Blog Archive

ಧರ್ಮಸ್ಥಳದ ಸೇವಾ ಗಂಗೆ ರಾಷ್ಟ್ರವ್ಯಾಪಿ ಪಸರಿಸಿದೆ : ವಿಶ್ವೇಶತೀರ್ಥ ಸ್ವಾಮೀಜಿ

Friday, March 20th, 2015
Darmasthala

ಧರ್ಮಸ್ಥಳ : ಇಲ್ಲಿಗೆ ಬರುವ ಭಕ್ತರ ಅಭೀಷ್ಟಗಳು ನೆರವೇರುತ್ತವೆ. ಧರ್ಮಸ್ಥಳದಲ್ಲಿ ನಿತ್ಯವೂ ನಡೆಯುವ ಚತುರ್ವಿಧ ದಾನಗಳು ಹಾಗೂ ಸೇವಾ ಕಾರ್ಯಗಳು ಇಂದು ರಾಷ್ಟ್ರವ್ಯಾಪಿ ಪಸರಿಸಿದ್ದು ಸರ್ವರಿಗೂ ಕಲ್ಯಾಣಕಾರಿಯಾಗಿವೆ ಎಂದು ಉಡುಪಿ ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಹೇಳಿದರು. ಧರ್ಮಸ್ಥಳದಲ್ಲಿ ಅಷ್ಟಬಂಧ ಬ್ರಹ್ಮಕಲಶೋತ್ಸವ ಸಂದರ್ಭದಲ್ಲಿ ಬುಧವಾರ ಅಮೃತವರ್ಷಿಣಿ ಸಭಾ ಭವನದಲ್ಲಿ ಏರ್ಪಡಿಸಲಾದ ಧಾರ್ಮಿಕ ಸಭೆಯಲ್ಲಿ ಅವರು ಮಾತನಾಡಿದರು. ಹಿಂದಿನ ಕಾಲದಲ್ಲಿ ನಾಡಿಗೆ ಸೀಮಿತವಾಗಿದ್ದ ಧರ್ಮಸ್ಥಳದ ಸೇವಾಕಾರ್ಯ ವೀರೇಂದ್ರ ಹೆಗ್ಗಡೆಯವರ ದಕ್ಷ ನೇತೃತ್ವದಲ್ಲಿ ಇಂದು ರಾಷ್ಟ್ರವ್ಯಾಪಿಯಾಗಿ ವಿಸ್ತರಿಸಿರುವ ಬಗ್ಗೆ ಅವರು […]

