ದೆಹಲಿಗೆ ಇನ್ನು ಜಂಗ್ ರಾಜ್ಯಭಾರ

Tuesday, February 18th, 2014
Najib--Jung

ನವದೆಹಲಿ: ದೆಹಲಿಯಲ್ಲಿ ಸೋಮವಾರ ರಾಷ್ಟ್ರಪತಿ ಆಳ್ವಿಕೆ ಜಾರಿಯಾಗಿದೆ. ಸಿಎಂ ಅರವಿಂದ ಕೇಜ್ರಿವಾಲ್ ರಾಜಿನಾಮೆಯನ್ನು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅಂಗೀಕರಿಸಿದ್ದಾರೆ. ಕೇಜ್ರಿವಾಲ್ ರಾಜಿನಾಮೆ ಅಂಗೀಕಾರ ಅಮಾನತಿನಲ್ಲಿ ವಿಧಾನಸಭೆ ದೆಹಲಿ ವಿಧಾನಸಭೆಯನ್ನು ಅಮಾನತಿನಲ್ಲಿಡಲಾಗಿದೆ ಎಂದು ಸಂಸತ್‌ನ ಎರಡೂ ಸದನಗಳಲ್ಲಿ ಕೇಂದ್ರ ಗೃಹ ಸಚಿವ ಸುಶೀಲ್‌ಕುಮಾರ್ ಶಿಂದೆ ಸ್ವಯಂಪ್ರೇರಿತ ಹೇಳಿಕೆ ನೀಡಿದ್ದಾರೆ.  ರಾಷ್ಟ್ರಪತಿ ಪ್ರಣಬ್ ಅವರು ಲೆಫ್ಟಿನೆಂಟ್ ಗವರ್ನರ್ ನಜೀಬ್ ಜಂಗ್ ಮೂಲಕ ದೆಹಲಿಯಲ್ಲಿ ಆಡಳಿತ ನಡೆಸಲಿದ್ದಾರೆ ಎಂದು ಲೆ.ಗವರ್ನರ್ ಕಾರ್ಯಾಲಯದ ಪ್ರಕಟಣೆ ತಿಳಿಸಿದೆ. ಕೇಜ್ರಿವಾಲ್ ಸರ್ಕಾರ ರಾಜಿನಾಮೆ ನೀಡಿದ ಬೆನ್ನಲ್ಲೇ […]

ರಾಜೀವ್ ಗಾಂಧಿ ಹಂತಕರಿಗೆ ಜೀವಾವಧಿ ಶಿಕ್ಷೆ

Tuesday, February 18th, 2014
Rajiv-Gandhi

ನವದೆಹಲಿ: ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹಂತಕರ ಗಲ್ಲು ಶಿಕ್ಷೆಯನ್ನು ಸುಪ್ರೀಂ ಕೋರ್ಟ್ ಜೀವಾವಧಿ ಶಿಕ್ಷೆಯಾಗಿ ಮಂಗಳವಾರ ಪರಿವರ್ತಿಸಿದೆ. ಕ್ಷಮಾದಾನ ಅರ್ಜಿ ವಿಲೇವಾರಿಯಲ್ಲಿ ವಿಳಂಬವಾದ ಹಿನ್ನೆಲೆಯಲ್ಲಿ ತಮ್ಮ ಗಲ್ಲು ಶಿಕ್ಷೆಯನ್ನು ಜೀವಾವಧಿ ಶಿಕ್ಷೆಯಾಗಿ ಪರಿವರ್ತಿಸಬೇಕು ಎಂದು ಮೂವರು ಅಪರಾಧಿಗಳು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ್ದ ಕೋರ್ಟ್ ಇಂದು ತೀರ್ಪು ಪ್ರಕಟಿಸಿದೆ. ‘ಮಾಜಿ ಪ್ರಧಾನಿ ದಿ.ರಾಜೀವ್ ಗಾಂಧಿ ಹಂತಕರಿಗೆ ಕ್ಷಮಾದಾನ ಇಲ್ಲ. ಅವರಿಗೆ ಗಲ್ಲು ಶಿಕ್ಷೆಯೇ ಸೂಕ್ತ’ ಎಂದು  ಸುಪ್ರೀಂಕೋರ್ಟ್ ಈ ಹಿಂದಿನ ವಿಚಾರಣೆಯಲ್ಲಿ ಅಭಿಪ್ರಾಯಪಟ್ಟಿತ್ತು. ಅಲ್ಲದೆ ಕೇಂದ್ರ […]

