ಶರತ್ ಮಡಿವಾಳರ ಸ್ಮಾರಕವನ್ನು ಆರ್.ಎಸ್.ಎಸ್ ಮುಖಂಡ ಡಾ.ಪ್ರಭಾಕರ್ ಭಟ್ ಅವರಿಂದ ಲೋಕಾರ್ಪಣೆ!

Saturday, July 7th, 2018
sharath-madival

ಬಂಟ್ವಾಳ: ಕಳೆದ ವರ್ಷ ಮತಾಂಧರಿಂದ ಹತ್ಯೆಗೀಡಾದ ಸ್ವಯಂಸೇವಕ ದಿ.ಶರತ್ ಮಡಿವಾಳರ ಬಲಿದಾನ ದಿನದಂದು ಸಜಿಪಮುನ್ನೂರಿನ ಕಂದೂರಿನಲ್ಲಿ ಶರತ್ ಮಡಿವಾಳರ ಸ್ಮಾರಕವನ್ನು ಆರ್.ಎಸ್.ಎಸ್ ಹಿರಿಯರಾದ ಡಾ.ಪ್ರಭಾಕರ್ ಭಟ್ ಕಲ್ಲಡ್ಕ ಜೂನ್ 7 ಶನಿವಾರ  ಲೋಕಾರ್ಪಣೆಗೈದರು. ಈ ಸಂದರ್ಭದಲ್ಲಿ ವಿಶ್ವ ಹಿಂದು ಪರಿಷತ್ ಮಂಗಳೂರು ವಿಭಾಗ  ಕಾರ್ಯದರ್ಶಿ ಶರಣ್ ಪಂಪುವೆಲ್ , ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರು ಉಪಸ್ಥಿತರಿದ್ದರು.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಿಜೆಪಿಯವರು ಅಪಪ್ರಚಾರ ಮಾಡಿದ್ದರಿಂದ ಕಾಂಗ್ರೆಸ್ ‌ಪಕ್ಷಕ್ಕೆ ಸೋಲಾಗಿದೆ: ರಮನಾಥ ರೈ

Thursday, June 14th, 2018
ramanath-rai

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಿಜೆಪಿಯವರು ಅಪಪ್ರಚಾರ ಮಾಡಿದ್ದರಿಂದ ಕಾಂಗ್ರೆಸ್ ‌ಪಕ್ಷಕ್ಕೆ ಸೋಲಾಗಿದೆ ಎಂದು ಮಂಗಳೂರಿನಲ್ಲಿ ಮಾಜಿ ಸಚಿವ ರಮನಾಥ ರೈ ಹೇಳಿಕೆ ನೀಡಿದ್ದಾರೆ. ಮಂಗಳೂರಿನಲ್ಲಿ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ರಮನಾಥ ರೈ ಅವರು ಚುನಾವಣೆ ನಂತರವೂ ಬಿಜೆಪಿ ನನ್ನ ವಿರುದ್ಧ ನಿರಂತರ ಅಪಪ್ರಚಾರ ದಲ್ಲಿ ನಿರತವಾಗಿದೆ.ಕಲ್ಲಡ್ಕ ಶಾಲೆಗೆ ಕೊಲ್ಲೂರು ದೇವಾಲಯದ ಹುಂಡಿಯ ಹಣ ಹೋಗುವುದನ್ನು ‌ನಿಲ್ಲಿಸಿ ಶಿಕ್ಷಣ ಇಲಾಖೆಯ ಬಿಸಿಯೂಟ ವ್ಯವಸ್ಥೆ ಮಾಡುತ್ತೇವೆ ಎಂದೆವು.ಆದರೆ ಅದನ್ನು ತೆಗೆದುಕೊಳ್ಳದೆ ನಮ್ಮ ಮೇಲೆ ಅಪಪ್ರಚಾರ ಮಾಡಲಾಯಿತು; ಇದೀಗ ಶಿಕ್ಷಣ ‌ಇಲಾಖೆಯ […]

ಮರಳು ಮಾಫಿಯಾ ವಿರುದ್ಧ ಕ್ರಮಕ್ಕೆ ವರ್ಗಾವಣೆ ಭಾಗ್ಯವೇ?.. ದ.ಕ ಜಿಲ್ಲೆಯ ಪ್ರಜ್ಞಾವಂತರ ಆಕ್ರೋಶ!

