ಮೀನುಗಾರನನ್ನು ತಲೆಕೆಳಗೆ ಮಾಡಿ ನೇತು ಹಾಕಿ ಹಲ್ಲೆ ನಡೆಸಿದ ಆರು ಮಂದಿಯ ಬಂಧನ

Thursday, December 23rd, 2021
andra Fisherman

ಮಂಗಳೂರು :  ಮೀನುಗಾರನೋರ್ವನನ್ನು ಪರಿಚಯಸ್ಥರೇ ಮೊಬೈಲ್ ಕಳ್ಳತನ ಮಾಡಿರುವ ಆರೋಪ ಹೊರಿಸಿ ತಲೆಕೆಳಗೆ ಮಾಡಿ ನೇತು ಹಾಕಿದ್ದಲ್ಲದೆ ಗಂಭೀರವಾಗಿ ಹಲ್ಲೆ ನಡೆಸಿರುವ ಅಮಾನವೀಯ ಕೃತ್ಯ ಎಸಗಿದ ಆರು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ದೌರ್ಜನ್ಯಕ್ಕೊಳಗಾದ ಮೀನುಗಾರನ ವೀಡಿಯೋವೊಂದು ವೈರಲ್ ಆದ ಹಿನ್ನೆಲೆಯಲ್ಲಿ ವಿಚಾರಣೆ ಆರಂಭಿಸಿದ್ದ ಮಂಗಳೂರು ಪೊಲೀಸರು, ಆಂಧ್ರ ಪ್ರದೇಶ ಮೂಲದ ವೈಲ ಶೀನು (32) ಎಂಬಾತ ನೀಡಿದ ದೂರಿನ ಮೇರೆಗೆ ಆರು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ. ಕೊಂಡೂರು ಪೋಲಯ್ಯ(23), ಅವುಲು ರಾಜ್ ಕುಮಾರ್(26), ಕಾಟಂಗರಿ ಮನೋಹರ್(21), ವೂಟುಕೋರಿ ಜಾಲಯ್ಯ(30), ಕರಪಿಂಗಾರ ರವಿ(27) ಹಾಗೂ […]

ಹೊಸ ವರ್ಷಾಚರಣೆ ಮತ್ತು ಪಾರ್ಟಿಗಳನ್ನು ನಿಷೇಧಿಸಲು ಮನವಿ

Thursday, December 23rd, 2021
HJS

ಮಂಗಳೂರು  : ಹೊಸ ವರ್ಷಾಚರಣೆಯ ನೆಪದಲ್ಲಿ ಡಿಸೆಂಬರ್ 31 ರ ರಾತ್ರಿ ಹೊಸ ವರ್ಷಾಚರಣೆಯ ನೆಪದಲ್ಲಿ ಆಗುವ ಅಯೋಗ್ಯ ಆಚರಣೆ ಮತ್ತು ಸಮಾಜದ ಸ್ವಾಸ್ಥ್ಯ ಕಾಪಾಡಲು ಆಗ್ರಹಿಸಿ ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳಿಗೆ ಮತ್ತು ಪೊಲೀಸ್ ಕಮಿಶನರ್ ಇವರಿಗೆ ಮನವಿ. ಮಂಗಳೂರು : ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಹೊಸ ವರ್ಷಾಚರಣೆಯ ನೆಪದಲ್ಲಿ ಡಿಸೆಂಬರ್ 31 ರ ರಾತ್ರಿ ನಡೆಯುವ ಹೊಸ ವರ್ಷಾಚರಣೆ ಮತ್ತು ಪಾರ್ಟಿಗಳನ್ನು ನಿಷೇಧಿಸಲು ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳಾದ ಶ್ರೀ ರಾಜೇಂದ್ರ ಮತ್ತು […]

