Blog Archive

ಸುರತ್ಕಲ್: ರೆಫ್ರಿಜರೇಟರ್ ಗ್ಯಾಸ್ ಸಿಲಿಂಡರ್ ಸ್ಪೋಟ – ಮಹಿಳೆ ಗಂಭೀರ

Monday, June 10th, 2019
Gas-cylinder

ಮಂಗಳೂರು :  ರೆಫ್ರಿಜರೇಟರ್ ನ ಗ್ಯಾಸ್ ಸಿಲಿಂಡರ್ ಸ್ಪೋಟವಾಗಿ ಮಹಿಳೆಯೋರ್ವರು ಗಂಭೀರವಾಗಿ ಗಾಯಗೊಂಡ ಘಟನೆ ಸೋಮವಾರ ಮಧ್ಯಾಹ್ನ ಕಾಟಿಪಳ್ಳದಲ್ಲಿ ನಡೆದಿದೆ. ಫರ್ಝಾನ ( 33 ) ಗಂಭೀರವಾಗಿ ಗಾಯಗೊಂಡವರು. ಜೊತೆಗೆ ಇವರ ಪತಿ ಸಿದ್ದಿಕ್ (38) ಮತ್ತು ಒಂದು ವರ್ಷದ ಮಗು ಫರಾನ ಗಾಯಗೊಂಡಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಪತ್ನಿ ಮತ್ತು ಮೂವರು ಮಕ್ಕಳೊಂದಿಗೆ ಸಿದ್ದಿಕ್ ಅವರು ಕಾಟಿಪಳ್ಳ ನಾಲ್ಕನೇ ಬ್ಲಾಕ್ ನಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಇಂದು ಮಧ್ಯಾಹ್ನದ ಸಮಯ  ಫರ್ಝಾನ ರೆಫ್ರಿಜರೇಟರ್ ನ ಸಿಲಿಂಡರ್ […]

ಕಸಾಯಿಖಾನೆ ವಿವಾದ: ಮಂಗಳೂರು ಮಹಾನಗರ ಪಾಲಿಕೆ ಸಭೆಯಲ್ಲಿ ವಾಗ್ವಾದ

Wednesday, October 31st, 2018
kavitha-sanil

ಮಂಗಳೂರು: ಮಹಾನಗರ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಇಂದು ಕಸಾಯಿಖಾನೆ ಅಭಿವೃದ್ಧಿಗೆ ಸ್ಮಾರ್ಟ್ ಸಿಟಿ ಅನುದಾನ ನೀಡಿಕೆ ವಿಚಾರ ಸಂಬಂಧಿಸಿ ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ವಾಗ್ವಾದ ನಡೆಯಿತು. ಸ್ಮಾರ್ಟ್ ಸಿಟಿ ಅನುದಾನದಲ್ಲಿ ಕಸಾಯಿಖಾನೆ ಅಭಿವೃದ್ಧಿ ಪಡಿಸುವ ಬಗ್ಗೆ ಪಾಲಿಕೆಯಲ್ಲಿ ಯಾವುದೇ ಚರ್ಚೆ ಮಾಡದೆ ನೇರವಾಗಿ ಸ್ಮಾರ್ಟ್ ಸಿಟಿ ಸಭೆಯಲ್ಲಿ ನಿರ್ಣಯ ತೆಗೆದುಕೊಂಡಿರುವುದರ ವಿರುದ್ಧ ಪ್ರತಿಪಕ್ಷದಲ್ಲಿರುವ ಬಿಜೆಪಿ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು. ಅಂತಿಮವಾಗಿ ಸಭೆಗೆ ಉತ್ತರಿಸಿದ ಮನಪಾ ಮೇಯರ್ ಭಾಸ್ಕರ್ ಮೊಯ್ಲಿ, ಸದ್ಯ ಕುದ್ರೋಳಿಯಲ್ಲಿರುವ ಕಸಾಯಿಖಾನೆಯನ್ನು ಅಭಿವೃದ್ಧಿ ಪಡಿಸೋಣ. […]

