ಗುಜರಾತಿಗೆ ಹೋಗಿ ಜನಪ್ರಿಯತೆ ಕಳೆದುಕೊಂಡ ಕೇಜ್ರಿವಾಲ್

Tuesday, March 11th, 2014
Arvind-Kejriwa

ಅಹಮದಾಬಾದ್: ಇತ್ತೀಚೆಗೆ ಆಮ್ ಆದ್ಮಿ ಪಕ್ಷದ ನಾಯಕ ಅರವಿಂದ್ ಕೇಜ್ರಿವಾಲಾ ಅವರು ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರನ್ನು ಮುಖತಃ ಭೇಟಿಯಾಗಲು ಗುಜರಾತಿಗೆ ಹೋಗಿದ್ದರಲ್ಲ. ಅದರ ಪ್ರಭಾವ/ ಪರಿಣಾಮ ಗೋಚರವಾಗಿದೆ. ಆದರೆ ಅದು ಅವರಿಗೇ ಮುಳುವಾಗಿದೆ. ಕಳೆದ ವಾರ ನಾಲ್ಕು ದಿನಗಳ ಕಾಲ ಗುಜರಾತಿನಲ್ಲಿ ಅಡ್ಡಾಡಿದ ಅರವಿಂದ್ ಕೇಜ್ರಿವಾಲಾ ಭಾರಿ ಯಶಸ್ಸು ಸಾಧಿಸಿದರು ಎಂದು AAP ಬೆಂಬಲಿಗರು ಹೇಳಿಕೊಂಡಿದ್ದರೆ ಅವರ ಟೀಕಾಕಾರರು ಅದೊಂದು ದೊಡ್ಡ ಫ್ಲಾಪ್ ಷೋ ಎಂದು ಜರಿದಿದ್ದಾರೆ. ಇನ್ನು, ಟ್ವಿಟ್ಟರ್ ಮೂಲಕ ನಡೆದಿರುವ […]

ಆರ್‌ಎಲ್‌ಡಿ ಪಕ್ಷ ಸೇರಿದ ಜಯಪ್ರದಾ, ಅಮರ್ ಸಿಂಗ್

Monday, March 10th, 2014
Jaya prada

ನವದೆಹಲಿ: ನಟಿ, ರಾಜಕಾರಣಿ ಜಯಪ್ರದಾ ಮತ್ತು ಸಮಾಜವಾದಿ ಪಕ್ಷದ ಮಾಜಿ ನೇತಾರ ಅಮರ್ ಸಿಂಗ್ ಅವರು ಸೋಮವಾರ ರಾಷ್ಟ್ರೀಯ ಲೋಕ ದಳ ಪಕ್ಷಕ್ಕೆ ಸೇರಿದ್ದಾರೆ. ಇವರಿಬ್ಬರನ್ನೂ ಆರ್‌ಎಡಿ ನಾಯಕ ಅಜಿತ್ ಸಿಂಗ್ ಸ್ವಾಗತಿಸಿದ್ದಾರೆ. ಆರ್‌ಎಲ್‌ಡಿಗೆ ಸೇರ್ಪಡೆಯಾದ ನಂತರ ಮಾತನಾಡಿದ ಅಮರ್ ಸಿಂಗ್,  ಚರಣ್ ಸಿಂಗ್ ಅವರು ಈ ದೇಶಕ್ಕೆ ಹೆಚ್ಚಿನ ಕೊಡುಗೆಗಳನ್ನು ನೀಡಿದ್ದಾರೆ ಎಂದು ಹೇಳಿದ್ದಾರೆ. ಅದೇ ವೇಳೆ ಬಿಜೆಪಿ ಮತ್ತು ಕಾಂಗ್ರೆಸ್‌ನ ಮೇಲೆ ವಾಗ್ದಾಳಿ ನಡೆಸಿದ ಅವರು ಉಭಯ ಪಕ್ಷಗಳು ಉತ್ತರ ಪ್ರದೇಶದ ವಿಭಜನೆಗೆ ಯಾವುದೇ […]

