ವಸತಿ ರಹಿತ ಬಡಕುಟುಂಬಗಳಿಗೆ ಮನೆ ನಿರ್ಮಿಸಲು ಸಹಾಯಧನ

Thursday, December 7th, 2023
ವಸತಿ ರಹಿತ ಬಡಕುಟುಂಬಗಳಿಗೆ ಮನೆ ನಿರ್ಮಿಸಲು ಸಹಾಯಧನ

ಮಂಗಳೂರು : ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ವಾಸ್ತವ್ಯವಿರುವ ಸ್ವಂತ ಜಾಗ ಹೊಂದಿರುವ ವಸತಿ ರಹಿತ ಅರ್ಹ ಮಹಿಳಾ ಫಲಾನುಭವಿಗಳಿಗೆ 700 ಚದರ ಅಡಿ ಮಿತಿಯೊಳಗಿರುವ ಮನೆ ನಿರ್ಮಿಸಿಕೊಳ್ಳಲು ಸಾಮಾನ್ಯವರ್ಗ, ಹಿಂದುಳಿದ ವರ್ಗ, ಅಲ್ಪಸಂಖ್ಯಾತ ವರ್ಗಕ್ಕೆ ಸೇರಿದ ವಸತಿ ರಹಿತ ಬಡ ಕುಟುಂಬಗಳಿಗೆ 2021-22ನೇ ಸಾಲಿನ ವಾಜಪೇಯಿ ನಗರ ವಸತಿ ಯೋಜನೆಯಡಿ ರೂ.1,20,000/- ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದ ವಸತಿ ರಹಿತ ಬಡ ಕುಟುಂಬಗಳಿಗೆ ವಸತಿ ಕಲ್ಪಿಸಲು 2021-22ನೇ ಸಾಲಿನ ಡಾ. ಬಿ.ಆರ್. ಅಂಬೇಡ್ಕರ್ […]

ಕಟ್ಟಡ ಕಾರ್ಮಿಕರಿಗೆ ಸಹಾಯಧನ: ಮುಖ್ಯಮಂತ್ರಿಗಳಿಂದ ಚಾಲನೆ

Sunday, June 6th, 2021
Construction-workers

ಬೆಂಗಳೂರು: ಕೋವಿಡ್ – 19 ಎರಡನೇ ಅಲೆಯನ್ನು ನಿಯಂತ್ರಿಸಲು ಸರ್ಕಾರ ವಾಣಿಜ್ಯ ಮತ್ತಿತರ ಚಟುವಟಿಕೆಗಳಿಗೆ ನಿರ್ಬಂಧಗಳನ್ನು ವಿಧಿಸುವುದು ಅನಿವಾರ್ಯವಾಗಿತ್ತು. ಈ ನಿರ್ಬಂಧದಿಂದಾ ಉಂಟಾದ ಆರ್ಥಿಕ ಸಂಕಷ್ಟವನ್ನು ಪರಿಹರಿಸಲು ಪ್ಯಾಕೇಜ್ ಘೋಷಣೆ ಮಾಡಿರುವ ಸರ್ಕಾರ, ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರಿಗೆ ಸರ್ಕಾರದಿಂದ ಘೋಷಣೆ ಮಾಡಲಾದ ಸಹಾಯಧನವನ್ನು ನೇರ ನಗದು ವರ್ಗಾವಣೆ ಮೂಲಕ ಜಮೆ ಮಾಡುವ ಕಾರ್ಯಕ್ಕೆ ಇಂದು ಮುಖ್ಯಮಂತ್ರಿಗಳು ಚಾಲನೆ ನೀಡಿದರು. ಇಂದು ಮುಖ್ಯಮಂತ್ರಿಯವರ ಗೃಹ ಕಚೇರಿ ಕೃಷ್ಣಾದಲ್ಲಿ ಈ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದ ಮುಖ್ಯಮಂತ್ರಿಗಳು […]

ಎಂ.ಆರ್.ಜಿ ಗ್ರೂಪ್ ಸಂಸ್ಥಾಪಕ ಕೆ.ಪ್ರಕಾಶ್ ಶೆಟ್ಟಿ ಜನ್ಮದಿನದ ಅಂಗವಾಗಿ ಅಶಕ್ತರಿಗೆ ಒಂದು ಕೋಟಿ ರೂ. ಸಹಾಯಧನ ವಿತರಣೆ