ಹಿಂದೂಗಳನ್ನು ಮತಾಂತರ ಮಾಡುವ ಧಂದೆಗೆ ಈ ಕಾನೂನಿಂದ ದೊಡ್ಡ ಅಘಾತ ಆಗಿದೆ : ಜಗದೀಶ್ ಶೇಣವ

Wednesday, December 22nd, 2021
Jagadisha Senava

ಮಂಗಳೂರು : ಅನೇಕ ಮತಾಂತರದ ಮಿಷನರಿಗಳು ಅತೀ ಬಡವ ಹಿಂದುಗಳನ್ನು ಬಲವಂತ, ಆಮಿಷ ಆಸೆಯೊಡ್ಡಿ ಮತಾಂತರ ಮಾಡಿದೆ  ಅಂತಹವರಿಗೆ ಈ ಕಾನೂನಿಂದ ದೊಡ್ಡ ಅಘಾತ ಆಗಿದೆ ಎಂದು ಬಿಜೆಪಿ ಜಿಲ್ಲಾ ವಕ್ತಾರ ಜಗದೀಶ್ ಶೇಣವ ಹೇಳಿದ್ದಾರೆ. ಪತ್ರಿಕಾಘೋಷ್ಠಿಯಲ್ಲಿ ಮಾತನಾಡಿದ ಅವರು,  ಬಿಜೆಪಿ ಕಾರ್ಯಕರ್ತರ ಬಹುನಿರೀಕ್ಷಿತ ಮತಾಂತರ ಮಸೂದೆ ಮಂಡಿಸಿದ್ದು, ಈ ಕಾಯ್ದೆ ಮಂಡಿಸಿದ ಬೊಮ್ಮಾಯಿ ಸರ್ಕಾರಕ್ಕೆ ದ‌ಕ ಜಿಲ್ಲಾ ಬಿಜೆಪಿ ಅಭಿನಂದನೆ ಸಲ್ಲಿಸುತ್ತದೆ ಎಂದು ಶೇಣವ ಹೇಳಿದರು. ಕೇವಲ ಒಂದು ಸಾವಿರ ಎರಡು ಸಾವಿರ ರೂಪಾಯಿ, ಐನೂರು ರೂಪಾಯಿ ಮಾತ್ರೆ ನೀಡಿ. ಅದರಿಂದ ಕಾಯಿಲೆ […]

ಅಂಗಡಿಯಲ್ಲಿ ಗ್ರಾಮ ಪಂಚಾಯತ್ ಮಾಜಿ ಸದಸ್ಯ ನೇಣು ಬಿಗಿದುಕೊಂಡು ಆತ್ಮಹತ್ಯೆ

Wednesday, December 22nd, 2021
bojappa

ಸುಳ್ಯ : ತನ್ನ ಅಂಗಡಿಯಲ್ಲೇ ಗ್ರಾಮ ಪಂಚಾಯತ್ ಮಾಜಿ ಸದಸ್ಯರೋರ್ವರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಸುಳ್ಯ ತಾಲೂಕಿನ ಮರ್ಕಂಜ ಗ್ರಾಮದಲ್ಲಿ ವರದಿಯಾಗಿದೆ. ಮರ್ಕಂಜ ಗ್ರಾಮದ ಕಾಯರ ನಿವಾಸಿ ಭೋಜಪ್ಪ (48) ಆತ್ಮಹತ್ಯೆ ಮಾಡಿಕೊಂಡವರು ಎಂದು ತಿಳಿದುಬಂದಿದೆ. ಅವರು ಮರ್ಕಂಜ ಗ್ರಾಮ ಪಂಚಾಯತ್ ಮಾಜಿ ಸದಸ್ಯರಾಗಿದ್ದರು. ಭೋಜಪ್ಪ ಅವರು ಅಡ್ತಲೆಯಲ್ಲಿ ಅಂಗಡಿ ನಡೆಸುತ್ತಿದ್ದು, ತನ್ನ ಅಂಗಡಿಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಅನಾರೋಗ್ಯದಿಂದ ಬಳಲುತ್ತಿದ್ದರು ಎಂದು ಸ್ಥಳೀಯರು ತಿಳಿಸಿದ್ದಾರೆ. ಮೃತರು ಪತ್ನಿ, ಪುತ್ರ-ಪುತ್ರಿ ಸಹಿತ ಅಪಾರ ಬಂಧುಬಳಗವನ್ನು ಅಗಲಿದ್ದಾರೆ. […]

