ಕೊರೋನಾ ಅಲೆ ನಿಯಂತ್ರಿಸಲು ಸಾಧ್ಯವಾಗದೇ ಬಿಜೆಪಿ ಪ್ರತಿಪಕ್ಷಗಳನ್ನು ಗುರಿ ಮಾಡಿಕೊಂಡಿದೆ : ರಕ್ಷಾ ರಾಮಯ್ಯ

Saturday, May 15th, 2021
Raksha Ramaiah

ಬೆಂಗಳೂರು : ಕೋವಿಡ್ ಸಂಕಷ್ಟ ಪರಿಸ್ಥಿತಿಯಲ್ಲಿ ತನ್ನ ಮಾನವೀಯ ಸೇವೆಯಿಂದ ದೇಶ ವಿದೇಶಗಳಲ್ಲಿ ಮೆಚ್ಚುಗೆ ಪಡೆದಿರುವ ರಾಷ್ಟ್ರೀಯ ಯುವ ಕಾಂಗ್ರೆಸ್ ಅಧ್ಯಕ್ಷ ಬಿ.ವಿ. ಶ್ರೀನಿವಾಸ್ ಅವರನ್ನು ಬಿಜೆಪಿ ಸರ್ಕಾರ ದೆಹಲಿ ಪೊಲೀಸರ ಮೂಲಕ ವಿಚಾರಣೆಗೆ ಒಳಪಡಿಸಿರುವುದು ಖಂಡನೀಯ. ಕೇಂದ್ರದ ಧೋರಣೆಯಿಂದ ಭವಿಷ್ಯದಲ್ಲಿ ಜನ ಸಾಮಾನ್ಯರ ಸಂಕಷ್ಟಕ್ಕೆ ಸ್ಪಂದಿಸುವ ಸಮುದಾಯದಲ್ಲಿ ನೈತಿಕ ಸ್ಥೈರ್ಯ ಕುಸಿಯುವಂತೆ ಮಾಡಿದಂತಾಗಿದೆ ಎಂದು ಪ್ರದೇಶ ಯುವ ಕಾಂಗ್ರೆಸ್ ಅಧ್ಯಕ್ಷ ಎಂ.ಎಸ್. ರಕ್ಷಾ ರಾಮಯ್ಯ ಟೀಕಿಸಿದ್ದಾರೆ. ಕೊರೋನಾ ಎರಡನೇ ಅಲೆ ನಿಯಂತ್ರಿಸಲು ಸಾಧ್ಯವಾಗದೇ ಹತಾಶೆಗೆ ಒಳಗಾಗಿರುವ […]

ಕೊರೋನಾ ಸೋಂಕಿತ ಯುವಕನಿಗೆ ಕಲ್ಲಿನಿಂದ ಹೊಡೆದು ಗ್ರಾಮಬಿಟ್ಟು ಹೋಗುವಂತೆ ಬೆದರಿಕೆ

Saturday, May 15th, 2021
Stone

ಮೈಸೂರು: ಇತರರಿಗೂ ಸೋಂಕು ತಗಲುವ ಹಿನ್ನೆಲೆಯಲ್ಲಿ ಗ್ರಾಮಬಿಟ್ಟು ಹೋಗುವಂತೆ ಕೊರೋನಾ ಸೋಂಕಿತ ಯುವಕನ ಮೇಲೆ ಕಲ್ಲು ತೂರಾಟ ನಡೆಸಿರುವ ಘಟನೆ ಮೈಸೂರಿನ ಕರಪುರ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಪಂಚಾಯತ್ ಸದಸ್ಯರು ಯುವಕನಿಗೆ ಕೊರೋನಾ ಸೋಂಕು ದೃಢಪಟ್ಟಿರುವ ಹಿನ್ನೆಲೆಯಲ್ಲಿ ಮನೆಯಲ್ಲಿಯೇ ಇರುವಂತೆ ಸೂಚಿಸಿದ್ದು, ವೈದ್ಯಕೀಯ ಸೌಲಭ್ಯಗಳನ್ನು ಒದಗಿಸುವ ಭರವಸೆ ನೀಡಿದ್ದರು. ಆದರೆ, ಮನೆ ಬಳಿ ಕುಳಿತಿದ್ದ ಮುತ್ತೇ ಗೌಡ ಹಾಗೂ ಬಲರಾಮ್ ಎಂಬ ಕಿಡಿಕೇಡಿಗಳು ಗುಂಪು ಸೇರಿಸಿ ಸೋಂಕಿತನ ಮೇಲೆ ಏಕಾಏಕಿ ಕಲ್ಲಿನಿಂದ ದಾಳಿ ನಡೆಸಿದ್ದಾರೆ. ಅಲ್ಲದೆ, ಇತರೆ […]