ಸಾಂಸ್ಖೃತಿಕ ಕಾರ್ಯಕ್ರಮಗಳಿಂದ ಉತ್ಸಾಹ ಮೂಡಿಬರುತ್ತದೆ : ಸೊರಕೆ

Thursday, March 12th, 2015
astabandha

ಧರ್ಮಸ್ಥಳ : ಧರ್ಮಸ್ಥಳದಲ್ಲಿ ಅಷ್ಟಬಂಧ ಬ್ರಹ್ಮಕಲಶೋತ್ಸವ ಸಂದರ್ಭದಲ್ಲಿ ಏರ್ಪಡಿಸಲಾದ ಸಾಂಸ್ಖೃತಿಕ ಕಾರ್ಯಕ್ರಮಗಳಿಂದ ಉತ್ಸಾಹ ಮೂಡಿಬರಲಿ ಎಂದು ನಗರಾಭಿವೃದ್ಧಿ ಸಚಿವ ವಿನಯಕುಮಾರ್ ಸೊರಕೆ ಹಾರೈಸಿದರು. ಧರ್ಮಸ್ಥಳದಲ್ಲಿ ಅಷ್ಟಬಂಧ ಬ್ರಹ್ಮಕಲಶೋತ್ಸವ ಸಂದರ್ಭದಲ್ಲಿ ಗುರುವಾರ ಆಯೋಜಿಸಲಾದ ಸಾಂಸ್ಖೃತಿಕ ಕಾರ್ಯಕ್ರಮಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು. ಧರ್ಮಸ್ಥಳದಲ್ಲಿ ದಾನ-ಧರ್ಮದ ವಿಶ್ವರೂಪ ದರ್ಶನವಾಗುತ್ತದೆ. ದೇವರಲ್ಲಿ ದೃಢ ಭಕ್ತಿ, ಶ್ರದ್ಧೆ-ನಂಬಿಕೆಯಿಂದ ಪವಾಡ ಸದೃಶ ಕಾರ್ಯಗಳನ್ನು ಯಶಸ್ವಿಯಾಗಿ ಮಾಡಬಹುದು ಎಂಬುದಕ್ಕೆ ಧರ್ಮಸ್ಥಳವೇ ಸಾಕ್ಷಿಯಾಗಿದೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು. ಅಜ್ಞಾನದ ಅಂಧಕಾರವನ್ನು ತೊಲಗಿಸಿ ಸುಜ್ಞಾನದ ಸುಗಂಧವನ್ನು ಪಸರಿಸಿ ಆರೋಗ್ಯಪೂರ್ಣ […]

ಧರ್ಮಸ್ಥಳದ ವತಿಯಿಂದ ಲೋಕ ಕಲ್ಯಾಣಕ್ಕಾಗಿ ಹಲವು ಹೊಸ ಯೋಜನೆಗಳು

Friday, October 24th, 2014
pattabhisheka

ಧರ್ಮಸ್ಥಳ : ಬೆಂಗಳೂರಿನಲ್ಲಿ 350 ಹಾಸಿಗೆ ಸಾಮಥ್ರ್ಯದ ಆಯುರ್ವೇದ ಆಸ್ಪತ್ರೆ ಪ್ರಾರಂಭಗೊಂಡಿದ್ದು ಮುಂದಿನ ವರ್ಷ ಪೂರ್ಣ ಪ್ರಮಾಣದ ಆಯುರ್ವೇದ ಆಸ್ಪತ್ರೆ ಮತ್ತು ಕಾಲೇಜು ಸೇವೆಗೆ ಸಜ್ಜಾಗಲಿವೆ. ಧರ್ಮಸ್ಥಳದಲ್ಲಿ ಯಾತ್ರಿಕರ ಅನುಕೂಲಕ್ಕಾಗಿ 520 ಕೊಠಡಿಗಳುಳ್ಳ ಹೊಸ ವಸತಿ ಛತ್ರ ನಿರ್ಮಾಣದ ಕಾಮಗಾರಿ ಈಗಾಗಲೇ ಪ್ರಾರಂಭಿಸಲಾಗಿದೆ. ಧಾರವಾಡದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಪ್ರಾರಂಭಗೊಂಡಿದೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಪ್ರಕಟಿಸಿದರು. ಧರ್ಮಸ್ಥಳದಲ್ಲಿ ಮಹೋತ್ಸವ ಸಭಾ ಭವನದಲ್ಲಿ ಶುಕ್ರವಾರ ನಡೆದ ಪಟ್ಟಾಭಿಷೇಕದ 47ನೇ ವರ್ಧಂತ್ಯತ್ಸವ ಸಮಾರಂಭದಲ್ಲಿ ಅವರು […]