Monday, December 28th, 2020
prakash shetty

ಮಂಗಳೂರು :ದಕ್ಷಿಣ ಕನ್ನಡ, ಕಾಸರಗೋಡು, ಉಡುಪಿ ಸೇರಿದಂತೆ 500ಕ್ಕೂ ಅಧಿಕ ಅಶಕ್ತರಿಗೆ ಒಂದು ಕೋಟಿ ರೂ ಅಧಿಕ ಆರ್ಥಿಕ ಸಹಾಯಧನ ವಿತರಣಾ ಕಾರ್ಯಕ್ರಮ ಬಂಗ್ರಕೂಳೂರಿನ ಗೋಲ್ಡ್ ಪಿಂಚ್ ಮೈದಾನ ದಲ್ಲಿಂದು ನಡೆಯಿತು. ಎಂ.ಆರ್.ಜಿ ಗ್ರೂಪ್ ಸಂಸ್ಥಾಪಕ ಕೆ.ಪ್ರಕಾಶ್ ಶೆಟ್ಟಿ ಯವರ ಜನ್ಮದಿನದ ಅಂಗವಾಗಿ ಕಳೆದ ವರ್ಷ ಹಮ್ಮಿಕೊಂಡ ಪ್ರಕಾಶಾಭಿನಂದನಾ ಕಾರ್ಯಕ್ರಮದಲ್ಲಿ ಮಾತು ನೀಡಿದಂತೆ  ಈ ವರ್ಷ ಅಶಕ್ತರಿಗೆ ಸಹಾಯಧನ ವಿತರಣೆ  ಮಾಡಲಾಯಿತು. ಬದುಕಿನಲ್ಲಿ ಎದುರಾಗುವ ಕಷ್ಟಗಳಿಗೆ ಹೆದರದೆ ಧೈರ್ಯವಾಗಿ ಎದುರಿಸಬೇಕಾಗಿದೆ‌. ನಾನು ಕಷ್ಟದ ಹಾದಿಯಲ್ಲಿಯೇ ಬೆಳೆದು ಬಂದವನು. ಕಷ್ಟದ ಅನುಭವ ನನಗಿದೆ. ಒಬ್ಬರು ಇನ್ನೊಬ್ಬರಿಗೆ ಪರಸ್ಪರ […]

ಬಬ್ಬುಸ್ವಾಮಿ ದೈವಸ್ಥಾನ ಗಳ ಅರ್ಚಕರಿಗೆ ವಿಶೇಷ ಸಹಾಯಧನಕ್ಕೆ ಮನವಿ

Friday, June 5th, 2020
babbu swamy

ಮಂಗಳೂರು: ಲಾಕ್‌ಡೌನ್‌ನಿಂದಾಗಿ ರಾಜ್ಯಾದ್ಯಂತ ಸುಮಾರು ಒಂದು ಸಾವಿರ ಬಬ್ಬುಸ್ವಾಮಿ ದೈವಸ್ಥಾನ ಗಳು ಮುಚ್ಚಿದ್ದು, ಇದರಿಂದ ಅಲ್ಲಿ ಪೂಜೆ ಮಾಡಿಕೊಂಡು ಜೀವನ ನಡೆಸುತ್ತಿದ್ದ ಅರ್ಚಕರಿಗೆ ಆರ್ಥಿಕ ಸಂಕಷ್ಟ ಉಂಟಾಗಿದೆ. ಆದ್ದರಿಂದ ಸರಕಾರವು ಅವರಿಗೆ ವಿಶೇಷ ಸಹಾಯಧನ ಮಂಜೂರು ಮಾಡಬೇಕೆಂದು ಕೋರಿ ಕಣ್ಣೂರು ಶ್ರೀ ಮಾಲ್ತಿದೇವಿ ಶ್ರೀ ಬಬ್ಬುಸ್ವಾಮಿ ಮೂಲಕ್ಷೇತ್ರದ ಆಡಳಿತ ಮಂಡಳಿ ಅಧ್ಯಕ್ಷ ಗೋಕುಲ್‌ದಾಸ್‌ ಬಾರ್ಕೂರು ಅವರು ಸಂಸದ ನಳಿನ್‌ಕುಮಾರ್‌ ಕಟೀಲು ಅವರಿಗೆ ಮನವಿ ಸಲ್ಲಿಸಿದರು. ಉಡುಪಿ ಜಿಲ್ಲಾ ಪಂಚಾಯತ್‌ ಅಧ್ಯಕ್ಷ ದಿನಕರ ಬಾಬು, ಕಚ್ಚಾರು ದೇಗುಲದ ಪದಾಧಿಕಾರಿಗಳಾದ […]