ಮೂವರು ಮೀನುಗಾರರನ್ನು ರಕ್ಷಿಸಿದ ಭಾರತೀಯ ಕರಾವಳಿ ಕಾವಲು ಪಡೆ

Saturday, May 15th, 2021
Cost Guard

ಮಂಗಳೂರು : ಕೇರಳದ ಕಣ್ಣೂರಿನಿಂದ ಸುಮಾರು 10 ನಾಟಿಕಲ್ ದೂರದಲ್ಲಿ‌ ಮೀನುಗಾರಿಕಾ ದೋಣಿಯೊಂದು ಸಿಲುಕಿದ ಪರಿಣಾಮ ಅಪಾಯದಲ್ಲಿ ಸಿಲುಕಿದ್ದ ಮೂವರು ಮೀನುಗಾರರನ್ನು ಭಾರತೀಯ ಕರಾವಳಿ ಕಾವಲು ಪಡೆ ತಂಡ ರಕ್ಷಿಸಿದೆ. ಎಂಜಿನ್‌ ಸಮಸ್ಯೆಯ ಕಾರಣದಿಂದ ಸಮುದ್ರದಲ್ಲಿ ಮೀನುಗಾರಿಕಾ ದೋಣಿಯ ಯಂತ್ರ ಕೆಟ್ಟು ಹೋಗಿ ನಿಂತಿತ್ತು. ಈ ಬಗ್ಗೆ ಮಾಹಿತಿ ತಿಳಿದ ಕರಾವಳಿ ಕಾವಲು ಪಡೆ ಸಿಬ್ಬಂದಿಗಳು ವಿಕ್ರಮ್‌ ನೌಕೆ ಮೂಲಕ ಕಾರ್ಯಾಚರಣೆ ನಡೆಸಿ ಮೂವರು ಕೇರಳ ಮೀನುಗಾರರನ್ನು ರಕ್ಷಿಸಿದೆ. ಮೀನುಗಾರರನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗಿದ್ದು, ಆರೋಗ್ಯವಾಗಿದ್ದಾರೆ ಎಂದು ತಿಳಿದುಬಂದಿದೆ. […]

75 ರ ವೃದ್ಧನಿಗೆ ಸಹಾಯ ಹಸ್ತ ಚಾಚಿದ “ಆಪತ್ಭಾಂಧವ ಡಾ. ಸಿ.ರಾಮಾಚಾರಿ”

Friday, May 14th, 2021
ramachari

ಶಿವಮೊಗ್ಗ : ಕಡೂರಿನಲ್ಲಿ ಕೃಷ್ಣಪ್ಪ ಎಂಬ 75 ವರ್ಷದ ವೃದ್ಧರೋರ್ವರಿಗೆ, ಕಡೂರ ಪೊಲೀಸರ ಸಹಾಯದಿಂದ ಹಿರಿಯ ಸಮಾಜ ಸೇವಕ ಮತ್ತು ಭದ್ರಾವತಿಯ ಸಂಜೀವಿನಿ ವೃದ್ಧಾಶ್ರಮ ಸಂಸ್ಥಾಪಕ ಡಾ.ಸಿ.ರಾಮಾಚಾರಿ ತಮ್ಮ ಆಶ್ರಮದಲ್ಲಿ ಆಶ್ರಯ ನೀಡಿದ್ದಾರೆ. ರಸ್ತೆಯಲ್ಲಿ ಅನಾಥರಾಗಿ ಓಡಾಡುತ್ತಿದ್ದ ವೃದ್ಧ ಕೃಷ್ಣಪ್ಪನನ್ನು ಕಡೂರು ಪೊಲೀಸ್‌ ಇಲಾಖೆಯ ಸಿಬ್ಬಂದಿ ಲತಾ ಎಂಬುವರು ನೋಡಿ ಇವರ ಕಷ್ಟವನ್ನು ನೋಡಲಾಗದೆ ಕೂಡಲೇ ಡಾ.ಸಿ.ರಾಮಾಚಾರಿ ಅವರಿಗೆ ಕರೆಮಾಡಿ ವಿಷಯ ತಿಳಿಸಿದ್ದಾರೆ. ತಕ್ಷಣ ಸ್ಪಂದಿಸಿದ ಡಾ.ಸಿ.ರಾಮಾಚಾರಿಯವರು ಸ್ಥಳಕ್ಕೆ ಆಗಮಿಸಿ ವೃದ್ಧನ ಆರೋಗ್ಯ ತಪಾಸಣೆ ಮಾಡಿಸಿಕೊಂಡು ಸಿಪಿಐ […]