ಪೆರಿಯ ಕೇಂದ್ರೀಯ ವಿಶ್ವವಿದ್ಯಾಲಯದ 5ನೇ ಘಟಿಕೋತ್ಸವದ ಪದವಿ ಪ್ರದಾನ

Wednesday, December 22nd, 2021
periya-convocation

ಕಾಸರಗೋಡು : ಶಾಲಾ-ಕಾಲೇಜುಗಳು ದೇಶದ ಭವಿಷ್ಯ ರೂಪಿಸುವ ವೇದಿಕೆಗಳಾಗಿದ್ದು, ಜ್ಞಾನದಿಂದ ಬೆಳಗುವ ಶ್ರೀ ನಾರಾಯಣ ಗುರುಗಳ ವಚನಗಳು ಎಲ್ಲರಿಗೂ ಸ್ಫೂರ್ತಿ ಎಂದ ಅವರು ತಮ್ಮ ಭಾಷಣದಲ್ಲಿ ಕೇರಳದ ಸಾಕ್ಷರತೆ, ಶಿಕ್ಷಣ ಮತ್ತು ಮಹಿಳಾ ಶಿಕ್ಷಣವನ್ನು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಶ್ಲಾಘಿಸಿದರು. ಮಂಗಳವಾರ ಪೆರಿಯ ತೇಜಸ್ವಿನಿ ಹಿಲ್ಸ್‌ನಲ್ಲಿ ನಡೆದ ಕೇಂದ್ರೀಯ ವಿಶ್ವವಿದ್ಯಾಲಯದ 5ನೇ ಘಟಿಕೋತ್ಸವದ ಪದವಿ ಪ್ರದಾನ ನೆರವೇರಿಸಿ ಮಾತನಾಡಿ, ಶ್ರೀ ನಾರಾಯಣ ಗುರುಗಳ ‘ಮಹಾ ಕವಿ ವಲ್ಲತ್ತೋಳ್ ಅವರಿಂದ ಜ್ಞಾನೋದಯ’ ತಾಯಿಯ ವಂದನೆಗಳು ಎಂಬ ಕವಿತೆಯನ್ನು ಪ್ರಸ್ತಾಪಿಸಿದರು. ಕೋವಿಡ್ ಆರಂಭದಲ್ಲಿ ಕಳೆದ […]

ಕಾಲೇಜಿಗೆ ಹೋದ ಯುವತಿ ಮನೆಗೆ ಮರಳಿ ಬಾರದೆ ನಾಪತ್ತೆ

Wednesday, December 22nd, 2021
Supriya

ಉಡುಪಿ : ಮನೆಯಿಂದ ಕಾಲೇಜಿಗೆ ಹೋದ ಯುವತಿಯೊಬ್ಬಳು  ಡಿ.15ರಂದು ವರು ಮನೆಗೆ ಮರಳಿ ಬಾರದೆ ನಾಪತ್ತೆಯಾಗಿದ್ದಾರೆ ಎಂದು ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿದೆ. ಕಾರ್ಕಳ ತಾಲೂಕು ಮಾಳ ಗ್ರಾಮದ ಹುಕ್ರಟ್ಟೆ ಬೆಟ್ಟು ನಿವಾಸಿ ಸುಪ್ರಿಯಾ (18) ಕಾಣೆಯಾದ ಯುವತಿ. ಈಕೆ 5 ಅಡಿ 2 ಇಂಚು ಎತ್ತರ, ಗೋಧಿ ಮೈಬಣ್ಣ, ಸಾಧಾರಣ ಶರೀರ ಹೊಂದಿದ್ದು, ಕನ್ನಡ ಹಾಗೂ ತುಳು ಭಾಷೆ ಮಾತನಾಡುತ್ತಾರೆ. ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಕಾರ್ಕಳ ವೃತ್ತ ಕಚೇರಿ ದೂರವಾಣಿ ಸಂಖ್ಯೆ: 08258-231083, 9480805435, ಕಾರ್ಕಳ ಗ್ರಾಮಾಂತರ ಠಾಣೆ […]