Monday, January 22nd, 2018
sp-belthangady

ಮಂಗಳೂರು: ಜನವರಿ 12ರಂದು ಗೃಹಸಚಿವ ರಾಮಲಿಂಗಾರೆಡ್ಡಿ ಮಂಗಳೂರಿಗೆ ಭೇಟಿ ನೀಡಿದ್ದಾಗ ಪತ್ರಕರ್ತರು, `ಎಸ್ಪಿ ಸುಧೀರ್ ಕುಮಾರ್ ರೆಡ್ಡಿಯವರ ವರ್ಗಾವಣೆ ಇದೆಯೇ’ ಎಂದು ಕೇಳಿದ್ದರು. ಇಂತಹ ಪ್ರಸ್ತಾಪ ಸರ್ಕಾರದ ಮುಂದಿಲ್ಲ ಎಂದಿದ್ದರು ಸಚಿವರು. ಆದರೆ ಒಂದು ವಾರದಲ್ಲೇ ಎಸ್ಪಿ ವರ್ಗಾವಣೆಗೊಂಡಿದ್ದಾರೆ. ಈ ವರ್ಗಾವಣೆ ಹಿಂದೆ ಮರಳು ಮಾಫಿಯಾ ಕೈವಾಡವಿದೆ ಎಂಬ ಮಾತುಗಳು ಇದೀಗ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ. ಭೂಷಣ್ ಗುಲಾಬ್ ರಾವ್ ಬೊರಸೆ ಬಳಿಕ ಜಿಲ್ಲಾ ಎಸ್ಪಿಯಾಗಿ ಬಂದವರು ಸುಧೀರ್ ರೆಡ್ಡಿ. ಈ ಸಂದರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ […]

ಮಂಗಳೂರು ಜೈಲಿನಲ್ಲಿ ಗುಂಪು ಘರ್ಷಣೆ: 6 ಪೊಲೀಸ್, 10 ಕೈದಿಗಳಿಗೆ ಗಾಯ

Tuesday, January 9th, 2018
police

ಮಂಗಳೂರು: ಮಂಗಳೂರು ಜೈಲಿನಲ್ಲಿ ವಿಚಾರಣಾಧೀನ ಕೈದಿಗಳ ಗುಂಪಿನ ನಡುವೆ ಸೋಮವಾರ ಸಂಜೆ ಮಾರಾಮಾರಿ ನಡೆದಿದೆ. ಘಟನೆಯಲ್ಲಿ ಓರ್ವ ಕಾರಾಗೃಹ ಸಿಬ್ಬಂದಿ ಸೇರಿದಂತೆ 5 ಮಂದಿ ಪೊಲೀಸರು ಹಾಗೂ 10 ಕ್ಕೂ ಹೆಚ್ಚು ವಿಚಾರಣಾಧೀನ ಕೈದಿಗಳಿಗೆ ಗಾಯಗಳಾಗಿವೆ. ಜೈಲಿನ ಎ ಮತ್ತು ಬಿ ಬ್ಯಾರೆಕ್ ನ ಕೈದಿಗಳನ್ನು ಇಂದು ವಿಸಿಟಿಂಗ್ ಹಾಗೂ ಟೀ ಬ್ರೇಕ್ ಗೆ ಬಿಡಲಾಗಿತ್ತು . ಈ ಸಂದರ್ಭದಲ್ಲಿ ಕಲ್ಲಡ್ಕದ ಚೂರಿ ಇರಿತ ಪ್ರಕರಣದ ಆರೋಪಿ ಮಿಥುನ್ ಹಾಗೂ ಶರತ್ ಮಡಿವಾಳ ಪ್ರಕರಣದ ಆರೋಪಿ ಸಾದಿಕ್ […]