ಸುರತ್ಕಲ್ ಟೋಲ್ ಗೇಟ್ ವಿರುದ್ಧ ಧರಣಿ: ತುರ್ತು ಸಭೆ ನಡೆಸಿದ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್

Tuesday, October 30th, 2018
sesikanth-senthil

ಮಂಗಳೂರು: ಸುರತ್ಕಲ್ ಟೋಲ್ಗೇಟ್ ಮುಚ್ಚಬೇಕು ಅಥವಾ ಹೆಜಮಾಡಿ ಟೋಲ್ ಗೇಟ್ ನೊಂದಿಗೆ ವಿಲೀನ ಗೊಳಿಸಬೇಕು ಹಾಗೂ ಟೋಲ್ಗೇಟ್ ಗುತ್ತಿಗೆ ನವೀಕರಣದ ವಿರುದ್ಧ ಏಳು ದಿನಗಳಿಂದ ನಡೆಯುತ್ತಿರುವ ಪ್ರತಿಭಟನೆಯ ಹಿನ್ನೆಲೆಯಲ್ಲಿ ದ.ಕ. ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಟೋಲ್ಗೇಟ್ ವಿರೋಧಿ ಸಮಿತಿಯ ಸದಸ್ಯರೊಂದಿಗೆ ಸೋಮವಾರ ತುರ್ತು ಸಭೆ ನಡೆಸಿ ಸಮಸ್ಯೆಯನ್ನು ಆಲಿಸಿದರು. ಸಭೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಯೊಬ್ಬರು ಉಪಸ್ಥಿತರಿದ್ದರು. ರಾಜ್ಯದ ಅಪರ ಕಾರ್ಯದರ್ಶಿಗಳ ಸಭೆಯಲ್ಲಿ ಟೋಲ್ಗೇಟ್ ವಿಲೀನಗೊಳಿಸುವ ಮಾತುಕತೆ ನಡೆದಿರುವುದನ್ನು ಒಪ್ಪಿಕೊಂಡರು. ಆದರೆ ಕೇಂದ್ರದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ […]

ಅಕ್ರಮ ಟೋಲ್ ಗೇಟ್ ಮುಚ್ಚಲು ಒತ್ತಾಯಿಸಿ ಅಕ್ಟೋಬರ್ 22 ರಿಂದ ಸುರತ್ಕಲ್ ನಲ್ಲಿ ಅನಿರ್ದಿಷ್ಟ ಧರಣಿ

Wednesday, October 10th, 2018
suratkal

ಮಂಗಳೂರು: ಜನತೆಯ ತೀವ್ರ ವಿರೋಧ, ಹಲವು ಹಂತದ ಹೋರಾಟ, ಸುರತ್ಕಲ್ ಟೋಲ್ ಗೇಟ್ ಅನ್ನು ಹೆಜಮಾಡಿ ಟೋಲ್ ಗೇಟ್ ನೊಂದಿಗೆ ವಿಲೀನಗೊಳಿಸುವ ರಾಜ್ಯ ಸರ್ಕಾರದ ಪ್ರಸ್ತಾಪದ ಹೊರತಾಗಿಯೂ ಎನ್ಐಟಿಕೆ ಸಮೀಪ ಇರುವ ಅಕ್ರಮ ಟೋಲ್ ಕೇಂದ್ರವನ್ನು ಮುಚ್ಚಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ನಿರಾಕರಿಸುತ್ತಿದೆ. 3.1. 2018 ರಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ಉಪಸ್ಥಿತಿಯಲ್ಲಿ ರಾಜ್ಯ ಸರಕಾರ ನಡೆಸಿದ ಸಭೆಯಲ್ಲಿ “ಸುರತ್ಕಲ್ ಟೋಲ್ ಗೇಟ್ ಹೆಜಮಾಡಿ ಟೋಲ್ ಗೇಟ್ ನಲ್ಲಿ ವಿಲೀನಗೊಳ್ಳಬೇಕು, ಯಾವುದೇ ಕಾರಣಕ್ಕೂ ಸುರತ್ಕಲ್ ಟೋಲ್ […]