ದಿಲ್ಲಿಗೆ ಹೋಗಿ ಏನ್ ಮಾಡ್ತಿಯಾ?: ಯೋಗೇಶ್ವರ್ ಮೇಲೆ ರೇಣುಕಾಚಾರ್ಯ ಗರಂ

Friday, May 14th, 2021
Renukacharya

ದಾವಣಗೆರೆ: ಸಚಿವ ಸಿ. ಪಿ. ಯೋಗೇಶ್ವರ್ ವಿರುದ್ಧ ವಾಗ್ದಾಳಿ ಮತ್ತೆ ಮುಂದುವರೆಸಿರುವ ಸಿಎಂ ರಾಜಕೀಯ ಕಾರ್ಯದರ್ಶಿ ಎಂ. ಪಿ. ರೇಣುಕಾಚಾರ್ಯ ಸೋತರೂ ಮಂತ್ರಿ ಮಾಡಿದ್ದಕ್ಕೆ ದೆಹಲಿಯಲ್ಲಿ ಲಾಬಿ ಮಾಡ್ತೀಯಾ‌. ಯಾರೋ ಒಬ್ಬರು ಲಾಬಿ ಮಾಡಿದಾಕ್ಷಣ ಸಿಎಂ ಬದಲಾವಣೆ ಮಾಡ್ತಾರಾ. ಕೊರೊನಾ ಸಂಕಷ್ಟ ಇರುವ ಕಾರಣಕ್ಕೆ ರಾಜಕಾರಣ ಬೇಡ ಅಂತಾ ಸುಮ್ಮನಿದ್ದೇನೆ. ಇದೆಲ್ಲಾ ಮುಗಿದ ಮೇಲೆ ಮಾತನಾಡ್ತೇನೆ ಎಂದು ಹೇಳಿದ್ದಾರೆ. ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಚನ್ನಪಟ್ಟಣದ ಜನರು ಕುಡಿಯಲು ನೀರಿಲ್ಲ, ವೆಂಟಿಲೇಟರ್, ಆಕ್ಸಿಜನ್ […]

ಅಕ್ಷಯ ತದಿಗೆಯ ದಿನ ಎಳ್ಳು ತರ್ಪಣೆಯನ್ನು ಏಕೆ ಮಾಡುತ್ತಾರೆ?

Friday, May 14th, 2021
Ellu Tarpana

ಮೂರುವರೆ ಮುಹೂರ್ತಗಳ ಪೈಕಿ ಒಂದು ಪೂರ್ಣ ಮುಹೂರ್ತವಾಗಿರುವ ಅಕ್ಷಯ ತೃತೀಯದಲ್ಲಿ ಎಳ್ಳು ತರ್ಪಣೆ ನೀಡುವುದು, ಉದಕ ಕುಂಭದಾನ, ಮೃತ್ತಿಕಾ ಪೂಜೆ ಮಾಡುವುದು, ಅದೇ ರೀತಿ ದಾನ ನೀಡುವ ಪರಂಪರೆ ಇದೆ. ಇದರ ಹಿನ್ನೆಲೆಯ ಶಾಸ್ತ್ರವನ್ನು ನಾವು ತಿಳಿದುಕೊಳ್ಳೋಣ. ಪ್ರಸ್ತುತ ಲೇಖನದಲ್ಲಿ ಹೇಳಲಾದ ಅಧ್ಯಾತ್ಮಶಾಸ್ತ್ರವು, ಸರ್ವಸಾಮಾನ್ಯ ಕಾಲದಲ್ಲಿ ಪಾಲಿಸಬೇಕಾದ ಧರ್ಮದಲ್ಲಿ ಹೇಳಲಾದಶಾಸ್ತ್ರವಾಗಿದೆ. ಎಲ್ಲವೂ ಅನುಕೂಲಕರವಾಗಿದ್ದು ಧರ್ಮದಲ್ಲಿ ಹೇಳಿದಂತೆ ವರ್ತಿಸಬಹುದು, ಇದಕ್ಕೆ ‘ಸಂಪತ್ಕಾಲ’ ಎನ್ನಬಹುದು. ಇಲ್ಲಿ ಮಹತ್ವವಾದ ಅಂಶವೇನೆಂದರೆ, ಹಿಂದೂ ಧರ್ಮವು ಆಪತ್ಕಾಲಕ್ಕಾಗಿ ಧರ್ಮಾಚರಣೆಯಲ್ಲಿ ಕೆಲವು ಪರ್ಯಾಯಗಳನ್ನು ಹೇಳಿದೆ. ಅದನ್ನು […]