ಅನಂತಮೂರ್ತಿಯವರ ನಿಧನಕ್ಕೆ ವೀರೇಂದ್ರ ಹೆಗ್ಗಡೆ ಸಂತಾಪ

Saturday, August 23rd, 2014
Veerendra Heggade

ಧರ್ಮಸ್ಥಳ : ಖ್ಯಾತ ಸಾಹಿತಿ ಶ್ರೀ ಯು. ಆರ್. ಅನಂತಮೂರ್ತಿಯವರ ನಿಧನಕ್ಕೆ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಗಾಢ ಸಂತಾಪ ವ್ಯಕ್ತ ಪಡಿಸಿದ್ದಾರೆ. ಅವರು ಕ್ಷೇತ್ರದ ಅಭಿಮಾನಿಯಾಗಿದ್ದು ಲಕ್ಷದೀಪೋತ್ಸವ ಸಂದರ್ಭದಲ್ಲಿ ನಡೆದ ಸಾಹಿತ್ಯ ಸಮ್ಮೇಳನ ಹಾಗೂ 51 ನೇ ರಾಜ್ಯಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸಿದ್ದರು. ಧರ್ಮ, ಸಾಹಿತ್ಯ ಹಾಗೂ ಇತರ ಸಾಮಾಜಿಕ ವಿಚಾರಗಳ ಬಗ್ಗೆ ಅವರು ನೇರವಾಗಿ ಹಾಗೂ ಅಷ್ಟೇ ಖಾರವಾಗಿ ತಮ್ಮ ಅಭಿಪ್ರಾಯವನ್ನು ಸಾದರ ಪಡಿಸುತ್ತಿದ್ದರು. ಧರ್ಮಸ್ಥಳದ ವಿವಿಧ ಸೇವಾಕಾರ್ಯಗಳ ಬಗ್ಗೆ […]

ಇಂದಿನಿಂದ ಡಾ. ಡಿ. ವೀರೇಂದ್ರ ಹೆಗ್ಗಡೆ ಜರ್ಮನಿ ಪ್ರವಾಸ

Thursday, July 17th, 2014
Veerendra Hegde Family

ಬೆಳ್ತಂಗಡಿ: ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಕುಟುಂಬ ಸಮೇತರಾಗಿ ಶುಕ್ರವಾರದಿಂದ ಹತ್ತು ದಿನಗಳ ಕಾಲ ಜರ್ಮನಿ ದೇಶದ ಪ್ರವಾಸ ಮಾಡುವರು. ಪ್ರಾಂಕ್ ಫರ್ಟ್ ದಲ್ಲಿ ಪೂಜ್ಯ ರವಿಶಂಕರ ಗುರೂಜಿಯವರ ಆಶ್ರಮದಲ್ಲಿ ಕೆಲವು ದಿನ ಸತ್ಸಂಗದಲ್ಲಿ ಅವರು ಭಾಗವಹಿಸುವರು. ಬಳಿಕ ಜರ್ಮನಿಯ ಪ್ರೇಕ್ಷಣೀಯ ಸ್ಥಳಗಳಿಗೆ ಭೇಟಿ ನೀಡುವರು. ಜು. 30 ರಂದು ವಿದೇಶ ಪ್ರವಾಸದಿಂದ ಡಾ. ಹೆಗ್ಗಡೆಯವರು ಧರ್ಮಸ್ಥಳಕ್ಕೆ ಆಗಮಿಸಲಿದ್ದಾರೆ ಎಂದು ದೇವಸ್ಥಾನದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಧರ್ಮಸ್ಥಳದಲ್ಲಿ ಪುರಾಣ ವಾಚನ-ಪ್ರವಚನ ಪ್ರಾರಂಭ