ಖಾಸಗಿ ಶಾಲೆ ಪರ ಲಾಬಿಗಳಿಂದ ಪಂಜಿಮೊಗರು ಶಾಲೆ ಮುಚ್ಚಿಸುವ ಪ್ರಯತ್ನ : ಪೋಷಕರ ಪ್ರತಿಭಟನೆ

Tuesday, December 21st, 2021
panjimogaru

ಮಂಗಳೂರು  : ಪಂಜಿಮೊಗರು ಸರಕಾರಿ ಶಾಲೆಯಲ್ಲಿ ಶಿಕ್ಷಣ ಪೂರಕ ವಾತಾವರಣ ಇಲ್ಲವಾಗಿದ್ದು, ಇಲ್ಲಿನ ಮುಖ್ಯೋಪಾದ್ಯಾಯಿನಿ ಹಾಗೂ ಶಿಕ್ಷಕರ ಗುಂಪೊಂದು ಪೋಷಕರ, ಎಸ್.ಡಿ.ಎಂ.ಸಿ ಸದಸ್ಯರ ಯಾವುದೇ ಮಾತಿಗೆ ಬೆಲೆ ಕೊಡದೆ ಸರ್ವಾಧಿಕಾರಿ ವರ್ತನೆ ತೋರುತ್ತಿದ್ದಾರೆ, ಮಕ್ಕಳಿಗೆ ತಾರತಮ್ಯ, ದೈಹಿಕ ಹಲ್ಲೆ, ದೂರು ನೀಡಿದ ವಿದ್ಯಾರ್ಥಿಗಳಿಗೆ ಮಾನಸಿಕ ಹಿಂಸೆ, ಗುಣಮಟ್ಟದ ಶಿಕ್ಷಣದ ಕೊರತೆ ಹಲವಾರು ದೋಷಗಳಿದ್ದು ಈ ಬಗ್ಗೆ ಶಿಕ್ಷಣ ಇಲಾಖೆಗೆ ಹಲವಾರು ಮನವಿ ನೀಡಿದರೂ ಯಾವೂದೇ ಕ್ರಮ ಕೈಗೊಳ್ಳದ ಕಾರಣ ಇಂದು ಕೊಟ್ಟಾರ ಡಿಡಿಪಿಐ ಕಛೇರಿ ಮುಂಭಾಗ ಮಕ್ಕಳೊಂದಿಗೆ […]

ಡಿ.28 ರಂದು ದಕ್ಷಿಣ ಕನ್ನಡ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಸಮಾವೇಶ ; ಲಾಂಛನ ಬಿಡುಗಡೆ

Tuesday, December 21st, 2021
Lanchana

ಧರ್ಮ ಸ್ಥಳ : ದಕ್ಷಿಣ ಕನ್ನಡ ಪತ್ರಕರ್ತರ ಸಮ್ಮೇಳನ ಮಾದರಿ ಯಶಸ್ವಿ ಸಮ್ಮೇಳನ ವಾಗಿ ಮೂಡಿ ಬರಲಿ ಎಂದು ಶ್ರೀ ಧರ್ಮ‌ಸ್ಥಳ ಕ್ಷೇತ್ರದ  ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ‌ಹೆಗ್ಗಡೆ ತಿಳಿಸಿದ್ದಾರೆ. ಮಂಗಳೂರಿನ ಕುದ್ಮುಲ್  ರಂಗ ರಾವ್ ಸಭಾಂಗಣದಲ್ಲಿ ಡಿ.28 ರಂದು ನಡೆಯಲಿರು ವ ದಕ್ಷಿಣ ಕನ್ನಡ ಕಾರ್ಯ ನಿರತ ಸಂಘದ ಜಿಲ್ಲಾ ಸಮಾವೇಶ ದ ಲಾಂಛನ ವನ್ನು ‌ಸೋಮವಾರ ಶ್ರೀ ಧರ್ಮ‌ಸ್ಥಳ ಕ್ಷೇತ್ರದ  ಶ್ರೀ ಕ್ಷೇತ್ರದಲ್ಲಿಂದು ಬಿಡುಗಡೆಗೊಳಿ‌ಸಿ ಮಾತನಾಡಿದರು. ದ.ಕ ಜಿಲ್ಲಾ ಕಾರ್ಯ ನಿರತ ಷತ್ರಕರ್ತರ ಸಂಘ ಕ್ರೀಯಾಶೀಲ […]