ನಟಿ ಜೂಹಿ ಚಾವ್ಲಾ ಸೋದರ ಕೊನೆಗೂ ಬದುಕಿಗೆ ವಿದಾಯ

Monday, March 10th, 2014
Bobby-Chawla

ಮುಂಬೈ: ಬಾಲಿವುಡ್ ನಟಿ, ಪ್ರೇಮಲೋಕ ಖ್ಯಾತಿಯ ಜೂಹಿ ಚಾವ್ಲಾ ಅವರ ಸೋದರ ಕೊನೆಗೂ ಬದುಕಿಗೆ ವಿದಾಯ ಹೇಳಿದ್ದಾರೆ. ನಟಿ ಜೂಹಿ ಅವರ ಸೋದರ ಬಾಬ್ಬಿ ಚಾವ್ಲಾ ಅವರು ಸರಿಯಾಗಿ ನಾಲ್ಕು ವರ್ಷಗಳ ಹಿಂದೆ ತೀವ್ರ ಹೃದಯಾಘಾತಕ್ಕೆ ತುತ್ತಾದ ನಂತರ ಕೋಮಾದಲ್ಲಿಯೇ ಇದ್ದರು. ನಿನ್ನೆ ಭಾನುವಾರ ಮುಂಬೈನ Jaslok Hospital ನಲ್ಲಿ ಅವರು ಕೊನೆಯುಸಿರೆಳೆದರು. ಭಾನುವಾರವೇ ಬಾಬ್ಬಿ ಅಂತ್ಯಕ್ರಿಯೆ ನೇರವೇರಿದೆ. ಸಹೋದರನಾಗಿ ನಟಿ ಜೂಹಿ ಚಾವ್ಲಾಗೆ ಅತ್ಯಂತ ಹತ್ತಿರವಾಗಿದ್ದ ಬಾಬ್ಬಿ ನಿಧನದಿಂದ ಜೂಹಿ ಅಧೀರರಾಗಿದ್ದಾರೆ. ಸೋದರ ಕೋಮಾ ಸ್ಥಿತಿ […]

ಬಿಜೆಪಿಯಲ್ಲಿ ಟಿಕೆಟ್ ಗೊಂದಲ ಮೋದಿ ಪಾಲಿಗೆ ವಾರಣಸಿ ಪಕ್ಕಾ ಅಟಲ್‌ರ ಲಖನೌ ಲಕ್ ಯಾರಿಗೆ?

Monday, March 10th, 2014
Murli-Manohar-Joshi

ನವದೆಹಲಿ: ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಉತ್ತರಪ್ರದೇಶದ ವಾರಾಣಸಿ ಕ್ಷೇತ್ರದಿಂದ ಸ್ಪರ್ಧಿಸುವ ಬಗೆಗಿನ ಗೊಂದಲಗಳಿಗೆ ಭಾನುವಾರ ಬಹುತೇಕ ತೆರೆ ಬಿದ್ದಿದೆ. ಕೇಂದ್ರದ ಮಾಜಿ ಸಚಿವ, ಹಾಲಿ ಸಂಸದ ಡಾ. ಮುರಳಿ ಮನೋಹರ ಜೋಶಿ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ‘ಪಕ್ಷದ ವರಿಷ್ಠರು ಯಾವುದೇ ನಿರ್ಧಾರ ಕೈಗೊಂಡರೂ ಅದನ್ನು ನಾನು ಪಾಲಿಸುತ್ತೇನೆ’ ಎಂದು ಅವರು ನವದೆಹಲಿಯಲ್ಲಿ ತಿಳಿಸಿದ್ದಾರೆ. 13ರ ಸಭೆಯಲ್ಲಿ ನಿರ್ಧಾರ: ಮಾ.13ರಂದು ನವದೆಹಲಿಯಲ್ಲಿ ಬಿಜೆಪಿಯ ಕೇಂದ್ರೀಯ ಚುನಾವಣಾ ಸಮಿತಿ ಸಭೆ ನಡೆಯಲಿದೆ ಎಂದು ಅವರು ಹೇಳಿದ್ದಾರೆ.  […]