Thursday, July 17th, 2014
Dharmasthala

ಬೆಳ್ತಂಗಡಿ: ಧರ್ಮಸ್ಥಳದಲ್ಲಿ ಬುಧವಾರದಿಂದ ಎರಡು ತಿಂಗಳ ಕಾಲ ನಡೆಯಲಿರುವ ಪುರಾಣ ವಾಚನ-ಪ್ರವಚನ ಎಂಬ ಸತ್ಸಂಗ ಕಾರ್ಯಕ್ರಮಕ್ಕೆ ವಾಚನ-ಪ್ರವಚನಕಾರರು, ಕ್ಷೇತ್ರದ ಭಕ್ತಾದಿಗಳ ಸಮ್ಮುಖದಲ್ಲಿ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಜ್ಯೋತಿ ಬೆಳಗಿಸಿ ಚಾಲನೆ ನೀಡಿದರು. ಮಂಗಳೂರಿನ ಉದ್ಯಮಿ ರಾಜವರ್ಮ ಬಳ್ಳಾಲ್ ಉಪಸ್ಥಿತರಿದ್ದರು. ಪ್ರತಿದಿನ ಸಂಜೆ ಗಂಟೆ 6.30 ರಿಂದ 8 ರ ವರೆಗೆ ದೇವಸ್ಥಾನದ ಎದುರುಗಡೆ ಇರುವ ಪ್ರವಚನ ಮಂಟಪದಲ್ಲಿ ಶ್ರೀ ಕುಮಾರ ವ್ಯಾಸ ವಿರಚಿತ ಕರ್ಣಾಟ ಭಾರತ ಮಂಜರಿ ಯ ವಾಚನ – ಪ್ರವಚನ ನಡೆಯಲಿದೆ. […]

ಧರ್ಮಸ್ಥಳ ಸುತ್ತಮುತ್ತ ನಡೆದ ಎಲ್ಲಾ ಅಸಹಜ ಸಾವುಗಳನ್ನು ಸಿಬಿಐಗೆ ಒಪ್ಪಿಸಲು ಮನವಿ: ಎಸ್‍ಎಫ್‍ಐ

Friday, November 8th, 2013
SFI

ಮಂಗಳೂರು : ಸೌಜನ್ಯ ಅತ್ಯಾಚಾರ ಪ್ರಕರಣವನ್ನು ಸುಪ್ರೀಂಕೋರ್ಟ್ ಮೇಲ್ವಿಚಾರಣೆಯಲ್ಲಿ ಸಿಬಿಐಗೆ ವಹಿಸಲು ಮತ್ತು ಧರ್ಮಸ್ಥಳ ಸುತ್ತಮುತ್ತ ನಡೆದ ಅಸಹಜ ಸಾವು ಗಳನ್ನು ಸಿಬಿಐಗೆ ಒಪ್ಪಿಸಲು ಆಗ್ರಹಿಸಿ ನ. 7 ಗುರುವಾರ ಜಿಲ್ಲಾಧಿಕಾರಿ ಕಚೇರಿಯ ಮುಂಭಾಗದಲ್ಲಿ  ಪ್ರತಿಭಟನೆ ನಡೆಯಿತು. ಭಾರತೀಯ ವಿದ್ಯಾರ್ಥಿ ಫೆಡರೇಶನ್ (ಎಸ್‍ಎಫ್‍ಐ)ನ ಕಾರ್ಯದರ್ಶಿ ಜೀವನ್‍ರಾಜ್ ಕುತ್ತಾರ್  ಮಾತನಾಡಿ , ಬೆಳ್ತಂಗಡಿ ತಾಲೂಕಿನ ಉಜಿರೆಯಲ್ಲಿ ಈವರೆಗೆ ನಡೆದ ಬಹುತೇಕ ಕೊಲೆ ಮತ್ತು ಅತ್ಯಾಚಾರಗಳು ದ್ವೇಷದಿಂದ ನಡೆದದ್ದು. ಇಲ್ಲಿ ಜನರ ಆಸ್ತಿ ಲಪಟಾಯಿಸುವ ಉದ್ದೇಶ ಪ್ರಮುಖವಾಗಿತ್ತು ಎಂದು ಹೇಳಿದರು. […]