ಆಟೋ-ಟ್ಯಾಕ್ಸಿ ಸಹಾಯಧನದಲ್ಲಿ ಅನಗತ್ಯ ಗೊಂದಲ : ಬಸವರಾಜ ಮನಗುಂಡಿ

Monday, May 25th, 2020
Basavaraja

ಗದಗ: ರಾಜ್ಯದಲ್ಲಿ ಸುಮಾರು 7 ಲಕ್ಷ , 75 ಸಾವಿರ ಜನ ಆಟೋ ಟ್ಯಾಕ್ಸಿ ಚಾಲಕರಿಗೆ ಕರೋನಾ ಪರಿಹಾರದ ರೂಪವಾಗಿ ಒಂದೇ ಕಂತಿನಲ್ಲಿ ಐದು ಸಾವಿರ ರೂ. ಸರ್ಕಾರ ಘೋಷಣೆ ಮಾಡಿದ್ದು ಸಂತೋಷದ ವಿಷಯವಾಗಿದೆ. ಆದರೆ, ಈ ಘೋಷಣೆ ಕೇವಲ ಕಾಗದದ ಮೇಲೆ ಮಾತ್ರ ಇದೆ. ಈ ಹಣ ಪಡೆಯಲು ಆಟೋ ಮತ್ತು ಟ್ಯಾಕ್ಸಿ ಚಾಲಕರಿಗೆ ಹಲವಾರು ಕಠಿಣ ನಿಬಂಧನೆಗಳನ್ನು ನೀಡಿದ್ದು ಇದರಿಂದ ಮೂಗಿಗೆ ತುಪ್ಪ ಸವರುವ ಕೆಲಸವನ್ನು ಸರ್ಕಾರ ಮಾಡುತ್ತಿದೆ ಎಂದು ಗದಗ ಜಿಲ್ಲಾ ಆಟೋ […]

ರೈತರಿಗೆ ಹಾಗೂ ಜೇನು ಕೃಷಿ ಆಸಕ್ತರಿಗೆ ತರಬೇತಿ ಮತ್ತು ಸಹಾಯಧನ

Wednesday, August 8th, 2018
Honey farm

ಮಂಗಳೂರು : ರೈತರಿಗೆ ಹಾಗೂ ಜೇನು ಕೃಷಿ ಆಸಕ್ತರಿಗೆ ತೋಟಗಾರಿಕಾ ಇಲಾಖಾ ವತಿಯಿಂದ ಜೇನು ಕೃಷಿ ತರಭೇತಿ ಕಾರ್ಯಕ್ರಮ ಆಯೋಜಿಲಾಗುತ್ತಿದ್ದು, ಆಸಕ್ತ ರೈತರು ಅರ್ಜಿಯನ್ನು ಹಾಗೂ ಆದಾರ್ ಪ್ರತಿಯನ್ನು ಆಗಸ್ಟ್ 10 ರ ಒಳಗೆ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಛೇರಿ, ಮಂಗಳೂರು ಅಥವಾ ರೈತ ಸಂಪರ್ಕ ಕೇಂದ್ರ ಮೂಡುಬಿದಿರೆಯಲ್ಲಿ ನೀಡಿ ನೋಂದಾಯಿಸಲು ಕೋರಿದೆ. ತರಭೇತಿ ಪಡೆದ ರೈತರಿಗೆ ಜೇನುಪೆಟ್ಟಿಗೆ ಹಾಗೂ ಕುಟುಂಬಗಳಿಗೆ ಸಹಾಯಧನ ನೀಡಲಾಗುವುದು. ಎಂದು ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕರ ಪ್ರಕಟಣೆ ತಿಳಿಸಿದೆ.  ದೂರವಾಣಿ 0824 […]