26 ಕೈಯಾಳುಗಳು ಅಂತಿಮ, ಲಕ್ಷ್ಮಿ, ನಿವೇದಿತ್, ನಿಲೇಕಣಿ, ರಮ್ಯಾ, ಸುರೇಶ್, ಕುಮಾರ್ ಕ್ಲಿಯರ್

Saturday, March 8th, 2014
Janardhana-poojary

ನವದೆಹಲಿ: ಕರ್ನಾಟಕದಿಂದ ಅತಿ ಹೆಚ್ಚು ಸ್ಥಾನ ನಿರೀಕ್ಷಿಸಿರುವ ಕಾಂಗ್ರೆಸ್ ಹೈಕಮಾಂಡ್ ಕೊನೆಗೂ 26 ಕ್ಷೇತ್ರಗಳ ಅಭ್ಯರ್ಥಿಗಳನ್ನು ಅಖೈರುಗೊಳಿಸಿದೆ. ಆಂತರಿಕ ಚುನಾವಣೆ ಮೂಲಕ ಆಯ್ಕೆ ಮಾಡಬೇಕಾದ ಮಂಗಳೂರು ಮತ್ತು ಬೆಂಗಳೂರು ಉತ್ತರ ಕ್ಷೇತ್ರಗಳ ಪೈಕಿ ಮಂಗಳೂರಿಗೆ ಜನಾರ್ದನ ಪೂಜಾರಿ ಅವರನ್ನೇ ಕಣಕ್ಕಿಳಿಸಲು ನಿರ್ಧರಿಸಿದೆ ಎಂದು ತಿಳಿದು ಬಂದಿದೆ. ಈ ಹಿಂದೆಯೇ ನಿರ್ಧರಿಸಿದ್ದಂತೆ ಎಲ್ಲ 9 ಹಾಲಿ ಸಂಸದರು ಟಿಕೆಟ್ ಗಿಟ್ಟಿಸಿದ್ದಾರೆ.  ಶುಕ್ರವಾರ ಸೋನಿಯಾ ಗಾಂಧಿ ಅವರ ನಿವಾಸದಲ್ಲಿ ನಡೆದ ಕೇಂದ್ರ ಚುನಾವಣಾ ಸಮಿತಿ ಸಭೆಯಲ್ಲಿ ಸುದೀರ್ಘ ಚರ್ಚೆ ನಂತರ […]

ಲೋಕಸಮರ: ಬಿಜೆಪಿಯ ಮೊದಲ ಪಟ್ಟಿ ಬಿಡುಗಡೆ, 4 ಹಾಲಿ ಸಂಸದರಿಗೆ ಕೊಕ್

Saturday, March 8th, 2014
BJP

ನವದೆಹಲಿ: ರಾಜ್ಯದ 28 ಲೋಕಸಭಾ ಕ್ಷೇತ್ರಗಳ ಪೈಕಿ 20 ಲೋಕಸಭಾ ಕ್ಷೇತ್ರಗಳಿಗೆ ಬಿಜೆಪಿಯು ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಶನಿವಾರ ಬಿಡುಗಡೆ ಮಾಡಿದ್ದು, ಮೊದಲ ಪಟ್ಟಿಯಲ್ಲಿ ನಾಲ್ವರು ಹಾಲಿ ಸಂಸದರಿಗೆ ಕೊಕ್ ನೀಡಲಾಗಿದೆ. ಅಭ್ಯರ್ಥಿಗಳ ಆಯ್ಕೆ ಸಂಬಂಧ ಇಂದು ದೆಹಲಿಯಲ್ಲಿ ನಡೆದ ಬಿಜೆಪಿ ಕೇಂದ್ರ ಚುನಾವಣಾ ಸಮಿತಿ ಸಭೆಯಲ್ಲಿ 20 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಅಂತಿಮಗೊಳಿಸಲಾಯಿತು. ಸಭೆಯ ಬಳಿಕ ಸುದ್ದಿಗೋಷ್ಠಿ ನಡೆಸಿದ ಬಿಜೆಪಿ ಪ್ರಧಾನ ಕಾರ್ಯದರ್ಶಿ ಅನಂತ್ ಕುಮಾರ್ ಅವರು ಮೊದಲ ಪಟ್ಟಿಯನ್ನು ಅಧಿಕೃತವಾಗಿ ಬಿಡುಗಡೆ ಮಾಡಿದರು. […]