ಟೀಕೆಗಳಿಂದ ಆತ್ಮಾಭಿಮಾನಕ್ಕೆ ಕೊರತೆಯಾಗಿಲ್ಲ, ಇನ್ನಷ್ಟು ಯೋಜನೆಗಳು ಜಾರಿ : ಡಾ| ಹೆಗ್ಗಡೆ

Thursday, October 17th, 2013
Veerendra Hegde

ಬೆಳ್ತಂಗಡಿ: ದುರುದ್ದೇಶ ಪೂರ್ವಕ ಟೀಕೆಗಳಿಗೆ ಕಿವಿಕೊಡದೆ ನನ್ನ ಮುಂದಿನ ಸೇವಾ ಕಾರ್ಯಗಳನ್ನು ಎಂದಿಗೂ ನಿಲ್ಲಿಸುವುದಿಲ್ಲ. ಮುಂದೆ ಬಡ ಜನರ ಸೇವೆಗಾಗಿ ಇನ್ನಷ್ಟು ಯೋಜನೆಗಳನ್ನು ಹಮ್ಮಿಕೊಳ್ಳ್ಳುತ್ತೇನೆ. ಟೀಕೆಯಿಂದ ನೊವಾಗಿದೆ. ಆದರೆ ನನ್ನಲ್ಲಿ ಆತ್ಮವಿಶ್ವಾಸ, ಆತ್ಮಾಭಿಮಾನದ ಕೊರತೆ ಆಗಿಲ್ಲ. ಸೌಜನ್ಯಾ ಪ್ರಕರಣದ ತನಿಖೆಯ ಬಗ್ಗೆ ಸಂಪೂರ್ಣ ಜವಾಬ್ದಾರಿ ಸರಕಾರ ಹಾಗೂ ಬೆಳ್ತಂಗಡಿ ಶಾಸಕರದ್ದು. ನಾನು ಇನ್ನು ಈ ಬಗ್ಗೆ ಯಾವುದೇ ಹೇಳಿಕೆಗಳನ್ನು ನೀಡುವುದಿಲ್ಲ ಎಂದು ಧರ್ಮಸ್ಥಳ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಹೇಳಿದರು. ಅವರು ಬುಧವಾರ ಸಂಜೆ ಉಜಿರೆಯ ಶ್ರೀ ರತ್ನವರ್ಮ […]

ಸೌಜನ್ಯಾ ಪ್ರಕರಣವನ್ನು ಹಿಡಿದು ಬೆಳ್ತಂಗಡಿ ತಾಲೂಕಿನ ಕೆಲವರು ಧರ್ಮಸ್ಥಳ ದೇವಾಲಯದ ಚಾರಿತ್ರ್ಯ ಹನನ ಮಾಡುತ್ತಿದ್ದಾರೆ

Wednesday, October 16th, 2013
Veerendra Hegde

ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನ ಕೆಲವರು ಸೇರಿಕೊಂಡು 2012 ರಲ್ಲಿ ನಡೆದ ಸೌಜನ್ಯಾ ಕೊಲೆ ಪ್ರಕರಣವನ್ನು ಟಿ.ವಿ. ಮಾಧ್ಯಮದಲ್ಲಿ ಹೇಳಿಕೊಂಡು ಭಾರತದ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಶ್ರೀ ಕ್ಷೇತ್ರ ಧರ್ಮಸ್ಥಳ ದೇವಾಲಯ ಮತ್ತು ಧರ್ಮಾಧಿಕಾರಿಯಾದ ನಮ್ಮ ಮೇಲೆ ಆರೋಪ ಹೊರಿಸುವ ಪ್ರಯತ್ನ ಮಾಡಿದ್ದಾರೆ. ಸೌಜನ್ಯಾ ಪ್ರಕರಣದಲ್ಲಿ ನಮ್ಮ ಕುಟುಂಬದ ಯಾರದ್ದೂ ಕೈವಾಡವಿಲ್ಲ. ನಾವು ಯಾವುದೇ ಆರೋಪಿಗಳನ್ನು ರಕ್ಷಿಸಿಲ್ಲ. ಯಾರೇ ಆರೋಪಿಗಳಿದ್ದರೂ ಅವರನ್ನು ತತ್‌ಕ್ಷಣ ಬಂಧಿಸಲು ನಮ್ಮ ಅಡ್ಡಿಯಿಲ್ಲ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಸ್ಪಷ್ಟಪಡಿಸಿದ್ದಾರೆ. […]