ಬಡವರಿಗೆ ಸರ್ಕಾರದ ಸಹಾಯಧನ ವಿತರಿಸಿದ ಜೆ.ಆರ್.ಲೋಬೊ

Thursday, September 5th, 2013
lobo

ಮಂಗಳೂರು: ಬಡಕುಟುಂಬಗಳಿಗೆ ಸರ್ಕಾರದಿಂದ ಸಿಗುವ ವಿವಿಧ ರೀತಿಯ ಸಹಾಯಧನವನ್ನು ಮಂಗಳೂರು ನಗರ ದಕ್ಷಿಣ ಕ್ಷೇತ್ರದ ಶಾಸಕ ಜೆ.ಆರ್.ಲೋಬೊ ನಗರದ ಎನ್.ಜಿ.ಒ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಫಲಾನುಭವಿಗಳಿಗೆ ವಿತರಿಸಿದರು. ಈ ಸಂದರ್ಭ ನೆರೆದವರನ್ನು ಉದ್ದೇಶಿಸಿ ಮಾತನಾಡಿದ ಅವರು, ಸರ್ಕಾರದ ಇಲಾಖೆ ಆಸಕ್ತಿ ವಹಿಸಿ ಕೆಲಸ ನಿರ್ವಹಿಸಿದರೆ ಯಾವುದೇ ರೀತಿಯ ಕಾರ್ಯವನ್ನು ಸಾಧಿಸಬಹದು ಎಂಬುದಕ್ಕೆ ಈ ಸಮಾರಂಭವೇ ಸಾಕ್ಷಿಯಾಗಿದೆ. ಇಲ್ಲಿ ಕಂದಾಯ ಇಲಾಖೆಯ ಅಧಿಕಾರಿಗಳು ಆಸಕ್ತಿ ವಹಿಸಿ ಫಲಾನುಭವಿಗಳನ್ನು ಆಯ್ಕೆ ಮಾಡಿ ಸೂಕ್ತ ರೀತಿಯ ಸಹಾಯಧನವನ್ನು ವಿತರಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. […]

ದ.ಕ. ಹಾಲು ಉತ್ಪಾದಕರ ಒಕ್ಕೂಟದಿಂದ ಉತ್ತರಾಖಂಡ ಪ್ರಕೃತಿ ವಿಕೋಪ ಸಂತ್ರಸ್ಥರಿಗೆ 10 ಲಕ್ಷ ಸಹಾಯಧನ

Wednesday, July 17th, 2013
kmf cheque

ಮಂಗಳೂರು : ದಕ್ಷಿಣ ಕನ್ನಡ ಹಾಲು ಉತ್ಪಾದಕರ ಒಕ್ಕೂಟವು  ಉತ್ತರಾಖಂಡ ದಲ್ಲಿ ಪ್ರಕೃತಿ ವಿಕೋಪದಿಂದ ಕೇದಾರನಾಥ, ಉತ್ತರಕಾಶಿ ಹಾಗೂ ಇತರ ಪ್ರದೇಶಗಳಲ್ಲಿ ಅಪಾರ ಜನರು ಪ್ರಾಣ ಕಳೆದುಕೊಂಡು ಸಂಕಷ್ಟಕ್ಕೀಡಾಗಿ, ಅಪಾರ ಆಸ್ತಿ ನಷ್ಟವಾಗಿರುವುದನ್ನು ಮನಗಂಡು ಮುಖ್ಯಮಂತ್ರಿಗಳ ಮೂಲಕ ಸಹಾಯಧನ ಚೆಕ್ಕನ್ನು ನೀಡಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಉಸ್ತುವಾರಿ ಸಚಿವರಾದ ಬಿ. ರಮಾನಾಥ ರೈರವರೊಂದಿಗೆ ಒಕ್ಕೂಟದ ಅಧ್ಯಕ್ಷರಾದ ಶ್ರೀ ರವಿರಾಜ ಹೆಗ್ಡೆ ಕೊಡವೂರು ಮತ್ತು ನಿರ್ದೇಶಕರಾದ ಶ್ರೀ ಸೀತರಾಮ ರೈ ಸವಣೂರು, ಶ್ರೀ ಮೋನಪ್ಪ ಶೆಟ್ಟಿ ಎಕ್ಕಾರು, ಶ್ರೀ […]