ತೆಲಂಗಾಣ ಗದ್ದಲದ ನಡುವೆ ಚಿದು ಬಜೆಟ್ ಮಂಡನೆ

Monday, February 17th, 2014
P.-Chidambaram

ನವದೆಹಲಿ: ತೆಲಂಗಾಣ ಸಂಸದರ ಹಾಗೂ ಸಚಿವರ ಗದ್ದಲದ ನಡುವೆಯೇ ಕೇಂದ್ರ ವಿತ್ತ ಸಚಿವ ಪಿ.ಚಿದಂಬರಂ ಅವರು ಸೋಮವಾರ ಯುಪಿಎ ಸರ್ಕಾರದ ಕೊನೆಯ ಮಧ್ಯಂತರ ಬಜೆಟ್(ಲೇಖಾನುದಾನ) ಮಂಡಿಸಿದರು. ಆದಾಯ ತೆರಿಗೆಯಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದರು. ತೆಲಂಗಾಣ ಪರ ಹಾಗೂ ವಿರೋಧದ ನಡುವೆಯೇ ಚಿದಂಬರಂ ಅವರು ನಾಲ್ಕು ತಿಂಗಳ ಅವಧಿಗಾಗಿ ಲೇಖಾನುದಾನ ಮಂಡಿದ್ದು, ವಿಶ್ವದ ಆರ್ಥಿಕ ಸ್ಥಿತಿ ಕುಸಿತ ಕಂಡಿದ್ದು, ಇದರ ಪರಿಣಾಮ ಭಾರತದ ಮೇಲೂ ಆಗಿದೆ ಎಂದಿದ್ದಾರೆ. ಆರ್ಥಿಕ ಪರಿಸ್ಥಿತಿ ಕುಸಿತದ ನಡುವೆಯೂ ಉಳಿತಾಯ ದರ ಶೇ.31.1ರಷ್ಟಿದೆ. […]

ಮಂಗಳೂರಿಗೆ 2 ಹೊಸ ರೈಲುಗಳ ಭಾಗ್ಯ !

Wednesday, February 12th, 2014
Manglore-Trains

ಹೊಸದಿಲ್ಲಿ: ರೈಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆ ಅವರು ಲೋಕಸಭೆಯಲ್ಲಿಂದು ಮಂಡಿಸಿರುವ 2014-15ರ ಸಾಲಿನ ಮಧ್ಯಾಂತ್ರ ರೈಲ್ವೆ ಬಜೆಟ್‌ನಲ್ಲಿ ಮಂಗಳೂರಿಗೆ ಎರಡು ಹೊಸ ರೈಲುಗಳ ಭಾಗ್ಯ ಒದಗಿ ಬಂದಿದೆ. ಈ ಎರಡು ಹೊಸ ರೈಲುಗಳೆಂದರೆ ಮಂಗಳೂರು – ಮಡಗಾಂವ್‌ ಇಂಟರ್‌ ಸಿಟಿ (ದಿನನಿತ್ಯ) ರೈಲು ಮತ್ತು ಮಂಗಳೂರು – ಕಾಚಿಗುಡ ರೈಲು. ಮಂಗಳೂರು – ಕಾಚಿಗುಡ ರೈಲು ಕೊಯಮುತ್ತೂರು, ರೆಣಿಂತಾ ಮತ್ತು ಗೂಟಿ ಮಾರ್ಗವಾಗಿ ಸಾಗಲಿದೆ. ಈ ಎರಡೂ ಹೊಸ ರೈಲುಗಳಿಗೆ ಸ್ವತಃ ಸಚಿವ ಖರ್ಗೆ ಅವರೇ ಫೆ.23 […]