ಬಂಟವಾಳ ಕಾಶೀ ಮಠದ ವೃಂದಾವನ ಕ್ಕೆ ನವೀಕೃತ ಗೋಪುರ ಹಾಗೂ ಶಿಖರ ಕಲಶ ಪ್ರತಿಷ್ಠಾಪನೆ

Tuesday, December 21st, 2021
Kashi matta

ಮಂಗಳೂರು : ಬಂಟ್ವಾಳ ಶ್ರೀ ಕಾಶೀಮಠದಲ್ಲಿರುವ ಶ್ರೀ ಕಾಶೀ ಮಠ ಸಂಸ್ಥಾನದ 6 ನೇ ಯತಿವರ್ಯರಾದ ಮಹಾ ತಪಸ್ವಿ ಶ್ರೀಮದ್ ದೇವೇಂದ್ರ ತೀರ್ಥ ಸ್ವಾಮೀಜಿಯವರ ವೃಂದಾವನ ದ ನವೀಕೃತ ಶಿಖರ ಕಲಶ ಹಾಗೂ ನೂತನ ಗೋಪುರದ ಪುನಃ ಪ್ರತಿಷ್ಠಾಪನೆ ಯು ಶ್ರೀ ಸಂಸ್ಥಾನದ ಮಠಾಧೀಶರಾದ ಶ್ರೀಮದ್ ಸಂಯಮಿಂದ್ರ ತೀರ್ಥ ಸ್ವಾಮೀಜಿಯವರ ಅಮೃತ ಹಸ್ತಗಳಿಂದ ಆದಿತ್ಯವಾರ ನೆರವೇರಿತು . ನವೀಕೃತ ಶಿಖರ ಕಲಶ ಹಾಗೂ ನೂತನ ಗೋಪುರದ ಪುನಃ ಪ್ರತಿಷ್ಠಾಪನೆ ಪ್ರಯುಕ್ತ ಶಾಖಾ ಮಠದಲ್ಲಿ 10 ದಿನಗಳ ಪರ್ಯಂತ 108 […]

ದ್ವಿಚಕ್ರ ವಾಹನ ಸವಾರರು ಮತ್ತು ಪಾದಚಾರಿಗಳ ಮೇಲೆ ಹೆಜ್ಜೇನು ದಾಳಿ, 8 ಮಂದಿ ಆಸ್ಪತ್ರೆಗೆ

Tuesday, December 21st, 2021
Bee Attack

ಕಿನ್ನಿಗೋಳಿ: ವಸತಿ ಸಮುಚ್ಚಯದಲ್ಲಿ ಗೂಡು ಕಟ್ಟಿದ್ದ ಹೆಜ್ಜೇನು ದಾಳಿಯಿಂದ  8 ಮಂದಿ ದ್ವಿಚಕ್ರ ವಾಹನ ಸವಾರರು ಮತ್ತು ಪಾದಚಾರಿಗಳು ಗಾಯಗೊಂಡು ಕಿನ್ನಿಗೋಳಿ ಆಸ್ಪತ್ರೆಗೆ ದಾಖಲಾದ ಘಟನೆ  ಕಿನ್ನಿಗೋಳಿಯ  ಮೂರುಕಾವೇರಿಯ ಮುಖ್ಯ ರಸ್ತೆಯಲ್ಲಿ ನಡೆದಿದೆ. ಸೋಮವಾರ ಬೆಳಗ್ಗೆ  ಕೆನರಾ ಲೈಟಿಂಗ್ ಸಿಬ್ಬಂದಿ ಬೈಕ್‌ನಲ್ಲಿ ತೆರಳುತ್ತಿರುವಾಗ ನೊಣಗಳ ಹಿಂಡು ದಾಳಿ ಮಾಡಿದೆ. ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಗೋಳಿಜೋರ ನೀರಳಿಕೆ ನಿವಾಸಿ ರವಿ, ಮೂರುಕಾವೇರಿ ರೋಟರಿ ಶಾಲೆ ಶಿಕ್ಷಕ ಸೂರ್ಯಕಾಂತ್ ತೀವ್ರ ಗಾಯಗೊಂಡು ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತಿದ್ದಾರೆ. ಉಳಿದಂತೆ ರಿಚರ್ಡ್ ನಝರತ್ ಮೂರುಕಾವೇರಿ, […]