ಮೃತ ಸೌಮ್ಯಾ ಳ ಮನೆಗೆ ಜನಾರ್ದನ ಪೂಜಾರಿ, ಕಾಂಗ್ರೆಸ್ಸ್ ನಾಯಕರ ಭೇಟಿ, ಸಾಂತ್ವಾನ

Thursday, February 28th, 2013
Janardhana poojaary visit Sowmya's family

ಬಂಟ್ವಾಳ : ಬಾಳ್ತಿಲ ಗ್ರಾಮದ ಕುಂಟಲ್ಪಾಡಿ ಯಲ್ಲಿ ಸೋಮವಾರ ಅತ್ಯಾಚಾರ ಯತ್ನದ ಬಳಿಕ ಕೊಲೆಗೀಡಾಗಿರುವ ಸೌಮ್ಯಾ ಅವರ ಮನೆಗೆ ಬುಧವಾರ ಮಾಜಿ ಕೇಂದ್ರ ಸಚಿವ ಬಿ. ಜನಾರ್ದನ ಪೂಜಾರಿ ಮತ್ತು ಕಾಂಗ್ರೆಸ್ಸ್ ನಾಯಕರು ಭೇಟಿ ನೀಡಿ ಮೃತಳ ಕುಟುಂಬಕ್ಕೆ ಸಾಂತ್ವಾನ ಹೇಳಿದರು. ಹಾಗು ಈ ಸಂದರ್ಭದಲ್ಲಿ ಅವರು ಕಾಂಗ್ರೆಸ್ ಕಾರ್ಯಕರ್ತರಿಂದ ಮಂಗಳವಾರ ಸಂಗ್ರಹಿಸಿದ 1.10 ಲಕ್ಷ ರೂಪಾಯಿಗಳನ್ನು  ಸೌಮ್ಯಾ ಳ ಹೆತ್ತವರಿಗೆ ಹಸ್ತಾಂತರಿಸಿದರು. ಬಳಿಕ ಮಾತನಾಡಿದ ಅವರು ಇತ್ತೀಚಿನ ದಿನಗಳಲ್ಲಿ ಮಹಿಳೆಗೆ ರಕ್ಷಣೆ ಇಲ್ಲದಂತಹ  ಸ್ಥಿತಿ ನಿರ್ಮಾಣವಾಗಿದ್ದು, […]

ಅಲ್ಪಸಂಖ್ಯಾಕರ ಅಭಿವೃದ್ಧಿ ನಿಗಮದ ವತಿಯಿಂದ ಒಂದು ಕೋಟಿಗೂ ಮಿಕ್ಕಿ ಚೆಕ್ ವಿತರಣೆ

Tuesday, August 30th, 2011
Karnataka Minorities Development Corporation

ಮಂಗಳೂರು : ಕರ್ನಾಟಕ ಅಲ್ಪಸಂಖ್ಯಾಕರ ಅಭಿವೃದ್ಧಿ ನಿಗಮದ ವತಿಯಿಂದ ಸೋಮವಾರ ಮಂಗಳೂರಿನಲ್ಲಿ ಜರಗಿದ ಸಮಾರಂಭದಲ್ಲಿ 2011-12ನೇ ಸಾಲಿನ ವಿವಿಧ ಸಾಲ ಯೋಜನೆಗಳಡಿ ಮಂಗಳೂರು ಉತ್ತರ, ದಕ್ಷಿಣ ಮತ್ತು ಮೂಡಬಿದಿರೆ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯ 1,194 ಫ‌ಲಾನುಭವಿಗಳಿಗೆ 34.98 ಲಕ್ಷ ರೂ. ಸಹಾಯಧನ ಸೇರಿ ಒಟ್ಟು 1,45,10,000 ರೂ. ಮೊತ್ತದ ಚೆಕ್‌ಗಳನ್ನು ವಿತರಿಸಿಸಲಾಯಿತು. ಫ‌ಲಾನುಭವಿಗಳಿಗೆ ಚೆಕ್‌ ವಿತರಿಸಿದ ಬಳಿಕ ಮಾತನಾಡಿದ ಸಚಿವರು ಬಡ ಅಲ್ಪಸಂಖ್ಯಾಕರಿಗೆ ಭೂ ಖರೀದಿ ಹಾಗೂ ಮನೆ ನಿರ್ಮಿಸಲು ಅನುಕೂಲವಾಗುವ ಹೊಸ ಯೋಜನೆಯ ಪ್ರಸ್ತಾವ ಸರಕಾರದ […]