ಸಿಸಿಬಿ ಕಾರ್ಯಾಚರಣೆ: ಕುಖ್ಯಾತ ಅಂತರ್ ಜಿಲ್ಲಾ ಸರಕಳ್ಳನ ಸೆರೆ

Wednesday, October 10th, 2018
robbery

ಮಂಗಳೂರು: ಮಂಗಳೂರು ನಗರ ಹಾಗೂ ಉಡುಪಿ ಜಿಲ್ಲೆಯ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ನಡೆದ ಸರಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಕುಖ್ಯಾತ ಸರಕಳ್ಳನನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಹಲವಾರು ಸರಗಳ್ಳತನ ಪ್ರಕರಣಗಳ ಆರೋಪಿ ಮಂಗಳೂರಿನ ಸುರತ್ಕಲ್ನ ನಿವಾಸಿ ಶಾಕೀಬ್ (25) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಈ ವೇಳೆ ಕಳವು ಮಾಡಲಾದ 140 ಗ್ರಾಂ ತೂಕದ 5 ಚಿನ್ನದ ಸರ, ಒಂದು ಕರಿಮಣಿ ಸರ, 2 ಚಿನ್ನದ ಪೆಂಡೆಂಟ್ ಸಹಿತ 4,15,000 ರೂ. ಮೌಲ್ಯದ ಚಿನ್ನಾಭರಣ, ರಿಟ್ಜ್ ಕಾರನ್ನು […]

ಸ್ಮಾರ್ಟ್​ಫೋನ್ ಮತ್ತು ಐಶಾರಾಮಿ ಕಾರಿನ ಲೋಗೋ ಕಳವು..ಮೂರು ಆರೋಪಿ ಬಂಧನ!

Saturday, July 21st, 2018
arrested

ಮಂಗಳೂರು: ಮಂಗಳೂರಿನ ಅಪಾರ್ಟ್ಮೆಂಟ್ಗಳ ಸೆಕ್ಯುರಿಟಿಯವರ ಸ್ಮಾರ್ಟ್ಫೋನ್ ಮತ್ತು ಐಶಾರಾಮಿ ಕಾರಿನ ಲೋಗೋ ಕದಿಯುತ್ತಿದ್ದ ಇಬ್ಬರು ಮತ್ತು ಕದ್ದ ಮೊಬೈಲನ್ನು ಖರೀದಿಸಿದ ಮೂವರನ್ನು ಕದ್ರಿ ಪೊಲೀಸರು ಬಂಧಿಸಿದ್ದಾರೆ. ಮಂಗಳೂರಿನ ಪಚ್ಚನಾಡಿ ಪದವಿನಂಗಡಿಯ ವಿಶಾಲ್ ನಾಯಕ್ (18), ಅಭಿಷೇಕ್ ಪೂಜಾರಿ (18) ಸ್ಮಾರ್ಟ್ಫೋನ್ ಮತ್ತು ಕಾರಿನ ಲೋಗೋ ಕದಿಯುತ್ತಿದ್ದ ಆರೋಪಿಗಳು. ಆರೋಪಿಗಳಿಂದ ಕದ್ದ ಮೊಬೈಲನ್ನು ಖರೀದಿಸುತ್ತಿದ್ದ ತಲಪಾಡಿಯ ಅಬ್ದುಲ್ ಸಿನಾನ್ (25), ಬಜಾಲ್ ಪಡ್ಪುವಿನ ಮುಹಮ್ಮದ್ ಸವಾದ್ (26)ಸುರತ್ಕಲ್ನ ಸದಕ್ ತುಲ್ಲಾ (30) ಅವರನ್ನು ಪೊಲೀಸರು ಬಂಧಿಸಿದ್ದಾರೆ. ವಿಶಾಲ್ ಮತ್ತು […]