ಕೇಂದ್ರ ಮಧ್ಯಂತರ ರೇಲ್ವೆ ಬಜೆಟ್ -2014 ಮಂಡನೆ

Wednesday, February 12th, 2014
Mallikarjun-karge

ನವದೆಹಲಿ: ಲೋಕಸಭೆಯಲ್ಲಿ ತೆಲಂಗಾಣ ಗದ್ದಲದ ನಡುವೆಯೇ ಯುಪಿಎ-2 ಸರ್ಕಾರದ ಮಧ್ಯಂತರ ಬಜೆಟ್ ಮಂಡನೆಯಾಗಿದೆ. ಬುಧವಾರ ರೇಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆ ಅವರು 4 ತಿಂಗಳುಗಳಿಗಾಗಿ ಇರುವ ಮಧ್ಯಂತರ ಬಜೆಟ್‌ನ್ನು ಲೋಕಸಭೆಯಲ್ಲಿ ಮಂಡಿಸಿದ್ದು, ಖರ್ಗೆ ಅವರ ಪಾಲಿಗೆ ಇದು ಚೊಚ್ಚಲ ಬಜೆಟ್ ಮಂಡನೆಯಾಗಿದೆ. ಬಜೆಟ್ ಮಂಡನೆಗೆ ಮುನ್ನ “ಕಳಬೇಡ ಕೊಲಬೇಡ” ವಚನ ಪಠಿಸಿದ ಸಚಿವ ಖರ್ಗೆ , ದೇಶದ ಅಭಿವೃದ್ಧಿಗೆ ರೇಲ್ವೇ ವಿಕಾಸ ಅವಶ್ಯಕ ಎಂದು ಅಭಿಪ್ರಾಯ ಪಟ್ಟಿದ್ದಾರೆ. ರೇಲ್ವೆ ಬಜೆಟ್ ಮುಖ್ಯಾಂಶಗಳು ಜಮ್ಮು ಕಾಶ್ಮೀರದಲ್ಲಿ ಸಂಪರ್ಕ ಕಲ್ಪಿಸಲು […]

6 ಸೀಮಾಂಧ್ರ ಸಂಸದರ ಉಚ್ಚಾಟನೆ

Tuesday, February 11th, 2014
Six-simandhra

ನವದೆಹಲಿ: ಅಖಂಡ ಆಂಧ್ರಪ್ರದೇಶಕ್ಕೆ ಆಗ್ರಹಿಸಿ ಕಾಂಗ್ರೆಸ್ನ 6 ಸೀಮಾಂಧ್ರ ಸಂಸದರು ಸ್ವಪಕ್ಷದ ವಿರುದ್ಧವೇ ಅವಿಶ್ವಾಸ ಗೊತ್ತುವಳಿ ಮಂಡಿಸುವ ಪ್ರಸ್ತಾಪ ಹಿನ್ನೆಲೆಯಲ್ಲಿ ಆರು  ಸಂಸದರನ್ನು ಯುಪಿಎ ಸರ್ಕಾರ ಮಂಗಳವಾರ ಅಮಾನತುಗೊಳಿಸಿದೆ. ತೆಲಂಗಾಣ ಪ್ರತ್ಯೇಕ ರಾಜ್ಯ ರಚನೆ ವಿರೋಧಿಸಿ ಸೀಮಾಂಧ್ರ ಸಂಸದರು ಉಭಯ ಸದನಗಳಲ್ಲಿ ವಿರೋಧಿಸುತ್ತಾ ಬಂದಿದ್ದರು. ಕಾಂಗ್ರೆಸ್ ವಿರುದ್ಧವೇ ಅವಿಶ್ವಾಸ ಗೊತ್ತುವಳಿ ಮಂಡಿಸಲು ಮುಂದಾಗಿದ್ದ ಹಿನ್ನೆಲೆಯಲ್ಲಿ ಪಕ್ಷ ವಿರೋಧಿ ಚಟುವಟಿಕೆ ನಡೆಸುತ್ತಿರುವ ಆರೋಪದಡಿಯಲ್ಲಿ ಕಾಂಗ್ರೆಸ್ನ ಸೀಮಾಂಧ್ರ ಸಂಸದರಾದ ರಾಯಪಾಟಿ ಸಾಂಬಶಿವರಾವ್, ಸಬ್ಬಮ್ ಹರಿ, ಲಗಡಪಾಟಿ ರಾಜಗೋಪಾಲ್, ಉಂಡವಲ್ಲಿ ಅರುಣ್ […]