ಇವಳ ಗಂಡನ ನೀವು ಎಲ್ಲಿಯಾದರೂ ಕಂಡಿರಾ? 

Friday, May 14th, 2021
Ambika

ಕೋಲಾರ: ಕೊರೋನಾ ಅಲೆಯಲ್ಲಿ ಬೀದಿ ಬೀದಿಗಳು ನಿರ್ಜನ. ಕಾಲೇಜು, ಕಚೇರಿಗಳೂ ಬಂದಾಗಿ ನಿಂತ ದೃಶ್ಯ. ಒಬ್ಬರನೊಬ್ಬರ ಮುಖ ನೋಡಲೂ ಅಳುಕುವ ಪರಿಸ್ಥಿತಿ. ಸಾರಿಗೆ ಸಂಚಾರವೂ ಇಲ್ಲ. ಮಾತನಾಡಲು ಇನ್ನೊಬ್ಬ ಎದುರು ಕಾಣ ಸಿಗುತ್ತಿಲ್ಲ. ಕೊರೋನಾ ಸೋಂಕಿನ ಭೀತಿಯಲ್ಲಿ ಮನುಜ ತನ್ನ ಸರಿಸಾಟಿ ಮನುಜನನ್ನೇ ದೂರ ಇಟ್ಟು ಬಿಟ್ಟಿರುವ ದುರಂತ ಪರಿಸ್ಥಿತಿ! ಆದರೆ ಇಂಥ ಅತ್ಯಂತ ಕ್ಲಿಷ್ಟ ದಿನಗಳಲ್ಲಿಯೂ ಇಲ್ಲೊಬ್ಬಾಕೆ ತನ್ನ ಗಂಡನನ್ನು ಹುಡುಕಿಕೊಂಡು ಊರೂರು ಅಲೆಯುತ್ತಿರುವ ಕತೆ ಅತ್ಯಂತ ವಿಧ್ರಾವಕ ಎನಿಸುತ್ತದೆ. ಸ್ವಯಂಕೃತ ಅಪರಾಧಕ್ಕೆ ಶಿಕ್ಷೆಯನ್ನೂ ತಾನೇ […]

ತೋಟದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಸಿಡಿಲು ಬಡಿದು ರೈತ ಸಾವು

Thursday, May 13th, 2021
umesh

ಶಿವಮೊಗ್ಗ : ತೋಟದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಸಿಡಿಲು ಬಡಿದು ರೈತನೊಬ್ಬ ಸಾವನ್ನಪ್ಪಿರುವ ಘಟನೆ ಹೊಸನಗರ ತಾಲೂಕು ಹುಂಚ ಗ್ರಾಮಪಂಚಾಯಿತಿ ವ್ಯಾಪ್ತಿಯ ಹೊಂಡ್ಲಗದ್ದೆ ಸಮೀಪದ ಹಾಡಿಗದ್ದೆಯಲ್ಲಿ ಗುರುವಾರ ನಡೆದಿದೆ. ಹಾಡಿಗದ್ದೆಯ ಉಮೇಶ್(47) ಸಿಡಿಲು ಬಡಿದು ಮೃತಪಟ್ಟ ದುರ್ದೈವಿ. ತೋಟದಲ್ಲಿ ಕೆಲಸ ಮಾಡುವಾಗ ಸಿಡಿಲು ಬಡಿದಿದ್ದರಿಂದ ಉಮೇಶ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಮೃತರು ಪತ್ನಿ ಹಾಗೂ ಇಬ್ಬರು ಪುತ್ರರನ್ನು ಅಗಲಿದ್ದಾರೆ.