ಮಂಗಳೂರಿನಲ್ಲಿ ಗೋಣಿಚೀಲದಲ್ಲಿ ಮೃತದೇಹ ಪತ್ತೆ

Saturday, June 2nd, 2018
dead-body

ಮಂಗಳೂರು: ಮಂಗಳೂರಿನ ಸುರತ್ಕಲ್‌ನಲ್ಲಿ‌ ಮೃತದೇಹವೊಂದು ಗೋಣಿಚೀಲದಲ್ಲಿ ಪತ್ತೆಯಾಗಿದೆ. ದೇಹವನ್ನು ಎರಡು ತುಂಡು ಮಾಡಿ ಗೋಣಿಚೀಲದಲ್ಲಿ ಹಾಕಿ ಎಸೆಯಲಾಗಿದ್ದು ಕೊಲೆ ಮಾಡಿ ಈ ರೀತಿ ಮಾಡಿರಬಹುದೆಂದು ಶಂಕಿಸಲಾಗಿದೆ. ಮೃತದೇಹದ ಗುರುತು ಪತ್ತೆಯಾಗಿಲ್ಲ. ಸುರತ್ಕಲ್ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.

ತುಳುನಾಡಿನಲ್ಲೊಂದು ವಿಶಿಷ್ಟ ಮೀನು ಹಿಡಿಯುವ ಖಂಡಿಗೆ ಜಾತ್ರೆ

Thursday, May 17th, 2018
tulunadu

ಮಂಗಳೂರು: ತುಳುನಾಡಿನಲ್ಲಿ ಪ್ರಸಿದ್ದ ಖಂಡೇವು ಅಡೆವು ಮೀನು ಹಿಡಿಯುವ ಜಾತ್ರೆ ನಡೆಯಿತು. ಧಾರ್ಮಿಕ ಹಿನ್ನಲೆಯಿರುವ ಈ ವಿಶಿಷ್ಠ ಮೀನು ಹಿಡಿಯುವ ಜಾತ್ರೆಯಲ್ಲಿ ಸಾವಿರಾರು ಜನರು ಪಾಲ್ಗೊಂಡಿದ್ದರು. ಪ್ರತಿ ವರುಷ ಮೇ ತಿಂಗಳ ಸಂಕ್ರಮಣದಂದು ನಡೆಯುವ ಮೀನು ಹಿಡಿಯುವ ಜಾತ್ರೆ ಕರಾವಳಿ ಭಾಗದ ಒಂದು ವಿಶೇಷ ಆಚರಣೆ. ತುಳುನಾಡಿನಲ್ಲಿ ಎರ್ಮಾಳು ಜೆಪ್ಪು ಖಂಡೇವು ಅಡೆಪು ಎಂಬ ನಾಣ್ಣುಡಿ ಜಾರಿಯಲ್ಲಿದೆ. ಇದರ ಅರ್ಥ ಉಡುಪಿ ಜಿಲ್ಲೆಯ ಎರ್ಮಾಳು ದೇವಳದಲ್ಲಿ ಜಾತ್ರೆ ಪ್ರಾರಂಭಗೊಳ್ಳುವ ಮೂಲಕ ಅವಿಭಜಿತ ದಕ್ಷಿಣಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ […]

