ, ಅಶೋಕ್ ಬರಿಮಾರ್ ಉಪಸ್ಥಿತರಿದ್ದರು.

ಎ.27ಕ್ಕೆ ಬಂಟ್ವಾಳದಲ್ಲಿ ರಾಹುಲ್ ಗಾಂಧಿಯಿಂದ ಪ್ರಚಾರ: ರಮಾನಾಥ ರೈ

Tuesday, April 24th, 2018
Ramanath-rai

ಮಂಗಳೂರು: ಚುನಾವಣಾ ಪ್ರಚಾರಕ್ಕೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಎ.27ರಂದು ಬಂಟ್ವಾಳಕ್ಕೆ ಆಗಮಿಸಲಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ, ಬಂಟ್ವಾಳ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬಿ.ರಮಾನಾಥ ರೈ ತಿಳಿಸಿದ್ದಾರೆ. ಮಂಗಳೂರಿನಲ್ಲಿರುವ ಕಾಂಗ್ರೆಸ್ ಪಕ್ಷದ ಜಿಲ್ಲಾ ಕಚೇರಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರೈ, ಎ.27ರಂದು ಬೆಳಗ್ಗೆ ಬಂಟ್ವಾಳಕ್ಕೆ ಆಗಮಿಸಲಿರುವ ರಾಹುಲ್ ಗಾಂಧಿ ಬಿ.ಸಿ.ರೋಡ್ ಸಮೀಪದ ಜೋಡುಮಾರ್ಗ ಉದ್ಯಾನವನದಲ್ಲಿ ನಡೆಯುವ ಬಹಿರಂಗ ಸಭೆಯನ್ನುದ್ದೇಶಿಸಿ ಮಾತನಾಡಲಿದ್ದಾರೆ ಎಂದರು. ಚುನಾವಣಾ ಟಿಕೆಟ್ ಹಂಚಿಕೆಗೆ ಸಂಬಂಧಿಸಿ ದ.ಕ. ಜಿಲ್ಲಾ ಕಾಂಗ್ರೆಸ್ ಪಕ್ಷದಲ್ಲಿ ಯಾವುದೇ […]