ರಾಹುಲ್ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾದ ಆರೆಸ್ಸೆಸ್ಸ್

Friday, March 7th, 2014
Rahul-Gandhi

ನವದೆಹಲಿ: ಗಾಂಧಿಯವರ ಹತ್ಯೆಯಲ್ಲಿ ಆರೆಸ್ಸೆಸ್ಸ್ ಕೈವಾಡವಿದೆ ಎಂದು ಹೇಳಿರುವ ರಾಹುಲ್ ಗಾಂಧಿಯವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಆರೆಸ್ಸೆಸ್ಸ್ ಹೇಳಿದೆ. ರಾಹುಲ್ ಹೇಳಿಕೆಯ ಬಗ್ಗೆ ಪ್ರತಿಕ್ರಿಯಿಸಿದ ಆರೆಸ್ಸೆಸ್ಸ್ ಹಿರಿಯ ನೇತಾರ ರಾಮ್ ಮಾಧವ್, ರಾಹುಲ್ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ನೀಡುವುದಾಗಿ ಹೇಳಿದ್ದಾರೆ. ಆರೆಸ್ಸೆಸ್ಸ್ ಗಾಂಧೀಜಿಯವರನ್ನು ಹತ್ಯೆಗೈದಿತ್ತು. ಆಗ ಅವರೇ (ಬಿಜೆಪಿ) ಗಾಂಧಿ ಬಗ್ಗೆ ಮಾತನಾಡುತ್ತಿದ್ದಾರೆ. ಈ ಹಿಂದೆ ಅವರು ಸರ್ದಾರ್ ಪಟೇಲ್ ಮತ್ತು ಗಾಂಧೀಜಿಯವರನ್ನು ವಿರೋಧಿಸುತ್ತಿದ್ದರು ಎಂದು ಮಹಾರಾಷ್ಟ್ರದಲ್ಲಿ ನಡೆದ ರ್ಯಾಲಿಯಲ್ಲಿ ರಾಹುಲ್ ಹೇಳಿದ್ದರು.

ಕಿರಣ್‌ ಕುಮಾರ್‌ ರೆಡ್ಡಿ ಹೊಸ ಪಕ್ಷ

Friday, March 7th, 2014
Kiran-Kumar-Reddy

ನವದೆಹಲಿ: ತೆಲಂಗಾಣ ವಿಭಜನೆ ಖಂಡಿಸಿ ಆಂಧ್ರಪ್ರದೇಶದ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಕಿರಣ್‌ ಕುಮಾರ್‌ ರೆಡ್ಡಿ ಸಿಂಮಾಧ್ರ ಪ್ರದೇಶದಲ್ಲಿ ಹೊಸ ಪಕ್ಷ ರಚಿಸುವುದಾಗಿ ಗುರುವಾರ ತಿಳಿಸಿದ್ದಾರೆ. ರಾಜಮಹೇಂದ್ರಿಯಲ್ಲಿ ಮಾರ್ಚ್‌ 12ರಂದು ನಡೆಯಲಿರುವ ಬೃಹತ್‌ ಸಮಾವೇಶದಲ್ಲಿ ನೂತನ ಪಕ್ಷದ ನೀತಿ ನಿರ್ಧಾರಗಳು ಹಾಗೂ ಕಾರ್ಯಕ್ರಮಗಳನ್ನು ಪ್ರಕಟಿಸಲಾಗುವುದು ಎಂದು ಕಿರಣ್‌ ಕುಮಾರ್‌ ಹೇಳಿದ್ದಾರೆ. ಆಂಧ್ರಪ್ರದೇಶದ ವಿಭಜನೆಯನ್ನು ವಿರೋಧಿಸಿ ಕಿರಣ್‌ ಕುಮಾರ್‌ ರೆಡ್ಡಿ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದಲ್ಲದೇ ಕಾಂಗ್ರೆಸ್‌ ಪಕ್ಷವನ್ನೂ ತ್ಯಜಿಸಿದ್ದರು. ಕಿರಣ್‌ ಕುಮಾರ್‌ಗೆ ಕಾಂಗ್ರೆಸ್‌ ಪಕ್ಷದಿಂದ ಉಚ್ಚಾಟನೆಗೊಂಡಿದ್ದ […]