ಕುಂದಾಪುರದ ಅಭ್ಯರ್ಥಿಗೆ ಸುರತ್ಕಲ್ ಅಭಿವೃದ್ಧಿಯ ಮಾಹಿತಿಯಿಲ್ಲ: ದೇವಿ ಪ್ರಸಾದ್ ಶೆಟ್ಟಿ

Saturday, May 5th, 2018
mohuiddin-bava

ಮಂಗಳೂರು: ಬಿಜೆಪಿ ಅಭ್ಯರ್ಥಿ ಭರತ್ ಶೆಟ್ಟಿ ಕುಂದಾಪುರದಿಂದ ವಲಸೆ ಬಂದವರು ಹೀಗಾಗಿ ಉತ್ತರ ಕ್ಷೇತ್ರದಲ್ಲಿ ಆದ ಅಭಿವೃದ್ಧಿಯ ಮಾಹಿತಿಲ್ಲದೆ ಟೀಕಿಸುತ್ತಿದ್ದಾರೆ.ಮಂಗಳೂರು ಉತ್ತರ ಕ್ಷೇತ್ರದಲ್ಲಿ ಶಾಸಕ ಮೊದಿನ್ ಬಾವಾ ಅವರ ಸಾಧನೆ ಇತರ ಕ್ಷೇತ್ರಗಳಿಗೂ ಮಾದರಿಯಾಗಿದೆ. ಆರೋಗ್ಯ ನಿಯಿಂದ ಹಿಡಿದು ರಸ್ತೆಯವರೆಗೆ ಜನ ಸಾಮಾನ್ಯನಿಗೆ ಬೇಕಾದ ಸವಲತ್ತು ಒದಗಿಸುವಲ್ಲಿ ಮೊದಲ ಐದು ವರ್ಷದಲ್ಲಿ ಯಶಸ್ವಿಯಾಗಿದ್ದಾರೆ. ಕಾಂಗ್ರೆಸ್ ಮುಖಂಡ, ಚುನಾವಣಾ ಉಸ್ತುವಾರಿ ದೇವಿ ಪ್ರಸಾದ್ ಶೆಟ್ಟಿ ಹೇಳಿದರು. ಸುರತ್ಕಲ್ ಬ್ಲಾಕ್ ಸಮಿತಿಯ ಕಾರ್ಪೊರೇಟರ್‌ಗಳು, ಪ್ರಮುಖ ಪದಾಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು. […]

ಕಾಂಗ್ರೆಸ್ ಸರಕಾರ ಹಿಂದುಗಳ ಭಾವನೆಗಳಿಗೆ ಧಕ್ಕೆ ತಂದಿದೆ : ಭರತ್ ಶೆಟ್ಟಿ

Friday, April 27th, 2018
Bharath Shetty

ಸುರತ್ಕಲ್ : ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಡಾ ಭರತ್ ಶೆಟ್ಟಿಯವರು ಶುಕ್ರವಾರ  ಕೋಡಿಕಲ್, ಕುಳೂರು, ಇನ್ನಿತರ ಭಾಗಗಳಿಗೆ ಬೇಟಿ ನೀಡಿ ಮತಯಾಚನೆ ಮಾಡಿದರು. ಈ ಸಂದರ್ಭದಲ್ಲಿ ಮಾತನಾಡಿ, “ಯುವಜನರ ಬೆಂಬಲ ನನಗೆ ಇನ್ನಷ್ಟು ಶಕ್ತಿ ತುಂಬಿದೆ, ಕಾಂಗ್ರೆಸ್ ಸರಕಾರ ಹಿಂದುಗಳ ಭಾವನೆಗಳಿಗೆ ಧಕ್ಕೆ ತಂದಿದೆ ಮತ್ತು ನನಗೆ ನನ್ನ ಹಿಂದೂ ಸಹೋದರ ಸಹೋದರಿಯರ ಸುಖ ಶಾಂತಿಯೇ ಮುಖ್ಯ” ಎಂದು ಹೇಳಿದರು. ಕೋಡಿಕಲ್ ನ ಗಣಪತಿ ದೇವಸ್ಥಾನದಲ್ಲಿ ದೇವರ ಆಶಿರ್ವಾದ ಪಡೆದು ನಂತರ ಹಿರಿಯರ ಆಶಿರ್ವಾದ […]