ಸಂಸತ್‌ನಲ್ಲಿ ನಿಲ್ಲದ ತೆಲಂಗಾಣ ಗಲಾಟೆ

Tuesday, February 11th, 2014
Pranab-Mukherjee

ನವದೆಹಲಿ: ಸಂಸತ್ ಅಧಿವೇಶನದ ಕಲಾಪಗಳು ಪೋಲಾಗುತ್ತಿರುವ ನಡುವೆಯೇ ವಿವಾದಿತ ತೆಲಂಗಾಣ ವಿಧೇಯಕಕ್ಕೆ ಸೋಮವಾರ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಒಪ್ಪಿಗೆ ಸೂಚಿಸಿದ್ದಾರೆ. ಮಂಗಳವಾರ ರಾಜ್ಯಸಭೆಯಲ್ಲಿ ಮಸೂದೆ ಮಂಡನೆಯಾಗುವ ಸಾಧ್ಯತೆಯಿದೆ. ಸೋಮವಾರ ಒಂದೆಡೆ ಮಸೂದೆಗೆ ರಾಷ್ಟ್ರಪತಿಯವರು ಅಂಕಿತ ಹಾಕಿದರೆ, ಮತ್ತೊಂದೆಡೆ ರಾಜ್ಯಸಭೆ, ಲೋಕಸಭೆಯಲ್ಲಿ ಸದಸ್ಯರು ನಡೆಸಿದ ಗದ್ದಲ ಅತಿರೇಕಕ್ಕೆ ಹೋದವು. ತಾವು ಸದನದಲ್ಲಿದ್ದೇವೆ ಎಂಬುದನ್ನೂ ಸಂಸದರು ಮರೆತರು. ಈ ವರ್ತನೆಗೆ ತೀವ್ರ ಅಸಮಾಧಾನಗೊಂಡ ರಾಷ್ಟ್ರಪತಿ ಪ್ರಣಬ್ ಅವರು, ಸಂಸತ್‌ನಲ್ಲಿ ಹೇಗೆ ವರ್ತಿಸಬೇಕು ಎಂಬ ಬಗ್ಗೆ ಸಲಹೆ ನೀಡಿದರಾದರೂ, ಓಗೊಡದ ಸಂಸದರು […]

ಫಿಕ್ಸಿಂಗ್ ಹಗರಣದಲ್ಲಿ ಧೋನಿ

Tuesday, February 11th, 2014
Mahendra-Singh-Dhoni

ನವದೆಹಲಿ: ಐಪಿಎಲ್ ಮ್ಯಾಚ್‌ಫಿಕ್ಸಿಂಗ್ ಮತ್ತು ಬೆಟ್ಟಿಂಗ್ ಹಗರಣದಲ್ಲಿ ಮಹೇಂದ್ರ ಸಿಂಗ್ ಧೋನಿ ಕೂಡಾ ಭಾಗಿಯಾಗಿದ್ದಾರೆ ಎಂದು ಬುಕ್ಕಿಯೊಬ್ಬರು ಆರೋಪಿಸಿದ್ದಾರೆ. ಐಪಿಎಲ್ ಬೆಟ್ಟಿಂಗ್ ಹಗರಣದಲ್ಲಿ ಶ್ರೀನಿವಾಸನ್ ಅಳಿಯ ಗುರುನಾಥ್ ಮೇಯಪ್ಪನ್ ಆರೋಪಿ ಜತೆಗೆ  ಅವರು ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ತಂಡದ ಭಾಗವೂ ಹೌದು ಎನ್ನುವುದು ಸಾಬೀತಾಗಿದೆ ಎಂದು ಸುಪ್ರೀಂಕೋರ್ಟ್ ನೇಮಿಸಿದ ನ್ಯಾ. ಮುಕುಲ್ ಮುದ್‌ಗಲ್ ನೇತೃತ್ವದ ತ್ರಿಸದಸ್ಯ  ಸಮಿತಿ ಘೋಷಿಸಿದೆ . ಐಪಿಎಲ್ ಮ್ಯಾಚ್‌ಫಿಕ್ಸಿಂಗ್ ಬಗ್ಗೆ ಪ್ರಸ್ತುತ ಸಮಿತಿ ಸೋಮವಾರ 170 ಪುಟಗಳ ಸುದೀರ್ಘ ವರದಿಯನ್ನು ಸಲ್ಲಿಸಿತ್ತು. […]