ಜ್ಯೋತಿಷಿ ಮಾತು ಕೇಳಿ ತಂದೆ-ತಾಯಿಯನ್ನು ಕಲ್ಲು ಎತ್ತಿಹಾಕಿ ಕೊಲೆ ಮಾಡಿದ 14ರ ಬಾಲಕ

Thursday, May 13th, 2021
Hanumanta rama

ಬೆಂಗಳೂರು : ಪೋಷಕರು ಬದುಕಿದ್ದರೆ ನಿನ್ನ ಜೀವನಕ್ಕೆ ಒಳ್ಳೆಯದಾಗಲ್ಲ ಎಂದು ಭವಿಷ್ಯ ನುಡಿದಿದ್ದ ಆ ಜ್ಯೋತಿಷಿಯ ಮಾತು ಕೇಳಿ  ಮಗನೇ ತಂದೆ-ತಾಯಿಯನ್ನು ಹತ್ಯೆ ಮಾಡಿದ ಘಟನೆ ಕರಿ ಹೋಬನಹಳ್ಳಿ ಎಂಬಲ್ಲಿ ನಡೆದಿದೆ. ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಕರಿ ಹೋಬನಹಳ್ಳಿ ಕಚೇರಿಯಲ್ಲಿ ಸೆಕ್ಯೂರಿಟಿ ಗಾರ್ಡ್ ಕೆಲಸಕ್ಕಿದ್ದ ಹನುಮಂತ ರಾಮ ಮತ್ತು ಪತ್ನಿ ಹೊನ್ನಮ್ಮ ಮಗನಿಂದಲೇ  ಕೊಲೆಯಾದವರು. ಕೊಲೆಯಾದ ದಂಪತಿಗಳಿಗೆ ಮೂವರು  ಗಂಡು ಮಕ್ಕಳು, ಎರಡನೆಯವ ಹದಿನಾಲ್ಕರ ಹರೆಯದಲ್ಲೆ ಗಾಂಜಾ ಸೇವನೆಯ ಚಟಕ್ಕೆ ಬಿದ್ದಿದ್ದ, ಜ್ಯೋತಿಷಿಯೊಬ್ಬ  ತಂದೆ ತಾಯಿಯಿಂದ ದೂರ ಇದ್ದರೆ ನಿನಗೆ ಒಳಿತು […]

ಕೋವಿಡ್ ಎರಡನೇ ಅಲೆಗೆ ಪಬ್ಲಿಕ್ ಟಿವಿ ಕ್ಯಾಮಾರಾಮನ್ ಬಲಿ, 10 ಲಕ್ಷ ರೂ. ಪರಿಹಾರ ನೀಡಿದ ಆಡಳಿತ ಮಂಡಳಿ

Thursday, May 13th, 2021
Basavaraj

ಚಿತ್ರದುರ್ಗ: ಕಳೆದ 5 ವರ್ಷಗಳಿಂದ  ಚಿತ್ರದುರ್ಗದಲ್ಲಿ ಪಬ್ಲಿಕ್ ಟಿವಿ ಕ್ಯಾಮಾರಾಮನ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಬಸವರಾಜ ಕೋಟಿ (43) ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ. ಕೋವಿಡ್ ಎರಡನೇ ಅಲೆಗೆ ತುತ್ತಾಗಿ ಕಳೆದ ಹದಿನೈದು ದಿನಗಳಿಂದ ಚಿತ್ರದುರ್ಗ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕೋಟಿ, ಚಿಕಿತ್ಸೆ ಫಲಕಾರಿಯಾಗದೇ ಇಂದು ಬೆಳಗ್ಗೆ ನಿಧನರಾಗಿದ್ದಾರೆ. ಮೃತ ಬಸವರಾಜ ಕೋಟಿ ಅವರಿಗೆ ಹತ್ತು ವರ್ಷದ ಓರ್ವ ಪುತ್ರ ಮತ್ತು ಹನ್ನೆರಡು ವರ್ಷದ ಖುಷಿ ಎಂಬ ಇಬ್ಬರು ಮಕ್ಕಳಿದ್ದರು, ಪತ್ನಿಯಾದ ಶಾಂತ ಸೇರಿದಂತೆ ಹೆತ್ತವರು ಹಾಗೂ ಅಪಾರ ಬಂಧಗಳನ್ನು ಅಗಲಿದ್ದಾರೆ. ಮೃತ ಬಸವರಾಜ್ […]