ಗುಜರಾತ್ ಅಭಿವೃದ್ಧಿ ಬಗ್ಗೆ ಮೋದಿ ಹೇಳುತ್ತಿರುವುದೆಲ್ಲ ಸುಳ್ಳು: ಕೇಜ್ರಿವಾಲ್

Friday, March 7th, 2014
Arvind-Kejriwal

ಅಹಮದಾಬಾದ್: ಪದೇಪದೆ ಗುಜರಾತ್ ಸಾಕಷ್ಟು ಅಭಿವೃದ್ಧಿ ಸಾಧಿಸಿದೆ ಎಂದು ಹೇಳಿಕೊಳ್ಳುತ್ತಿರುವ ಗುಜರಾತ್ ಮುಖ್ಯಮಂತ್ರಿ ಹಾಗೂ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರ ಹೇಳಿಕೆಯನ್ನು ದೆಹಲಿ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಸ್ಪಷ್ಟವಾಗಿ ತಳ್ಳಿಹಾಕಿದ್ದಾರೆ. ಗುಜರಾತ್ ಅಭಿವೃದ್ಧಿಯಾಗಿದೆ ಎಂದು ಮೋದಿ ಬಿಂಬಿಸಿಕೊಳ್ಳುತ್ತಿದ್ದಾರೆ. ಆದರೆ ವಾಸ್ಥವದಲ್ಲಿ ಗುಜರಾತ್‌ನಲ್ಲಿ ಯಾವುದೇ ಅಭಿವೃದ್ಧಿಯಾಗಿಲ್ಲ. ಅವರು ಹೇಳುತ್ತಿರುವುದೆಲ್ಲ ಸುಳ್ಳು ಎಂದು ಹೇಳಿರುವ ಆಮ್ ಆದ್ಮಿ ಪಕ್ಷದ ನಾಯಕ, ಗುಜರಾತ್ ಅಭಿವೃದ್ಧಿಗೆ ಸಂಬಂಧಿಸಿದ 16 ಪ್ರಶ್ನೆಗಳ ಪಟ್ಟಿಯೊಂದಿಗೆ ಗುಜರಾತ್ ಮುಖ್ಯಮಂತ್ರಿಯ ನಿವಾಸಕ್ಕೆ ಭೇಟಿ […]

ಲೋಕ ಸಮೀಕ್ಷೆಯಲ್ಲಿ ಮೋದಿ ಮುಂದು ರಾಗಾ ಹಿಂದೆ, ಎನ್‌ಡಿಎನತ್ತ ಮತದಾರ, ಯುಪಿಎ ಕಥೆ ಹರೋಹರ

Friday, March 7th, 2014
Narendra-Modi

ನವದೆಹಲಿ: ಹತ್ತು ವರ್ಷಗಳಿಂದ ಕೇಂದ್ರದಲ್ಲಿ ಅಧಿಕಾರದ ರುಚಿ ಅನುಭವಿಸುತ್ತಿರುವ ಕಾಂಗ್ರೆಸ್ ಈ ಬಾರಿ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅಬ್ಬರಕ್ಕೆ ಧೂಳೀಪಟವಾಗಲಿದೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟ ಗದ್ದುಗೆಯ ಸನಿಹ ಬಂದು ನಿಲ್ಲಲಿದೆ. ಎನ್‌ಡಿಎ 212- 232 ಸ್ಥಾನಗಳನ್ನು ಗೆದ್ದರೆ, ಯುಪಿಎ 119ರಿಂದ 139 ಸ್ಥಾನಗಳಿಗೆ ತೃಪ್ತಿಪಟ್ಟುಕೊಳ್ಳಲಿದೆ ಎಂದು ಸಿಎನ್‌ಎನ್‌ಐಬಿನ್- ಲೋಕನೀತಿ- ಸಿಎಸ್‌ಡಿಎಸ್ ಚುನಾವಣಾ ಪೂರ್ವ ಸಮೀಕ್ಷೆ ಭವಿಷ್ಯ ನುಡಿದಿದೆ. ಬಿಜೆಪಿ ಅತಿದೊಡ್ಡ ಪಕ್ಷ: ಒಂದು ವೇಳೆ ತಕ್ಷಣಕ್ಕೆ ಚುನಾವಣೆ ನಡೆದರೆ ಬಿಜೆಪಿ […]