ಆಶ್ರಫ್, ಶರತ್ ಕುಟುಂಬಕ್ಕೆ ತಲಾ 5 ಲಕ್ಷ ರೂ

Thursday, December 14th, 2017
u-t-kader

ಮಂಗಳೂರು: ಬಂಟ್ವಾಳ ತಾಲೂಕಿನಲ್ಲಿ ಕೆಲವು ತಿಂಗಳ ಹಿಂದೆ ಕೊಲೆಯಾಗಿರುವ ಮುಹಮ್ಮದ್ ಅಶ್ರಫ್ ಮತ್ತು ಶರತ್ ಮಡಿವಾಳ ಕುಟುಂಬಕ್ಕೆ ರಾಜ್ಯ ಸರಕಾರ ತಲಾ ಐದು ಲಕ್ಷ ರೂ. ಪರಿಹಾರ ಬಿಡುಗಡೆ ಮಾಡಿದೆ ಎಂದು ಆಹಾರ ಮತ್ತು ನಾಗರಿಕ‌ ಸರಬರಾಜು ಸಚಿವ ಯು.ಟಿ.ಖಾದರ್ ಹೇಳಿದರು. ಪರಿಹಾರದ ಮೊತ್ತವನ್ನು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಅವರ ಮೂಲಕ ಎರಡೂ ಕುಟುಂಬಗಳಿಗೆ ವಿತರಿಸಲಾಗುವುದು ಎಂದು ಅವರು ತಿಳಿಸಿದರು. ಬಂಟ್ವಾಳದಲ್ಲಿ ಇಬ್ಬರು ಅಮಾಯಕರ ಹತ್ಯೆ ನಡೆದಾಗ ಪರಿಹಾರ ಕೊಡಿಸುತ್ತೇನೆ ಎಂದು ಹೇಳಿದ್ದೆ. ಸರಕಾರದ […]

ಶರತ್‌ ಹತ್ಯೆ ಆರೋಪಿಗಳ ಪತ್ತೆ ಹಚ್ಚಿದ ಪೊಲೀಸರಿಗೆ ಬಹುಮಾನ

Monday, December 11th, 2017
sharath-madiwal

ಬಂಟ್ವಾಳ: ಆರ್‌ಎಸ್‌ಎಸ್‌ ಕಾರ್ಯಕರ್ತ ಶರತ್‌ ಹತ್ಯಾ ಪ್ರಕರಣವನ್ನು ಭೇದಿಸಿದ ವಿಶೇಷ ಪೊಲೀಸ್‌ ತಂಡಕ್ಕೆ 2.80 ಲಕ್ಷ ರೂ. ನಗದು ಬಹುಮಾನವನ್ನು ರಾಜ್ಯ ಪೊಲೀಸ್‌ ಡಿಜಿ ನೀಲಮಣಿ ಘೋಷಿಸಿದ್ದಾರೆ. ದ.ಕ. ಜಿಲ್ಲಾ ಅಪರಾಧ ಪತ್ತೆ ದಳದ ಇನ್ಸ್‌ಪೆಕ್ಟರ್‌ ಅಮನುಲ್ಲಾ, ಸಿಸಿಬಿ ಇನ್ಸ್‌ಪೆಕ್ಟರ್‌ ಸುನಿಲ್‌ ಕುಮಾರ್‌ ಸಹಿತ ಒಟ್ಟು ನಾಲ್ವರು ಇನ್ಸ್‌ಪೆಕ್ಟರ್‌ಗಳು, ಸಬ್‌ ಇನ್ಸ್‌ಪೆಕ್ಟರ್‌ಗಳು ಹಾಗೂ ಸಿಬ್ಬಂದಿ ಸೇರಿ 54 ಮಂದಿಗೆ ಈ ನಗದು ಬಹುಮಾನ ಹಂಚಿಕೆ ಮಾಡಲಾಗಿದೆ. ಶರತ್‌ ಮಡಿವಾಳ ಹತ್ಯಾ ಪ್ರಕರಣವನ್ನು ಭೇದಿಸುವ ಮೂಲಕ ಉತ್ತಮವಾಗಿ ಕಾರ್ಯನಿರ್ವಹಿಸಿರುವ […]