ಮೊಯ್ಲಿ, ದಿಯೋರಾ, ಅಂಬಾನಿ ವಿರುದ್ಧ ಎಫ್‌ಐಆರ್‌ಗೆ ಸೂಚನೆ

Tuesday, February 11th, 2014
Arvind-Kejriwal

ನವದೆಹಲಿ: ಮುರಳಿ ದಿಯೋರಾ, ವೀರಪ್ಪ ಮೊಯ್ಲಿ, ವಿ.ಕೆ ಸಿಬಲ್ , ಮುಖೇಶ್ ಅಂಬಾನಿ ಮತ್ತು ರಿಲಾಯನ್ಸ್ ಇಂಡಸ್ಟ್ರೀಸ್ ವಿರುದ್ಧ ಎಫ್‌ಐಆರ್ ದಾಖಲಿಸಲು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಭ್ರಷ್ಟಾಚಾರ ನಿಗ್ರಹ ದಳಕ್ಕೆ ಸೂಚನೆ ನೀಡಿದ್ದಾರೆ. ಮಂಗಳವಾರ ದೆಹಲಿಯಲ್ಲಿ ಸುದ್ದಿಗೋಷ್ಠಿನ್ನುದ್ದೇಶಿಸಿ ಮಾತನಾಡಿದ ಅರವಿಂದ್ ಕೇಜ್ರಿವಾಲ್ ಅನಿಲ ಬೆಲೆ ಹೆಚ್ಚಳ ರಿಲಾಯನ್ಸ್ ಕಂಪನಿಯೇ ಕಾರಣ ಎಂದು ಹೇಳಿದ್ದಾರೆ. ರಿಲಾಯನ್ಸ್ ಕಂಪನಿ ಅನಿಲ ಬಾವಿ ಗುತ್ತಿಗೆಯ ವಿಚಾರದಲ್ಲಿ ಕೇಂದ್ರ ಗೋಲ್‌ಮಾಲ್ ನಡೆಸಿದೆ ಹಾಗು ರಿಲಾಯನ್ಸ್ ಕಂಪನಿ ದೇಶದಲ್ಲಿ ಅನಿಲವನ್ನು ಕೃತಕ ಸಂಗ್ರಹದಲ್ಲಿರಿಸಿದೆ […]

20ರೊಳಗೆ ಜಿಪಿಎಸ್ ಕಡ್ಡಾಯ

Monday, February 10th, 2014
GPS

ನವದೆಹಲಿ:  ಫೆ.20ರೊಳಗೆ ಜಿಪಿಎಸ್ ಸಾಧನ ಅಳವಡಿಸಿ. ಇದು ಕೇಂದ್ರ ಸರ್ಕಾರ ಸಾರ್ವಜನಿಕ ಸಾರಿಗೆ ವಾಹನಗಳಿಗೆ ನೀಡಿರುವ ಗಡುವು. 10 ಲಕ್ಷಕ್ಕಿಂತ ಅಧಿಕ ಜನಸಂಖ್ಯೆಯುಳ್ಳ ಪ್ರಮುಖ ನಗರಗಳಲ್ಲಿ ಸಂಚರಿಸುವ ವಾಹನಗಳು ಜಿಪಿಎಸ್ ವ್ಯವಸ್ಥೆ ಹೊಂದಿರಲೇಬೇಕು ಎಂದು ಕೇಂದ್ರ ಸಾರಿಗೆ ಸಚಿವಾಲಯ ಆದೇಶ ನೀಡಿದೆ. ಸಾರ್ವಜನಿಕ ಸಾರಿಗೆ ವಾಹನಗಳ ಮಾಲೀಕರು 20ರೊಳಗೆ ತಮ್ಮ ವಾಹನಗಳಲ್ಲಿ ಜಿಪಿಎಸ್(ಗ್ಲೋಬಲ್ ಪೊಸಿಷನಿಂಗ್ ಸಿಸ್ಟಂ) ಅಳವಡಿಸಬೇಕು. ತಪ್ಪಿದರೆ ಅಂಥವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದೂ ಸಚಿವಾಲಯ ಎಚ್ಚರಿಕೆ ನೀಡಿದೆ. ಈ ಹಿಂದೆ ಜಿಪಿಎಸ್ ಅಳವಡಿಕೆಗೆ […]