‘ಕಲಾಯಿ ಅಶ್ರಫ್’ ಹತ್ಯೆಗೆ ಪ್ರತೀಕಾರವಾಗಿ ಶರತ್ ಮಡಿವಾಳರವರನ್ನು ಹತ್ಯೆ, ಇಬ್ಬರು ಆರೋಪಿಗಳ ಬಂಧನ

Tuesday, August 15th, 2017
IGP Harishekaran

ಮಂಗಳೂರು  : ಆರ್‌ಎಸ್ಎಸ್ ಕಾರ್ಯಕರ್ತ ಶರತ್ ಮಡಿವಾಳ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹತ್ಯೆಯಾದ 43 ದಿನಗಳ ಬಳಿಕ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ಸಜಿಪ ಮುನ್ನೂರು ಗ್ರಾಮದ ಹಾಲಾಡಿ ನಿವಾಸಿ  ಅಬ್ದುಲ್ ಶಾಫಿ (36), ಚಾಮರಾಜ ನಗರದ ಗಾಳಿಪುರ ಗ್ರಾಮದ ಖಲೀಲುಲ್ಲಾ (30) ಎಂದು ಗುರುತಿಸಲಾಗಿದೆ. ಸಜಿಪಮೂಡ ಗ್ರಾಮದ ಕಂದೂರು ನಿವಾಸಿಯಾಗಿದ್ದ ಶರತ್ ಮಡಿವಾಳ ಮೇಲೆ ಜು.4ರಂದು ಮಾರಣಾಂತಿಕ ದಾಳಿ ನಡೆದಿತ್ತು. ಅಂದು ರಾತ್ರಿ ಸುಮಾರು 10 ಗಂಟೆ ಹೊತ್ತಿಗೆ ಬಿ.ಸಿ.ರೋಡ್‌‌ನಲ್ಲಿರುವ ಉದಯ ಲಾಂಡ್ರಿಯಲ್ಲಿದ್ದ ವೇಳೆ […]

ಶರತ್ ಮಡಿವಾಳ ಅವರ ಮನೆಗೆ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಭೇಟಿ

Wednesday, July 12th, 2017
Ramanath Rai

ಮಂಗಳೂರು : ಶರತ್ ಮಡಿವಾಳ ಅವರ ಮನೆಗೆ ಒಂಬತ್ತು ದಿನಗಳ ಬಳಿಕ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಭೇಟಿ ನೀಡಿದರು. ಸಜಿಪ ಗ್ರಾಮದಲ್ಲಿರುವ ಶರತ್ ಅವರ ಮನೆಗೆ ಭೇಟಿ ಬುಧವಾರ ಬೆಳಗ್ಗೆ ನೀಡಿದ ಸಚಿವರು ಶರತ್ ತಂದೆ ತನಿಯಪ್ಪರಿಗೆ ಸಾಂತ್ವಾನ ಹೇಳಿದರು. ಮಾಧ್ಯಮದವರನ್ನು ಹೊರಗಿಟ್ಟು ಶರತ್ ಅವರ ಮನೆಗೆ ತೆರಳಿದ ಸಚಿವರು ಕೊಲೆ ಆರೋಪಿಗಳನ್ನು ಶೀಘ್ರ ಬಂಧಿಸುವ ಭರವಸೆ ನೀಡಿದ್ದರೆನ್ನಲಾಗಿದೆ. ಸಚಿವರು ಭೇಟಿ ನೀಡದಿರುವ ಬಗ್ಗೆ ತನಿಯಪ್ಪ ಅವರು ನಿನ್ನೆ ಮಾಧ್ಯಮದೆದುರು ಬೇಸರ ವ್ಯಕ್ತಪಡಿಸಿದ್ದರು.  

ಸಾವಿರಾರು ಕಾರ್ಯಕರ್ತರ ಸಮ್ಮುಖದಲ್ಲಿ ಶರತ್ ಮಡಿವಾಳ ಅಂತಿಮ ಸಂಸ್ಕಾರ

Saturday, July 8th, 2017
Sarath madivala

ಬಂಟ್ವಾಳ : ಬಿಸಿ ರೋಡ್ ನಲ್ಲಿ ಜುಲೈ 4 ಮಂಗಳವಾರ ದುಷ್ಕರ್ಮಿಗಳಿಂದ ಮಾರಣಾಂತಿಕ ಹಲ್ಲೆಗೊಳಗಾಗಿ ಶುಕ್ರವಾರ ರಾತ್ರಿ ಮೃತಪಟ್ಟ ಶರತ್ ಮಡಿವಾಳರ ಮೃತದೇಹ ಆಸ್ಪತ್ರೆಯಿಂದ ಮೆರವಣಿಗೆಯ ಮೂಲಕ ಸಾಗಿ ಅವರ ಸ್ವಗ್ರಾಮವಾದ ಬಂಟ್ವಾಳ ತಾಲೂಕಿನ ಸಜಿಪ ಮುನ್ನೂರಿಗೆ ತಲುಪಿದ್ದು, ಮಧ್ಯಾಹ್ನ ವೇಳೆ ಶರತ್ ಅವರ ಅಂತಿಮ ಸಂಸ್ಕಾರ ನೆರವೇರಿಸಲಾಯಿತು. ಇಂದು ಮಧ್ಯಾಹ್ನದ ವೇಳೆಗೆ ಶರತ್ ಸ್ವಗ್ರಾಮಕ್ಕೆ ತಲುಪಿದ ಮೃತದೇಹವನ್ನು ಧಾರ್ಮಿಕ ವಿಧಿವಿಧಾನದಂತೆ ಅಂತ್ಯಸಂಸ್ಕಾರ ನಡೆಸಲಾಯಿತು. ಈ ಸಂದರ್ಭದಲ್ಲಿ ಸಂಘಪರಿವಾರದ ಮುಖಂಡರು ಸೇರಿದಂತೆ ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿದ ಜನರು […]

ದುಷ್ಕರ್ಮಿಗಳಿಂದ ಹಲ್ಲೆಗೊಳಗಾಗಿದ್ದ ಆರೆಸ್ಸೆಸ್ ಕಾರ್ಯಕರ್ತ ಮೃತ್ಯು

Friday, July 7th, 2017
sharath

ಮಂಗಳೂರು : ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯಕರ್ತ ಶರತ್ ಮಡಿವಾಳ (28)  ನಗರದ ಎ.ಜೆ. ಆಸ್ಪತ್ರೆಯಲ್ಲಿ  ಚಿಕಿತ್ಸೆ ಫಲಕಾರಿಯಾಗದೆ ಶುಕ್ರವಾರ ಮೃತಪಟ್ಟಿದ್ದಾರೆ. ಶರತ್ ಜುಲೈ 4 ರಂದು  ಬಿ.ಸಿ.ರೋಡ್‌ನಲ್ಲಿ ದುಷ್ಕರ್ಮಿಗಳಿಂದ ಮಾರಣಾಂತಿಕ ಹಲ್ಲೆಗೊಳಗಾಗಿದ್ದರು. ಶರತ್ ಬಿ.ಸಿ.ರೋಡ್‌ನ ತನ್ನ  ಲಾಂಡ್ರಿಯಲ್ಲಿದ್ದ ಸಂದರ್ಭ ದ್ವಿಚಕ್ರ ವಾಹನದಲ್ಲಿ ಆಗಮಿಸಿದ ಅಪರಿಚಿತರ ತಂಡವೊಂದು ಅಂಗಡಿಗೆ ನುಗ್ಗಿ ಶರತ್ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿತ್ತು. ರಕ್ತದ ಮಡುವಿನಲ್ಲಿ ಬಿದ್ದಿದ್ದ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದರೂ, ಅನಂತರ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ಎ.ಜೆ.ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮೃತರ ಅಂತಿಮ […]